Author: News Desk Benkiyabale

ಮಧುಗಿರಿ: 2023ರ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಮಧುಗಿರಿಯ ಮಾಜಿ ಶಾಸಕ ಕೆ.ಎನ್ ರಾಜಣ್ಣ ಅವರು ಬೆಂಬಲಿಗರ ಸಭೆಯಲ್ಲಿ ಮಾತನಾಡುತ್ತಾ, ‘ಶೋಕಿಗೆ ರಾಜಕಾರಣ ಮಾಡ್ಬೇಡಿ, ನಾನೇ ಎಂಎಲ್‍ಗೆ ಸ್ಪರ್ಧೆ ಮಾಡ್ತಿನಿ ಅಂತ ತಿಳ್ಕೊಂಡು ಕೆಲಸ ಮಾಡಿ, ನಾನು ಎಂಎಲ್‍ಎ ಆದ್ರೆ ನೀವೆಲ್ಲಾ ಎಂಎಲ್‍ಎಗಳು ಇದ್ದಂಗೆ’ ಎಂದು ಬೆಂಬಲಿಗರಿಗೆ ಹೇಳಿದ್ದಾರೆ. ಅಭಿವೃದ್ಧಿ ಕೆಲಸಗಳ ಬಗ್ಗೆ ಕೇಳೋ ಶಕ್ತಿ ನಿಮಗೆ ಇರಬೇಕು. ಆಗ ಮಾತ್ರ ನಾವು ಗೆಲ್ಲೋಕೆ ಸಾಧ್ಯ. ಇದು ನನ್ನ ಕೊನೆಯ ಚುನಾವಣೆ ಆಮೇಲೆ ನಿಂತ್ಕೋ ಅಂದ್ರು ನಾನು ನಿಲ್ಲಲ್ಲ. ನನಗೆ ಈಗ 72 ವರ್ಷ ಮುಂದಿನ ಚುನಾವಣೆ ಅಂದ್ರೆ 77 ವರ್ಷ ಆಗುತ್ತೆ. ಅಷ್ಟೊತ್ತಿಗೆ ನನ್ನ ಕೈಕಾಲು ಎಲ್ಲ ಅಲ್ಲಾಡುತ್ತಿರುತ್ತೆ. ಅದರಿಂದ ಇದು ನನಗೆ ಕಡೆ ಚುನಾವಣೆ ಎಂದರಲ್ಲದೆ ಕಾಂಗ್ರೆಸ್ ಸರ್ಕಾರ ಬಂದ್ರೆ ನೂರಕ್ಕೆ ನೂರು ನಾನು ಮಂತ್ರಿ ಆಗ್ತಿನಿ ಎಂದು ಅಚ್ಚರಿಯ ಹೇಳಿಕೆ ನೀಡಿದ್ದಾರೆ.

Read More

ತುಮಕೂರು: ಕಠಿಣ ಶ್ರಮ ಮತ್ತು ಆತ್ಮವಿಶ್ವಾಸದಿಂದ ಪ್ರತಿಯೊಬ್ಬ ರೋಗಿಯನ್ನು ಪರೀಕ್ಷಿಸಿ ಸೂಕ್ತ ಚಿಕಿತ್ಸೆ ನೀಡಿ ರೋಗಿಗೆ ಪುನರ್ಜನ್ಮ ನೀಡುವ ವೈದ್ಯರು ದೇವರಿಗೆ ಸಮಾನ ಎಂದು ವರದರಾಜ ಚಾರಿಟಬಲ್ ಟ್ರಸ್ಟ್‍ನ ಮುಖ್ಯಸ್ಥ ಡಾ. ದುರ್ಗಾದಾಸ್ ಆಸ್ರಣ್ಣ ಅಭಿಪ್ರಾಯಪಟ್ಟರು. ವೈದ್ಯರ ದಿನಾಚರಣೆ ಕಾರ್ಯಕ್ರಮದ ಪ್ರಯುಕ್ತ ವರದರಾಜ ಚಾರಿಟೆಬಲ್ ಟ್ರಸ್ಟ್‍ನ ವರದರಾಜ ಸಮೂಹ ಶಿಕ್ಷಣ ಸಂಸ್ಥೆ ಹಾಗೂ ಕಸ್ತೂರ್ ಬಾ ಆಸ್ಪತ್ರೆ ವತಿಯಿಂದ ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಏರ್ಪಡಿಸಿದ್ದ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರೋಗಿಗಳ ಭಾವನೆಗಳಿಗೆ ಸ್ಪಂದಿಸಿದಾಗ ಮಾತ್ರ ಸಮಾಜದಲ್ಲಿ ವೈದ್ಯರಿಗೆ ಬೆಲೆ ಸಿಗುತ್ತದೆ. ಈ ನಿಟ್ಟಿನಲ್ಲಿ ವೈದ್ಯರು ಮೊದಲು ರೋಗಿಗಳ ಆರೋಗ್ಯ ಸಮಸ್ಯೆಗಳನ್ನು ಆಲಿಸಿ ಉತ್ತಮ ಚಿಕಿತ್ಸೆ ನೀಡಬೇಕು ಎಂದು ತಿಳಿಸಿದರು. ಮೇಯರ್ ಬಿ.ಜಿ. ಕೃಷ್ಣಪ್ಪ ಮಾತನಾಡಿ ಜನರ ಜೀವವನ್ನು ಉಳಿಸುವ ವೈದ್ಯರಿಗಾಗಿ ಪ್ರತ್ಯೇಕ ದಿನಾಚರಣೆಯನ್ನು ಹಮ್ಮಿಕೊಂಡಿರುವುದು ಸಂತಸದ ವಿಚಾರ. ಕಲ್ಪತರು ನಾಡು, ಶಾರದೆಯ ಬೀಡಾದ ತುಮಕೂರಿನಲ್ಲಿ ಕ್ಯಾನ್ಸರ್ ರೋಗ ಸೇರಿದಂತೆ ಮಾರಣಾಂತಿಕ ಖಾಯಿಲೆಗಳಿಗೆ ಉತ್ತಮ ವೈದ್ಯಕೀಯ…

Read More

ತುಮಕೂರು: ಕಾಂಗ್ರೆಸ್‍ನಲ್ಲಿ ಅಸಮಾಧಾನ ಸೋಟಗೊಂಡಿದೆ. ಮಾಜಿ ಶಾಸಕ ಹಾಗೂ ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷರಾದ ಎಂ.ಡಿ. ಲಕ್ಷ್ಮೀನಾರಾಯಣ ನಾಯಕರ ವಿರುದ್ಧ ಬಹಿರಂಗವಾಗಿಯೇ ಅಸಮಧಾನ ಹೊರ ಹಾಕಿದ್ದಾರೆ. ವಿಧಾನಪರಿಷತ್ ಸದಸ್ಯ ಸ್ಥಾನ ಸಿಗದ ಕಾರಣಕ್ಕೆ ಮಾಜಿ ಸಚಿವ ಎಂ.ಆರ್.ಸೀತಾರಾಂ ಇತ್ತೀಚೆಗಷ್ಟೆ ಬೆಂಬಲಿಗರ ಸಭೆ ನಡೆಸಿ ನಾಯಕರ ವಿರುದ್ಧ ಆಕ್ರೋಶ ಹೊರ ಹಾಕಿದ್ದರು. ಅದರ ಬೆನ್ನಲ್ಲೆ ಎಂ.ಡಿ.ಲಕ್ಷ್ಮೀನಾರಾಯಣ ಕೂಡ ವಿಧಾನ ಪರಿಷತ್ ಸ್ಥಾನ ಸಿಗದ ಕಾರಣಕ್ಕೆ ಕಾಂಗ್ರೆಸ್ ವಿರುದ್ಧ ತಿರುಗಿ ಬಿದ್ದಿದ್ದು ಪಕ್ಷ ತೊರೆಯುವ ಸಿದ್ಧತೆಯಲ್ಲಿದ್ದಾರೆ. ನನ್ನಹುಟ್ಟುಹಬಕ್ಕೆ ಬಂದು ನೀವು ಮಾತು ಕೊಟ್ಟಿದ್ದೇನು? ಎಂದು ಸಿದ್ದರಾಮಯ್ಯರನ್ನು ಪ್ರಶ್ನಿಸಿದ್ದಾರೆ. ನಾನು ತುರುವೇಕೆರೆ ಕ್ಷೇತ್ರದ ಟಿಕೆಟ್ ಬಯಸಿದ್ದೆ, ನೀವೇ ನನ್ನನ್ನ ಸಮಾಧಾನ ಪಡಿಸಿದ್ದಿರಿ. ಕಾಂತರಾಜುಗೆ ತುರುವೇಕೆರೆ ಟಿಕೆಟ್ ನೀಡುವ ಭರವಸೆ ನೀಡಿದ್ದೇನೆ. ನೀವು ಪಕ್ಷದ ಸಂಘಟನೆಯಲ್ಲಿ ಚೆನ್ನಾಗಿ ಕೆಲಸ ಮಾಡುತ್ತಿದ್ದೀರಾ. ನಿಮ್ಮನ್ನು ವಿಧಾನ ಪರಿಷತ್ ಸದಸ್ಯನ್ನಾಗಿ ಮಾಡುತ್ತೇನೆ ಎಂದು ಭರವಸೆ ನೀಡಿದ್ದೀರಿ. ಡಿ.ಕೆ.ಶಿವಕುಮಾರ್ ಕೂಡ ಇದೇ ಭರವಸೆ ನೀಡಿದ್ದರು. ಈಗ ಇಬ್ಬರು ಕೊಟ್ಟ ಮಾತನ್ನು ಮರೆತು…

Read More

ತುಮಕೂರು: ರಾಷ್ಟ್ರ ಮಟ್ಟದಲ್ಲಿ ಆಯ್ಕೆಯಾಗಿರುವ 100 ಸ್ಮಾರ್ಟ್‍ಸಿಟಿಗಳಲ್ಲಿ ತುಮಕೂರು ಸ್ಮಾರ್ಟ್‍ಸಿಟಿ ಲಿಮಿಟೆಡ್ ದೇಶದಲ್ಲಿಯೇ 7ನೇ ಶ್ರೇಣಿಯಲ್ಲಿದ್ದು, ಕರ್ನಾಟಕದ 7 ಸ್ಮಾರ್ಟ್‍ಸಿಟಿಗಳ ಪೈಕಿ ಒಂದನೇ ಸ್ಥಾನದಲ್ಲಿದೆ. ಒಟ್ಟು 178 ಕಾಮಗಾರಿಗಳ ಪೈಕಿ 132 ಕಾಮಗಾರಿಗಳನ್ನು ಸುಮಾರು 462 ಕೋಟಿ ವೆಚ್ಚದಲ್ಲಿ ಪೂರ್ಣಗೊಳಿಸಲಾಗಿದ್ದು, ಪ್ರಗತಿಯ ಹಂತದಲ್ಲಿರುವ 50 ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ಶಾಸಕ ಜಿ.ಬಿ. ಜ್ಯೋತಿಗಣೇಶ್ ಅವರು ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸ್ಮಾರ್ಟ್‍ಸಿಟಿ ಯೋಜನೆಗೆ ಸಂಬಂಧಿಸಿದಂತೆ ಕರೆಯಲಾದ ಸಮನ್ವಯ ಸಮಿತಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬೆಳಗುಂಬ ಮತ್ತು ಚಾಮುಂಡಿ ರಸ್ತೆಗಳಲ್ಲಿ ರಸ್ತೆ ಅಗಲೀಕರಣ ಕಾಮಗಾರಿಗೆ ಕಟ್ಟಡ ತೆರವುಗೊಳಿಸಬೇಕಾಗಿರುವುದರಿಂದ, ತುಮಕೂರು ಮಹನಾಗರಪಾಲಿಕೆ ವತಿಯಿಂದ ರಸ್ತೆ ನಿರ್ಮಾಣಕ್ಕೆ ಅಗತ್ಯವಿರುವ ಅಡಚಣೆಗಳ ನಿವಾರಣೆ ಹಾಗೂ ಭೂ-ಸ್ವಾಧೀನದ ಬಗ್ಗೆ ಪಾಲಿಕೆ ವತಿಯಿಂದ ನಿರ್ಣಯ ತೆಗೆದುಕೊಂಡು ಸೂಕ್ತ ಕ್ರಮ ಜರುಗಿಸಲು ತುಮಕೂರು ಸ್ಮಾರ್ಟ್‍ಸಿಟಿ ಲಿಮಿಟೆಡ್ ಅವರಿಗೆ ತಿಳಿಸಲು ಸಭೆಯಲ್ಲಿ ಉಪಸ್ಥಿತರಿದ್ದ ಮಹಾನಗರಪಾಲಿಕೆ ಆಯುಕ್ತರಾದ ರೇಣುಕ ಅವರಿಗೆ ಸೂಚಿಸಿದರು. ಗಾರ್ಡನ್ ರಸ್ತೆ(ದಿಬ್ಬೂರು ಜಂಕ್ಷನ್‍ನಿಂದ ಬಿ.ಹೆಚ್ ರಸ್ತೆ) ಹಾಗೂ ವರ್ತುಲ…

Read More

ತುಮಕೂರು: ರಾಜಸ್ಥಾನದ ಉದಯಪುರದಲ್ಲಿ ಹಾಡಹಗಲೇ ಹಿಂದೂ ಟೈಲರ್ ಕನ್ನಯ್ಯಲಾಲ್ ಅವರನ್ನು ಹತ್ಯೆ ಮಾಡಿರುವುದನ್ನು ಖಂಡಿಸಿ ಹಾಗೂ ಇಬ್ಬರು ಕೊಲೆಗಾರರನ್ನು ಶೀಘ್ರ ಗಲ್ಲು ಶಿಕ್ಷೆಗೆ ಗುರಿಪಡಿಸುವಂತೆ ಒತ್ತಾಯಿಸಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ವತಿಯಿಂದ ನಗರದಲ್ಲಿಂದು ಪ್ರತಿಭಟನೆ ನಡೆಸಲಾಯಿತು. ಇಲ್ಲಿನ ಟೌನ್‍ಹಾಲ್ ವೃತ್ತದಲ್ಲಿ ಜಮಾಯಿಸಿದ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗ ದಳದ ಕಾರ್ಯಕರ್ತರು ಮಾನವ ಸರಪಳಿ ನಿರ್ಮಿಸಿ ಕನ್ನಯ್ಯಲಾಲ್ ಶಿರಚ್ಛೇದ ಮಾಡಿರುವ ಮಹಮ್ಮದ್ ರಿಯಾಜ್ ಹಾಗೂ ಮಹಮಗ್ ಗೌಸ್ ಎಂಬುವರ ಪ್ರತಿಕೃತಿ ದಹಿಸಿ ಆಕ್ರೋಶ ಹೊರ ಹಾಕಿದರು. ಪ್ರತಿಭಟನಾಕಾರರನ್ನು ಉದ್ದೇಶಿಸಿದ ಮಾತನಾಡಿದ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗಳದ ಮಂಜು ಭಾರ್ಗವ್, ರಾಜಸ್ಥಾನದ ಉದಯಪುರದ ಕನ್ನಯ್ಯಲಾಲ್ ಟೈಲರ್ ಅಂಗಡಿಗೆ ಗ್ರಾಹಕರ ಸೋಗಿನಲ್ಲಿ ಬಂದಿರುವ ಈ ಇಬ್ಬರು ಹಂತಕರು ಬಟ್ಟೆ ಅಳತೆ ಕೊಡುವ ನಾಟಕವಾಡಿ ತಮ್ಮ ಸೊಂಟದಲ್ಲಿ ಇಟ್ಟುಕೊಂಡಿದ್ದ ಕತ್ತಿಯನ್ನು ತೆಗೆದು ಅಮಾನುಷವಾಗಿ ಕನ್ನಯ್ಯಲಾಲ್ ಕತ್ತಿಗೆ ಇರಿದು ಅದನ್ನು ವಿಡಿಯೋ ಮಾಡಿ ವಿಕೃತಿ ಮೆರೆದಿದ್ದಾರೆ. ಕನ್ನಯ್ಯಲಾಲ್ ಕೊಲೆ ಮಾಡಿದ ಮುಸ್ಲಿಂ ಜಿಹಾದಿಗಳು…

Read More

ಶಿರಾ: ನೇರಲಗುಡ್ಡ ಗ್ರಾಪಂ ವ್ಯಾಪ್ತಿಯ ಗಾಮನಗುಡ್ಡ ಪ್ರದೇಶದಲ್ಲಿ ಜಲಸಂಗ್ರಹಗಾರ ನಿರ್ಮಿಸಲು ಸೂಕ್ತ ನಿರ್ಧಾರ ತೆಗೆದುಕೊಳ್ಳುವುದಾಗಿ ಸಂಸದ ಜಿ.ಎಸ್.ಬಸವರಾಜು ತಿಳಿಸಿದರು. ಬುಕ್ಕಾಪಟ್ಟಣದಲ್ಲಿ ಬುಧವಾರ ಜಿಲ್ಲಾ ಶಾಶ್ವತ ನೀರಾವರಿ ಹೋರಾಟ ಸಮಿತಿ, ಶ್ರೀಗಂಧ ಬೆಳೆಗಾರರ ಸಂಘದ ವತಿಯಿಂದ ಆಯೋಜಿಸಿದ್ದ ಜಲಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಹೋಬಳಿಯ ಇತರೆ ಕೆರೆಕಟ್ಟೆಗಳನ್ನು ನದಿ ನೀರಿನಿಂದ ತುಂಬಿಸುವುದಾಗಿ ತಿಳಿಸಿ, ಮರಡಿಗುಡ್ಡದ ಬಳಿ ಇರುವ ಪುರಸಕ್ಕನಕೆರೆಗೆ ಭದ್ರಾ ಮೇಲ್ದಂಡೆ ಯೋಜನೆಯಿಂದ ನೀರು ಹರಿಸುವುದು ಅವಶ್ಯವಾಗಿದ್ದು ಈ ಭಾಗದ ರೈತರಿಗೆ ಉಪಯೋಗವಾಗಲಿದೆ, ಜಲಸಂಗ್ರಹಗಾರ ನಿರ್ಮಿಸಲು ಸಂಬಂಧಪಟ್ಟ ಇಲಾಖೆಯ ಅಭಿಯಂತರರಿಗೆ ಸರ್ವೆ ಮಾಡುವ ಕಾರ್ಯಕ್ಕೆ ಶೀಘ್ರ ಚಾಲನೆ ದೊರೆಯಲಿದೆ ಎಂದರು. ಈಗಾಗಲೇ ಹೇಮಾವತಿ ಯೋಜನೆಯಿಂದ ಕಳ್ಳಂಬೆಳ್ಳ, ಶಿರಾ ಹಾಗೂ ಇತರೆ 11 ಕೆರೆಗಳಿಗೆ ನೀರು ಸರಬರಾಜು ಆಗಿರುವುದರಿಂದ ಪುನಃ ಭದ್ರಾ ಮೇಲ್ದಂಡೆ ಯೋಜನೆಯಿಂದ ಆ ಭಾಗಕ್ಕೆ ನೀರು ಹರಿಸುವ ಬದಲು ಇದುವರೆಗೂ ನದಿ ಯೋಜನೆಗೆ ಒಳಪಡದೇ ಇರುವ ಹುಲಿಕುಂಟೆ ಮತ್ತು ಗೌಡಗೆರೆ ಹೋಬಳಿ ಹಾಗೂ ಬುಕ್ಕಾಪಟ್ಟಣ ಹೋಬಳಿಗೆ ಪ್ರಧಾನವಾಗಿ ನೀರು ಹರಿಸುವುದು…

Read More

ತುರುವೇಕೆರೆ: ಹೆಂಡತಿ ಮಕ್ಕಳೊಂದಿಗೆ ಕೆರೆಗೆ ಈಜು ಕಲಿಯಲು ಹೋದ ವ್ಯಕ್ತಿ ನೀರಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ದಂಡಿನಶಿವರ ಹೋಬಳಿಯ ಸಾರಿಗೆಹಳ್ಳಿ ಕೆರೆಯಲ್ಲಿ ನಡೆದಿದಿ. ತಾಲ್ಲೂಕಿನ .ಎಂ.ಬೇವಿನಹಳ್ಳಿ ನಿವಾಸಿ ಯೋಗಾನಂದ (45) ಎಂದಿನಂತೆ ಈಜು ಕಲಿಯಲು ತೆರಳಿ ಸಾವನ್ನಪ್ಪಿದ ಮೃತ ದುರ್ದೈವಿ. ತಾಲ್ಲೂಕಿನ ದಂಡಿನಶಿವರ ಹೋಬಳಿಯ ಸಾರಿಗೆಹಳ್ಳಿ ಕೆರೆಗೆ ಈಜು ಕಲಿಯಲು ಪಟ್ಟಣದವರು ಸೇರಿದಂತೆ ಅಕ್ಕ-ಪಕ್ಕದ ಹಳ್ಳಿಯವರು ತೆರಳುತ್ತಾರೆ. ಈ ರೀತಿ ತರಳುವವರಲ್ಲಿ ಎಲ್ಲಾ ವಯೋಮಾನದವರು ಹಾಗೂ ಹೆಂಗಸರು ಮಕ್ಕಳು ಕಲಿಯಲು ಟ್ಯೂಬ್ ಗಳ ಸಮೇತ ಮುಂಜಾನೆಯೆ ತರಳಿ ಸ್ಥಳೀಯ ಈಜು ಪಟು ದಂಡಿನಶಿವರ ತಿಮ್ಮೇಗೌಡ ಮಾರ್ಗದರ್ಶನದಲ್ಲಿ ಈಜು ಕಲಿಯಲು ಬರುತ್ತಾರೆ. ಆದರೆ ಎರಡು ದಿನಗಳಿಂದ ದಂಡಿನಶಿವರ ತಿಮ್ಮೇಗೌಡ ಅನಾರೋಗ್ಯ ನಿಮಿತ್ತ ನಾನು ಬರುವುದಿಲ್ಲ ಎಂದು ತಿಳಿಸಿದ್ದರೂ, ಸಾರಿಗೆಹಳ್ಳಿ ಕೆರೆಗೆ ಇಂದು ಎಂದಿನಂತೆ ಕುಟುಂಬ ಸಮೇತ ಈಜು ಕಲಿಯಲು ಟ್ಯೂಬ್ ಸಮೇತ ಕೆರೆಯಲ್ಲಿ ಹೆಂಡತಿ ಆಶಾ ಹಾಗೂ ಮೂರು ವರ್ಷದ ಮಗುವಿನೊಂದಿಗೆ ಬಂದ ಯೋಗಾನಂದ್ ಟ್ಯೂಬ್ ನೊಂದಿಗೆ ಈಜಲು ಪ್ರಾರಂಭಿಸಿದನಾದರೂ ಮೇಲಿನಿಂದ…

Read More

ತುಮಕೂರು: ಕೋವಿಡ್-19 ತಡೆಗಟ್ಟಲು ಲಸಿಕೆಯನ್ನು ನೀಡಲಾಗುತ್ತಿದ್ದು, ನಿಗಧಿತ ಅವಧಿಯಲ್ಲಿ ಪ್ರಗತಿ ಸಾಧಿಸಲು ವಿಫಲವಾದಲ್ಲಿ ಸಂಬಂಧಿಸಿದ ಆರೋಗ್ಯ ಇಲಾಖೆಯ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಎಚ್ಚರಿಸಿದರು. ತಮ್ಮ ಕಚೇರಿಯ ಕೆಸ್ವಾನ್ ಸಭಾಂಗಣದಲ್ಲಿ ಇತ್ತಿಚೆಗೆ ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಸಭೆ ನಡೆಸಿ ಮಾತನಾಡಿದ ಅವರು, 12-14 ವಯೋಮಾನದ ಮಕ್ಕಳ ಮೊದಲ ಡೋಸ್ ಶೇ.106 ಹಾಗೂ ಎರಡನೇ ಡೋಸ್ ಶೇ.69.2 ಮತ್ತು 15-17 ವಯಸ್ಸಿನ ಮಕ್ಕಳಿಗೆ ನೀಡುತ್ತಿರುವ ಲಸಿಕಾಕರಣ ಮೊದಲ ಡೋಸ್ ಶೇ. 79.4 ಹಾಗೂ ಎರಡನೇ ಡೋಸ್ ಶೇ.71.6 ಆಗಿದ್ದು, ವ್ಯಾಕ್ಸಿನೇಷನ್ ಸಮಾಧಾನಕಾರವಾಗಿಲ್ಲವೆಂದು ಬೇಸರ ವ್ಯಕ್ತಪಡಿಸಿ ಜೂನ್ 30ರವರೆಗೆ ಕಾಲಾವಕಾಶ ನೀಡಿ ಬಾಕಿ ಲಸಿಕಾಕರಣವನ್ನು ಪೂರ್ಣಗೊಳಿಸಲು ಸೂಚಿಸಲಾಯಿತು. ಕೋವಿಡ್ -19 ಪ್ರಕರಣಗಳು ಅಲ್ಲಲ್ಲಿ ಹೆಚ್ಚು ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ತಿಪಟೂರು, ಶಿರಾ, ತುಮಕೂರು ನಗರಗಳಲ್ಲಿ ಕೋವಿಡ್ ಲ್ಯಾಬ್ ಇದ್ದು, ತುಮಕೂರು ನಗರದಲ್ಲಿ 200, ತಿಪಟೂರು ಮತ್ತು ಶಿರಾ ತಾಲ್ಲೂಕುಗಳಲ್ಲಿ ತಲಾ 100, ಉಳಿದ ತಾಲ್ಲೂಕುಗಳಲ್ಲಿ…

Read More

ತುಮಕೂರು: ನಗರದ ಎಂ.ಜಿ.ರಸ್ತೆಯ ಬಾಲಭವನದ ಆವರಣದಲ್ಲಿರುವ ಶ್ರೀ ಕೃಷ್ಣ ರಾಜೇಂದ್ರ ಬಾಲಕಿಯರ ಪ್ರಾಥಮಿಕ ಶಾಲೆಗೆ ಸೇರಿದ 4.0 ಎಕರೆ ಜಾಗದ ಸರ್ವೆ ವಿಚಾರದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಹಾಗೂ ಇಲಾಖೆ ಇಲಾಖೆ ನಡುವೆ ಏರ್ಪಟ್ಟಿರುವ ವಿವಾದ ಬಗೆಹರಿಸಲು ಸರ್ವೆಗೆ ಮುಂದಾದ ಪಾಲಿಕೆಯ ಕಂದಾಯ ಅಧಿಕಾರಿಗಳಿಗೆ ಅಡ್ಡಿಪಡಿಸಿರುವ ಘಟನೆ ನಡೆದಿದೆ. 1946ರಲ್ಲಿ ಅಂದಿನ ಮೈಸೂರು ಸಂಸ್ಥಾನದ ರಾಜರಾದ ಶ್ರೀನಾಲ್ಮಡಿ ಕೃಷ್ಣರಾಜ ಒಡೆಯರ್ ಅವರು, ಕೃಷ್ಣರಾಜೇಂದ್ರ ಬಾಲಕಿಯರ ಪಾಠ ಶಾಲೆಗಾಗಿ 4.20 ಜಾಗವನ್ನು ನೀಡಿದ್ದು, 2002ರವರೆಗೆ ಸದರಿ ಜಾಗ ಶಾಲೆಯ ಹೆಸರಿನಲ್ಲಿಯೇ ಇದೆ. ಆದರೆ 2002ರಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಬಾಲಭವನ ನಿರ್ಮಾಣಕ್ಕಾಗಿ ಸರಕಾರ ಸದರಿ ಜಾಗದಲ್ಲಿ 3.14 ಗುಂಟೆಯನ್ನು ಖಾತೆ ಮಾಡಿಕೊಟ್ಟಿದ್ದು,ಸದರಿ ಜಾಗದಲ್ಲಿ ಬಾಲಭವನ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕರ ಕಚೇರಿ ಕಾರ್ಯನಿರ್ವಹಿಸುತ್ತಿವೆ. ಆದರೆ ಪ್ರಸ್ತುತ 3.14 ಗುಂಟೆಯಲ್ಲಿ ಕಟ್ಟಡ ಕಟ್ಟಿ ಉಳಿದಿರುವ ಜಾಗದಲ್ಲಿ ಈಜುಕೊಳ ನಿರ್ಮಾಣಕ್ಕೆ ಮುಂದಾಗಿರುವುದು ಈಗ ವಿವಾದಕ್ಕೆ ಕಾರಣವಾಗಿದ್ದು, ಶಾಲೆಯ…

Read More

ತುಮಕೂರು: ದೇಶದ ಸರ್ವೋಚ್ಚ ನ್ಯಾಯಾಲಯ 2014ರಲ್ಲಿಯೇ ಯಾವುದೇ ಮುಂಜಾಗ್ರತಾ ಪರಿಕರಗಳಿಲ್ಲದೆ ಪೌರಕಾರ್ಮಿ ಕರನ್ನು ಕೆಲಸಕ್ಕೆ ನಿಯೋಜಿಸಿದರೆ ಅದು ಶಿಕ್ಷಾರ್ಹ ಅಪರಾಧ ಎಂದು ಹೇಳಿದೆ. ಆದರೆ ವರ್ಷಕ್ಕೆ ನೂರಾರು ಪಿ.ಕೆ.ಎಸ್‍ಗಳು ಮಲಗುಂಡಿ ಸ್ವಚ್ಚಗೊಳಿಸುವ ವೇಳೆ ಮೃತಪಟ್ಟರು ಇದುವರೆಗೂ ಯಾವ ಅಧಿಕಾರಿ ವಿರುದ್ದವೂ ಶಿಕ್ಷೆಯಾಗಿಲ್ಲ. ಈ ವಿಚಾರದಲ್ಲಿ ಸರ್ಕಾರವೇ ಮೊದಲ ಅಪರಾಧಿ ಎಂದು ನ್ಯಾ.ನಾಗಮೋಹನ್ ದಾಸ್ ಅಭಿಪ್ರಾಯಪಟ್ಟಿದ್ದಾರೆ. ನಗರದ ಬಾಲಭವನದಲ್ಲಿ ಸಿಐಟಿಯು ನೇತೃತ್ವದ ಕರ್ನಾಟಕ ರಾಜ್ಯ ಮುನ್ಸಿಪಲ್ ಕಾರ್ಮಿಕರ ಸಂಘ ಮುನ್ಸಿಪಲ್ ಕಾರ್ಮಿಕರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ಎಂಬ ಬೇಡಿಕೆ ಹಿನ್ನೆಲೆಯಲ್ಲಿ ಆಯೋಜಿಸಿದ್ದ ರಾಜ್ಯ ಸಮಾವೇಶವನ್ನು ಉದ್ಘಾಟಿಸಿ ಮಾತನಾಡುತಿದ್ದ ಅವರು, ಲಕ್ಷಾಂತರ ಸಂಖ್ಯೆಯಲ್ಲಿರುವ ಮುನ್ಸಿಪಲ್ ನೌಕರರನ್ನು ಕಸ ಗುಡಿಸುವವರು, ಕಸ ಎತ್ತುವವರು, ಸಾಗಿಸುವವರು ಹೀಗೆ ಹಲವು ವಿಭಾಗಗಳಾಗಿ ವಿಂಗಡಿಸಿ, ಒಡೆದು ಆಳುವ ನೀತಿಯನ್ನು ಅನುಸರಿಸುವ ಮೂಲಕ ನಮ್ಮ ದ್ವನಿ ಹೆಚ್ಚಾಗದಂತೆ ಮಾಡುತ್ತಿದೆ ಎಂದರು. ನಿರುದ್ಯೋಗವೆಂದರೆ ಕೇವಲ ಕೆಲಸವಿಲ್ಲದೆ ಇರುವುದು ಎಂದರ್ಥವಲ್ಲ. ಇದರ ಹಿಂದೆ ಕಳ್ಳತನ, ಸುಲಿಗೆ, ದರೋಡೆ, ಭಯೋತ್ಪಾಧನೆ ಯಂತಹ ಸಮಾಜ ವಿದ್ರೋಹಿ…

Read More