ತುಮಕೂರು: ಪರಿಶ್ರಮದ ದುಡಿಮೆ ಮಾಡುತ್ತಾ ಸ್ವಾಭಿಮಾನದಿಂದ ಬದುಕುತ್ತಿರುವ ಶ್ರಮಜೀವಿ ತಿಗಳ ಸಮಾಜದವರು ಇತರರಿಗೆ ಮಾದರಿಯಾಗಿದ್ದಾರೆ. ತಿಗಳ ಜನಾಂಗದವರು ಇತ್ತೀಚೆಗೆ ತಮ್ಮ ಮಕ್ಕಳಿಗೆ ಶಿಕ್ಷಣಕ್ಕೆ ಆದ್ಯತೆ ನೀಡುತ್ತಿರುವುದು ಒಳ್ಳೆಯ ಬೆಳವಣಿಗೆ. ಇನ್ನೂ ಹೆಚ್ಚಿನ ಒತ್ತು ನೀಡಿ ಮಕ್ಕಳು ಉನ್ನತ ಶಿಕ್ಷಣ ಪಡೆಯಲು ಪ್ರೋತ್ಸಾಹಿಸಬೇಕು ಎಂದು ಶಾಸಕ ಜಿ.ಬಿ. ಜ್ಯೋತಿಗಣೇಶ್ ಹೇಳಿದರು. ಶನಿವಾರ ನಗರದ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಅಗ್ನಿಬನ್ನಿರಾಯಸ್ವಾಮಿ ಜಯಂತಿ ಆಚರಣೆ ಅಂಗವಾಗಿ ಅಗ್ನಿಬನ್ನಿರಾಯಸ್ವಾಮಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡ ಗೌರವ ಸಲ್ಲಿಸಿ ಮಾತನಾಡಿದ ಶಾಸಕರು, ಶಿಕ್ಷಣದಿಂದ ಆರ್ಥಿಕ ಸಬಲತೆ, ಸಾಮಾಜಿಕ ಮಾನ್ಯತೆ ಹೆಚ್ಚಾಗುತ್ತದೆ ಎಂದರು. ತಿಗಳ ಸಮಾಜದವರು ಜೊತೆಗಿದ್ದು ತಮಗೆ ಶಕ್ತಿ ತುಂಬಿದ್ದಾರೆ. ತಾವೂ ಸಹ ಅವರ ಶ್ರೇಯೋಭಿವೃದ್ಧಿಗೆ ಶ್ರಮಿಸುವುದಾಗಿ ಹೇಳಿದ ಶಾಸಕರು, ಅಗ್ನಿಬನ್ನಿರಾಯಸ್ವಾಮಿ ಜಯಂತಿ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಮಾಜಮುಖಿ ಕೆಲಸ ಮಾಡುತ್ತಿರುವ ತಿಗಳ ಸಮಾಜದ ಸಾಧಕರನ್ನು ಸನ್ಮಾನಿಸಿ ಗೌರವಿಸುತ್ತಿರುವುದು ಒಳ್ಳೆಯ ಸಂಪ್ರದಾಯ. ಇದರಿಂದ ಮತ್ತಷ್ಟು ಜನರಿಗೆ ಪ್ರೇರಣೆಯಾಗುತ್ತದೆ ಎಂದು ತಿಳಿಸಿದರು. ತಿಗಳ ಸಮಾಜ ಮುಖಂಡ, ಬಿಜೆಪಿ ಪ್ರಧಾನ ಕಾರ್ಯದರ್ಶಿ…
Author: News Desk Benkiyabale
ತುಮಕೂರು: ನಗರ ಮತ್ತು ಗ್ರಾಮೀಣ ಪರಿಸರದಲ್ಲಿ ಗುಬ್ಬಚ್ಚಿಗಳ ಸಂಖ್ಯೆ ದಿನೇ ದಿನೇ ಕ್ಷೀಣಿಸುತ್ತಿದ್ದು, ಪರಿಸರದ ಸಮತೋಲನವನ್ನು ಕಾಪಾಡುವಲ್ಲಿ ಇವುಗಳ ಪಾತ್ರ ಅತ್ಯಂತ ದೊಡ್ಡದಿದೆ. ಗುಬ್ಬಚ್ಚಿಗಳ ರಕ್ಷಣೆ ಮತ್ತು ಅವುಗಳ ಸಂತತಿ ಅಭಿವೃದ್ಧಿಗಾಗಿ ವಿದ್ಯಾರ್ಥಿ ಸಮುದಾಯವು ಹೆಚ್ಚಿನ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕೆಂದು ಆರ್ಡರ್ ಸಂಸ್ಥೆಯ ಯೋಜನಾ ನಿರ್ದೇಶಕರಾದ ಜಿ.ವಿ. ರಘು ಕರೆ ನೀಡಿದರು. ತುಮಕೂರು ವಿಶ್ವವಿದ್ಯಾಲಯದ ಸಮಾಜಕಾರ್ಯ ಅಧ್ಯಯನ ಮತ್ತು ಸಂಶೋಧನಾ ವಿಭಾಗ ಹಾಗೂ ಪುಣೆಯ ಸುಜಲಾನ್ ಫೌಂಡೇಶನ್ ಮತ್ತು ತುಮಕೂರಿನ ಆರ್ಡರ್ ಸಂಸ್ಥೆಯ ಸಹಯೋಗದಲ್ಲಿ ಇತ್ತೀಚೆಗೆ ಮಾ. ೨೫ ರಂದು ಆಯೋಜಿಸಿದ್ದ “ಗುಬ್ಬಚ್ಚಿಗಳ ಸಂರಕ್ಷಣಾ ಜಾಗೃತಿ” ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು ಆಧುನಿಕ ನಗರೀಕರಣ, ಕೈಗಾರಿಕೀಕರಣ ಮತ್ತು ವಾಣಿಜ್ಯ ಕೃಷಿ ಪದ್ಧತಿಯಿಂದಾಗಿ ಪರಿಸರ ಮಾಲಿನ್ಯ ಹೆಚ್ಚುತ್ತಿದೆ. ಇದರಿಂದಾಗಿ ಮನುಷ್ಯನ ಸಹಚರನಂತೆ ಬದುಕುತ್ತಿದ್ದ ಗುಬ್ಬಚ್ಚಿಗಳು ಇಂದು ಅಳಿವಿನ ಅಂಚಿಗೆ ತಲುಪಿವೆ. ಈ ಪುಟ್ಟ ಜೀವಿಗಳನ್ನು ಉಳಿಸಿಕೊಳ್ಳಲು ನಮ್ಮ ಮನೆಯ ಸುತ್ತ ಉತ್ತಮ ಪರಿಸರವನ್ನು ಕಾಯ್ದುಕೊಳ್ಳುವುದು, ಕೃತಕ ಗೂಡುಗಳನ್ನು ಅಳವಡಿಸುವುದು ಹಾಗೂ ಅವುಗಳಿಗೆ ಆಹಾರ ಮತ್ತು ನೀರನ್ನು…
ತುಮಕೂರು: ಐ.ಎ.ಎಸ್,ಐಪಿಎಸ್, ನ್ಯಾಯಾಧೀಶರು ಮಾತ್ರ ಸಾಧನೆ ಮಾಡಿದವರಲ್ಲ.ಮಕ್ಕಳಿಗೆ ಒಳ್ಳೆಯ ತಾಯಿ ಯಾಗಿ, ಗಂಡನಿಗೆ ಒಳ್ಳೆಯ ಸಂಗಾತಿಯಾಗಿ, ಅತ್ತೆ,ಮಾವನಿಗೆ ಒಳ್ಳೆಯ ಸೊಸೆಯಾಗಿ, ಕೊರತೆಗಳ ನಡುವೆಯೂ ಸಂಸಾರವನ್ನು ಸರಿದೂಗಿಸುವ ಮಹಿಳೆಯು ಸಹ ಸಾಧಕಿಯೇ ಎಂದು ಡಿ.ಎಲ್.ಆರ್.ಸಿ. ಕಾರ್ಯದರ್ಶಿ ಹಾಗೂ ನ್ಯಾ.ನೂರುನ್ನಿಸಾ ಅಭಿಪ್ರಾಯಪಟ್ಟಿದ್ದಾರೆ. ನಗರದ ಮರಳೂರು ದಿಣ್ಣೆಯ ಪ್ರಗತಿ ಬಡಾವಣೆಯ ಶೈನಾ ಅಧ್ಯಯನ ಸಂಸ್ಥೆ(ರಿ), ತುಮಕೂರು ಜಿಲ್ಲಾ ಮಹಿಳಾ ಸಂಘಟನೆ(ರಿ), ವತಿಯಿಂದ ಆಯೋಜಿಸಿದ್ದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮ ಹಾಗೂ ಜಿಲ್ಲಾ ಮಹಿಳಾ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು,ನಮ್ಮನ್ನು ನೋಡಿ ನಮ್ಮ ಮಕ್ಕಳು ನಮ್ಮಂತಾಗುವ ಬಯಕೆ ಹೊಂದಬೇಕು. ಅದೇ ನಿಜವಾದ ಸಾಧನೆ ಎಂದರು. ಮಹಿಳಾ ಎಲ್ಲಾ ರಂಗದಲ್ಲಿಯೂ ತನ್ನ ಸಾಧನೆಯ ಗುರುತನ್ನು ಬಿಟ್ಟಿದ್ದಾಳೆ, ಆ ದರೂ ಇಂದಿಗೂ ಕೂಡ ಆಕೆಯ ಮೇಲಿನ ಕೌಟುಂಬಿಕ ದೌರ್ಜನ್ಯ ನಿಂತಿಲ್ಲ.ತಾನು ಸ್ವತಹಃ ದುಡಿಯುತ್ತಿದ್ದರೂ ತನ್ನ ವೇತನವನ್ನು ಮನಸೋಇಚ್ಚೆ ಖರ್ಚು ಮಾಡುವಂತಿಲ್ಲ. ಇಂದಿಗೂ ಗಂಡನ, ಇಲ್ಲವೇ ಅತ್ತೆ, ಮಾವನ ಕೇಳುವಂತಹ ಪರಿಸ್ಥಿತಿ ಇದೆ. ಇದು ನಿಜವಾದ ಸ್ವಾತಂತ್ರವೇ ಎಂಬ…
ತುಮಕೂರು: ಏಪ್ರಿಲ್ ೧ರಂದು ಸಿದ್ದಗಂಗಾ ಮಠದ ಲಿಂಗೈಕ್ಯ ಶ್ರೀ ಶಿವಕುಮಾರ ಸ್ವಾಮೀಜಿ ಅವರ ಜಯಂತಿ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪತಿ ಮುರ್ಮು ಅವರು ಭಾಗವಹಿಸಲಿದ್ದು, ಸಂಬ0ಧಿಸಿದ0ತೆ ತುಮಕೂರು ನಗರದಾದ್ಯಂತ ಅಂದು ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಇರಲಿದೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ನಡೆದ ಅತಿಗಣ್ಯರ ಭದ್ರತೆಯ ಪೂರ್ವಭಾವಿ ಸಭೆಯ ಅಧ್ಕಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಈಗಾಗಲೇ ತುಮಕೂರು ಜಿಲ್ಲೆಗೆ ಉಪರಾಷ್ಟ್ರಪತಿ, ಕೇಂದ್ರ ಗೃಹ ಸಚಿವರು, ರಾಜ್ಯಪಾಲರು ಸೇರಿದಂತೆ ಗಣ್ಯರು ಆಗಮಿಸಿದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಸೂಕ್ತ ಭದ್ರತೆಯನ್ನು ಒದಗಿಸಿ ಯಶಸ್ವಿಯಾಗಿ ಕಾರ್ಯಕ್ರಮಗಳನ್ನು ಜರುಗಿಸಲಾಗಿದೆ. ಪ್ರಸ್ತುತ ರಾಷ್ಟçಪತಿಯವರ ಕಾರ್ಯಕ್ರಮ ಅತಿಗಣ್ಯರ ಭದ್ರತೆ ಹೊಂದಿರುವುದರಿ0ದ ಯಾವುದೇ ಲೋಪವಿಲ್ಲದಂತೆ ಭದ್ರತೆ ಒದಗಿಸುವ ಸಲುವಾಗಿ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಜವಾಬ್ದಾರಿ ನೀಡಿ ನಿಯೋಜನೆ ಮಾಡಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು. ಭದ್ರತೆ ಕುರಿತು ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ.ವಿ. ಅಶೋಕ್ ಅವರು, ದೇಶದ ಪ್ರಥಮ ಪ್ರಜೆ ರಾಷ್ಟçಪತಿ ಅವರ ಆಗಮನದ ಹಿನ್ನೆಲೆಯಲ್ಲಿ ನಗರದಾದ್ಯಂತ ಪೊಲೀಸ್ ಬಂದೋಬಸ್ತ್ ಏರ್ಪಡಿಸಲು…
ತಿಪಟೂರು: ತಾಲ್ಲೂಕಿನ ಕಸಬಾ ಹೋಬಳಿಯ ಮತ್ತಿಹಳ್ಳಿ ಗ್ರಾಮದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ನಮ್ಮೂರು ನಮ್ಮ ಕೆರೆ ಅಡಿಯಲ್ಲಿ ಪುನಶ್ಚೇತನಗೊಂಡ ಕೆರೆ ಗ್ರಾಮಸ್ಥರಿಗೆ ಹಸ್ತಾಂತರ, ಸೂರಿಲ್ಲದ ನಿರ್ಗತಿಕರಾದ ಶಂಕರಮ್ಮನವರಿಗೆ ಶ್ರೀ ಕ್ಷೇತ್ರದ ವತಿಯಿಂದ ನಿರ್ಮಿಸಲಾದ ವಾತ್ಸಲ್ಯ ಮನೆ ಹಸ್ತಾಂತರ ಹಾಗೂ ಶಾಲಾ ವಿದ್ಯಾರ್ಥಿಗಳಿಗೆ ಬೆಂಚ್ ಡೆಸ್ಕ್ಗಳ ವಿತರಣೆ ಕಾರ್ಯಕ್ರಮ ಗುರುವಾರ ನಡೆಯಿತು. ಮತ್ತಿಹಳ್ಳಿ ಕೆರೆ ಹಸ್ತಾಂತರ ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಎಚ್.ಎಮ್.ಸುದರ್ಶನ್ ಮಾತಾನಾಡಿ ಧರ್ಮಸ್ಥಳ ಕ್ಷೇತ್ರದಿಂದ ನಾನಾ ಕಾರ್ಯಗಳು ನೆಡೆಯುತ್ತಿದ್ದು, ಕೆರೆಗಳಲ್ಲಿ ಮಣ್ಣು ತೆಗೆಯುವ ಮೂಲಕ ಪರಿಸರ ಸಂರಕ್ಷಣೆಗೆ ಹೆಚ್ಚಿನ ಅಧ್ಯತೆ ನೀಡಲಾಗಿದೆ. ಹಸ್ತಾಂತರಗೊ0ಡ ಕೆರೆಯನ್ನು ಉಸ್ತುವಾರಿ ಸಮಿತಿಯು ಅಚ್ಚುಕಟ್ಟಾಗಿ ನಿರ್ವಹಣೆ ಮಾಡಿದಾಗ ಮಾತ್ರ ಮಾಡಿದ ಕಾರ್ಯಕ್ಕೆ ಬೆಲೆಸಿಗುತ್ತದೆ ಎಂದರು. ತಿಪಟೂರು ತಾಲ್ಲೂಕಿನ ಮತ್ತಿಹಳ್ಳಿ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ವಿತರಣಾ ಕಾರ್ಯಕ್ರಮವನ್ನು ತಾಲ್ಲೂಕು ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸುದರ್ಶನ್ ರವರ ಸಮ್ಮುಖದಲ್ಲಿ ಹಮ್ಮಿಕೊಳ್ಳಲಾಗಿತ್ತು.ಮೊದಲಿಗೆ ಯೋಜನೆಯ ವತಿಯಿಂದ ಮಾಶಾಸನ ಪಡೆಯುತ್ತಿರುವ ಸೂರಿಲ್ಲದ ಶಂಕರಮ್ಮರವರಿಗೆ…
ಕೊರಟಗೆರೆ: ಸರ್ಕಾರವು ಪರವಾಗಿ ಭೂಮಾಪಕರ ಹೆಸರಿನಲ್ಲಿ ರೈತರಿಂದ ಕೊಟ್ಯಂತರ ಶುಲ್ಕ ವಸೂಲು ಮಾಡಿಕೊಂಡು ನಮ್ಮನ್ನು ೨೬ ವರ್ಷಗಳಿಂದ ದುಡಿಸಿಕೊಂಡು ಅನ್ಯಾಯ ಮಾಡಿಕೊಂಡು ಬರುತ್ತಿದೆ ಎಂದು ತಾಲ್ಲೂಕು ಪರವಾನಗಿ ಭೂಮಾಪಕರ ಸಂಘದ ಅದ್ಯಕ್ಷ ಡಿ.ನಾರಾಯಣರಾಜು ಆರೋಪಿಸಿದರು. ಅವರು ಕೊರಟಗೆರೆ ಪಟ್ಟಣದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತ ನಾಡಿ ಸರ್ಕಾರವು ರೈತರಿಂದ ಕ್ರಯ, ಧಾನ, ಹದ್ದುಭಸ್ತು, ತತ್ಕಾಲ್ ಪೋಡಿ ಸೇರಿದಂತೆ ಹಲವು ಪ್ರಕರಣಗಳಿಗೆ ಭೂಮಾಪನಾ ಕಾರ್ಯ ನಿರ್ವಹಿಸಲು ರೈತರಿಂದ ಸಾವಿರಾರು ರೂಗಳ ಶುಲ್ಕವನ್ನು ಪರವಾನಗಿ ಭೂಮಾಪಕರಿಗೆ ನೀಡಬೇಕೆಂದು ವಸೂಲು ಮಾಡುತ್ತಿದೆ, ನಮಗೆ ಅದರಲ್ಲಿ ಕಾಲು ಭಾಗ ಮಾತ್ರ ನೀಡಿ ಮುಕ್ಕಾಲು ಭಾಗ ಸರ್ಕಾರ ಇಟ್ಟುಕೊಳ್ಳುತ್ತಿದೆ, ಈ ಕಾಲು ಭಾಗದ ಹಣದಲ್ಲಿ ನಾವು ಬಾಂದು ಜವಾನರನ್ನು ಹಣ ನೀಡಿ ಕರೆದುಕೊಂಡು ಹೋಗಬೇಕು, ರೈತರ ಜಮೀನಿನ ಹತ್ತಿರದ ಪ್ರಯಾಣ ದರವನ್ನು ನಾವೇ ಭರಸಿಕೊಳ್ಳಬೇಕು ನಮಗೆ ಯಾವುದೇ ಭದ್ರತೆ, ಸೌಲಭ್ಯ ಇಲ್ಲ ಈ ೨೬ ವರ್ಷಗಳ ಅನ್ಯಾಯದ ವಿರುದ್ದ ನಾವು ಒಂದು ತಿಂಗಳಿನಿAದ ರಾಜ್ಯಾದ್ಯಂತ ಮುಷ್ಕರ ಮಾಡುತ್ತಿದ್ದು ನಮಗೆ ಸಮಾನ ಕೆಲಸಕ್ಕೆ…
ಪಾವಗಡ: ತಾಲೂಕಿನ ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಒದಗಿ ಸುವ ನಿಟ್ಟಿನಲ್ಲಿ, ತಾಲೂಕು ಕಛೇರಿ ಹಾಗೂ ಸಿ.ಕೆ. ಪುರ ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಹಮ್ಮಿಕೊಳ್ಳ ಲಾಗಿದ್ದ ‘ಜನಸಂಪರ್ಕ ಸಭೆ’ ಯಶಸ್ವಿಯಾಗಿ ಜರುಗಿತು. ಸಾರ್ವಜನಿಕರು ತಮ್ಮ ದೈನಂದಿನ ಸಮಸ್ಯೆಗ ಳನ್ನು ನೇರವಾಗಿ ತಾಲೂಕು ಮಟ್ಟದ ಅಧಿಕಾರಿಗಳ ಗಮನಕ್ಕೆ ತರಲು ಈ ಸಭೆ ವೇದಿಕೆಯಾಯಿತು. ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿಗಳು, ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿ ಸರ್ಕಾರದ ಸೌಲಭ್ಯಗಳು ಜನರಿಗೆ ತಲುಪಿಸುವಲ್ಲಿ ವಿಳಂಬವಾಗಬಾರದು. ಸಾರ್ವಜನಿಕರು ಅಲೆದಾಡು ವುದನ್ನು ತಪ್ಪಿಸಲು ಅವರಿದ್ದಲ್ಲಿಗೆ ಆಡಳಿತವನ್ನು ತರುವುದೇ ಈ ಕಾರ್ಯಕ್ರಮದ ಉದ್ದೇಶ, ಸ್ವೀಕೃತ ವಾದ ಅರ್ಜಿಗಳಲ್ಲಿ ಸರಳವಾದ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಸೂಚಿಸಿದ ಅವರು, ಜಟಿಲವಾದ ಅರ್ಜಿಗಳನ್ನು ಕಾಲಮಿತಿಯೊಳಗೆ ವಿಲೇವಾರಿ ಮಾಡಲು ಅಧಿಕಾರಿಗಳಿಗೆ ತಾಕೀತು ಮಾಡಿದರು. ತಾಲೂಕು ಕೇಂದ್ರದ ಜೊತೆಗೆ ಸಿ.ಕೆ. ಪುರ ಗ್ರಾಮದಲ್ಲಿಯೂ ಜಿಲ್ಲಾಧಿಕಾರಿಗಳು ಸಭೆ ನಡೆಸಿ ಗ್ರಾಮಸ್ಥರ ಅಹವಾಲುಗಳನ್ನು ಆಲಿಸಿದರು. ಗ್ರಾಮೀಣ ಭಾಗದ ರೈತರ ಪೌತಿ ಖಾತೆ ಬದಲಾವಣೆ ಹಾಗೂ ಪೋಡಿ ಮುಂತಾದ ಸಮಸ್ಯೆಗಳಿಗೆ ಆದ್ಯತೆ ನೀಡಿ…
ತುಮಕೂರು: ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಬಿಸಿಸಿಐ ವತಿಯಿಂದ ಟಾಟಾ ಐಪಿಎಲ್೨೦೨೬ ಆರಂಭಿಕ ಎರಡು ಮ್ಯಾಚ್‌ಗಳ ನೇರ ಪ್ರಸಾರವನ್ನು ಉಚಿತವಾಗಿ ದೊಡ್ಡ ಪರದೆಯ ಮೇಲೆ ಆಯೋಜಿಸಲಾಗಿದೆ ಎಂದು ಬಿಸಿಸಿಐನ ಅಲ್ಪಿನ್ ಗಾಯಕವಾಡ್ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,ಟಾಟಾ ಐಪಿಎಲ್ ಪ್ಯಾನ್ ಪಾರ್ಕು ಆಯೋಜಿಸಿರುವ ಈ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಮಾರ್ಚ್೨೮ ಶನಿವಾರ ಸಂಜೆ.೭:೩೦ಕ್ಕೆ ರಾಯಲ್‌ಚಾಲೆಂರ‍್ಸ್ ಬೆಂಗಳೂರು ಮತ್ತು ಸನ್‌ರೈಸರ್ ಹೈದ್ರಾಬಾದ್ ತಂಡಗಳ ನಡುವಿನ ಮ್ಯಾಚ್ ಹಾಗೂ ಮಾರ್ಚ್ ೨೯ ರ ಭಾನುವಾರ ಸಂಜೆ ೭:೩೦ಕ್ಕೆ ಮುಂಬೈ ಇಂಡಿಯನ್ಸ್ ಮತ್ತು ಕಲ್ಕತ್ತಾ ನೈಟ್ ರೈರ‍್ಸ್ ತಂಡಗಳ ನಡುವಿನ ಮ್ಯಾಚ್ ಉಚಿತವಾಗಿ ವಿಕ್ಷೀಸಲು ಅವಕಾಶವಿದ್ದು, ಸುಮಾರು ೧೦ ಸಾವಿರ ಜನರು ನೆಲದ ಮೇಲೆ ಕುಳಿತು ನೋಡಲು ಬೇಕಾದ ವ್ಯವಸ್ಥೆ ಮಾಡಿದ್ದು, ಸ್ಟೇಡಿಯಂನಲ್ಲಿಯ ಮ್ಯಾಚ್ ನೋಡುತ್ತಿರುವ ಅನುಭವ ನೀಡಲಿದೆ ಎಂದರು. ಕ್ರಿಕೆಟ್ ನೋಡುಗರ ಸಂಖ್ಯೆಯನ್ನು ಹೆಚ್ಚು ಮಾಡುವ ನಿಟ್ಟಿನಲ್ಲಿ ಬಿಸಿಸಿಐ ದೇಶದ ಐವತ್ತು ಕಡೆಗಳಲ್ಲಿ ಈ ರೀತಿಯ ದೊಡ್ಡ ಪರದೆಗಳ ಮೂಲಕ ಕ್ರಿಕೆಟ್ ಪ್ರೇಮಿ ಗಳಿಗೆ…
ತುಮಕೂರು: ಜೀವನದಲ್ಲಿ ಎದುರಾಗುವ ಕಷ್ಟ-ಸುಖ ಹಾಗೂ ನೋವು-ನಲಿವುಗಳು ಸಹಜ ಪ್ರಕ್ರಿಯೆಗಳಾಗಿದ್ದು, ಇವು ಯಾವುದೂ ಮನುಷ್ಯನ ಸಾಧನೆಯ ಹಾದಿಗೆ ಅಡ್ಡಿ ಯಾಗಬಾರದು ಎಂದು ಮಹಿಳಾ ಅಂಧರ ಟಿ-೨೦ ವಿಶ್ವಕಪ್ ವಿಜೇತ ತಂಡದ ನಾಯಕಿ ಟಿ. ಸಿ. ದೀಪಿಕಾ ಅವರು ಕಿವಿಮಾತು ಹೇಳಿದರು. ತುಮಕೂರು ವಿಶ್ವವಿದ್ಯಾನಿಲಯದ ಯೋಗಾಧ್ಯಯನ ಮತ್ತು ಸಂಶೋಧನಾ ವಿಭಾಗ ಹಾಗೂ ವಿಶ್ವವಿದ್ಯಾನಿಲಯ ವಿಜ್ಞಾನ ಕಾಲೇಜಿನ ದೈಹಿಕ ಶಿಕ್ಷಣ ವಿಭಾಗದ ಸಹಯೋಗದಲ್ಲಿ (ಮಾ. ೨೭) ಶುಕ್ರವಾರ ಆಯೋಜಿಸಲಾಗಿದ್ದ ಯೋಗ ಮತ್ತು ಮಹಿಳಾ ಸಬಲೀಕರಣ ಕುರಿತ ಒಂದು ದಿನದ ರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು. ತಮ್ಮ ಜೀವನದ ಕಹಿ ಘಟನೆಗಳನ್ನು ಮೆಲುಕು ಹಾಕಿದ ಅವರು, ಒಂದು ಹೊತ್ತಿನ ಊಟಕ್ಕೂ ಪರದಾಡಿದ ದಿನಗಳು ಮತ್ತು ಅಂಧತ್ವದ ಕಾರಣಕ್ಕೆ ಎದುರಿಸಿದ ಅವಹೇಳನಗಳನ್ನು ಸ್ಮರಿಸಿದರು. ಟೀಕೆಗಳನ್ನು ಮೆಟ್ಟಿ ನಿಂತು ಸಾಧನೆಯ ಗುರಿ ತಲುಪುವ ಮೂಲಕ ಇಂದು ತನ್ನನ್ನು ಹೀಯಾಳಿಸಿದವರು ತಲೆತಗ್ಗಿಸುವಂತೆ ಹಾಗೂ ಬೆಂಬಲಿಸಿದವರು ಹೆಮ್ಮೆಯಿಂದ ತಲೆ ಎತ್ತುವಂತೆ ಮಾಡಿರುವುದಾಗಿ ತಿಳಿಸಿದರು. ಬೆಂಗಳೂರಿನ ಅಂತರಾಷ್ಟ್ರೀಯ ಯೋಗ ಮತ್ತು ವೆಲ್ನೇಸ್…
ಹುಳಿಯಾರು: ಇಂದಿನ ಒತ್ತಡದ ಜೀವನಶೈಲಿಯಲ್ಲಿ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಯೋಗಾಭ್ಯಾಸ ಅತ್ಯಗತ್ಯ ಎಂದು ಗೀತಕ್ಕ ಅವರು ಅಭಿಪ್ರಾಯಪಟ್ಟರು. ಪಟ್ಟಣದ ಪ್ರಜಾಪಿತ ಬ್ರಹ್ಮಕುಮಾರಿಸ್ ಈಶ್ವರೀಯ ವಿಶ್ವವಿದ್ಯಾ ಲಯದ ಆವರಣದಲ್ಲಿ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ (ರಿ.) ಕರ್ನಾಟಕ, ಹುಳಿಯಾರು-ಕೆಂಕೆರೆ ಶಾಖೆ ಹಮ್ಮಿಕೊಂಡಿದ್ದ ೪೮ ದಿನಗಳ “ಉಚಿತ ಯೋಗಾಸನ ಹಾಗೂ ಪ್ರಾಣಾಯಾಮ ತರಬೇತಿ ಶಿಬಿರ”ವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದ ಶಿಕ್ಷಕ ನಟರಾಜು ಅವರು, “ಯೋಗವು ಕೇವಲ ವ್ಯಾಯಾಮವಲ್ಲ, ಅದು ಜೀವನ ನಡೆಸುವ ಕಲೆ. ರೋಗಮುಕ್ತ ಸಮಾಜ ನಿರ್ಮಾಣಕ್ಕಾಗಿ ಈ ಶಿಬಿರವನ್ನು ಆಯೋಜಿಸಲಾಗಿದೆ. ಮುಂದಿನ ೪೮ ದಿನಗಳ ಕಾಲ ಸೂರ್ಯ ನಮಸ್ಕಾರ, ಆಸನಗಳು, ಮುದ್ರೆಗಳು ಹಾಗೂ ಪ್ರಾಣಾಯಾಮದ ಬಗ್ಗೆ ಸವಿಸ್ತಾರವಾಗಿ ಕಲಿಸಲಾಗುವುದು,” ಎಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಯೋಗ ಶಿಕ್ಷಕಿ ಬಕುಳಾದೇವಿ ಅವರು ಮಾತನಾಡಿ, ದಿನನಿತ್ಯದ ಜಂಜಾಟಗಳ ನಡುವೆ ಯೋಗ ಮಾಡುವುದರಿಂದ ಏಕಾಗ್ರತೆ ಮತ್ತು ಕಾರ್ಯಕ್ಷಮತೆ ಹೆಚ್ಚುತ್ತದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು…











