ಹುಳಿಯಾರು: ಇಲ್ಲಿನ ಗಾಂಧಿ ಪೇಟೆಯ ನಿವಾಸಿ ರೋಷನ್ ಬಿನ್ ಶ್ರೀರಂಗಬಾಬು ಎಂಬುವರ ಮನೆಯಲ್ಲಿ ಬುಧವಾರ ನಸುಕಿನ ವೇಳೆಯಲ್ಲಿ ಕಳ್ಳತನ ನಡೆದಿದೆ. ಮನೆಯವರು ದೇವರ ದರ್ಶನಕ್ಕಾಗಿ ಮುಂಜಾನೆ ನನಗೆ ಬೀಗ ಹಾಕಿ ನಂಜನಗೂಡಿಗೆ ತೆರಳಿದ್ದ ಸಮಯದಲ್ಲಿ ಕಳ್ಳರು ಬೀಗ ಮುರಿದು ಒಳನುಗ್ಗಿ ಕೃತ್ಯ ಎಸಗಿದ್ದಾರೆ. ಘಟನೆಯ ವಿವರ: ಮನೆಯ ಮಾಲೀಕ ರೋಷನ್ ಮತ್ತು ಅವರ ಪತ್ನಿ ಬುಧವಾರ ಬೆಳಗಿನ ಜಾವ ಸುಮಾರು ೨:೩೦ಕ್ಕೆ ನಂಜನಗೂಡಿನ ದೇವಸ್ಥಾನಕ್ಕೆ ಕಾರಿನಲ್ಲಿ ತೆರಳಿದ್ದರು. ದಂಪತಿಗಳು ಹೋದ ನಂತರ ಅಂದರೆ ಸುಮಾರು ೨:೩೦ ರಿಂದ ೩:೩೦ರ ಅವಧಿಯಲ್ಲಿ ಈ ಕಳ್ಳತನ ನಡೆದಿರಬಹುದು ಎಂದು ಅಂದಾಜಿಸಲಾಗಿದೆ. ಮಧ್ಯಾಹ್ನ ೨:೩೦ರ ಸುಮಾರಿಗೆ ಪಕ್ಕದ ಮನೆಯವರು ವಾಹನ ನಿಲ್ಲಿಸಲು ಬಂದಾಗ ಮನೆ ಬಾಗಿಲು ತೆರೆದಿರುವುದು ಗಮನಕ್ಕೆ ಬಂದಿದೆ. ತಕ್ಷಣ ಅವರು ರೋಷನ್ ಅವರಿಗೆ ಫೋನ್ ಮಾಡಿ ವಿಷಯ ತಿಳಿಸಿದಾಗ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ಮನೆಯ ಮುಂಭಾಗದ ಗೇಟ್ ಮತ್ತು ಮುಂಬಾಗಿಲಿನ ಬೀಗ ಹಾಕಿರುವುದನ್ನು ಗಮನಿಸಿರುವ ಕಳ್ಳರು, ಮನೆಯಲ್ಲಿ ಯಾರೂ ಇಲ್ಲ ಎಂದು ಬಗೆದು…
Author: News Desk Benkiyabale
ಮಧುಗಿರಿ: ನಗರದ ಉಪ ವಿಭಾಗಾಧಿಕಾರಿಗಳ ಕಛೇರಿಯಲ್ಲಿ ವೃತ್ತಿಜೀವನ ಆರಂಭಿಸಿದ ಸಣ್ಣಮುದ್ದಯ್ಯನವರು ಪ್ರಾರಂಭಿಕ ದಿನಗಳಿಂದ ಬಡವರು, ಶೋಷಿತರ ಪರ ಧ್ವನಿಯಾಗಿದ್ದರು ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ ತಿಳಿಸಿದರು. ಅವರು ಕನ್ನಡ ಭವನದಲ್ಲಿ ಜಿಲ್ಲಾ ಕಸಾಪ ವತಿಯಿಂದ ಏರ್ಪಡಿಸಿದ್ದ ಸಣ್ಣಮುದ್ದಯ್ಯನವರ ನುಡಿನಮನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತಮ್ಮ ದೈನಂದಿನ ಕೆಲಸ ಕಾರ್ಯಗಳು, ಪ್ರಮಾಣ ಪತ್ರಗಳಿಗಾಗಿ ಬರುತ್ತಿದ್ದ ಗ್ರಾಮೀಣ ರೈತರಿಗೆ ಅಲೆದಾಡಿಸದೆ ತಕ್ಷಣ ಕೆಲಸ ಮಾಡಿಕೊಡುತ್ತಿದ್ದರು ಎಂದು ತಿಳಿಸಿದರು. ಸಣ್ಣಮುದ್ದಯ್ಯನವರ ಸಮಾಜಮುಖಿ ಕೆಲಸಗಳನ್ನು ಕುರಿತು ಜಿಲ್ಲಾ ಕಸಾಪ ಸಂಚಾಲಕರಾದ ಕೆ.ಎಸ್.ಉಮಾಮಹೇಶ್ ಮಾತನಾಡಿ, ೨೦೦೨ರಲ್ಲಿ ತುಮಕೂರಿನಲ್ಲಿ ನಡೆದ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ನೆನೆಗುದಿಗೆ ಬಿದ್ದಾಗ ನೌಕರ ಸಂಘದ ವತಿಯಿಂದ ಪ್ರೇರಕ ಶಕ್ತಿಯಾಗಿ ನಿಂತರು. ಸರ್ಕಾರಿ ನೌಕರರ ಭವನದಲ್ಲಿಯೇ ಪೂರ್ವಸಿದ್ಧತಾ ಸಭೆ ನಡೆಸಿದರು. ಜಿಲ್ಲೆಯ ಸಚಿವರುಗಳಾದ ಟಿ.ಬಿ.ಜಯಚಂದ್ರ ಹಾಗೂ ಡಾ. ಜಿ.ಪರಮೇಶ್ವರ್ ಅವರಿಗೆ ಸಹಕಾರದ ಭರವಸೆ ನೀಡಿ ಸಾಹಿತ್ಯ ಸಮ್ಮೇಳನದ ಕೆಲಸಗಳಿಗೆ ಚಾಲನೆ ನೀಡುವುದರ ಜೊತೆಗೆ ಜಿಲ್ಲೆಯ ಎಲ್ಲಾ ನೌಕರರ ಒಂದು ದಿನದ ವೇತನವನ್ನು…
ತುಮಕೂರು: ಯಶಸ್ಸು ಎಂಬುದು ಬದುಕಿನ ಸಾರ್ಥಕತೆಯ ಮೊದಲ ಮೆಟ್ಟಿಲು. ಮಕ್ಕಳಿಗೆ ಹಸಿವು, ಬಡತನ ಮತ್ತು ಅವಮಾನದ ಅರಿವಿದ್ದಾಗ ಮಾತ್ರ ಅವರಿಗೆ ಸಾಧನೆಯ ಹಾದಿಯಲ್ಲಿ ದೃಢವಾದ ಪ್ರೇರಣೆ ಲಭ್ಯವಾಗುತ್ತದೆ ಎಂದು ಅಖಿಲ ಭಾರತೀಯ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಸಿ. ಸೋಮ ಶೇಖರ್ ಅವರು ಅಭಿಪ್ರಾಯಪಟ್ಟರು. ತುಮಕೂರು ವಿಶ್ವವಿದ್ಯಾನಿಲಯದ ಪ್ರೇರಣಾ ಉಪನ್ಯಾಸ ಕಾರ್ಯಕ್ರಮ ಸಮಿತಿ ಹಾಗೂ ವಿಶ್ವವಿದ್ಯಾನಿಲಯ ವಿಜ್ಞಾನ ಕಾಲೇಜಿನ ಸಹಯೋಗದೊಂದಿಗೆ ಮಾ. ೨೬ರ ಗುರುವಾರದಂದು ಆಯೋಜಿಸಲಾಗಿದ್ದ ೨೦೨೫-೨೬ನೇ ಸಾಲಿನ ಪ್ರೇರಣಾ ಉಪನ್ಯಾಸ – ೦೫ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಯಶಸ್ಸಿನ ಹಾದಿಯ ಬಗ್ಗೆ ವಿವರಿಸಿದ ಅವರು, ಯಶಸ್ಸು ಎಂಬುದು ನಮ್ಮ ಆಸೆ ಮತ್ತು ಆಕಾಂಕ್ಷೆಗಳಿಗೆ ಸಿಗುವ ತೃಪ್ತ ಭಾವನೆ. ಸಾಧನೆಗೆ ಯಾವುದೇ ಅಡ್ಡದಾರಿಗಳಿಲ್ಲ, ಕಠಿಣ ಶ್ರಮ, ಏಕಾಗ್ರತೆ ಮತ್ತು ಛಲದಿಂದ ಮಾತ್ರ ಇದನ್ನು ಪಡೆಯಲು ಸಾಧ್ಯ. ಪೋಷಕರ ಕನಸುಗಳೊಂದಿಗೆ ವಿದ್ಯಾರ್ಥಿಗಳ ಕನಸುಗಳು ಸಮೀಕರಣಗೊಂಡಾಗ ಉತ್ತಮ ಭವಿಷ್ಯ ನಿರ್ಮಾಣವಾಗುತ್ತದೆ. ಶಿಷ್ಯರು ತಮ್ಮ ಗುರುಗಳನ್ನು ಮೀರಿಸುವಂತಹ ಸ್ಥಾನಕ್ಕೇರಬೇಕು ಎಂದರು. ಡಾ. ಎ.ಪಿ.ಜೆ. ಅಬ್ದುಲ್…
ತುಮಕೂರು: ಬೆಳಗಾವಿಯ ತಾಂತ್ರಿಕ ಶಿಕ್ಷಣ ವಿಶ್ವವಿದ್ಯಾಲಯದ ಬೋಧನಾ ಮತ್ತು ಪಠ್ಯಕ್ರಮ ಜಗತ್ತಿಗೆ ಮಾದರಿಯಾಗಿದೆ ಎಂದು ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಗೌರವಾನ್ವಿತ ಕುಲಪತಿಯಾದ ಪ್ರೊ.ವಿದ್ಯಾಶಂಕರ್.ಎಸ್. ರವರು ಅಭಿಪ್ರಾಯಪಟ್ಟಿದ್ದಾರೆ. ನಗರದ ಶಿರಾರಸ್ತೆಯ ಶ್ರೀದೇವಿ ತಾಂತ್ರಿಕ ಮಹಾವಿದ್ಯಾಲಯದ ವತಿಯಿಂದ ಮಾರ್ಚ್ ೨೬ ರಂದು ಗುರುವಾರ ಬೆಳಿಗ್ಗೆ ೧೦ ಗಂಟೆಗೆ ಶ್ರೀದೇವಿ ಕಾಲೇಜಿನ ಆವರಣದಲ್ಲಿ ಶ್ರೀಉತ್ಸವ ವಾರ್ಷಿಕೋತ್ಸವ-೨೦೨೬ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವನ್ನು ಉದ್ಘಾಟಿಸಿದ್ದ ಪ್ರೊ.ವಿದ್ಯಾಶಂಕರ್.ಎಸ್.ರವರು ಮಾತನಾಡುತ್ತಾ ಕೃತಕ ಬುದ್ಧಿಮತ್ತೆ ಬೆಳೆದಷ್ಟು ಉದ್ಯೋಗಾವಕಾಶಗಳು ಕಡಿಮೆಯಾಗಲಿದೆ. ಎಂಬ ಆತಂಕದಲ್ಲಿ ಸತ್ಯಾಂಶವಿಲ್ಲ ಆದರೆ ಕೃತಕ ಬುದ್ಧಿಮತ್ತೆಯನ್ನು ಮೀರಿ ಬೆಳೆಯುವಂತಹ ಅವಕಾಶಗಳನ್ನು ನಾವು ಸೃಷ್ಟಿಸಿಕೊಳ್ಳದೆ ಹೋದಲ್ಲಿ ಮನುಷ್ಯ ಬೇಡವಾದ ವಸ್ತುವಾಗುತ್ತಾನೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಹೀಗಾಗಿ ೨೦೩೦ರ ವೇಳೆಗೆ ಕೃತಕ ಬುದ್ಧಿಮತ್ತೆಯನ್ನು ನಿಯಂತ್ರಿಸುಲು ಇಂದಿನಿ0ದಲೇ ನಮ್ಮ ಪ್ರಯತ್ನಗಳನ್ನು ಮತ್ತು ಹೊಸ ಹೊಸ ಅಲೋಚನೆ, ಸಂಶೋಧನೆ ಮತ್ತು ನಾವೀನ್ಯತೆಗೆ ಹೆಚ್ಚು ಗಮನಕೊಡಬೇಕು. ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಪಠ್ಯಕ್ರಮ ಶೈಕ್ಷಣಿಕ ಕ್ರಮಕ್ರಮ ಅಂತರಾಷ್ಟ್ರೀಯ ಮಟ್ಟದಲ್ಲಿ ಶ್ರೇಷ್ಠವಾಗಿದೆ. ಹೀಗಾಗಿ ನಮಗೆ ಮಾನ್ಯತೆ ಕೊಡಿ ಎಂದು. ಸೌದಿಅರೇಬಿಯಾ, ದಕ್ಷಿಣ…
ತುಮಕೂರು: ಆಧುನಿಕ ಜಗತ್ತಿನ ಒತ್ತಡದ ಬದುಕಿಗೆ ಡಿ.ವಿ. ಗುಂಡಪ್ಪನವರ ‘ಮಂಕುತಿಮ್ಮನ ಕಗ್ಗ’ ಒಂದು ಅತ್ಯುತ್ತಮ ದಿವ್ಯೌಷಧಿಯಾಗಿದೆ ಎಂದು ವೈದ್ಯರು, ಲೇಖಕರು ಹಾಗೂ ಡಿಡಿ ಚಂದನದ ಥಟ್ ಅಂತ ಹೇಳಿ ಕಾರ್ಯಕ್ರಮದ ರೂವಾರಿಗಳಾದ ಡಾ. ನಾ. ಸೋಮೇಶ್ವರ್ ಅಭಿಪ್ರಾಯಪಟ್ಟಿದ್ದಾರೆ. ಡಿವಿಜಿ ಕಗ್ಗಗಳ ವಾಚನ, ವ್ಯಾಖ್ಯಾನಕಾರರು ಹಾಗೂ ವೈದ್ಯರಾದ ಡಾ.ಕೆ.ರಾಜಶೇಖರ್ ತಿಳಿಸಿದರು. ತುಮಕೂರು ವಿವಿಯಲ್ಲಿ ಹಿರಿಯ ನಾಗರೀಕರ ಪರಿಸರ ವೇದಿಕೆ ಮತ್ತು ತುಮಕೂರು ವಿಶ್ವವಿದ್ಯಾನಿಲಯ ಕಲಾ ಕಾಲೇಜಿನ ಕನ್ನಡ ವಿಭಾಗ ಇವರ ಸಹಯೋಗದಲ್ಲಿ ಮಾ.24 ಮಂಗಳವಾರ ಆಯೋಜಿಸಲಾಗಿದ್ದ ಡಿ.ವಿ.ಜಿ ಅವರ ಕಗ್ಗಗಳ ವಾಚನ, ವ್ಯಾಖ್ಯಾನ ಮುಕ್ತಾಯ ಸಮಾರಂಭ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕೇವಲ ನಾಲ್ಕು ಸಾಲುಗಳಲ್ಲಿ ಇಡೀ ಬದುಕಿನ ಸಾರವನ್ನು ಹಿಡಿದಿಡುವ ಕಗ್ಗ, ಕನ್ನಡಿಗರ ಪಾಲಿನ ‘ಆಧುನಿಕ ಭಗವದ್ಗೀತೆ’. ಹುಲ್ಲಾಗು ಬೆಟ್ಟದಡಿ, ಮನೆಗೆ ಮಲ್ಲಿಗೆಯಾಗು ಎಂಬ ಸಾಲುಗಳು ಮನುಷ್ಯನಿಗೆ ಇರಬೇಕಾದ ವಿನಯ ಮತ್ತು ಸಮಾಜಕ್ಕೆ ನೀಡಬೇಕಾದ ಕೊಡುಗೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ಬೋಧಿಸುತ್ತವೆ ಎಂದರು. ಇAದಿನ ಸ್ಪರ್ಧಾತ್ಮಕ ಯುಗದಲ್ಲಿ ಸೋಲು-ಗೆಲುವನ್ನು ಸಮಾನ ವಾಗಿ ಸ್ವೀಕರಿಸುವ ಸ್ಥಿತಪ್ರಜ್ಞತೆಯ…
ತುಮಕೂರು: ಜಿಲ್ಲೆಯ ನಾಗರಿಕರಿಂದ ಅಹವಾಲುಗಳನ್ನು ಸ್ವೀಕರಿಸಿ/ಸಮಸ್ಯೆಗಳನ್ನು ಆಲಿಸಿ ಸಮಸ್ಯೆಗಳಿಗೆ ಪರಿಹಾರೋಪಾ ಯವನ್ನು ಒದಗಿಸಲು ಏಪ್ರಿಲ್ ೪ರಂದು ಬೆಳಿಗ್ಗೆ ೧೧ ಗಂಟೆಗೆ ತುಮಕೂರು ನಗರದಲ್ಲಿ ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ: ಜಿ. ಪರಮೇಶ್ವರ ಅವರ ಅಧ್ಯಕ್ಷತೆಯಲ್ಲಿ “ಜಿಲ್ಲಾ ಮಟ್ಟದ ಜನತಾ ದರ್ಶನ ಕಾರ್ಯಕ್ರಮ”ವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಳಿಸಿದ್ದಾರೆ. ಈಗಾಗಲೇ ತುಮಕೂರು ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ತಾಲ್ಲೂಕು ಮಟ್ಟದ ಜನತಾ ದರ್ಶನ ಕಾರ್ಯಕ್ರಮವನ್ನು ಆಯೋ ಜಿಸಿ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರಗಳನ್ನು ನೀಡಲಾಗಿದೆ. ಅಲ್ಲದೆ, ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಜಟಿಲ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಸಾರ್ವಜನಿಕರ ಅಹವಾಲುಗಳಿಗೆ ಪರಿಹಾರವನ್ನು ನೀಡ ಲಾಗಿದೆ. ಅಂತೆಯೇ, ಏಪ್ರಿಲ್ ೪ರಂದು ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಜಿಲ್ಲಾ ಮಟ್ಟದ ಜನತಾ ದರ್ಶನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಅಂದು ಬೆಳಿಗ್ಗೆ 11 ಗಂಟೆಗೆ ಮಹಾನಗರಪಾಲಿಕೆ ಆವರಣದ ಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಅವರ ಪುತ್ಥಳಿ ಮುಂಭಾಗದಲ್ಲಿ ನಿರ್ಮಿಸಲಾಗುವ…
ತುಮಕೂರು: ಕರ್ನಾಟಕ ರಾಜ್ಯದಲ್ಲಿ ಮಹಿಳೆಯರಿಗಾಗಿ ಅಭಿವೃದ್ಧಿ ಕ್ಷೇತ್ರದಲ್ಲಿನ ಸಾಧನೆಯನ್ನ ಗುರುತಿಸಿ ವ್ಯಕ್ತಿ ವಿಭಾಗದಲ್ಲಿ ನೀಡಲಾಗುವ ರಾಜ್ಯ ಮಟ್ಟದ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಯನ್ನು ಜಿಲ್ಲೆಯ ಕೊರಟಗೆರೆ ತಾಲೂಕಿನ ತೀತಾ ಗ್ರಾಮದ ಡಾ. ವಸಂತ ಮುರಳಿ ಅವರಿಗೆ ನೀಡಿ ಗೌರವಿಸಲಾಗಿದೆ. ಬೆಂಗಳೂರಿನಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ನಡೆದ ರಾಜ್ಯ ಮಟ್ಟದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಕೆಪಿಸಿಸಿ ಮಹಿಳಾ ಘಟಕಕಾರ್ಯಕರ್ತೆ, ಅಖಿಲ ಭಾರತ ವಿಶ್ವಕರ್ಮ ರಾಜ್ಯ ಮಹಿಳಾ ಅಧ್ಯಕ್ಷರು, ರಾಜಕೀಯ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ವಿವಿಧ ಸಾಧನೆಗೈದು ಕೊರಟಗೆರೆ ತಾಲೂಕಿನ ಗ್ರಾಮೀಣ ಭಾಗದಲ್ಲಿ ಸುಮಾರು ೧೨೦೦ಕ್ಕೂ ಹೆಚ್ಚು ಮಹಿಳಾ ಸ್ವಸಹಾಯ ಸಂಘಗಳನ್ನ ರಚಿಸಿ ಸರ್ಕಾರದಿಂದ ಸಾಲ ಸೌಲಭ್ಯ ಮತ್ತು ಅನುದಾನಗಳನ್ನ ಕೊಡಿಸಲು ಮುಂದಾದ ವಸಂತ ಮುರುಳಿಯವರ ಅನುಪಮಾ ಸಾಧನೆಯನ್ನ ಗುರುರ್ತಿಸಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಲ್ಯಾಣ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಅವರು ರಾಜ್ಯಮಟ್ಟದ ಕಿತ್ತೂರಾಣಿ ಚೆನ್ನಮ್ಮ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ. ತುಮಕೂರು ನಗರದ ಗೃಹ ಸಚಿವ ಹಾಗೂ…
ತುಮಕೂರು: ಕುಟುಂಬದಲ್ಲಿ,ಕೆಲಸಮಾಡುವ ಸ್ಥಳಗಳಲ್ಲಿ ಹೆಣ್ಣಿನ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿರುವುದು ದುರದೃಷ್ಟಕರ,ದೆಹಲಿಯಲ್ಲಿ ನಡೆದ ನಿರ್ಭಯ ಅತ್ಯಾಚಾರ,ಕೊಲೆ ನೋಡಿದರೆ ದೇಶವೇ ನಿಬ್ಬೆರಗಾಗಿತ್ತು,ಹೆಣ್ಣಿಗೆ ಬಲತುಂಬುವ ನಿರ್ಭಯ ಮಹಿಳಾ ಜಾಗೃತಿ ವೇದಿಕೆಯ ಕಾರ್ಯ ಎಲ್ಲರೂ ಮೆಚ್ಚುವಂತಹದ್ದು,ಹೆಣ್ಣಿಗೆ ರಕ್ಷಣೆ ನೀಡಬೇಕು ಜೊತೆಗೆ ಶಾಲಾಹೆಣ್ಣುಮಕ್ಕಳಿಗೆ ಸ್ವಯಂರಕ್ಷಣೆ ತೆಗೆದುಕೊಳ್ಳುವ ಕಾರ್ಯಕ್ರಮವನ್ನು ರೂಪಿಸಿ,ಹೆಣ್ಣು ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸಬಹುದು ದೇಶದಲ್ಲಿರುವ ಹೆಂಗಸರು ಇಂದು ಚಿಕ್ಕಕೆಲಸದಿಂದ ಹಿಡಿದು ಚಂದ್ರಲೋಕದ ತನಕ ಹೋಗಿಬಂದಿದ್ದಾರೆ ಎಂದರೆ ಹೆಣ್ಣಿನ ಸಾಧನೆ ಎಂತಹುದ್ದು ಎಂದು ಊಹಿಸಿ,ಹೆಣ್ಣು ಮಾಡುವ ಎಲ್ಲ ಉತ್ತಮ ಕೆಲಸಗಳಿಗೆ ಎಲ್ಲರೂ ಸಹಕಾರ ನೀಡಿದರೆ ದೇಶದಲ್ಲಿ ಹೆಣ್ಣುಮಕ್ಕಳಿಗೆ ಸಮಸ್ಯೆಯೇ ಬರುವುದಿಲ್ಲ ಎಂದು ತುಮಕೂರು ಮಹಾನಗರ ಪಾಲಿಕೆ(ಆಡಳಿತ) ಉಪ ಆಯುಕ್ತರಾದ ಸುಪ್ರಿಯಬಣಗಾರ್.ಬಿ ರವರು ಹೇಳಿದರು. ನಿರ್ಭಯ ಮಹಿಳಾ ಜಾಗೃತಿ ವೇದಿಕೆ(ರಿ)ಎಸ್.ಎಸ್.ಪುರಂನ ಶಿವಲಾಸ್ಯಸಮುದಾಯ ಭವನದಲ್ಲಿ ಆಯೋಜಿಸಿದ್ದ ವಿಶ್ವಮಹಿಳಾ ದಿನಾಚರಣೆಯನ್ನು ಉದ್ಘಾಟಿಸಿ ಮಹಿಳೆಯರನ್ನು ಕುರಿತು ಮಾತನಾಡಿದರು. ಮುಖ್ಯ ಭಾಷಣಕಾರರಾಗಿ ಆಗಮಿಸಿ ಮಾv ನಾಡಿದ ಶ್ರೀಮತಿ ಸಿ.ಎಲ್.ಸುನಂದಮ್ಮನವರು ತುಮಕೂರು ಜಿಲ್ಲೆಯಲ್ಲಿ ಮಹಿಳೆಯರು ಸರ್ಕಾರಿ ಹುದ್ದೆಯ ಉತ್ತಮ ಸ್ಥಾನದಲ್ಲಿದ್ದಾರೆ ಜಿಲ್ಲಾಧಿಕಾರಿ,ಉಪವಿಭಾಗಾಧಿಕಾರಿ,ಪಾಲಿಕೆ ಆಯುಕ್ತರು,ಉಪ ಆಯುಕ್ತರು,ಭೂದಾಖಲೆಗಳ…
ತುಮಕೂರು: ಕಳೆದ ವರ್ಷದ ಕೇಂದ್ರ ಬಜೆಟ್ ಮೂಲಕ ಜಾರಿಗೆ ತರುತ್ತಿರುವ ಕಾಯ್ದೆಯ ಪ್ರಕಾರ ನಿವೃತ್ತ ನೌಕರರಿಗೆ ಕರಾಳ ಶಾಸನವಾಗಿದ್ದು, ಇದರ ವಿರುದ್ಧ ತುಮಕೂರು ಜಿಲ್ಲಾ ನಿವೃತ್ತ ಸರ್ಕಾರಿ ನೌಕರರು ಪ್ರತಿಭಟಿಸಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಬುಧವಾರ ಬೆಳಗ್ಗೆ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದ ನಿವೃತ್ತ ನೌಕರರು ಕೇಂದ್ರ ಸರ್ಕಾರ ಜಾರಿಗೆ ತರಲು ಹೊರಟಿರುವ ಊರ್ಜಿತ ಕಾಯ್ದೆಯನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಸಂಘದ ಅಧ್ಯಕ್ಷೆ ಬಾ.ಹ. ರಮಾಕುಮಾರಿ ಅವರು ನಿರ್ಮಲ ಸೀತಾರಾಮನ್ ಅವರು ಕಳೆದ ಬಜೆಟ್‌ನಲ್ಲಿ ಊರ್ಜಿತ ಕಾಯ್ದೆಯನ್ನು ಮಂಡಿಸಿದ್ದರು. ಇದರ ಪ್ರಕಾರ ನಿವೃತ್ತರಿಗೆ ಡಿ.ಎ. ಮತ್ತು ಪಿಂಚಣಿ ಪರಿಷ್ಕರಣೆ ಇಲ್ಲವಾಗುತ್ತದೆ. ಇದನ್ನೇ ನಂಬಿ ಬದುಕುವ ನಿವೃತ್ತರು ಸಂಕಷ್ಟಕ್ಕೆ ಈಡಾಗುತ್ತಾರೆ. ಆದಕಾರಣ ಕೇಂದ್ರ ಸರ್ಕಾರದ ಈ ನಿರ್ಧಾರದ ವಿರುದ್ಧ ರಾಷ್ಟಾçದ್ಯಂತ ಕರಾಳ ದಿನವಾಗಿ ಆಚರಿಸಲಾಗುತ್ತಿದ್ದು, ಇದರನ್ವಯ ತುಮಕೂರಿನಲ್ಲಿ ಇಂದು ಪ್ರತಿಭಟನೆ ನಡೆಸಲಾಗುತ್ತಿದೆ ಎಂದರು. ಜೀವನದ ಕೊನೆಯ ಘಟ್ಟದಲ್ಲಿ ಬದುಕುವ ನಿವೃತ್ತ ನೌಕರರು ಹೆಚ್ಚು ಅನಾರೋಗ್ಯಕ್ಕೆ…
ಪಾವಗಡ: ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಮಲ್ಲಿಕಾರ್ಜುನಯ್ಯ ಅವರ ಅಕಾಲಿಕ ನಿಧನಕ್ಕೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಪಾವಗಡ ಘಟಕದ ವತಿಯಿಂದ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು. ತಾಲ್ಲೂಕು ಕಚೇರಿಯಲ್ಲಿ ತಹಶೀಲ್ದಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಶೋಕಸಭೆಯಲ್ಲಿ ಎಲ್ಲಾ ತಾಲ್ಲೂಕು ಮಟ್ಟದ ಅಧಿಕಾರಿಗಳು ಪಾಲ್ಗೊಂಡು ಮೃತರ ಆತ್ಮಕ್ಕೆ ಶಾಂತಿ ಕೋರಿ ಮೌನಾಚರಣೆ ಮಾಡಿದರು. ಸಂತಾಪ ಸೂಚಿಸಿ ಮಾತನಾಡಿದ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷರಾದ ಹೆಚ್.ವಿ. ರವಿಕುಮಾರ್ ರವರು ನಮ್ಮ ತಾಲ್ಲೂಕಿನಲ್ಲಿ ಇಂತಹ ಘಟನೆ ನಡೆದಿರುವುದು ಅತ್ಯಂತ ಆಘಾತಕಾರಿ ಮತ್ತು ಕಳವಳದ ಸಂಗತಿಯಾಗಿದೆ. ಮುಂದಿನ ದಿನಗಳಲ್ಲಿ ಇಂತಹ ಯಾವುದೇ ಘಟನೆಗಳು ಮರುಕಳಿಸಬಾರದು,ಎಲ್ಲಾ ಇಲಾಖೆಗಳ ಅಧಿಕಾರಿಗಳು ತಮ್ಮ ಅಧೀನದ ನೌಕರರನ್ನು ವಿಶ್ವಾಸಕ್ಕೆ ಪಡೆದು ಸೌಹಾರ್ಧಯುತವಾಗಿ ಕೆಲಸ ನಿರ್ವಹಿಸಲು ಸಹಕರಿಸಬೇಕು. ಯಾವುದೇ ನೌಕರರಿಗೆ ಅಥವಾ ಅಧಿಕಾರಿಗಳಿಗೆ ಕೆಲಸದ ಸ್ಥಳದಲ್ಲಿ ಸಮಸ್ಯೆಗಳಾದಲ್ಲಿ ಕೂಡಲೇ ಸಂಘದ ಗಮನಕ್ಕೆ ತನ್ನಿ, ಸಂಘವು ಸದಾ ನಿಮ್ಮ ಹಿತರಕ್ಷಣೆಗೆ ಬದ್ಧವಾಗಿರುತ್ತದೆ ಎಂದು ಭರವಸೆ ನೀಡಿದರು.…











