Author: News Desk Benkiyabale

ತುಮಕೂರು: ನಗರದ ಎಸ್.ಎಸ್.ಪುರಂನಲ್ಲಿರುವ ಶ್ರೀಭೈರ ವೇಶ್ವರ ಸಹಕಾರ ಬ್ಯಾಂಕ್ ನಿಯಮಿತದ ಆಡಳಿತ ಮಂಡಳಿಗೆ ಚುನಾವಣೆ ನಡೆದಿದ್ದು,ಶುಕ್ರವಾರ ಮತ ಎಣಿಕೆ ಎಸ್.ಎಸ್.ಸರ್ಕಲ್‌ನಲ್ಲಿ ಕೆಪಿಟಿ ಸಿಎಲ್ ಗಣಪತಿ ಸಮುದಾಯಭವನಲ್ಲಿ ನಡೆಯಿತು. ನಿರ್ದೇಶಕರಾಗಿ ಕ್ರಮವಾಗಿ ಚಿಕ್ಕರಂಗಣ್ಣ ಟಿ.ಆರ್,ಲಕ್ಕೇಗೌಡಮಬಿ.ಟಿ.,ನಾರಾಯಣಗೌಡ ಎಸ್.,ನಟೇಶ್.ಕೆ, ಡಾ.ವಿಜಯ ಕುಮಾರ್,ಟಿ.ಎಸ್., ವೆಂಕಟೇಶಬಾಬು ಟಿ.ಆರ್, ಬೆಳ್ಳಿ ಲೋಕೇಶ್, ದೇವರಾಜು.ಟಿ,ಎಸ್, ಚಂದ್ರ ಶೇಖರ್.ವೈ, ಮಹಿಳಾ ಮೀಸಲು ಸ್ಥಾನಗಳಿಗೆ ರಂಗಮಣಿ ಕಾಮೇಶ್, ಸೌಭಾಗ್ಯ.ಎಸ್, ಹಿಂದುಳಿದ ವರ್ಗ ಎ ಮೀಸಲು ಸ್ಥಾನಗಳಿಗೆ ಕೃಷ್ಣಮೂರ್ತಿ.ಸಿ, ಹಿಂದುಳಿದ ವರ್ಗ ಬ ಸ್ಥಾನಕ್ಕೆ ಬೋರೇಗೌಡ, ಪರಿಶಿಷ್ಟ ಜಾತಿ ಮೀಸಲು ಕಾಂತರಾಜು.ಕೆ.ಬಿ., ಪರಿಶಿಷ್ಟ ಪಂಗಡ ಮೀಸಲು ಶಾಮಣ್ಣ.ಪಿ.ಇವರುಗಳು ಆಯ್ಕೆ ಯಾಗಿದ್ದಾರೆ.ಬಹಳ ಜಿದ್ದಾಜಿದ್ದ ಪೈಪೊಟಿಯಲ್ಲಿ ಚಿಕ್ಕರಂಗಣ್ಣ ಅವರ ಸಿಂಡಿಕೇಟ್‌ಗೆ ೧೧ ಸ್ಥಾನ, ವೆಂಕಟೇಶ್ ಬಾಬು ಅವರ ಸಿಂಡಿಕೇಟ್‌ನಿAದ ನಾಲ್ವರು ಆಯ್ಕೆಯಾಗಿದ್ದಾರೆ.

Read More

ಪಾವಗಡ: ಪಟ್ಟಣದ ತುಮಕೂರು ರಸ್ತೆಯ ಮಾರ್ಗದಲ್ಲಿರುವ ಉದ್ಭವ ಕಣೀವೇ ನರಸಿಂಹಸ್ವಾಮಿ ೭೦ ನೇ ಭ್ರಹ್ಮ ರಥೋತ್ಸವ ಶುಕ್ರವಾರ ಪಾಲ್ಗುಣ ಶುದ್ದ ಪೌರ್ಣಿಮೆ ಮದ್ಯಾಹ್ನ ೧೨-೪೫ ಕ್ಕೆ ನೂರಾರು ಭಕ್ತರ ಸಮ್ಮುಖದಲ್ಲಿ ಸಂಪನ್ನವಾಯಿತು. ವೆAದಪAಡಿತರು ಮಂತ್ರ ಘೋಷಣೆ, ಮಂಗಳವಾದ್ಯಗಳೊAದಿಗೆ ಶುಕ್ರವಾರ ಮದ್ಯಾಹ್ನ ಅಭಿಜಿನ್ ಮುಹೂರ್ತದಲ್ಲಿ ತಹಶೀಲ್ದಾರ್ ಡಿ.ವರದರಾಜು ರಥೋತ್ಸವಕ್ಕೆ ಚಾಲನೆ ನೀಡಿದಾಗ ನೆರೆದಿದ್ದ ಭಕ್ತ ಸಮೂಹ ರಥಕ್ಕೆ ಹೂವು ಬಾಳೆಹಣ್ಣು ಎಸೆದು ಪುನೀತರಾದರು. ರಥೋತ್ಸವಕ್ಕೆ ಆಗಮಿಸಿದ್ದ ಭಕ್ತರಿಗೆ ವಿವಿಧ ಸಂಘಸAಸ್ಥೆಗಳು ಪಾನಕ- ಮಜ್ಜಿಗೆ ಅನ್ನಪ್ರಸಾದವನ್ನು ವಿತರಿಸಲಾಯಿತು, ಗೆಳೆಯರ ಬಳಗದ ವತಿಯಿಂದ ಸುಮಾರು ೧ ಲಕ್ಷö್ಮ ವೆಚ್ಚದಲ್ಲಿ ದೇವಸ್ಥಾನದ ಪಕ್ಕದಲ್ಲಿರುವ ರೇಷ್ಮೆ ಇಲಾಖೆಯ ಅವರಣದಲ್ಲಿ ಭಕ್ತರಿಗೆ ಅನ್ನಪ್ರಸಾದ ವಿತರಿಸಲಾಯಿತು, ಇದೇ ಅವರಣದಲ್ಲಿ ಕಾಳಿದಾಸ ಸಂಘ ಹಾಗೂ ದರ್ಜಿಗರ ಸಂಘ, ನರಸಿಂಹಸ್ವಾಮಿ ದೇವಸ್ಥಾನ ಸಮಿತಿ, ಶಿರಡಿ ಸಾಯಿಬಾಬಾ ವಾಯು ವಿಹಾರ ಬಳಗ, ಅಯ್ಯಪ್ಪ ಸೇವಾ ಸಮಿತಿ, ದಿವಂಗತ ಬಜ್ಜಪ್ಪರವರ ಕುಟುಂಬ, ವಾಲ್ಮೀಕಿ ಸಂಘ, ಶ್ರಿರಾಮನಾಯಕರ ಕುಟುಂಬ, ಪಿ.ವಿ. ಸುಬ್ಬನರಸಿಂಹ ಕುಟುಂಬದಿAದ ಅನ್ನ ಪ್ರಸಾದ ವಿತರಿಸಲಾಯತು. ಡಾ.…

Read More

ತುಮಕೂರು: ಒಳಮೀಸಲಾತಿ ಜಾರಿಗೆ ಆಗ್ರಹಿಸಿ ಹರಿಹರದಿಂದ ಪ್ರಾರಂಭಗೊAಡಿರುವ ಕ್ರಾಂತಿಕಾರಿ ಪಾದಯಾತ್ರೆ ಮಾರ್ಚ್ ೨೧ರಂದು ಬೆಂಗಳೂರು ತಲುಪಲಿದೆ ಎಂದು ಒಳಮೀಸಲಾತಿ ಹೋರಾಟಗಾರ ಭಾಸ್ಕರ್ ಪ್ರಸಾದ್ ತಿಳಿಸಿದರು. ತುಮಕೂರು ನಗರದಲ್ಲಿ ಶುಕ್ರವಾರ ಖಾಸಗಿ ಹೋಟೆಲ್ ನಲ್ಲಿ ‘ಒಳಮೀಸಲಾತಿ ಹೋರಾಟದ ಮುಂದಿನ ನಡೆಗಳ ಬಗ್ಗೆ ಸಭೆ’ ನಡೆಸಿ ಮಾತನಾಡಿದ ಅವರು, ಕಳೆದ ೩೫ ವರ್ಷಗಳಿಂದ ನಮ್ಮ ಹಕ್ಕುಗಳಿಗಾಗಿ ಹೋರಾಟ ಮಾಡಿಕೊಂಡು ಬರುತ್ತಿದ್ದರು ಸಹ ಯಾವುದೇ ಸರ್ಕಾರ ಇದುವರೆಗೂ ಒಳಮೀಸಲಾತಿ ಬಗ್ಗೆ ಗಟ್ಟಿ ನಿರ್ಧಾರ ಕೈಗೊಳ್ಳದೆ ನಮ್ಮ ಸಮುದಾಯವನ್ನು ಕಡೆಗಡನೆ ಮಾಡುತ್ತಿವೆ. ರಾಜ್ಯದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಹುವುದಕ್ಕೆ ನಮ್ಮ ಸಮುದಾಯದ ಮತಗಳೇ ಮಹುಮುಖ್ಯವಾಗಿದ್ದರೂ, ಸಿದ್ದರಾಮಯ್ಯನವರ ಸರ್ಕಾರ ಒಳಮೀಸಲಾತಿ ಜಾರಿಗೆ ಬಗ್ಗೆ ಹಿಂದೇಟು ಹಾಕುವ ಮೂಲಕ ದಲಿತ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಸರ್ಕಾರವನ್ನು ಟೀಕಿಸಿದರು. ಕಾಂಗ್ರೆಸ್ ಸರ್ಕಾರದಲ್ಲಿ ಮಂತ್ರಿಗಳಾಗಿರುವ ಸಮುದಾಯದ ನಾಯಕರು ಒಳಮೀಸಲಾತಿ ಬಗ್ಗೆ ಧ್ವನಿ ಎತ್ತಬೇಕು. ಒಳಮೀಸಲಾತಿ ಜಾರಿಗೆ ಸಂಬAಧಿಸಿದAತೆ ಇದು ಕಡೆಯ ಹೊರಟವಾಗಿದ್ದು, ಒಳಮೀಸಲಾತಿ ಜಾರಿಗೆ ಮಾಡದಿದ್ದಲ್ಲಿ ವಿಧಾನ ಸೌಧದ ಮುಂದೆ ಅತ್ಮಹುತಿಗಳಾಗುತ್ತವೆ…

Read More

ತುಮಕೂರು: ಕುಣಿಗಲ್ ತಾಲ್ಲೂಕು ದೊಡ್ಡ ಮಳಲವಾಡಿ ಗೊಲ್ಲರಹಟ್ಟಿ ಗ್ರಾಮದಲ್ಲಿ ಕಳೆದ ಮೂರು ತಿಂಗಳಿAದ ನೀರಿಗೆ ಸಮಸ್ಯೆಯುಂಟಾಗಿದ್ದು, ಕೂಡಲೇ ಪರಿಹಾರ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಹಶೀಲ್ದಾರ್ ಯು. ರಶ್ಮಿ ಅವರಿಗೆ ಸೂಚನೆ ನೀಡಿದರು. ಕುಣಿಗಲ್ ಶಾಸಕ ಡಾ. ರಂಗನಾಥ ಅವರ ಸೂಚನೆ ಮೇರೆಗೆ ಶುಕ್ರವಾರ ಬೆಳಿಗ್ಗೆ ಗ್ರಾಮಕ್ಕೆ ಭೇಟಿ ನೀಡಿ ಸ್ಥಳೀಯರಿಂದ ನೀರಿನ ಸಮಸ್ಯೆ ಬಗ್ಗೆ ಮಾಹಿತಿ ಪಡೆದ ಅವರು, ಪಕ್ಕದ ಗ್ರಾಮದ ಕೊಳವೆ ಬಾವಿಯಿಂದ ಪೈಪ್‌ಲೈನ್ ಮೂಲಕ ನೀರೊದಗಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ಸಮಸ್ಯೆ ತಿಳಿದ ಕೂಡಲೇ ಗ್ರಾಮಕ್ಕೆ ಭೇಟಿ ನೀಡಿ ಪರಿಹಾರ ಕಾರ್ಯ ಕೈಗೊಂಡ ಜಿಲ್ಲಾಧಿಕಾರಿಗಳ ಕ್ರಮಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದರು. ನಂತರ ಕುಣಿಗಲ್ ಪಟ್ಟಣದ ಎಪಿಎಂಸಿ ಪ್ರಾಂಗ ಣದಲ್ಲಿ ತೆರೆಯಲಾಗಿರುವ ರಾಗಿ ಖರೀದಿ ಕೇಂದ್ರಕ್ಕೆ ಭೇಟಿ ನೀಡಿ ತೂಕ ಮತ್ತು ಅಳತೆ ಪ್ರಕ್ರಿಯೆಯನ್ನು ಪರಿಶೀಲಿಸಿ ರೈತರಿಂದ ಅಹವಾಲುಗಳನ್ನು ಆಲಿಸಿ ದರು. ನಂತರ ಮಾಧ್ಯಮದವರೊಂದಿಗೆ ಮಾತ ನಾಡಿದ ಅವರು, ನೀರಿನ ಸಮಸ್ಯೆಯನ್ನು ಪರಿಶೀಲಿಸಿ ಪರಿಹಾರ ಕ್ರಮಕೈಗೊಳ್ಳಲು ದೊಡ್ಡ…

Read More

ತುರುವೇಕೆರೆ: ದೇಶದಲ್ಲಿನ ದಿವ್ಯಾಂಗರನ್ನು ಪ್ರದಾನ ಮಂತ್ರಿ ನರೇಂದ್ರ ಮೋದಿಯವರು ವಿಶೇಷವಾಗಿ ಗುರುತಿಸಿ ಸವಲತ್ತು ನೀಡಿದ್ದಾರೆ ಎಂದು ಕೇಂದ್ರ ಸರ್ಕಾರದ ರೈಲ್ವೇ ಸಚಿವ ಹಾಗೂ ಜಲಶಕ್ತಿ ರಾಜ್ಯ ಸಚಿವ ವಿ.ಸೋಮಣ್ಣ ತಿಳಿಸಿದರು. ಪಟ್ಟಣದ ಸತ್ಯಗಣಪತಿ ಆಸ್ಥಾನ ಮಂಟಪದಲ್ಲಿ ಶುಕ್ರವಾರ ತಾಲೂಕು ಆಡಳಿತದಿಂದ ಹಮ್ಮಿಕೊಂಡಿದ್ದ ಕೇಂದ್ರ ಸರ್ಕಾರದ ವಿಶೇಷ ಅಡಿಪ್ ಯೋಜನೆಯೊಡಿ ವಿಕಲಚೇತನರಿಗೆ ಉಚಿತ ಸಾದನ ಸಲಕರಣೆಗಳ ಸಮರ್ಪಣೆ ಹಾಗೂ ಸಾರ್ವಜನಿಕ ಕುಂದು ಕೊರತೆ ಸಭೆಯಲ್ಲಿ ವಿಕಲಚೇತನರಿಗೆ ಉಚಿತ ಸಲಕರಣೆ ನೀಡಿ ಮಾತನಾಡಿದ ಅವರು ರಾಷ್ಟçದಲ್ಲಿ ಸುಮಾರು ೮ ಕೋಟಿ ಕುಟುಂಬ ದಿವ್ಯಾಂಗರು ಇದ್ದು ಕೇಂದ್ರ ಸರ್ಕಾರ ಗುರುತಿಸಿ ಅವರಿಗೆ ಸರ್ಕಾರದ ಸವಲತ್ತು ನೀಡುತ್ತಿದೆ. ಜಿಲ್ಲೆಯಲ್ಲಿ ೧೫೦೦ ಕುಟುಂಬ ವಿಶೇಷ ಚೇತನರಿದ್ದು ಇಂದು ತಾಲೂಕಿನ ಸುಮಾರು ೩೨೧ ವಿಶೇಷ ಚೇತರಿಗೆ ಉಚಿತ ಸಲಕರಣೆಗಳನ್ನು ನೀಡಲಾಗುತ್ತಿದೆ ಎಂದರು. ತುರುವೇಕೆರೆ ಕ್ಷೇತ್ರವನ್ನು ನನ್ನ ಕೊನೆಯ ಉಸಿರು ಇರುವ ತನಕ ಮರೆಯಲು ಸಾದ್ಯವಿಲ್ಲ ಲೋಕಸಭಾ ಚುನಾವನೇಯಲ್ಲಿ ಸುಮಾರು ೫೦ ಸಾವಿರ ಲೀಡ್ ಕೊಟ್ಟ ಈ ಜನತಗೆ ನಾನು ಋಣ…

Read More

ತುಮಕೂರ: ನಗರದ ಶೆಟ್ಟಿಹಳ್ಳಿ ಹಳೆಯ ರೈಲ್ವೆ ಗೇಟ್ ಬಳಿ ಪಾದಚಾರಿ ಸುರಂಗ ಮಾರ್ಗ ಕಾಮಗಾರಿಗೆ ಹಾಗೂ ಭೀಮಸಂದ್ರದ ರೈಲ್ವೆ ಕೆಳ ಸೇತುವೆ ಕಾಮಗಾರಿಗಳಿಗೆ ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ರಾಜ್ಯ ಖಾತೆ ಸಚಿವ ವಿ. ಸೋಮಣ್ಣ ಅವರು ಇಂದು ಶಿಲಾನ್ಯಾಸ ನೆರವೇರಿಸಿದರು. ನಗರದ ಶೆಟ್ಟಿಹಳ್ಳಿ ರೈಲ್ವೆಗೇಟ್‌ನಲ್ಲಿ ಈಗಾಗಲೇ ರಸ್ತೆ ಕೆಳ ಸೇತುವೆಯನ್ನು ನಿರ್ಮಿಸಲಾಗಿದ್ದು, ಈ ಕೆಳ ಸೇತುವೆ ಮೂಲಕ ವಾಹನಗಳ ಸಂಚರಿಸುತ್ತಿವೆ. ಆದರೆ ವಾಹನ ದಟ್ಟೆ ಇರುವ ಕಾರಣ ಅಂಡರ್‌ಪಾಸ್‌ನಲ್ಲಿ ಪಾದಚಾರಿಗಳು ಸಂಚರಿಸುವುದು ಕಷ್ಟಕರವಾಗಿರುವುದನ್ನು ಮನಗಂಡ ಸಚಿವ ಸೋಮಣ್ಣ ಅವರು ೨.೪೯ ಕೋಟಿ ರೂ. ವೆಚ್ಚದಲ್ಲಿ ಪಾದಚಾರಿ ಸುರಂಗ ಮಾರ್ಗ ಕಾಮಗಾರಿಗೆ ಚಾಲನೆ ನೀಡಿದರು. ನಂತರ ಮಾತನಾಡಿದ ಸಚಿವ ಸೋಮಣ್ಣ ಅವರು, ರಾಜ್ಯದಲ್ಲಿರುವ ರೈಲ್ವೆ ಲೆವೆಲ್ ಕ್ರಾಸಿಂಗ್ ಕಾಮಗಾರಿಗಳಿಗೆ ಈ ಹಿಂದೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಎರಡೂ ಹಣ ನೀಡುತ್ತಿದ್ದವು. ಆದರೆ ಇತ್ತೀಚೆಗೆ ರಾಜ್ಯ ಸರ್ಕಾರಗಳು ಹಣ ಬಿಡುಗಡೆ ಮಾಡ ದಿರುವುದನ್ನು ಗಮನಿಸಿದ ಕೇಂದ್ರ ಸರ್ಕಾರ ಲೆವೆಲ್ ಕ್ರಾಸಿಂಗ್…

Read More

ಚಿಕ್ಕನಾಯಕನಹಳ್ಳಿ: ತಾಲ್ಲೂಕಿನ ರಾಮನಹಳ್ಳಿ ಗ್ರಾಮದ ಮಹಿಳೆಯರು ಗ್ರಾಮದಲ್ಲಿ ಮದ್ಯಪಾನಪಿಡುಗು ಹೆಚ್ಚಾಗುತ್ತಿರುವ ಕಾರಣ ಮದ್ಯಪಾನ ಮಾರಾಟವನ್ನು ಗ್ರಾಮದಲ್ಲಿ ನಿಷೇದಿಸಿ ಎಂದು ಪಂಚಾಯತಿ ಅಧಿಕಾರಿಗೆ ಮನವಿ ಸಲ್ಲಿಸಿದ್ದಾರೆ. ತಾಲ್ಲೂಕಿನ ಕಂದಿಕೆರೆ ಹೋಬಳಿ ರಾಮನಹಳ್ಳಿ ಗ್ರಾಮದ ಮಹಿಳೆಯರು ಗ್ರಾಮದಲ್ಲಿ ಮನೆಮನೆಗಳಲ್ಲಿ ಅಕ್ರಮವಾಗಿ ಮದ್ಯಮಾರಾಟ ನಡೆಯುತ್ತಿದ್ದು, ಇದರಿಂದ ಮನೆಯ ಗಂಡಸರು ಕುಡಿತದ ಚಟಕ್ಕೆ ಸಿಲುಕಿದ್ದಾರೆ. ಇದರಿಂದ ಕೂಲಿಮಾಡಿ ಬದುಕು ಸಾಗಿಸುತ್ತಿದ್ದ ನಮ್ಮಂತಹ ಹಲವು ಕುಟುಂಬಗಳು ಬೀದಿಪಾಲುಗುವ ಸ್ಥಿತಿ ಬಂದಿದೆ. ಮನೆಯಲ್ಲಿ ನೆಮ್ಮದಿ ಇಲ್ಲದಾಗಿದೆ, ನಾವು ಕೂಲಿನಾಲಿ ಮಾಡಿ ಗಳಿಸಿದ ಹಣವನ್ನು ಕಸಿದು ಕುಡಿತಕ್ಕೆ ಸುರಿಯುತ್ತಿದ್ದಾರೆ. ಕುಡುಕರಾಗುತ್ತಿರುವ ಗಂಡಸರೂ ದುಡಿಯದೆ ಮನೆ, ಆಸ್ತಿಗಳೂಸಹ ಮಾರುವ ಪರಿಸ್ಥಿತಿಗೆ ತರುತ್ತಿದ್ದಾರೆ. ನಮ್ಮ ಗ್ರಾಮದಲ್ಲಿ ಹಲವು ಮನೆಗಳಲ್ಲಿ ಅಕ್ರಮ ಮದ್ಯಮಾರಾಟ ಎಗ್ಗಿಲ್ಲದೆ ನಡೆಯುತ್ತಿರುವುದನ್ನು ತಕ್ಷಣ ನಿಲ್ಲಿಸಬೇಕು ಹಾಗೂ ಸರ್ಕಾರಿ ಶಾಲಾ ಸಮೀಪದಲ್ಲಿಯೇ ಮದ್ಯ ಮಾರಾಟವಾಗುತ್ತಿದ್ದರು ಕಂಡೂ ಕಾಣದಂತೆ ಅಬಕಾರಿ ಇಲಾಖೆಯ ಅಧಿಕಾರಿಗಳು ಇದ್ದಾರೆ. ಈ ಕೂಡಲೇ ಅಕ್ರಮ ಮದ್ಯಮಾರಾಟಕ್ಕೆ ತಡೆ ಒಡ್ಡಬೇಕೆಂದು ಗ್ರಾಮ ಪಂಚಾಯಿತಿಯ ಅಭಿವೃದ್ದಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ರಾಮನಹಳ್ಳಿ ಗ್ರಾಮದಲ್ಲಿ…

Read More

ಚಿಕ್ಕನಾಯಕನಹಳ್ಳಿ: ತಾಲ್ಲೂಕಿನ ಶೆಟ್ಟಿಕೆರೆ ಹೋಬಳಿ ಮಾದಿಹಳ್ಳಿ ಗ್ರಾಮಕ್ಕೆ ರೈತ ಸಂಘದ ಮನವಿಯ ಮೇರೆಗೆ ೭೬ವರ್ಷಗಳ ನಂತರ ಸರ್ಕಾರಿ ಬಸ್ ಸೌಲಭ್ಯ ದೊರೆತಿದೆ. ಮಾದಿಹಳ್ಳಿ ಗ್ರಾಮದಲ್ಲಿ ನೂರಾರು ಕುಟುಂಬಗಳು ವಾಸವಿರುವ ಗ್ರಾಮವಾಗಿದೆ ಇಲ್ಲಿ ಶರಣರ ಮಠವೂಸಹ ಇದ್ದು, ಗ್ರಾಮದ ಸುತ್ತಮುತ್ತ ಹಲವು ಸಣ್ಣಪುಟ್ಟ ಹಳ್ಳಿಗಳಿದ್ದು ಸ್ವಾತಂತ್ರö್ಯ ಬಂದಾಗಿನಿAದಲೂ ಈ ಭಾಗಕ್ಕೆ ಸಾರಿಗೆ ಸೌಲಭ್ಯವಿರಲಿದ ಕಾರಣ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ನಡೆದುಕೊಂಡು ಹಾಗೂ ಬೈಕ್ ಹಾಗೂ ಇನ್ನಿತರ ವಾಹನಗಳಲ್ಲಿ ಪ್ರಯಾಣಿಸಬೇಕಿತ್ತು. ಹಲವಾರು ವರ್ಷಗಳಿಂದ ಸಾರಿಗೆ ಸೌಲಭ್ಯಕ್ಕಾಗಿ ಮಾಡಿದ ಮನವಿಗೆ ಸ್ಪಂದನೆ ದೊರೆತಿರಲಿಲ್ಲ. ರೈತಸಂಘ ಹಾಗೂ ಹಸಿರು ಸೇನೆಯಿಂದ ಈ ಭಾಗಕ್ಕೆ ಸಾರಿಗೆ ಸೌಲಭ್ಯ ನೀಡುವಂತೆ ತುಮಕೂರು ಸಾರಿಗೆ ವಿಭಾಗಾಧಿಕಾರಿಗಳಿಗೆ ಮನವಿ ಮಾಡಿದ ಹಿನ್ನಲೆಯಲ್ಲಿ ತಿಪಟೂರಿನಿಂದ ಹಾಗೂ ಚಿಕ್ಕನಾಯಕನಹಳ್ಳಿಯಂದ ಎರಡು ಬಸ್‌ಗಳನ್ನು ಈ ಮಾರ್ಗದಲ್ಲಿ ಬಿಡಲಾಗಿದೆ. ತಮ್ಮ ಮನವಿಗೆ ಸ್ಪಂಧಿಸಿ ಸಾರಿಗೆ ಸೌಲಭ್ಯಕಲ್ಪಿಸಿದ ಸಾರಿಗೆ ವಿಭಾಗಕ್ಕೆ ರೈತ ಸಂಘದ ಅಧ್ಯಕ್ಷ ಸಿ.ಬಿ.ಲಿಂಗಯ್ಯ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯದುಕುಮಾರ್, ಉಪಾಧ್ಯಕ್ಷ ಕೆ.ರೇವಣ್ಣ, ವಿರುಪಾಕ್ಷಯ್ಯ, ಪುಟ್ಟಯ್ಯ, ನಟರಾಜು, ಬಸವರಾಜು,…

Read More

ತುಮಕೂರು: ಸರಕಾರ ದಲಿತ, ಹಿಂದುಳಿದ ಸಮುದಾಯಗಳ ದಾರ್ಶಾನಿಕರ ಜಯಂತಿಗಳನ್ನು ಆಚರಿಸಲು ಅವಕಾಶ ಕಲ್ಪಿಸಿದೆ. ಆದರೆ ಈ ಎಲ್ಲರ ಜಯಂತಿಗಳನ್ನು ಒಂದೇ ವೇದಿಕೆಯಲ್ಲಿ ಆಚರಿಸಲು ಅವಕಾಶ ಕಲ್ಪಿಸಿದರೆ ಹಿಂದುಳಿದ ಸಮುದಾಯಗಳಲ್ಲಿ ಒಗ್ಗಟ್ಟು ಮೂಡಿಸಲು ಸಹಕಾರಿಯಾಗುತ್ತದೆ. ಈ ನಿಟ್ಟಿನಲ್ಲಿ ಸರಕಾರ ಸಹ ಗಮನಹರಿಸಬೇಕಾಗಿದೆ ಎಂದು ಬಿಜೆಪಿ ಓಬಿಸಿ ಮೋರ್ಚಾ ಕಾರ್ಯಕಾರಿಣಿ ಸದಸ್ಯ, ಸ್ಪೂರ್ತಿ ಡೆವಲಪ್ರ‍್ಸ್ನ ಚಿದಾನಂದ ತಿಳಿಸಿದ್ದಾರೆ. ನಗರದ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನ ಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಜಿಲ್ಲಾ ಬಲಿಜ ಸಂಘ(ರಿ) ತುಮಕೂರು ಅಯೋಜಿಸಿದ್ದ ಕಾಲಜ್ಞಾನಿ ಶ್ರೀಯೋಗಿ ನಾರೇಯಣ ಯತೀಂದ್ರರ ೨೯೯ನೇ ಜಯಂತೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತಿದ್ದ ಅವರು,ನಾಡಿನ ಸಣ್ಣ ಸಣ್ಣ ಜನಾಂಗಗಳಿಗೆ ಆ ಸಮುದಾಯದ ದಾರ್ಶಾನಿಕರ ಜಯಂತಿಗಳನ್ನು ಸರಕಾರಿ ಕಾರ್ಯಕ್ರಮ ವಾಗಿ ಆಚರಿಸಲು ಅವಕಾಶ ಕಲ್ಪಿಸಿದೆ.ಆದರೆ ಇಂತಹ ದಾರ್ಶಾನಿಕರು ಒಂದು ಸಮುದಾಯಕ್ಕೆ ಮಾತ್ರ ಸಿಮೀತವಾಗಿ, ಮೈಕ್ರೋ ಮೈನಾರಿಟಿ ಸಮುದಾಯಗಳ ನಡುವೆ ಒಗ್ಗಟ್ಟೇ ಇಲ್ಲದಂತಾಗಿದೆ.ಹಾಗಾಗಿ ಎಲ್ಲರ ಜಯಂತಿಗಳು…

Read More

ತುರುವೇಕೆರೆ: ತಾಲ್ಲೂಕಿನ ದಬ್ಬೇಘಟ್ಟ ಹೋಬಳಿ ವ್ಯಾಪ್ತಿಯ ಕೆಲವೆಡೆ ಬುಧವಾರ ರಾತ್ರಿ ಬೀಸಿದ ಮಳೆ ಗಾಳಿಗೆ ವಿದ್ಯುತ್ ಕಂಬಗಳು ಮತ್ತು ಮರ ಗಿಡಗಳು ಧರೆಗುರುಳಿವೆ. ನಿನ್ನೆ ಸಂಜೆ ತಾಲ್ಲೂಕಿನ ಅಲ್ಲಲ್ಲಿ ಕೆಲ ನಿಮಿಷಗಳ ವರೆಗೆ ಸೋನೆ ಮಳೆ ಬಂದರೆ; ಇನ್ನೂ ಕೆಲವೆಡೆ ರಸ್ತೆಯ ನೀರು ಹರಿಯುವಂತೆ ಮಳೆ ಬಿದ್ದಿರುವುದಾಗಿ ತಿಳಿದು ಬಂದಿದೆ. ತಾಲ್ಲೂಕಿನ ಹೆಡಿಗೇಹಳ್ಳಿ, ಅರೆಮಲ್ಲೇನಹಳ್ಳಿ, ಹುಲಿಕಲ್ ನಾಲೆ, ಬೆಂಡೇಕೆರೆ, ಅಬುಕನಹಳ್ಳಿ, ಕಡೇಹಳ್ಳಿ, ತಂಗಡ, ಬ್ರಹ್ಮದೇವರಹಳ್ಳಿ, ಸೋಪ್ ನಹಳ್ಳಿ ಗ್ರಾಮದ ಹೊರ ವಲಯದಲ್ಲಿ ತೆಂಗು ಹಾಗು ಇನ್ನಿತರ ಮರಗಳ ಕೊಂಬೆಗಳು ವಿದ್ಯುತ್ ತಂತಿಯ ಮೇಲೆ ಬಿದ್ದು ಸುಮಾರು ೧೫ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಹಾಗು ಲೈನ್ ಗಳು ತುಂಡರಿಸಿವೆ. ಹುಲಿಕಲ್ ಹೇಮಾವತಿ ನಾಲೆ ಸಮೀಪ ಒಂದು ವಿದ್ಯುತ್ ಪರಿವರ್ತಕ ಬಿದ್ದು ಹಾಳಾಗಿದೆ. ಅದೇ ರೀತಿ ಬಡಗರಹಳ್ಳಿಯ ದೊಡ್ಡಯ್ಯ ಹಂದಿಜೋಗಿ ಕಾಲೋನಿಯ ನಿವಾಸಿ ಗಂಗಯ್ಯ ಅವರ ಮನೆಯ ಶೀಟು ಮತ್ತು ಹೆಂಚುಗಳು ಗಾಳಿಗೆ ತರಗೆಲೆಗಳಂತೆ ತೂರಿ ಹೋಗಿದ್ದು ಇದರಿಂದ ಮಳೆಯ ಹನಿಗೆ ಮನೆಯ ವಸ್ತುಗಳು…

Read More