ಗುಬ್ಬಿ: ಯಾವುದೇ ವಿವಾದವನ್ನು ಪೊಲೀಸ್ ಠಾಣೆ ಮೂಲಕ ಬಗೆಹರಿಸಿಕೊಳ್ಳಬೇಕು. ಕಾನೂನು ಹೊರತಾದ ಘಾತುಕರ ಬಳಕೆಗೆ ಮುಂದಾದ ಸಂದರ್ಭದಲ್ಲಿ ಅಪರಾಧ ಕೃತ್ಯಗಳ ಹೆಚ್ಚಳವಾಗುತ್ತದೆ. ಈ ನಿಟ್ಟಿನಲ್ಲಿ ಜನ ಸಾಮಾನ್ಯರು ಪೊಲೀಸ್ ಕೆಲಸಕ್ಕೆ ಸಹಕಾರ ನೀಡಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಾಪೂರ್ ವಾಡ್ ಮನವಿ ಮಾಡಿದರು. ಪಟ್ಟಣದ ಬಾವಿಮನೆ ಕಲ್ಯಾಣ ಮಂಟಪದಲ್ಲಿ ಪೊಲೀಸ್ ಇಲಾಖೆ ಆಯೋಜಿಸಿದ್ದ ಜನ ಸಂಪರ್ಕ ಸಭೆಯಲ್ಲಿ ಮಾತನಾಡಿದ ಅವರು ಈಚೆಗೆ ಭೂಮಿಗೆ ಬೆಲೆ ಬಂದ ಹಿನ್ನಲೆ ಈ ಭಾಗದಲ್ಲಿ ವಿವಾದಗಳು ತಲೆ ಎತ್ತುತ್ತಿವೆ. ಈ ಹಿನ್ನೆಲೆಯಲ್ಲಿ ಮಾಫಿಯಾಗಳು ತಲೆ ಎತ್ತುತ್ತವೆ. ಯಾವುದೇ ಭೂ ವಿವಾದ ಇದ್ದಲ್ಲಿ ಠಾಣೆಯನ್ನೇ ಸಂಪರ್ಕಿಸಿ ಎಂದು ಸಲಹೆ ನೀಡಿದರು. ಕಾನೂನಾತ್ಮಕ ಹಂತಗಳನ್ನು ಬಳಸಿಕೊಂಡು ನ್ಯಾಯಯುತ ಹೋರಾಟ ಮಾಡಲು ಮುಂದಾಗಬೇಕು. ಸಮಾಜ ಸ್ವಾಸ್ಥ್ಯ ಕಾಪಾಡುವ ಹೊಣೆ ಸಾರ್ವಜನಿಕರ ಮೇಲಿದೆ ಎಂದ ಅವರು ಠಾಣೆಯಲ್ಲಿ ಸ್ಪಂದನೆ ಸಿಕ್ಕಿಲ್ಲ ಎಂಬ ದೂರುಗಳು ಸಾಕಷ್ಟು ಬಂದಿವೆ. ಕೂಡಲೇ ಸರಿಪಡಿಸುವ ಕ್ರಮ ವಹಿಸಲಾಗುವುದು. ಕರ್ತವ್ಯ ಲೋಪ ಹಿನ್ನಲೆ ಗುಬ್ಬಿ…
Author: News Desk Benkiyabale
ತುಮಕೂರು: ನಮ್ಮ ಯುವಜನರು ಶಿಕ್ಷಣ ಪೂರೈಸಿದ ನಂತರ ಕೆಲಸ ಹುಡುಕುವ ಬದಲು ಅವರೇ ಉದ್ಯಮ ಸ್ಥಾಪಿಸಿ ಇತರರಿಗೆ ಉದ್ಯೋಗ ನೀಡುವಂತಾಗಬೇಕು. ಈ ನಿಟ್ಟಿನಲ್ಲಿ ಎಲ್ಲ ಅಗತ್ಯ ಮಾಹಿತಿ ಒದಗಿಸಲು ಕೈಗಾರಿಕಾ ಇಲಾಖೆಯು ತುಮಕೂರಿನಲ್ಲಿ ಜೂನ್ 23ರಂದು ಒಂದು ದಿನದ ಕಾರ್ಯಾಗಾರ ಆಯೋಜಿಸಲಿದೆ ಎಂದು ಕರ್ನಾಟಕ ಉದ್ಯೋಗ ಮಿತ್ರದ ವ್ಯವಸ್ಥಾಪಕ ನಿರ್ದೇಶಕ ದೊಡ್ಡಬಸವರಾಜು ತಿಳಿಸಿದರು. ಈ ಕುರಿತು ಇಂದು ತುಮಕೂರಿನ ಜಿಲ್ಲಾ ಕೈಗಾರಿಕಾ ಕೇಂದ್ರದಲ್ಲಿ ಸುದ್ದಿಗೋಷ್ಠಿ ನಡೆಸಿದ ಕರ್ನಾಟಕ ಉದ್ಯೋಗ ಮಿತ್ರದ ವ್ಯವಸ್ಥಾಪಕ ನಿರ್ದೇಶಕ ದೊಡ್ಡಬಸವರಾಜು ಹಾಗೂ ಕೈಗಾರಿಕಾ ಇಲಾಖೆಯ ಹಿರಿಯ ಅಧಿಕಾರಿಗಳು ಈ ಕುರಿತು ಮಾಹಿತಿ ನೀಡಿದರು. ತುಮಕೂರಿನ ಗಂಗಾಧರಯ್ಯ ಮೆಮೋರಿಯಲ್ ಹಾಲ್‍ನಲ್ಲಿ ‘ಉದ್ಯಮಿಯಾಗು ಉದ್ಯೋಗ ನೀಡು’ ಹಾಗೂ ‘ಕೈಗಾರಿಕಾ ಅದಾಲತ್’ ಕಾರ್ಯಕ್ರಮ ಆಯೋಜಿಸಲಾಗಿದ್ದು, ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಡಾ. ಮುರುಗೇಶ ಆರ್ ನಿರಾಣಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಕಳೆದ ವರ್ಷ ಅಕ್ಟೋಬರ್ 11ರಂದು ಬೆಂಗಳೂರಿನಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿ ಅವರು ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದರು.…
ಚಿಕ್ಕನಾಯಕನಹಳ್ಳಿ: ಕೆರೆ ಏರಿ ಸುಭದ್ರತೆ ಮಾಡಿದರೆ ಮಾತ್ರ ನೀರು ಶೇಖರಣೆ ಅವಕಾಶವಾಗುತ್ತದೆ ಕೇವಲ ಹೂಳೆತ್ತುವುದು ರಿಂದ ಸರ್ಕಾರದ ಹಣ ಪೋಲಾಗುತ್ತದೆ ಎಂದು ಸದಸ್ಯ ಸಿ.ಡಿ ಸುರೇಶ್ ಆಗ್ರಹಿಸಿದರು. ಪಟ್ಟಣದ ಪುರಸಭಾ ಸಭಾಂಗಣದಲ್ಲಿ ಪುರಸಭಾ ಅಧ್ಯಕ್ಷೆ ಪುಷ್ಪ ಅವರ ಅಧ್ಯಕ್ಷತೆಯಲ್ಲಿ ಕರೆದಿದ್ದ ವಿಶೇಷ ಸಭೆಯಲ್ಲಿ ಅವರು ಸಲಹೆ ನೀಡಿದರು. 15ನೇ ಹಣಕಾಸು ಯೋಜನೆಯ ಸಾಮಾನ್ಯ ಮೂಲ ಅನುಧಾನ ಕ್ರಿಯಾ ಯೋಜನೆಯ 155 ಲಕ್ಷ ಅನುದಾನದಲ್ಲಿ ಕುಡಿಯುವ ನೀರು ಕಾಮಗಾರಿಗೆ ಹಾಗೂ ಘನತ್ಯಾಜ್ಯ ವಸ್ತು ವಿಲೇವಾರಿ ನಿರ್ವಾಣ ಕಾಮಗಾರಿಗೆ ಮೀಸಲಿರಿಸಿದ್ದ 93 ಲಕ್ಷ ರೂಗಳನ್ನು ಸಚಿವರು ಕೆರೆಯ ಹೂಳೆತ್ತಿ ರಿವಿಟ್ಮೆಂಟ್ ನಾವು ಮಾಡುತ್ತೇವೆ ನೀವು ನೀರು ಶೇಖರಿಸುವ ಕಾರ್ಯವನ್ನು ಮಾಡಿ ಎಂದು ಸಭೆಗೆ ಸೂಚಿಸಿದರು. ಇದಕ್ಕೆ ಸಹಮತಿಸದೇ ಕೆಲವು ಸದಸ್ಯರಾದ ಸಿಡಿ ಸುರೇಶ್ ಮಾತನಾಡುತ್ತಾ ಹೂಳ್ ಎತ್ತುವುದಾದರೆ ಕೇವಲ ಹತ್ತರಿಂದ ಹದಿನೈದು ಲಕ್ಷದಲ್ಲಿ ಕಾಮಗಾರಿ ಮುಗಿಸಬಹುದು ಆದರೆ ಏರಿಯಾ ಭದ್ರತೆ ಹಾಗೂ ಅದರ ಸುರಕ್ಷತೆ ಜೊತೆಗೆ ಸುತ್ತಮುತ್ತಲಿನ ಗಿಡಗಳನ್ನು ತೆಗೆಯುವುದರಿಂದ ಅಭಿವೃದ್ಧಿ ಸಾಧ್ಯವಾಗುತ್ತದೆ ಇದರ…
ತುಮಕೂರು: ಕಳೆದ ಎರಡು ದಶಕಗಳಿಗೂ ಅಧಿಕ ಕಾಲದಿಂದ ತುಂಬದೇ ಇದ್ದ ನಗರದ ಮರಳೂರು ಕೆರೆ ಈ ಬಾರಿ ಸತತವಾಗಿ ಸುರಿಯುತ್ತಿರುವ ಮಳೆಯಿಂದ ಭರ್ತಿಯಾಗಿ ಕೋಡಿ ಬಿದ್ದಿರುವ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ ಶಾಸಕ ಜ್ಯೋತಿಗಣೇಶ್, ಪಾಲಿಕೆ ಮೇಯರ್ ಬಿ.ಜಿ. ಕೃಷ್ಣಪ್ಪ ಹಾಗೂ ಸದಸ್ಯ ಧರಣೇಂದ್ರಕುಮಾರ್ ಅವರು ಕೆರೆಗೆ ಬಾಗಿನ ಅರ್ಪಿಸಿದರು. ನಗರದ ದಕ್ಷಿಣ ಭಾಗದಲ್ಲಿರುವ ಮರಳೂರು ಕೆರೆ 22 ವರ್ಷಗಳಿಂದ ತುಂಬಿರಲಿಲ್ಲ. ಆದ ರೆ ಈ ಬಾರಿ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಭರ್ತಿಯಾಗಿ ಕೋಡಿ ಹರಿಯುತ್ತಿರುವುದರಿಂದ ಮರಳೂರು, ಗಂಗಸಂದ್ರ ಗ್ರಾಮಸ್ಥರ ಸಮ್ಮುಖದಲ್ಲಿ ಧಾರ್ಮಿಕ ವಿಧಿವತ್ತಾಗಿ ಕೆರೆಗೆ ಬಾಗಿನ ಅರ್ಪಿಸಿ ಗಂಗಾ ಪೂಜೆ ನೆರವೇರಿಸಲಾಯಿತು. ಕೆರೆಗೆ ಬಾಗಿನ ಸಲ್ಲಿಸಿದ ನಂತರ ಮಾತನಾಡಿದ ಶಾಸಕ ಜಿ.ಬಿ. ಜ್ಯೋತಿಗಣೇಶ್, ನಗರದ ದಕ್ಷಿಣ ಭಾಗದಲ್ಲಿರುವ ಮರಳೂರು ಕೆರೆ 22 ವರ್ಷದ ನಂತರ ಮಳೆ ನೀರಿನಿಂದ ಕೋಡಿ ಬಿದ್ದಿರುವುದು ತುಂಬಾ ಸಂತೋಷ ತಂದಿದೆ ಎಂದರು. ಈ ಮರಳೂರು ಕೆರೆ ಮರಳೂರು ಗ್ರಾಮ ಮತ್ತು ಗಂಗಸಂದ್ರ ಗ್ರಾಮಗಳಿಗೆ ಕಲ್ಪತರು ಇದ್ದಂತೆ. ಈ…
ತುಮಕೂರು: ರಾಜ್ಯದಲ್ಲಿ ಮತ್ತಷ್ಟು ಕೈಗಾರಿಕೆಗಳನ್ನು ಸ್ಥಾಪಿಸಿ ಉದ್ಯೋಗ ಸೃಷ್ಠಿಸುವ ಸಲುವಾಗಿ ಮುಂಬರುವ ನವೆಂಬರ್ ತಿಂಗಳಲ್ಲಿ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶವನ್ನು ಬೆಂಗಳೂರಿನ ಅರಮನೆ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಬೃಹತ್ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ತಿಳಿಸಿದರು. ನವೆಂಬರ್ 2, 3 ಮತ್ತು 4 ರಂದು ಮೂರು ದಿನಗಳ ಅರಮನೆ ಮೈದಾನದಲ್ಲಿ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ನಡೆಯಲಿದೆ ಎಂದು ಅವರು ಹೇಳಿದರು. ನಗರದಲ್ಲಿ ಹೊರವಲಯದ ಗಂಗಾಧರಯ್ಯ ಮೆಮೋರಿಯಲ್ ಹಾಲ್‍ನಲ್ಲಿ ಏರ್ಪಡಿಸಲಾಗಿರುವ ಉದ್ಯಮಿಯಾಗು ಉದ್ಯೋಗ ನೀಡು ಹಾಗೂ ಕೈಗಾರಿಕಾ ಅದಾಲತ್ ಕಾರ್ಯಕ್ರಮಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ 2010 ಮತ್ತು 2012 ರಲ್ಲಿ ಆಯೋಜಿಸಿದ್ದ ಗ್ಲೋಬಲ್ ಇನ್ವೆಸ್ಟರ್ಸ್ ಮೀಟ್ ಬಹಳ ಯಶಸ್ವಿಯಾಗಿತ್ತು. ಇದರಿಂದ 15 ಲಕ್ಷ ಜನರಿಗೆ ಉದ್ಯೋಗಾವಕಾಶ ದೊರೆತ್ತಿತ್ತು. ಹಾಗಾಗಿಯೇ ಮತ್ತೆ ನವೆಂಬರ್‍ನಲ್ಲೂ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ನಡೆಸಲಾಗುತ್ತಿದೆ ಎಂದರು. ಕರ್ನಾಟಕ ರಾಜ್ಯ ಕೈಗಾರಿಕೆಯಲ್ಲಿ ಹಾಗೂ ಬಂಡವಾಳ ಆಕರ್ಷಿಸುವಲ್ಲಿ ದೇಶದಲ್ಲೇ ಮೊದಲನೇ ಸ್ಥಾನದಲ್ಲಿದೆ. ಮುಖ್ಯಮಂತ್ರಿಗಳು ಮತ್ತು ನಾನು ದಾವೂಸ್‍ಗೆ…
ತುರುವೇಕೆರೆ: ದೀನ ದಲಿತರ ಆರ್ಥಿಕ ಸಬಲೀಕರಣದ ಉದ್ದೇಶ ಈಡೇರಬೇಕಾದರೆ ಸಹಕಾರ ಸಂಘಗಳ ಅವಶ್ಯಕತೆಯಿದೆ ಎಂದು ಮೈಸೂರಿನ ಉರಿಲಿಂಗಿಪೆದ್ದಿಮಠದ ಜ್ನಾನ ಪ್ರಕಾಶ್ ಸ್ವಾಮೀಜಿ ತಿಳಿಸಿದರು. ಪಟ್ಟಣದ ಮಾಯಸಂದ್ರ ರಸ್ತೆಯ ಪೆÇೀಲೀಸ್ ಠಾಣೆ ಮುಂಭಾಗ ಅಂಬೇಡ್ಕರ್ ವಿವಿದುದ್ದೇಶ ಸಹಕಾರ ಸಂಘಕ್ಕೆ ಬೌದ್ದ ಧರ್ಮದ ಪ್ರಕಾರ ಪೂಜೆ ಮಾಡುವ ಮೂಲಕ ಸಂಘಕ್ಕೆ ಅಧಿಕೃತ ಚಾಲನೆ ನೀಡಿ ಮಾತನಾಡಿದ ಅವರು ದೀನ ದಲಿತರ ಆರ್ಥಿಕ ಪ್ರಗತಿಯನ್ನು ಸಹಕಾರ ಸಂಘದ ಮೂಲಕ ಉನ್ನತೀಕರಿಸುವ ದೃಷ್ಟಿಯಿಂದ ಅಂಬೇಡ್ಕರ್ ವಿವಿದುದ್ದೇಶ ಸಹಕಾರ ಸಂಘ ಈಡೀ ರಾಜ್ಯದಲ್ಲಿ ತನ್ನ ಶಾಖೆಗಳನ್ನು ತರೆಯುತ್ತಿದೆ ಈ ನಿಟ್ಟಿನಲ್ಲಿ ತುರುವೇಕೆರೆಯಲ್ಲಿ ಸಂಘದ ನೂತನ ಶಾಖೆಯನ್ನು ತೆರದಿದ್ದು ಈ ಸಹಕಾರ ಸಂಘ ಉನ್ನತ ಮಟ್ಟಕ್ಕೆ ಬೆಳೆಯಲಿ ಕೋಟ್ಯಾಂತರ ರೂಪಾಯಿ ವಹಿವಾಟು ಮಾಡುವ ಹಂತಕ್ಕೆ ತಲುಪಲಿ. ಸಂಘಕ್ಕೆ ಅಂಬೇಡ್ಕರ್ ಅನುಯಾಯಿಗಳು ಜಾತ್ಯಾತೀತವಾಗಿ ಸಂಘದ ಸದಸ್ಯತ್ವ ಪಡೆದು ಸಂಘದಿಂದ ದೊರೆಯುವ ಸವಲತ್ತುಗಳನ್ನು ಸದ್ವಿನಿಯೋಗ ಮಾಡಿಕೊಳ್ಳಲಿ ಎಂದು ಆಶಿಸಿ ಸಂಘದ ಸದಸ್ಯರುಗಳಿಗೆ ಶುಭಕೋರಿದರು. ಸಂಘದ ಸಂಸ್ಥಾಪಕ ಅಧ್ಯಕ್ಷ ತುಂಬಲ ರಾಮಣ್ಣ ಮಾತನಾಡಿ ನಮ್ಮ…
ಗುಬ್ಬಿ: ಕಾಸು ಕರಿಮಣಿ ಕೊಟ್ಟು ಎಂಎಲ್‍ಸಿ ಆಗಿರುವ ಶರವಣನಿಗೆ ನನ್ನ ಬಗ್ಗೆ ಏನು ಗೊತ್ತಿದೆ ಇಲ್ಲಿಗೆ ಬಂದು ಗ್ರಾಮ ಪಂಚಾಯತಿ ಚುನಾವಣೆ ಗೆಲ್ಲಲಿ ಎಂದು ಶಾಸಕ ಎಸ್.ಆರ್ ಶ್ರೀನಿವಾಸ್ ಸಾವಲ್ ಹಾಕಿದರು. ಪಟ್ಟಣದ ಉಪನೊಂದಣಾಧಿಕಾರಿಗಳು ಹಾಗೂ ವಿವಾಹ ನೋಂದಣಾಧಿಕಾರಿಗಳ ನೂತನ ಕಚೇರಿ ಕಟ್ಟಡದ ಉದ್ಘಾಟನೆ ಮಾಡಿ ಮಾತನಾಡಿದ ಅವರು ಭಾಷಣದಲ್ಲಿ ಮಾತನಾಡುವಂತಹ ವೆಂಕ, ಸಿನಾ, ನಾಣಿಗೆ ಉತ್ತರ ಕೊಡುವ ಅವಶ್ಯಕತೆ ನನಗಿಲ್ಲ ಎಂದ ಅವರು ಗೌರಿಶಂಕರ್ ಒಂದು ಪಕ್ಷದಿಂದ ಒಂದು ಪಕ್ಷಕ್ಕೆ ಓಡಿಹೋಗುವ ವ್ಯಕ್ತಿ, ಆದರೆ ನಾನು 20 ವರ್ಷದಿಂದ ಇಲ್ಲಿಯೇ ಇದ್ದೇನೆ, ಗೌರಿಶಂಕರ ರಿಗೆ ಇಲ್ಲಿಗೆ ಬರಬೇಡ ಎಂದು ಯಾರಾದರೂ ಸ್ಟೇ ತಂದಿದ್ದಾರ ಇಂದು ಪ್ರಶ್ನೆ ಕೇಳಿದ ಅವರು ಭದ್ರಾವತಿಯಲ್ಲಿ 50000 ಮುಸ್ಲಿಂ ಮತದಾರರರು ಇದ್ದರು ತೆಗೆದು ಕೊಂಡಿದು 18000 ಮತ ಎಂದ ಮೇಲೆ ಇಲ್ಲಿಗೆ ಬಂದು ಏನು ಮಾಡಲು ಸಾಧ್ಯ. ಕೇವಲ ವೇದಿಕೆಯಲ್ಲಿ ಮಾತನಾಡುವುದಕ್ಕೆ ಭಾಷಣ ಮಾಡುವುದಕ್ಕೆ ಪಕ್ಷದಲ್ಲಿ ಇಟ್ಟುಕೊಂಡಿದ್ದಾರೆ ಹೊರತು ಇವರಿಂದ ಏನೂ ಆಗುವುದಿಲ್ಲ ಎಂದು ಇಬ್ರಾಹಿಂ…
ತುಮಕೂರು: ಕಳೆದ 2 ವರ್ಷಗಳಿಂದ ಕೋವಿಡ್-19 ನಿಂದಾಗಿ ಶ್ರೀ ಮಾರಿಯಮ್ಮ ದೇವಿಯ ಕರಗ ಮಹೋತ್ಸವವನ್ನು ಮಾಡಲು ಸಾಧ್ಯವಾಗಿರಲಿಲ್ಲ ಇಂದು ವಿಜೃಂಭಣೆಯಿಂದ ಶ್ರೀ ಮಾರಿಯಮ್ಮ ದೇವಿಯ ಕರಗವನ್ನು ತುಮಕೂರು ಅಮಾನಿಕೆರೆಯಿಂದ ಮಾರಿಯಮ್ಮ ನಗರ ವಸತಿ ಸಮುಚ್ಛಯ ಮತ್ತು ನೆಲೆ ದೇವಸ್ಥಾನದವರೆಗೆ ಮೆರವಣಿಗೆಯನ್ನು ಮಾಡಲಾಯಿತು. ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದ ತುಮಕೂರು ನಗರ ಶಾಸಕರಾದ ಜ್ಯೋತಿಗಣೇಶ್ ಮಾರಿಯಮ್ಮ ನಗರದಲ್ಲಿರುವ ಜನರು ಶ್ರಮ ಜೀವಿಗಳು ಮಂಡಿಪೇಟೆಯ ಆರ್ಥಿಕ ವಹಿವಾಟಿಗೆ ಬೇಕಾದ ಮಾನವ ಸಂಪತ್ತನ್ನು ಹೊಂದಿದ್ದು ನಿರಂತರ ಪರಿಶ್ರಮದಿಂದ ಸುಸಜ್ಜಿತವಾದ ಮನೆಗಳನ್ನು ನಗರದ ಮಧ್ಯೆ ಭಾಗದಲ್ಲಿ ಪಡೆದಿದ್ದಾರೆ ಈಗಿರುವ ಮಾರಿಯಮ್ಮ ದೇವಸ್ಥಾನ ಸರ್ವೇ ನಂ 120 ರ ಖರಾಬ್‍ನಲ್ಲಿದ್ದು ಈ ಮೂಲ ದೇವಸ್ಥಾನವನ್ನು ಅಭಿವೃದ್ಧಿಪಡಿಸಿ ಮಾರಿಯಮ್ಮ ನಗರದ ಜನರ ಧಾರ್ಮಿಕ ಆಚರಣೆಗಳಿಗೆ ಅನುಕೂಲ ಕಲ್ಪಿಸಿಕೊಡಲಾಗುವುದೆಂದರು. ಶ್ರೀ ಮಾರಿಯಮ್ಮ ಶಕ್ತಿ ಕರಗಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಸ್ಲಂ ಸಮಿತಿ ಗೌರವಧ್ಯಕ್ಷರಾದ ದೀಪಿಕಾ 59ನೇ ವರ್ಷದ ಈ ಕರಗ ವಿಶೇಷವಾಗಿದ್ದು ತುಮಕೂರಿನಲ್ಲಿ ಏಕಕಾಲದಲ್ಲಿ ಹಸಿ ಮತ್ತು ಹೂವಿನ ಮೂರು ಕರಗಗಳ…
ತುಮಕೂರು: ನಗರದ ಎಪಿಎಂಸಿ ಯಾರ್ಡ್‍ನ ಶ್ರಮಿಕರ ಭವನದಲ್ಲಿ ತುಮಕೂರು ಜಿಲ್ಲಾ ಹಮಾಲ ಮಂಡಿ ಮತ್ತು ಕೂಲಿ ಕಾರ್ಮಿಕರ ಸಂಘದ ವತಿಯಿಂದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಜಗಜೋತಿ ಬಸವೇಶ್ವರರ ಜಯಂತಿ ಕಾರ್ಯಕ್ರಮವನ್ನು ಸಂಘದ ಗೌರವಾಧ್ಯಕ್ಷ ಬಿ.ಹೆಚ್.ಗಂಗಾಧರ್ ಅವರ ಅಧ್ಯಕ್ಷತೆಯಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ಸಂಘದ ಸದಸ್ಯರಿಗೆ ಇ-ಶ್ರಮ ಕಾರ್ಡು ವಿತರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಶಾಸಕ ಜಿ.ಬಿ.ಜೋತಿಗಣೇಶ್, ಶ್ರಮ ಜೀವಿಗಳಿಗೆ ಭದ್ರತೆ ಕಲ್ಪಿಸುವ ನಿಟ್ಟಿನಲ್ಲಿ ಪ್ರಧಾನಮಂತ್ರಿ ನರೇಂದ್ರಮೋದಿ ಅವರು ಇ-ಶ್ರಮ ಕಾರ್ಡು ಜಾರಿಗೆ ತಂದಿದ್ದು, ಇದರ ಪ್ರಯೋಜನವನ್ನು ಎಲ್ಲ ಶ್ರಮಿಕರು ಪಡೆಯಬೇಕು. ಇ-ಶ್ರಮ ಕಾರ್ಡಿನಿಂದ ಭವಿಷ್ಯದಲ್ಲಿ ಶ್ರಮಜೀವಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ.ಪ್ರಧಾನಮಂತ್ರಿ ಜೀವನ್ ಭೀಮಾ ವಿಮೆ ಜೊತೆಗೆ ಜಾರಿಯಲ್ಲಿರುವ ವಿಮಾ ಯೋಜನೆಗಳು ಲಾಭ ದೊರೆಯಲಿದೆ.ಮೊದಲು ಕಟ್ಟಡ ಕಾರ್ಮಿಕರಿಗೆ ಮಾತ್ರ ಲಭ್ಯವಾಗುತ್ತಿದ್ದ ಎಲ್ಲಾ ಪ್ರಯೋಜನಗಳು, ಈಗ ಸುಮಾರು 60ಕ್ಕೂ ಹೆಚ್ಚು ಕೆಲಸಗಳನ್ನು ಗುರುತಿಸಲಾಗಿದೆ. ಹಾಗಾಗಿ ಎಲ್ಲ ಶ್ರಮ ಜೀವಿಗಳಿಗೆ ಇದರ ಪ್ರಯೋಜನ ಲಭ್ಯವಾಗಲಿವೆ ಎಂದರು. ಕೊರೋನ ಸಂದರ್ಭದಲ್ಲಿ ಕೆಲವರು ಸರಕಾರದ…
ತುಮಕೂರು: ಸಮರ್ಥನಂ ಅಂಗವಿಕಲರ ಸಂಸ್ಥೆ ವತಿಯಿಂದ ತುಮಕೂರು ಜಿಲ್ಲೆಯ ಯುವ ವಿಕಲಚೇತನರಿಗಾಗಿ ಜೂ.25 ರಂದು ತುಮಕೂರು ವಿಶ್ವವಿದ್ಯಾನಿಲಯ ವಿಜ್ಞಾನ ಕಾಲೇಜಿನ ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಸಭಾಂಗಣದಲ್ಲಿ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ ಎಂದು ಸಮರ್ಥನಂ ಸಂಸ್ಥೆಯ ಅಖಿಲ ಭಾರತ ಉದ್ಯೋಗ ಅಧಿಕಾರಿ ಸತೀಶ್ ಕೆ. ತಿಳಿಸಿದರು. ಅವರು ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 18 ವರ್ಷದಿಂದ 35 ವರ್ಷದ ಒಳಗಿನ ಎಸ್.ಎಸ್.ಎಲ್.ಸಿ ಉತ್ತೀರ್ಣ, ಪಿ.ಯು.ಸಿ., ಡಿಪೆÇ್ಲಮಾ ಮತ್ತು ಯಾವುದೇ ಪದವಿ ವಿದ್ಯಾರ್ಹತೆ ಹೊಂದಿರುವ ವಿಕಲಚೇತನರು ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದಾಗಿದೆ ಎಂದರು. ದೇಶಾದ್ಯಂತ ಒಟ್ಟು 48 ಉದ್ಯೋಗ ಮೇಳಗಳನ್ನು ಆಯೋಜನೆ ಮಾಡುವ ಜೊತೆಗೆ ಕನಿಷ್ಟ 10 ಸಾವಿರ ವಿಕಲಚೇತನರಿಗೆ ಉದ್ಯೋಗ ಕೊಡಿಸುವ ಉದ್ದೇಶವನ್ನು ಸಮರ್ಥನಂ ಸಂಸ್ಥೆ ಹೊಂದಿದೆ ಎಂದು ಹೇಳಿದರು. ಕೊವಿಡ್ ಸಾಂಕ್ರಾಮಿಕ ರೋಗದಿಂದಾಗಿ ಕೆಲಸ ಕಳೆದುಕೊಂಡಿರುವ ವಿಕಲಚೇತನ (ಯುವಕರಿಗೆ) ಹಾಗೂ ವಿಕಲಚೇತನ ಉದ್ಯೋಗಾಕಾಂಕ್ಷಿಗಳಿಗೆ ಮರಳಿ ಉದ್ಯೋಗ ಅವಕಾಶಗಳನ್ನು ಕಲ್ಪಿಸುವ ಸಲುವಾಗಿ ಉದ್ಯೋಗದಾತರ ಹಾಗೂ ಯುವ ವಿಕಲಚೇತನ ಉದ್ಯೋಗಾಕಾಂಕ್ಷಿಗಳ ನಡುವೆ ಅಮೂಲ್ಯವಾದ…











