Author: News Desk Benkiyabale

ತುಮಕೂರು: ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷ ಹೆಚ್.ಜಿ. ಚಂದ್ರಶೇಖರ್ ಅವರು ಬುಧವಾರ ನಿರ್ಗಮಿತ ಅಧ್ಯಕ್ಷ ಬಿ.ಎಸ್. ನಾಗೇಶ್ ಅವರಿಂದ ಅಧಿಕಾರ ಸ್ವೀಕರಿಸಿದರು. ನೂತನ ಅಧ್ಯಕ್ಷ ಚಂದ್ರಶೇಖರ್ ಅವರು ದಾಖಲಾತಿಗೆ ಸಹಿ ಮಾಡುವ ಮೂಲಕ ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರ ವಹಿಸಿಕೊಂಡರು. ಇದೇ ವೇಳೆ ನೂತನ ಸದಸ್ಯರುಗಳಾಗಿ ಎನ್.ಹೆಚ್. ಜಗದೀಶ್, ಪಿ.ಹೆಚ್. ನಾಗರತ್ನಮ್ಮ, ಮಾಯರಂಗಣ್ಣ, ಎಲ್.ಪಿ. ಸುಧೀಂದ್ರ ಅವರೂ ಸಹ ಪದಗ್ರಹಣ ಮಾಡಿದರು. ಪದಗ್ರಹಣ ಸಮಾರಂಭದಲ್ಲಿ ನೂತನ ಅಧ್ಯಕ್ಷರು ಮತ್ತು ಸದಸ್ಯರನ್ನು ಅಭಿನಂದಿಸಿ ಮಾತನಾಡಿದ ಶಾಸಕ ಜಿ.ಬಿ.ಜ್ಯೋತಿಗಣೇಶ್, ಕಳೆದ 22 ತಿಂಗಳಿನಿಂದ ನಿರ್ಗಮಿತ ಅಧ್ಯಕ್ಷ ಬಾವಿಕಟ್ಟೆ ನಾಗಣ್ಣ ಮತ್ತು ಅವರ ತಂಡದವರು ತುಮಕೂರಿನ ಸಮಗ್ರ ಅಭಿವೃದ್ಧಿಗೆ ಶ್ರಮ ವಹಿಸಿ ಕೆಲಸ ಮಾಡಿದ್ದಾರೆ. ರಿಂಗ್ ರಸ್ತೆ ಸೇರಿದಂತೆ ನಗರದ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡುವಲ್ಲೂ ಸಹ ನಮ್ಮೊಂದಿಗೆ ಕೈಜೋಡಿಸಿದ್ದಾರೆ ಎಂದು ಸ್ಮರಿಸಿದರು. ಟೂಡಾಗೆ ಮತ್ತೊಬ್ಬ ಸದಸ್ಯರ ನೇಮಕ ಆಗಬೇಕಿತ್ತು. ಕೆಲ ತಾಂತ್ರಿಕ ಕಾರಣಗಳಿಂದ ವಿಳಂಬವಾಗಿದೆ. ಸದ್ಯದಲ್ಲೇ ಬಾಕಿ ಇರುವ ಮತ್ತೊಬ್ಬ ಸದಸ್ಯರ ನೇಮಕಾತಿ ಆಗಲಿದೆ…

Read More

ತುಮಕೂರು: ನಗರದ ಅಮಾನಿಕೆರೆ ಸರ್ವೆನಂಬರ್‍ನಲ್ಲಿ ಬರುವ ಗಾರ್ಡನ್ ರಸ್ತೆಯಲ್ಲಿ ಸುಮಾರು 2 ಕೋಟಿ ವೆಚ್ಚದಲ್ಲಿ ಟೂಡಾವತಿಯಿಂದ ನಿರ್ಮಿಸಲು ಉದ್ದೇಶಿಸಿರುವ ಬ್ಯಾಡ್ಮಿಂಟನ್ ಮತ್ತು ಲಾನ್ ಟೆನ್ನಿಸ್ ಕೋರ್ಟುಗಳುಳ್ಳ ಒಳಾಂಗಣ ಕ್ರೀಡಾಂಗಣ ನಿರ್ಮಾಣಕ್ಕೆ ತುಮಕೂರು ನಗರ ಶಾಸಕ ಜಿ.ಬಿ.ಜೋತಿಗಣೇಶ್ ಗುದ್ದಲಿಪೂಜೆ ನರವೇರಿಸಿದರು. ಈ ವೇಳೆ ಮಾತನಾಡಿದ ಅವರು, ಟೂಡಾ ಅಧ್ಯಕ್ಷರಾದ ಬಿ.ಎಸ್.ನಾಗಣ್ಣ ಅವರ ಮುತ್ತುವರ್ಜಿಯಿಂದಾಗಿ, ಸುಮಾರು 25-30 ಸಾವಿರ ಚದುರ ಅಡಿಗಳಲ್ಲಿ ಈ ಕ್ರೀಡಾಂಗಣಕ್ಕೆ ಚಾಲನೆ ನೀಡಲಾಗಿದೆ. ಇದು ನಗರದ ಕ್ರೀಡಾಪಟುಗಳ ಬಹುದಿನದ ಬೇಡಿಕೆಯಾಗಿತ್ತು. 90 ಲಕ್ಷದಿಂದ 1 ಕೋಟಿ ರೂಗಳಲ್ಲಿ ಕಟ್ಟಡ ಮತ್ತು ಉಳಿದ ಹಣದಲ್ಲಿ ಕೋರ್ಟುಗಳ ನಿರ್ಮಾಣ ಕಾರ್ಯ ನಡೆಯಲಿದ್ದು, ಇದೊಂದು ಅಂತರರಾಷ್ಟ್ರೀಯ ಗುಣಮಟ್ಟದ ಕ್ರೀಡಾಂಗಣವಾಗಿದೆ ಎಂದರು. ನಗರದ ಕೆಲವು ಕಡೆಗಳಲ್ಲಿ ಟೆನ್ನಿಸ್ ಮತ್ತು ಬ್ಯಾಡ್ಮಿಂಟನ್ ಕೋರ್ಟುಗಳಿದ್ದರೂ ಸಾರ್ವಜನಿಕರಿಗೆ ಪ್ರವೇಶ ಇರಲಿಲ್ಲ. ಸದಸ್ಯರಾದವರಿಗೆ ಮಾತ್ರ ಆಟವಾಡಲು ಅವಕಾಶವಿದೆ.ಹಾಗಾಗಿ ಸಾರ್ವಜನಿಕರಿಗಾಗಿ ಇದನ್ನು ನಿರ್ಮಿಸಲಾಗುತ್ತಿದೆ. ಸಣ್ಣ ಪ್ರಮಾಣದ ಶುಲ್ಕ ವಿಧಿಸಿ, ನಿರ್ವಹಣೆಯನ್ನು ಟೂಡಾ ಮಾಡಲಿದೆ. ಇದರ ಜೊತೆಗೆ ಗುಬ್ಬಿ ಗೇಟ್‍ನಿಂದ ಶಿರಾಗೇಟ್‍ವರೆಗಿನ ವರ್ತುಲ ರಸ್ತೆಗೆ…

Read More

ತುಮಕೂರು: ಕಳೆದ 12 ವರ್ಷಗಳಿಂದ ಬಿಜೆಪಿ ಪಕ್ಷದ ಸಕ್ರಿಯ ಕಾರ್ಯಕರ್ತನಾಗಿ, ಮೂರು ವರ್ಷಗಳಿಂದ ಕೊರಟಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರೊಂದಿಗೆ ಬೇರೆತು, ಅವರ ಕಷ್ಟ ಸುಖಃಗಳಿಗೆ ಸ್ಪಂದಿಸುತ್ತಿರುವ ನನಗೆ ಮುಂಬರುವ 2023ರ ವಿಧಾನಸಭಾ ಟಿಕೇಟ್ ನೀಡುವಂತೆ ಬಿಜೆಪಿ ಮುಖಂಡ ಕೆ.ಎಂ.ಮುನಿಯಪ್ಪ ಪಕ್ಷವನ್ನು ಮನವಿ ಮಾಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂಲತಃ ಕೋಲಾರ ಜಿಲ್ಲೆ ಆನೆಕಲ್ ತಾಲೂಕಿನವನಾದ ನಾನು,ಬೋವಿ ಸಮುದಾಯಕ್ಕೆ ಸೇರಿದ್ದೇನೆ. ಕೊರಟಗೆರೆ ಕ್ಷೇತ್ರದ ಪುರುವರ ಗ್ರಾಮದ ಬಳಿ 50 ಎಕರೆಗೂ ಹೆಚ್ಚು ಕೃಷಿ ಜಮೀನು ಹೊಂದಿದ್ದು, ಕೃಷಿಯ ಜೊತೆಗೆ ಗುತ್ತಿಗೆದಾರನಾಗಿ, ರಿಯಲ್ ಎಸ್ಟೇಟ್ ಉದ್ಯಮಿಯಾಗಿ ಕಾರ್ಯನಿರ್ವಹಿಸುತ್ತಿರುತ್ತೇನೆ. ಕೃಷಿಕಾರ್ಯ ಗಳಿಗೆ ಕೊರಟಗೆರೆಗೆ ಬಂದು ಹೋಗುವ ಸಂದರ್ಭದಲ್ಲಿ ರಾಜಕೀಯ ಆಸಕ್ತಿಯಿಂದ ಮೀಸಲು ಕ್ಷೇತ್ರವಾಗಿರುವ ಕೊರಟಗೆರೆ ಯಿಂದ ಸ್ಪರ್ಧಿಸಲು ಅವಕಾಶ ಸಿಗಬಹುದೆ ಎಂಬ ಇಚ್ಚೆಯನ್ನು ಬಿಜೆಪಿ ಜಿಲ್ಲಾ ಮತ್ತು ತಾಲೂಕು ಮುಖಂಡರ ಬಳಿ ವ್ಯಕ್ತಪಡಿಸಿದಾಗ, ಕೊರಟಗೆರೆ ಮಂಡಲ ಅಧ್ಯಕ್ಷರಾದ ಪವನ್ ಕುಮಾರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ತಿಮ್ಮಜ್ಜರವರುಗಳು ನೀವು ಕ್ಷೇತ್ರದಲ್ಲಿ ಕೆಲಸ ಮಾಡಿ,ಪಕ್ಷದಿಂದ ನಿಮಗೆ ಟಿಕೇಟ್ ದೊರಕಿಸಿಕೊಡುವ…

Read More

ತುಮಕೂರು: ಗಿಡಗಳನ್ನು ನೆಟ್ಟು ಒಂದು ಹಂತದವರೆಗೆ ಪೋಷಿಸಿದರೆ ಸಾಕು. ಅವುಗಳು ಮರವಾಗಿ ಮುಂದೆ ನಮಗೆ ನೆರಳಾಗಿ ನಮ್ಮನ್ನು ನೋಡಿಕೊಳ್ಳುತ್ತವೆ ಎಂದು ವಾಸವಿ ಪೀಠದ ಶ್ರೀ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಕರೆ ನೀಡಿದರು. ನಗರದ ಕೋತಿತೋಪಿನ ಸರಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ಸೋಮವಾರ ಕರ್ನಾಟಕ ಆರ್ಯ ವೈಶ್ಯ ಮಹಾಸಭಾ, ಶ್ರೀ ವಾಸವಿ ಸಂಘ ಮತ್ತು ಪ್ರೆಸ್‍ಕ್ಲಬ್ ತುಮಕೂರು ಸಹಯೋಗದಲ್ಲಿ ನಡೆದ ಪರಿಸರ ದಿನಾಚರಣೆ ಹಾಗೂ ವಿದ್ಯಾರ್ಥಿಗಳಿಗೆ ನೋಟ್‍ಬುಕ್ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪ್ರತಿಯೊಬ್ಬರು ಗಿಡಗಳನ್ನು ನೆಟ್ಟು ಉಳಿಸುವ ಪ್ರಯತ್ನ ಮಾಡಬೇಕು. ಶಾಲೆಗೆ ಬಂದಿರುವುದಕ್ಕೆ ಸಂತೋಷವಾಗುತ್ತಿದೆ.ವಿದ್ಯಾರ್ಥಿಗಳು ಚೆನ್ನಾಗಿ ಓದಿಕೊಂಡು ವಿದ್ಯಾವಂತರಾಗಿ ಎಂದು ಕರೆ ನೀಡಿದರು. ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ಮಾತನಾಡಿ, ಸಸಿಗಳನ್ನು ನೆಟ್ಟು ಪೋಷಿಸುವುದು, ಗಿಡ-ಮರಗಳನ್ನು ಉಳಿಸುವುದು ಪ್ರತಿಯೊಬ್ಬ ನಾಗರಿಕರ ಜವಬ್ದಾರಿಯಾಗಿದ್ದು, ಎಲ್ಲರೂ ಗಿಡ-ಮರಗಳ ಸಂರಕ್ಷಣೆ ಜವಬ್ದಾರಿ ನಿಭಾಯಿಸಿದರೆ ಖಂಡಿತಾ ಹಸಿರು ತುಮಕೂರು ಸಾಧ್ಯ, ಸಸಿಗಳನ್ನು ನೆಡುವುದರ ಜತೆಗೆ ಉಳಿಸಿ ಬೆಳೆಸಬೇಕು. ಸಾಧ್ಯವೆಂದು ಆಶಿಸಿದರು. ವೃಕ್ಷಮಿತ್ರ ಪೋ.ಕೆ.ಸಿದ್ಧಪ್ಪ ಅವರು ಮರಗಳನ್ನು ಮಕ್ಕಳಂತೆ…

Read More

ತುಮಕೂರು: ಜಿಲ್ಲೆಯಲ್ಲಿ ಜಲಜೀವನ್ ಮಿಷನ್ ಯೋಜನೆಗೆ ಪೂರಕವಾಗಿ ಕೈಗೊಂಡಿರುವ ಉಡಿeಥಿ ತಿಚಿಣeಡಿ ಒಚಿಟಿಚಿgemeಟಿಣ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕೆಂದು ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಡಾ: ಕೆ. ವಿದ್ಯಾಕುಮಾರಿ ಅವರು ಸೂಚನೆ ನೀಡಿದರು. ಜಿಲ್ಲಾ ಪಂಚಾಯತಿಯಲ್ಲಿ ಸೋಮವಾರ ಜರುಗಿದ ತುಮಕೂರು, ಗುಬ್ಬಿ, ಕೊರಟಗೆರೆ ಮತ್ತು ಕುಣಿಗಲ್ ತಾಲ್ಲೂಕಿನ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಂಃಂಖಏ ಕಾರ್ಡ್ ವಿತರಣೆಗೆ ಕ್ರಮವಹಿಸಲು ಸೂಚಿಸಿದರು. ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ವಾರಕ್ಕೆ 500 ಕಾರ್ಡ್ ವಿತರಿಸಬೇಕು ಎಂದರಲ್ಲದೆ, ಒಉಓಖಇಉಂ ಸಾಮಾಜಿಕ ಪರಿಶೋಧನೆಯಲ್ಲಿ ವಸೂಲಾತಿಗೆ ಸೂಚಿಸಿರುವ ಕಂಡಿಕೆಗಳನ್ನು ತೀರುವಳಿ ಮಾಡಿಸಬೇಕು. ಒಉಓಖಇಉಂ ನಿಗಧಿತ ವೇಳೆಗೆ ಕೂಲಿ ಮೊತ್ತ ಪಾವತಿಸಬೇಕು. ಪ್ರತಿ ಗ್ರಾಮ ಪಂಚಾಯಿತಿಯಲ್ಲಿ 100 ಕೈತೋಟ ಕಾಮಗಾರಿಗಳನ್ನು ಮಹಾತ್ಮ ಗಾಂಧಿ ನರೇಗಾ ಯೋಜನೆಯಲ್ಲಿ ಅನುμÁ್ಠನ ಮಾಡಬೇಕು ಎಂದು ತಿಳಿಸಿದರು. ಈಗಾಗಲೇ ಆಯ್ಕೆಯಾಗಿರುವ 2010-11 ರಿಂದ 2021-22 ರವರೆಗೆ ಮನೆಗಳನ್ನು ಅಕ್ಟೋಬರ್-2022ರೊಳಗೆ ಪೂರ್ಣಗೊಳಿಸಲು ತಿಳಿಸಿದರು. ಡಿಜಿಟಲ್ ಲೈಬ್ರರಿಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಸಕಾಲ ಮತ್ತು IPಉಖS…

Read More

ತುಮಕೂರು: ಮುಂಗಾರು ಆರಂಭವಾಗಿರುವ ಹಿನ್ನೆಲೆಯಲ್ಲಿ ರೈತರಿಗೆ ಬೀಜ ಮತ್ತು ರಸಗೊಬ್ಬರವನ್ನು ಕೊರತೆಯಾಗದಂತೆ ವಿತರಿಸಬೇಕು, ಸೂರ್ಯಕಾಂತಿ ಸೇರಿದಂತೆ ಕೆಲ ಎಣ್ಣೆಕಾಳು ಬೀಜಗಳನ್ನು ದುಪ್ಪಟ್ಟು ಬೆಲೆಗೆ ಮಾರಾಟ ಮಾಡುತ್ತಿದ್ದು, ಅಂತಹವರ ವಿರುದ್ದ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಸಿ.ಡಿ.ಜಯಶ್ರೀ ನೇತೃತ್ವದಲ್ಲಿ ನೂರಾರು ರೈತರು ಪ್ರತಿಭಟನೆ ನಡಸಿ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಈ ವೇಳೆ ಮಾತನಾಡಿದ ಸಿ.ಡಿ.ಜಯಶ್ರೀ ಅವರು,ದೇಶ ಕೃಷಿ ಪ್ರಧಾನವಾಗಿದ್ದು, ಇಲ್ಲಿನ ಶೇ 80ರಷ್ಟು ಜನರು ಕೃಷಿಯ ಮೇಲೆ ಅವಲಂಬಿತರಾಗಿದ್ದಾರೆ.ಕರ್ನಾಟಕದಲ್ಲಿ ಮುಂಗಾರು ಮಳೆ ಉತ್ತಮವಾಗಿ ಆಗುತ್ತಿದ್ದು, ರೈತರು ಬಿತ್ತನೆ ಕಾರ್ಯಕ್ಕೆ ಸಿದ್ದತೆಗಳನ್ನು ನಡೆಸುತ್ತಿದ್ದಾರೆ. ರಸಗೊಬ್ಬರ ಮತ್ತು ಬಿತ್ತನೆ ಬೀಜದ ಸಂಗ್ರಹಣೆಯಲ್ಲಿ ತೊಡಗಿದ್ದಾರೆ.ಇದರಿಂದಾಗಿ ಜಿಲ್ಲಾ ಕೇಂದ್ರಗಳಲ್ಲಿ ಸಹಜವಾಗಿಯೇ ಬಿತ್ತನೆ ಬೀಜ ಮತ್ತು ರಸಗೊಬ್ಬರದ ಬೇಡಿಕೆ ಹೆಚ್ಚಿದೆ. ಆದರೆ ಕೆಲ ಕಾಳಸಂತೆಕೋರರು ಇದನ್ನೇ ಲಾಭ ಮಾಡಿಕೊಂಡು ರೈತರಿಗೆ ಅಗತ್ಯವಿರುವ ರಸಗೊಬ್ಬರ ಮತ್ತು ಬಿತ್ತನೆ ಬೀಜಗಳನ್ನು ದುಪ್ಪಟ್ಟು ಬೆಲೆಗೆ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿರುವುದರಿಂದ ರೈತರಿಗೆ…

Read More

ತುಮಕೂರು: ಹಸಿರಿನ ವನಸಿರಿಯ ನಡುವೆ ಹಕ್ಕಿಗಳ ಕಲರವದೊಂದಿಗೆ ಸೂರ್ಯನ ಮೊದಲ ರಶ್ಮಿ ಭೂರಮೆಗೆ ಮುತ್ತಿಕ್ಕುವ ಸಮಯದಲ್ಲಿ ಸುಕ್ಷೇತ್ರ ಸಿದ್ಧರಬೆಟ್ಟದ ತಪ್ಪಲಲ್ಲಿ ಓಂಕಾರದಿಂದ ಪ್ರಾರಂಭವಾದ ಸಾಮೂಹಿಕ ಯೋಗಾಭ್ಯಾಸ ಎಲ್ಲರಲ್ಲೂ ನವಚೈತನ್ಯ ತಂದುಕೊಟ್ಟಿತು. ಜಿಲ್ಲೆಯ ಕೊರಟಗೆರೆ ತಾಲೂಕು ಸುಕ್ಷೇತ್ರ ಸಿದ್ಧರಬೆಟ್ಟದ ಶ್ರೀ ರಂಭಾಪುರಿ ಖಾಸಾ ಶಾಖಾ ಮಠದ ಆವರಣದಲ್ಲಿ ಮಂಗಳವಾರ ಬೆಳಗಿನ ಜಾವ ಶ್ರೀ ಕ್ಷೇತ್ರದ ಶ್ರೀ ಶ್ರೀ ಶ್ರೀ ವೀರಭದ್ರ ಶಿವಾಚಾರ್ಯಸ್ವಾಮಿಗಳು, ಮಠದ ವಿದ್ಯಾರ್ಥಿಗಳು, ವಿವಿಧ ಅಧಿಕಾರಿಗಳು, ಸಂಘ ಸಂಸ್ಥೆಗಳ ಸದಸ್ಯರು ವಿವಿಧ ಯೋಗಾಸನ, ಪ್ರಾಣಾಯಾಮ ಹಾಗು ಧ್ಯಾನಾಭ್ಯಾಸ ಮಾಡುವ ಮೂಲಕ 8ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ಸಿದ್ಧರಬೆಟ್ಟದ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕೇಂದ್ರದ ವೈದ್ಯಾಧಿಕಾರಿ ಡಾ|| ಹೆಚ್.ಬಿ. ಭವ್ಯ ಅವರು ವಿವಿಧ ಆಸನಗಳ ಭಂಗಿಗಳು ಹಾಗೂ ಆಸನಗಳನ್ನು ಅಭ್ಯಾಸ ಮಾಡುವುದರಿಂದಾಗುವ ಪ್ರಯೋಜನಗಳ ಬಗೆ ವಿವರಣೆ ನೀಡಿದರು. ಕಾರ್ಯಕ್ರಮದಲ್ಲಿ ವಜ್ರಾಸನ, ತಾಡಾಸನ, ವೃಕ್ಷಾಸನ, ಪಾದಹಸ್ತಾಸನ, ಅರ್ಧಚಕ್ರಾಸನ, ತ್ರಿಕೋನಾಸಾನ, ವಕ್ರಾಸನ, ಉಷ್ಟ್ರಾಸನ, ಶಶಾಂಕಾಸನ, ಮಕರಾಸನ, ಶಲಭಾಸನ, ಧನುರಾಸನಗಳಲ್ಲದೆ ನಾಡಿಶುದ್ಧಿ ಹಾಗೂ…

Read More

ತುಮಕೂರು ನಗರದ ರಾಷ್ಟ್ರೀಯ ಹೆದ್ದಾರಿ ಹಿರೇಹಳ್ಳಿ ನಂಜುಂಡೇಶ್ವರ ಹೋಟೆಲ್ ಸಭಾಂಗಣದಲ್ಲಿ ಡಾ.ಎಂ. ಬಿ. ನವೀನ್ ಕುಮಾರ್ ಅವರಿಗೆ ಅಭಿನಂದನಾ ಸಮಾರಂಭ ನೆರವೇರಿತು. ಭಗವದ್ಗೀತೆಯ ಅಧ್ಯಾಯಗಳು ನಮ್ಮ ಸಮಾಜದವರಿಗೆ ಸುಧಾರಣೆಯಾಗಿದೆ. ಹಾಗೆ ನಮ್ಮ ರಾಜ್ಯದ ಪೋಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವ ಪೋಲೀಸರು ಅಧ್ಯಾಯದ ಸ್ಥಾನದಲ್ಲಿ ಶ್ರೇಷ್ಠ ತನವನ್ನು ಹೊಂದಿರುತ್ತಾರೆ ಎಂದು ನಿವೃತ್ತ ಹಿರಿಯ ಪೋಲೀಸ್ ಅಧಿಕಾರಿ ಶಂಕರ್ ಬಿದರಿ ತಿಳಿಸಿದರು. ನಮ್ಮ ಇಲಾಖೆ ರಾಜ್ಯದ ಸುಧಾರಣೆಗೆ ವಿವಿಧ ಭಾಗಗಳ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸಲು ನಿಷ್ಠಾವಂತ ಪ್ರಾಮಾಣಿಕ ದಕ್ಷ ಕರ್ತವ್ಯ ನಿರ್ವಹಣೆಯಲ್ಲಿ ಸೇವೆ ಸಲ್ಲಿಸಿರುವ ಪೋಲೀಸರ ಕರ್ತವ್ಯಕ್ಕೆ ಸಮಾಜ ಉನ್ನತವಾದ ಸ್ಥಾನಮಾನವನ್ನು ನೀಡುತ್ತಿದೆ ಎಂದು ತಿಳಿಸಿದರು. ತುಮಕೂರು ಹಿರೇಮಠದ ಮಠಧ್ಯಕ್ಷರಾದ ಶ್ರೀ ಡಾ ಶಿವಾನಂದ ಶಿವಾಚಾರ್ಯ ಮಹಾಸ್ವಾಮಿಗಳು ಆಶೀರ್ವಚನ ನೀಡುತ್ತಾ ಕರ್ತವ್ಯವೇ ದೇವರೆಂದು ನಂಬಿರುವಂತಹ ಪೋಲೀಸ್ ಇಲಾಖೆಯನ್ನು ಭಗವದ್ಗೀತೆಯ ರೂಪದಲ್ಲಿ ಸತ್ಯ ಪ್ರಾಮಾಣಿಕ ನಿಷ್ಠೆ ಕಾರ್ಯರೂಪ ಯಶಸ್ವಿಯಾಗಲು ಈ ರೀತಿಯ ಹಿರಿಯ ನಿವೃತ್ತ ಪೋಲೀಸ್ ಅಧಿಕಾರಿಗಳಾದ ಶಂಕರ್ ಬಿದರಿ ರವರ ಮಾರ್ಗದರ್ಶನ ಹಾಗೂ ಅವರ…

Read More

ತುಮಕೂರು: ಜನಸಾಮಾನ್ಯರ ಸಾರಿಗೆಯೆಂದೇ ಕರೆಯುವ ರೈಲು ಸಾರಿಗೆ ಮತ್ತು ಹೆದ್ದಾರಿ ರಸ್ತೆಗಳನ್ನು ಆಧುನಿಕರಣ ಮಾಡುವ ಕೆಲಸಗಳನ್ನು ಕೇಂದ್ರ ಸರ್ಕಾರ ಮಾಡುತ್ತಿದೆ ಎಂದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವ ಬಿ.ಸಿ ನಾಗೇಶ್ ತಿಳಿಸಿದರು. ನಗರದ ರೈಲ್ವೆ ನಿಲ್ದಾಣದಲ್ಲಿ ತುಮಕೂರು-ಅರಸೀಕರೆ ಮಾರ್ಗ ವಿದ್ಯುತ್ ಚಾಲಿತ ರೈಲು ಸೇವೆಗೆ ಹಸಿರು ನಿಶಾನೆ ತೋರಿಸುವ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ತುಮಕೂರು- ಅರಸೀಕೆರೆ ಮಾರ್ಗದಲ್ಲಿ ಸಾಕಷ್ಟು ರೈಲುಗಳಿದ್ದರೂ ಜನಸಾಮಾನ್ಯರ ಓಡಾಟಕ್ಕೆ ಅನುಕೂಲವಾಗುವಂತಹ ರೈಲು ವ್ಯವಸ್ಥೆಯಿರಲಿಲ್ಲ. ಇಂದು ಕೇಂದ್ರ ಸರ್ಕಾರ ಈ ರೈಲ್ವೆ ಮಾರ್ಗವನ್ನು ವಿದ್ಯುದ್ದೀಕರಣಗೊಳಿಸಿ ಹೊಸ ಡೆಮು ರೈಲನ್ನು ಸಾಮಾನ್ಯರ ಓಡಾಟಕ್ಕೆ ಒದಗಿಸಿದೆ ಎಂದರು. ಮೀಟರ್ ಗೇಜ್ ಮತ್ತು ಬ್ರಾಡ್ ಗೇಜ್ ಮಾರ್ಗಗಳ ಕಾಮಗಾರಿಗಳನ್ನು 2018ರಲ್ಲಿ ಪ್ರಾರಂಭಿಸಿ 2022ರಲ್ಲಿ ಲೋಕಾರ್ಪಣೆ ಮಾಡುತ್ತಿರುವುದು ಅಭಿವೃದ್ಧಿಯ ವೇಗವನ್ನು ತಿಳಿಯಬಹುದಾಗಿದೆ ಎಂದರು. ಈ ಹಿಂದೆ ರೈಲು ಅತ್ಯಂತ ವಾಯುಮಾಲಿನ್ಯಕಾರಕ ಸಾರಿಗೆ ಎನ್ನುತ್ತಿದ್ದರು. ಇಂದು ರೈಲ್ವೆ ಮಾರ್ಗಗಳನ್ನು ವಿದ್ಯುದ್ದೀಕರಣಗೊಳಿಸಿ ಮಾಲಿನ್ಯರಹಿತ ಸಾರಿಗೆ ಮಾಡಲಾಗುತ್ತಿದೆ ಎಂದರಲ್ಲದೇ, ರೈಲು ಮತ್ತು ಬಸ್…

Read More

ತುಮಕೂರು: ನಗರದ ರಾಷ್ಟ್ರೀಯ ಹೆದ್ದಾರಿ ಹಿರೇಹಳ್ಳಿ ನಂಜುಂಡೇಶ್ವರ ಹೋಟೆಲ್ ಸಭಾಂಗಣದಲ್ಲಿ ಡಾ.ಎಂ. ಬಿ. ನವೀನ್ ಕುಮಾರ್ ಅವರಿಗೆ ಅಭಿನಂದನಾ ಸಮಾರಂಭ ನೆರವೇರಿತು. ಭಗವದ್ಗೀತೆಯ ಅಧ್ಯಾಯಗಳು ನಮ್ಮ ಸಮಾಜದವರಿಗೆ ಸುಧಾರಣೆಯಾಗಿದೆ. ಹಾಗೆ ನಮ್ಮ ರಾಜ್ಯದ ಪೆÇಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವ ಪೆÇಲೀಸರು ಅಧ್ಯಾಯದ ಸ್ಥಾನದಲ್ಲಿ ಶ್ರೇಷ್ಠ ತನವನ್ನು ಹೊಂದಿರುತ್ತಾರೆ ಎಂದು ನಿವೃತ್ತ ಹಿರಿಯ ಪೆÇಲೀಸ್ ಅಧಿಕಾರಿ ಶಂಕರ್ ಬಿದರಿ ತಿಳಿಸಿದರು. ನಮ್ಮ ಇಲಾಖೆ ರಾಜ್ಯದ ಸುಧಾರಣೆಗೆ ವಿವಿಧ ಭಾಗಗಳ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸಲು ನಿಷ್ಠಾವಂತ ಪ್ರಾಮಾಣಿಕ ದಕ್ಷ ಕರ್ತವ್ಯ ನಿರ್ವಹಣೆಯಲ್ಲಿ ಸೇವೆ ಸಲ್ಲಿಸಿರುವ ಪೆÇಲೀಸರ ಕರ್ತವ್ಯಕ್ಕೆ ಸಮಾಜ ಉನ್ನತವಾದ ಸ್ಥಾನಮಾನವನ್ನು ನೀಡುತ್ತಿದೆ ಎಂದು ತಿಳಿಸಿದರು. ತುಮಕೂರು ಹಿರೇಮಠದ ಮಠಧ್ಯಕ್ಷರಾದ ಶ್ರೀ ಡಾ ಶಿವಾನಂದ ಶಿವಾಚಾರ್ಯ ಮಹಾಸ್ವಾಮಿಗಳು ಆಶೀರ್ವಚನ ನೀಡುತ್ತಾ ಕರ್ತವ್ಯವೇ ದೇವರೆಂದು ನಂಬಿರುವಂತಹ ಪೆÇಲೀಸ್ ಇಲಾಖೆಯನ್ನು ಭಗವದ್ಗೀತೆಯ ರೂಪದಲ್ಲಿ ಸತ್ಯ ಪ್ರಾಮಾಣಿಕ ನಿಷ್ಠೆ ಕಾರ್ಯರೂಪ ಯಶಸ್ವಿಯಾಗಲು ಈ ರೀತಿಯ ಹಿರಿಯ ನಿವೃತ್ತ ಪೆÇಲೀಸ್ ಅಧಿಕಾರಿಗಳಾದ ಶಂಕರ್ ಬಿದರಿ ರವರ ಮಾರ್ಗದರ್ಶನ ಹಾಗೂ ಅವರ…

Read More