Author: News Desk Benkiyabale

ತುಮಕೂರು: ತುಮಕೂರು ಜಿಲ್ಲೆ ತುರುವೇಕೆರೆ ತಾಲ್ಲೂಕು ಮಾಯಸಂದ್ರ ಗ್ರಾಮದಲ್ಲಿ ಮತ್ತು 19, 2022 ರಂದು ಎರಡು ದಿನಗಳ ಕಾಲ ನಡೆಯಲಿರುವ ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿಕಡೆ’ ಕಾರ್ಯಕ್ರಮದಲ್ಲಿ ಕಂದಾಯ ಸಚಿವರಾದ ಆರ್. ಅಶೋಕ್ ಅವರು ಭಾಗವಹಿಸಲಿದ್ದು, ಕಾರ್ಯಕ್ರಮದ ವಿವರಗಳು ಈ ಕೆಳಕಂಡಂತಿದೆ. ದಿನಾಂಕ 18-06-2022ರ ಶನಿವಾರ ಬೆಳಿಗ್ಗೆ 11 ಗಂಟೆಗೆ ಕಂದಾಯ ಸಚಿವರ ಆಗಮನ ಮತ್ತು ದೇವಸ್ಥಾನದಲ್ಲಿ ಪೂಜಾ ಕಾರ್ಯಕ್ರಮ, 11.10 ರಿಂದ 11.30 ರವರೆಗೆ ದೇವಸ್ಥಾನದಿಂದ ಕಾರ್ಯಕ್ರಮದ ಸ್ಥಳಕ್ಕೆ ಸಚಿವರ ಆಗಮನ(ಎತ್ತಿನ ಗಾಡಿ/ಟ್ರ್ಯಾಕ್ಟರ್ ಮೂಲಕ), 11.30 ರಿಂದ 12 ಗಂಟೆ ಆರೋಗ್ಯ ಶಿಬಿರ ಉದ್ಘಾಟನೆ ಮತ್ತು ವಿವಿಧ ಮಳಿಗೆಗಳ ವೀಕ್ಷಣೆ, 12 ಗಂಟೆ ವೇದಿಕೆಗೆ ಆಗಮನ, ನಂತರ ಪ್ರಾರ್ಥನೆ, ನಾಡಗೀತೆ, ಸ್ವಾಗತ ಮತ್ತು ಪ್ರಾಸ್ತಾವಿಕ ನುಡಿ ಶಾಸಕರು ತುರುವೇಕೆರೆ ಅವರಿಂದ. ನಂತರ 12.20 ರಿಂದ 12.25 ಮಾನ್ಯ ಕಂದಾಯ ಸಚಿವರಿಂದ ಕಾರ್ಯಕ್ರಮ ಉದ್ಘಾಟನೆ ಮತ್ತು ಉದ್ಘಾಟಕರ ಭಾಷಣ, ಮಧ್ಯಾಹ್ನ 1 ಗಂಟೆಯಿಂದ 2 ಗಂಟೆಯವರೆಗೆ ವಿವಿಧ ಇಲಾಖೆಗಳಿಂದ ಸವಲತ್ತುಗಳ ವಿತರಣೆ, ಮಧ್ಯಾಹ್ನ…

Read More

ಚಿಕ್ಕನಾಯಕನಹಳ್ಳಿ: ಬೌದ್ಧ ಧರ್ಮಕ್ಕೆ ಸೇರಿದ್ದರೂ ಪರವಾಗಿಲ್ಲ ಕ್ರಿಶ್ಚಿಯನ್ ಆಗಬಾರದು ಎಂದು ಸಚಿವ ಜೆ ಸಿ ಮಾಧುಸ್ವಾಮಿ ಹೇಳಿದರು. ಅವರು ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಪರಿಶಿಷ್ಟಜಾತಿ ಮತ್ತು ಪರಿಶಿಷ್ಟವರ್ಗದ ಹಿತರಕ್ಷಣಾ ಸಮಿತಿಯ ಸಭೆಯಲ್ಲಿ ಈ ರೀತಿ ಹೇಳಿದರು. ಸಭೆಯಲ್ಲಿ ಸುಮಾರು ನೂರಕ್ಕೂ ಹೆಚ್ಚು ಮಂದಿ ಹಾಜರಾಗಿದ್ದರು ಗಮನಿಸಿದ ಅವರು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗೆ ಇದು ಸಭೆಯ ಅಥವಾ ಸಮಾರಂಭನ ಎಂದು ಪ್ರಶ್ನಿಸುತ್ತಾ ಕೇವಲ ಮುಖಂಡರುಗಳಿಗೆ ಮಾತ್ರ ಸಭೆಗೆ ಹಾಜರಾಗಲು ಸೂಚಿಸಬೇಕು ಇದು ಪರಿಶಿಷ್ಟ ಜಾತಿ ಮತ್ತು ಪಂಗಡದ ಸಮಾಜಗಳಿಗೆ ಸೇರಿದ ಕುಂದು ಕೊರತೆಯ ಸಭೆ ಇಲ್ಲಿ ಖಾಸಗಿ ವೈಯಕ್ತಿಕ ಅಭಿಪ್ರಾಯಗಳು ಹೆಚ್ಚು ಬರುವುದು ಬೇಡ ಎಂದು ಮುಂದಿನ ದಿನಗಳಲ್ಲಿ ಸಂಬಂಧಪಟ್ಟ ಮುಖಂಡರಿಗೆ ಅಷ್ಟೇ ಆಹ್ವಾನ ನೀಡಬೇಕು ಎಂದು ಖಡಕ್ಕಾಗಿ ಅಧಿಕಾರಿಗೆ ಸೂಚಿಸಿದರು. ದುಗಡಿಹಳ್ಳಿ ಗ್ರಾಮ ಪಂಚಾಯಿತಿಯ ಕಂಪ್ಯೂಟರ್ ಆಪರೇಟರ್ ಮನಸಾರೆ ಜಾಬ್ ಕಾರ್ಡ್ ಬಳಸಿಕೊಂಡು ಅವರಿಗೆ ಬೇಕಾದ ಸದಸ್ಯರುಗಳಿಗೆ ಮತ್ತು ಅವರ ಹಿಂಬಾಲಕರಿಗೆ ಉದ್ಯೋಗ ಖಾತ್ರಿ ಕಾಮಗಾರಿ ನೀಡುತ್ತಿರುವ ಬಗ್ಗೆ ಹೆಸರಹಳ್ಳಿ…

Read More

ತುಮಕೂರು: ಮಹಾನಗರಪಾಲಿಕೆಯ ವಾರ್ಡ್ ನಂ.17ರ ವ್ಯಾಪ್ತಿಯಲ್ಲಿ ಮಹಾತ್ಮಗಾಂಧಿ ನಗರ ವಿಕಾಸ ಯೋಜನೆಯಡಿಯಲ್ಲಿ ರಾಮ್‍ಜೋಯಿಷ್‍ನಗರ ಮತ್ತು ಅಮರಜ್ಯೋತಿನಗರ, ಗೂಡ್‍ಶೆಡ್ ಕಾಲೋನಿಯಲ್ಲಿ ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಕಾಮಗಾರಿಗೆ ಮತ್ತು ಶಾಂತಿನಗರ ರೈಲ್ವೆ ಅಂಡರ್‍ಪಾಸ್ ನಿಂದ ಗಾಂಧಿನಗರಕ್ಕೆ ಸಂಪರ್ಕಿಸುವ ರಸ್ತೆಯ ಅಭಿವೃದ್ಧಿ ಕಾಮಗಾರಿಗೆ ತುಮಕೂರು ನಗರ ಶಾಸಕರಾದ ಜಿ.ಬಿ.ಜ್ಯೋತಿಗಣೇಶ್ ರವರು ಭೂಮಿ ಪೂಜೆ ನೆರವೇರಿಸಿದರು. ಈ ಸಂಧರ್ಭದಲ್ಲಿ ಮಾತನಾಡಿದ ಮಾನ್ಯ ಶಾಸಕರು ಈ ಭಾಗದಲ್ಲಿ ಸದರಿ ಕಾಮಗಾರಿಗಳು ರೂ.80.00 ಲಕ್ಷಗಳ ವೆಚ್ಚದಲ್ಲಿ ನಡೆಯಲಿದ್ದು, ಸುಮಾರು ವರ್ಷಗಳಿಂದ ಈ ಭಾಗದಿಂದ ಗಾಂಧಿನಗರ, ಟೌನ್‍ಹಾಲ್ ಕಡೇ ಹೋಗಬೇಕಾದರೆ ಇರೋದಕ್ಕೆ ಒಂದೇ ರಸ್ತೆ ಇರುವುದರಿಂದ ರೈಲ್ವೇ ನಿಯಮದಂತೆ ಮಾಡಬೇಕು ಎಂದು ನಿರ್ಧರಿಸಲಾಯಿತು. ಕೆಲವು ಜಾಗದ ತಕರಾರಿನಿಂದಾಗಿ ಸುಮಾರು 3 ವರ್ಷಗಳಿಂದ ಕೆಲಸ ಆರಂಭಿಸಲು ಸಾಧ್ಯವಾಗಿರುವುದಿಲ್ಲ. ಈ ವಿಚಾರವಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವೊಲಿಸಿ ಹಾಗೂ ಪ್ರಸ್ತುತ ಸಂಬಂಧಪಟ್ಟ ಜಾಗದ ಮಾಲೀಕರು ಸಹ ಸ್ವಾಧೀನಪಡಿಸಿಕೊಳ್ಳಲು ಒಪ್ಪಿದ್ದಾರೆ. ಈ ವಿಚಾರವಾಗಿ ಈ ಭಾಗದಲ್ಲಿ ಸಾಕಷ್ಟು ಮುಖಂಡರು ಹೋರಾಡಿದ್ದು, ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ನಾಗರೀಕ…

Read More

ತುಮಕೂರು: ಬ್ರಿಟಿಷರ ಕಾಲದಿಂದಲೂ ನೀರಾವರಿಯಲ್ಲಿ ನಿರ್ಲಕ್ಷಕ್ಕೆ ಒಳಗಾಗಿದ್ದ ಹಳೆ ಮೈಸೂರು ಭಾಗಕ್ಕೆ ಸೇರಿದ ಮದ್ಯಕರ್ನಾಟಕ ಜಿಲ್ಲೆಗಳಿಗೆ ಕುಡಿಯಲು ಮತ್ತು ನೀರಾವರಿಗೆ ಅದ್ಯತೆ ನೀಡಿದವರು ಮಾಜಿ ಮುಖ್ಯಮಂತ್ರಿ ದಿ.ದೇವರಾಜ ಅರಸು ಎಂದು ಸಂಸದ ಜಿ.ಎಸ್.ಬಸವರಾಜು ತಿಳಿಸಿದ್ದಾರೆ. ನಗರದ ಕನ್ನಡ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಜಲ ಸಂವಾದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತಿದ್ದ ಅವರು, ದಿ.ಹುಚ್ಚು ಮಾಸ್ತಿಗೌಡ ಒತ್ತಾಯದ ಫಲವಾಗಿ ಹೇಮಾವತಿ ಜಲಾಶಯ ನಿರ್ಮಾಣಕ್ಕೆ ದೇವರಾಜ ಅರಸು ಮುಂದಾದರು.ಇದರ ಭಾಗವಾಗಿ ತುಮಕೂರು ಜಿಲ್ಲೆಯ ಹಲವು ತಾಲೂಕುಗಳಲ್ಲಿ ಸಂವೃದ್ದಿಯ ಕೃಷಿ, ತೋಟಗಾರಿಕೆ ಜೊತೆಗೆ, ಕುಡಿಯುವ ನೀರಿನ ಬರ ಹಿಂಗಿದೆ.ಇದರ ಜೊತೆಗೆ ಎಸ್.ಎಂ.ಕೃಷ್ಣ ಅವರು ಸಹ ಸಾಕಷ್ಟು ಅನುದಾನವನ್ನು ನೀಡಿ. ನೀರಾವರಿ ಅಭಿವೃದ್ದಿಗೆ ಕಾರಣರಾಗಿದ್ದಾರೆ ಎಂದರು. ನೀರಾವರಿ ವಿಚಾರದಲ್ಲಿ ಮೊದಲಿನಿಂದಲೂ ಕರ್ನಾಟಕ ಮತ್ತು ತೆಮಿಳುನಾಡು ನಡುವೆ ವೈಮನಸ್ಸು ಇದ್ದೇ ಇದೆ.ಇದಕ್ಕೆ ಪೂರಕವೆಂಬಂತೆ ಕೆಲ ಅಧಿಕಾರಿಗಳು ಸಹ ವರ್ತನೆ ಮಾಡಿದ್ದರ ಫಲವಾಗಿ ಹಲವಾರು ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ…

Read More

ಗುಬ್ಬಿ: ಬುಧವಾರ ನಡೆದ ಬರ್ಬರ ಹತ್ಯೆ ಇಂದಾಗಿ ಗುಬ್ಬಿ ನಗರದ ಜನತೆಯು ಭಯಭೀತರಾಗಿದ್ದು ಇತಿಹಾಸದಲ್ಲಿ ಈ ರೀತಿಯ ಬರ್ಬರ ಕೃತ್ಯ ಯು ಎಂದೂ ಕಾಣದಂತಹ ಕೃತ್ಯವನ್ನೂ ಎಸಗಿ ದಲಿತ ಮುಖಂಡನನ್ನು ಹಾಡುಹಗಲೇ ಜನನಿ ಬಿಡಾದ ರಸ್ತೆಯಲ್ಲಿ ಕೊಚ್ಚಿ ಹಾಕಿ ಪರಾರಿಯಾಗಿರುವ ಘಟನೆ ಯಿಂದ ತಾಲೂಕಿನಾದ್ಯಂತ ಭಯದ ವಾತಾವರಣ ತುಂಬಿದ್ದು ಕಂಡುಬಂದಿದೆ. ದಿ.15 ರಂದು ಸುಮಾರು 1-30 ರ ಸಮಯದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ತಾಲೂಕು ಸಂಚಾಲಕ ಜಿ.ಸಿ. ನರಸಿಂಹಮೂರ್ತಿ (ಕುರಿ ಮೂರ್ತಿ) ರಾಷ್ಟ್ರೀಯ ಹೆದ್ದಾರಿ 206 ರ ಟೀ ಅಂಗಡಿಯ ಮುಂದೆ ಕುಳಿತು ತನ್ನ ಸಹಚರರೊಡನೆ ದಲಿತ ಕುಂದು ಕೊರತೆ ಸಭೆಗೆ ಶಿರಾಕ್ಕೆ ಹೋಗಲು ತನ್ನ ಕಾರ್ಯಕರ್ತರ ಜೊತೆ ಚರ್ಚಿಸಲು ಕುಳಿತಿದ್ದು ಒಂದೆಡೆಯಾದರೆ ಆದಿನ ನಡೆಯಬೇಕಿದ್ದ ದಲಿತ ಕುಂದು ಕೊರತೆ ಸಭೆಯನ್ನು ಮುಂದೂಡಲಾಗಿದೆ ಎಂದು ದೂರವಾಣಿ ಮುಖಾಂತರ ತಿಳಿಸಿದಾಗ ತನ್ನ ಕಾರ್ಯಕರ್ತರನ್ನು ತಾಲೂಕಿನಲ್ಲಿ ದಲಿತರ ಮೇಲೆ ದೌರ್ಜನ್ಯಗಳು ಹೆಚ್ಚಾಗಿದ್ದು ತಡೆಗಟ್ಟುವ ನಿಟ್ಟಿನಲ್ಲಿ ಯಾವ ಕ್ರಮವನ್ನು ಕೈಗೊಳ್ಳಬೇಕೆಂದು ಚರ್ಚಿಸಿದ ನಂತರ ಕೇವಲ…

Read More

ತುಮಕೂರು: ಭಾರತದ ಪ್ರಜೆಗಳಾದ ನಮ್ಮೆಲ್ಲರಿಗೂ ಗೌರವಯುತವಾಗಿ ಬದುಕುವ ಹಕ್ಕನ್ನು ನಮ್ಮ ಸಂವಿಧಾನವು ಒದಗಿಸಿಕೊಟ್ಟಿದೆ. ಆದರೆ ಮಲ ಹೊರುವ ಪದ್ಧತಿ (ಮ್ಯಾನ್ಯುಯಲ್ ಸ್ಕ್ಯಾವೆಂಜರ್)ಯಂತಹ ಅನಿಷ್ಟ ವ್ಯವಸ್ಥೆಯಿಂದಾಗಿ ಹಲವರು ಇಂದಿಗೂ ಸಹಾ ಈ ಹಕ್ಕಿನಿಂದ ವಂಚಿತರಾಗಿದ್ದಾರೆ. ಗತಕಾಲದಿಂದ ನಡೆಯುತ್ತಿರುವ ಈ ಅನ್ಯಾಯವನ್ನು ಮತ್ತು ಅಗೌರವದ ಬದುಕನ್ನು ಸರಿಪಡಿಸುವ ಸಲುವಾಗಿ ‘ಮ್ಯಾನ್ಯುಯಲ್ ಸ್ಕ್ಯಾವೆಂಜರ್ಸ್ ನಿಷೇಧ ಮತ್ತು ಪುನರ್ವಸತಿ ಅಧಿನಿಯಮ 2013’ನ್ನು ಜಾರಿಗೆ ತರಲಾಗಿದೆ ಎಂದು ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷರಾದ ಎಂ. ಶಿವಣ್ಣ ಅವರು ತಿಳಿಸಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ವತಿಯಿಂದ ಇಂದು ಆಯೋಜಿಸಲಾಗಿದ್ದ, ಮ್ಯಾನ್ಯುಯಲ್ ಸ್ಕ್ಯಾವೆಂಜರ್ಸ್‍ಗಳ ನೇಮಕಾತಿ ನಿಷೇಧ ಮತ್ತು ಪುನರ್ವಸತಿ ಅಧಿನಿಯಮ 2013ರ ಕಾಯ್ದೆ ಹಾಗೂ ನಿಯಮಗಳ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಅಧಿಕಾರಿಗಳಿಗೆ ಕಾಯ್ದೆಯ ಕುರಿತು ಮನದಟ್ಟು ಮಾಡುತ್ತಾ, ಈ ಮೇಲಿನಂತೆ ಅವರು ತಿಳಿಸಿದರು. ಪಾಲಿಕೆ, ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸೆಪ್ಟಿಕ್ ಟ್ಯಾಂಕ್/ಯುಜಿಡಿಗಳನ್ನು ಸಕ್ಕಿಂಗ್ ಮತ್ತು ಜೆಟ್ಟಿಂಗ್ ಯಂತ್ರಗಳ ಮೂಲಕ ಸ್ವಚ್ಛಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ ಅವರು, ಮಲವನ್ನು ಕೈಯಿಂದ…

Read More

ತುಮಕೂರು ಜಿಲ್ಲೆಯಲ್ಲಿ ಕೊರೋನಾ ಪ್ರಕರಣ ಉಲ್ಬಣವಾಗದಂತೆ ಕಟ್ಟೆಚ್ಚರ ವಹಿಸಬೇಕು. ಆರೋಗ್ಯ ಇಲಾಖೆ ಈ ಬಗ್ಗೆ ಹೆಚ್ಚು ನಿಗಾ ವಹಿಸಿ, ಕೋವಿಡ್-19 ತಪಾಸಣೆಯನ್ನು 500ಕ್ಕೆ ಹೆಚ್ಚಿಸಬೇಕು ಮತ್ತು ಪ್ರತಿ ತಾಲ್ಲೂಕಿನಲ್ಲಿಯೂ ಕಣ್ಗಾವಲು ಸಮಿತಿಯನ್ನು ರಚಿಸುವಂತೆ ಗೃಹ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಅರಗ ಜ್ಞಾನೇಂದ್ರ ಅವರು ಆರೋಗ್ಯ ಇಲಾಖೆ ವೈದ್ಯಾಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿಂದು ಹಿರಿಯ ಅಧಿಕಾರಿಗಳೊಂದಿಗೆ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು, ಸರ್ಕಾರದ ಮಾರ್ಗಸೂಚಿಯಂತೆ ಸಾರ್ವಜನಿಕ ಸ್ಥಳಗಳಲ್ಲಿ ಕಡ್ಡಾಯವಾಗಿ ಪ್ರತಿಯೊಬ್ಬರು ಮಾಸ್ಕ್ ಧರಿಸಬೇಕು, ಸಾಮಾಜಿಕ ಅಂತರ ಮತ್ತು ಶುಚಿತ್ವ ಪಾಲಿಸಬೇಕು ಎಂದರಲ್ಲದೇ, ಕೋವಿಡ್-19 ತಡೆಗಟ್ಟಲು ಜಿಲ್ಲಾಡಳಿತ ಸಿದ್ಧತೆ ಕೈಗೊಳ್ಳಬೇಕು ಮತ್ತು ಹೆಚ್ಚಿನ ಜನ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಮತ್ತು 60 ವರ್ಷ ಮೇಲ್ಪಟ್ಟವರಿಗೆ ಮುಂಜಾಗ್ರತಾ ಲಸಿಕೆಯನ್ನು ನೀಡಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು. ಜಿಲ್ಲಾಸ್ಪತ್ರೆಯ ಆವರಣದಲ್ಲಿರುವ ಜನತಾ ಬಜಾರ್ ಕೇಂದ್ರದಲ್ಲಿ ಇನ್ನೊಂದು ವಾರದೊಳಗಾಗಿ ಜನೌಷಧಿಗಳು ಲಭ್ಯವಿರುವಂತೆ ಕ್ರಮ ವಹಿಸಬೇಕು ಎಂದು ಆರೋಗ್ಯ ಮತ್ತು ಕುಟುಂಬ…

Read More

ತುಮಕೂರು: ಸಮಾಜದಲ್ಲಿ “ಪತ್ರಕರ್ತರೆಂದರೆ ಕೇವಲ ಟೀಕೆ ಮಾಡುವವರಲ್ಲ. ತಪ್ಪಾದಾಗ ಎಚ್ಚರಿಸಿ, ಒಳ್ಳೆಯ ಕೆಲಸ ಮಾಡಿದಾಗ ಬೆನ್ನು ತಟ್ಟುವ ನೇರ ಮತ್ತು ನಿಷ್ಠುರವಾದಿಗಳು” ಎಂದು ಪತ್ರಕರ್ತರನ್ನುದ್ದೇಶಿಸಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಹೇಳಿದ ಮಾತುಗಳಿವು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿದ ನಗರದ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಬುಧವಾರ ಏರ್ಪಡಿಸಿದ್ದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕಕ್ಕೆ ಆಯ್ಕೆಯಾಧ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು ಸುದ್ದಿ ಮಾಧ್ಯಮಗಳು ಸುದ್ದಿ ಬಿತ್ತರಿಸುವ ರಭಸದಲ್ಲಿ ವಸ್ತುಸ್ಥಿತಿಯನ್ನು ಮರೆಮಾಚಬಾರದು ಎಂದು ಕಿವಿ ಮಾತು ಹೇಳಿದರು. ಮೊದಲಿನಿಂದಲೂ ಪತ್ರಕರ್ತರೊಂದಿಗೆ ನಾನು ಉತ್ತಮ ಬಾಂಧವ್ಯವನ್ನು ಹೊಂದಿದ್ದೇನೆ. ಅಧಿಕಾರದಲ್ಲಿದ್ದಾಗ ಪತ್ರಕರ್ತರ ಅಭ್ಯುದಯಕ್ಕಾಗಿ ಸಾಕಷ್ಟು ಕೆಲಸ ಮಾಡಿದ್ದೇನೆಂಬ ಆತ್ಮತೃಪ್ತಿ, ಸಂತಸ ನನಗಿದೆ. ಸಂವಿಧಾನದ 4ನೇ ಅಂಗವಾದ ಪತ್ರಿಕಾ ರಂಗವು ಕೋವಿಡ್ ಸಂದರ್ಭದಲ್ಲಿ ಅತ್ಯಂತ ಕ್ರಿಯಾಶೀಲವಾಗಿ ಕೆಲಸ ಮಾಡಿರುವುದು ಶ್ಲಾಘನೀಯವಾದುದು. ಈ ಹಿನ್ನೆಲೆಯಲ್ಲಿ ಪತ್ರಕರ್ತರನ್ನು ಕೋವಿಡ್ ವಾರಿಯರ್‍ಗಳೆಂದು ಘೋಷಿಸಿ ಪತ್ರಿಕಾ ವಿತರಕರೂ ಸೇರಿದಂತೆ ಸುಮಾರು 25000ಕ್ಕೂ…

Read More

ತುಮಕೂರು ಗುಬ್ಬಿಯಲ್ಲಿ ಡಿಎಸ್‍ಎಸ್ ಮುಖಂಡ ನರಸಿಂಹಮೂರ್ತಿ ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತುಮಕೂರಿನ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಭೇಟಿ ನೀಡಿ ದಲಿತ ಮುಖಂಡ ನರಸಿಂಹಮೂರ್ತಿ ಅವರ ಶವ ವೀಕ್ಷಿಸಿದರು. ಇದರೊಂದಿಗೆ ಪರಿಶೀಲನೆ ನಡೆಸಿ ಪೆÇಲೀಸ್ ಅಧಿಕಾರಿಗಳಿಂದ ಮಾಹಿತಿಯನ್ನು ಪಡೆದರು. ಇದೇ ಸಂದರ್ಭದಲ್ಲಿ ತುಮಕೂರಿನ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ಹತ್ಯೆಯಾಗಿರುವ ಗುಬ್ಬಿ ದಲಿತ ಮುಖಂಡ ನರಸಿಂಹಮೂರ್ತಿ ಶವ ತಂದಿರುವ ಹಿನ್ನೆಲೆಯಲ್ಲಿ ನೂರಾರು ದಲಿತ ಸಂಘಟನೆಗಳ ಮುಖಂಡರುಗಳು ಸ್ಥಳದಲ್ಲಿ ಜಮಾಯಿಸಿದ್ದರು.

Read More

ತುಮಕೂರು: ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ ಹಿನ್ನೆಲೆಯಲ್ಲಿ ಜೆಡಿಎಸ್ ಗುಬ್ಬಿ ಶ್ರೀನಿವಾಸ್ ಮತ್ತು ಶ್ರೀನಿವಾಸ್ ಗೌಡರನ್ನು ಉಚ್ಚಾಟನೆ ಮಾಡಲು ಜೆಡಿಎಸ್‍ನಿಂದ ತೀರ್ಮಾನ ಮಾಡಲಾಗಿದೆ. ಈ ಸಂಬಂಧ ನಾಳೆಯೇ ಆದೇಶ ಹೊರಡಿಸುವುದಾಗಿ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಸ್ಪಷ್ಟನೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಪಕ್ಷದ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ, ಇಬ್ಬರನ್ನು ಅಮಾನತು ಮಾಡಲಾಗಿದೆ. ಕುಮಾರಸ್ವಾಮಿ ಅವರು ಬೆಂಗಳೂರಿನ ಹೊರಗೆ ಇದ್ದಾರೆ. ನಾಳೆ ಅವರ ಬಳಿ ಸಹಿ ಪಡೆದ ಬಳಿಕ ನಾಳೆ ಅಧಿಕೃತ ಆದೇಶ ಹೊರಡಿಸುತ್ತೇವೆ ಎಂದರು. ಇಬ್ಬರ ಸದಸ್ಯತ್ವ ರದ್ದು ಮಾಡಲು ಬುಧವಾರ ಸ್ಪೀಕರ್‍ಗೆ ದೂರು ಕೊಡುತ್ತೇವೆ. ಇಬ್ಬರು ಪಕ್ಷದ ವಿಪ್ ಉಲ್ಲಂಘನೆ ಮಾಡಿದ್ದಾರೆ. ಕಾಂಗ್ರೆಸ್-ಬಿಜೆಪಿ ಒಟ್ಟಾಗಿ ಅಡ್ಡ ಮತದಾನ ಮಾಡಿಸಿದ್ದಾರೆ. ಹೀಗಾಗಿ ಅನರ್ಹ ಮಾಡಿ ಎಂದು ಮನವಿ ಮಾಡುತ್ತೇವೆ. ಈಗ ಇರುವ ಸ್ಪೀಕರ್ ಸಂವಿಧಾನ ಬದ್ಧವಾಗಿ ಕೆಲಸ ಮಾಡುತ್ತಾರೆ ಎನ್ನುವ ನಂಬಿಕೆ ಇದೆ. ಒಂದು ವೇಳೆ ಸ್ಪೀಕರ್ ಸರಿಯಾಗಿ ನಿರ್ಣಯ ಮಾಡದೇ ಹೋದರೆ ಕೋರ್ಟ್ ಮೊರೆ ಹೋಗುತ್ತೇವೆ ಎಂದು ತಿಳಿಸಿದರು.…

Read More