Author: News Desk Benkiyabale

ತುಮಕೂರು: ಹಣ,ಅಂತಸ್ತಿನ ಬೆನ್ನಟ್ಟಿರುವ ನಾವು ಮೌಲ್ಯಾಧಾರಿತ ಜೀವನವನ್ನು ಮರೆತಿದ್ದೇವೆ, ಕನಕದ ದಾಸರಾಗುವ ಬದಲು ಕನಕದಾಸರಾಗೋಣ ಎಂದು ತುಮಕೂರು ವಿಶ್ವವಿದ್ಯಾನಿಲಯದ ವಿಜ್ಞಾನ ಕಾಲೇಜಿನ ಪ್ರಾಂಶುಪಾಲರಾದ ಡಾ. ಶ್ರೀನಿವಾಸ್ ಎಸ್ ಹೇಳಿದರು. ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಶನಿವಾರ ಶ್ರೀ ಕನಕದಾಸ ಜಯಂತಿಯನ್ನು ಆ ಚರಿಸಲಾಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಇವರು “ಕನಕದಾಸರ ವಿಚಾರಧಾರೆಗಳು ಅಪಾರ, ಅವರ ಕೀರ್ತನೆಗಳ ಉದ್ದೇಶ ಸಮಾಜದ ಅಂಕುಡೊAಕುಗಳನ್ನು ತಿದ್ದುವುದಾಗಿದೆ” ಎಂದರು. ಸ0ಪನ್ಮೂಲ ವ್ಯಕ್ತಿಗಳಾದ ಕನ್ನಡ ವಿಭಾಗದ ಸಹಪ್ರಾಧ್ಯಾಪಕ ಡಾ. ನಾಗಭೂಷಣ ಬಗ್ಗನಡು ಮಾತನಾಡಿ ಒಬ್ಬ ಸಾಮಾನ್ಯ ವ್ಯಕ್ತಿಯನ್ನು ಇಂದಿಗೂ ನೆನಪಿಸಿಕೊಳ್ಳಲು ಅವರು ಸಮಾಜಕ್ಕೆ ನೀಡಿದ ಸಂದೇಶಗಳೇ ಕಾರಣ, ಕನಕದಾಸರ ಕೀರ್ತನೆಗಳು ಸಾಮಾಜಿಕ ಶ್ರೇಣಿಕರಣವನ್ನು ದೇವರ ಮೂಲಕ ತಿದ್ದಿಸುವುದಾಗಿದೆ. ಇಲ್ಲಿ ಯಾರು ಶ್ರೇಷ್ಠರಲ್ಲ, ಕನಿಷ್ಠರು ಅಲ್ಲ. ಅಹಂ ಇಲ್ಲದ ಸರಳ ಜೀವನ ಒಳ್ಳೆಯದು ಎಂಬುದು ದಾಸರ ಒಳನೋಟವಾಗಿದೆ ಎಂದರು. ಕಾರ್ಯಕ್ರಮದಲ್ಲಿ ಮಾತನಾಡಿದ ಕಲಾ ಕಾಲೇಜಿನ ಪ್ರಾಂಶುಪಾಲರಾದ ಡಾ.ಜಿ ದಾಕ್ಷಾಯಿಣಿ, ಪ್ರತಿ ಬಾರಿಯೂ ಕನಕದಾಸರ ಜಯಂತಿಯನ್ನು ವಿಶ್ವವಿದ್ಯಾನಿಲಯ ಆಚರಿಸುತ್ತಿದೆ ಅದರ ಉದ್ದೇಶ ಏನು ಎಂಬುದನ್ನು ಚಿಂತಿಸುವ…

Read More

ಕೊರಟಗೆರೆ: ಪಟ್ಟಣ ಪಂಚಾಯಿತಿಯನ್ನ ಪುರಸಭೆಯಾಗಿ ಮೇಲ್ದರ್ಜೆಗೇರಿಸುವ ಸಂಬ0ಧ ಗುರುವಾರ ನೆಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಮಾಡಿ ಮಹತ್ವದ ಆದೇಶವನ್ನ ರಾಜ್ಯ ಸರ್ಕಾರ ಹೊರಡಿಸಿದೆ. ಸಾಕಷ್ಟು ವರ್ಷಗಳಿಂದ ನೆನಗುದಿಗೆ ಬಿದಿದ್ದ ಕೊರಟಗೆರೆ ಪಪಂ ಯನ್ನ ಪುರಸಭೆಗೆ ಮೇಲ್ದರ್ಜೆಗೇರಿಸುವ ಕನಸನ್ನ ಗೃಹ ಸಚಿವ ಹಾಗೂ ಕೊರಟಗೆರೆ ಶಾಸಕ ಡಾ.ಜಿ.ಪರಮೇಶ್ವರ ಅವರ ಈಡೇರಿಸಿ ಕೊರಟಗೆರೆ ಜನತೆಗೆ ಸಿಹಿ ಸುದ್ದಿ ನೀಡಿ, ಕೊಟ್ಟ ಮಾತನ್ನ ಉಳಿಸಿಕೊಂಡಿದ್ದು, ಇದರಿಂದ ಕೊರಟಗೆರೆ ಪಟ್ಟಣ ಇನ್ನಷ್ಟು ಅಭಿವೃದ್ಧಿ ಮಾಡಲು ಗೃಹ ಸಚಿವರು ಪಣ ತೊಟ್ಟಿದ್ದಾರೆ ಎಂದು ಪಪಂ ಸದಸ್ಯರು ಸಂತಸ ವ್ಯಕ್ತಪಡಿಸಿದ್ದಾರೆ. ಕೊರಟಗೆರೆ ಪಟ್ಟಣ ಪಂಚಾಯಿತಿಯ ಈಗಿನ ಸರ್ವ ಸದಸ್ಯರು ಸಾಕಷ್ಟು ವರ್ಷಗಳಿಂದ ಪುರಸಭೆಯನ್ನ ಮೇಲ್ದರ್ಜೆಗೆ ಏರಿಸುವಂತೆ ಬೇಡಿಕೆಯನ್ನ ಗೃಹ ಸಚಿವ ಮುಂದೆ ಇಡಲಾಗಿತ್ತು. ಪುರಸಭೆಯನ್ನಾಗಿ ಮಾಡಲು ಸಾಕಷ್ಟು ಮಾನದಂಡಗಳಿದ್ದು, ಅದಕ್ಕೆ ಪೂರಕವಾಗಿ ದಾಖಲೆಗಳನ್ನ ನೀಡುವಂತೆ ಕೊರಟಗೆರೆ ಪಪಂ ಅಧಿಕಾರಿಗಳಿಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸೂಚನೆಯನ್ನ ನೀಡಿದ್ದರು. ಅದರಂತೆ ಗುರುವಾರ ನಡೆದ ಸಚಿವ ಸಂಪುಟದಲ್ಲಿ ಕೊರಟಗೆರೆ ಪಪಂ ಯನ್ನ ಪುರಸಭೆಯನ್ನಾಗಿ…

Read More

ಹುಳಿಯಾರು: ಹುಳಿಯಾರು ಪಟ್ಟಣ ಪಂಚಾಯಿತಿಯಲ್ಲಿ ಕಾಮಗಾರಿಗಳನ್ನೇ ನಡೆಸದೆ ನಕಲಿ ಬಿಲ್‌ಗಳ ಮೂಲಕ ಲಕ್ಷಾಂತರ ರೂಪಾಯಿಗಳ ಸರ್ಕಾರಿ ಅನುದಾನವನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂಬ ಗಂಭೀರ ಆರೋಪಗಳು ಕೇಳಿ ಬಂದಿದ್ದು, ಇದು ಪಟ್ಟಣದಲ್ಲಿ ತೀವ್ರ ಸಂಚಲನ ಮೂಡಿಸಿದೆ. ಪಟ್ಟಣ ಪಂಚಾಯಿತಿಯ ಕೆಲವು ಸದಸ್ಯರೇ ಈ ಅಕ್ರಮಗಳ ಕುರಿತು ಸಿಡಿದೆದ್ದಿದ್ದು, ಕೂಡಲೇ ಲೋಕಾಯುಕ್ತ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ. ಅನಾರೋಗ್ಯದ ನೆಪದಲ್ಲಿ ಸಭೆ ಮುಂದೂಡಿಕೆ: ಸದಸ್ಯರ ಆಕ್ರೋಶ: ಸುಮಾರು ಒಂದು ವರ್ಷದ ಬಳಿಕ ಇಂದು ನಿಗದಿಯಾಗಿದ್ದ ಸಾಮಾನ್ಯ ಸಭೆಯನ್ನು ಪ.ಪಂ. ಅಧ್ಯಕ್ಷರು ಅನಾರೋಗ್ಯದ ನೆಪವೊಡ್ಡಿ ಮುಂದೂಡಿದ್ದಾರೆ. ಬೆಳಗ್ಗೆ ೭:೪೫ ಕ್ಕೆ ಮುಖ್ಯ ಅಧಿಕಾರಿಯವರು ಸಭೆ ಮುಂದೂಡಿಕೆಯ ಮೆಮೊ ಕಳುಹಿಸಿದ್ದಾರೆ. ಸಭೆಯಲ್ಲಿ ಜಮಾ ಖರ್ಚಿನ ಬಗ್ಗೆ ಲೆಕ್ಕ ಕೇಳಲು ದಾಖಲೆಗಳ ಸಮೇತ ಆಗಮಿಸಿದ್ದ ಸದಸ್ಯರು, ‘ಕೋರಂ’ ಇದ್ದರೂ ಬೇಕೆಂದೇ ಸಭೆ ಮುಂದೂಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮೀಟಿಂಗ್ ಮುಂದೂಡಿಕೆ ಆದೇಶಕ್ಕೆ ಬಂದಿರುವ ಸದಸ್ಯರ ಪೈಕಿ ಯಾರೊಬ್ಬರೂ ಸಹಿ ಹಾಕಿಲ್ಲ. ಆದ್ದರಿಂದ, ಕಾನೂನು ರೀತಿಯಲ್ಲಿ ಸಭೆ ನಡೆಸುವಂತೆ ಸದಸ್ಯರು ಪಟ್ಟು…

Read More

ತುಮಕೂರು: ನಗರದಲ್ಲಿ ತುಮಕೂರು ಸೆಂಟ್ರಲ್ ಮತ್ತು ತುಮಕೂರು ರೋಟರಿ ಈಸ್ಟ್ ವತಿಯಿಂದ ಅಂತಾರಾಷ್ಟಿçÃಯ ಕ್ಯಾನ್ಸರ್ ದಿನದ ಪ್ರಯುಕ್ತ ಕ್ಯಾನ್ಸರ್ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಜಾಗೃತಿ ಜಾಥಾ ನಡೆಸಲಾಯಿತು. ಈ ಕ್ಯಾನ್ಸರ್ ಜಾಗೃತಿ ಜಾಥಾದಲ್ಲಿ ಪಾಲ್ಗೊಂಡು ಮಾತನಾಡಿದ ರೋಟರಿ-೩೧೯೨ ಜಿಲ್ಲಾ ಕಾರ್ಯದರ್ಶಿ ಬಿಳಿಗೆರೆ ಶಿವಕುಮಾರ್ ಅವರು, ಭಾರತದಲ್ಲಿ ೯ ರಿಂದ ೧೪ ವರ್ಷದ ಹೆಣ್ಣು ಮಕ್ಕಳಲ್ಲಿ ಹೆಚ್ಚಾಗಿ ಗರ್ಭಕಂಠದ ಕ್ಯಾನ್ಸರ್ ಕಾಣಿಸಿಕೊಳ್ಳುತ್ತಿದೆ. ಈ ಬಗ್ಗೆ ಹೆಣ್ಣು ಮಕ್ಕಳು ಜಾಗೃತರಾಗಿ ಪರೀಕ್ಷಿಸಿಕೊಳ್ಳಬೇಕು ಎಂದು ಹೇಳಿದರು. ೯ ವರ್ಷದಿಂದ ೧೪ ವರ್ಷದ ಹೆಣ್ಣು ಮಕ್ಕಳಿಗೆ ಗರ್ಭಕಂಠದ ಕ್ಯಾನ್ಸರ್ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಈ ಅರಿವು ಜಾಥಾ ನಡೆಸಲಾಗುತ್ತಿದೆ. ಈ ಜಾಥಾ ಮೂಲಕ ಸಾರ್ವಜನಿಕರಿಗೂ ಸಹ ಕ್ಯಾನ್ಸರ್ ಬಗ್ಗೆ ಮಾಹಿತಿ ನೀಡಲಾಗುತ್ತಿದೆ ಎಂದರು. ಇತ್ತೀಚಿನ ದಿನಗಳಲ್ಲಿ ಹೆಣ್ಣು ಮಕ್ಕಳಲ್ಲಿ ಕಂಡು ಬರುತ್ತಿರುವ ಗರ್ಭಕಂಠದ ಕ್ಯಾನ್ಸರ್ ಬಗ್ಗೆ ಎಚ್ಚೆತ್ತುಕೊಳ್ಳುವ ಅಗತ್ಯವಿದೆ. ಈ ಕ್ಯಾನ್ಸರ್ ನಿವಾರಣೆಗೆ ವ್ಯಾಕ್ಸಿನೇಷನ್ ಸಹ ಬಂದಿದೆ ಎಂದು ತಿಳಿಸಿದರು. ರೋಟರಿ ಹಿಂದಿನ ಗೌರ್ನರ್…

Read More

ತುಮಕೂರು: ತುಮಕೂರು ಮತ್ತಷ್ಟು ಅಭಿವೃದ್ಧಿ ಆಗಬೇಕಿರುವ ಹಿನ್ನೆಲೆಯಲ್ಲಿ ಗ್ರೇಟರ್ ಬೆಂಗಳೂರು ಮಾದರಿಯಲ್ಲಿ ಗ್ರೇಟರ್ ತುಮಕೂರು ಘೋಷಿಸಬೇಕೆಂಬ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ: ಜಿ.ಪರಮೇಶ್ವರ ತಿಳಿಸಿದ್ದಾರೆ. ತುಮಕೂರು ನಗರದ ಜಿಲ್ಲಾಸ್ಪತ್ರೆ ಆವರಣದಲ್ಲಿ ಶುಕ್ರವಾರ ೩೦೦ ಹಾಸಿಗೆಗಳ ಜಿಲ್ಲಾಸ್ಪತ್ರೆ ನೂತನ ಕಟ್ಟಡದ ಶಂಕುಸ್ಥಾಪನೆ, ೧೦೦ ಹಾಸಿಗೆಗಳ ಕ್ಯಾನ್ಸರ್ ಆಸ್ಪತ್ರೆ, ೧೦೦ ಹಾಸಿಗೆಗಳುಳ್ಳ ತಾಯಿ ಮತ್ತು ಮಕ್ಕಳ ಆಸ್ಪತ್ರೆ, ನರ್ಸಿಂಗ್ ಕಾಲೇಜು, ಹಾಸ್ಟಲ್ ಕಟ್ಟಡಗಳ ಲೋಕಾರ್ಪಣೆ ಹಾಗೂ ತುಮಕೂರು ತಾಲ್ಲೂಕಿನ ಭೀಮಸಂದ್ರ ಕೆರೆಯಿಂದ ವಸಂತನರಸಾಪುರ ಕೈಗಾರಿಕಾ ಪ್ರದೇಶಕ್ಕೆ ೩೦ ಎಂ.ಎಲ್.ಡಿ. ತೃತೀಯ ಹಂತದ ಸಂಸ್ಕರಿಸಿದ ನೀರು ಪೂರೈಕೆ ಯೋಜನೆ ಉದ್ಘಾಟನೆ ಸೇರಿದಂತೆ ವಿವಿಧ ೬೪೫ ಕೋಟಿ ರೂ. ವೆಚ್ಚದ ಕಾಮಗಾರಿಗಳ ಉದ್ಘಾಟನೆ ಹಾಗೂ ಅಡಿಗಲ್ಲು ಕಾರ್ಯಕ್ರಮ ನೆರವೇರಿಸಿ ಅವರು ಮಾತನಾಡಿದರು. ತುಮಕೂರು ಜಿಲ್ಲೆಯಲ್ಲಿ ಮತ್ತಷ್ಟು ಅಭಿವೃದ್ಧಿ ಕಾರ್ಯಕ್ರಮಗಳು ಆಗಬೇಕಿದೆ. ಆಗುತ್ತಿವೆ. ಅಂತೆಯೇ ತುಮಕೂರು ನಗರದ ಅಭಿವೃದ್ಧಿಯೂ ಪೂರಕವಾಗಿ ಆಗಬೇಕಿದೆ. ಈ ಹಿನ್ನೆಲೆಯಲ್ಲಿ ಗ್ರೇಟರ್ ಬೆಂಗಳೂರು ಮಾದರಿಯಲ್ಲಿ ಗ್ರೇಟರ್…

Read More

ತುಮಕೂರು: ತುಮಕೂರು ವಿಶ್ವ ವಿದ್ಯಾನಿಲಯದ ನೂತನ ಕ್ಯಾಂಪಸ್ ಜ್ಞಾನ ಪ್ರವಾಹದ ಸಂಕೇತವಾಗಿದೆ ಎಂದು ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಬಣ್ಣಿಸಿದ್ದಾರೆ. ತುಮಕೂರು ಜಿಲ್ಲೆಯ ಬಿದರಕಟ್ಟೆಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ತುಮಕೂರು ವಿಶ್ವವಿದ್ಯಾಲಯದ ‘ಜ್ಞಾನಸಿರಿ ಕ್ಯಾಂಪಸ್ ಹಾಗೂ ವಿವಿಧ ಕಟ್ಟಡ’ಗಳನ್ನು ಶುಕ್ರವಾರ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು. “ಜ್ಞಾನಸಿರಿ” ಎಂಬ ಹೆಸರು ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಸಮಾಜವನ್ನು ಬೆಳಗಿಸುವ, ನಿರಂತರವಾಗಿ ಹರಿಯುವ ಜ್ಞಾನದ ಪ್ರವಾಹವನ್ನು ಸಂಕೇತಿಸುತ್ತದೆ. ಹೊಸ ಶೈಕ್ಷಣಿಕ ಕಟ್ಟಡ ಮತ್ತು ಕಲಾ ಕಟ್ಟಡವು ವಿಶ್ವವಿದ್ಯಾನಿಲಯದ ಅಭಿವೃದ್ಧಿಯಲ್ಲಿ ಮಹತ್ವದ ಮೈಲಿಗಲ್ಲಾಗಲಿದೆ. ಈ ಕಟ್ಟಡಗಳು ಕಲಿಕಾ ಸೌಲಭ್ಯಗಳನ್ನು ಹೆಚ್ಚಿಸುತ್ತವೆ ಮತ್ತು ಸಂಶೋಧನೆ, ನಾವೀನ್ಯತೆ ಮತ್ತು ಸೃಜನಶೀಲತೆಗೆ ಹೊಸ ದೃಷ್ಟಿಕೋನಗಳನ್ನು ತೆರೆಯುತ್ತವೆ ಎಂದರು. ಈ ನೂತನ ಕಟ್ಟಡಗಳು ಬೋಧನೆ, ತರಬೇತಿ, ಸಂಶೋಧನೆ ಮತ್ತು ನಾವೀನ್ಯತೆಗಳನ್ನು ಮತ್ತಷ್ಟು ಬಲಪಡಿಸುವ ಆಧುನಿಕ ಸೌಲಭ್ಯಗಳನ್ನು ಹೊಂದಿವೆ. ಇದು ವಿದ್ಯಾರ್ಥಿಗಳು ಮತ್ತು ಅಧ್ಯಾಪಕರಿಗೆ ಅತ್ಯುತ್ತಮ ಕಲಿಕಾ ವಾತಾವರಣವನ್ನು ಒದಗಿಸುತ್ತದೆ. ಈ ಕಟ್ಟಡಗಳು ಹೊಸ ಶಕ್ತಿ, ಹೊಸ ನಿರ್ದೇಶನ ಮತ್ತು ಹೊಸ ಸಾಧ್ಯತೆಗಳನ್ನು ಹುಟ್ಟುಹಾಕಲಿದೆ. ಪರೀಕ್ಷಾ…

Read More

ಹುಳಿಯಾರು: ಹುಳಿಯಾರು ಪಟ್ಟಣ ಪಂಚಾಯಿತಿಯ ಹಿಂದಿನ ಮುಖ್ಯಾಧಿಕಾರಿ ನಾಗಭೂಷಣ್ ಅವರು ವರ್ಗಾವಣೆಗೊಂಡು ಅಧಿಕಾರದಿಂದ ಬಿಡುಗಡೆಗೊಂಡ ನಂತರವೂ ಪಟ್ಟಣ ಪಂಚಾಯಿತಿಯ ಚೆಕ್‌ಗಳನ್ನು ಆನ್‌ಲೈನ್ ಮೂಲಕ ಡ್ರಾ ಮಾಡಿಸುವ ಮೂಲಕ ಅಧಿಕಾರ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಹಾಲಿ ಪ.ಪಂ. ಕೌನ್ಸಿಲರ್ ಅಬೂಬಕರ್ ಸಿದ್ದೀಕ್ ಅವರು ಗಂಭೀರವಾಗಿ ಆರೋಪಿಸಿದ್ದಾರೆ. ಈ ಸಂಬ0ಧ ಸಮಗ್ರ ತನಿಖೆಯಾಗಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಆರೋಪ: ಮಾಧ್ಯಮದ ಮುಂದೆ ದಾಖಲೆಗಳನ್ನು ಪ್ರದರ್ಶಿಸಿದ ಅಬೂಬಕರ್ ಸಿದ್ದೀಕ್ ಅವರು, ನಾಗಭೂಷಣ್ ಅವರು ಆಗಸ್ಟ್ ತಿಂಗಳಲ್ಲಿ ಹುಳಿಯಾರಿನಿಂದ ವರ್ಗಾವಣೆಗೊಂಡ ಬಳಿಕದ ಚಟುವಟಿಕೆಗಳನ್ನು ವಿವರಿಸಿದರು. ರಿಲೀವ್ ಮತ್ತು ಜಾಯಿನ್: ಮುಖ್ಯಾಧಿಕಾರಿಯಾಗಿದ್ದ ನಾಗಭೂಷಣ್ ಅವರು ಆಗಸ್ಟ್ ೧೨ ರಂದು ತುಮ ಕೂರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅಧಿಕಾರದಿಂದ ಬಿಡುಗ ಡೆಗೊಂಡಿದ್ದರು. ಅದಾದ ಬಳಿಕ ಆಗಸ್ಟ್ ೧೪ ರಂದು ಗಂಗಾವ ತಿಯಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಚೆಕ್ ಡ್ರಾ ೧ (ವರ್ಗಾವಣೆ ಬಳಿಕ): ಗಂಗಾವತಿಯಲ್ಲಿ ಕರ್ತವ್ಯಕ್ಕೆ ಹಾಜರಾದ ದಿನವೇ, ಅಂದರೆ ಆಗಸ್ಟ್ ೧೪ ರಂದು ಸಂಜೆ ೫ ಗಂಟೆ ೩೫ ನಿಮಿಷಕ್ಕೆ ಹುಳಿಯಾರು ಪ.ಪಂ.ನ…

Read More

ತುಮಕೂರು: ವಿರ್ದ್ಯಾಥಿ ಮತ್ತು ಶಿಕ್ಷಕರ ನಡುವೆ ಪರಸ್ಪರ ನಂಬಿಕೆ-ವಿಶ್ವಾಸ ಮುಖ್ಯ. ಆಗ ಮಾತ್ರ ಶೈಕ್ಷಣಿಕ ಸಾಧನೆಯ ಮೆಟ್ಟಿಲನ್ನು ಏರಲು ಸಾಧ್ಯ ಎಂದು ನಗರದ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಶ್ರೀ ವೀರೇಶಾನಂದ ಸರಸ್ವತಿ ಸ್ವಾಮೀಜಿ ಅವರು ಅಭಿಪ್ರಾಯಪಟ್ಟರು. ನಗರದ ಶ್ರೀ ಸಿದ್ಧಾರ್ಥ ಎಂಜನಿಯರಿAಗ್ ಕಾಲೇಜಿನ ಜಿಪಿ ನೆಕ್ಸೆಸ್ ಸಭಾಂಗಣದಲ್ಲಿ ಗರುವಾರದಂದು ಏರ್ಪಡಿಸಲಾಗಿದ್ದ ಎಂಸಿಎ, ಎಂಬಿಎ ಮತ್ತು ಎಂಟೆಕ್ ಪದವಿ ಕೋರ್ಸ್ಗಳ ಪ್ರಥಮ ವರ್ಷದ ತರಗತಿಗಳ ಉದ್ಗಾಟನಾ ಸಮಾರಂಭದಲ್ಲಿ ಸಾನಿಧ್ಯ ವಹಿಸಿ ಮಾತನಾಡಿದ ಅವರು, ನಿರಂತರ ಪರಿಶ್ರಮವು ವಿರ್ದ್ಯಾಥಿಗಳ ಜೀವನಕ್ಕೆ ಅಗತ್ಯ. ಸಮಾಜದಲ್ಲಿನ ಪ್ರತಿಯೋಬ್ಬ ವ್ಯಕ್ತಿಯೊಂದಿಗೆ ನಿಮ್ಮ ಸಂಪರ್ಕ ಇರಬೇಕು. ಅವರಿಂದ ಕಲಿತು ನಿಮ್ಮ ಜ್ಞಾನವನ್ನು ವೃದಿಸಿಕೊಳ್ಳಬೇಕು ಎಂದರು. ಸಾಮಾಜಿಕ ಸಮಸ್ಯೆಗಳಲ್ಲಿ ವಿಫಲ ಪ್ರಯತ್ನಗಳನ್ನು ಮೆಟ್ಟಿನಿಂತು ನಿರಂತರ ಕಲಿಕೆಯಡೆಗೆ ನಿಮ್ಮ ಮನಸನ್ನು ಸದೃಡಗೊಳಿಸಿಕೊಂಡು, ಪರಸ್ಪರ ನಂಬಿಕೆ ಮತ್ತು ವಿಶ್ವಾಸದಿಂದ ಜೀವನ ನಡೆಸಬೇಕು ಎಂದು ಹೇಳಿದ ಸ್ವಾಮೀಜಿ, ವಿರ್ದ್ಯಾಥಿ ಮತ್ತು ಶಿಕ್ಷಕರ ನಡುವೆ ಪರಸ್ಪರ ನಂಬಿಕೆ ಮತ್ತು ವಿಶ್ವಾಸ ಮುಖ್ಯ. ಆಗ ಮಾತ್ರ ಸಾಧನೆಯ…

Read More

ತುಮಕೂರು: ಜಿಲ್ಲಾ ಆಸ್ಪತ್ರೆಯನ್ನು ಪಿಪಿ ಮಾಧರಿಯಲ್ಲಿ ಖಾಸಗೀಕರಣ ಮಾಡುತ್ತಿರುವುದರ ವಿರುದ್ಧ ಇಂದು ಜಿಲ್ಲೆಯ ಪ್ರಗತಿಪರ ಮತ್ತು ದಲಿತ ಸಂಘಟನೆಗಳ ಒಕ್ಕೂಟ ಹಾಗೂ ಸಾರ್ವತ್ರಿಕ ಆರೋಗ್ಯ ಆಂದೋಲನ, ಸ್ಲಂ ಜನಾಂದೋಲನ ಕರ್ನಾಟಕ ಸಿಐಟಿಯು,ಎಐಎಂಎಸ್‌ಎಸ್, ಎಪಿಸಿಆರ್, ಬಹುಜನ ಸಮಾಜಪಾರ್ಟಿ, ತಮಟೆ ಕೂಲಿ ಕಾರ್ಮಿಕರ ಸಂಘಟನೆ ಪಾವಗಡ, ಸಫಾಯಿಕರ್ಮಚಾರಿಗಳ ಕಾವಲು ಸಮಿತಿ, ಪ್ರಾಂತರೈತ ಸಂಘ, ಸಾವಿತ್ರಿಬಾಯಿ ಪುಲೆ ಮಹಿಳಾ ಸಂಘಟನೆ, ಜನವಾದಿ ಮಹಿಳಾ ಸಂಘಟನೆ, ನೂರಾರು ಕಾರ್ಯಕರ್ತರು ಮತ್ತು ಪದಾಧಿಕಾರಿಗಳು ಪ್ರತಿಭಟನೆ ಮಾಡಿ, ಖಾಸಗೀಕರಣ ಮಾಡುವ ಕುತಂತ್ರವನ್ನು ನಿಲ್ಲಿಸಬೇಕೆಂದು ಆಗ್ರಹಿಸಿದರು. ಮುಖ್ಯಮಂತ್ರಿಗಳು ನವೆಂಬರ್ ೭ ರಂದು ಕ್ಯಾನ್ಸರ್ ಆಸ್ಪತ್ರೆ ಉದ್ಘಾಟನೆ ಜಿಲ್ಲಾಸ್ಪತ್ರೆಯನ್ನು ಉನ್ನತೀಕರಿಸುವ ಶಂಕುಸ್ಥಾಪನೆ ಹಾಗೂ ಮಡಿಕಲ್ ಕಾಲೇಜ್, ಘೋಷಣೆಗೆ ಬರುತ್ತಿದ್ದು ತುಮಕೂರು ಜಿಲ್ಲಾಸ್ಪತ್ರೆಯನ್ನು ಯಾವುದೇ ಕಾರಣಕ್ಕೂ ಖಾಸಗೀಕರಣ ಮಾಡಬಾರದು ಇದು ಬಡವರು ರೈತರು ಅಸಂಘಟಿತ ವಲಯದ ಮಹಿಳೆಯರು ಹೆಚ್ಚಾಗಿ ಆರೋಗ್ಯ ಸೇವೆಗಾಗಿ ಬಳಸಿಕೊಳ್ಳುತ್ತಿದ್ದು ಇದನ್ನು ಸರ್ಕಾರವೇ ನಡೆಸಬೇಕೆಂದು ಒತ್ತಾಯಿಸಲಾಯಿತು ಸಾರ್ವತ್ರಿಕ ಆರೋಗ್ಯ ನೀತಿಯನ್ನು ರಾಜ್ಯ ಸರ್ಕಾರ ರೂಪಿಸ ಬೇಕು ಸಿ.ಯತಿರಾಜ್, ಹಿರಿಯ ಪರಿಸರವಾದಿ ಸಿ.ಯತಿರಾಜು…

Read More

ತುಮಕೂರು: ವಿವಿಯ ಉದ್ಘಾಟನಾ ಕಾರ್ಯಕ್ರಮಕ್ಕೆ ವಿವಿ ಉಳಿಸಿ ಹೋರಾಟ ಸಮಿತಿಯ ಸಾಹಿತಿಗಳು, ಯುವಜನರು, ವಿದ್ಯಾರ್ಥಿ ಹಾಗೂ ದಲಿತ ನಾಯಕರುಗಳನ್ನು ಪರಿಗಣಿಸದೆ ಕಡೆಗಣಿಸಿ ರುವುದನ್ನು ಖಂಡಿಸಿ ಎಸ್‌ಎಫ್‌ಐ ಮತ್ತು ಡಿವೈಎಫ್‌ಐ ವತಿಯಿಂದ ನಗರದ ವಿವಿ ಕುಲಪತಿ ಕಚೇರಿ ಮುಂಭಾಗದಲ್ಲಿ ಗುರುವಾರ ಪ್ರತಿಭಟನೆ ನಡೆಸಲಾಯಿತು. ತುಮಕೂರು ವಿವಿ ಆರಂಭವಾದ ದಿನಗಳಿಂದಲೂ ವಿವಿ ಉಳಿಸಿ ಹೋರಾಟ, ಹಳೆಯ ಲಾಂಛನವನ್ನೇ ಮರುಸ್ಥಾಪಿಸಬೇಕು ಮತ್ತು ಶುಲ್ಕ ಹೆಚ್ಚಳ ವಿರೋಧಿಸಿ ನಿರಂತರ ಹೋರಾಟ ನಡೆಸುತ್ತಾ ಬಂದ ಸಾಹಿತಿ ಬರಗೂರು ರಾಮಚಂದ್ರಪ್ಪ, ಜಿಲ್ಲೆಯ ಪ್ರಗತಿಪರ ಚಿಂತಕರಾದ ಕೆ.ದೊರೈರಾಜ್, ನಿವೃತ್ತ ಪ್ರಾಂಶುಪಾಲ ಪ್ರೊ.ಶ್ರೀನಿವಾಸಯ್ಯ, ಸಾಹಿತಿಗಳಾದ ಕೆ.ಬಿ.ಸಿದ್ದಯ್ಯ, ಜಿ.ವಿ.ಆನಂದಮೂರ್ತಿ, ಚಿದಂಬರಯ್ಯ, ದಲಿತ ಸಂಘಟನೆ ನಾಯಕ ಕೊಟ್ಟ ಶಂಕರ್, ಡಿವೈಎಫ್‌ಐ ಮುಖಂಡ ಎಸ್.ರಾಘವೇಂದ್ರ, ಎಸ್‌ಎಫ್‌ಐ ಜಿಲ್ಲಾಧ್ಯಕ್ಷರಾಗಿದ್ದ ಈ.ಶಿವಣ್ಣ, ದಲಿತ ಮುಖಂಡ ಎ.ನರಸಿಂಹಮೂರ್ತಿ ಮೊದಲಾದವರು ವಿವಿ ಉಳಿವಿಗಾಗಿ ನಿರಂತರ ಹೋರಾಟ ನಡೆಸಿದ್ದರು. ಆದರೆ ವಿವಿಯ ಜ್ಞಾನಸಿರಿ ಕ್ಯಾಂಪಸ್ ಉದ್ಘಾಟನೆಗೆ ಹೋರಾಟ ಸಮಿತಿಯ ಎಲ್ಲಾ ನಾಯಕರನ್ನು ಕಡೆಗಣಿಸಿ ಏಕಪಕ್ಷೀಯವಾಗಿ ತಮಗೆ ಬೇಕಾಗಿರುವಂತಹ ಹೆಸರುಗಳನ್ನು ಮಾತ್ರ ಆಹ್ವಾನ ಪತ್ರಿಕೆಯಲ್ಲಿ ಮುದ್ರಿಸಿದ್ದಾರೆ…

Read More