ತುಮಕೂರು: ಮೇರು ಕವಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕøತ ಸಾಹಿತಿ ಕುವೆಂಪು ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಹಾಗೂ ಕುವೆಂಪು ಅವರ ನಾಡಗೀತೆಯನ್ನು ತಿರುಚಿರುವ ರೋಹಿತ್ ಚರ್ಕತೀರ್ಥ ಎಂಬ ವ್ಯಕ್ತಿಯನ್ನು ಬಂಧಿಸಿ, ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣಗೌಡ ಬಣದ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ, ಮನವಿ ಸಲ್ಲಿಸಿದರು. ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣಗೌಡ ಬಣದ ತುಮಕೂರು ಜಿಲ್ಲಾಧ್ಯಕ್ಷ ಕೆ.ಎನ್.ಮಂಜುನಾಥಗೌಡ ಅವರ ನೇತೃತ್ವದಲ್ಲಿ ಹಲವಾರು ಕಾರ್ಯಕರ್ತರು ಗುಂಚಿ ಚೌಕದಲ್ಲಿರುವ ಕರವೇ ಕಾರ್ಯಾಲಯದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ರೋಹಿತ ಚರ್ಕತೀರ್ಥನನ್ನು ಬಂಧಿಸಿ, ಗಡಿಪಾರು ಮಾಡಬೇಕು ಹಾಗು ಆತನನ್ನು ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯಿಂದ ವಜಾಗೊಳಿಸಬೇಕೆಂದು ಆಗ್ರಹಿಸಿದ ಮನವಿ ಪತ್ರವನ್ನು ಸಲ್ಲಿಸಿದರು. ಈ ವೇಳೆ ಮಾತನಾಡಿದ ಕೆ.ಎನ್.ಮಂಜುನಾಥಗೌಡ, ಕುವೆಂಪು ಈ ದೇಶ ಕಂಡ ನೆಲಮೂಲ ಸಂಸ್ಕøತಿಯ ಕವಿ. ತಮ್ಮ ಕವಿತೆ, ನಾಟಕ, ಕಾದಂಬರಿ, ಬರಹಗಳ ಮೂಲಕ ಇಡೀ ವಿಶ್ವಕ್ಕೆ ವಿಶ್ವಮಾನವ ಸಂದೇಶವನ್ನು ಸಾರಿದವರು.ಇಂತಹವರು ರಚಿಸಿರುವ ನಾಡಗೀತೆ ಜೈ…
Author: News Desk Benkiyabale
ತುಮಕೂರು: ರೈತ ನಾಯಕ ರಾಕೇಶ್‍ಸಿಂಗ್ ಟಿಕಾಯತ್ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿ, ಕರ್ನಾಟಕದ ಮುಖ್ಯಮಂತ್ರಿಗಳು ಹಾಗೂ ಗೃಹಮಂತ್ರಿಗಳು ರೈತರ ಕ್ಷಮೆ ಕೇಳಬೇಕು ಹಾಗೂ ಕೃತ್ಯಕ್ಕೆ ಕಾರಣರಾದವರನ್ನು ಬಂಧಿಸಿ, ಕಠಿಣ ಶಿಕ್ಷೆಗೆ ಗುರಿಪಡಿಸಬೇಕೆಂದು ಆಗ್ರಹಿಸಿ ರೈತರು, ಪ್ರಗತಿಪರ ಚಿಂತಕರು,ಕರವೇ ಕಾರ್ಯಕರ್ತರು ಸಂಯುಕ್ತ ಹೋರಾಟ ಕರ್ನಾಟಕದ ಅಡಿಯಲ್ಲಿ ಇಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಗೌರವಾಧ್ಯಕ್ಷ ಹಾಗೂ ತುಮಕೂರು ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ನೇತ್ರತ್ವದ್ಲಲ್ಲಿ ರೈತರು, ಪ್ರಗತಿಪರ ಚಿಂತಕರು, ದಲಿತ ಸಂಘರ್ಷ ಸಮಿತಿ ಸದಸ್ಯರು, ಮಹಿಳಾ ಹೋರಾಟಗಾರರು, ಕನ್ನಡಪರ ಸಂಘಟನೆಗಳ ಸದಸ್ಯರು ಪಾಲ್ಗೊಂಡು, ಸರಕಾರದ ವಿರುದ್ದ, ಗೃಹಮಂತ್ರಿಗಳ ವಿರುದ್ದ ಘೋಷಣೆ ಕೂಗಿದರು. ಈ ವೇಳೆ ಮಾತನಾಡಿದ ರೈತ ಸಂಘದ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು, ಕರ್ನಾಟಕ ರಾಜ್ಯದ ಇತಿಹಾಸದಲ್ಲಿಯೇ ನಿನ್ನೇಯ ಘಟನೆ ತಲೆ ತಗ್ಗಿಸುವಂತಹ ವಿಚಾರವಾಗಿದೆ.ಅತಿಥಿ ದೇವೋಭವ ಎಂಬುದು ಕರ್ನಾಟಕದ ಸಂಸ್ಕøತಿ.ಇದಕ್ಕೆ ವಿರುದ್ದ ವೆಂಬಂತೆ ರಾಜ್ಯಕ್ಕೆ ಅತಿಥಿಯಾಗಿ ಬಂದ ರೈತ ನಾಯಕ ರಾಕೇಶ್‍ಸಿಂಗ್ ಟಿಕಾಯತ್ ಅವರ…
ಕೊರಟಗೆರೆ: ಅಕ್ರಮವಾಗಿ ಗೋವುಗಳ ಮಾಂಸ ಮಾರಾಟ ಮಾಡುತ್ತೀದ್ದ ಕಸಾಯಿ ಖಾನೆಯ ಅಂಗಡಿಯ ಮೇಲೆ ಸಿಪಿಐ ಸಿದ್ದರಾಮೇಶ್ವರ ನೇತೃತ್ವದ ಪೊಲೀಸರ ತಂಡ ದಾಳಿ ನಡೆಸಿ 4ಜನ ಆರೋಪಿಗಳ ಜೊತೆ 6ಜಾನುವಾರು ರಕ್ಷಣೆ ಮಾಡಿರುವ ಘಟನೆ ಭಾನುವಾರ ನಡೆದಿದೆ. ಕೊರಟಗೆರೆ ಪಟ್ಟಣದ 4 ಮತ್ತು 5ನೇ ವಾರ್ಡಿನ ಚಿಕ್ಕಮಸೀದಿ ಬಳಿಯಲ್ಲಿ ಅಕ್ರಮವಾಗಿ ಗೋವಿನ ಮಾಂಸ ಮಾರಾಟ ಮಾಡುತ್ತೀದ್ದ ವೇಳೆ ದಿಡೀರ್ ದಾಳಿ ನಡೆಸಿರುವ ಪೊಲೀಸರ ತಂಡ 4ಜನ ಆರೋಪಿಗಳ ಜೊತೆಯಲ್ಲಿ ಟಾಟಾಎಸಿ ಮತ್ತು ಹತ್ತಾರು ಪರಿಕರಗಳನ್ನು ವಶಕ್ಕೆ ಪಡೆದಿದ್ದಾರೆ. ಕುಣಿಗಲ್‍ನ ಗೌಗ್ಯಾನ್ ಪೌಂಡೇಷನ್ ಸ್ವಯಂ ಸೇವಕ ಮಂಜುನಾಥ ಎಂಬಾತನ ದೂರಿನ ಅನ್ವಯ ಕೊರಟಗೆರೆ ಸಿಪಿಐ ಸಿದ್ದರಾಮೇಶ್ವರ ನೇತೃತ್ವದ ಪೊಲೀಸರ ತಂಡ ದಿಡೀರ್ ನಡೆಸಿದೆ. ವಾಸದ ಮನೆ ಮತ್ತು ಅಂಗಡಿಯಲ್ಲಿ ಶೇಖರಣೆ ಮಾಡಲಾಗಿದ್ದ 1ಟನ್‍ಗೂ ಅಧಿಕ ಗೋಮಾಂಸವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಗೌಗ್ಯಾನ್ ಪೌಂಡೇಷನ್‍ನ ಸ್ವಯಂ ಸೇವಕ ಮಂಜುನಾಥ ಮಾತನಾಡಿ ಕೊರಟಗೆರೆ ಪಟ್ಟಣದಲ್ಲಿ ಅಕ್ರಮ ಕಸಾಯಿ ಖಾನೆಯಲ್ಲಿ ಎಗ್ಗಿಲ್ಲದೇ ಜಾನುವಾರುಗಳ ಹತ್ಯೆ ನಡೆಯುತ್ತೀದೆ. ಗೌಗ್ಯಾನ್ ಪೌಂಡೇಷನ್…
ತುಮಕೂರು: ರೈತರ ಮಧ್ಯೆ ಸಾಕಷ್ಟು ಸಮಸ್ಯೆಗಳಿವೆ. ಅದರ ಬಗ್ಗೆ ನಾವ್ಯಾರೂ ಕೂತು ಚರ್ಚೆ ಮಾಡುತ್ತಿಲ್ಲ. ರೈತರ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಿ ಸಮಸ್ಯೆ ಬಗೆಹರಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಬೇಕಾಗಿದೆ. ಆಗ ಮಾತ್ರ ಜನಪ್ರತಿನಿಧಿಗಳು ರಾಜಕೀಯವಾಗಿ ಯಶಸ್ವಿಯಾಗಲು ಸಾಧ್ಯ ಎಂದು ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿದರು. ಯಾವ ಪಕ್ಷದಲ್ಲಿ ರೈತರು ಇಂತಹ ಕೆಲಸ ಆಗಬೇಕು ಎಂದು ಹೇಳಿದಾಗ ಆ ಕೆಲಸ ಪ್ರಾಮಾಣಿಕವಾಗಿ ಆಗುತ್ತದೋ ಅಂತಹ ಪಕ್ಷ ಯಶಸ್ವಿಯಾಗುತ್ತದೆ ಎಂದು ತಿಳಿಸಿದರು. ನಗರದ ರಿಂಗ್ ರಸ್ತೆಯಲ್ಲಿರುವ ಆರ್.ಎಸ್. ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ರೈತ ಮೋರ್ಚಾ ರಾಜ್ಯ ಕಾರ್ಯಕಾರಿಣಿಯ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಪಕ್ಷದಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳುವುದು ಯಶಸ್ಸಿನ ಮೂಲ. ಇದರೊಂದಿಗೆ ಗ್ರಾಮೀಣರ ಬದುಕು, ಕೃಷಿ ಬದುಕನ್ನು ಅರ್ಥ ಮಾಡಿಕೊಳ್ಳಬೇಕು. ಸಣ್ಣ ಸಣ್ಣ ರೈತರ ಸಮಸ್ಯೆಗಳನ್ನು ಹಂತ ಹಂತವಾಗಿ ಬಗೆಹರಿಸಬೇಕು. ಈ ಸಂಬಂಧ ಸರ್ಕಾರಕ್ಕೂ ಆಗಿಂದಾಗ್ಗೆ ಸಲಹೆ ಕೊಡಬೇಕು. ಈ ಮೂಲಕ ರೈತರ ಸಮಸ್ಯೆಯನ್ನು ಒಂದೊಂದೇ ಈಡೇರಿಸಲು ಮುಂದಾದರೆ ಸರ್ಕಾರಕ್ಕೂ…
ತುಮಕೂರು: ರಾಷ್ಟ್ರಕವಿ ಕುವೆಂಪು ಅವರ ಬರೆದ ನಾಡಗೀತೆಯನ್ನು ತಿರುಚಿ ಅಪಮಾನ ಮಾಡಿದ ಹಾಗೂ ಒಕ್ಕಲಿಗ ಸಮುದಾಯದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ರೋಹಿತ್ ಚಕ್ರತೀರ್ಥ ಅವರನ್ನು ಸರಕಾರ ಕೂಡಲೇ ಬಂಧಿಸಬೇಕು ಹಾಗೂ ಆತನ ನೇತೃತ್ವದಲ್ಲಿ ನಡೆಯುತ್ತಿರುವ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯನ್ನು ಕೂಡಲೇ ವಜಾ ಮಾಡಬೇಕೆಂದು ಆಗ್ರಹಿಸಿ, ತೋಳಿಗೆ ಕಪ್ಪುಪಟ್ಟಿ ಧರಿಸಿ, ರಾಜ್ಯ ಒಕ್ಕಲಿಗರ ಸಂಘ, ತುಮಕೂರು ಜಿಲ್ಲಾ ಒಕ್ಕಲಿಗರ ಸಂಘದವತಿಯಿಂದ ಪ್ರತಿಭಟನೆ ನಡೆಸಲಾಯಿತು. ನಗರದ ಬಾಲಗಂಗಾಧರನಾಥಸ್ವಾಮೀಜಿ ವೃತ್ತದಲ್ಲಿ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಹನುಮಂತರಾಯಪ್ಪ ಅವರ ನೇತೃತ್ವದಲ್ಲಿ ನೂರಾರು ಒಕ್ಕಲಿಗ ಸಮುದಾಯುದ ಮುಖಂಡರು, ಸಾಹಿತಿಗಳು, ಪ್ರಗತಿಪರರು ಪಾಲ್ಗೊಂಡು ರೋಹಿತ್ ಚರ್ಕತೀರ್ಥ ವಿರುದ್ದ ಘೋಷಣೆ ಕೂಗಿದರು. ಈ ವೇಳೆ ಮಾತನಾಡಿದ ರಾಜ್ಯ ಒಕ್ಕಲಿಗ ಸಂಘದ ನಿರ್ದೇಶಕ ಹನುಮಂತರಾಯಪ್ಪ, ಇಡೀ ನಾಡೇ ಕುವೆಂಪು ಅವರನ್ನು ರಾಷ್ಟ್ರಕವಿ ಎಂದು ಒಪ್ಪಿಕೊಂಡಿದೆ.ಅವರು ನೀಡಿದ ವಿಶ್ವಮಾನವ ಸಂದೇಶವನ್ನು ಇಡೀ ಪ್ರಪಂಚವೇ ಗೌರವಿಸುತ್ತಿರುವ ಸಂದರ್ಭದಲ್ಲಿ ರೋಹಿತ ಚರ್ಕತೀರ್ಥ ಎಂಬು ವ್ಯಕ್ತಿ, ಕುವೆಂಪು ಬರೆದ ನಾಡಗೀತೆಯನ್ನು 2017ರಲ್ಲಿ ತಿರುಚಿ,ಕೆಟ್ಟ ಅರ್ಥ ಬರುವಂತೆ, ಒಂದು…
ತುಮಕೂರು: 60 ವರ್ಷಗಳ ಕಾಲ ದೇಶವನ್ನಾಳಿದ ಕಾಂಗ್ರೆಸ್ ಪಕ್ಷ ತನ್ನ ಆಡಳಿತದಲ್ಲಿ ಲೂಟಿ ಮಾಡಿ ದೇಶವನ್ನು ಮಾರಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ನಗರದ ರಿಂಗ್ ರಸ್ತೆಯಲ್ಲಿರುವ ಆರ್.ಎಸ್. ಕಲ್ಯಾಣ ಮಂಟಪದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಬಿಜೆಪಿ ರೈತಮೋರ್ಚಾ ರಾಜ್ಯ ಕಾರ್ಯಕಾರಿಣಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಸೋನಿಯಾ ಗಾಂಧಿ ಮತ್ತು ರಾಜ್ಯಾಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಇಂದು ಬೇಲ್ ಮೇಲೆ ಹೊರಗಿದ್ದಾರೆ. ಕಾಂಗ್ರೆಸ್ ಕಳ್ಳರ ಸಂಘವಿದ್ಧಂತೆ. ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದ ವೇಳೆ ಸುಮಾರು 4 ಲಕ್ಷ ಕೋಟಿ ರೂ.ಹಗರಣ ನಡೆದಿದೆ ಎಂದು ಆರೋಪಿಸಿದರು. ಕಳೆದ 8 ವರ್ಷಗಳ ಹಿಂದೆ 20 ಸಾವಿರ ಕೋಟಿ ರೂ ಇರುವ ರೈತರ ಬಜೆಟನ್ನು ಬಿಜೆಪಿ ಸರ್ಕಾರದ ಅಧಿಕಾರಕ್ಕೆ ಬಂದ ನಂತರ ಪ್ರಧಾನಿ ನರೇಂದ್ರ ಮೋದಿಯವರು 1.20 ಲಕ್ಷ ಕೋಟಿ ರೂ.ಗೆ ಏರಿಸಿ ರೈತರ ಪರವಾಗಿ ನಿಂತಿದ್ದಾರೆ. ಮೋದಿಯವರಿಗೆ ರೈತರ ಪರ ವಿಶೇಷ ಕಾಳಜಿಯನ್ನು ಹೊಂದಿರುವಂತಹ…
ತುಮಕೂರು: ಕೇಂದ್ರ ಮತ್ತು ರಾಜ್ಯ ಸರಕಾರದ ಜನವಿರೋಧಿ ನೀತಿಗಳನ್ನು ಖಂಡಿಸಿ ಇಂದು ಯುವಕಾಂಗ್ರೆಸ್ ಕಾರ್ಯಕರ್ತರು ಹಮ್ಮಿಕೊಂಡಿದ್ದ ಜನಾಕ್ರೋಶ ಪ್ರತಿಭಟನಾ ರ್ಯಾಲಿ ಅಂಗವಾಗಿ ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ್ದ ಯುವ ಕಾಂಗ್ರೆಸ್ ರಾಷ್ಟ್ರಾಧ್ಯಕ್ಷ ಶ್ರೀನಿವಾಸ್, ಎಂ.ಎಲ್.ಸಿ. ಆರ್.ರಾಜೇಂದ್ರ ಸೇರಿದಂತೆ ನೂರಾರು ಕಾರ್ಯಕರ್ತರು ಪೊಲೀಸರು ಬಂಧಿಸಿ, ನಂತರ ಬಿಡುಗಡೆ ಮಾಡಿದರು. ನಗರದ ಟೌನ್‍ಹಾಲ್ ವೃತ್ತದಲ್ಲಿ ಸಾರ್ವಜನಿಕ ಸಮಾರಂಭ ನಡೆಸಿ, ಕೇಂದ್ರ ಮತ್ತು ರಾಜ್ಯ ಸರಕಾರದ ಜನವಿರೋಧಿ ನೀತಿಗಳ ವಿರುದ್ದ ಘೋಷಣೆ ಕೂಗುತ್ತಾ ಬಿ.ಹೆಚ್.ರಸ್ತೆ, ಎಂ.ಜಿ.ರಸ್ತೆ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ರಸ್ತೆ ಮೂಲಕ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಸಮಾವೇಶಗೊಂಡ ಯುವ ಕಾಂಗ್ರೆಸ್ ಕಾರ್ಯಕರ್ತರು, ಪೊಲೀಸರು ಹಾಕಿದ್ದ ಬ್ಯಾರಿಕೇಡ್ ತಳ್ಳಿ ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಸಂದರ್ಭದಲ್ಲಿ ರಕ್ಷಣೆಗೆಂದು ನಿಯೋಜಿಸಲಾಗಿದ್ದ ಪೊಲೀಸರ ತಂಡ, ಅವರನ್ನು ತಡೆದು ಪೊಲೀಸ್ ವಾಹನಕ್ಕೆ ತುಂಬಲು ಮುಂದಾದಾಗ ಕೆಲ ಕಾಲ ಬೀಗುವಿನ ವಾತಾವರಣ ನಿರ್ಮಾಣವಾಗಿತ್ತು. ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ಹರಸಾಹಸ ಪಟ್ಟು ಪೊಲೀಸರು ವಾಹನಕ್ಕೆ ತುಂಬುವಲ್ಲಿ ಯಶಸ್ವಿಯಾದರು. ಇದಕ್ಕೂ ಮುನ್ನ ಟೌನ್‍ಹಾಲ್…
ತುಮಕೂರು: ಜಿಂಕೆ ಬದುಕಿಗಾಗಿ ಓಡುವ ರೀತಿಯಲ್ಲಿ ವಿದ್ಯಾರ್ಥಿಗಳು ಕಲಿಕೆಯಿಂದೆ ಓಡಬೇಕು. ಜ್ಞಾನವಿಲ್ಲದೆ ನೀವು ಕೌಶಲ್ಯಗಳನ್ನು ಅಧ್ಯಯನ ಮಾಡಲು ಸಾಧ್ಯವಿಲ್ಲ. ಜ್ಞಾನ ವೃತ್ತಿಗೆ ಅಗತ್ಯ. ಮುಂದಿನ ನಿಮ್ಮ ಭವಿಷ್ಯಕ್ಕಾಗಿ ನೀವು ಮುನ್ನುಗ್ಗುವುದನ್ನು ಕಲಿಯಬೇಕು ಎಂದು ಸಾಹೇ ವಿಶ್ವವಿದ್ಯಾಲಯದ ರಿಜಿಸ್ಟರ್ ಡಾ.ಎಂ.ಝಡ್.ಕುರಿಯನ್‍ಅವರು ಕರೆ ನೀಡಿದರು. ನಗರದ ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಪಿಜಿ ಸಭಾಂಗಣದಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಮೂನಿಕೇಷನ್ ಇಂಜಿನಿಯರಿಂಗ್ ವಿಭಾಗ ಏರ್ಪಡಿಸಿದ್ದ ‘ಸಾಮಥ್ರ್ಯ 2022’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಸ್ಪರ್ಧೆಗಳಲ್ಲಿ ಭಾಗವಹಿಸುವುದು ವಿದ್ಯಾರ್ಥಿಗಳಿಗೆ ಬಹಳ ಮುಖ್ಯ. ನಿಮಗೆ ಜ್ಞಾನವಿಲ್ಲದೆ ಕೌಶಲ್ಯಗಳನ್ನು ಅಧ್ಯಯನ ಮಾಡಲು ಸಾಧ್ಯವಿಲ್ಲ. ಸತತ ಸಂಶೋಧಕ ಗುಣದಿಂದ ಜ್ಞಾನ ಪಡೆದುಕೊಂಡಾಗ ವೃತ್ತಿಗೆ ಅಗತ್ಯವಾಗುತ್ತದೆ. ಅಲ್ಲದೆ ಮುಂದಿನ ನಿಮ್ಮ ಭವಿಷ್ಯಕ್ಕೆ ಸಹಕಾರಿಯಾಗುತ್ತದೆ ಎಂದು ಡಾ.ಕುರಿಯನ್ ಹೇಳಿದರು. ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಬೆಂಗಳೂರಿನ ಐಇಇಇ ಘಟಕದ ಸಂಸ್ಥಾಪಕ ಅಧ್ಯಕ್ಷರು ಹಾಗೂ ಮೈಸೂರಿನ ಗೀತ ಶಿಶು ಶಿಕ್ಷಣ ಸಂಘ ತಾಂತ್ರಿಕ ಕಾಲೇಜಿನ ಟೆಲಿ ಕಮ್ಮೂನಿಕೇಷನ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರು…
ಕೊರಟಗೆರೆ: ಕೆನರಾ ಬ್ಯಾಂಕಿನ ಕಚೇರಿ ಮತ್ತು ಆವರಣದ ಸಿಸಿಟಿವಿಯೇ ಮಾಯವಾಗಿದೆ. ಬ್ಯಾಂಕಿನ ಕಟ್ಟಡದ ಹಿಂಭಾಗದ ಕೌಪೌಂಡು ಮತ್ತು ಕಿಟಿಕಿಯು ಶಿಥಿಲವಾಗಿದೆ. ಬ್ಯಾಂಕಿನ ಎಟಿಎಂ ಕೇಂದ್ರಕ್ಕೆ ಕಾವಲುಗಾರನ ಭದ್ರತೆಯ ಜೊತೆ ಬಾಗಿಲು ಇಲ್ಲದಿರುವ ಪರಿಣಾಮ ರಾತ್ರೋರಾತ್ರಿ ಕಳ್ಳನೋರ್ವ ಎಟಿಎಂ ಕೇಂದ್ರದೊಳಗೆ ನುಗ್ಗಿ ಕಳ್ಳತನಕ್ಕೆ ಯತ್ನಿಸಿರುವ ಘಟನೆ ನಡೆದಿದೆ. ಕೊರಟಗೆರೆ ತಾಲೂಕು ಹೊಳವನಹಳ್ಳಿ ಹೋಬಳಿ ಅರಸಾಪುರ ಗ್ರಾಪಂ ವ್ಯಾಪ್ತಿಯ ಬೈರೇನಹಳ್ಳಿ ಗ್ರಾಮದಲ್ಲಿಯೇ ಈಗಾಗಲೇ ಪೇಟ್ರೊಲ್ ಬಂಕ್, ಮಧ್ಯದ ಅಂಗಡಿ, ಬೇಕರಿ, ಕುರಿಮೇಕೆ ಕಳ್ಳತನ, ಸರಣಿ ಚಿಲ್ಲರೇ ಅಂಗಡಿ ಸೇರಿ ಈಗಾಗಲೇ ಹತ್ತಾರು ಕಳ್ಳತನದ ಪ್ರಕರಣ ನಡೆದಿವೆ. ಈಗ ಕೆನರಾ ಬ್ಯಾಂಕಿನ ಎಟಿಎಂ ಸಿಸಿಟಿವಿ ಮತ್ತು ಕೇಬಲ್ ಮುರಿದು ಕಳ್ಳತನಕ್ಕೆ ಯತ್ನಿಸಿದ್ದಾರೆ. ಗಡಿಭಾಗದ ಬೈರೇನಹಳ್ಳಿ ಗ್ರಾಮದ ಕೆನರಾ ಬ್ಯಾಂಕಿನ ಕಟ್ಟಡವು ಶಿಥಿಲವಾಗಿದೆ. ಕಟ್ಟಡದ ಕೌಪೌಂಡು ಹೊಡೆದು ವರ್ಷಗಳು ಕಳೆದಿವೆ. ಬ್ಯಾಂಕಿನ ಕಿಟಕಿಗಳು ಮುರಿದು ಬಿದ್ದಿವೆ. ಇನ್ನೂ ಬ್ಯಾಂಕಿನ ಸುತ್ತಮುತ್ತಲು ಗಿಡಗಳು ಬೆಳೆದುನಿಂತಿವೆ. ಬ್ಯಾಂಕಿನ ಆವರಣದಲ್ಲಿ ಕಸಕಡ್ಡಿಯಿಂದ ದುರ್ವಾಸನೆ ಬೀಡುತ್ತೀದ್ದರೂ ಸಹ ಗ್ರಾಪಂ ಮತ್ತು ಬ್ಯಾಂಕಿನ ಅಧಿಕಾರಿವರ್ಗ…
ಚಿಕ್ಕನಾಯಕನಹಳ್ಳಿ: ಗ್ರಾಮೀಣ ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬನೆ ಹೊಂದಲು ಸರ್ಕಾರ ಬೀಜಧನವನ್ನು ಸ್ವಸಹಾಯ ಸಂಘಗಳಿಗೆ ಆರ್ಥಿಕ ಅನುದಾನ ನೀಡಲಾಗುತ್ತಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಹಾಗೂ ಸಣ್ಣನೀರಾವರಿ ಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದರು. ಅವರು ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ,ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಶಿಶುಅಭಿವೃದ್ದಿ ಯೋಜನೆ ಹಾಗೂ ಸಂಜೀವಿನ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಆಂದೋಲನದಡಿ ನಡೆದ ಸ್ವಸಹಾಯ ಸಂಘಗಳಿಗೆ ಆರ್ಥಿಕ ಅನುದಾನದ ಚೆಕ್‍ಗಳ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಸ್ವಸಹಾಯ ಸಂಘಗಳ ಚಟುವಟಿಕೆ ಅನುದಾನದ ಹಣವನ್ನು ಬಡ್ಡಿಗೆಬಿಡುವ ಪರಿಪಾಟವಾಗಿದೆ, ಇದರಿಂದ ಮಹಿಳೆಯೇ ಶೋಷಣೆಗೊಳಗಾಗುತ್ತಿದ್ದಾಳೆ, ಆದರೆ ಸರ್ಕಾರ ಗ್ರಾಮೀಣ ಮಹಿಳೆಯರು ಆರ್ಥಿಕ ಸ್ವಾವಲಂಭನೆಯಾಗುವ ನಿಟ್ಟಿನಲ್ಲಿ ಮುನ್ನಡೆಯಬೇಕೆಂಬ ಕಾರಣಕ್ಕೆ ಈ ಬೀಜಧನವನ್ನು ಸ್ವ ಸಹಾಯ ಸಂಘಗಳಿಗೆ ನೀಡಲಾಗುತ್ತಿದೆ. ಈ ಅನುದಾನದ ಜೊತೆಗೆ ನಿಮ್ಮ ಅಲ್ಪಮೊತ್ತದ ಬಂಡವಾಳ ತೊಡಗಿಸಿ ಸ್ಥಳೀಯವಾಗಿ ಸಿಗುವ ಕಚ್ಚ ಪದಾರ್ಥಗಳಿಂದ ಸಣ್ಣ,ಪುಟ್ಟ ಉದ್ಯಮಗಳನ್ನು ಮಾಡಿರೆಂದರು. ನಮ್ಮಲ್ಲಿ ಇಂತಹ ಸ್ಥಳೀಯ…











