Author: News Desk Benkiyabale

ತುಮಕೂರು : ರೋಗಿಗಳನ್ನು ಆರೈಕೆ ಮಾಡುವಾಗ ಅವರ ಸಮಸ್ಯೆಯನ್ನು ಗುರುತಿಸಿ, ಮಾನವೀಯ ನೆಲೆಗಟ್ಟಿನಲ್ಲಿ ಸೇವೆ ಮಾಡಬೇಕು, ದಾದಿಯರು ಉತ್ತಮ ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು ಹಾಗೂ ರೋಗಿಗಳ ಸೇವೆ ಮಾಡಲು ಸದಾ ಸಿದ್ದರಿರಬೇಕು. ಕೋವಿಡ್- 19 ಸಂದರ್ಭದಲ್ಲಿ ದಿನದ 24 ಗಂಟೆಯೂ ಕೆಲಸ ನಿರ್ವಹಿಸುತ್ತಿದ್ದ ನಿಜಕ್ಕೂ ಶ್ಲಾಘನೀಯವಾಗಿದೆ. ಅತ್ಯುತ್ತಮ ಕೆಲಸ ನಿರ್ವಹಿಸುತ್ತಿರುವ 5 ಜನ ನರ್ಸ್‍ರವರಿಗೆ 10 ಸಾವಿರ ರೂ ನಗದು ಮತ್ತು ಚಿನ್ನದ ಪದಕ ನೀಡ ಗೌರವಿಸಲಾಗುವುದು ಎಂದು ಶ್ರೀದೇವಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ.ಎಂ.ಆರ್.ಹುಲಿನಾಯ್ಕರ್‍ರವರು ತಿಳಿಸಿದರು. ನಗರದ ಶ್ರೀದೇವಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಆಸ್ಪತ್ರೆಯಲ್ಲಿ ವಿಶ್ವ ದಾದಿಯರ ದಿನಾಚರಣೆ ಯನ್ನು ಮೇ 12 ರಂದು ಗುರುವಾರ ಬೆಳಿಗ್ಗೆ 11 ಗಂಟೆಗೆ ಶ್ರೀದೇವಿ ಅಡಿಟೋರಿಯಂ ಸಭಾಂಗಣದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಶ್ರೀದೇವಿ ವೈದ್ಯಕೀಯ ನಿದೇಶಕರಾದ ಡಾ.ರಮಣ್ ಆರ್ ಹುಲಿನಾಯ್ಕರ್‍ರವರು ಮಾತನಾಡುತ್ತಾ ವೃತ್ತಿ ಜೀವನದಲ್ಲಿ ಸೇವಾ ಮನೋಭಾವದಿಂದ ಕಾರ್ಯನಿರ್ವಹಿಸುವಂತೆ ಕರೆ ನೀಡುತ್ತಾ. ನರ್ಸಿಂಗ್ ಕ್ಷೇತ್ರದಲ್ಲಿ ಶುಶ್ರೂಷಕ ರಾಗಲು ಅಗತ್ಯವಾದ ಗುಣಗಳನ್ನು ಬೆÀಳೆಸಿಕೊಳ್ಳಬೇಕು…

Read More

ತುಮಕೂರು: ಸಾರ್ವಜನಿಕ ಶಿಕ್ಷಣ ಇಲಾಖೆಯ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಸಂಬಂಧ ಮೇ 21 ಹಾಗೂ 22, 2022ರಂದು ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಟಿ)ಯು ಜಿಲ್ಲೆಯ 11 ಕೇಂದ್ರಗಳಲ್ಲಿ ನಡೆಯಲಿದ್ದು, ಪರೀಕ್ಷೆಯನ್ನು ಅತ್ಯಂತ ಗೌಪ್ಯತೆ, ಸುರಕ್ಷತೆ ಮತ್ತು ವ್ಯವಸ್ಥಿತವಾಗಿ ಯಾವುದೇ ಸಣ್ಣ ಲೋಪದೋಷಕ್ಕೂ ಆಸ್ಪದ ನೀಡದಂತೆ ನಿಯಮಾನುಸಾರ ನಡೆಸಲು ಸಕಲ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅವರು ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ನಡೆದ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದ ಅವರು, ಎಲ್ಲಾ ಕೇಂದ್ರಗಳ ಪ್ರತಿಯೊಂದು ಪರೀಕ್ಷಾ ಆವರಣ ಮತ್ತು ಕೊಠಡಿಗಳಲ್ಲೂ ಸಹ ಸಿಸಿ ಕ್ಯಾಮೆರಾ ಅಳವಡಿಸುವಂತೆ ಮತ್ತು ಎಲ್ಲಾ ಕೇಂದ್ರಗಳಲ್ಲೂ ಮೆಟಲ್ ಡಿಟೆಕ್ಟರ್ ಅಳವಡಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಶಿಕ್ಷಣ ಇಲಾಖೆಯ ಜಿಲ್ಲಾ ನೋಡಲ್ ಅಧಿಕಾರಿಗಳನ್ನು ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷಾ ಕಾರ್ಯದ ಉಸ್ತುವಾರಿಗಳನ್ನಾಗಿ ನೇಮಿಸುವಂತೆ ಮತ್ತು ಗ್ರೂಪ್-ಎ ಅಧಿಕಾರಿಗಳನ್ನು ಸಿಟ್ಟಿಂಗ್ ಸ್ಕ್ವಾಡ್‍ಗಳಾಗಿ ತೊಡಗಿಸಿಕೊಳ್ಳುವಂತೆ ತಿಳಿಸಿದರು.…

Read More

ತುಮಕೂರು: ಸಚಿವ ಸಂಪುಟಕ್ಕೆ ವಿಜಯೇಂದ್ರ ಸೇರ್ಪಡೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಸಿದ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ, ರಾಜ್ಯ ನಾಯಕರ ಅಪೇಕ್ಷೆ ಏನಿದೆ. ಸಮಯ ಸಂದರ್ಭ ನೋಡಿಕೊಂಡು ನಿರ್ಧಾರ ಮಾಡುತ್ತಾರೆ. ಪಕ್ಷ ಯಾವುದೇ ಜವಾಬ್ದಾರಿ ನೀಡಿದ್ದರೂ ನಿಭಾಯಿಸುತ್ತೀನಿ ಎಂದರು. ತುಮಕೂರಿನ ಕಾರ್ಯಕ್ರಮವೊಂದಕ್ಕೆ ಭಾಗಿಯಾಗಿ ಮಾತನಾಡಿದ ಅವರು, ಮುಂದಿನ ಬಾರಿ ತುಮಕೂರಿನಲ್ಲಿ ತಮ್ಮ ಸ್ಪರ್ಧೆ ವಿಚಾರಕ್ಕೆ ಸಂಬಂಧಪಟ್ಟಂತೆ ಎಲ್ಲದಕ್ಕೂ ಕಾಲವೇ ಉತ್ತರ ನೀಡುತ್ತದೆ. ಶಿರಾ ಮತ್ತು ಕೆ.ಆರ್ ಪೇಟೆ ಚುನಾವಣೆಯಲ್ಲಿ ಕೆಲಸ ಮಾಡಿದ್ದೆ ಕಾರ್ಯಕರ್ತರ ಜೊತೆ ಕೆಲಸ ಮಾಡಿದ್ದಕ್ಕೆ ಸಂತೋಷ ಸಿಕ್ಕಿದೆ. ಸ್ವಾಮೀಜಿ ಹುಟ್ಟುಹಬ್ಬದ ನೆಪದಲ್ಲಿ ರಾಜಕೀಯ ಮಾಡುವ ಪ್ರಮೇಯ ಉದ್ಭವ ಆಗಿಲ್ಲ ಎಂದರು. ಪಿಎಸ್‍ಐ ನೇಮಕಾತಿಯಲ್ಲಿ ಅಕ್ರಮದ ವಿಚಾರಕ್ಕೆ ಪ್ರತಿಕ್ರಿಯಿಸಿ ಕಾಂಗ್ರೆಸ್ ಪಕ್ಷದ ಮುಖಂಡರು ಮೂರ್ಖರಿದ್ದಾರೆ. 50 ರಿಂದ 60 ವರ್ಷಗಳ ಕಾಲ ಅಧಿಕಾರದಲ್ಲಿದ್ದ ಕಾಂಗ್ರೆಸ್ ಪಕ್ಷಕ್ಕೆ ವಿರೋಧ ಪಕ್ಷದ ಸ್ಥಾನದಲ್ಲಿ ಕೂರುವ ಮಾನಸಿಕತೆಯಲ್ಲಿ ಇಲ್ಲ. ಹೀಗಾಗಿ ಬಿಜೆಪಿ ಸರ್ಕಾರದ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡುತ್ತಾರೆ. ಚುನಾವಣೆ ಯಾವಾಗ ಬರುತ್ತೆ…

Read More

ಗುಬ್ಬಿ: ಬಗರ್ ಹುಕ್ಕುಂ ಸಾಗುವಳಿದಾರರ ಹೋರಾಟ ಸಮಿತಿಗಳು ಮತ್ತು ಕರ್ನಾಟಕ ಪ್ರಾಂತ ರೈತ ಸಂಘ ಜಿಲ್ಲಾ ಸಮಿತಿ ವತಿಯಿಂದ ಜಿಲ್ಲಾ ಮಟ್ಟದ ಭೂ ಸಮಾವೇಶವನ್ನು ಗುಬ್ಬಿ ತಾಲ್ಲೂಕಿನ ಚೇಳೂರು ಹೋಬಳಿ ಕೇಂದ್ರದಲ್ಲಿ ನಡೆಸಲಾಯಿತು. ಸಮಾವೇಶವನ್ನು ಉದ್ಘಾಟಿಸಿದ ಕೆ.ಪಿ.ಆರ್.ಎಸ್ ನ ರಾಜ್ಯ ಕಾರ್ಯದರ್ಶಿ ಯಶವಂತ್ ಮತನಾಡಿ ರೈತ ಹೋರಾಟಗಳನ್ನು ರಾಜ್ಯ ಸರ್ಕಾರ ಗುರುತಿಸಬೇಕು ಬರಿ ಬಾಯಿಮಾತಿನಿ ರೈತ ಪರ ಕಾಳಜಿ ಬಿಟ್ಟು ಬಗರ್ ಹುಕ್ಕುಂ ಸಾಗುವಳಿದಾರರಿಗೆ ಹಕ್ಕು ಪತ್ರ ನೀಡಲು ಒತ್ತಾಯಿಸಿದರು. ಪ್ರಸ್ತಾವಿಕ ಮತನಾಡಿದ ಜಿಲ್ಲಾ ಸಂಚಾಲಕ ಅಜ್ಜಪ್ಪ ಮತನಾಡಿ ಅರಣ್ಯ ಇಲಾಖೆಯ ಅಧಿಕಾರಿಗಳ ಮೂಲಕ ಸರ್ಕಾರ ಕಿರುಕುಳ ನೀಡುವದನ್ನು ನಿಲ್ಲಿಸಬೇಕು ಹಿಂದಿನ ಉಸ್ತುವಾರಿ ಸಚಿವರ ಬರವಸೆಯೆಂತೆ ರೈತ ಮತ್ತು ಅರಣ್ಯ ಇಲಾಖೆಯ ನಡುವೆ ಇರುವ ಭುವಿವಾದ ಪರಿಹಾರಕ್ಕೆ ಸರ್ವೆ ಮೂಲಕ ಪರಿಹಾರ ಮಾಡಬೇಕೆಂದರು. ಕೆ.ಪಿ.ಆರ್ ಎಸ್‍ನ ರಾಜ್ಯಧ್ಯಕ್ಷ ಜಿ.ಸಿ ಬಯ್ಯರೆಡ್ಡಿ ರವರು ಮತನಾಡಿ ಹಿಂದಿನ ಕಂಧಾಯ ಸಚಿವ ಕಾಗೋಡು ತಿಮ್ಮಪ್ಪನವರು ರೈತ ಹೊರಾಟ ಪರಿಗಣಿಸಿ ಸಾಗುವಳಿ ಪತ್ರಕ್ಕೆ ಅರ್ಜಿ ಸಲ್ಲಿಸಲು ಅವಕಾಶ…

Read More

ತುಮಕೂರು: ಮಕ್ಕಳಿಗೆ ಚಿಕ್ಕಂದಿನಲ್ಲಿಯೇ ಪರಿಸರ ಪ್ರಜ್ಞೆಯ ಜೊತೆಗೆ, ನಮ್ಮ ಸಂಸ್ಕøತಿ, ಸಾಂಸ್ಕøತಿಕ ಪ್ರಜ್ಞೆಯನ್ನು ಮೂಡಿಸುವುದರಿಂದ ಭವಿಷ್ಯದಲ್ಲಿ ಅವರು ಜವಾಬ್ದಾರಿಯುತ ಸತ್ಪ್ರಜೆಗಳಾಗಿ ರೂಪುಗೊಳ್ಳಲು ಅನುಕೂಲವಾಗುತ್ತದೆ ಎಂದು ಶಾಸಕ ಜಿ.ಬಿ.ಜೋತಿಗಣೇಶ್ ತಿಳಿಸಿದ್ದಾರೆ. ನಗರದ ಕನ್ನಡ ಭವನದಲ್ಲಿ ಮಕ್ಕಳಿಗಾಗಿ ಆಯೋಜಿಸಿದ್ದ ಕನ್ನಡ ಕಲರವ ಮಕ್ಕಳ ಬೇಸಿಗೆ ಶಿಬಿರದ ಮುಕ್ತಾಯ ಸಮಾರಂಭದಲ್ಲಿ ಶಿಬಿರದಲ್ಲಿ ಪಾಲ್ಗೊಂಡ ಮಕ್ಕಳಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡುತಿದ್ದ ಅವರು,ಇಂದು ಜನರಲ್ಲಿ ಪರಿಸರ ಪ್ರಜ್ಞೆ ಕಡಿಮೆಯಾಗುತ್ತಿರುವುದರ ಭಾಗವಾಗಿ ಪ್ರಾಕೃತಿಕ ವಿಕೋಪಗಳನ್ನು ಕಾಣುತ್ತಿದ್ದವೆ. ಇಂತಹ ಅವಘಡಗಳನ್ನು ತಡೆಗಟ್ಟಲು ಮಕ್ಕಳಿಗೆ ಚಿಕ್ಕಂದಿನದಲ್ಲಿಯೇ ಪರಿಸರ ಪ್ರಜ್ಞೆ ಬೆಳೆಸುವುದು ಸೂಕ್ತ ಎಂದರು. ಬೇಸಿಗೆ ಶಿಬಿರದಲ್ಲಿ ಮಕ್ಕಳಿಗೆ ವಿವಿಧ ಕಲಾ ಪ್ರಕಾರಗಳ ಪರಿಚಯದ ಜೊತೆಗೆ, ತುಮಕೂರು ಅಮಾನಿಕೆರೆಯಲ್ಲಿ ಪಕ್ಷಿಗಳ ವೀಕ್ಷಣೆಗೆ ಅವಕಾಶ ಕಲ್ಪಿಸಿರುವುದು ಒಳ್ಳೆಯ ಬೆಳವಣಿಗೆ,ಮಕ್ಕಳಿಗೆ ತಮ್ಮ ಸುತ್ತಮುತ್ತಲಿನ ಕೆರೆ,ಕಟ್ಟೆಗಳು,ಪಕ್ಷಿಗಳ ಪರಿಚಯವಾದರೆ, ಅವುಗಳೊಂದಿಗೆ ಅನುಸಂಧಾನ ನಡೆಸಲು ಸಹಕಾರಿಯಾಗುತ್ತವೆ.ಕಳೆದ ಎರಡು ವರ್ಷಗಳಿಂದ ಬೌತಿಕ ತರಗತಿಗಳಿಲ್ಲದೆ,ಸ್ನೇಹಿತರ ಒಡನಾಟವಿಲ್ಲದೆ ಇದ್ದ ಮಕ್ಕಳಿಗೆ ಈ ಬೇಸಿಗೆ ಶಿಬಿರ ಅತ್ಯಂತ ಉಪಯೋಗಕಾರಿಯಾಗಿದೆ.ಇದಕ್ಕಾಗಿ ಕಸಾಪ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಆಯೋಜಕರಿಗೆ…

Read More

ತುಮಕೂರು: ನಾವುಗಳು ಮೇಲ್ನೋಟಕ್ಕೆ ಅಂಬೇಡ್ಕರ್ ಅನುಯಾಯಿಗಳಾಗುವುದರಿಂದ ಸಮಾಜಕ್ಕೆ ಯಾವುದೇ ಪ್ರಯೋಜನವಿಲ್ಲ. ಅವರ ತತ್ವಗಳನ್ನು ಪಾಲಿಸಿದ್ದರೆ ಇಂದು ದೇಶದಲ್ಲಿ ಅಸ್ಪøಷ್ಯತೆ ಎಂಬುದೇ ಇರುತ್ತಿರಲಿಲ್ಲ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಡಾ.ಜಿ.ಪರಮೇಶ್ವರ್ ಅಭಿಪ್ರಾಯಪಟ್ಟಿದ್ದಾರೆ. ನಗರದ ಬಾಲಭವನದಲ್ಲಿ ತುಮಕೂರು ಜಿಲ್ಲಾ ಛಲವಾದಿ ಸಂಘಟನೆಗಳ ಒಕ್ಕೂಟದವತಿಯಿಂದ ಆಯೋಜಿಸಿದ್ದ ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 131ನೇ ಜನ್ಮಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತಿದ್ದ ಅವರು,ಅಂಬೇಡ್ಕರ್ ಅವರ ಸಿದ್ದಾಂತಗಳನ್ನು ನಾವು ಜೀವನದಲ್ಲಿ ಅಳವಡಿಸಿಕೊಂಡರೆ ಮಾತ್ರ ದೇಶದಲ್ಲಿ ಬದಲಾವಣೆ ಕಾಣಲು ಸಾಧ್ಯ ಎಂದರು. ನಾನು ತಿಳಿದಂತೆ ಪ್ರಪಂಚದ ಯಾವುದೇ ದೇಶದಲ್ಲಿ ಈ ರೀತಿಯ ಶ್ರೇಣಿಕೃತ ಜಾತಿ ವ್ಯವಸ್ಥೆ ಇಲ್ಲ.ಮೊದಲು ಕುಲಕಸುಬನ ಗಳಾಗಿದ್ದ ಸಮಾಜಗಳು ನಂತರ ಜಾತಿಗಳಾಗಿ ಪರಿವರ್ತನೆಯಾಗಿದ್ದು ವಿಪರ್ಯಾಸ.ಅದರಿಂದಾಗುವ ತೊಂದರೆಗಳು ಅಪಾರ. ಇಡೀ ವಿಶ್ವವೇ ಅಂಬೇಡ್ಕರ್ ಅವರ ವಿದ್ವತ್‍ಗೆ ಮಾರು ಹೋಗಿ,ವಿಶ್ವನಾಯಕ ಎಂದು ಕೋಡಾಡಿದರೂ ಸಹ ಭಾರತದಲ್ಲಿ ಮಾತ್ರ ಅಂಬೇಡ್ಕರ್ ಅವರನ್ನು ಇಂದಿಗೂ ಜಾತಿಯ ಹೆಸರಿನಲ್ಲಿಯೇ ಗುರುತಿಸಲಾಗುತ್ತಿದೆ.ಇದಕ್ಕಿಂತ ದೊಡ್ಡ ದುರಂತ ಮತ್ತೊಂದು ಇದೆಯೇ ಎಂದು ಡಾ.ಜಿ.ಪರಮೇಶ್ವರ್ ಪ್ರಶ್ನಿಸಿದರು. ಅಂಬೇಡ್ಕರ್ ಅವರು ಭಾರತದ…

Read More

ತುಮಕೂರು; ಮಲೇರಿಯಾ, ಡೆಂಗ್ಯೂ, ಚಿಕನ್‍ಗುನ್ಯ, ಮೆದುಳು ಜ್ವರದಂತಹ ರೋಗವಾಹಕ ಆಶ್ರಿತ ರೋಗಗಳ ಬಗ್ಗೆ ನಾವು ಈಗಾಗಲೇ ಸಾಕಷ್ಟು ಪಾಠ ಕಲಿತಿದ್ದೇವೆ. ಮಳೆಗಾಲ ಪ್ರಾರಂಭವಾಗಿರುವ ಹಿನ್ನೆಲೆಯಲ್ಲಿ ಮೇ ತಿಂಗಳಿನಿಂದ ಡಿಸೆಂಬರ್‍ವರೆಗೆ ಇಂತಹ ರೋಗಗಳು ಹರಡುವ ಸಾಧ್ಯತೆ ಇದ್ದು, ಪ್ರತಿಯೊಬ್ಬರೂ ಮುನ್ನೆಚ್ಚರಿಕೆ ವಹಿಸಿ, ತಮ್ಮ ಸುತ್ತ-ಮುತ್ತಲಿನ ಪರಿಸರದ ಸ್ವಚ್ಛತೆ ಬಗ್ಗೆ ಗಮನಹರಿಸಿ ರೋಗ ನಿಯಂತ್ರಣಕ್ಕೆ ಸಹಕರಿಸುವಂತೆ ಜಿಲ್ಲಾ ಮುಖ್ಯ ಕಾರ್ಯನಿವಾಹಕಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ಕರೆ ನೀಡಿದರು. ಜಿಲ್ಲಾ ಪಂಚಾಯತ್ ಮಿನಿ ಸಭಾಂಗಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿಗಳ ಕಚೇರಿ ವತಿಯಿಂದ “ರಾಷ್ಟ್ರೀಯ ಡೆಂಗ್ಯೂ ದಿನ”ದ ಪ್ರಯುಕ್ತ ನಡೆದ ‘ಜಿಲ್ಲಾ ಮಟ್ಟದ ಅಂತರ ಇಲಾಖಾ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು. ಕೋವಿಡ್-19ರಿಂದ ನಾವು ಅನೇಕ ಸಮಸ್ಯೆಗಳನ್ನು ಈಗಾಗಲೇ ಎದುರಿಸಿದ್ದೇವೆ. ಜೀವನ ಪೂರ್ತಿ ಮರೆಯದ ಪಾಠ ಕಲಿತಿದ್ದೇವೆ. ಆದುದರಿಂದ ಮಳೆಗಾಲ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ರೋಗವಾಹಕ ರೋಗಗಳು…

Read More

ತುಮಕೂರು ವಿಕೇಂದ್ರೀಕರಣ ವ್ಯವಸ್ಥೆಯಲ್ಲಿ ಕರ್ನಾಟಕ ರಾಜ್ಯವು ದೇಶದಲ್ಲಿಯೇ ಮುಂಚೂಣಿಯಲ್ಲಿದೆ. ಮಹಾತ್ಮಗಾಂಧೀಜಿ ಅವರ ಗ್ರಾಮ ಸ್ವರಾಜ್ ಕನಸನ್ನು ನನಸು ಮಾಡುವಲ್ಲಿ ಕರ್ನಾಟಕದಲ್ಲಿ ಬಹು ಹಿಂದಿನಿಂದಲೇ ಪ್ರಯತ್ನಗಳು ನಡೆದಿವೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ: ಕೆ.ವಿದ್ಯಾಕುಮಾರಿ ತಿಳಿಸಿದರು. ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ನಡೆದ ರಾಜ್ಯ ಪಂಚಾಯತ್ ರಾಜ್ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಸಂವಿಧಾನಕ್ಕೆ 73ನೇ ತಿದ್ದುಪಡಿ ಮಾಡಿ ದೇಶದಾದ್ಯಂತ ಮೂರು ಹಂತದ ವಿಕೇಂದ್ರಿಕರಣ ವ್ಯವಸ್ಥೆಯನ್ನು ಭಾರತ ಸರ್ಕಾರ ಶಾಸನಬದ್ದವಾಗಿ ಜಾರಿಗೊಳಿಸಿದ್ದು, ಈ ಕೀರ್ತಿಯು ಕರ್ನಾಟಕ ರಾಜ್ಯಕ್ಕೆ ಸಲ್ಲುತ್ತದೆ ಎಂದ ಅವರು 1993ರ ಮೇ 10 ರಂದು ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ ಅಧಿಕೃತವಾಗಿ ಆಸ್ತಿತ್ವಕ್ಕೆ ಬಂದ ಹಿನ್ನೆಲೆಯಲ್ಲಿ ರಾಜ್ಯ ಪಂಚಾಯತ್ ರಾಜ್ ದಿನವನ್ನು ಆಚರಿಸಲಾಗುತ್ತದೆ ಎಂದು ವಿವರಿಸಿದರು. ಸಂವಿಧಾನದ 73ನೇ ತಿದ್ದುಪಡಿಯನ್ವಯ 3 ಹಂತದ ಆಡಳಿತ ವ್ಯವಸ್ಥೆಗಳಾದ ಗ್ರಾಮಪಂಚಾಯತಿ, ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಆಸ್ತಿತ್ವಕ್ಕೆ ಬಂದಿದೆ. ಪಂಚಾಯತ್ ವಿಕೇಂದ್ರೀಕರಣದ ಮೂಲ ಉದ್ದೇಶಗಳಾದ ಮಹಿಳೆಯರ ಅಭಿವೃದ್ಧಿ, ಮಕ್ಕಳ ಹಕ್ಕುಗಳ ರಕ್ಷಣೆ,…

Read More

ತುಮಕೂರು: ವಿದ್ಯುತ್ ಕ್ಷೇತ್ರದ ಖಾಸಗೀಕರಣ ವಿರೋಧಿಸಿ, ರಾಜ್ಯ ಸರಕಾರದ ರೈತವಿರೋಧಿ ನೀತಿಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ಮೇ.16ರ ಸೋಮವಾರ ಬೆಳಗ್ಗೆ 11 ಗಂಟೆಗೆ ಬೆಸ್ಕಾಂ ಅಧೀಕ್ಷಕ ಇಂಜಿನಿಯರ್ ಕಚೇರಿ ಎದುರು ರೈತರ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಎ.ಗೋವಿಂದರಾಜು ತಿಳಿಸಿದ್ದಾರೆ. ಜನಚಳವಳಿ ಕೇಂದ್ರದಲ್ಲಿ ಆಯೋಜಸಿದ್ದ ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,ಕೇಂದ್ರ ಮತ್ತು ರಾಜ್ಯದಲ್ಲಿರುವ ಬಿಜೆಪಿ ಸರಕಾರ ವಿದ್ಯುತ್ ಕಾಯ್ದೆಗೆ ತಿದ್ದುಪಡಿ ತಂದು,ಸೇವಾ ಕ್ಷೇತ್ರವಾಗಿದ್ದ ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣ ಮಾಡಲು ಹೊರಟಿದೆ. ಇದರಿಂದ ಇದುವರೆಗೂ ಉಚಿತ ವಿದ್ಯುತ್ ಪಡೆಯುತ್ತಿದ್ದ ರೈತರ ಪಂಪ್‍ಸೆಟ್‍ಗಳಿಗೆ,ಭಾಗ್ಯ ಜೋತಿ,ಕುಟೀರ ಜೋತಿ ಯೋಜನೆಗಳ ಮನೆಗಳಿಗೆ ಸ್ಮಾರ್ಟ್ ಮೀಟರ್ ಅಳವಡಿಸುವ ಹುನ್ನಾರ ನಡೆದಿದೆ.ಇದನ್ನು ಎಲ್ಲಾ ರೈತರು, ಬಡವರು ವಿರೋಧಿಸಬೇಕಿದೆ. ಈ ಹಿನ್ನೇಲೆಯಲ್ಲಿ ಮೇ.16ರ ಬೃಹತ್ ಹೋರಾಟವನ್ನು ರೂಪಿಸಲಾಗಿದೆ ಎಂದರು. ರಾಜ್ಯ ಸರಕಾರ ರೈತರಿಗೆ ಪ್ರತಿದಿನ ಏಳು ಗಂಟೆ ನಿರಂತರವಾಗಿ ವಿದ್ಯುತ್ ಸರಬರಾಜು ಮಾಡುತ್ತಿದ್ದೇವೆ ಎಂದು ಹೇಳುತ್ತಿದೆ. ಆದರೆ ಇದು ಸುಳ್ಳು,ದಿನವೊಂದಕ್ಕೆ 2-3 ಗಂಟೆ ಮಾತ್ರ ವಿದ್ಯುತ್…

Read More

ಪಾವಗಡ: ತಾಲ್ಲೂಕಿನ ಗುಮ್ಮಘಟ್ಟ ಗ್ರಾಮದಲ್ಲಿ  ಮಳೆ ಹಾಗೂ ಗಾಳಿ ಆರ್ಭಟಕ್ಕೆ  ಮೂರು ಕುಟುಂಬಗಳ  ಮನೆಯ ಚಾವಣಿ ಶೀಟ್‍ಗಳು ಹಾರಿ ಹೋಗಿದ್ದು, ಮೂರು ಕುಟುಂಬಗಳು ನೇಕಾರ ವೃತ್ತಿಯನ್ನು ಅವಲಂಬಿಸಿದ್ದು, ಈಗ ಎರಡು ಲಕ್ಷಕ್ಕೂ ಅಧಿಕ ಪ್ರಮಾಣದ ನಷ್ಟ ಉಂಟಾಗಿದೆ. ದೊಮ್ಮತಮರಿ ಗ್ರಾ.ಪಂ.ವ್ಯಾಪ್ತಿಯ ಗುಮ್ಮಘಟ್ಟ ಗ್ರಾಮದ ಮುರುಳಿ, ಶ್ರೀನಿವಾಸ,  ಶಂಕರ ಅವರಿಗೆ ಸೇರಿದ ಮನೆ ಚಾವಣಿಯ ಸಿಮೆಂಟ್ ಸೀಟುಗಳು ಇದ್ದಕ್ಕಿದ್ದಂತೆ ಬೀಸಿದ ಗಾಳಿಗೆ ಹಾರಿ ಪುಡಿಪುಡಿಯಾಗಿವೆ. ನೇಕಾರರಾದ ಮುರುಳಿ ಮತ್ತು   ಶ್ರೀನಿವಾಸ್ ಅವರ ಮನೆಗಳ ಚಾವಣಿ ಶೀಟ್‍ಗಳು ವಿದ್ಯುತ್ ಮಗ್ಗದ ಮೇಲೆ ಬಿದ್ದಿದ್ದು, ಡಿಸೈನ್ ಕಾರ್ಡ್, ವಾರ್ಪು, ಪಾಗಡಿಗಳು, ರೇಷ್ಮೆ, ಕೋನ್ ಗಳು ಸಂಪೂರ್ಣ ಹಾಳಾಗಿದ್ದು, ಅಪಾರ ನಷ್ಟವಾಗಿದೆ. ಇದರಿಂದಾಗಿ ನೇಕಾರರ ಕುಟುಂಬ ಬೀದಿಗೆ ಬಿದ್ದಂತಾಗಿದೆ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿಜಯ್ ಕುಮಾರ್, ರೆವಿನ್ಯೂ ಸೆಕರೇಟರಿ ಶ್ರೀನಿವಾಸ್, ತಾಲ್ಲೂಕು  ಆರ್ ಎಂಸಿ ಮಾಜಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ಡಿ.ಎನ್. ವಿಶ್ವೇಶ್ವರಯ್ಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಸೂಕ್ತ ಪರಿಹಾರವನ್ನು ಘೋಷಿಸಬೇಕೆಂದು…

Read More