ತುಮಕೂರು: ತಾಂತ್ರಿಕತೆಯಲ್ಲಿ ಮತ್ತಷ್ಟು ಕ್ರಾಂತಿ ಮಾಡಲು ಯುವ ಪೀಳಿಗೆ ಸಿದ್ಧರಾಗಬೇಕಿದೆ ಎಂದು ಭಾರತ್ ಫೋರ್ಜ್ ಲಿ.,ನ ಛೇರ್ಮನ್ ಬಾಬಾ ಸಾಹೇಬ್ ನೀಲಕಂಠ ಕಲ್ಯಾಣಿ ಸಲಹೆ ನೀಡಿದರು. ಸಿದ್ಧಗಂಗಾ ತಾಂತ್ರಿಕ ಮಹಾವಿದ್ಯಾಲಯದಲ್ಲಿ ನಡೆದ 12ನೇ ಪದವಿ ಪ್ರದಾನ ಸಮಾರಂಭದಲ್ಲಿ ಪದವಿ ಪ್ರದಾನ ಮಾಡಿ ಮಾತನಾಡಿದ ಅವರು, ಭಾರತದಲ್ಲಿ ಓದಿದ ಸಾಕಷ್ಟು ಮಂದಿ ವಿದ್ಯಾರ್ಥಿಗಳು ವಿಶ್ವ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಭಾರತವು ತಾಂತ್ರಿಕತೆಯಲ್ಲಿ ವಿಶ್ವ ಮಟ್ಟದಲ್ಲಿ ಸಾಧನೆ ಮಾಡುತ್ತಿದೆ. ಈಗ ವ್ಯಾಸಂಗ ಮುಗಿಸಿ ಹೊರಬರುವ ವಿದ್ಯಾರ್ಥಿಗಳು ತಾಂತ್ರಿಕತೆಯಲ್ಲಿ ಮತ್ತಷ್ಟು ಕ್ರಾಂತಿ ಮಾಡಲು ಉತ್ಸುಕರಾಗಬೇಕಿದೆ ಎಂದು ಸಲಹೆ ನೀಡಿದರು. ನಮ್ಮ ದೇಶವು ಹಲವು ರಂಗಗಳಲ್ಲಿ ಅತ್ಯುನ್ನತ ಸಾಧನೆ ಮಾಡಿದೆ. ಇಲ್ಲಿನ ಉತ್ಪಾದನೆ ಮತ್ತು ಉತ್ಪನ್ನಗಳು ಅಮೆರಿಕಾ ಸೇರಿ ಹೊರ ರಾಷ್ಟ್ರಗಳಿಗೆ ರಫ್ತಾಗುತ್ತಿವೆ. ವಿಶ್ವದ ವಿವಿಧ ಕಂಪನಿಗಳಲ್ಲಿ ನಮ್ಮ ಭಾರತೀಯರು ಮುಖ್ಯ ಕಾರ್ಯನಿರ್ವಹಣಾಧಿಕಾರಿಯಂತಹ ಉನ್ನತ ಹುದ್ದೆಗಳನ್ನು ನಿರ್ವಹಿಸುತ್ತಿದ್ದಾರೆ. ತಾಂತ್ರಿಕತೆಯಲ್ಲಿ ಅತ್ಯಂತ ವೇಗ ಕಾಣುತ್ತಿದ್ದೇವೆ. ಇದರ ಜೊತೆಗೆ ಆರ್ಥಿಕವಾಗಿಯೂ ಪ್ರಗತಿ ಹೊಂದುತ್ತಿದ್ದೇವೆ. ಕಳೆದ 7ವರ್ಷಗಳಲ್ಲಿ ದೇಶದಲ್ಲಿ…
Author: News Desk Benkiyabale
ತುಮಕೂರು: ಕೇಂದ್ರ ಮತ್ತು ರಾಜ್ಯದಲ್ಲಿರುವ ಬಿಜೆಪಿ ಪಕ್ಷದ ಆಡಳಿತ, ಸ್ವಾಮಿ ವಿವೇಕಾನಂದರು ವಿಶ್ವಕುಟುಂಬ ಹಾಗೂ ಗಾಂಧೀಜಿಯವರ ರಾಮರಾಜ್ಯದ ಪರಿಕಲ್ಪನೆಯಲ್ಲಿ ಕೆಲಸ ಮಾಡುತಿದ್ದು, ದೀನದಯಾಳ್ ಉಪಾಧ್ಯಾಯ ಅವರ ಅಂತ್ಯೋದಯದ ಕನಸನ್ನು ಸಕಾರಗೊಳಿಸುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಸಂಸದ ನಳೀನಕುಮಾರ್ ಕಟೀಲ್ ಅಭಿಪ್ರಾಯಪಟ್ಟಿದ್ದಾರೆ. ನಗರದ ಗಾಜಿನಮನೆಯಲ್ಲಿ ಬಿಜೆಪಿ ವತಿಯಿಂದ ಆಯೋಜಿಸಿದ್ದ ಮಧುಗಿರಿ ಮತ್ತು ತುಮಕೂರು ಸಂಘಟನಾತ್ಮಕ ಜಿಲ್ಲೆಗಳ ವಿವಿಧ ಪ್ರಕೋಷ್ಠಗಳ ಮುಖಂಡರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡುತಿದ್ದ ಅವರು,ಕಾಂಗ್ರೆಸ್ ಪಕ್ಷದ ಒಲೈಕೆ ರಾಜಕಾರಣದಿಂದ ಇಂದು ದೇಶದ ಪ್ರತಿ ಮನೆ ಮನೆಯಲ್ಲಿಯೂ ರಾವಣರಿದ್ದು,ಅವರನ್ನು ಸರಿದಾರಿಗೆ ತರಲು ಗಾಂಧಿಜೀಯ ರಾಮರಾಜ್ಯದ ಕನಸನ್ನು ಸಾಕಾರಗೊಳಿಸುತ್ತಿದೆ ಎಂದರು. ಬಿಜೆಪಿ ಅಡಳಿತವನ್ನು ಸರ್ವವ್ಯಾಪ್ತಿ ಮತ್ತು ಸರ್ವಸ್ಪಷಿಯಾಗಿ ಮಾಡಲು ಬಿಜೆಪಿ ಪಕ್ಷದ ಹುಟ್ಟು ಹಾಕಿರುವ 24 ವಿವಿಧ ಪ್ರಕೋಷ್ಠಗಳ 32 ಸಾವಿರಕ್ಕು ಹೆಚ್ಚು ಕಾರ್ಯಕರ್ತರು ಇಂದಿನಿಂದ ಜಿಲ್ಲೆಯಿಂದ ತಾಲೂಕು, ತಾಲೂಕಿನಿಂದ ಹೋಬಳಿ, ಹೋಬಳಿಯಿಂದ ಗ್ರಾಮ, ಗ್ರಾಮದಿಂದ ಬೂತ್, ಬೂತ್‍ನಿಂದ ಮತದಾರ. ಹೀಗೆ ಎಲ್ಲಾ ಹಂತದಲ್ಲಿ ಪಕ್ಷದ ಸಾಧನೆಗಳು, ಜಾರಿಗೆ ತಂದ ಯೋಜನೆಗಳನ್ನು ಮತದಾರನಿಗೆ…
ತುಮಕೂರು: ಪಿಎಸ್‍ಐ ನೇಮಕಾತಿ ಪರೀಕ್ಷೆಯನ್ನು ಪ್ರಾಮಾಣಿಕವಾಗಿ ಬರೆದವರು ಮತ್ತೆ ಆತ್ಮವಿಶ್ವಾಸದಿಂದ ಪರೀಕ್ಷೆ ಬರೆಯಲಿ. ಈ ಮರು ಪರೀಕ್ಷೆಗೆ ವಯೋಮಿತಿಯನ್ನು ಮಾನದಂಡವಾಗಿ ಪರಿಗಣಿಸುತ್ತಿಲ್ಲ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ತಿಳಿಸಿದರು. ಪಿಎಸ್‍ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವುದರಿಂದ ಈ ಆಯ್ಕೆ ಪ್ರಕ್ರಿಯೆಯನ್ನು ರದ್ದುಪಡಿಸಿದ್ದೇವೆಯೇ ಹೊರತು ಪರೀಕ್ಷೆಯನ್ನಲ್ಲ. ಹಾಗಾಗಿ ಮತ್ತೆ ಮರು ಪರೀಕ್ಷೆ ನಡೆಸಲಾಗುತ್ತಿದೆ. ಅಭ್ಯರ್ಥಿಗಳು ಎದೆಗುಂದದೆ ಆತ್ಮವಿಶ್ವಾಸದಿಂದ ಪರೀಕ್ಷೆ ಬರೆಯಬೇಕು. ಪ್ರಾಮಾಣಿಕತೆ ಇದ್ದಲ್ಲಿ ದೇವರು ಒಳ್ಳೆಯದು ಮಾಡುತ್ತಾನೆ ಎಂದರು. ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಪರೀಕ್ಷೆ ಬರೆದಿರುವ 54 ಸಾವಿರ ಮಂದಿಗೆ ಮಾತ್ರ ಮರು ಪರೀಕ್ಷೆ ನಡೆಯಲಿದೆ. ಅವರು ಮಾತ್ರ ಪರೀಕ್ಷೆ ಬರೆಯಬಹುದು ಎಂದು ಅವರು ಹೇಳಿದರು. ಕಿಮ್ಮನೆ ರತ್ನಾಕರ ಅವರಂತಹ ಸಿಲ್ಲಿ ರಾಜಕಾರಣಿ ಹೇಳಿಕೆಗೆ ಪ್ರತಿಕ್ರಿಯಿಸುವುದಿಲ್ಲ. ಕಾಂಗ್ರೆಸ್ ಪಕ್ಷದವರಿಗೆ ರಾಜಕೀಯ ಲಾಭ ಪಡೆಯುವುದೇ ಉದ್ದೇಶವಾಗಿದೆ ಎಂದು ಟೀಕಿಸಿದರು. ಕಿಮ್ಮನೆ ರತ್ನಾಕರ ಸಚಿವರಾಗಿದ್ದ ಅವಧಿಯಲ್ಲಿ ನಡೆದ ಪಿಯುಸಿ ಪರೀಕ್ಷೆಯಲ್ಲೂ ಅಕ್ರಮವಾಗಿತ್ತು. ಆಗ ಅವರು ಏನು ಮಾಡಿದರು,…
ತುಮಕೂರು; ಕೆರೆಯಲ್ಲಿ ಈಜಲು ತೆರಳಿದ್ದ ನಾಲ್ವರು ಯುವಕರ ಪೈಕಿ ಓರ್ವ ಮುಳುಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ತುಮಕೂರು ಜಿಲ್ಲೆ ಮಧುಗಿರಿ ತಾಲ್ಲೂಕಿನ ಸಿದ್ದಾಪುರ ಕೆರೆಯಲ್ಲಿ ಘಟನೆ ಸಂಭವಿಸಿದ್ದು, ಆಸೀಫ್(17)ಮೃತ ದುರ್ದೈವಿ. ತುಮಕೂರಿನ ಗುಬ್ಬಿಗೇಟ್ ನಿವಾಸಿಯಾದ ಈತ ಸ್ನೇಹಿತರೊಂದಿಗೆ ಮಧುಗಿರಿ ಬಳಿಯಿರುವ ಸಿದ್ದಾಪುರದ ದರ್ಗಾಗೆ ಪೂಜೆ ಸಲ್ಲಿಸಲು ತೆರಳಿದ್ದನು. ಈ ವೇಳೆ ನಾಲ್ವರು ಸ್ನೇಹಿತರು ಈಜಲು ಸಿದ್ದಾಪುರ ಕೆರೆಗೆ ಇಳಿದಿದ್ದು, ಆಸೀಫ್ ನೀರಿನಲ್ಲಿ ಮುಳುಗಿ ಮೃತನಾಗಿದ್ದಾನೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಹಾಗೂ ಮಧುಗಿರಿ ಪೆÇಲೀಸರು ಭೇಟಿದ್ದು ಮೃತ ದೇಹವನ್ನು ಹೊರ ತೆಗೆದಿದ್ದಾರೆ. ಈ ಕುರಿತು ಮಧುಗಿರಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೆರೆಯಲ್ಲಿ ಯುವಕನೋರ್ವ ಮುಳುಗಿ ಸಾವನ್ನಪ್ಪಿದ್ದಾನೆಂಬ ವಿಷಯ ತಿಳಿಯುತ್ತಿದ್ದಂತೆ ನೂರಾರು ಮಂದಿ ಸ್ಥಳಕ್ಕೆ ಓಡೋಡಿ ಬಂದಿದ್ದು, ಜನರನ್ನು ನಿಯಂತ್ರಣ ಮಾಡಲು ಪೋಲೀಸರು ಹರಸಾಹಸ ಪಡಬೇಕಾಯಿತು. ಘಟನೆ ಸ್ಥಳದಲ್ಲಿ ಮೃತನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ತುಮಕೂರು : ಕೋವಿಡ್-19 ಪರಿಣಾಮದಿಂದ ಕಳೆದ 2 ವರ್ಷದಿಂದ ನಿರ್ದಿಷ್ಟವಾದ ರೀತಿಯಲ್ಲಿ ತರಗತಿಗಳ ನಡೆಯದೆ ಶೈಕ್ಷಣಿಕ ಚಟುವಟಿಕೆಗಳು ಕುಂಠಿತಗೊಂಡಿದ್ದವು. ಆದರೆ ಸದ್ಯದ ಸುಧಾರಿತ ಪರಿಸ್ಥಿತಿಯಲ್ಲಿ ಶೈಕ್ಷಣಿಕ ಚಟುವಟಿಕೆಗಳ ವೇಗ ಹೆಚ್ಚಿಸಿಕೊಳ್ಳುವ ಅಗತ್ಯವಿದ್ದು, ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಹೆಚ್ಚಿನ ಆದ್ಯತೆಯನ್ನು ನೀಡಬೇಕಾಗಿದೆ ಎಂದು ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಎಂ.ಎಸ್.ರವಿಪ್ರಕಾಶ್ ಕರೆ ನೀಡಿದರು. ನಗರದ ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಎನರ್ಜಿ ಕ್ಲಬ್ ಹಾಗೂ ಸ್ಮಾರ್ಟ್ ಸಿಟಿ ಲಿಮಿಟೆಡ್ ಸಂಯುಕ್ತಾಶ್ರಯದಲ್ಲಿ ಎಸ್‍ಎಸ್‍ಐಟಿ ಕ್ಯಾಂಪಸ್‍ನಲ್ಲಿ ಏರ್ಪಡಿಸಿದ್ದ ‘ಸ್ಮಾರ್ಟ್ ಸಿಟಿ ಕಾಮಗಾರಿಗಳಲ್ಲಿ ಕೇಬಲ್ ಅಳವಡಿಕೆ’ ವಿಷಯ ಕುರಿತ ತಾಂತ್ರಿಕ ಸಮ್ಮೇಳನವನ್ನು ಗಿಡಕ್ಕೆ ನೀರು ಹಾಕುವುದರ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ನವದೆಹಲಿಯ ಭಾರತೀಯ ತಾಂತ್ರಿಕ ಶಿಕ್ಷಣ ಪರಿಷತ್ತಿನ ಧನಸಹಾಯದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ನಡೆಸುತ್ತಿರುವ ಎನರ್ಜಿ ಕ್ಲಬ್ ಮೂಲಕ ನಡೆಯುತ್ತಿರುವ ಸಾಮಾಜಿಕ ಚಟುವಟಿಕೆಗಳ ಶೈಕ್ಷಣಿಕ ಪ್ರಗತಿಗೆ ಪೂರಕವಾಗಿವೆ. ಸದ್ಯದ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳ ಭವಿಷ್ಯದ ದೃಷ್ಠಿಯಿಂದ ಶೈಕ್ಷಣಿಕ ಮತ್ತು ಸಂಶೋಧನಾತ್ಮಕ ಚಟುವಟಿಕೆಗಳ ಕಡೆ ಗಮನಹರಿಸುವ…
ತುಮಕೂರು: ತುಮಕೂರು ತಾಲ್ಲೂಕಿನ ಕೆಲವು ಭಾಗಗಳಲ್ಲಿ ನಿನ್ನೆ ಸಂಜೆ ವಿಪರೀತ ಗಾಳಿ ಬೀಸಿ ಸಾಕಷ್ಟು ಮರಗಳು ನೆಲಕ್ಕುರುಳಿರುವ ಘಟನೆ ವರದಿಯಾಗಿದೆ. ತುಮಕೂರು ನಗರ ಸೇರಿದಂತೆ ತಾಲ್ಲೂಕಿನ ಹಲವೆಡೆ ಸಂಜೆ ಮಳೆ ಆರಂಭವಾಯಿತು. ಮಳೆಗಿಂತ ಗಾಳಿ ಹೆಚ್ಚು ಬೀಸಿದ ಪ್ರದೇಶಗಳಲ್ಲಿ ಮರಗಳು ಬಿದ್ದು ಹೋಗಿವೆ. ಕೆಲವೆಡೆ ರಸ್ತೆಗೆ ಅಡ್ಡಲಾಗಿ ರಸ್ತೆಯ ಬದಿಯಲ್ಲಿರುವ ಮರಗಳಲ್ಲಿ ಬಿದ್ದಿದ್ದು, ಅರಣ್ಯ ಸಿಬ್ಬಂದಿಗಳು, ಬೆಸ್ಕಾಂ ಸಿಬ್ಬಂದಿಗಳು ಹೊರತೆಗೆಯಲು ಹರಸಾಹಸ ಪಟ್ಟರು. ಮೈಲನಹಟ್ಟಿ ಮಾರನಹಟ್ಟಿ ಅದಲಾಪುರ ಸುತ್ತ ಮುತ್ತ ಬಾರಿ ಗಾಳಿ ಮಳೆ ಯಿಂದಾಗಿ ತುಂಬಾ ಬೆಲೆ ಬಾಳುವಅಡಿಕೆ ಹಾಗೂ ತೆಂಗಿನ ಮರಗಳು ಭೂಮಿಗೆ ಉರುಳಿವೆ. ಅಲ್ಲದೆ ಈ ಭಾಗದ ಸುತ್ತ ಮುತ್ತ ಸಾಕಷ್ಟು ಮನೆಗಳಿಗೆ ಹಾನಿಯಾಗಿದೆ. ಸಂಜೆ 4 ಗಂಟೆಯಿಂದ ಮಳೆ ಆರಂಭವಾಯಿತು. ಮಳೆಗಿಂತ ಗಾಳಿಯೇ ಅಧಿಕವಾಗಿತ್ತು. ಒಂದೊಂದು ತೋಟದಲ್ಲಿ ಗಾಳಿಯ ರಭಸಕ್ಕೆ 10 ರಿಂದ 20 ಮರಗಳ ತನಕ ಬಿದ್ದು ಹೋಗಿವೆ. ಅಡಿಕೆ ಹಾಗೂ ತೆಂಗಿನ ಮರಗಳು ರಭಸ ಗಾಳಿಗೆ ಬಿದ್ದು ಹೋಗಿದ್ದು ಮನೆಗಳಿಗೂ ಹಾನಿಯಾಗಿವೆ ಎಂದು…
ತುಮಕೂರು : ಉತ್ಕೃಷ್ಟ ತತ್ವಜ್ಞಾನಿ ಶಂಕರಾಚಾರ್ಯರು ತ್ಯಾಗ ಮತ್ತು ವೈರಾಗ್ಯದ ತತ್ವಕ್ಕೆ ಅನ್ವರ್ಥರಾಗಿದ್ದರು ಎಂದು ರಾಮಕೃಷ್ಣ ಆಶ್ರಮದ ಡಾ.ವೀರೇಶಾನಂದ ಸರಸ್ವತಿ ಸ್ವಾಮಿಜೀ ತಿಳಿಸಿದರು. ನಗರದ ಡಾ. ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ತುಮಕೂರು ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಜಿಲ್ಲಾ ಬ್ರಾಹ್ಮಣ ಮಹಾಸಭಾ, ಶ್ರೀ ಶಂಕರ ಸೇವಾ ಸಮಿತಿ ಇವರುಗಳ ಸಂಯುಕ್ತಾಶ್ರಯದಲ್ಲಿ ಜರುಗಿದ ಶ್ರೀ ಶಂಕರಾಚಾರ್ಯರ ಜಯಂತಿ ಆಚರಣೆಯಲ್ಲಿ ಪ್ರವಚನ ನೀಡುತ್ತಾ ಮಾತನಾಡಿದ ಅವರು ಶಂಕರಾಚಾರ್ಯರ ಬಗ್ಗೆ ಜಗತ್ತು ಕಣ್ಣು ತೆರೆದಿದೆ. ಅವರು ಶ್ರೇಷ್ಠ ಸಂತ, ದಾರ್ಶನಿಕ, ಪ್ರವಾದಿ ಎಂದು ಗೌರವಿಸಲ್ಪಟ್ಟಿದ್ದಾರೆ ಎಂದು ನುಡಿದರು. ಶಂಕರಾಚಾರ್ಯರು ಬದುಕಿದ್ದು ವರ್ಷಗಳಲ್ಲಿ ಕೇವಲ 32. ಆದರೆ ಬೇರೆಯವರು ವರ್ಷಗಳಲ್ಲಿ ಮಾಡುವ ಕೆಲಸವನ್ನು ಶಂಕರರು ವಾರಗಳಲ್ಲಿ ಮಾಡಿದವರು ಎಂಬ ವಿದೇಶಿ ಚಿಂತಕ ಥಾಮಸ್ ಬೇಕನ್ ಅವರ ಮಾತನ್ನು ಶ್ರೀಗಳು ಉಲ್ಲೇಖಿಸಿ ಮಾತನಾಡಿದರು. ವೇದೋಪನಿಷತ್ತು, ಬ್ರಹ್ಮಸೂತ್ರ, ಭಗವದ್ಗೀತೆಗಳ ಬಗ್ಗೆ ಅಧ್ಭುತವಾದ ಭಾಷ್ಯವನ್ನು ಬರೆದ ಶಂಕರಾಚಾರ್ಯರು ಕಪಾಲಿಕರು,…
ತುಮಕೂರು: ಪೋಷಕರು ಕೇವಲ ಮಕ್ಕಳ ಸಂತೋಷದ ಕಡೆ ಗಮನ ಹರಿಸಿದರೆ ಸಾಲದು ಅವರ ಪಾಲನೆ ಪೋಷಣೆ ಜೊತೆ ಜೊತೆಗೆ ಅವರ ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸಬೇಕು,ಇಂದು ಮಕ್ಕಳನ್ನು ವೈದ್ಯಕೀಯ ಪರೀಕ್ಷೆ ನಡೆಸಿದಾಗ ಅವರಲ್ಲಿ ಮೂರು ಅಂಶಗಳ ಸಮಸ್ಯೆಗಳು ಕಂಡು ಬಂದಿದೆ ಮೊದಲನೆಯದು ರಕ್ತಹೀನತೆ,ಎರಡನೆಯದು ಸ್ಥೂಲಕಾಯ,ಮೂರನೆಯದು ಹಲ್ಲಿನ ಸಮಸ್ಯೆ ಎಂದು ಹೇಳಿದರು. ಅವರು ತುಮಕೂರು ನಗರದ 26ನೇ ವಾರ್ಡಿನ ಡಾ||ಚಂದ್ರಶೇಖರ ಆಜಾದ್ ಉದ್ಯಾನವನದಲ್ಲಿ ಕ್ಲಬ್ 26 ಮತ್ತು ಕಿಡ್ಸ್ ಯೂನಿವರ್ಸ್ ಪ್ರೀಸ್ಕೂಲ್ ಸಹಭಾಗಿತ್ವದಲ್ಲಿ ಆಯೋಜಿಸಿದ್ದ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು. ಪಾಲಿಕೆಯ ಸದಸ್ಯರಾದ ಮಲ್ಲಿಕಾರ್ಜುನ್ ರವರ ಸಹಕಾರದಿಂದ ಕಳೆದ 15 ದಿನಗಳಿಂದ ಬೇಸಿಗೆ ಶಿಬಿರ ನಡೆಯುತ್ತಿರುವುದು ಸಂತೋಷದಾಯಕ,ಮಕ್ಕಳಿಗೆ ವಿದ್ಯೆಯ ಜೊತೆಗೆ ಉತ್ತಮ ಸಂಸ್ಕಾರವನ್ನು ಕಲಿಸಿದಾಗ ರಾಷ್ಟ್ರ ಪ್ರಗತಿಯಾಗುತ್ತದೆ ಇದರಿಂದ ಹೆತ್ತವರಿಗೂ,ದೇಶಕ್ಕೂ ಗೌರವ ಬರುತ್ತದೆ ಎಂದು ತಿಳಿಸಿದರು. ಮಧುಮೇಹ ತಜ್ಞ ಡಾ|| ರಾಜಶೇಖರ್ ಮಾತನಾಡಿ 26ನೇ ವಾರ್ಡಿನಲ್ಲಿ ಹೆಚ್ಚು ಅಭಿವೃದ್ಧಿ ಕಾರ್ಯಗಳು ಜರುಗುತ್ತಿವೆ,ಮಲ್ಲಿಕಾರ್ಜುನ್ ರವರು ಪಾಲಿಕೆಯ…
ತುಮಕೂರು: ಸಾಮಾಜಿಕ ಹೋರಾಟಗಾರ ಜೆಟ್ಟಿ ಅಗ್ರಹಾರ ನಾಗರಾಜು ಹೋರಾಟ ಇತ್ತೀಚಿನ ದಿನಗಳಲ್ಲಿ ಜಿಲ್ಲೆಯ ಪ್ರತಿ ಮನೆಯ ಮಾತಾಗುತ್ತಿದ್ದಾರೆ ತಿಂಗಳು ಕಾಲೆಳೆಯುವ ಒಳಗೆ ಒಬ್ಬ ಭ್ರಷ್ಟ ಅಧಿಕಾರಿಗಳ ಬೇಟೆ ತಪ್ಪುವುದಿಲ್ಲ. ಸರ್ಕಾರಿ ಇಲಾಖೆಗಳಿಗೆ ಸಂಬಂಧಿಸಿದ ಯಾವುದೇ ಕೆಲಸ ಪಡೆಯಬೇಕಿದ್ದರೆ ಅಧಿಕಾರಿಗಳಿಗೆ ಲಂಚ ನೀಡಲೇಬೇಕು ಇದ್ದ ಸಮಯದಲ್ಲಿ ಎಸಿಬಿ ಅಧಿಕಾರಿಗಳಿಂದ ಹೋರಾಟಗಾರ ಜೆಟ್ಟಿ ಅಗ್ರಹಾರ ನಾಗರಾಜು ಇವರುಗಳ ಹೋರಾಟದಿಂದ ಬಡ ರೈತರು ಮತ್ತು ಮಧ್ಯಮ ವರ್ಗದ ಸಾರ್ವಜನಿಕರು ಅಲ್ಪಪ್ರಮಾಣದ ನಿಟ್ಟುಸಿರು ಬಿಟ್ಟಂತೆ ಇದೆ ತಿಂಗಳಲ್ಲಿ ಒಬ್ಬ ಭ್ರಷ್ಟ ಅಧಿಕಾರಿಗಳು ಸಿಕ್ಕಿ ಜೈಲು ಪಾಲುದಾರ ಭ್ರಷ್ಟಾರ ಬಿಡದೆ ಅಧಿಕಾರಿಗಳು. ಸರಣಿ ಭ್ರಷ್ಟಾರ ಮುಂದುವರೆಸಿದ್ದಾರೆ ತುಮಕೂರು ತಾಲ್ಲೂಕು ಅರಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಖಾಲಿ ನಿವೇಶನದ ಈ ಸ್ವತ್ತು ಮಾಡಿಸಿ ಕೊಳ್ಳಲು ಅರುಣ್ ಕುಮಾರ್ ಅರ್ಜಿ ನೀಡಿದ್ದು ಪಂಚಾಯಿತಿ ಕಾರ್ಯದರ್ಶಿ ಶ್ರೀಧರ್ 7500 ಲಂಚಕ್ಕೆ ಬೇಡಿಕೆ ಇಟ್ಟು 3000 ಹಣ ಮುಂಗಡವಾಗಿ ಪಡೆದು ಉಳಿದ 4500 ಲಂಚ ಪಡೆಯುವಾಗ ರೆಡ್ ಹ್ಯಾಂಡಾಗಿ ಎಸಿಬಿ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾನೆ ಸಾರ್ವಜನಿಕ…
ತುಮಕೂರು : ಸರ್ಕಾರದ ಬಗ್ಗೆ ಜನಸಾಮಾನ್ಯರ ಮನದಲ್ಲಿ ಗೌರವ ಮೂಡಬೇಕಾದರೆ, ಜನಪರ ಕಲ್ಯಾಣ ಕಾರ್ಯಕ್ರಮಗಳು ತಳಮಟ್ಟದಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನವಾಗಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ದಕ್ಷತೆಯಿಂದ ಮತ್ತು ಬದ್ಧತೆಯಿಂದ ಕೆಲಸ ನಿರ್ವಹಿಸಬೇಕು ಎಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಅರಗ ಜ್ಞಾನೇಂದ್ರ ತಿಳಿಸಿದರು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕೋವಿಡ್ ಪರಿಸ್ಥಿತಿ, ಪೂರ್ವ ಮುಂಗಾರು ಮಳೆ, ಬಿತ್ತನೆ ಬೀಜ, ಗೊಬ್ಬರ ದಾಸ್ತಾನು, ಮತ್ತಿತರ ವಿಷಯಗಳ ಕುರಿತು ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಜಿ.ಪಂ. ಸಿಇಓ ಮತ್ತು ಜಿಲ್ಲಾ ಮಟ್ಟದ ಪ್ರಮುಖ ಇಲಾಖೆಗಳ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ಜಿಲ್ಲೆಯ ರೈತರಿಗೆ ತೊಂದರೆಯಾಗದಂತೆ ಸಕಾಲದಲ್ಲಿ ಬಿತ್ತನೆ ಬೀಜ, ಗೊಬ್ಬರ ಪೂರೈಕೆಯಾಗಬೇಕು ಮತ್ತು ಬಿತ್ತನೆ ಬೀಜ, ಗೊಬ್ಬರ ದಾಸ್ತಾನಿಗೆ ಒತ್ತುಕೊಡಬೇಕು ಎಂದರು. ಜಿಲ್ಲೆಯಲ್ಲಿ ಶೇಂಗಾ ಬಿತ್ತನೆ ಬೀಜದ ಕೊರತೆಯಾಗದಂತೆ ಸಾಕಾಗುವಷ್ಟು ಗುಣಮಟ್ಟದ ಬಿತ್ತನೆ ಬೀಜವನ್ನು ಸರಬರಾಜುದಾರರಿಂದ ಖರೀದಿಸಬೇಕು ಎಂದು ಕೃಷಿ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು. ಜಿಲ್ಲೆಯಲ್ಲಿ ಕೋವಿಡ್ ಪರಿಸ್ಥಿತಿ ಪರಿಶೀಲಿಸಿದ ಸಚಿವರು, ಜನಸಾಮಾನ್ಯರಿಗೆ…











