Author: News Desk Benkiyabale

ತುರುವೇಕೆರೆ: ಪದವೀಧರ ಮತದಾರರ ನೋಂದಣಿ ದಿನಾಂಕವನ್ನು ಚುನಾವಣಾ ಆಯೋಗ ವಿಸ್ತರಿಸಬೇಕೆಂದು ತಿಪಟೂರು ಸರ್ಕಾರಿ ಪ್ರ ಥಮ ದರ್ಜೆ ಕಾಲೇಜಿನ ಹಿರಿಯ ವಿದ್ಯಾರ್ಥಿಗಳ ಸಂಘದ ಮಾಜಿ ಅಧ್ಯಕ್ಷ ತೀ ರ್ಥಕುಮಾರ್ ಆಗ್ರಹಿಸಿದ್ದಾರೆ. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಕರ್ತ ರೊಂದಿಗೆ ಮಾತನಾಡಿದ ಅವರು ಪದವೀಧರ ಮತದಾರರನ್ನು ಮತದಾರ ಪಟ್ಟಿಗೆ ನೋಂದಾ ವಣೆ ಮಾಡಿಕೊಳ್ಳಲು ತಾಲೂಕಿನ ವಿವಿಧ ಇಲಾಖಾ ಗೆಜೆಟೆಡ್ ಆಫೀಸರ್ ಗಳನ್ನು ಈ ಹಿಂದೆ ನೇಮಕ ಮಾಡಲಾಗುತ್ತಿತ್ತು. ಆ ದರೆ ಈ ಬಾರಿ ತಹಸೀಲ್ದಾರ್ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ಮಾತ್ರ ನೇಮಿಸಿದೆ. ಇದರಿಂದ ಮತದಾರ ನೋಂದಣಿ ಪ್ರಕ್ರಿಯೆ ಕುಂಠಿತವಾಗಿದೆ. ತಹಸೀಲ್ದಾರ್ ಮತ್ತು ಕ್ಷೇತ್ರಶಿ ಕ್ಷಣಾಧಿಕಾರಿಗಳು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಲು ಆಗುತ್ತಿಲ್ಲ. ತಾಲೂಕಿನ ವಿವಿಧ ಗ್ರಾಮಗಳಿಗೆ ತೆರಳಲು ಆಗದೇ ಸಮಸ್ಯೆ ಆಗಿದೆ. ಅನಿವಾರ್ಯವಾಗಿ ಹೊರಗಡೆ ಹೋದಲ್ಲಿ ನೋಂದಣಿ ಮಾಡಿಸಲು ಬರುವ ಪದವೀಧರರಿಗೆ ತೊಂದರೆಯಾಗುತ್ತಿದೆ. ಈ ತೊಂದರೆಯಿAದಾಗಿ ತಿಪಟೂರು, ತುರುವೇಕೆರೆ. ಗುಬ್ಬಿ, ಚಿಕ್ಕನಾಯ ಕನಹಳ್ಳಿ, ಕುಣಿಗಲ್ ಸೇರಿದಂತೆ ಇನ್ನಿತರ ತಾಲೂಕುಗಳಲ್ಲಿ ನೋಂದಣಿ ಕಡಿಮೆ ಪ್ರಮಾಣದಲ್ಲಿ ಆಗಿದೆ ಎಂದು…

Read More

ತುಮಕೂರು: ಕನ್ನಡ ನೆಲ, ಜಲ, ನಾಡು, ಭಾಷೆ ಉಳಿವಿಗಾಗಿ ಪ್ರತಿಯೊಬ್ಬರೂ ಕಂಕಣ ಬದ್ಧರಾಗಬೇಕು ಎಂದು ಶಾಸಕ ಜಿ.ಬಿ. ಜ್ಯೋತಿ ಗಣೇಶ್ ಕರೆ ನೀಡಿದರು. ನಗರದ ಎಸ್.ಎಸ್.ಪುರಂ ಮುಖ್ಯರಸ್ತೆಯಲ್ಲಿರುವ ಹಳ್ಳಿ ಮರದ ಸರ್ಕಲ್‌ನಲ್ಲಿ ಮಯೂರ ವೇದಿಕೆ ವತಿಯಿಂದ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ನಾಡಧ್ವಜಾರೋಹಣ ನೆರವೇರಿಸಿ, ಕನ್ನಡಾಂಬೆ ಭುವನೇಶ್ವರಿ ತಾಯಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದ ಅವರು, ಪ್ರಸ್ತುತ ದಿನಗಳಲ್ಲಿ ಕನ್ನಡ ಭಾಷೆಯ ಅಭಿವೃದ್ಧಿಗೆ ಸರ್ಕಾರಗಳ ಜತೆಗೆ ನಾಡಿನಲ್ಲಿರುವ ಪ್ರತಿಯೊಬ್ಬರೂ ಮುಂದಾಗಬೇಕು ಎಂದರು. ಕನ್ನಡ ನೆಲ, ಜಲ, ಭಾಷೆಯ ಬಗ್ಗೆ ಪ್ರತಿಯೊಬ್ಬ ಕನ್ನಡಿಗರು ಅಭಿಮಾನ ಬೆಳೆಸಿಕೊಳ್ಳಬೇಕು. ಈ ಮೂಲಕ ನಮ್ಮ ನೆಲ, ಜಲ ಹಾಗೂ ಭಾಷೆಗೆ ಧಕ್ಕೆ ಬಂದಾಗ ಹೋರಾಟ ನಡೆಸುವ ಮನೋಭಾವ ಹೊಂದಬೇಕು ಎಂದು ಅವರು ಹೇಳಿದರು. ಕನ್ನಡ ರಾಜ್ಯೋತ್ಸವ ಆಚರಣೆ ಕೇವಲ ನವೆಂಬರ್ ತಿಂಗಳಿಗೆ ಮಾತ್ರ ಸೀಮಿತವಾಗಬಾರದು, ಬದಲಿಗೆ ನಿತ್ಯೋತ್ಸವವಾಗಬೇಕು ಎಂದರು. ಪ್ರತಿ ವರ್ಷವೂ ಮಯೂರ ವೇದಿಕೆ ವತಿಯಿಂದ ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದೆ. ಅದೇ ರೀತಿ ಈ ಬಾರಿಯೂ…

Read More

ತಿಪಟೂರು: ಯಾವುದೇ ಜಾತಿ ಧರ್ಮ ಬೇಧವಿಲ್ಲದೆ ವಿಚಾರಗಳ ಆಧಾರದಲ್ಲಿ ರಾಷ್ಟ್ರಸೇವೆಯೇ ಪರಮ ಗುರಿಯೊಂದಿಗೆರಾಷ್ಟ್ರಕ್ಕೆ ಆಪತ್ತು ಎದುರುದಾಗರಾಷ್ಟ್ರೀಯ ಸ್ವಯಂ ಸೇವಕ ಸಂಘವು ಗಣನೀಯ ರೀತಿಯಲ್ಲಿ ಸೇವೆ ಸಲ್ಲಿಸಿರುವುದು ಶ್ಲಾಘನೀಯ ಎಂದು ಗುರುಕುಲಾನಂದಶ್ರಮದ ಇಮ್ಮಡಿ ಕರಿಬಸವದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು. ನಗರದ ಗುರುಕುಲ ಕಲ್ಯಾಣ ಮಂಟಪದಲ್ಲಿ ಹಿಂದೂ ಸಮಾಜೋತ್ಸವ ಸಮಿತಿಯಿಂದ ಮನೆ ಮನೆ ಸಂಪರ್ಕ ಅಭಿಯಾನ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಸಂಘವು ಶತಮಾನೋತ್ಸವ ಆಚರಿಸುತ್ತಿರುವ ಸಂದರ್ಭದಲ್ಲಿ ಕಳೆದ ನೂರು ವರ್ಷಗಳಲ್ಲಿ ಹಲವಾರು ಸಮಸ್ಯೆ ಸಂಕಷ್ಟಗಳನ್ನು ಎದುರಿಸಿ ನಿಂತಿದ್ದು, ಸೇವಾ ಬಸ್ತಿ ಕಾರ್ಯಗಳಲ್ಲಿ ಲಕ್ಷಾಂತರ ಸೇವೆಗಳನ್ನು ಮಾಡಿ ಸಂಘದ ಪ್ರೇರಣೆಯಿಂದ ನಲವತ್ತೆದುಕ್ಕೂ ಹೆಚ್ಚು ಸಂಘಟನೆಗಳು ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿದ್ದು ಬೃಹತಾದಾಕಾರವಾಗಿ ಬೆಳೆದು ಇಂದು ವಿಶ್ವದ ಬೃಹತ್ ಮಾನವನ ಸಂಘಟನೆಯಾಗಿ ನಿಂತಿದೆ. ಈ ಸಂದರ್ಭದಲ್ಲಿ ಮನೆ ಮನೆಗೆ ಭೇಟಿ ನೀಡಿ ಪಂಚ ಪರಿವರ್ತನೆ ವಿಷಯಗಳ ಮೂಲಕರಾಷ್ಟ್ರದ ಜನರನ್ನು ಜಾಗೃತಗೊಳಿಸುವ ಕಾರ್ಯವನ್ನು ಇಡೀ ದೇಶಾದ್ಯಾಂತ ಸಾಮಾಜಿಕ ಸಾಮರಸ್ಯ, ಪರಿಸರ ಸಂರಕ್ಷಣೆ, ಕುಟುಂಬ ಪ್ರಬೋಧನ, ಸ್ವ ಆಧಾರಿತ ಜೀವನ, ನಾಗರೀಕ…

Read More

ತುರುವೇಕೆರೆ: ರೈತರ ಬಗ್ಗೆ ಕಾಳಜಿ ಇಲ್ಲದ ಕುರುಡು ರಾಜ್ಯ ಸರ್ಕಾರ ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಆರೋಪಿಸಿದರು. ಪಟ್ಟಣದ ಎಪಿಎಂಸಿ ಆವರಣದಲ್ಲಿ ನಂದಿನ ಕ್ಷೀರ ಭವನದಲ್ಲಿ ಪರಿವರ್ತನ ಇಕೋ ರೈತ ಉತ್ಪಾದಕರ ಕಂಪನಿ ಲಿಮಿಟೆಡ್ ವತಿಯಿಂದ ಕೃಷಿ ಆಶ್ರಮ ಕಚೇರಿ ಉದ್ಘಾಟನಾ ಸಮಾರಂಭ ಹಾಗೂ ಇ.ಸ್ಟಾಂಪಿ0ಗ್ ಮತ್ತು ರೈತ ಸೇವಾ ಕೇಂದ್ರ ಪ್ರಾರಂಭೋತ್ಸವ ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡಿದ ಅವರು ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿದೆ. ಹಲವು ಕಡೆಗಳಲ್ಲಿ ಮಳೆ ಹೆಚ್ಚಾಗಿ ನೆರೆ ಹಾವಳಿಯಿಂದ ರೈತರು ಬೆಳೆದ ಬೆಳೆಗಳು ಮಳೆ ನೀರಿನಲ್ಲಿ ಕೊಚ್ಚಿಹೋಗಿವೆ. ಆದರೆ ರಾಜ್ಯ ಸರ್ಕಾರ ರೈತರ ನೆರವಿಗೆ ದಾವಿಸಿಲ್ಲ ಪರಿಹಾರ ನೀಡುವಲ್ಲಿ ವಿಪಲವಾಗಿದೆ. ಕೂಡಲೇ ರಾಜ್ಯ ಸರ್ಕಾರ ರೈತರಿಗೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಸಿಗುವ ಸವಲತ್ತುಗಳನ್ನು ರೈತರಿಗೆ ಕೊಡಿಸಲು ರೈತ ಪರವಾದ ಸಂಘಗಳು ಸಹಕಾರಿಯಾಗಬೇಕಿದೆ. ಇಂತಹ ಸಂಘಗಳಿ0ದ ರೈತರಿಗೆ ಬೇಕಾದ ಸವಲತ್ತು ತರಬೇತಿಗಳನ್ನು ನೀಡಿ ರೈತರ ಜೀವನ ಸುದಾರಿಸುವಂತೆ ಮಾಡಬೇಕು ಎಂದು ಸಲಹೆ ನೀಡಿದರು.…

Read More

ತುಮಕೂರು: ದೇಶದಲ್ಲಿ ಭ್ರಷ್ಟಾಚಾರ ಮಕ್ತವಾದಾಗ ಎಲ್ಲ ಸಮಸ್ಯೆಗಳಿಗೂ ಪರಿಹಾರ ದೊರಕಲಿದೆ. ಆದ್ದರಿಂದ ಯುವಜನತೆ ಹೆಚ್ಚು ಶಿಕ್ಷಣವಂತರಾಗಿ ಭ್ರಷ್ಟಾಚಾರ ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರವಹಿಸಬೇಕಿದೆ ಎಂದು ಲೋಕಾಯುಕ್ತ ಎಸ್.ಪಿ ಲಕ್ಷಿ÷್ಮÃನಾರಾಯಣ ಕರೆ ನೀಡಿದರು. ನಗರದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ವಿಶ್ವಮಾನವ ಸಭಾಂಗಣದಲ್ಲಿ ಕರ್ನಾಟಕ ಲೋಕಾಯುಕ್ತ ಸಂಸ್ಥೆ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಹಯೋಗದಲ್ಲಿ ನಡೆದ ಭ್ರಷ್ಟಾಚಾರ ವಿರುದ್ಧ ಜಾಗೃತಿ ಅರಿವು ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಭ್ರಷ್ಟಾಚಾರದ ನಿರ್ಮೂಲನೆಗೆ ಯುವ ಸಮುದಾಯ ಕೈಜೋಡಿಸಬೇಕು, ಇವತ್ತು ಸಾಮಾಜಿಕ ಜಾಲತಾಣ ಸಕ್ರಿಯವಾಗಿದೆ. ಬಹಳ ಬೇಗ ಭ್ರಷ್ಟರನ್ನು ಮುನ್ನಲೆಗೆ ತರುವಂತಹ ವ್ಯವಸ್ಥೆ ನಮ್ಮ ಕಣ್ಮುಂದೆ ಇರುವಾಗ ಯಾವುದಕ್ಕೂ ಅಂಜದೇ ನಿರ್ಭಿತಿಯಿಂದ ನಮ್ಮ ಇಲಾಖೆಗೆ ಸಹಕಾರ ನೀಡಬೇಕು ಎಂದು ಹೇಳಿದರು. ಲೋಕಾಯುಕ್ತ ಡಿಸಿಪಿ ಡಾ.ಸಂತೋಷ ಕೆ.ಎಂ ಮಾತನಾಡಿ, ದೇಶದಲ್ಲಿ ಲೋಕಾಯುಕ್ತ ಸಂಸ್ಥೆ ಬೆಳೆದು ಬಂದ ಹಾದಿ ಹಾಗೂ ೧೯೮೪ರ ಲೋಕಾಯುಕ್ತ ಕಾಯ್ದೆಯ ಪ್ರಮುಖ ಅಂಶಗಳ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿದರು. ರಾಜ್ಯಶಾಸ್ತç ವಿಭಾಗದ ಮುಖ್ಯಸ್ಥರಾದ ಡಾ.ಮಂಜುನಾಥ್ ಆರ್ ಮಾತನಾಡಿ, ವಿದ್ಯಾರ್ಥಿಗಳು…

Read More

ತುಮಕೂರು: ಕರ್ನಾಟಕದ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಗುರು-ವಿರಕ್ತ ಮಠಾಧೀಶರೆಲ್ಲಾ ಒಗ್ಗೂಡಿ ಕರ್ನಾಟಕದ ಸಾಂಸ್ಕೃತಿಕ ನಾಯಕ, ವಿಶ್ವಗುರು ಬಸವಣ್ಣನವರ ಸಂದೇಶಗಳನ್ನು ಜನತೆಗೆ ಮುಟ್ಟಿಸುವ ೩೦ ದಿನಗಳ ಬಸವ ಸಂಸ್ಕೃತಿ ಅಭಿಯಾನ ಅತ್ಯಂತ ಯಶಸ್ವಿಯಾಯಿತು. ಆದರೆ ಈ ಅಭಿಯಾನದ ನೇತೃತ್ವವನ್ನು ವಹಿಸಿದ್ದ ಕೆಲವು ಮಠಾಧೀಶರ ವಿರುದ್ಧ ಕನ್ನೇರಿ ಮಠದ ಅಧ್ಯಕ್ಷರಾದ ಸಿದ್ದೇಶ್ವರ ಪೂಜ್ಯರು ಬಳಸಿದ ಪದಗಳ ಬಗ್ಗೆ ಬೆಟ್ಟದಹಳ್ಳಿ ಗವಿಮಠಾಧ್ಯಕ್ಷರಾದ ಶ್ರೀ ಚಂದ್ರಶೇಖರಸ್ವಾಮಿಗಳು ಅಸಮಧಾನ ವ್ಯಕ್ತಪಡಿಸಿದರು. ಅವರು ಬಸವಕೇಂದ್ರ, ಜಾಗತಿಕ ಲಿಂಗಾಯತ ಮಹಾಸಭಾ, ಜಯದೇವ ವಿದ್ಯಾರ್ಥಿನಿಲಯ ಟ್ರಸ್ಟ್ ನವರು, ಇತರ ಬಸವಪರ ಸಂಘಟನೆಗಳು ನಗರದ ಮುರುಘರಾಜೇಂದ್ರ ಸಭಾಂಗಣದಲ್ಲಿ ಏರ್ಪಡಿಸಿದ್ದ ಬಸವ ಸಂಸ್ಕೃತಿ ಅಭಿಯಾನದ ಕಾರ್ಯಕರ್ತರ ಅಭಿನಂದನಾ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು. ಹನ್ನೆರಡನೇ ಶತಮಾನದಲ್ಲಿ ಕರ್ನಾಟಕದಲ್ಲಿ ಶರಣ ಸಂಸ್ಕೃತಿ ಎಂಬ ಹೊಸ ಸಂಸ್ಕೃತಿಯನ್ನು ಹುಟ್ಟುಹಾಕಿದ ಬಸವಣ್ಣ ಎಂದಿಗೂ ಮತ್ತೊಬ್ಬರನ್ನು ಟೀಕಿಸದೆ ತನ್ನನ್ನು ತಾನು ಅರಿತು ಬದುಕನ್ನು ಸಾಗಿಸಿದರೆ ನಿರ್ಮಾಣ ಮಾಡಲು ಸಾಧ್ಯ ಎಂದು ಪ್ರತಿಪಾದಿಸಿ ಅಂದಿನ ಸಮಾಜದಲ್ಲಿ ನೂತನ ವಿಚಾರಗಳನ್ನು ಮುಂದಿಟ್ಟು ಜನಜಾಗೃತಿ…

Read More

ತುಮಕೂರು: ಹಳ್ಳಿಗಾಡಿನ ಬಡವರು, ರೈತಾಪಿ ವರ್ಗದವರಿಗೆ ಸಹಾಯ ಮಾಡುವ ಶಕ್ತಿ ಸಹಕಾರಿ ಆಂದೋಲನಕ್ಕೆ ಮಾತ್ರ ಇದೆ. ಇದನ್ನು ಅರಿತು ಸಹಕಾರಿ ರಂಗದಲ್ಲಿರುವ ಪ್ರತಿಯೊಬ್ಬರೂ ಕಾರ್ಯನಿರ್ವಹಿಸಬೇಕು ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷರೂ ಆದ ಶಾಸಕ ಕೆ.ಎನ್. ರಾಜಣ್ಣ ಕರೆ ನೀಡಿದರು. ನಗರದ ಅರ್ಬನ್ ರೆಸಾರ್ಟ್ನ ಸಭಾಂಗಣದಲ್ಲಿ ತುಮಕೂರು ತಾಲ್ಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಅಧ್ಯಕ್ಷರು ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಏರ್ಪಡಿಸಿದ್ದ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಹಕಾರಿ ಆಂದೋಲನ ಜನರ ಆಂದೋಲನ. ಸಹಕಾರಿ ಆಂದೋಲನದಲ್ಲಿ ಕೆಲಸ ಮಾಡುವುದು ಹೆಮ್ಮೆಯ ಸಂಗತಿ. ಗ್ರಾಮೀಣ ಭಾಗದ ಜನರ ಬದುಕು ಉತ್ತಮಗೊಳಿಸುವುದು ಸಹಕಾರಿಗಳ ಆದ್ಯ ಕರ್ತವ್ಯವಾಗಿದೆ ಎಂದರು. ಸದಾ ಜನರ ನಿಕಟ ಸಂಪರ್ಕ ಸಹಕಾರಿ ಆಂದೋಲನದಲ್ಲಿ ಕೆಲಸ ಮಾಡುವವರಿಗೆ ಮಾತ್ರ ಇರುತ್ತದೆ. ಬೇರೆ ಯಾವ ರಾಜಕಾರಣಿಗಳಿಗೂ ಜನರ ನಿಕಟ ಸಂಪರ್ಕ ಹೊಂದಲು ಸಾಧ್ಯವಿಲ್ಲ ಎಂದು ಅವರು ಹೇಳಿದರು. ಸಹಕಾರಿ ತತ್ವ ಸಿದ್ದಾಂತದ ಮೇಲೆ ನಾವೆಲ್ಲರೂ ನಡೆಯಬೇಕು. ಆಗ ಮಾತ್ರ ಸಹಕಾರಿ ರಂಗದಲ್ಲಿ ಉತ್ತಮವಾಗಿ…

Read More

 ಡಾ.ಜಿ.ಪರಮೇಶ್ವರ್ ರವರಿಗೆ ಮುಖ್ಯಮಂತ್ರಿ ಯಾಗುವ ಅವಕಾಶ ಬರಲಿದ್ದು ರಾಜ್ಯದ ಹಲವರ ಆಶಯದಂತೆ ಹಾಗೂ ತುಮಕೂರು ಜಿಲ್ಲೆಯ ಹಲವು ದಶಕಗಳ ಕನಸಿನಂತೆ ಅವರು ಮುಖ್ಯಮಂತ್ರಿಯಾಗಲಿ ಎನ್ನುವುದು ನಮ್ಮೆಲ್ಲರ ಹಲವು ವರ್ಷಗಳ ಬೇಡಿಕೆಯಾಗಿದೆ ಎಂದು ಸಿದ್ದರಬೆಟ್ಟದ ಶ್ರೀ ವೀರಭದ್ರಶಿವಾಚಾರ್ಯ ಸ್ವಾಮೀಜಿ ತಿಳಿಸಿದರು. ಅವರು ತಾಲೂಕಿನ ಹೊಳವನಹಳ್ಳಿ ಹೋಬಳಿಯ ಚಟ್ಟೆನಹಳ್ಳಿ ಗ್ರಾಮದಲ್ಲಿ ಶ್ರೀ ಗಂಗಮಾಳಮ್ಮ ಮತ್ತು ಮೈಲಾರಲಿಂಗೇಶ್ವರ ಸ್ವಾಮಿ ದೇವಾಲಯದ ಪ್ರಾಣ ಮತ್ತು ಕಳಸ ಪ್ರತಿಷ್ಠಾಪನೆ, ಹಾಗೂ ದೇವಾಲಯ ಜೀರ್ಣೋದ್ದಾರ ಧಾರ್ಮಿಕ ಕಾರ್ಯಕ್ರಮದಲ್ಲಿ ದಿವ್ಯ ಸಾನಿದ್ಯ ವಹಿಸಿ ಮಾತನಾಡಿ ನಾವು ಇತ್ತಿಚೆಗೆ ಪತ್ರಿಕೆಗಳಲ್ಲಿ ಮತ್ತು ದೃಶ್ಯ ಮಾಧ್ಯಮಗಳಲ್ಲಿ ಮುಖ್ಯ ಮಂತ್ರಿಗಳ ಸ್ಥಾನದ ಬಗ್ಗೆ ಚರ್ಚೆಗಳನ್ನು ನೋಡುತ್ತಿದ್ದೆವೆ ನಮ್ಮಗಳ ಹಾಗೂ ತುಮಕೂರು ಜಿಲ್ಲೆಯ ಹಲವು ವರ್ಷಗಳ ಬೇಡಿಕೆಯಂತೆ ಡಾ.ಜಿ.ಪರಮೇಶ್ವರ್ ಮುಖ್ಯಮಂತ್ರಿ ಯಾದಲ್ಲಿ ಅದು ಈಡೇರಲಿದೆ, ಈ ರಾಜ್ಯ ಕಂಡAತಹ ಸಜ್ಜನರು, ಸಂಸ್ಕಾರವAತರು, ವಿದ್ಯಾವಂತರು ಹಾಗೂ ರಾಜಕೀಯ ಜೀವನದಲ್ಲಿ ಅಘಾಧವಾದ ಅನುಭವವನ್ನು ಹೊಂದಿರುವ ಡಾ.ಜಿ.ಪರಮೇಶ್ವರ್ ಮುಖ್ಯಮಂತ್ರಿ ಯಾದರೆ ರಾಜ್ಯದಲ್ಲಿನ ಹಲವರ ದಶಕಗಳ ಕನಸು ನೆರವೇರಲಿದೆ, ಅದೇ ರೀತಿಯಾಗಿ ತುಮಕೂರು…

Read More

ತುಮಕೂರು: ತುಮಕೂರು ಗ್ರಾಮಾಂತರ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಶಾಸಕ ಬಿ.ಸುರೇಶ್‌ಗೌಡರು ಕೋಟ್ಯಾಂತರ ರೂ.ಗಳ ನಾನಾ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಚಾಲನೆ ನೀಡಿದರು. ಮನೆಮನೆಗೆ ಕುಡಿಯುವ ನೀರು ಪೂರೈಕೆಗಾಗಿ ಸಂಪರ್ಕ ಒದಗಿಸುವ ಜಲಜೀವನ್ ಮಿಷನ್ ಯೋಜನೆಯಡಿ ಅರೆಯೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಲ್ಲಪ್ಪನಹಳ್ಳಿಯಲ್ಲಿ ೨೫ ಲಕ್ಷ ರೂ. ವೆಚ್ಚದ ಕಾಮಗಾರಿ, ಮಲ್ಲಸಂದ್ರದಲ್ಲಿ ೧.೬೬ ಕೋಟಿ ರೂ., ಹೆಗ್ಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಕ್ಕೋಡಿ ಗ್ರಾಮದಲ್ಲಿ ೧.೨೬ ಕೋಟಿ ರೂ.ಗಳ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದರು. ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಮಲ್ಲಸಂದ್ರದ ಸರ್ಕಾರಿ ಪ್ರಾಥಮಿಕ ಪಾಠ ಶಾಲೆಯಲ್ಲಿ ೨೫ ಲಕ್ಷ ರೂ. ಅಂದಾಜು ವೆಚ್ಚದ ನೂತನ ಕೊಠಡಿಗಳ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದರು. ನಂತರ ತಿಮ್ಮರಾಜನಹಳ್ಳಿಯಲ್ಲಿ ೩೦ ಲಕ್ಷ ರೂ.ಗಳ ಸಭಾ ಭವನ ನಿರ್ಮಾಣ ಕಾರ್ಯಕ್ಕೆ ಶಾಸಕ ಸುರೇಶ್‌ಗೌಡ ಶಂಕುಸ್ಥಾಪನೆ ಮಾಡಿದರು. ಎಲ್ಲಾ ಕಾರ್ಯಕ್ರಮಗಳಲ್ಲಿ ಆಯಾ ಗ್ರಾಮ ಪಂಚಾಯ್ತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಬಿಜೆಪಿ ಮುಖಂಡರು, ಗ್ರಾಮಸ್ಥರು ಭಾಗವಹಿಸಿದ್ದರು.

Read More

ತುಮಕೂರು: ಎಸ್.ಎಲ್. ಭೈರಪ್ಪನವರ ಕಾದಂಬರಿಗಳು ಜೀವನಾನುಭವ ಮತ್ತು ತತ್ವಶಾಸ್ತçದ ಅದ್ಭುತ ಸಮನ್ವಯಕ್ಕೆ ಉದಾಹರಣೆ ಎಂದು ಸಾಹಿತಿ, ಸಂಶೋಧಕ ಡಾ. ಜಿ.ಬಿ. ಹರೀಶ ಅಭಿಪ್ರಾ ಯಪಟ್ಟರು. ಅಖಿಲ ಭಾರತೀಯ ಸಾಹಿತ್ಯ ಪರಿಷದ್ ತುಮಕೂರು ಜಿಲ್ಲಾ ಹಾಗೂ ತಾಲೂಕು ಸಮಿತಿ ಗಳು ಗುರುವಾರ ನಗರದ ಕನ್ನಿಕಾಪರಮೇಶ್ವರಿ ದೇವ ಸ್ಥಾನದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ‘ಡಾ.ಎಸ್.ಎಲ್. ಭೈರಪ್ಪ ನುಡಿನಮನ’ ಕಾರ್ಯಕ್ರಮದಲ್ಲಿ ಮಾತನಾಡಿದರು. ಭೈರಪ್ಪನವರ ಕೃತಿಗಳನ್ನು ಓದುವುದೆಂದರೆ ಜೀವನ ವೆಂಬ ಹಿಮಾಲಯಕ್ಕೆ ಮುಖಾಮುಖಿ ಯಾದಂತೆ ಅಥವಾ ಅದನ್ನೇ ಏರಿದಂತೆ. ತತ್ವಶಾಸ್ತçವನ್ನು ಕ್ಲಿಷ್ಟಕರವೆನಿಸದಂತೆ ಬದುಕಿನ ಅನುಭವಗಳೊಂದಿಗೆ ಮಿಶ್ರಣಗೊಳಿಸಿ ಅವರು ಉಣಬಡಿಸಿದರು ಎಂದರು. ಭೈರಪ್ಪನವರು ಸಾಹಿತ್ಯದ ಕೋಟೆ ಕಟ್ಟಿಕೊಳ್ಳಲಿಲ್ಲ. ಗುಂಪುಗಾರಿಕೆಯನ್ನೂ ಮಾಡಲಿಲ್ಲ. ತಪಸ್ಸಿನ ರೀತಿಯಲ್ಲಿ ಕುಳಿತು ಬರೆಯುತ್ತಾ ಸಾಹಿತ್ಯದ ರಸಪ್ರವಾ ಹವನ್ನು ಸೃಷ್ಟಿಸಿದರು ಎಂದು ವಿಶ್ಲೇಷಿಸಿದರು. ಭೈರಪ್ಪನವರ ಅಧ್ಯಯನಶೀಲತೆ ಎಲ್ಲರಿಗೂ ಮಾದರಿ. ಒಂದು ಕಾದಂಬರಿಗಾಗಿ ಅವರು ವರ್ಷಗಟ್ಟಲೆ ಅಧ್ಯಯನ ಮತ್ತು ಕ್ಷೇತ್ರಕಾರ್ಯ ಮಾಡುತ್ತಿದ್ದರು. ಅಪಾರವಾದ ಏಕಾಗ್ರತೆ ಬಯಸು ತ್ತಿದ್ದರು. ಆದ್ದರಿಂದಲೇ ಅವರಿಗೆ ಮಂದ್ರ, ಗೃಹ ಭಂಗದAತಹ ಅಮೋಘ ಕಾದಂಬರಿಗಳನ್ನು ಬರೆ ಯುವುದು…

Read More