ಕೊರಟಗೆರೆ : ಕಾಟೇನಹಳ್ಳಿ ಕೆರೆ ಅಂಗಳದಲ್ಲಿ ಪ್ರತಿನಿತ್ಯ ನಡೆಯುತ್ತಿದ್ದ ಅಕ್ರಮ ಜೂಜು ಅಡ್ಡೆಯ ಮೇಲೆ ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ ಪಿಎಸೈ ಮಹಾಲಕ್ಷ್ಮೀ ನೇತೃತ್ವದ ಪೊಲೀಸರ ತಂಡ 12ಜನ ಆರೋಪಿಗಳನ್ನು ಬಂಧಿಸಿರುವ ಘಟನೆ ನಡೆದಿದೆ. ಕೊರಟಗೆರೆ ತಾಲೂಕಿನ ಕೋಳಾಲ ಹೋಬಳಿ ವ್ಯಾಪ್ತಿಯ ಕಾಟೇನಹಳ್ಳಿ ಕೆರೆ ಅಂಗಳದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿ ಇಸ್ಪೀಟ್ ಆಟದಲ್ಲಿ ನಿರತರಾಗಿದ್ದ 12ಜನ ಜೂಜು ಕೋರರಿಂದ 1ಲಕ್ಷ 11ಸಾವಿರ ನಗದನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗಿದೆ. ದೊಡ್ಡಬಳ್ಳಾಪುರ, ತ್ಯಾಮಗೊಂಡ್ಲು, ದಾಸಬ್‍ಪೇಟೆ, ತುಮಕೂರು ಮತ್ತು ಕೊರಟಗೆರೆ ಮೂಲದ ದೇವರಾಜು, ಶಿವರಾಜು, ಶ್ರೀನಿವಾಸ, ನರಸೀಯಪ್ಪ, ನಾರಾಯಣ, ಕುಮಾರ, ಸಂಜೀವರಾಜು, ನಾಗರಾಜು, ಮಂಜಣ್ಣ, ರೇಣುಕಾಮೂರ್ತಿ, ವಾಹಿದ್, ಕೃಷ್ಣಪ್ಪ ಬಂಧಿತ ಆರೋಪಿಗಳು. ಇನ್ನೂಳಿದ ಕೆಂಪ, ಸಂಜು, ಪ್ರಜ್ವಲ್ ಎಂಬ 3ಜನರ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ. ದಾಳಿ ಮಾಡಿದ ಕೋಳಾಲ ಪಿಎಸೈ ಮಹಾಲಕ್ಷ್ಮೀ, ಸಿಬ್ಬಂದಿಗಳಾದ ಮಂಜುನಾಥ, ರಮೇಶ್, ಲಕ್ಷ್ಮೀಕಾಂತಯ್ಯ, ರಾಮು,…
Author: News Desk Benkiyabale
ತುಮಕೂರು : ಕೋವಿಡ್-19 ಮೂರನೇ ಅಲೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅವರು ತಿಳಿಸಿದರು. ಅವರು ತಮ್ಮ ಕಚೇರಿಯಲ್ಲಿಂದು ಮಾಹಿತಿ ನೀಡುತ್ತಾ ಕೋವಿಡ್ ಮೂರನೇ ಅಲೆ ಮಕ್ಕಳಿಗೆ ಹೆಚ್ಚು ತಗುಲುವ ಸಾಧ್ಯತೆಯಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಸಮರ್ಪಕವಾಗಿ ಶಿಶು ವೈದ್ಯಕೀಯ ವ್ಯವಸ್ಥೆ ಕಲ್ಪಿಸಿಕೊಳ್ಳಲಾಗುತ್ತಿದೆ ಎಂದರು. ಈಗಾಗಲೇ ಜಿಲ್ಲೆಯಲ್ಲಿ 16 ಸರ್ಕಾರಿ ಮತ್ತು ಖಾಸಗಿ ಸೇರಿದಂತೆ ಸುಮಾರು 60 ಕ್ಕಿಂತ ಹೆಚ್ಚು ಶಿಶು ವೈದ್ಯರಿದ್ದು ಎಲ್ಲಾ ತಾಲೂಕುಗಳಲ್ಲಿಯೂ ಶಿಶುವೈದ್ಯರ ವ್ಯವಸ್ಥೆ ಮಾಡಲು ಸಿದ್ಧರಾಗಿದ್ದೇವೆ. ಇದಲ್ಲದೆ ಅವಶ್ಯಕತೆಗನುಗುಣವಾಗಿ ಶಿಶು ವೈದ್ಯಕೀಯ ವಿಭಾಗಕ್ಕೆ ಸಂಬಂಧಿಸಿದ ಸಿದ್ದಾರ್ಥ ಕಾಲೇಜಿನ 8 ಪಿಜಿ ವಿದ್ಯಾರ್ಥಿಗಳು ಹಾಗೂ ಡಿಎನ್‍ಬಿ ಕೋರ್ಸ್ ವಿದ್ಯಾರ್ಥಿಗಳನ್ನು ಬಳಸಿಕೊಳ್ಳಲು ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು. ಜಿಲ್ಲೆಯಲ್ಲಿ ಒಟ್ಟು 3600 ಹಾಸಿಗೆಗಳಿವೆ. ಈ ಪೈಕಿ 528 ಹಾಸಿಗೆಗಳನ್ನು ಪಿಡಿಯಾಟ್ರಿಕ್ ಹಾಸಿಗೆಗಳಿಗೆ ಮೀಸಲಿಡಲಾಗಿದೆ. ಇದರಲ್ಲಿರುವ 118 ಸರ್ಕಾರಿ ಹಾಸಿಗೆಗಳನ್ನು 180ಕ್ಕೆ ಹೆಚ್ಚಿಸಲು ಸಚಿವರು ನಿರ್ದೇಶಿಸಿದ್ದಾರೆ…
ಹುಳಿಯಾರು: ಶೆಟ್ಟಿಕೆರೆ ಗ್ರಾಮದಲ್ಲಿ ಸಾಕಷ್ಟು ಸಿಸ್ಟನ್‍ಗಳಿದ್ದು ಅದನ್ನು ಕಳೆದ ಮೂರು ವರ್ಷಗಳ ಹಿಂದಿನಿಂದಲೂ ಬಳಸದೆ ಅದರ ಮೇಲೆ ಗಿಡ ಗಂಟೆಗಲು ಬೆಳೆದು ನಿಂತಿವೆ. 2012 ರಿಂದ 2017 ರವರೆಗೆ ಸತತವಾಗಿ ಬರಗಾಲದ ಹಿನ್ನಲೆಯಲ್ಲಿ ಅಭಾವ ಪರಿಹಾರ, ತುರ್ತುನಿಧಿ, ಗ್ರಾ.ಪಂ, ತಾ.ಪಂ, ಜಿ.ಪಂ, ಅನೇಕ ಯೋಜನೆಗಳನ್ನು ಶೆಟ್ಟಿಕೆರೆಯಲ್ಲಿ ಅನುಷ್ಠಾನ ಮಾಡಲಾಗಿತ್ತು, ಅತಿಯಾದ ಬರದ ಹಿನ್ನಲೆಯಲ್ಲಿ ನೀರಿಗೆ ಅಭಾವ ಉಂಟಾಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲ ಬೋರೆವೆಲ್‍ಗಳು ನಿಂತು ಹೋದ ಪರಿಣಾಮ ಎಲ್ಲಾ ಸಿಸ್ಟನ್‍ಗಳು ಬಳಕೆಗೆ ಬಾರದಂತೆ ಆಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಹಾವು ಇನ್ನಿತರ ಕ್ರಿಮಿ ಕೀಟಗಳಿಗೆ ವಾಸ ತಾಣವಾಗಿರುವ ಸಿಸ್ಟನ್‍ಗಳನ್ನು ಸ್ವಚ್ಛ ಗೊಳಿಸಿ ಸದ್ಬಳಕೆ ಮಾಡಿಕೊಳ್ಳಲು ಗ್ರಾಪಂ ನವರು ಮುಂದಾಗಬೇಕಿದೆ. ಸದ್ಯ ಶೆಟ್ಟಿಕೆರೆ ಕೆರೆ ತುಂಬಿದ್ದು, ಅಂತರ್ಜಲ ವೃದ್ಧಿ ಆಗಿದ್ದು ಸುಮಾರು 100 ರಿಂದ 200 ಅಡಿ ಆಳದಲ್ಲಿ ನೀರು ಸಿಗುತ್ತಿರುದರಿಂದ ಎಲ್ಲ ಬೋರ್‍ಗಳು ಚಾಲ್ತಿಯಲ್ಲಿವೆ. ಈ ಸಂದರ್ಭದಲ್ಲಿ ಗ್ರಾ.ಪಂ.ರವರು…
ತುಮಕೂರು : ನಗರದ 15ನೇ ವಾರ್ಡಿನ ಸರಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿರುವ ಆಲದ ಮರದ ಪಾರ್ಕ್ ಅನ್ನು ವಾರ್ಡಿನ ಕಾರ್ಪೋರೆಟರ್ ಗಿರಿಜಾ ಧನಿಯಕುಮಾರ್ ಅವರ ನೇತೃತ್ವದಲ್ಲಿ ಸೋಮವಾರ ಬೆಳಗ್ಗೆ ಚಕ್ರವರ್ತಿ ಗೆಳೆಯರ ಬಳಗ ಹಾಗೂ ಅಕೇಷನಲ್ ಕ್ರಿಕೆಟ್ ಅಸೋಸಿಯೇಷನ್ ಸದಸ್ಯರ ಸಹಕಾರದೊಂದಿಗೆ ಶುಚಿಗೊಳಿಸುವ ಕಾರ್ಯ ನಡೆಯಿತು ಸ್ಮಾರ್ಟ್‍ಸಿಟಿ ಯೋಜನೆಯಡಿ ಸುಮಾರು 99 ಲಕ್ಷ ರೂ.ಗಳಲ್ಲಿ ಜೂನಿಯರ್ ಕಾಲೇಜಿನ ಆಲದಮರದ ಪಾರ್ಕ್ ಅನ್ನು ಅಭಿವೃದ್ದಿ ಪಡಿಸುವ ಕಾಮಗಾರಿ ನಡೆದಿದ್ದು, ಕೊನೆಯ ಹಂತದಲ್ಲಿದೆ. ಆದರೆ ಕೆಲವರು ಪಾರ್ಕಿನಲ್ಲಿ ಮದ್ಯಪಾನ ಮಾಡಿ, ಎಲ್ಲೆಂದರಲ್ಲಿ ಬಾಟಲಿಗಳನ್ನು ಎಸೆದಿರುವುದಲ್ಲದೆ, ತಿಂಡಿ ತಿಂದ ಪೊಟ್ಟಣಗಳನ್ನು ಬೇಕಾಬಿಟ್ಟಿ ಬಿಸಾಕಿರುವ ಕಾರಣ ಇಡೀ ಪಾರ್ಕು ಕೊಳೆತು ನಾರುತ್ತಿದೆ. ಆದ್ದರಿಂದ ಚಕ್ರವತಿ ಗೆಳೆಯರ ಬಳಗದ ಪ್ರಕಾಶ್, ಅಕೇಷನಲ್ ಕ್ರಿಕೆಟ್ ಅಸೋಸಿಯೇಷನ್‍ನ ಲೋಕೇಶ್, ಧನಿಯಕುಮಾರ್ ಹಾಗೂ ಅವರ ಟೀಮ್‍ನ ಸದಸ್ಯರು, ನಗರಪಾಲಿಕೆಯ ಪೌರಕಾರ್ಮಿಕ ಸಿಬ್ಬಂದಿಗಳೊಂದಿಗೆ ಇಡೀ ಪಾರ್ಕ್‍ನ್ನು ಶುಚಿಗೊಳಿಸುವ ಕಾರ್ಯ ಕೈಗೊಳ್ಳಲಾಗಿತ್ತು. ಕಾರ್ಪೋರೇಟರ್ ಶ್ರೀಮತಿ ಗಿರಿಜಾ ಧನಿಯಕುಮಾರ್…
ತುಮಕೂರು : ಕೋವಿಡ್ ಎರಡನೇ ಅಲೆ ಇಡೀ ರಾಜ್ಯವನ್ನೆ ಬಾಧಿಸುತ್ತಿರುವ ಹಿನ್ನೆಲೆಯಲ್ಲಿ ಜಾರಿಯಲ್ಲಿರುವ ಲಾಕ್‍ಡೌನ್‍ನಿಂದ ಅಸಂಘಟಿತ ವಲಯದ ಅನೇಕ ಕಾರ್ಮಿಕರು ಸಂಕಷ್ಟ ಪರಿಸ್ಥಿತಿಯಲ್ಲಿದ್ದಾರೆ. ಇದನ್ನು ಮನಗಂಡ ಸರ್ಕಾರ ಅಸಂಘಟಿತ ಕಾರ್ಮಿಕರಿಗಾಗಿ ಘೋಷಣೆ ಮಾಡಿರುವ ಪರಿಹಾರ ಪ್ಯಾಕೇಜ್ ಅನ್ನು ವಂಚನೆಯಾಗದಂತೆ ಸಕಾಲಕ್ಕೆ ಅರ್ಹರಿಗೆ ವಿತರಿಸಬೇಕೆಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು. ಅವರಿಂದು ತಮ್ಮ ಕಚೇರಿಯಿಂದ ಜಿಲ್ಲಾ ಕಾರ್ಮಿಕ ಇಲಾಖೆ ಅಧಿಕಾರಿ, ಕಾರ್ಮಿಕ ಮುಖಂಡರು, ಅಸಂಘಟಿತ ಕಾರ್ಮಿಕ ಮುಖಂಡರುಗಳೊಂದಿಗೆ ಜೂಮ್ ಸಭೆ ನಡೆಸಿ ಮಾತನಾಡುತ್ತಾ, ಜಿಲ್ಲೆಯಲ್ಲಿರುವ 11 ಅಸಂಘಟಿತ ಕಾರ್ಮಿಕ ವಲಯದ ಫಲಾನುಭವಿಗಳಿಗೆ ಕಡ್ಡಾಯವಾಗಿ ಈ ಕೋವಿಡ್ ಪರಿಹಾರ ತಲುಪುವಂತೆ ಅಧಿಕಾರಿಗಳು ಕ್ರಮವಹಿಸಬೇಕು. ಪರಿಹಾರ ಸೌಲಭ್ಯ ಕುರಿತು ಜಿಲ್ಲಾ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಹಾಗೂ ಕಾರ್ಮಿಕ ಮುಖಂಡರು, ಅರ್ಹ ಫಲಾನುಭವಿಗಳಿಗೆ ಮಾಹಿತಿ ನೀಡಬೇಕು. ಇದುವರೆಗೂ ನೋಂದಣಿಯಾಗದೇ ಇರುವ ಅರ್ಹ ಫಲಾನುಭವಿಗಳನ್ನು ನೋಂದಾಯಿಸಿಕೊಳ್ಳುವಂತೆ ಕ್ರಮ ವಹಿಸಬೇಕೆಂದು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಉದ್ಯೋಗ ಪ್ರಮಾಣ…
ತುಮಕೂರು: ತುಮಕೂರು ನಗರದ ಎಲ್ಲಾ ವಾರ್ಡ್‍ಗಳಲ್ಲಿ ಕೊರೋನಾ ನಿಯಂತ್ರಣ ಕುರಿತು ಜನ ಜಾಗೃತಿ ಮೂಡಿಸಲು ದಯಾಭವನ ಸ್ವಯಂ ಸೇವಾ ಸಂಸ್ಥೆ ವತಿಯಿಂದ ಮಹಾನಗರ ಪಾಲಿಕೆ ಆವರಣದಲ್ಲಿಂದು ಹಮ್ಮಿಕೊಂಡಿದ್ದ ಕೊರೋನಾ ಜಾಗೃತಿ ರಥಕ್ಕೆ ಶಾಸಕ ಜ್ಯೋತಿಗಣೇಶ್ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು ಜನರಲ್ಲಿ ಕೋವಿಡ್ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸುವ ಈ ಕಾರ್ಯಕ್ರಮ ಶ್ಲಾಘನೀಯ ಎಂದರು. ಮಹಾನಗರ ಪಾಲಿಕೆಯ ಮೇಯರ್ ಬಿ.ಜಿ. ಕೃಷ್ಣಪ್ಪ ಮಾತನಾಡಿ, ದಯಾಭವನ ಸಂಸ್ಥೆ ನೀಡುತ್ತಿರುವ ಈ ಸೇವೆಯನ್ನು ನಮ್ಮ ಎಲ್ಲಾ ಕಾರ್ಪೊರೇಟರ್‍ಗಳು ಉಪಯೋಗಿಸಿಕೊಂಡು ಅವರ ವಾರ್ಡ್‍ಗಳಲ್ಲಿ ಜಾಗೃತಿ ಮೂಡಿಸಬೇಕು ಎಂದು ಕರೆ ಕೊಟ್ಟರು. ದಯಾಭವನ ಸಂಸ್ಥೆಯ ಮುಖ್ಯಸ್ಥ ಫಾದರ್ ಜಿನೇಶ್ ವರ್ಕಿ ಮಾತನಾಡಿ, ಈಗಾಗಲೇ ಸಂಸ್ಥೆ ವತಿಯಿಂದ ಕುಣಿಗಲ್ ತಾಲ್ಲೂಕಿನ ಎಲ್ಲಾ ಹಳ್ಳಿಗಳಲ್ಲಿ ಜಾಗೃತಿ ರಥದ ಮುಖಾಂತರ ಕೊರೋನಾ ಜಾಗೃತಿ ಮೂಡಿಸಿ ಹಸಿದವರಿಗೆ ಅನ್ನ ನೀಡಲಾಗುತ್ತಿದೆ. ಈ ಸೇವೆಯನ್ನು ತುಮಕೂರು ನಗರಕ್ಕೂ ವಿಸ್ತರಿಸಿದ್ದೇವೆ…
ತುಮಕೂರು: ಸರ್ಕಾರದ ಮಾರ್ಗ ಸೂಚಿ ಯನ್ವಯ ಜಿಲ್ಲಾಸ್ಪತ್ರೆ ಸೇರಿದಂತೆ ಖಾಸಗಿ ಆಸ್ಪತ್ರೆಗಳಲ್ಲಿಯೂ ಒuಛಿoಡಿ ಒಥಿಛಿosisಗೆ ಸಂಬಂಧಿಸಿದಂತೆ ಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸೆ ನಡೆಸಲು ಅಗತ್ಯ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅವರು ತಿಳಿಸಿದರು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು Mucor Mycosis ಚಿಕಿತ್ಸೆ ಸಂಬಂಧ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆ ಹಾಗೂ ವೈದ್ಯಕೀಯ ಕಾಲೇಜುಗಳ ಇಎನ್‍ಟಿ ಹಾಗೂ Mucor Mycosis ಗೆ ಚಿಕಿತ್ಸೆ ನೀಡುವ ವೈದ್ಯರೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಮಾತನಾಡಿ, ಒuಛಿoಡಿ ಒಥಿಛಿosisಗೆ ಈಗಾಗಲೇ ಚಿಕಿತ್ಸೆ ಪ್ರಾರಂಭಿಸಲಾಗಿದೆ. ಶಸ್ತ್ರಚಿಕಿತ್ಸೆಯನ್ನು ಶೀಘ್ರದಲ್ಲೇ ಪ್ರಾರಂಭಿಸಲು ಎಲ್ಲಾ ರೀತಿಯಲ್ಲಿಯೂ ಕ್ರಮ ಕೈಗೊಳ್ಳಬೇಕೆಂದು ಸಂಬಂಧಿಸಿದ ವೈದ್ಯಾಧಿಕಾರಿಗಳಿಗೆ ತಿಳಿಸಿದರು. ಈಗಾಗಲೇ ಖಾಸಗಿ ಆಸ್ಪತ್ರೆ ಮತ್ತು ವೈದ್ಯಕೀಯ ಕಾಲೇಜುಗಳಲ್ಲಿ Mucor Mycosis ಗೆ ಚಿಕಿತ್ಸೆ ಆರಂಭಿಸಲಾಗಿದ್ದು, ಚಿಕಿತ್ಸೆ ಯಶಸ್ವಿಯಾಗಿ ನಡೆಯುತ್ತಿರುವ ಬಗ್ಗೆ ವೈದ್ಯರಿಂದ ಮಾಹಿತಿ ಪಡೆದರು. ಸಭೆಯಲ್ಲಿ ಭಾಗವಹಿಸಿದ್ದ ವೈದ್ಯರು ಅತ್ಯಂತ ಯಶಸ್ವಿಯಾಗಿ ಚಿಕಿತ್ಸೆಯನ್ನು ಮಾಡಲಾಗುತ್ತಿದೆ ಎಂದು ಮಾಹಿತಿ…
ತುಮಕೂರು: ಸರ್ಕಾರವು ಗುಡಿಸಲು ಮುಕ್ತ ಮಾಡುವ ಉದ್ದೇಶದಿಂದ ರಾಜ್ಯದಲ್ಲಿ ಸುಮಾರು ಹತ್ತು ಲಕ್ಷಗಳ ಮನೆಗಳನ್ನು ನಿರ್ಮಿಸುವ ಮಹತ್ತರ ಗುರಿ ಹೊಂದಿದೆ ಎಂದು ವಸತಿ ಸಚಿವ ವಿ.ಸೋಮಣ್ಣ ತಿಳಿಸಿದರು. ನಗರದ ಸಿದ್ದಗಂಗಾ ಮಠಕ್ಕೆ ಇಂದು ಭೇಟಿ ನೀಡಿ ಶ್ರೀ ಶಿವಕುಮಾರ ಸ್ವಾಮೀಜಿಗಳ ಗದ್ದುಗೆಗೆ ಪೂಜೆ ಸಲ್ಲಿಸಿ ಶ್ರೀ ಸಿದ್ದಲಿಂಗ ಸ್ವಾಮೀಜಿಯವರ ಆರ್ಶೀವಾದ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು ಕೋವಿಡ್ ಸಂಕಷ್ಟಕ್ಕೆ ಸಿಲುಕಿರುವವರ ಜೊತೆಗೆ ಸರ್ಕಾರ ಸದಾ ಇರುತ್ತದೆ. ಈಗಾಗಲೇ ಕೊರೋನಾ ಪರಿಹಾರವನ್ನೂ ಸಹ ಘೋಷಿಸಿದ್ದು, ಸೋಂಕು ನಿಯಂತ್ರಣ ಕಾರ್ಯದಲ್ಲಿ ಸಾರ್ವಜನಿಕರು ಸಹಕರಿಸಬೇಕು ಎಂದು ಮನವಿ ಮಾಡಿದರು. ರಾಜ್ಯದಲ್ಲಿ ಆದ್ಯತೆಗನುಸಾರವಾಗಿ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಸುಮಾರು ಮೂರು ಲಕ್ಷ ಮನೆಗಳನ್ನು ನಿರ್ಮಿಸಿ ಈಗಾಗಲೇ ನಗರ ಹಾಗೂ ಗ್ರಾಮೀಣ ಭಾಗದ ವಸತಿರಹಿತ ಅರ್ಹ ಫಲಾನುಭವಿಗಳಿಗೆ ಹಂಚಿಕೆ ಮಾಡಲಾಗಿದೆ ಎಂದರು. ಸರ್ಕಾರವು ಕೆಲವು ವರ್ಗಗಳಿಗೆ ಪರಿಹಾರ ಪ್ಯಾಕೇಜ್ ಘೋಷಿಸಿದ್ದು ಪತ್ರಕರ್ತರಿಗೂ ಇದೇ…
ತುಮಕೂರು : ಜೂಜು ಅಡ್ಡೆಗಳನ್ನು ನಿಯಂತ್ರಿಸುವಲ್ಲಿ ವಿಫಲವಾಗಿದ್ದು, ಕರ್ತವ್ಯ ಲೋಪವೆಸಗಿದ ಆರೋಪದ ಮೇಲೆ ಗುಬ್ಬಿ ಪೊಲೀಸ್ ಪೇದೆ ಸಿದ್ದರಾಜು ಮತ್ತು ಜಿಲ್ಲಾ ಅಪರಾಧ ಪತ್ತೆ ದಳದ ಪೇದೆ ಮಲ್ಲೇಶ್ ಅವರುಗಳನ್ನು ಅಮಾನತು ಮಾಡಲಾಗಿದೆ. ಇದರ ಬಹುಮುಖ್ಯ ಭಾಗವಾಗಿದ್ದ ಜಿಲ್ಲಾ ಅಪರಾಧ ಪತ್ತೆ ದಳದ ಇನ್ಸ್‍ಪೆಕ್ಟರ್ ಎಂ.ವಿ ಶೇಷಾದ್ರಿ ಮತ್ತು ಅಂದಿನ ಗುಬ್ಬಿ ವೃತ್ತ ನಿರೀಕ್ಷಕ ರಾಮಕೃಷ್ಣ ಮತ್ತು ಇತರರನ್ನು ಅಮಾನತು ಮಾಡಿರುವುದಿಲ್ಲ ಎನ್ನುವುದು ಚರ್ಚೆಗೆ ಗ್ರಾಸವಾಗಿದೆ. ಗುಬ್ಬಿ ತಾಲ್ಲೂಕಿನ ಹಲವು ಭಾಗಗಳಲ್ಲಿ ಜೂಜಿನ ಅಡ್ಡೆಗಳು ಎಗ್ಗಿಲ್ಲದೆ ಸಾಗುತ್ತಿವೆ, ಇಡೀ ತಾಲ್ಲೂಕಿನಾದ್ಯಂತ ನಡೆಯುತ್ತಿರುವ ಇಸ್ಪೀಟ್ ಅಡೆÀ್ಡಗಳಿಗೆ ಅವುಗಳನ್ನು ನಡೆಸುವ ಜೂಜುಕೋರರ ರಕ್ಷಣೆಗೆ ನಿಂತಿದ್ದು ಮತ್ತಿನ್ಯಾರೂ ಅಲ್ಲ, ಅಂದಿನ ಇನ್ಸ್‍ಪೆಕ್ಟರ್ ರಾಮಕೃಷ್ಣ. ಇವರು ಗುಬ್ಬಿ ತಾಲ್ಲೂಕಿನ ವೃತ್ತ ನೀರಿಕ್ಷಕರ ಖುರ್ಚಿಯಲ್ಲಿ ಕೂತ ದಿನದಿಂದ ಜೂಜು ಅಡೆÀ್ಡಗಳು ನಾಯಿ ಕೊಡೆಗಳಂತೆ ತಲೆ ಎತ್ತಿದ್ದವು. ವೃತ್ತ ನೀರಿಕ್ಷಕರ ಕೃಪಾಕಟಾಕ್ಷ ಇದ್ದಿದ್ದರಿಂದ ಅವರ ಕೈಕೆಳಗಿನ ಅಧಿಕಾರಿ ಮತ್ತು ಸಿಬ್ಬಂಧಿ ಅವುಗಳನ್ನು ನಿಯಂತ್ರಿಸಲಾಗದೆ…
ಚಿ.ನಾ.ಹಳ್ಳಿ: ಮನೆಯ ಮುಂಭಾಗದ ಜಾಗವೊಂದರ ವಿಚಾರಕ್ಕೆ ನಿರ್ಮಾಣ ಮಾಡಿಕೊಂಡಿದ್ದ ತಗಡಿನ ಶೆಡ್ಡನ್ನು ರಾತ್ರೋರಾತ್ರಿ ಧ್ವಂಸ ಮಾಡಿರುವ ಘಟನೆ ತಾಲ್ಲೂಕಿನ ಲಕ್ಮೇನಹಳ್ಳಿಯಲ್ಲಿ ನಡೆದಿದೆ. ಗ್ರಾಮದ ರತ್ನಮ್ಮ ಕೃಷ್ಣಯ್ಯ ಎಂಬುವವರಿಗೆ ಸೇರಿದ ಈ ಖಾಲಿ ಜಾಗದಲ್ಲಿ ಕಳೆದ ಏಳೆಂಟು ವರ್ಷಗಳಿಂದ ಹಸುಗಳನ್ನು ಕಟ್ಟಿಕೊಂಡು ವಾಸಿಸಲಾಗಿತ್ತು, ಘಟನೆಗೆ ಸಂಬಂಧಿಸಿದಂತೆ ಕೃಷ್ಣಯ್ಯನ ಮನೆಯ ಮುಂದಿನ ಜಾಗವನ್ನು ರಸ್ತೆಗೆ ಬಿಡುವಂತೆ ಒತ್ತಾಯಿಸಲಾಗಿತ್ತು, ಗಂಗಾಧರ ಎಂಬುವವರ ಮಗ ಕುಮಾರಯ್ಯ ಹಾಗೂ ಹೆಂಡತಿ ಹೇಮಾವತಿ ಮಗ ಪುನೀತ್, ವಿಶ್ವನಾಥ್ ಎಂಬವರು ಕಳೆದ ರಾತ್ರಿ ಜಾಗದ ವಿಚಾರವಾಗಿ ಮನೆಯ ಮುಂಭಾಗ ಹಾಕಿದ್ದ ತಗಡಿನ ಶೆಡ್ಡನ್ನು ಧ್ವಂಸ ಮಾಡಿದ್ದಾರೆ ಎಂದು ಆರೋಪ ಕೇಳಿ ಬಂದಿದೆ. ಈ ವೇಳೆ ಕೃಷ್ಣಯ್ಯನ ಮಗಳಾದ ಪುಷ್ಪವತಿ ಬಾಣಂತಿ ಸೇವೆಗಾಗಿ ಬಂದಿದ್ದಾರೆ, ಇವರನ್ನು ಕುಮಾರಯ್ಯ ಹಾಗೂ ಅವರ ಸಂಗಡಿಗರು ಸೇರಿ ಅವ್ಯಾಚ ಶಬ್ದಗಳಿಂದ ನಿಂದಿಸಿದ್ದಲ್ಲದೆ ಮನಬಂದಂತೆ ಬೈದು ಪುಷ್ಪವತಿ, ಭಾಗ್ಯ ರತ್ನಮ್ಮ ಹಾಗೂ ಅಳಿಯ ತೀರ್ಥ ಕುಮಾರ್ ಇವರನ್ನು ತಳಿಸಿದ್ದಲ್ಲದೆ ಇವರ…











