ಹುಳಿಯಾರು: ರಾಷ್ಟ್ರೀಯ ಹೆದ್ದಾರಿ ಅವೈಜ್ಞಾನಿಕ ರಸ್ತೆ ಕಾಮಗಾರಿಯಿಂದಾಗಿ ಮಳೆಯ ನೀರು ಸರಾಗವಾಗಿ ಹರಿಯದೆ ವಾಸದ ಮನೆ ಹಾಗೂ ಗೋಡನ್‍ಗೆ ನುಗ್ಗಿದ ಪರಿಣಾಮ ಗೋಡನ್ ಗೋಡೆ ಕುಸಿದು ಸಾವಿರಾರು ರೂ. ಮೌಲ್ಯದ ಈರುಳ್ಳಿ, ಬೆಳ್ಳುಳ್ಳಿ, ಮಾವಿನ ಕಾಯಿ ನೆನೆದು ಹಾನಿಯಾದ ಘಟನೆ ಹುಳಿಯಾರು ಪಟ್ಟಣದಲ್ಲಿ ಬುಧವಾರ ರಾತ್ರಿ ಸಂಭವಿಸಿದೆ. ಮಂಗಳೂರು ವಿಶಾಖಪಟ್ಟಣ ರಾಷ್ಟ್ರೀಯ ಹೆದ್ದಾರಿ 234 ರ ಹುಳಿಯಾರು ಭಾಗದ ವಿಸ್ತರಣೆಯ ಕಾಮಗಾರಿ 3 ವರ್ಷಗಳಿಂದ ನಡೆಯುತ್ತಿದೆ. ಒಣಕಾಲುವೆ, ರಾಮಗೋಪಾಲ್ ಸರ್ಕಲ್, ಎಸ್‍ಎಲ್‍ಆರ್ ಬಂಕ್ ಬಳಿ ಕಾಮಗಾರಿ ಸ್ಥಗಿತವಾಗಿ ಏಳೆಂಟು ತಿಂಗಳುಗಳೇ ಕಳೆದಿದೆ. ಅಲ್ಲದೆ ಎಂಜಿನಿಯರ್ ಹಾಗೂ ಗುತ್ತಿಗೆದಾರರು ಕಾಲಕಾಲಕ್ಕೆ ಕಾಮಗಾರಿ ವೀಕ್ಷಣೆ ಮಾಡದೆ ನಿರ್ಲಕ್ಷ್ಯಿಸಿದರ ಪರಿಣಾಮ ಚರಂಡಿ ಮತ್ತು ರಸ್ತೆಯನ್ನು ಅವೈಜ್ಞಾನಿಕವಾಗಿ ನಿರ್ಮಿಸಲಾಗಿದೆ. ಪರಿಣಾಮ ಪಟ್ಟಣದ ಚರಂಡಿ ನೀರು ಸರಾಗವಾಗಿ ಹರಿಯದೆ ಪಟ್ಟಣದ ಮನೆಗಳಿಗೆ ನುಗ್ಗುತ್ತದೆ. ರಸ್ತೆಯಲ್ಲಿ ಮೊಳಕಾಲುದ್ದ ನಿಲ್ಲುತ್ತದೆ. ಕಳೆದ ತಿಂಗಳು ಹುಳಿಯಾರಿನಲ್ಲಿ ಬಿದ್ದ ಅಲ್ಪಮಳೆಗೆ ರಾಮಗೋಪಾಲ್ ಸರ್ಕಲ್…
Author: News Desk Benkiyabale
ಹುಳಿಯಾರು : ಹುಳಿಯಾರು ಪಟ್ಟಣದಲ್ಲಿ ಬುಧವಾರ ರಾತ್ರಿ 100 ಮಿಮೀ ದಾಖಲೆಯ ಮಳೆಯಾಗಿದ್ದು ಸ್ಥಳೀಯರ ಹರ್ಷಕ್ಕೆ ಕಾರಣವಾಗಿದೆ. ಕಳೆದ ಹತ್ತನ್ನೆರಡು ವರ್ಷದಲ್ಲೇ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಮಳೆ ಸುರಿದ ನಿದರ್ಶನವಿಲ್ಲ. ಮೇ.25 ರಂದು ರೋಹಿಣಿ ಮಳೆ ಹುಟ್ಟಿದ್ದರೂ ಇಲ್ಲಿಯವರೆವಿಗೆ ಒಂದು ದಿನವೂ ಬೀಳದೆ ನಿರಾಸೆ ಮೂಡಿಸಿತ್ತು. ಕಳೆದ 2 ದಿನಗಳಲ್ಲಿ ತಾಲೂಕಿನ ಅಲ್ಲಲ್ಲಿ ಮಳೆ ಬಿದ್ದಿದ್ದರೂ ಹುಳಿಯಾರಿಗೆ ಮಳೆ ಆಗಿರಲಿಲ್ಲ. ಆದರೆ ಬುಧವಾರ ಸಂಜೆ ಸಾಧಾರಣವಾಗಿ ಆರಂಭವಾದ ಮಳೆ ರಾತ್ರಿ 11 ಗಂಟೆಯ ನಂತರ ಅಬ್ಬರಿಸಿತು. ಸತತ 3 ಗಂಟೆಗಳ ಕಾಲ ಜೋರಾಗಿ ಸುರಿದು ನಂತರ ನಿಧಾನವಾಗಿ ಬೆಳಗಿನ ಜಾವ 6 ಗಂಟೆಯವರೆವಿಗೂ ಉತ್ತಮ ಮಳೆಯಾಯಿತು. ಹುಳಿಯಾರು ಪಟ್ಟಣವಲ್ಲದೆ ತಾಲೂಕಿನಾಧ್ಯಂತ ರೋಹಿಣಿ ಮಳೆ ಸುರಿದಿದೆ. ಮಳೆಯಿಂದಾಗಿ ತಗ್ಗಿನ ಪ್ರದೇಶಗಳಿಗೆ ನೀರು ನುಗ್ಗಿದೆ. ಕೃಷಿಹೊಂಡ, ಕಟ್ಟೆ ಹಾಗೂ ಕೆರೆಗಳಿಗೆ ನೀರು ಬಂದಿದೆ. ತೋಟ, ಹೊಲಗಳಲ್ಲಿ ನೀರು ನಿಂತಿದೆ. ಕೆಲ ಗ್ರಾಮೀಣ ರಸ್ತೆಗಳು ಕೆಸರುಗದ್ದೆಗಳಾಗಿ ಮಾರ್ಪಟ್ಟಿವೆ.…
ತುಮಕೂರು: ಮಾನವನಿಗೆ ಆತ್ಮವಿಶ್ವಾಸ ಅತ್ಯಮೂಲ್ಯವಾದದ್ದು ಅದನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡಿದ್ದೆ ಆದಲ್ಲಿ ಸೋಂಕಿತರು ಗುಣಮುಖರಾಗಲು ಸಹಕಾರಿಯಾಗುತ್ತದೆ. ಆದ್ದರಿಂದ ಸೋಂಕಿತರಿಗೆ ಅವಶ್ಯಕವಾದದ್ದು ಆತ್ಮಸ್ಥೈರ್ಯ ಹಾಗೂ ವಿಶ್ವಾಸ ಅತ್ಯಮೂಲ್ಯವಾದದ್ದು ಎಂದು ಸಿದ್ದಗಂಗಾ ಮಠದ ಸಿದ್ದಲಿಂಗ ಶ್ರೀಗಳು ತಿಳಿಸಿದರು.ತುಮಕೂರಿನ ರೇಣುಕಾ ವಿದ್ಯಾಪೀಠದಲ್ಲಿ ನಡೆಯುತ್ತಿರುವ ಕೋವಿಡ್ ಕೇರ್ ಸೆಂಟರ್ ಗೆ ಭೇಟಿ ನೀಡಿದ ಶ್ರೀಗಳು ರೋಗಿಗಳಿಗೆ ಕೋವಿಡ್ ಕೇರ್ ಸೆಂಟರ್ ಸೋಂಕಿತರಿಗೆ ಆತ್ಮಸ್ಥೈರ್ಯ ತುಂಬಿದರು. ಇನ್ನು ಇಂತಹ ತುರ್ತು ಸಂದರ್ಭಗಳಲ್ಲಿ ಸಂಘ-ಸಂಸ್ಥೆಗಳು ಹಲವು ಆಯಾಮಗಳಲ್ಲಿ ಸಾರ್ವಜನಿಕರಿಗೆ ನೆರವು ನೀಡುತ್ತಿದ್ದು ಇದರಿಂದ ಸೋಂಕಿತರಿಗೆ ಬಹಳಷ್ಟು ಅನುಕೂಲವಾಗುತ್ತದೆ ಎಂದರು.ತುಮಕೂರಿನ ರೇಣುಕಾ ವಿದ್ಯಾಪೀಠದಲ್ಲಿ ನಡೆಯುತ್ತಿರುವ ಕೋವಿಡ್ ಕೇರ್ ಸೆಂಟರ್ನ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಶ್ರೀಗಳು ಉತ್ತಮ ಆಹಾರ, ವಸತಿ ಸೇರಿದಂತೆ ಉತ್ತಮ ಸೌಲಭ್ಯಗಳನ್ನು ನೀಡುವ ಮೂಲಕ ಕೋವಿಡ್ ಕೇರ್ ಸೆಂಟರ್ ಬಹಳಷ್ಟು ಸೊಂಕಿತರಿಗೆ ಸಹಕಾರಿಯಾಗಿದೆ. ಇನ್ನು ಕೋರೋಣ ಸೋಂಕಿನ ಮೂರನೇ ಅಲೆ ಮುಂದಿನ ದಿನಗಳಲ್ಲಿ ಮತ್ತಷ್ಟು ಸಂಕಷ್ಟ ತರಲಿದ್ದು ಇನ್ನು ಮುಂದಿನ ದಿನಗಳಲ್ಲಿ…
ತುಮಕೂರು: ಪ್ರಾದೇಶಿಕ ಭಾಷೆಯ ಚಲನಚಿತ್ರಗಳು ಜಾಗತಿಕ ಮಟ್ಟದಲ್ಲಿ ಪೈಪೋಟಿ ನೀಡಲು ಡಬ್ಬಿಂಗ್ ಅಗತ್ಯ. ಈ ತಂತ್ರಜ್ಞಾನ ಅಳವಡಿಕೆಯಿಂದ ಚಿತ್ರನಿರ್ಮಾಣ ವೆಚ್ಚ ಮತ್ತು ಕಲಾವಿದರ ಬಳಕೆ ಕಡಿಮೆಯಾದರೂ ಪ್ರಾದೇಶಿಕ ಭಾಷೆಗಳ ಗುಣಮಟ್ಟವನ್ನು ಅಂತರಾಷ್ಟ್ರೀ ಮಟ್ಟಕ್ಕೆ ಕೊಂಡೋಯ್ಯವ ಅವಕಾಶಗಳು ಹೆಚ್ಚಾಗುತ್ತವೆ ಎಂದು ಕನ್ನಡ ಮತ್ತು ಮರಾಠಿ ಚಲನಚಿತ್ರ ನಿರ್ದೇಶಕ ಸುಧೀರ್ ಅತ್ತಾವರ್ ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ನಗರದ ಶ್ರೀ ಸಿದ್ದಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ವತಿಯಿಂದ ಏರ್ಪಡಿಸಲಾಗಿರುವ ಒಂದು ವಾರದ ವಿಶೇಷ ಉಪನ್ಯಾಸ ಸರಣಿ ಮಾಲಿಕೆ ಇಂದಿನ ವೆಬಿನಾರ್‍ನಲ್ಲಿ “ಚಿತ್ರರಂಗದ ಇತಿಹಾಸ ಮತ್ತು ಅಭಿವೃದ್ಧಿ” ಕುರಿತು ಮುಂಬೈನಿಂದ ವಿಶೇಷ ಉಪನ್ಯಾಸ ನೀಡಿ, ಈ ಅಭಿಪ್ರಾಯ ವ್ಯಕ್ತಪಡಿಸಿದರು. ಅದೇ ರೀತಿ ಕನ್ನಡ ಚಿತ್ರರಂಗಕ್ಕೆ ಗುಬ್ಬಿ ವೀರಣ್ಣನವರ ಕೊಡುಗೆಯೂ ಅಪಾರವಾದುದು ಎಂದು ಅವರು ಸಿನಿಮಾ ಇತಿಹಾಸದಲ್ಲಿ ತುಮಕೂರು ಜಿಲ್ಲೆಯ ಪಾತ್ರವನ್ನು ಮೆಲುಕು ಹಾಕಿದರು. ಅμÉ್ಟೀ ಅಲ್ಲದೆ ಚಿತ್ರರಂಗದ ಆಳ, ಚಲನಚಿತ್ರಗಳ ಉದಯ,ಇತಿಹಾಸ, ಪ್ರಸ್ತುತ ಸಿನಿಮಾ ರಂಗದ ಸ್ಥಿತಿಗತಿಗಳು…
ತುಮಕೂರು: ಜಿಲ್ಲೆಯಲ್ಲಿ ಕೋವಿಡ್ ಸೋಂಕಿನ ಪ್ರಮಾಣ ಇಳಿಕೆಯಾಗಿದ್ದು, ಕಳೆದ ಒಂದು ವಾರದಲ್ಲಿ 50 ರೆಡ್ ಜೋನ್ ಸಂಖ್ಯೆ ಕಡಿಮೆಯಾಗಿದೆ. ಮೇ.25ರಂದು 76 ಇದ್ದ ರೆಡ್ ಜೋನ್‍ಗಳ ಸಂಖ್ಯೆ ಜೂನ್ 2ರಂದು 27ಕ್ಕೆ ಇಳಿದಿದೆ. ಅದರಂತೆಯೇ ಹಾಟ್ ಸ್ಪಾಟ್‍ಗಳ ಸಂಖ್ಯೆಯೂ ಸಹ 240 ರಿಂದ 123ಕ್ಕೆ ಇಳಿದಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅವರು ತಿಳಿಸಿದ್ದಾರೆ. ಅದೇ ರೀತಿ ಶೇ.48ರಷ್ಟಿದ್ದ ಕೋವಿಡ್-19 ಪಾಸಿಟಿವಿಟಿ ಪ್ರಮಾಣ ಶೇ. 17ಕ್ಕೆ ಇಳಿದಿದ್ದು, 2500 ರಿಂದ 3000ದವರೆಗೆ ದೃಢವಾಗುತ್ತಿದ್ದ ಸೋಂಕಿನ ಪ್ರಕರಣಗಳ ಸಂಖ್ಯೆಯೂ 750-850ಕ್ಕೆ ಇಳಿದಿದೆ. ಪಾಸಿಟಿವಿಟಿ ಪ್ರಮಾಣ ಮತ್ತಷ್ಟು ಇಳಿಕೆಯಾಗಲಿದೆ. ಗ್ರಾಮೀಣ ಭಾಗದಲ್ಲಿಯೂ ಸೋಂಕಿನ ಪ್ರಮಾಣ ತಗ್ಗಿದ್ದು, ಮೇ.25ರಂದು ಒಂದೂ ಪ್ರಕರಣವಿಲ್ಲದ 810 ಹಳ್ಳಿಗಳಿದ್ದವು. ಆದರೆ ಜೂ.2ಕ್ಕೆ 1242 ಹಳ್ಳಿಗಳಲ್ಲಿ ಸೋಂಕಿನ ಪ್ರಕರಣಗಳೇ ಇಲ್ಲ. ಒಂದೇ ಒಂದು ಸೋಂಕಿನ ಪ್ರಕರಣವಿರುವ 503 ಗ್ರಾಮಗಳಿವೆ. ಕೋವಿಡ್ ಪರೀಕ್ಷೆ ಹೆಚ್ಚಳ: ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವರ ನಿರ್ದೇಶನಗಳಂತೆ ಜಿಲ್ಲೆಯ…
ತುಮಕೂರು: ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ರೈತರ ಜಮೀನಿನಲ್ಲಿ ಸಸಿ ನೆಟ್ಟು ಗಿಡಕ್ಕೆ ನೀರು ಹಾಕುವ ಮೂಲಕ ಜೂನ್ 5 ರಂದು ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ.ವಿದ್ಯಾಕುಮಾರಿ ಸೂಚನೆ ನೀಡಿದ್ದಾರೆ. ಕೃಷಿ, ಅರಣ್ಯ ಮತ್ತು ತೋಟಗಾರಿಕೆ ಇಲಾಖೆಯ ಸಹಯೋಗದಲ್ಲಿ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಈಗಾಗಲೇ ಸಸಿಗಳನ್ನು ನೆಡುವುದಕ್ಕೆ ಗುಂಡಿಗಳನ್ನು ಅಗೆದು ಸಿದ್ದಪಡಿಸಿಕೊಳ್ಳಲಾಗಿದೆ. ಆದರೆ ಗ್ರಾಮೀಣ ಭಾಗಗಳಲ್ಲಿ ಕೊರೋನಾ ಸೋಂಕಿನ ಪ್ರಮಾಣ ಹೆಚ್ಚಾಗಿರುವ ಕಾರಣ ಯಾವುದೇ ಸಭೆ, ಸಮಾರಂಭಗಳನ್ನು ಆಯೋಜಿಸದೆ, ಸಾರ್ವಜನಿಕರನ್ನು ಒಗ್ಗೂಡಿಸದೆ ಸರಳ ರೀತಿಯಲ್ಲಿ ಕೋವಿಡ್ ಮುಂಜಾಗೃತಾ ಕ್ರಮಗಳನ್ನು ಅನುಸರಿಸುವ ಮೂಲಕ ವ್ಯವಸ್ಥಿತವಾಗಿ ವಿಶ್ವ ಪರಿಸರ ದಿನವನ್ನು ಆಚರಿಸುವಂತೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಮಹಾತ್ಮಗಾಂಧಿ ನರೇಗಾ ಯೋಜನೆಯಡಿ…
ತುಮಕೂರು: ಜಲಜೀವನ್ ಮಿಷನ್ ಯೋಜನೆಯಡಿ ಜಿಲ್ಲೆಯಲ್ಲಿ ಸುಸ್ಥಿರ ಜಲಮೂಲ ಹೊಂದಿರುವ 83 ಗ್ರಾಮಗಳ ಮನೆಗಳಿಗೆ ನಳ ಸಂಪರ್ಕ ಕಲ್ಪಿಸಲು ನಿರ್ಣಯ ಕೈಗೊಳ್ಳಲಾಯಿತು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿಂದು ಜರುಗಿದ ಜಿಲ್ಲಾ ನೀರು ಮತ್ತು ನೈರ್ಮಲ್ಯ ಮಿಷನ್ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು. ಈ ಸಭೆಯಲ್ಲಿ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಜಲ ಜೀವನ ಮಿಷನ್ ಯೋಜನೆಯಡಿ ಜಿಲ್ಲೆಯಲ್ಲಿ 7 ಬಹುಗ್ರಾಮ ಕುಡಿಯುವ ಯೋಜನೆ ಮೂಲಕ 83 ಸುಸ್ಥಿರ ಜಲಮೂಲ ಹೊಂದಿರುವ ಗ್ರಾಮಗಳ ಪ್ರತಿ ಮನೆ ಮನೆಗೂ 24*7 ನೀರು ಒದಗಿಸಲು ಕಾರ್ಯಾತ್ಮಕವಾಗಿ ನಳ ಅಳವಡಿಕೆಗಾಗಿ ಕ್ರಿಯಾ ಯೋಜನೆಗೆ ಒಪ್ಪಿಗೆ ತೆಗೆದುಕೊಂಡು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ನಿರ್ಣಯ ತೆಗೆದುಕೊಳ್ಳಲಾಯಿತು. ನಂತರ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ. ವಿದ್ಯಾಕುಮಾರಿ ಮಾತನಾಡಿ, ಜಲ ಜೀವನ್ ಮಿಷನ್ ಯೋಜನೆಯಡಿ ನಳ ಅಳವಡಿಕೆಗೆ…
ಹುಳಿಯಾರು: ಕೊರೋನಾ ಕಾರಣ ಮಾವಿನ ಹಣ್ಣಿನ ವ್ಯಾಪಾರ ಸಂಪೂರ್ಣ ಕುಸಿದಿದೆ. ಮಾವು ಖರೀದಿಸುವವರ ಸಂಖ್ಯೆ ಬಹಳ ವಿರಳವಾಗಿದೆ. ಹೀಗಾಗಿ ವ್ಯಾಪಾರಸ್ಥರು ನಷ್ಟ ಅನುಭವಿಸುವಂತಾಗಿದೆ. ಸರ್ಕಾರ ತಳ್ಳು ಗಾಡಿಗಳಲ್ಲಿ ಹಣ್ಣಿನ ವ್ಯಾಪಾರಕ್ಕೆ ಅವಕಾಶ ನೀಡಿರುವುದರಿಂದ, ಅನೇಕರು ಅಂಗಡಿ ಮುಚ್ಚಿ ತಳ್ಳು ಗಾಡಿಗಳಲ್ಲಿ ವ್ಯಾಪಾರ ನಡೆಸುತ್ತಿದ್ದಾರೆ. ಅಲ್ಲದೇ ಮಹಿಳೆಯರು ಬುಟ್ಟಿಯಲ್ಲಿ ಮಾರುತ್ತಿದ್ದಾರೆ. ಆದರೂ ವ್ಯಾಪಾರದ ಅವಧಿ 6 ರಿಂದ 10 ರ ವರೆವಿಗೆ ಮಾತ್ರ ಇರುವುದರಿಂದ ವ್ಯಾಪಾರವೂ ಉತ್ತಮವಾಗಿಲ್ಲ. ಫ್ರೂಟ್ಸ್ ವ್ಯಾಪಾರವನ್ನೇ ನೆಚ್ಚಿಕೊಂಡಿರುವ ಅನೇಕ ಕುಟುಂಬಗಳು ಜೀವನ ನಡೆಸುತ್ತಿವೆ. ಕಳೆದ ಎರಡು ತಿಂಗಳ ಹಿಂದೆ ದ್ರಾಕ್ಷಿ ವ್ಯಾಪಾರ ಮಾಡಿ ಅಲ್ಪಸ್ಪಲ್ಪ ಆದಾಯ ಗಿಟ್ಟಿಸಿಕೊಂಡಿದ್ದ ವ್ಯಾಪಾರಿಗಳು ಈಗ ಕೋವಿಡ್ ಲಾಕ್‍ಡೌನ್ ಕಾರಣ ಮಾವು ಮಾರಲಾಗದೆ ಚಿಂತಾಕ್ರಾಂತರಾಗಿದ್ದಾರೆ. ಕೆಲವರು ಮಾವಿನ ಮರದಲ್ಲೇ ವ್ಯಾಪಾರ ಮಾಡಿ ನಂತರ ಹಣ್ಣು ಮಾಡಿ ಮಾರುವವರಿದ್ದಾರೆ. ಇವರಿಗೆ ವ್ಯಾಪಾರವಾಗದ ಹಣ್ಣುಗಳು ಕೊಳೆಯುತ್ತಿರುವುದು ಮತ್ತಷ್ಟು ನಷ್ಟ ಅನುಭವಿಸುವಂತ್ತಾಗಿದೆ. ಕೆಲ ವ್ಯಾಪಾರಿಗಳು ರೈತರಿಗೆ ಮುಂಗಡವಾಗಿ ಹಣ…
ತುಮಕೂರು: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ 7 ವರ್ಷದ ಸಾಧನೆ ಶೂನ್ಯವಾಗಿದ್ದು, ದೇಶದ ಆರ್ಥಿಕತೆ ಉತ್ತಮ ಪಡಿಸುವಲ್ಲಿ, ಯುವಕರಿಗೆ ಉದ್ಯೋಗ ಸೃಷ್ಠಿಸುವಲ್ಲಿ, ರೈತರ ಹಿತ ಕಾಪಾಡುವಲ್ಲಿ ಸಂಪೂರ್ಣ ವೈಫಲ್ಯವಾಗಿದೆ. ಎಲ್ಲ ಕ್ಷೇತ್ರಗಳ ಅಭಿವೃದ್ಧಿಯಲ್ಲೂ ವಿಫಲವಾಗಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಡಾ. ಜಿ. ಪರಮೇಶ್ವರ್ ಟೀಕಿಸಿದರು. 2014 ರಲ್ಲಿ ನರೇಂದ್ರ ಮೋದಿಯವರು ಪ್ರಧಾನಿಯಾದಾಗ ದೇಶದ ಜನ ಹೊಸ ಚಿಂತನೆ, ಹೊಸ ಯೋಜನೆ, ಆವಿಷ್ಕಾರಗಳ ನಿರೀಕ್ಷೆಯಲ್ಲಿದ್ದರು. ಆದರೆ ಬಹು ಬೇಗ ಆ ನಿರೀಕ್ಷೆಗಳು ಹುಸಿಯಾಗ ತೊಡಗಿದವು ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ನರೇಂದ್ರ ಮೋದಿಯವರು ಪ್ರಧಾನಿಯಾದ ಸಂದರ್ಭದಲ್ಲಿ ದೇಶದಲ್ಲಿ ಜಿಡಿಪಿ ಶೇ. 8.1 ರಷ್ಟಿತ್ತು. ಕ್ರಮೇಣ ಇದು ಕುಸಿಯುತ್ತಾ ಬಂದಿತು. ಈಗ ಈ ಜಿಡಿಪಿ ಮೈನಸ್‍ಗೆ ಹೋಗುವಂತಹ ಕುಸಿತವನ್ನು ಕಾಣುತ್ತಿದ್ದೇವೆ. ಇದು ಕೇಂದ್ರ ಸರ್ಕಾರದ ದೊಡ್ಡ ಸಾಧನೆಯಾಗಿದೆ ಎಂದರು. ಒಂದು ದೇಶದ ಜಿಡಿಪಿ ಸರಿಯಾದ ಪ್ರಮಾಣದಲ್ಲಿ ಇದ್ದರೆ ಆ ದೇಶದ ಆರ್ಥಿಕತೆ ನಿಯಂತ್ರಣದಲ್ಲಿರುತ್ತದೆ ಮತ್ತು…
ಹುಳಿಯಾರು: ಹುಳಿಯಾರು ಹೋಬಳಿಯ ಕೆಂಕೆರೆ ಗ್ರಾಪಂ ವ್ಯಾಪ್ತಿಯಲ್ಲಿ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಲು ಜನರು ಮುಂದೆ ಬರುತ್ತಿಲ್ಲ. ಗ್ರಾಪಂ ವ್ಯಾಪ್ತಿಯಲ್ಲಿ ಕೊರೋನಾ ಸೋಂಕಿನ ಪ್ರಕರಣಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಗ್ರಾಪಂ ಅಧ್ಯಕ್ಷ ಕೆ.ಸಿ.ವಿಕಾಸ್ ಹಾಗೂ ಪಿಡಿಓ ಬಲರಾಮಯ್ಯ ಆರೋಗ್ಯ ಇಲಾಖೆಯ ಮೇಲೆ ಒತ್ತಡ ತಂದು ಹಳ್ಳಿಹಳ್ಳಿಯಲ್ಲಿ ಕೊರೋನಾ ಪರೀಕ್ಷೆ ಮಾಡಿಸಲು ಮುಂದಾಗಿದ್ದಾರೆ. ಪ್ರಾರಂಭದಲ್ಲಿ 2500 ಜನಸಂಖ್ಯೆಯುಳ್ಳ ಕೆಂಕೆರೆಯಲ್ಲಿ 2 ಸಲ ಕೊವಿಡ್ ಪರೀಕ್ಷೆ ಮಾಡಲಾಗಿತ್ತು. ಇದರಲ್ಲಿ ಮೊದಲ ದಿನ 41 ಎರಡನೇ ದಿನ 52 ಮಂದಿ ಮಾತ್ರ ತಪಾಸಣೆ ಮಾಡಿಸಿಕೊಂಡಿದ್ದಾರೆ. 616 ಜನಸಂಖ್ಯೆಯುಳ್ಳ ಕೆ.ಸಿ.ಪಾಳ್ಯದಲ್ಲಿ 28 ಮಂದಿ ಹಾಗೂ 389 ಜನಸಂಖ್ಯೆಯುಳ್ಳ ಗೊಲ್ಲರಹಟ್ಟಿಯಲ್ಲಿ 58 ಮಂದಿ ಮಾತ್ರ ತಪಾಸಣೆ ಮಾಡಿಸಿಕೊಂಡಿದ್ದಾರೆ. ಸಾಕಷ್ಟು ತಿಳಿ ಹೇಳಿದರೂ ಜನ ಬರುತ್ತಿಲ್ಲ. ಕೋವಿಡ್ ಪರೀಕ್ಷೆಯ ದಿನ ಮನೆಗೆ ಬೀಗ ಹಾಕಿ ಹೊಲತೋಟಕ್ಕೆ ಹೋಗುತ್ತಾರೆ. ಒಟ್ಟಾರೆ ಕೋವಿಡ್ ಪರೀಕ್ಷೆಗೆ ಬರುವ ಜನರ ಸಂಖ್ಯೆ ತುಂಬಾ ಕಡಿಮೆಯಾಗಿದೆ. ಜನರ…











