Author: News Desk Benkiyabale

 ತುಮಕೂರು :        ಜಿಲ್ಲೆಯಲ್ಲಿ ಕೋವಿಡ್ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಜಾತ್ರೆ, ಸಭೆ, ಸಮಾರಂಭ, ನಾಟಕ ಪ್ರದರ್ಶನಗಳು ನಡೆಯದಂತೆ ನಿಗಾವಹಿಸಬೇಕೆಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.        ಜಿಲ್ಲಾಧಿಕಾರಿಗಳ ಕಛೇರಿಯ ಕೆಸ್ವಾನ್ ಸಭಾಂಗಣದಲ್ಲಿ ಗುರುವಾರ ಉಪವಿಭಾಗಾಧಿಕಾರಿಗಳು, ತಹಶೀಲ್ದಾರ್ ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿ ಮಾತನಾಡಿದ ಅವರು, ಜಿಲ್ಲೆಯ ಯಾವುದೇ ತಾಲ್ಲೂಕಿನಲ್ಲಿ ಜಾತ್ರೆ, ಮತ್ತಿತರ ಸಭೆ/ ಸಮಾರಂಭಗಳು ನಡೆದರೆ ಆಯಾ ತಾಲ್ಲೂಕಿನ ತಹಶೀಲ್ದಾರ್, ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ಹಾಗೂ ತಾಲ್ಲೂಕು ಪಂಚಾಯತಿ ಕಾರ್ಯ ನಿರ್ವಹಣಾಧಿಕಾರಿಗಳನ್ನು ಪೂರ್ಣ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಸೂಚನೆ ನೀಡಿದರು.       ಜಿಲ್ಲೆಯಲ್ಲಿ ನಿಗಧಿತ ಗುರಿಯಂತೆ ತಾಲ್ಲೂಕುವಾರು ಪ್ರತಿದಿನ ವೈಜ್ಞಾನಿಕವಾಗಿ ಕನಿಷ್ಠ ತಲಾ 500 ಸ್ವಾಬ್ ಸಂಗ್ರಹಣೆ ಮಾಡಬೇಕು. ಸಂಗ್ರಹಿಸಲಾದ ಮಾದರಿಗಳನ್ನು SಂಖI/ IಐI/ ಅomoಡಿbiಜ / ಪ್ರಥಮ ಮತ್ತು ದ್ವಿತೀಯ ಸಂಪರ್ಕಿತ ಮಾದರಿಗಳೆಂದು ಗುರುತು ಮಾಡಿ ವಿಂಗಡಣೆ…

Read More

ಸಿಎಸ್ ಪುರ:        ಬಿಜೆಪಿ ಜೆಡಿಎಸ್ ಕಾರ್ಯಕರ್ತರ ದಿಕ್ಕಾರಗಳ ನಡುವೆ ಸಿಎಸ್ ಪುರ ದಲ್ಲಿ ಪೆÇಲೀಸ್ ಸಿಬ್ಬಂದಿಗಳು ಮತ್ತು ಅಧಿಕಾರಿಗಳು ಸಂಕಷ್ಟಕ್ಕೆ ಸಿಲುಕಿದ್ದು ಯಾವ ರಾಜಕೀಯ ನಾಯಕರುಗಳನ್ನು ಹೋಗಬೇಕೆಂಬ ಪ್ರಶ್ನೆಗೆ ಪೆÇಲೀಸ್ ಅಧಿಕಾರಿಗಳೇ ಉತ್ತರಿಸಬೇಕಾಗುತ್ತದೆ.       ರಾಜಕೀಯ ವ್ಯಕ್ತಿಗಳ ನಡುವೆ ನಡೆದಂತಹ ಸಂಘರ್ಷಕ್ಕೆ ನಾಗರಿಕರು ರೈತರುಗಳು ಸಂಕಷ್ಟಕ್ಕೀಡಾದ ಘಟನೆ ಸಿಎಸ್ ಪುರದಲ್ಲಿ ನಡೆದಿದೆ ನೆನ್ನೆ ಶಾಸಕ ಮಸಾಲೆ ಜಯರಾಮ್ ಮಗ ತೇಜು ಮೇಲೆ ನಡೆದ ಘಟನೆಯಿಂದ ಮಾಜಿ ಮತ್ತು ಹಾಲಿ ಶಾಸಕರುಗಳ ಹಿಂಬಾಲಕರು ಹಾಗೂ ಕಾರ್ಯಕರ್ತರುಗಳು ನಡುವೆ ದಿಕ್ಕಾರ ಗಳ ಸುರಿಮಳೆ ಸುರಿದ ಘಟನೆ ನಡೆದಿದ್ದು ರಾಜಕಾರಣಕ್ಕೆ ಹೆಚ್ಚಿನ ಬೆಂಬಲ ನೀಡುತ್ತಿರುವ ಮಾಜಿ ಶಾಸಕ ಎಂಪಿ ಕೃಷ್ಣಪ್ಪ ವಿರುದ್ಧ ಬಿಜೆಪಿ ಕಾರ್ಯಕರ್ತರು ಒಂದೆಡೆ ಧಿಕ್ಕಾರ ಕೂಗುತ್ತಿದ್ದಾರೆ ಮತ್ತೊಂದೆಡೆ ಹಾಲಿ ಶಾಸಕ ಮಸಾಲೆ ಜಯರಾಮ್ ವಿರುದ್ಧ ಘೋಷಣೆಯನ್ನು ಇವರನ್ನು ನಿಯಂತ್ರಿಸಲು ಪೆÇಲೀಸರು ಹರಸಾಹಸ ಪಟ್ಟು ಎರಡು ಕಡೆಯ ಬೆಂಬಲಿಗರನ್ನು ಚದುರಿಸುವಲ್ಲಿ ಯಶಸ್ವಿಯಾದರು ಮಾಜಿ ಶಾಸಕ ಎಂ ಟಿ…

Read More

 ತುಮಕೂರು :       ತುಮಕೂರು ಜಿಲ್ಲಾ ವ್ಯಾಪ್ತಿಯಲ್ಲಿ ಕೋವಿಡ್-19 ಸೋಂಕಿತರಿಗೆ ಸರ್ಕಾರದ ಮಾರ್ಗಸೂಚಿಯನ್ವಯ ಖಾಸಗಿ ಆಸ್ಪತ್ರೆಗಳು ಚಿಕಿತ್ಸೆ ನೀಡುವುದನ್ನು ಖಾತರಿ ಪಡಿಸಿಕೊಳ್ಳಲು ಜಿಲ್ಲಾಡಳಿತದ ವತಿಯಿಂದ ನೋಡಲ್ ಅಧಿಕಾರಿಗಳನ್ನು ನೇಮಿಸಿ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅವರು ಆದೇಶಿಸಿದ್ದಾರೆ.       ತುಮಕೂರು ಎತ್ತಿನಹೊಳೆ ನಾಲಾ ವಲಯ ವಿಶೇಷ ಭೂಸ್ವಾಧೀನಾಧಿಕಾರಿ  ಎಂ.ಎನ್.ಮಂಜುನಾಥ್(9448892554), ತುಮಕೂರು ರಾಯದುರ್ಗ ಮತ್ತು ತುಮಕೂರು ದಾವಣಗೆರೆ ರೈಲ್ವೆ ಯೋಜನೆಯ ವಿಶೇಷ ಭೂಸ್ವಾಧೀನಾಧಿಕಾರಿ ಧರ್ಮಪಾಲ್ ಎಸ್.(9844772655/6361429336), ತುಮಕೂರು-ಎನ್‍ಹೆಚ್-206ನ ವಿಶೇಷ ಭೂಸ್ವಾಧೀನಾಧಿಕಾರಿ ನಟರಾಜ್(7829532974), ಜಿಲ್ಲಾಸ್ಪತ್ರೆ ಫಿಜಿಶಿಯನ್ ಡಾ|| ಭಾನುಪ್ರಕಾಶ್(9740582743), ನೇತ್ರ ತಜ್ಞೆ ಡಾ|| ಅಸ್ಗರ್ ಬೇಗ್ ಸಿ.ಐ(9880342309) ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಲಾಗಿದ್ದು, ಈ ಅಧಿಕಾರಿಗಳು ತಕ್ಷಣದಿಂದ ಕಾರ್ಯಪ್ರವೃತ್ತರಾಗಬೇಕು ಎಂದು ಅವರು ತಿಳಿಸಿದ್ದಾರೆ.       ಸರ್ಕಾರದ ನಿರ್ದೇಶನದಂತೆ ತುಮಕೂರು ಜಿಲ್ಲಾ ವ್ಯಾಪ್ತಿಯಲ್ಲಿರುವ ಖಾಸಗಿ ಆಸ್ಪತ್ರೆವಾರು ಕೋವಿಡ್-19 ಸೋಂಕಿತರಿಗೆ ಪ್ರತ್ಯೇಕವಾಗಿ ಶೇ.20ರಷ್ಟು ಮೀಸಲಿರಿಸಿರುವ ಹಾಸಿಗೆಗಳ ಬಗ್ಗೆ ಮಾಹಿತಿ ಪಡೆದುಕೊಳ್ಳುವುದು. ಹಾಸಿಗೆಗಳ ಅನುಗುಣವಾಗಿ ಸೋಂಕಿತರಿಗೆ ಹಾಸಿಗೆಗಳನ್ನು ಹಂಚಿಕೆ ಮಾಡಲು ಕ್ರಮವಹಿಸುವುದು. ಸೋಂಕಿತರನ್ನು…

Read More

ಶಿರಾ:       ಏ.5ರಂದು ಬೆಳಿಗ್ಗೆ ಸುಮಾರು 9 ಗಂಟೆ ಸಮಯದಲ್ಲಿ ಶಿರಾ ತಾಲ್ಲೂಕು ಕಳ್ಳಂಬೆಳ್ಳ ಪೊಲೀಸ್ ಠಾಣಾ ಸರಹದ್ದು ದೊಡ್ಡಗೂಳ ಗ್ರಾಮದಲ್ಲಿ ಕುಮಾರಿ ಕಾವ್ಯ ಬಿನ್ ಪಾಂಡುರಂಗಪ್ಪ ದೊಡ್ಡಗೂಲ ರವರು ಮನೆಯಿಂದ ಶಿರಾ ಕಾಲೇಜಿಗೆ ನಡೆದುಕೊಂಡು ಹೋಗುತ್ತಿದ್ದಾಗ ಅದೇ ಗ್ರಾಮದ ವಾಸಿ ಆರೋಪಿ ಈರಣ್ಣ ಎಂಬಾತನು ಬೈಕ್ ನಿಲ್ಲಿಸಿ ಕಾಲೇಜಿಗೆ ಹೋಗುತ್ತಿದ್ದ ಕಾವ್ಯಳನ್ನು ದೊಡ್ಡಗೂಳ ಕೆರೆಯ ಪಕ್ಕದಲ್ಲಿರುವ ಮಲ್ಲಯ್ಯರವರ ಬಾಬ್ತು ಸೀಮೆ ಜಾಲಿಗಿಡಗಳು ಬೆಳೆದಿರುವ ಜಮೀನಿಗೆ ಎಳೆದುಕೊಂಡು ಹೋಗಿ ತನ್ನ ಕೈನಲ್ಲಿದ್ದ ಕುಡುಗೋಲಿನಿಂದ ಆಕೆಯ ಮುಖ, ಕತ್ತು ಮತ್ತು ಕೈಗಳನ್ನು ಕೊಚ್ಚಿ ಕೊಲೆ ಮಾಡಿ ಕುಡುಗೋಲಿನ ಸಮೇತ ಓಡಿ ಹೋಗಿದ್ದು ಈ ಸಂಬಂಧ ಕಳ್ಳಬೆಳ್ಲ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು.       ಸದರಿ ಕೊಲೆ ಪ್ರಕರಣದ ಪತ್ತೆಗಾಗಿ ಸಿಪಿಐಶಿರಾ ಗ್ರಾಮಾಂತರ ವೃತ್ತ ರವರ ನೇತೃತ್ವದಲ್ಲಿ ತಂಡವನ್ನು ರಚಿಸಿದ್ದು, ಸದರಿ ತಂಡವು ಪ್ರಕರಣ ದಾಖಲಾದ 24 ಗಂಟೆಯೊಳಗೆ ಏ.6ರಂದು ಬೆಳಿಗ್ಗೆ 6 ಗಂಟೆ ಸಮಯದಲ್ಲಿ ಹಲ್ಲೂರು…

Read More

ತುಮಕೂರು:       ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸಾರಿಗೆ ನೌಕರರ ಸಂಘಟನೆ ಮುಷ್ಕರ ಕರೆಯ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಸಾರಿಗೆ ಸಂಸ್ಥೆಯ ಬಸ್ ಸಂಚಾರ ಸ್ಥಗಿತವಾಗಿದೆ. ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ. ಖಾಸಗಿ ಬಸ್ಸುಗಳು ಕಾರ್ಯಾಚರಣೆ ನಡೆಸುತ್ತಿದ್ದರೂ, ಪ್ರಯಾಣಿಕರಿಗೆ ಸಂಪೂರ್ಣ ತೃಪ್ತಿಕರ ಸೇವೆ ನೀಡಲು ಸಾಧ್ಯವಾಗಿಲ್ಲ. ಸಾರ್ವಜನಿಕರು ಎಂದಿನಂತೆ ಶಾಲಾ, ಕಾಲೇಜು, ಸರಕಾರಿ ಮತ್ತು ಖಾಸಗಿ ಕಚೇರಿಗಳಿಗೆ ತೆರಳಲು ಬಸ್ ನಿಲ್ದಾಣಕ್ಕೆ ಆಗಮಿಸಿದ್ದು, ಸರಕಾರಿ ಬಸ್ಸುಗಳಿಲ್ಲದೆ, ಅವುಗಳ ಸ್ಥಾನದಲ್ಲಿದ್ದ ಬೆರಳೆಣಿಕೆಯ ಖಾಸಗಿ ಬಸ್ಸುಗಳಿಗೆ ಹತ್ತಬೇಕೆ, ಬೇಡವೆ ಎಂಬ ಗೊಂದಲದಲ್ಲಿಯೇ ಇದ್ದಂತೆ ಕಂಡಬಂದಿದೆ. ಕೆಲವರು ಖಾಸಗಿ ಬಸ್ಸುಗಳಿಗೆ ಹತ್ತಲು ಹಿಂದೇಟು ಹಾಕಿರುವುದು ಕಂಡು ಬಂದಿದೆ.       ನಗರದಿಂದ ತುಮಕೂರು ಜಿಲ್ಲೆಯ 9 ತಾಲೂಕು ಕೇಂದ್ರಗಳಾದ ತಿಪಟೂರು, ಕುಣಿಗಲ್, ಪಾವಗಡ, ಮಧುಗಿರಿ, ಕೊರಟಗೆರೆ, ಚಿಕ್ಕನಾಯಕನಹಳ್ಳಿ, ಶಿರಾ, ಗುಬ್ಬಿ, ತುರುವೇಕೆರೆಗಳಿಗೆ ತೆರೆಳಲು ಸರಿಯಾದ ಬಸ್ಸುಗಳಿಲ್ಲದ ಪ್ರಯಾಣಿಕರು ಪರದಾಡುವಂತಾಗಿದೆ. ಸಾರಿಗೆ ನೌಕರರ ಮುಷ್ಕರದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಸಾರಿಗೆ ಸಮಿತಿಯು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ…

Read More

ಮಧುಗಿರಿ:       ಜಿಲ್ಲೆಯಲ್ಲಿರುವ ರೈತ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗಲು ಉಚಿತ ಬಸ್ ಪಾಸ್ ನೀಡುವ ಉದ್ದೇಶ ಹೊಂದಲಾಗಿದೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ. ಎನ್ ರಾಜಣ್ಣ ತಿಳಿಸಿದರು.       ಪಟ್ಟಣದಲ್ಲಿರುವ ಸ್ವಗೃಹದಲ್ಲಿ ಗುರುವಾರ ವಿಎಸ್ಸೆಸ್ಸೆನ್ ಕಾರ್ಯದರ್ಶಿಯಾಗಿ ಟಿ ವಿ ಎಸ್ ಮಂಜುನಾಥ್ ಅವರನ್ನು ನೇಮಿಸಿದ ಹಿನ್ನೆಲೆಯಲ್ಲಿ ಮರುವೇಕೆರೆ, ಗಂಜಲಗುಂಟೆ, ವಿಎಸ್ಸೆಸ್ಸೆನ್ ಮತ್ತು ಕಾಂಗ್ರೆಸ್ ಪಕ್ಷದ ಮುಖಂಡರು ಕೆ.ಎನ್ ರಾಜಣ್ಣರನ್ನು ಅಭಿನಂದಿಸಿದ ಸಂದರ್ಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.        ರೈತರಿಗೆ ಮತ್ತು ಅತಿ ಸಣ್ಣ ರೈತರಿಗೆ ಡಿಸಿಸಿ ಬ್ಯಾಂಕ್ ವತಿಯಿಂದ ನೀಡಲಾಗುವ ಸಾಲ ಪಡೆದು ಮೀಟರ್ ಬಡ್ಡಿಯಿಂದ ಪಾರಾಗಿ ಅಭಿವೃದ್ಧಿ ಹೊಂದುವಂತೆ ತಿಳಿಸಿ, ಮುಂದಿನ ದಿನಗಳಲ್ಲಿ ಪ್ರತಿಯೊಬ್ಬ ರೈತರಿಗೂ ಸಾಲ ನೀಡಲಾಗುವುದು. ಡಿಸಿಸಿ ಬ್ಯಾಂಕ್ ವತಿಯಿಂದ ಈಗಾಗಲೇ ಮೃತಪಟ್ಟ ರೈತರ ಕುಟುಂಬದ 1ಲಕ್ಷದವರೆಗಿನ ಸಾಲ ಮನ್ನಾ ಮಾಡಲಾಗುತ್ತಿದ್ದು, ಕೊರೋನಾ ಹಿನ್ನೆಲೆಯಲ್ಲಿ ಜಿಲ್ಲೆಯ ಐವತ್ತು ಸಾವಿರ ಬೀದಿ ಬದಿ ವ್ಯಾಪಾರಿಗಳಿಗೆ ಹತ್ತು ಸಾವಿರ ರೂಗಳ…

Read More

ತುಮಕೂರು:       ನಗರದ ರೈಲ್ವೆ ನಿಲ್ದಾಣ ರಸ್ತೆಯ ಲ್ಲಿರುವ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ತಾತ್ಕಾಲಿಕವಾಗಿ ಸ್ಥಾಪಿಸಿರುವ ಕೋವಿಡ್ ಲಸಿಕೆ ಹಾಕುವ ಕೇಂದ್ರದಲ್ಲಿ 2ನೇ ಹಂತದ ಲಸಿಕೆ ನೀಡುವ ಕಾರ್ಯಕ್ಕೆ ತುಮಕೂರು ನಗರ ಶಾಸಕ ಜಿ.ಬಿ.ಜೋತಿಗಣೇಶ್ ಚಾಲನೆ ನೀಡಿದರು.       ನಗರಪಾಲಿಕೆ, ಆರೋಗ್ಯ ಇಲಾಖೆ ಹಾಗೂ 15ನೇ ವಾರ್ಡಿನ ಕಾರ್ಪೋರೇಟರ್ ಗಿರಿಜಾ ಧನಿಯಕುಮಾರ್ ಅವರ ಒತ್ತಾಸೆಯ ಮೇರೆಗೆ ನಗರದ ಐದಾರು ವಾರ್ಡುಗಳಿಗೆ ಕೇಂದ್ರ ಸ್ಥಾನದಲ್ಲಿರುವ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಲಸಿಕಾ ಕೇಂದ್ರ ಆರಂಭಗೊಂಡಿದ್ದು, 74 ವರ್ಷದ ಸರಸ್ವತಿ ಎಂಬ ಮಹಿಳೆಯೊಬ್ಬರಿಗೆ ಲಸಿಕೆ ನೀಡುವ ಮೂಲಕ ವಿಶೇಷ ಅಭಿಯಾನಕ್ಕೆ ಚಾಲನೆ ನೀಡಲಾಯಿತು.        ಈ ವೇಳೆ ಮಾತನಾಡಿದ ಶಾಸಕ ಜಿ.ಬಿ. ಜೋತಿಗಣೇಶ್, ಸಾರ್ವಜನಿಕರ ಹಿತದೃಷ್ಟಿಯಿಂದ ಕಾಲೇಜಿನ ಪ್ರಾಂಶುಪಾಲ ರಾದ ಪ್ರೊ.ಜಗದೀಶ್ ಅವರು ಒಂದು ಕೊಠಡಿಯನ್ನು ಲಸಿಕಾ ಕೇಂದ್ರವಾಗಿ ಬಳಸಿಕೊಳ್ಳಲು ಅನುವು ಮಾಡಿಕೊಟ್ಟಿದ್ದಾರೆ.ಆಸ್ಪತ್ರೆಗೆ ಹೋದಾಗ ಕೊಂಚ ಹಿಂಜರಿಕೆಯಾಗುವುದು ಸಹಜ. ಆದರೆ ಇಲ್ಲಿ ಆ ವಾತಾವರಣವಿಲ್ಲ.…

Read More

ತುಮಕೂರು :        ತುರುವೇಕೆರೆ ಶಾಸಕ ತೇಜು ಮಸಾಲೆ ಮಾಲೀಕ ಹಾಗೂ ಕರ್ನಾಟಕ ಸಾಂಬಾರ ಪದಾರ್ಥಗಳ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಮಸಾಲೆ ಜಯರಾಮ್ ಅವರ ಪುತ್ರ ತೇಜು ಜಯರಾಂ ಅವರ ಮೇಲೆ ಮಂಗಳವಾರ ರಾತ್ರಿ ಹತ್ಯೆಗೆ ಪ್ರಯತ್ನ ನಡೆದಿದೆ. ಬೆಂಗಳೂರಿನಿಂದ ತುರುವೇಕೆರೆಯ ಅಂಕಲಕೊಪ್ಪ ಗ್ರಾಮಕ್ಕೆ ತೆರಳುತ್ತಿದ್ದ ತೇಜು ಅವರ ಮೇಲೆ ಗುಬ್ಬಿ ತಾಲ್ಲೂಕಿನ ನೆಟ್ಟೆಕೆರೆ ಬಳಿ ದಾಳಿ ನಡೆದಿದೆ.        ಕಾರಿನಲ್ಲಿ ಪ್ರಯಾಣಿಸುತ್ತಿದ್ದ ತೇಜು ಅವರನ್ನು ಮಾರ್ಗ ಮಧ್ಯದಲ್ಲಿ ಅಡ್ಡಗಟ್ಟಿದ ಕಿಡಿಗೇಡಿಗಳು ಜಗಳ ತೆಗೆದು ಹಲ್ಲೆ ನಡೆಸಿದ್ದಾರೆ. ದಾಳಿಯ ಉದ್ದೇಶ ಅರಿತ ತೇಜು ಜಯರಾಮ್ ಕೂಡಲೇ ಎಚ್ಚೆತ್ತು ಕಿಡಿಗೇಡಿಗಳಿಂದ ತಪ್ಪಿಸಿಕೊಂಡಿದ್ದಾರೆ. ಕೂಡಲೇ ಸ್ಥಳದಲ್ಲಿ ಸ್ಥಳೀಯರು ಜಮಾಯಿಸಿದ್ದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಷ್ಟರಲ್ಲಿ ದಾಳಿಕೋರರು ತಾವು ಬಂದಿದ್ದ ಎರಡು ಕಾರುಗಳನ್ನು ಸ್ಥಳದಲ್ಲೆ ಬಿಟ್ಟು ಪರಾರಿಯಾಗಿದ್ದಾರೆ.        ದಾಳಿಕೋರರ ಕಾರಿನಲ್ಲಿ ಕಾರದ ಪುಡಿ, ಲಾಂಗ್, ಕ್ರಿಕೆಟ್ ಬ್ಯಾಟ್, ಚಾಕು ಮತ್ತಿತರ ಮಾರಕಾಸ್ತ್ರಗಳು ಪತ್ತೆಯಾಗಿವೆ. ತೇಜು ಅವರನ್ನು…

Read More

 ತುಮಕೂರು :        ಕೆಸ್ಸಾರ್ಟಿಸಿ ಸಾರಿಗೆ ನೌಕರರ ಮುಷ್ಕರದ ಹಿನ್ನೆಲೆಯಲ್ಲಿ ಪ್ರಯಾಣಿಕರ ಸಂಚಾರಕ್ಕೆ ತೊಂದರೆಯಾಗದಂತೆ ಜಿಲ್ಲಾಡಳಿದಿಂದ ಖಾಸಗಿ ಬಸ್, ಮ್ಯಾಕ್ಸಿಕ್ಯಾಬ್ ಹಾಗೂ ಇನ್ನಿತರ ಪರ್ಯಾಯ ವ್ಯವಸ್ಥೆಯೊಂದಿಗೆ ಪ್ರಯಾಣಿಕರ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅವರು ತಿಳಿಸಿದರು.       ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಖಾಸಗಿ ಬಸ್ ಮಾಲೀಕರು ಹಾಗೂ ಮ್ಯಾಕ್ಸಿ ಕ್ಯಾಬ್ ಇನ್ನಿತರ ವಾಹನಗಳ ಮಾಲೀಕರೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು.       ಜಿಲ್ಲೆಯಲ್ಲಿ ಕೆಸ್ಸಾರ್ಟಿಸಿ ಸಂಸ್ಥೆಯ 610 ಬಸ್‍ಗಳ ಪ್ರತಿನಿತ್ಯ ಸಂಚಾರ ನಡೆಸುತ್ತಿದ್ದವು ಅಲ್ಲದೇ ಜಲ್ಲೆಯಲ್ಲಿ 485 ಪರವಾನಗಿ ಇರುವ ಖಾಸಗಿ ಬಸ್‍ಗಳು ಸಂಚಾರ ನಡೆಸುತ್ತಿವೆ. ಈಗಾಗಿ ಜಿಲ್ಲೆಯೊಳಗಡೆ ಸ್ಥಳೀಯವಾಗಿ ಪ್ರಯಾಣಿಕರ ಸಾರಿಗೆ ವ್ಯತ್ಯಯಲ್ಲಿ ಉಂಟಾಗುವುದಿಲ್ಲ. ಆದರೆ ತುಮಕೂರಿನಿಂದ ಬೆಂಗಳೂರು, ಚಿತ್ರದುರ್ಗ, ಮಂಡ್ಯ, ಮೈಸೂರು, ಶಿವಮೊಗ್ಗ ಮತ್ತಿತರ ಜಿಲ್ಲೆಯ ಸುತ್ತಮುತ್ತಲಿನ ಜಿಲ್ಲೆಗಳಿಗೆ ತೆರಳುವ ಪ್ರಯಾಣಿಕರಿಗೆ ತೊಂದರೆಯಾಗಲಿದೆ ಎಂದರು. ಈ ಹಿನ್ನೆಲೆಯಲ್ಲಿ ಅಂತರ್ ಜಿಲ್ಲಾ ಪ್ರಯಾಣಿಕರ ಸಂಚಾರಕ್ಕೆ…

Read More

ಹುಳಿಯಾರು:        ಹುಳಿಯಾರು ನಾಡಕಚೇರಿಯಲ್ಲಿ ಪ್ರಿಂಟರ್ ಸಮಸ್ಯೆಯಿಂದಾಗಿ ಅರ್ಜಿ ಸೇವೆ ಸ್ಥಗಿತಗೊಳಿಸಲಾಗಿದೆ.       ಹುಳಿಯಾರು ಹೋಬಳಿಯು ಜಿಲ್ಲೆಯಲ್ಲೇ ಅತೀ ದೊಡ್ಡ ಹೋಬಳಿ ಕೇಂದ್ರವಾಗಿದ್ದು ನಿತ್ಯ ಸಾವಿರಾರು ಮಂದಿ ಹಳ್ಳಿಗಳಿಂದ ಇಲ್ಲಿಗೆ ಬಂದೋಗುತ್ತಾರೆ. ಅಲ್ಲದೆ ಇಲ್ಲಿನ ನಾಡಕಛೇರಿಗೆ ಜಾತಿಆದಾಯ, ಫೌತಿ ಖಾತೆ, ವಂಶವೃಕ್ಷ ಸೇರಿದಂತೆ ವಿವಿಧ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಲು ನೂರಾರು ಮಂದಿ ಆಗಮಿಸುತ್ತಾರೆ. ಪಹಣಿ ಹಾಗೂ ಎಂಆರ್ ಪಡೆಯಲೂ ಸಹ ಇಲ್ಲಿಗೆ ಬರುತ್ತಾರೆ.       ಚುನಾವಣೆ ಸಂದರ್ಭದಲ್ಲಂತೂ ಎಂದಿಗಿಂತಲೂ ಹೆಚ್ಚು ಮಂದಿ ವಿವಿಧ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಲು ಬರುತ್ತಾರೆ. ಇದು ಇತ್ತೀಚೆಗೆ ನಡೆದ ಗ್ರಾಪಂ ಹಾಗೂ ಪಟ್ಟಣ ಪಂಚಾಯ್ತಿ ಚುನಾವಣೆ ಸಂದರ್ಬದಲ್ಲಿ ಸಾಭೀತಾಗಿದೆ. ಹಾಗಾಗಿ ತಾಲೂಕಿನಲ್ಲೇ ಹೆಚ್ಚು ವರ್ಕ್‍ಲೋಡ್ ಇರುವ ಹುಳಿಯಾರು ನಾಡಕಛೇರಿಗೆ ಇಬ್ಬರು ಕಂಪ್ಯೂಟರ್ ಆಪರೇಟರ್ ಹಾಗೂ ಎರಡು ಪ್ರಿಂಟರ್ ಮತ್ತು ಸಿಸ್ಟಮ್‍ಗಳ ಅಗತ್ಯವಿದೆ. ಆದರೆ ಒಬ್ಬರು ಆಪರೇಟರ್ ಕೊಟ್ಟು ಇಲಾಖೆ ಕೈ ಕಟ್ಟಿ ಕುಳಿತಿದೆ.        ಪರಿಣಾಮ…

Read More