Author: News Desk Benkiyabale

ತುಮಕೂರು :       ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳ ನಿಯಂತ್ರಣಕ್ಕಾಗಿ ಎಲ್ಲಾ ಸಮುದಾಯದವರ ಸಹಭಾಗಿತ್ವ ಮತ್ತು ಸಹಕಾರ ಅತ್ಯಾವಶ್ಯಕವಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ತಿಳಿಸಿದರು.       ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ಕೋವಿಡ್ ನಿಯಂತ್ರಣ ಸಂಬಂಧ ಮುಸ್ಲಿಂ ಸಮುದಾಯದ ಮುಖಂಡರೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಜಿಲ್ಲೆಗಳಲ್ಲಿ ಒಂದಾಗಿರುವ ತುಮಕೂರಿನಲ್ಲಿಯೂ ದಿನೇ ದಿನೇ ಕೋವಿಡ್ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮುಸ್ಲಿಂ ಬಾಂಧವರು ರಂಜಾನ್ ಹಬ್ಬದ ಸಂದರ್ಭದಲ್ಲಿ ಸರ್ಕಾರದ ಮಾರ್ಗಸೂಚಿಯನ್ನು ಪಾಲಿಸಿ ಕೋವಿಡ್ ನಿಯಂತ್ರಣಕ್ಕೆ ಸಹಕರಿಸಬೇಕು ಎಂದು ಮನವಿ ಮಾಡಿದರು.     ರಂಜಾನ್ ಹಬ್ಬದಲ್ಲಿ ಮುಸ್ಲಿಂ ಬಾಂಧವರು ಕೊರೋನಾ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಮಾಸ್ಕ್ ಹಾಕಿಕೊಳ್ಳುವುದು ಮತ್ತು ಸಾಮಾಜಿಕ ಅಂತರವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ವಯಸ್ಸಾದವರು ಅನವಶ್ಯಕವಾಗಿ ಹೊರಗಡೆ ಬರಬಾರದು ಎಂದು ತಿಳಿಸಿದರು. ರಂಜಾನ್ ಸಮಯದಲ್ಲಿ ಉಪವಾಸದ ಆಚರಣೆ ರೂಢಿಯಲ್ಲಿದ್ದು, ಈ ಸಂದರ್ಭದಲ್ಲೂ ಲಸಿಕೆ ಹಾಕಿಸಿಕೊಳ್ಳಲಿಚ್ಛಿಸುವವರಿಗೆ ಲಸಿಕೆ ಹಾಕಿಸಬೇಕು.…

Read More

ತುಮಕೂರು:        ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳ ನಿಯಂತ್ರಣಕ್ಕಾಗಿ ಎಲ್ಲಾ ಸಮುದಾಯದವರ ಸಹಭಾಗಿತ್ವ ಮತ್ತು ಸಹಕಾರ ಅತ್ಯಾವಶ್ಯಕವಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ತಿಳಿಸಿದರು.       ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ಕೋವಿಡ್ ನಿಯಂತ್ರಣ ಸಂಬಂಧ ಮುಸ್ಲಿಂ ಸಮುದಾಯದ ಮುಖಂಡರೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಜಿಲ್ಲೆಗಳಲ್ಲಿ ಒಂದಾಗಿರುವ ತುಮಕೂರಿನಲ್ಲಿಯೂ ದಿನೇ ದಿನೇ ಕೋವಿಡ್ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮುಸ್ಲಿಂ ಬಾಂಧವರು ರಂಜಾನ್ ಹಬ್ಬದ ಸಂದರ್ಭದಲ್ಲಿ ಸರ್ಕಾರದ ಮಾರ್ಗಸೂಚಿಯನ್ನು ಪಾಲಿಸಿ ಕೋವಿಡ್ ನಿಯಂತ್ರಣಕ್ಕೆ ಸಹಕರಿಸಬೇಕು ಎಂದು ಮನವಿ ಮಾಡಿದರು. ರಂಜಾನ್ ಹಬ್ಬದಲ್ಲಿ ಮುಸ್ಲಿಂ ಬಾಂಧವರು ಕೊರೋನಾ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಮಾಸ್ಕ್ ಹಾಕಿಕೊಳ್ಳುವುದು ಮತ್ತು ಸಾಮಾಜಿಕ ಅಂತರವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ವಯಸ್ಸಾದವರು ಅನವಶ್ಯಕವಾಗಿ ಹೊರಗಡೆ ಬರಬಾರದು ಎಂದು ತಿಳಿಸಿದರು.       ರಂಜಾನ್ ಸಮಯದಲ್ಲಿ ಉಪವಾಸದ ಆಚರಣೆ ರೂಢಿಯಲ್ಲಿದ್ದು, ಈ ಸಂದರ್ಭದಲ್ಲೂ ಲಸಿಕೆ ಹಾಕಿಸಿಕೊಳ್ಳಲಿಚ್ಛಿಸುವವರಿಗೆ ಲಸಿಕೆ…

Read More

ತುಮಕೂರು:       ಕೊವೀಡ್-19 2ನೇ ಅಲೆ ಜಿಲ್ಲೆಯಲ್ಲಿ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಕೋವಿಡ್ ಟೆಸ್ಟ್, ವ್ಯಾಕ್ಸೀನೇಷನ್ ಹಾಗೂ ಜಿಲ್ಲಾಸ್ಪತ್ರೆಯಲ್ಲಿ ಕೈಗೊಂಡಿರುವ ಕ್ರಮಗಳ ಕುರಿತು ಜಿಲ್ಲಾಧಿಕಾರಿ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ವೈದ್ಯರಿಂದ ಮಾಹಿತಿ ಪಡೆದರು.        ಕೋವಿಡ್ ಸೋಂಕಿತರು ಆಸ್ಪತ್ರೆಗೆ ದಾಖಲಾದ ಕೂಡಲೇ ಚಿಕಿತ್ಸೆ ನೀಡಲು ಟ್ರೈಯೆಜ್ ಮಾಡಬೇಕು. ಇದರಿಂದ ಸೋಂಕಿತರ ಆರೋಗ್ಯ ಸ್ಥಿತಿ ಹಾಗೂ ಅವರಿಗೆ ಅಗತ್ಯವಿರುವ ಚಿಕಿತ್ಸೆ ನೀಡಲು ಸಾಧ್ಯವಾಗುತ್ತದೆ ಎಂದರು. ಟ್ರೈಯೆಜ್ ಅಡಿಯಲ್ಲಿ ರೋಗಿಗಳು ಬಯಸಿದರೆ ಅಥವಾ ಜಿಲ್ಲಾಸ್ಪತ್ರೆಯಲ್ಲಿ ಬೆಡ್, ಐಸಿಯು ಸಿಗದೇ ಇರುವ ಸಂದರ್ಭದಲ್ಲಿ ಕೋವಿಡ್ ಸೋಂಕಿತರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲು ರೋಗಿಯ ಆರೋಗ್ಯ ಸ್ಥಿತಿ ತಿಳಿಯಲು ಅನುಕೂಲವಾಗುವುದು. ಇದನ್ನು ಇಂದಿನಿಂದಲೇ ಜಾರಿಗೆ ಬರುವ ವ್ಯವಸ್ಥೆ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.         ಜಿಲ್ಲೆಯಲ್ಲಿ ಪ್ರತಿದಿನ 4000 ಕೋವಿಡ್ ಸ್ಯಾಂಪಲ್ ಟೇಸ್ಟ್ ನಡೆಸಬೇಕು. ಚಿಕಿತ್ಸೆಗೆ ಅಗತ್ಯವಿರುವ ಸಲಕರಣೆಗಳ ವ್ಯವಸ್ಥೆ ಮಾಡಿಕೊಳ್ಳಬೇಕು. ಆರ್‍ಟಿಪಿಸಿಆರ್ ಲ್ಯಾಬ್‍ಗಳನ್ನು ಉನ್ನತೀಕರಿಸಿ ಟೆಸ್ಟ್ ಸ್ಯಾಂಪಲ್…

Read More

ಹುಳಿಯಾರು:      ಬೆಳಕು ಹರಿಯುವ ಮುನ್ನವೇ ಬುಧವಾರ ಮಾಂಸದ ಅಂಗಡಿಗಳ ಮುಂದೆ ಜನ ಜಾತ್ರೆ ಪ್ರಾರಂಭವಾಗಿತ್ತು. ಕೈಯಲ್ಲಿ ಬ್ಯಾಗ್ ಹಿಡಿದ ಮಾಂಸ ಪ್ರಿಯರು ಯುಗಾದಿ ಹಬ್ಬದ ವರ್ಷ ತೊಡಕು ಆಚರಣೆಗೆ ಮಾಂಸ ಖರೀದಿಸಲು ನಾ ಮುಂದು ತಾ ಮುಂದು ಎಂದು ಮುಗಿಬಿದ್ದಿದ್ದರು.       ಮಾಂಸಾಹಾರಿ ಪ್ರೇಮಿಗಳು ಯುಗಾದಿಗಿಂತ ಯುಗಾದಿ ಮಾರನೆಯ ದಿನಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತ ಬಂದಿದ್ದು ಸಂಬಂಧಿಗಳನ್ನು ಹಾಗೂ ಸ್ನೇಹಿತರನ್ನು ಊಟಕ್ಕೆ ಕರೆಯುವುದು ವಾಡಿಕೆ. ಹಾಗಾಗಿ ಹಬ್ಬದ ವರ್ಷ ತೊಡಕು ಪ್ರಯುಕ್ತ ಮುಂಜಾನೆಯಿಂದಲೆ ಪಟ್ಟಣದ ವಿವಿಧ ಮಾಂಸಾಹಾರಿ ಅಂಗಡಿಗಳಲ್ಲಿ ಮಾಂಸದ ವ್ಯಾಪಾರ ಭರ್ಜರಿಯಾಗಿ ನಡೆಯಿತು.      ಪಟ್ಟಣದ ಪ್ರವಾಸಿಮಂದಿರದ ರಸ್ತೆ, ಟಿ.ಎಸ್.ಹಳ್ಳಿ ರಸ್ತೆ, ಹೊಸದುರ್ಗ ರಸ್ತೆ ಹಾಗೂ ರಾಮಗೋಪಾಲ್ ಸರ್ಕಲ್‍ನಲ್ಲಿ ಕೋಳಿ ಅಂಗಡಿಗಳಲ್ಲಿ, ಮಸೀದಿ ರಸ್ತೆ, ಬನಶಂಕರಮ್ಮನ ದೇವಸ್ಥಾನ ರಸ್ತೆಗಳಲ್ಲಿನ ಮಾಂಸದ ಅಂಗಡಿಗಳ ಮುಂದೆ ಜಾತ್ರಾ ವಾತಾವರಣ ಉಂಟಾಗಿತ್ತು. ಹಳ್ಳಿಗಳಲ್ಲಿನ ಕೋಳಿ ಅಂಗಡಿಗಳಲ್ಲಿ ಬೆಳಗ್ಗೆ 9 ಗಂಟೆಗೆ ಕೋಳಿಗಳೆಲ್ಲವೂ ಖಾಲಿಯಾಗಿತ್ತು. ಪರಿಣಾಮ ಕುರಿ, ಕೋಳಿ…

Read More

ತುಮಕೂರು :       ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ 130ನೇ ಜನ್ಮ ಜಯಂತಿ ನೆಪವಾಗಿಟ್ಟುಕೊಂಡು ನಗರಾಡಳಿತ ಕೊರೊನಾ 2ನೇ ಅಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದನ್ನು ನಿಯಂತ್ರಿಸುವ ಸಲುವಾಗಿ ನಗರದಾದ್ಯಂತ ಮುಂಜಾಗ್ರತಾ ಕ್ರಮವಾಗಿ ಜನಸಂದಣಿ ಸೇರದಂತೆ ವರ್ಷದ ತೊಡಕು ದಿನವಾದ ಇಂದು ಮಾಂಸ ಮಾರಾಟವನ್ನು ನಿಷೇಧಿಸಿರುವ ಹಿನ್ನೆಲೆಯಲ್ಲಿ ಚಿಕನ್, ಮಟನ್ ಖರೀದಿಗಾಗಿ ಮಾಂಸ ಪ್ರಿಯರ ಪರದಾಟ ಹೇಳತೀರದಾಗಿತ್ತು. ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ನೆಪದಲ್ಲಿ ನಗರದಲ್ಲಿ ಇಂದು ಮಾಂಸ ಮಾರಾಟ ನಿಷೇಧಿಸಿರುವುದು ನಗರದ ಜನತೆಯ ಆಕ್ರೋಶಕ್ಕೆ ಕಾರಣವಾಗಿದೆ.       ವರ್ಷಕ್ಕೊಮ್ಮೆ ಬರುವ ಯುಗಾದಿ ಹಬ್ಬದ ಮಾರನೇ ದಿನ ವರ್ಷದ ತೊಡಕನ್ನು ಆಚರಿಸಲು ಮಾಂಸ ಪ್ರಿಯರು ಬಹಳ ಉತ್ಸುಕತೆಯಿಂದ ತುದಿಗಾಲಲ್ಲಿ ನಿಂತಿರುತ್ತಾರೆ. ಆದರೆ ಈ ಬಾರಿ ನಗರದಲ್ಲಿ ಮಾಂಸ ಮಾರಾಟ ನಿಷೇಧಿಸಿರುವುದಿಂದ ಮಟನ್ ಮತ್ತು ಚಿಕನ್ ಅಂಗಡಿಗಳು ಬಂದ್ ಆಗಿದ್ದವು.       ಏಕಾಏಕಿ ಮಾಂಸ ಮಾರಾಟ ಅಂಗಡಿಗಳು ಬಾಗಿಲು ತೆಗೆಯದೇ ಇರುವುದರಿಂದ…

Read More

ತುಮಕೂರು :       ಕೊರೋನಾ ವೈರಸ್‍ಗೆ ತಂದೆಯನ್ನು ಕಳೆದುಕೊಂಡ 15 ವರ್ಷದ ಬಾಲಕನಿಗೆ ಶಾಲೆಯಲ್ಲಿ ಟ್ಯೂಷನ್ ಫೀಸ್ 5 ಸಾವಿರ ರೂಪಾಯಿ ಕಟ್ಟಲಿಲ್ಲವೆಂದು ಶಾಲಾ ಸಿಬ್ಬಂದಿ ಹೊಡೆದ ಪ್ರಕರಣ ನಡೆದಿದೆ.      ತುಮಕೂರು ಜಿಲ್ಲೆಯ ಪಾವಗಡದ ಬಳ್ಳಾರಿ ರಸ್ತೆಯಲ್ಲಿರುವ ವಿನಾಯಕ ಸರಸ್ವತಿ ಆಂಗ್ಲ ಮಾಧ್ಯಮ ಶಾಲೆಯ 10ನೇ ತರಗತಿ ವಿದ್ಯಾರ್ಥಿ ಮೊಹಮ್ಮದ್ ತಾಲಾ ಶಾಲೆಯಲ್ಲಿ ಹೆಚ್ಚುವರಿ ಕೋಚಿಂಗ್ ತೆಗೆದುಕೊಳ್ಳುತ್ತಿದ್ದಾರೆ, ಕಲಿಯೋಣವೆಂದು ಹೋದಾಗ ಈ ಘಟನೆ ನಡೆದಿದೆ.       ಹಿಂದಿ ಶಿಕ್ಷಕ ರಾಮಕೃಷ್ಣ ನಾಯಕ್ ನಾನು ಕಲಿಯುವುದರಲ್ಲಿ ಮುಂದಿಲ್ಲ ಎಂದು ದೂರಿದಾಗ ಎಲ್ಲ ಮಕ್ಕಳೆದುರು ಶಾಲೆಯ ಸೆಕ್ರೆಟರಿ ಅಶ್ವಥ್ ನಾರಾಯಣ ನನಗೆ ಕೋಲಿನಿಂದ ಹೊಡೆದರು. ಅವರು ನನಗೆ ದಿನನಿತ್ಯ ಟ್ಯೂಷನ್ ಫೀಸ್ ಕಟ್ಟಲಿಲ್ಲವೆಂದು ಹೊಡೆಯುತ್ತಿದ್ದರು ಎಂದು ನೊಂದ ಬಾಲಕ ಹೇಳುತ್ತಾನೆ. ಟ್ಯೂಷನ್ ಫೀಸ್ ಕಟ್ಟಬೇಕೆಂಬ ಒತ್ತಡದಿಂದ ನನಗೆ ಕಲಿಕೆ ಮೇಲೆ ಗಮನ ಹರಿಸಲು ಸಾಧ್ಯವಾಗುತ್ತಿಲ್ಲ ಎಂದು ತಾಲಾ ಹೇಳುತ್ತಾನೆ. ಈತನ ತಂದೆ ಕೋವಿಡ್ ಸೋಂಕಿಗೆ ಬಲಿಯಾಗಿದ್ದು, ತಾಯಿ…

Read More

ಮಧುಗಿರಿ:      ಅಂಗಾಂಗ ವೈಫಲ್ಯದಿಂದ ಮೃತಪಟ್ಟಿದ್ದ ಗ್ರಾಪಂ ಕಾರ್ಯದರ್ಶಿ ಶವ ಸಂಸ್ಕಾರದ ಸ್ಥಳ ನಿಗದಿಗಾಗಿ 2 ಗ್ರಾಮಗಳ ಗ್ರಾಮಸ್ಥರ ನಡುವೆ ನಡೆದ ಘರ್ಷಣೆ ಕಂದಾಯ ಇಲಾಖೆ, ಪೆÇಲೀಸರು, ಮಾದಿಗ ದಂಡೋರ ಸಮಿತಿ ಹಾಗೂ ಗ್ರಾಪಂ ಅಧಿಕಾರಿಗಳ ಸಂಧಾನದಿಂದ ಅಂತಿಮ ಕಾರ್ಯ ಸುಗಮವಾಗಿ ನಡೆಯಿತು. ಕೊರಟಗೆರೆ ತಾಲ್ಲೂಕು ಅಕ್ಕಿರಾಂಪುರ ಗ್ರಾಪಂ ಕಾರ್ಯದರ್ಶಿ ನರಸಪ್ಪ (55) ಶುಕ್ರವಾರದಂದು ಮಧುಗಿರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಬೆಳಗ್ಗೆ 8ರ ಸಮಯದಲ್ಲಿ ಮೃತಪಟ್ಟಿದ್ದರು. ಶುಕ್ರವಾರವಾಗಿದ್ದರಿಂದ ಶವಸಂಸ್ಕಾರ ಮಾಡಿರಲಿಲ್ಲ. ಇವರು ಮಧುಗಿರಿ ತಾಲ್ಲೂಕಿನ ಬಸವನಹಳ್ಳಿ ಗ್ರಾಮದವರಾಗಿದ್ದು ಬಸವನಲ್ಲಿ ಗ್ರಾಮದಲ್ಲಿರುವ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಶವ ಸಂಸ್ಕಾರ ಮಾಡಲು ತೀರ್ಮಾನಿಸಲಾಗಿತ್ತು. ಆದರೆ ದೇವಸ್ಥಾನದ ಟ್ರಸ್ಟ್‍ನವರು ಶವಸಂಸ್ಕಾರಕ್ಕೆ ಅನುಮತಿ ನಿರಾಕರಿಸಿದರು. ನಂತರ ವಡೇರಹಳ್ಳಿ ಗ್ರಾಮದ ಸರ್ವೆ ನಂಬರ್ 48 ರಲ್ಲಿ ಜಿಲ್ಲಾಧಿಕಾರಿಗಳು ಇಪ್ಪತ್ತು ಗುಂಟೆ ಜಾಗವನ್ನು ಸ್ಮಶಾನಕ್ಕಾಗಿ ಮಂಜೂರು ಮಾಡಲಾಗಿದ್ದ ಸ್ಥಳಕ್ಕೆ ಶವವನ್ನು ಶನಿವಾರ ಬೆಳಿಗ್ಗೆ ತಂದರು. ಮೃತಪಟ್ಟವ ದಲಿತನಾಗಿದ್ದು, ಬಸವನಹಳ್ಳಿ ಗ್ರಾಮದವರು, ಇಲ್ಲಿ ಶವಸಂಸ್ಕಾರ ಮಾಡಬಾರದೆಂದು ವಡೇರಹಳ್ಳಿ ಗ್ರಾಮಸ್ಥರು ಪಟ್ಟು…

Read More

ತುಮಕೂರು:       ಕೊರೋನಾ ಮಹಾಮಾರಿಯ ಹಿನ್ನೆಲೆಯಲ್ಲಿ ತುಮಕೂರು ನಗರದಲ್ಲಿ ರಾತ್ರಿ ಕಫ್ರ್ಯೂ ವಿಧಿಸಿದ್ದು, ಇದನ್ನು ಕಟ ್ಟು ನಿಟ್ಟಾಗಿ ಪಾಲಿಸುವ ನಿಟ್ಟಿನಲ್ಲಿ ಸರಕಾರ ಪ್ರಧಾನ ಕಾರ್ಯದರ್ಶಿಗಳ ನಿರ್ದೇಶನದಂತೆ ಸ್ಥಾಪಿಸಿರುವ 10 ಚೆಕ್‍ಪೋಸ್ಟ್‍ಗಳಲ್ಲಿ ನಿಗಾವಹಿಸುವ ಬಗ್ಗೆ ನೇಮಕವಾಗಿರುವ ಅಧಿಕಾರಿಗಳಿಗೆ ನಗರ ಡಿವೈಎಸ್ಪಿ ಶ್ರೀನಿವಾಸ್ ನಿರ್ದೇಶನ ನೀಡಿದರು.        ನಗರದ ಡಿವೈಎಸ್ಪಿ ಕಚೇರಿಯಲ್ಲಿ ನಡೆದ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ರಾತ್ರಿ 10 ರಿಂದ ಬೆಳಗ್ಗೆ 5ರವರೆಗೆ ತುರ್ತು ವಾಹನಗಳನ್ನು ಹೊರತು ಪಡಿಸಿ, ಉಳಿದ ವಾಹನಗಳು ನಗರದಲ್ಲಿ ಪ್ರವೇಶಿಸಲು ಅವಕಾಶವಿಲ್ಲ. ಸಿನಿಮಾಮಂದಿರ, ಮಾಲ್ ಸೇರಿದಂತೆ ವ್ಯಾಪಾರ ವಹಿವಾಟು ರಾತ್ರಿ 10ಕ್ಕೆ ಬಂದ್ ಆಗಬೇಕು. ಈಗಾಗಲೇ ಜಿಲ್ಲಾಧಿಕಾರಿಗಳು ಸಭೆ, ಸಮಾರಂಭ, ಜಾತ್ರೆಗಳ ಬಗ್ಗೆ ನಿಯಮ ರೂಪಿಸಿ ಆದೇಶ ನೀಡಿದ್ದಾರೆ. ಅಲ್ಲದೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಹೆಚ್ಚುವರಿ ವರಿಷ್ಠಾಧಿಕಾರಿಗಳು ಸಹ ಸೂಚನೆ ನೀಡಿದ್ದು ಅವರ ಆದೇಶವನ್ನು ನಾವೆಲ್ಲರೂ ಪಾಲಿಸಬೇಕಾಗಿದೆ ಎಂದರು.        ರಾತ್ರಿ ರೈಲುಗಳಲ್ಲಿ ಬೇರೆ ಊರುಗಳಿಂದ ಬರುವ…

Read More

ತುಮಕೂರು:       ಜಿಲ್ಲೆಯಲ್ಲಿ ಕೋವಿಡ್-19 ಸೋಂಕನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ಶಿಕ್ಷಕರು ಕೆಲಸ ಮಾಡುವ ಸ್ಥಳದಲ್ಲಿಯೇ ಕೋವಿಡ್ ಲಸಿಕೆ ನೀಡುವ ವ್ಯವಸ್ಥೆ ಮಾಡಲಾಗುವುದೆಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ತಿಳಿಸಿದರು. ಜಿಲ್ಲಾಧಿಕಾರಿಗಳ ಕಛೇರಿಯ ಕೆಸ್ವಾನ್ ವೀಡಿಯೋ ಕಾನ್ಫರೆನ್ಸ್ ಸಭಾಂಗಣದಲ್ಲಿ ಜಿಲ್ಲೆಯ ತಾಲ್ಲೂಕು ಮಟ್ಟದ ವಿವಿಧ ಅಧಿಕಾರಿಗಳೊಂದಿಗೆ ವೀಡಿಯೋ ಸಂವಾದ ನಡೆಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕೋವಿಡ್-19 ಸೋಂಕು ಪ್ರಕರಣಗಳು ಹೆಚ್ಚಾಗದಂತೆ ತಡೆಯಲು 45 ವರ್ಷ ಹಾಗೂ ಮೇಲ್ಪಟ್ಟವರಿಗೆ ಕಡ್ಡಾಯವಾಗಿ ಕೋವಿಡ್ ಲಸಿಕೆ ನೀಡಬೇಕೆಂದು ಕೇಂದ್ರ ಸರ್ಕಾರ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಪ್ರಥಮಾದ್ಯತೆಯಾಗಿ ಶಿಕ್ಷಕರಿಗೆ ಅವರ ಕಾರ್ಯ ಸ್ಥಳದಲ್ಲಿಯೇ ಕೋವಿಡ್ ವ್ಯಾಕ್ಸಿನೇಷನ್ ನೀಡುವ ವ್ಯವಸ್ಥೆ ಮಾಡಲಾಗಿದೆ. ಆದರೆ ಕಾರ್ಯ ಸ್ಥಳದಲ್ಲಿ 100ಕ್ಕಿಂತ ಹೆಚ್ಚು ಫಲಾನುಭವಿಗಳಿದ್ದಲ್ಲಿ ಮಾತ್ರ ಲಸಿಕೆ ನೀಡಲು ತಾತ್ಕಲಿಕವಾಗಿ ಲಸಿಕಾ ಉಪ ಕೇಂದ್ರಗಳನ್ನು ತೆರದು ಲಸಿಕಾಕರಣ ಮಾಡಲಾಗುವುದು ಎಂದರು. ಸಾಮಾಜಿಕವಾಗಿ ಜನರೊಂದಿಗೆ ಒಡನಾಟ ಹೊಂದಿದ್ದು, ಲಸಿಕೆ ಬಗ್ಗೆ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಿ ಈವರೆಗೂ ಲಸಿಕೆ ಪಡೆಯದವರಿಗೆ ಅರಿವು ಮೂಡಿಸಲು ಅನುಕೂಲವಾಗುತ್ತದೆ ಎನ್ನುವ ದೃಷ್ಟಿಯಿಂದ…

Read More

 ತುಮಕೂರು  :       ಮಹಾನಗರ ಪಾಲಿಕೆ ಸಭಾಂಗಣದಲ್ಲಿಂದು ನಡೆದ 2021-22ನೇ ಸಾಲಿನ ಆಯ-ವ್ಯಯ ಸಭೆಯಲ್ಲಿ 250.66 ಲಕ್ಷ ರೂ. ಉಳಿತಾಯ ಬಜೆಟ್ ಮಂಡನೆ ಮಾಡಲಾಯಿತು.       ಬಜೆಟ್ ಮಂಡಿಸಿದ ತೆರಿಗೆ, ಹಣಕಾಸು ಮತ್ತು ಅಪೀಲುಗಳ ಸ್ಥಾಯಿ ಸಮಿತಿಯ ಅಧ್ಯಕ್ಷೆ ನಳೀನ ಇಂದ್ರಕುಮಾರ್ ಪಾಲಿಕೆಯು ತನ್ನ ಆರ್ಥಿಕ ಇತಿ-ಮಿತಿಗಳಲ್ಲಿ ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಿಕೊಂಡು ಆಯ-ವ್ಯಯ ಅಂದಾಜನ್ನು ತಯಾರಿಸಿದೆ. ಈ ಆಯ-ವ್ಯಯದನ್ವಯ ಒಟ್ಟು ಆರಂಭಿಕ ಶಿಲ್ಕು 2091.45 ಲಕ್ಷ ರೂ. ಸೇರಿ 22996.10ಲಕ್ಷ ರೂ.ಗಳ ಒಟ್ಟು ಅಂದಾಜು ಸ್ವೀಕೃತಿ ಹಣದಲ್ಲಿ 2021-22ನೇ ಸಾಲಿಗಾಗಿ 22745.44 ಲಕ್ಷ ರೂ.ಗಳ ಅಂದಾಜು ವೆಚ್ಚ ಮಾಡಲು ಬಜೆಟ್ ಮಂಡನೆ ಮಾಡಲಾಗಿದ್ದು, 250.66ಲಕ್ಷ ರೂ.ಗಳು ಮಿಗತೆಯಲ್ಲಿದೆ ಎಂದು ತಿಳಿಸಿದರು.        ಆರ್ಥಿಕ ಇತಿ-ಮಿತಿಗಳಲ್ಲಿ ಲಭ್ಯವಿರುವ ಸಂಪನ್ಮೂಲಗಳನ್ನು ಕ್ರೋಢೀಕರಿಸಿಕೊಂಡು ಕೋವಿಡ್ ಸಂಕಷ್ಟದ ಪರಿಸ್ಥಿತಿಯಲ್ಲಿಯೂ ತುಮಕೂರು ನಗರ ನಿವಾಸಿಗಳಿಗೆ ಮೂಲಭೂತ ಸೌಲಭ್ಯವನ್ನು ಒದಗಿಸುವಲ್ಲಿ ಹೆಚ್ಚು ಪ್ರಾಧಾನ್ಯತೆಯನ್ನು ನೀಡಲಾಗಿದೆ ಎಂದು ಹೇಳಿದರು.      ಈ…

Read More