Author: News Desk Benkiyabale

ತುಮಕೂರು:      5 ವರ್ಷದ ಮಗುವಿಗೆ ಹೃದಯ ಶಸ್ತ್ರಚಿಕಿತ್ಸೆ ನಡೆಸುವ ಮೂಲಕ ನಗರದ ಶ್ರೀ ಸಿದ್ಧಾರ್ಥ ವೈದ್ಯಕೀಯ ಆಸ್ಪತ್ರೆಯ ಮತ್ತು ಕಾಲೇಜಿನ ‘ಸಿದ್ಧಾರ್ಥ ಅಡ್ವಾನ್ಸ್ಡ್ ಹಾರ್ಟ್ ಸೆಂಟರ್’ ಮತ್ತೊಂದು ಮಹತ್ವದ ಮೈಲಿಗಲ್ಲನ್ನು ದಾಟಿದೆ. ಕಳೆದ ತಿಂಗಳು ಓಪನ್ ಹಾರ್ಟ್ ಸರ್ಜರಿ ಮಾಡಿ ಸಫಲವಾಗಿದ್ದ ವೈದ್ಯರ ತಂಡ ಇದೀಗ ಮಕ್ಕಳ ಹೃದಯ ರೋಗ ಶಸ್ತ್ರಚಿಕಿತ್ಸೆಯನ್ನು ಕೈಗೊಳ್ಳುವ ಮೂಲಕ ತುಮಕೂರಿನಂತಹ ಪ್ರದೇಶದಲ್ಲಿ ಸೂಕ್ಷ್ಮ ರೀತಿಯಲ್ಲಿ ಶಸ್ತ್ರಚಿಕಿತ್ಸೆ ಮಾಡಿ ಯಶಸ್ವಿಯಾಗಬಹುದೆಂಬುದನ್ನು ಸಾದರಪಡಿಸಿದ್ದಾರೆ.       ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಚಿಲ್ಲೂರ್ ಗ್ರಾಮದ ಕೃಷಿಕ ಹಾಗೂ ಹಿಂದುಳಿದ ವರ್ಗದ ಕುಟುಂಬದ 4 ವರ್ಷ 8 ತಿಂಗಳ ಮಗು (ರಂಜಿತ್–ಹೆಸರು ಬದಲಾಯಿಸಲಾಗಿದೆ) ವಿಗೆ ನಡೆಸಲಾದ ಹೃದಯ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು, ಸಾಮಾನ್ಯ ವಾರ್ಡ್‍ನಲ್ಲಿ ಚೇತರಿಸಿಕೊಳ್ಳುತ್ತಿದೆ.       ‘ಸಿದ್ಧಾರ್ಥ ಅಡ್ವಾನ್ಸ್ಡ್ ಹಾರ್ಟ್ ಸೆಂಟರ್’ನ ಮೇಲ್ವಿಚಾರಕರಾದ ಹಾಗೂ ‘ಕಾರ್ಡಿಯಾಕ್ ಫ್ರಾಂಟಿ¬ಡಾ’ ಸಂಸ್ಥೆಯ ನಿರ್ದೇಶಕ ಡಾ.ತಮೀಮ್‍ಅಹಮದ್, ಡಾ.ನವೀನ್, ಡಾ.ಸುರೇಶ್, ಡಾ.ನಾಗಾರ್ಜುನ, ವಿವೇಕ್, ಜಾನ್, ಡಾ.ನಿಖಿತ ನೇತೃತ್ವದ ತಂಡ…

Read More

 ತುಮಕೂರು :       ಕೆಲವು ಹಳ್ಳಿಗಳಲ್ಲಿ ಸರಕಾರದಿಂದ ಜಾರಿಯಾಗುವ ಯೋಜನೆಗಳ ಬಗ್ಗೆ ಜನ ಸಾಮಾನ್ಯರಿಗೆ ಮಾಹಿತಿಯೇ ಇರುವುದಿಲ್ಲ. ಈ ಯೋಜನೆಗಳ ಮಾಹಿತಿ ಹಾಗೂ ಸೌಲಭ್ಯವನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್ ತಿಳಿಸಿದರು.       ಕಂದಾಯ ಇಲಾಖೆಯ ‘ಜಿಲ್ಲಾಧಿಕಾರಿಗಳ ನಡೆ-ಗ್ರಾಮಗಳ ಕಡೆ’ ಕಾರ್ಯಕ್ರಮದಡಿ ಜಿಲ್ಲೆಯ ಮಧುಗಿರಿ ತಾಲೂಕು ಲಕ್ಷ್ಮೀಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಆವರಣದಲ್ಲಿಂದು ಹಮ್ಮಿಕೊಳ್ಳಲಾಗಿದ್ದ ಗ್ರಾಮ ವಾಸ್ತವ್ಯದ ಕಾರ್ಯಕ್ರಮದಲ್ಲಿ ಜನರಿಂದ ಅಹವಾಲು ಸ್ವೀಕರಿಸಿ ಮಾತನಾಡಿದ ಅವರು ಸರ್ಕಾರಿ ಯೋಜನೆಗಳ ಸೌಲಭ್ಯವನ್ನು ಫಲಾನುಭವಿಗಳಿಗೆ ತಲುಪಿಸುವುದು, ಪಹಣಿ ತಿದ್ದುಪಡಿ, ಪೌತಿ ಖಾತೆ, ಮಾಶಾಸನ ಸೌಲಭ್ಯ ನೀಡುವುದು ಗ್ರಾಮ ವಾಸ್ತವ್ಯದ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು. ಪ್ರೀತಿಯಿಂದಲೇ ಸಮಸ್ಯೆಗಳನ್ನು ಆಲಿಸಿದ ಜಿಲ್ಲಾಧಿಕಾರಿಗಳು ಸ್ಥಳದಲ್ಲಿ ಕಂಡುಕೊಳ್ಳಬಹುದಾದ ಸಮಸ್ಯೆಗಳನ್ನು ಬಗೆಹರಿಸಿ, ಉಳಿದ ಸಮಸ್ಯೆಗಳನ್ನು ಬಗೆಹರಿಸಲು ಹಂತ ಹಂತವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.       ಗ್ರಾಮ ವಾಸ್ತವ್ಯ…

Read More

ತುಮಕೂರು:       ನಗರದ ಶ್ರೀ ಸಿದ್ಧಾರ್ಥ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯಲ್ಲಿ ನೂತನವಾಗಿ ಸೆಂಟ್ರಲ್ ಕ್ಲಿನಕಲ್ ಲ್ಯಾಬೋರೇಟರಿ ಮತ್ತುದಂತ, ಬಾಯಿ ಮತ್ತು ಮುಖದ ಹೊರ ರೋಗಿಗಳ ಚಿಕಿತ್ಸಾ ವಿಭಾಗವನ್ನು ಬೆಂಗಳೂರಿನ ಸೇಂಟ್‍ಜಾನ್ಸ್ ವೈದ್ಯಕೀಯ ಕಾಲೀಜಿನ ಪ್ರೊಫೆಸರ್‍ಡಾ. ತುಪ್ಪಿಲ್ ವೆಂಕಟೇಶ್ ಉದ್ಘಾಟಿಸಿದರು.       ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಡಾ.ತುಪ್ಪಿಲ್, ಟೆಸ್ಟ್‍ಟ್ಯೂಬ್‍ನಿಂದ ರೊಬೋಟಿಕ್ಸ್ ವರೆಗೂ ಇಂದಿನ ವೈದ್ಯಕೀಯ ಕ್ಷೇತ್ರ ಬೆಳವಣೆಗೆ ಕಂಡಿದೆ. ರೋಗಿಯನ್ನು ಡಯಾಗ್ನೈಸ್ ಮಾಡುವ ಮೂಲಕ ರೋಗವನ್ನು ಪತ್ತೆ ಹಚ್ಚಬಹುದು ಎಂದರು. ಮಾನವಸಂಪನ್ಮೂಲ, ನಿರ್ವಹಣೆ, ವಿಧಾನ, ಸಾಮಗ್ರಿಗಳು, ಉತ್ತಮ ಪರಿಸರ, ಯಾಂತ್ರಿಕ ವ್ಯವಸ್ಥೆ, ಉಪಕರಣಗಳು ಮತ್ತು ಮಾಹಿತಿ ನಿರ್ವಹಣೆ ಎಂಬ ಎಂಟು ಸಂಪನ್ಮೂಲಗಳನ್ನು ಹೊಂದಿದರೆ ಅಂತಾರಾಷ್ಟ್ರೀಯ ಮಟ್ಟದಲಿ ್ಲವೈದ್ಯಕೀಯ ಕ್ಷೇತ್ರದಲ್ಲಿ ಹೆಸರು ಪಡೆಯಬಹುದು. ಈ ಸಾಲಿನಲ್ಲಿ ಸಿದ್ಧಾರ್ಥ ವೈದ್ಯಕೀಯ ಕಾಲೇಜು ಹೆಸರು ಮಾಡಿದೆಎಂದುಅವರು ಶ್ಲಾಘಿಸಿದರು.       ಶಿಕ್ಷಣ, ತರಬೇತಿ, ಸಂಸ್ಥೆ, ಸಂಶೋಧನೆ ಮತ್ತು ಅಭಿವೃದ್ಧಿಯಿಂದಲೇ ಸೇವಾ ಸಮುದಾಯಕ್ಕೆ ಸಾಕಷ್ಟು ವಿಶ್ವಾಸವನ್ನು ತಂದು ಕೊಡಲಿದೆ. ಈ…

Read More

ತುಮಕೂರು :        ತುಮಕೂರು ತಾಲ್ಲೂಕು ಊರ್ಡಿಗೆರೆ ಹೋಬಳಿ ದೇವರಾಯನದುರ್ಗ ಗ್ರಾಮದ ಶ್ರೀ ಲಕ್ಷ್ಮಿನರಸಿಂಹಸ್ವಾಮಿ ದೇವಾಲಯದ ಜಾತ್ರೆಯು ಮಾರ್ಚ್ 20 ರಿಂದ ಏಪ್ರಿಲ್ 1ರವರೆಗೆ ಜರುಗಲಿದ್ದು, ಜಾತ್ರೆಗೆ ಸಂಬಂಧಿಸಿದಂತೆ ಫೆಬ್ರವರಿ 26ರಂದು ವಿವಿಧ ಹರಾಜು ಪಕ್ರಿಯೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ದೇವಾಲಯದ ಕಾರ್ಯನಿರ್ವಹಣಾಧಿಕಾರಿ ತಿಳಿಸಿದ್ದಾರೆ.       ಜಾತ್ರೆಯ ಪ್ರಯುಕ್ತ ಅಂಗಡಿಗಳ ನೆಲ ಬಾಡಿಗೆ ಹಾಗೂ ವಾಹನಗಳ ಪ್ರವೇಶ ಶುಲ್ಕ ವಸೂಲಾತಿ, ಭಕ್ತಾದಿಗಳ ಪಾದರಕ್ಷೆಗಳನ್ನು ಕಾಯುವ ಹಕ್ಕು ಭಾದ್ಯತೆ ಹಾಗೂ ಈಡುಗಾಯಿ ಹರಾಜು ಪ್ರಕ್ರಿಯೆಗಳನ್ನು ನಿಗಧಿತ ಸಮಯದಲ್ಲಿ ನಡೆಸಲಾಗುವುದು. ಅಂಗಡಿ ಹಾಗೂ ವಾಹನಗಳ ಶುಲ್ಕ ವಸೂಲಿ ಹರಾಜು: ಆಸಕ್ತರು ಅಂಗಡಿಗಳ ನೆಲ ಬಾಡಿಗೆ ಹಾಗೂ ವಾಹನಗಳ ಪ್ರವೇಶ ಶುಲ್ಕ ವಸೂಲಾತಿ ಹರಾಜನ್ನು ಫೆಬ್ರವರಿ 26ರಂದು ಬೆಳಿಗ್ಗೆ 11 ಗಂಟೆಗೆ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯದ ಆವರಣದಲ್ಲಿ ಹಮ್ಮಿಕೊಳ್ಳಲಾಗಿರುವ ಪ್ರಕ್ರಿಯಲ್ಲಿ ಪಾಲ್ಗೊಳ್ಳಬಹುದಾಗಿದೆ. ಹರಾಜಿನಲ್ಲಿ ಪಾಲ್ಗೊಳ್ಳುವ ಪ್ರತಿ ಹರಾಜುದಾರರು 10,000 ರೂ.ಗಳ ಠೇವಣಿ ಪಾವತಿಸಿ, ಭಾಗವಹಿಸಬಹುದು. ಭಕ್ತಾದಿಗಳ ಪಾದರಕ್ಷೆ ಕಾಯುವ ಹರಾಜು:…

Read More

ಗುಬ್ಬಿ:       ಬಡ ಮತ್ತು ಮಧ್ಯಮವರ್ಗ ಜನರ ಜೀವನದಲ್ಲಿ ಆಟವಾಡುತ್ತಿರುವ ಕೇಂದ್ರ ಬಿಜೆಪಿ ಸರ್ಕಾರ ದಿನಕೊಮ್ಮೆ ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಏರಿಸುತ್ತಿದೆ. ಇದರ ಅಡ್ಡಪರಿಣಾಮ ಎಲ್ಲಾ ಕ್ಷೇತ್ರಕ್ಕೂ ಹೊರೆ ಎನಿಸಲಿದೆ ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ಕಿಡಿಕಾರಿದರು.       ತಾಲ್ಲೂಕಿನ ಕೆ.ಜಿ.ಟೆಂಪಲ್‍ನಲ್ಲಿ ಆರಂಭವಾದ ಬುದ್ದ ಬಸವ ಅಂಬೇಡ್ಕರ್ ಫ್ಯೂಯಲ್ ಸ್ಟೇಷನ್ ಪೆಟ್ರೋಲ್ ಬಂಕನ್ನು ಉದ್ಘಾಟಿಸಿದ ಅವರು ಅಗತ್ಯವಸ್ತುಗಳಿಗೆ ಹೆಚ್ಚಿನ ಬೆಲೆ ನಿಗದಿ ಮಾಡುತ್ತಿರುವ ಬಿಜೆಪಿ ಸರ್ಕಾರ ಆರ್ಥಿಕ ಸುಧಾರಣೆ ಹೆಸರಿನಲ್ಲಿ ಕೋವಿಡ್ ಸಂಕಷ್ಟದ ನಡುವೆ ಶ್ರೀಸಾಮಾನ್ಯರಿಗೆ ಗಾಯದ ಮೇಲೆ ಬರೆ ಹಾಕುತ್ತಿದೆ ಎಂದರು.       ಪ್ರತಿ ಬಡವನೂ ದ್ವಿಚಕ್ರವಾಹನವನ್ನು ಅವಲಂಬಿಸಿ ಕೂಲಿ ನಡೆಸುತ್ತಾನೆ. ಅನಿವಾರ್ಯವಾಗಿ ಬದುಕಿಗೆ ಹೊಂದಿಕೊಂಡ ವಾಹನಗಳಿಗೆ ತೈಲ ಒದಗಿಸುವುದು ಕಷ್ಟಸಾಧ್ಯ. ಇಂತಹ ಸಂದರ್ಭದಲ್ಲಿ ಬಜೆಟ್ ನಂತರದಲ್ಲಿ ನಿತ್ಯ ತೈಲ ಬೆಲೆ ಹೆಚ್ಚಿಸುತ್ತಿರುವ ಹಿನ್ನಲೆ ತಿಳಿಯುತ್ತಿಲ್ಲ. ಅಂತರಾಷ್ಟ್ರೀಯ ಮಾರುಕಟ್ಟೆ ಎನ್ನುತ್ತಲೇ ತೈಲದ ಮೇಲಿನ ತೆರಿಗೆ ಹೆಚ್ಚಿಸಿ ಜನರಿಂದ ವಸೂಲಿಗೆ ನಿಂತಿರುವುದು ಎಷ್ಟರಮಟ್ಟಿಗೆ ಸರಿ…

Read More

ಕೊರಟಗೆರೆ:      ಇರಕಸಂದ್ರ ಕಾಲೋನಿಯ ಎಸ್‍ಎಲ್‍ಎನ್ ಪಬ್ಲಿಕ್ ಶಾಲೆಯ ಮುಂಭಾಗದ ರಸ್ತೆಬದಿಯಲ್ಲಿ ನಿಂತಿದ್ದ ಅನಾಮಿಕ ವ್ಯಕ್ತಿಯನ್ನೇ ವಿಚಾರಣೆ ನಡೆಸಿದ ಪೊಲೀಸರಿಗೆ ಐದು ಪ್ರಕರಣಗಳಿಗೆ ಬೇಕಾಗಿದ್ದ ಅಂತರಜಿಲ್ಲಾ ಕಳ್ಳನೊರ್ವ ಸಿಕ್ಕಿಬಿದ್ದಿರುವ ಘಟನೆ ಗುರುವಾರ ನಡೆದಿದೆ.       ಕೊರಟಗೆರೆ ತಾಲೂಕು ಕೋಳಾಲ ಪೊಲೀಸ್ ಠಾಣೆ ವ್ಯಾಪ್ತಿಯ ಇರಕಸಂದ್ರ ಕಾಲೋನಿಯ ಪಬ್ಲಿಕ್ ಶಾಲೆಯ ಮುಂಭಾಗ ನಿಂತಿದ್ದ ವ್ಯಕ್ತಿಯ ಗಮನಿಸಿದ ನಡೆಸಿದ ಮುಖ್ಯಪೇದೆ ಮೋಹನ್‍ಕುಮಾರ್ ಠಾಣೆಗೆ ಕರೆದುಕೊಂಡು ಹೋಗಿ ಪಿಎಸೈ ನವೀನ್‍ಕುಮಾರ್ ಸಮ್ಮುಖದಲ್ಲಿ ವಿಚಾರಣೆ ನಡೆಸಿದ ವೇಳೆ ಕಳ್ಳನ ಕರಾಮತ್ತು ಬಯಲಾಗಿದೆ.       ತುಮಕೂರು ನಗರ ಬೆಳಗುಂಬ ರಸ್ತೆಯ ಜ್ಯೋತಿಪುರ ವಾಸಿವಾದ ರಘು(28) ಎಂಬಾತನೇ ಬಂಧಿತ ಆರೋಪಿ. ಈತನ ವಿರುದ್ದ ಈಗಾಗಲೇ ತುಮಕೂರು ಗ್ರಾಮಾಂತರ, ಹೆಬ್ಬೂರು, ಕೋರಾ ಮತ್ತು ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಕಳ್ಳತನದ ವಿವಿಧ ಪ್ರಕರಣ ದಾಖಲಾಗಿ ಜೈಲಿಗೆ ಹೋಗಿ ಮತ್ತೇ ಬಿಡುಗಡೆ ಆದ ನಂತರವು ಮತ್ತೇ ಹಳೇ ಚಾಳಿಯನ್ನೇ ಮುಂದುವರಿಸಿದ್ದಾನೆ.       ಜೈಲಿನಿಂದ ಬಿಡುಗಡೆಯಾದ…

Read More

ಹುಳಿಯಾರು:       ಕಾಮಗಾರಿ ನಡೆಯುವ ಸಂದರ್ಭದಲ್ಲೇ ಸಾರ್ವಜನಿಕರು ಕಳಪೆ ಕಾಮಗಾರಿ ನಡೆಯುತ್ತಿದೆ ಎಂದು ಎಚ್ಚರಿಸಿದರೂ ಅಧಿಕಾರಿಗಳು ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯಿಸಿದ್ದ ಪರಿಣಾಮ ಕಾಮಗಾರಿ ಮುಗಿದು ಮೂರ್ನಲ್ಕು ತಿಂಗಳೊಳಗಾಗಲೇ ರಸ್ತೆಯ ಅಲ್ಲಲ್ಲಿ ಕಿತ್ತೋಗುತ್ತಿದೆ. ಹೌದು 19 ಕೋಟಿ ರೂ. ವೆಚ್ಚದಲ್ಲಿ ಹುಳಿಯಾರು ಅಣೇಕಟ್ಟೆ ರಸ್ತೆ ಕಾಮಗಾರಿಯು ಇತ್ತೀಚೆಗೆ ನಡೆಯಿತು. ಕಾಮಗಾರಿ ನಡೆಯುತ್ತಿದ್ದ ಸಂದರ್ಬದಲ್ಲೇ ಸ್ಥಳೀಯರು ಕಾಮಗಾರಿಯು ತೀರ ಕಳಪೆಯಿಂದ ಕೂಡಿದ್ದು ಅತ್ತ ಡಾಂಬಾರ್ ಹಾಕಿಕೊಂಡು ಹೋಗುತ್ತಿದ್ದರೆ ಇತ್ತ ಕಿತ್ತೋಗುತ್ತಿದೆ ಎಂದು ಆರೋಪಿಸಿ ಗುತ್ತಿಗೆದಾರನಿಗೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡು ಎರಡ್ಮೂರು ತಿಂಗಳುಗಳ ಹಿಂದೆ ಕಾಮಗಾರಿ ಸ್ಥಗಿತಗೊಳಿಸಿ ಪ್ರತಿಭಟನೆ ಮಾಡಿದ್ದರು.      ಈ ರಸ್ತೆಯ ಡಾಂಬಾರೀಕರಣಕ್ಕೆ 19 ಕೋಟಿ ರೂ. ಬಿಡುಗಡೆಯಾಗಿದ್ದರೂ ಸಹ ಹಳೆಯ ಡಾಂಬಾರ್ ಕೀಳದೆ ಅದರ ಮೇಲೆಯೇ ಹೊಸ ಡಾಂಬಾರ್ ಹಾಕಲಾಗುತ್ತಿದೆ. ಪರಿಣಾಮ ಡಾಂಬಾರ್ ಹಾಕಿದ ಮರುಕ್ಷಣವೇ ಜಲ್ಲಿ ಕಲ್ಲುಗಳು ಮೇಲೇಳುತ್ತಿದೆಯಲ್ಲದೆ ರಸ್ತೆಯ ಅಂಚಿನಲ್ಲಿ ಕಿತ್ತೋಗುತ್ತಿದೆ ಎಂಬುದು ಸಾರ್ವಜನಿಕರ ಆರೋಪವಾಗಿತ್ತು. ಅಲ್ಲದೆ ಸ್ಥಳಕ್ಕೆ ಆಗಮಿಸಿದ್ದ ಪಿಡಬ್ಲ್ಯೂಡಿ ಎಂಜಿನಿಯರ್ ಸೋಮಶೇಖರ್…

Read More

ತುಮಕೂರು:       ಗ್ರಾಹಕರ ಹಣದ ಭದ್ರತಾ ದೃಷ್ಟಿಯಿಂದ ಬ್ಯಾಂಕು/ಎಟಿಎಂ ಕೇಂದ್ರಗಳ ಒಳ ಭಾಗದಲ್ಲಲ್ಲದೆ ಹೊರ ಭಾಗದಲ್ಲಿಯೂ ಸಹ ಸಿಸಿ ಟಿವಿಗಳನ್ನು ಅಳವಡಿಸಬೇಕೆಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್ ಬ್ಯಾಂಕಿನ ಅಧಿಕಾರಿಗಳಿಗೆ ಸೂಚನೆ ನೀಡಿದರು.       ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶುಕ್ರವಾರ ಜರುಗಿದ ಜಿಲ್ಲಾ ಮಟ್ಟದ ಭದ್ರತಾ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು ಬ್ಯಾಂಕ್ ಅಧಿಕಾರಿಗಳು ಪ್ರತಿದಿನ ಸಿಸಿಟಿವಿ ರೆಕಾರ್ಡಿಂಗ್ ಅನ್ನು ಪರಿಶೀಲಿಸಬೇಕು. ಬ್ಯಾಂಕು ಹಾಗೂ ಎಟಿಎಂಗಳ ಸುತ್ತ-ಮುತ್ತ ಗಿಡಗಂಟೆಗಳಿದ್ದರೆ ಸ್ವಚ್ಛತೆ ಮಾಡಿ ರಾತ್ರಿ ಹೊತ್ತು ಸೂಕ್ತ ಬೆಳಕಿನ ವ್ಯವಸ್ಥೆ ಕಲ್ಪಿಸಿರಬೇಕು ಎಂದು ಸೂಚಿಸಿದರಲ್ಲದೆ ಇತ್ತೀಚೆಗೆ ಮೊಬೈಲ್/ಸಾಮಾಜಿಕ ಜಾಲತಾಣಗಳ ಮೂಲಕ ಸಾರ್ವಜನಿಕರು ಹಣದ ವಂಚನೆಗೊಳಗಾಗುತ್ತಿರುವ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ವರದಿಯಾಗುತ್ತಿರುವುದರಿಂದ ಗ್ರಾಹಕರು ವಂಚಕರಿಂದ ಎಚ್ಚರಿಕೆ ವಹಿಸುವ ಕುರಿತು ಬ್ಯಾಂಕುಗಳು ಅರಿವು ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಬೇಕೆಂದು ನಿರ್ದೇಶನ ನೀಡಿದರು.       ಅಗ್ನಿಶಾಮಕ ಇಲಾಖೆಯಿಂದ ಜಿಲ್ಲೆಯಲ್ಲಿರುವ 5 ನಗದು ಕೋಶ(ಕರೆನ್ಸಿ ಚೆಸ್ಟ್)ಗಳ ಅಧಿಕಾರಿ/ಸಿಬ್ಬಂದಿಗಳಿಗೆ ಬೆಂಕಿ-ಅವಘಡ ಸಂಭವಿಸಿದಾಗ ವಹಿಸಬೇಕಾದ ಮುನ್ನೆಚ್ಚರಿಕಾ ಕ್ರಮಗಳ…

Read More

ತುಮಕೂರು:       ಜಿಲ್ಲೆಯಲ್ಲಿ ಕಳೆದ ಎರಡೂವರೆ ವರ್ಷಗಳಿಂದ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಿ ಬೆಂಗಳೂರಿನ ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕರಾಗಿ ವರ್ಗಾವಣೆಗೊಂಡಿರುವ ನಿಕಟಪೂರ್ವ ಜಿಲ್ಲಾಧಿಕಾರಿ ಡಾ. ರಾಕೇಶ್‍ಕುಮಾರ್ ಅವರನ್ನು ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ವತಿಯಿಂದ ಆತ್ಮೀಯವಾಗಿ ಬೀಳ್ಕೊಡಲಾಯಿತು. ನಗರದ ಜಿಲ್ಲಾ ಪಂಚಾಯತ್ ಕಚೇರಿ ಸಭಾಂಗಣದಲ್ಲಿ ಬುಧವಾರ ರಾತ್ರಿ ಜಿಲ್ಲಾಡಳಿತದ ವತಿಯಿಂದ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ನಿಕಟಪೂರ್ವ ಜಿಲ್ಲಾಧಿಕಾರಿ ಡಾ. ಕೆ. ರಾಕೇಶ್‍ಕುಮಾರ್ ಅವರಿಗೆ ಮೈಸೂರು ಪೇಟ ತೊಡಿಸಿ ಶಾಲು ಹೊದಿಸಿ ಫಲತಾಂಬೂಲ, ನೆನಪಿನ ಕಾಣಿಕೆ ನೀಡುವ ಮೂಲಕ ಜಿಲ್ಲಾ ಮಟ್ಟದ ಅಧಿಕಾರಿಗಳು ಆತ್ಮೀಯವಾಗಿ ಬೀಳ್ಕೊಟ್ಟರು. ಇದೇ ಸಂದರ್ಭದಲ್ಲಿ ನೂತನ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್ ಹಾಗೂ ಜಿ.ಪಂ. ನೂತನ ಸಿಇಓ ಜಿ.ಎಂ. ಗಂಗಾಧರಸ್ವಾಮಿ ಅವರನ್ನು ಸ್ವಾಗತಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ವರ್ಗಾವಣೆಗೊಂಡಿರುವ ಜಿಲ್ಲಾಧಿಕಾರಿ ಡಾ. ಕೆ. ರಾಕೇಶ್‍ಕುಮಾರ್, ಜಿಲ್ಲೆಯಲ್ಲಿ ಎರಡೂವರೆ ವರ್ಷಗಳ ಕಾಲ ನಾನು ಮಾಡಿರುವ ಕೆಲಸ ನನಗೆ ಆತ್ಮತೃಪ್ತಿ ತಂದಿದೆ. ಡಿಸಿ, ಎಸ್ಪಿ ಹಾಗೂ ಸಿಇಒ ಜಿಲ್ಲೆಯ ಅಡಿಪಾಯ. ಇದು ಜಿಲ್ಲೆಯಲ್ಲಿ…

Read More

ಗುಬ್ಬಿ:       ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದ ಸಂಗೀತ ಇತಿಹಾಸವನ್ನು ನಿರ್ಮಿಸಿದ ಚಿ.ಉದಯಶಂಕರ್ ಕನ್ನಡ ಹಾಗೂ ಧಾರ್ಮಿಕ ಚಿತ್ರಗೀತೆಗಳಿಗೆ ಸಾಕಷ್ಟು ಸಾಹಿತ್ಯವನ್ನು ಬರೆಯುವ ಮೂಲಕ ಆ ಕಾಲದಲ್ಲಿ ತನ್ನದೇ ಆದ ಹವಾ ಸೃಷ್ಟಿಸಿಕೊಂಡಿದ್ದವರು.       ಚಿ.ಉದಯಶಂಕರ್ ಡಾ|| ರಾಜ್ ಕುಮಾರ್‍ರವರ ಪ್ರತಿ ಚಿತ್ರಕ್ಕೂ ಕೂಡ ತನ್ನದೇ ಆದ ಸಂಗೀತದ ಮೂಲಕ ಗಮನ ಸೆಳೆದವರು. ಇವರು ಗುಬ್ಬಿ ತಾಲ್ಲೂಕಿನ ಸಿ ಎಸ್ ಪುರ ಹೋಬಳಿಯ ಚಿಟ್ನಳ್ಳಿ ಗ್ರಾಮದವರು ಎಂಬುದು ಬಹಳ ವಿಶೇಷವಾಗಿದೆ. ಗ್ರಾಮೀಣ ಭಾಗದ ಪ್ರತಿಯೊಂದು ದಶಕಗಳ ಹಿಂದೆಯೇ ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದ ಮೈಲಿಗಲ್ಲನ್ನ ಸೃಷ್ಟಿಸಿತು. ತಂದೆ ಸದಾಶಿವಯ್ಯನವರು ಕೂಡ ಕನ್ನಡದ ಸಾಹಿತಿಯಾಗಿದ್ದು, ಮಗ ಚಿ.ಉದಯಶಂಕರ್‍ರವರಿಗೂ ಸಾಹಿತ್ಯದ ಕೃಷಿ ಮುಂದುವರೆಯಿತು ಕನ್ನಡದ ಸುಮಾರು 3ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಬರೆದಂತಹ ಏಕೈಕ ಸಾಹಿತಿ ಎಂದರೆ ಅದು ಚಿ.ಉದಯಶಂಕರ್. ಎಲ್ಲಾ ಸಾಹಿತಿಗಳಂತೆ ಅವರೂ ಕೂಡ ಗಾಂಧಿನಗರದಲ್ಲಿ ಕಷ್ಟ ಬಿದ್ದವರೇ ನಂತರ ಡಾ|| ರಾಜ್‍ಕುಮಾರ್‍ರವರ ಸಂತ ತುಕಾರಾಮ ಚಿತ್ರದ ಮೂಲಕ…

Read More