ತುಮಕೂರು: ತುಮಕೂರು ನಗರದಲ್ಲಿ ಲೋಕೋಪಯೋಗಿ ಇಲಾಖೆಯ ಸುಮಾರು 4.50 ಕೋಟಿ ರೂಗಳಲ್ಲಿ ಎಸ್ಸಿಪಿ ಮತ್ತು ಟಿಎಸ್ಪಿ ಯೋಜನೆಯಡಿ ಸಿಸಿ ರಸ್ತೆ, ಚರಂಡಿ ಹಾಗೂ ಇನ್ನಿತರ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಶಾಸಕ ಜಿ.ಬಿ.ಜೋತಿಗಣೇಶ್ ತಿಳಿಸಿದ್ದಾರೆ. ನಗರದ 26ನೇ ವಾರ್ಡಿನ ಆಶೋಕ ನಗರದ 9ನೇ ಅಡ್ಡರಸ್ತೆಯಲ್ಲಿ ನಿರ್ಮಿಸಿರುವ ಸಿಸಿ ರಸ್ತೆ ಮತ್ತು ಚರಂಡಿ ಕಾಮಗಾರಿ ಯನ್ನು ಪಿಡಬ್ಲ್ಯುಡಿ ಅಧಿಕಾರಿಗಳೊಂದಿಗೆ ಕಾಮಗಾರಿ ವೀಕ್ಷಿಸಿ ಮಾತನಾಡಿದ ಅವರು,ನಗರದ ಸತ್ಯಮಂಗಲ, ಮಂಜುನಾಥ ನಗರ,ಗಿರಿನಗರ, ಅಶೋಕ ನಗರ,ಸರಸ್ವತಿಪುರಂಗಳಲ್ಲಿ ಸಿಸಿ ರಸ್ತೆ,ಚರಂಡಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ.ಸರಸ್ವತಿಪುರಂ ಮತ್ತು ಅಶೋಕನಗರದ ಮುಖ್ಯ ರಸ್ತೆಗಳು ಚನ್ನಾಗಿದ್ದರೂ ಒಳಗಡೆ ಇರುವ ರಸ್ತೆಗಳು,ಅಲ್ಲಿರುವ ಜನರು ಇನ್ನೂ ಕೊಳಗೇರಿ ರೀತಿ ಯಲ್ಲಿಯೇ ವಾಸ ಮಾಡುತ್ತಿದ್ದಾರೆ.ಹಾಗಾಗಿ ಕೆಲವು ವಾರ್ಡುಗಳನ್ನು ಹೊರತು ಪಡಿಸಿ ಉಳಿದಂತೆ 35 ವಾರ್ಡು ಗಳಿಗೂ ಎಸ್ಸಿಪಿ ಹಣವನ್ನು ವಿನಿಯೋಗಿಸಲಾಗಿದೆ ಎಂದರು. ಕೇಂದ್ರ ಮತ್ತು ರಾಜ್ಯ ಸರಕಾರದ ಸ್ಮಾರ್ಟ್‍ಸಿಟಿ ಯೋಜನೆಯಡಿ ನಗರದ ಪ್ರಮುಖ ರಸ್ತೆಗಳಾದ ಮಹಾತ್ಮಗಾಂಧಿ ರಸ್ತೆ,ಅಶೋಕ…
Author: News Desk Benkiyabale
ಗುಬ್ಬಿ: ಹವಾಗುಣಕ್ಕೆ ತಕ್ಕ ಬೇಸಾಯ ಮಾಡುವ ಬಗ್ಗೆ ಪ್ರತಿ ಜಿಲ್ಲೆಯಲ್ಲಿ ಒಂದು ಗ್ರಾಮ ಆಯ್ಕೆ ಮಾಡಿ ಇಡೀ ದಿನ ರೈತರೊಂದಿಗೆ ಸಂವಾದ ನಡೆಸಿ ಕೃಷಿ ಯೋಜನೆಗಳನ್ನು ರೂಪಿಸುವ ನಿಟ್ಟಿನಲ್ಲಿ ಪ್ರವಾಸ ಆರಂಭಿಸಿ ಮಂಡ್ಯ ಮತ್ತು ಕೋಲಾರ ಜಿಲ್ಲೆ ಪ್ರವಾಸ ಮುಗಿಸಿರುವುದಾಗಿ ಕೃಷಿ ಸಚಿವ ಬಿ.ಸಿ.ಪಾಟೀಲ್ ತಿಳಿಸಿದರು. ತಾಲ್ಲೂಕಿನ ಸಿ.ಎಸ್.ಪುರ ಗ್ರಾಮದಲ್ಲಿ ಏರ್ಪಡಿಸಿದ್ದ ಕೃಷಿ ಸಂಪರ್ಕ ಕೇಂದ್ರ ನೂತನ ಕಟ್ಟಡ ಉದ್ಘಾಟನೆ ಮತ್ತು ಏಳು ಗ್ರಾಮ ಪಂಚಾಯಿತಿಗೆ ಆಯ್ಕೆಯಾದ ಅಧ್ಯಕ್ಷರು. ಉಪಾಧ್ಯಕ್ಷರು, ಸದಸ್ಯರಿಗೆ ಸನ್ಮಾನ ಹಾಗೂ ಬಿಜೆಪಿ ಕಾರ್ಯರ್ತರ ಸಮಾವೇಶ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ನಮ್ಮ ಹಿರಿಯರ ಆಲೋಚನೆಗಳು ಇಂದಿಗೂ ಪ್ರಸ್ತುತವಾಗಿದೆ. ನೀರಿನ ಲಭ್ಯತೆ ಜತೆಗೆ ಮಣ್ಣಿನ ಗುಣ ಅರಿತು ಬೇಸಾಯ ಮಾಡುವ ಕಲೆ ನಮ್ಮ ಹಿಂದಿನ ಸಂಪ್ರದಾಯದಲ್ಲಿ ಅಡಗಿದೆ. ಇಂತಹ ಸಂದರ್ಭದಲ್ಲಿ ಇಸ್ರೇಲ್ ಮಾದರಿ ಕೃಷಿ ನಮಗೆ ಅವಶ್ಯವಿಲ್ಲ ಎಂದರು. ಕೃಷಿಕನ ದುಡಿಮೆಗೆ ಬೆಲೆ ಕಟ್ಟಲಾಗದು ಎಂಬ ಮಾತಿದೆ.…
ಮಧುಗಿರಿ: ಪಟ್ಟಣದಲ್ಲಿ ವಾರದ ಸಂತೆ ನಡೆಯುವ ಲಾಲ್ ಬಹುದ್ದರ್ ಶಾಸ್ತ್ರಿ ಮೈದಾನದಲ್ಲಿ ಪುರಸಭೆ ವತಿಯಿಂದ ಅಳವಡಿಸಿರುವ ಹೈಮಾಸ್ಟ್ ದೀಪ ಉರಿಯದೆ ನೆಪಮಾತ್ರಕ್ಕೆ ಅಳವಡಿಸಿದಂತೆ ಕಾಣುತ್ತಿದೆ. ಪ್ರತಿ ಬುಧವಾರದಂದು ನಡೆಯುವ ಸಂತೆಯಲ್ಲಿ ಹೂವು ಹಣ್ಣು ತರಕಾರಿ ದಿನಬಳಕೆ ವಸ್ತುಗಳು ಮಾರಾಟ ನಡೆಯುತ್ತದೆ. ಸಂತೆ ಮೈದಾನದ ಮಧ್ಯಭಾಗದಲ್ಲಿ ಹೈಮಾಸ್ ದೀಪ ಅಳವಡಿಸಿ ವಿದ್ಯುತ್ ಸಂಪರ್ಕವಿಲ್ಲದ ಕಾರಣ ಇಲ್ಲಿವರೆಗೂ ಉರಿದಿರುವ ಉದಾಹರಣೆಗಳೇ ಇಲ್ಲ ದಂತಾಗಿದೆ. ಸಂತೆಯಲ್ಲಿ ತರಕಾರಿ ಕೊಳ್ಳಲು ಬಹುತೇಕ ಮಹಿಳೆಯರು ಆಗಮಿಸುವುದನ್ನು ಕಾಣಬಹುದಾಗಿದೆ. ಕತ್ತಲಿನಲ್ಲೇ ವ್ಯಾಪಾರ ಮಾಡಲು ಅಸಾಧ್ಯವಾಗಿದೆ. ಪುರಸಭೆಗೆ ಲಕ್ಷಾಂತರ ರೂ ಆದಾಯ ನೀಡುವ ಸಂತೆಯಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಎದ್ದು ಕಾಣುತ್ತದೆ. ಬಯಲೇ ಶೌಚಾಲಯವಾಗಿದೆ ,ಈ ಮೈದಾನ ಮುಂಚೆ ರಾಷ್ಟ್ರೀಯ ಹಬ್ಬಗಳ ಆಚರಣೆ ನಡೆಯುತ್ತಿತ್ತು. ಇಂದಿಗೂ ರಾಷ್ಟ್ರಧ್ವಜ ನಾಡಧ್ವಜ ಹಾರಿಸುವ ಧ್ವಜಸ್ತಂಭ ಇದೆ. ರಾತ್ರಿಯ ವೇಳೆಯಲ್ಲಿ ಬೆಳಕು ಇಲ್ಲದ ಕಾರಣ ಅನೈತಿಕ ಚಟುವಟಿಕೆಗಳ ತಾಣವಾಗಿದೆ. ಈ…
ತುಮಕೂರು : ಹೇಮಾವತಿಯ ತುಮಕೂರು ಶಾಖಾ ನಾಲೆಯಿಂದ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಜೆ.ಸಿ.ಪುರ ಕೆರೆಗೆ ಕುಡಿಯುವ ನೀರು ಒದಗಿಸುವ 9.9 ಕೋಟಿ ರೂ ವೆಚ್ಚದ ಪೈಪ್ ಲೈನ್ ಕಾಮಗಾರಿಗೆ ಸಣ್ಣ ನೀರಾವರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಜೆ.ಸಿ.ಮಾಧುಸ್ವಾಮಿ ಅವರು ಇಂದು ಶಂಕುಸ್ಥಾಪನೆ ನೆರವೇರಿಸಿದರು. ಕೆ.ಬಿ.ಕ್ರಾಸ್ ನಿಂದ ತುರುವೇಕೆರೆ ರಸ್ತೆಯ ಕುಂದೂರು ಸಮೀಪವಿರುವ ಹೇಮಾವತಿ ಮುಖ್ಯನಾಲೆಯ ಬಳಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಸಚಿವರು, ಈಗಿರುವ ಪೈಪ್ ಲೈನ್ ನಲ್ಲಿ ನಾಲ್ಕು ಕೆರೆಗಳಿಗೆ ನೀರು ಹರಿಸಲಾಗುತ್ತಿದ್ದು, ಸಮರ್ಪಕವಾಗಿ ನೀರು ಹರಿಸಲು ಸಾಧ್ಯವಾಗದೇ ಇರುವುದರಿಂದ ಕುಡಿಯುವ ನೀರಿಗಾಗಿ ಪ್ರತ್ಯೇಕವಾಗಿ ಜೆ ಸಿ ಪುರ ಕೆರೆಗೆ ಪೈಪ್ ಲೈನ್ ಅಳವಡಿಸಲಾಗುತ್ತಿದೆ ಎಂದರು. ಈ ಕಾಮಗಾರಿ ಐದಾರು ತಿಂಗಳಿನಲ್ಲಿ ಪೂರ್ಣಗೊಂಡು, ಮುಂದಿನ ಸೀಜನ್ ನಲ್ಲಿ ನೀರು ಕೊಡಲು ಅನುಕೂಲವಾಗುತ್ತದೆ ಎಂದು ಭಾವಿಸಿದ್ದೇನೆ. ಈ ಭಾಗದಲ್ಲಿ ನೀಡುತ್ತಿರುವ ಹೇಮಾವತಿ ನೀರು ಎಲ್ಲ ಕೆರೆಗಳಿಗೆ ಅರ್ಧಕ್ಕಿಂತ ಹೆಚ್ಚು…
ಮಧುಗಿರಿ: ತಾಲೂಕಿನ ಕೆಲ ಸರ್ಕಾರಿ ಶಾಲೆಗಳಿಗೆ ಹೈಟೆಕ್ ಸ್ಪರ್ಶ ನೀಡಿರುವುದು ಈಗಾಗಲೇ ವರದಿಯಾಗಿದ್ದು, ಈಗ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯೂ ಇದೇ ಹಾದಿಯಲ್ಲಿ ಸಾಗುತ್ತಿದ್ದು, ವಿನೂತನ ಮಾದರಿಯ ಹೈಟೆಕ್ ಅಂಗನವಾಡಿ ಕೇಂದ್ರಗಳ ನಿರ್ಮಾಣಕ್ಕೆ ಮುನ್ನುಡಿ ಬರೆದಿದೆ. ಹೈಟೆಕ್ ಅಂಗನವಾಡಿ ಕೇಂದ್ರ : ಪಟ್ಟಣದ ಪುರಸಭಾ ವ್ಯಾಪ್ತಿಯ ಬಹಳಷ್ಟು ಬಡಜನರಿಂದ ಕೂಡಿರುವ ಮಂಡರ ಕಾಲೋನಿಯಲ್ಲಿ ನಿರ್ಮಿತಿ ಕೇಂದ್ರದ ವತಿಯಿಂದ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಸುಮಾರು 16.50 ಲಕ್ಷ ವೆಚ್ಚದಲ್ಲಿ ಹೈಟೆಕ್ ಅಂಗನವಾಡಿ ಕೇಂದ್ರವನ್ನು ನಿರ್ಮಿಸಿದ್ದು, ಪಟ್ಟಣದ ಮೊದಲ ಹೈಟೆಕ್ ಅಂಗನವಾಡಿ ಕೇಂದ್ರವಾಗಿದೆ. ಪಟ್ಟಣದಲ್ಲಿ ಸುಮಾರು 25 ಅಂಗನವಾಡಿ ಕೇಂದ್ರಗಳಿದ್ದು, ಈ ಕೇಂದ್ರಗಳಲ್ಲಿ ಬಹುತೇಕ ಅಂಗನವಾಡಿಗಳು ಬಾಡಿಗೆ ಕೊಠಡಿಗಳಲ್ಲಿ ನಡೆಯುತ್ತಿವೆ. ಈಗ ಮಂಡರ ಕಾಲೋನಿಯಲ್ಲಿ ನಿರ್ಮಿಸಿರುವ ಅಂಗನವಾಡಿ ಕೇಂದ್ರವನ್ನು ಹೈಟೆಕ್ ಮಾದರಿಯಲ್ಲಿ ಬಹಳ ಸುಂದರವಾಗಿ ನಿರ್ಮಿಸಿದ್ದು, ಸ್ವಂತ ಕಟ್ಟಡವನ್ನು ಹೊಂದಿರುವ ಈ ಕೇಂದ್ರದಲ್ಲಿ ವಿಶಾಲವಾದ ಹಾಲ್,…
ಹುಳಿಯಾರು: ತುಮಕೂರು, ಚಿತ್ರದುರ್ಗ, ಚಿಕ್ಕಮಗಳೂರು ಜಿಲ್ಲೆಗಳ ಗಡಿ ಗ್ರಾಮಗಳ ಲಕ್ಷಾಂತರ ಜನ ಸಾಮಾನ್ಯರಿಗೆ ಸರಿಸುಮಾರು ಐದು ದಶಕಗಳಿಂದ ಆರೋಗ್ಯ ಸೇವೆ ಒದಗಿಸುತ್ತಿರುವ ಹುಳಿಯಾರು ಪ್ರಾಥಮಿಕ ಆರೋಗ್ಯ ಕೇಂದ್ರ ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೇರುವುದು ಯಾವಾಗ ಎನ್ನುವ ಪ್ರಶ್ನೆ ಕಳೆದ ದಶಕಗಳಿಂದಲೂ ಕೇವಲ ಪ್ರಶ್ನೆಯಾಗಿಯೆ ಉಳಿದಿದೆ. ಈಗ ಜಿಲ್ಲಾ ಉಸ್ತುವಾರಿ ಸಚಿವರಾದ ಜೆ.ಸಿ.ಮಾಧುಸ್ವಾಮಿಯವರು ಇತ್ತ ಗಮನ ಹರಿಸಿರುವುದು ಸಾರ್ವಜನಿಕ ವಲಯದಲ್ಲಿ ಆಶಾಭಾವನೆ ಚಿಗುರೊಡೆದಿದೆ. ಹೌದು! ಹುಳಿಯಾರು ಪಟ್ಟಣ ರಾಜ್ಯದಲಿಯೇ ಅತೀ ವೇಗವಾಗಿ ಬೆಳೆಯುತ್ತಿರುವ ಹೋಬಳಿ ಕೇಂದ್ರಗಳಲ್ಲಿ ಒಂದಾಗಿದ್ದು ಪ್ರಮುಖ ವ್ಯಾಪಾರ ಕೇಂದ್ರವಾಗಿ ಹೊರಹೊಮ್ಮಿ ಪ್ರದಿದಿನ ಸಾವಿರಾರು ಜನರು ಬಂದು ಹೋಗುವ ಸ್ಥಳವಾಗಿದೆ. ಹಾಗಾಗಿ ಸಹಜವಾಗಿಯೇ ಇಲ್ಲಿನ ಆಸ್ಪತ್ರೆಗೆ ಹಿಂದೆಂದಿಗಿಂತಲೂ ಕಳೆದ ಐದಾರು ವರ್ಷಗಳಿಂದ ಹೋರ ರೋಗಿಗಳು ದಾಖಲಾಗುತ್ತಿರುವ ಕಾರಣ ಇಲ್ಲಿನ ವೈದ್ಯಕೀಯ ಸಿಬ್ಬಂದ್ದಿಗಳ ಮೇಲೆ ಬೀಳುತ್ತಿರುವ ಒತ್ತಡವನ್ನು ಕಂಡ ಜನತೆ ಮೇಲ್ದರ್ಜೆಗೇರುವ ಜರುರತ್ತಿನ ಬಗ್ಗೆ ನಿರೀಯಿಟ್ಟುಕೊಂಡಿದ್ದಾರೆ. ಆದರೆ ಅಧಿಕಾರಿಗಳ ದಿವ್ಯ…
ಹುಳಿಯಾರು : ಟ್ರಾನ್ಸ್‍ಫಾರ್ಮರ್ ಬ್ಲಾಸ್ಟ್ ನಿಂದಾಗಿ 4 ತೆಂಗಿನ ಮರಗಳು ಸುಟ್ಟು ಭಸ್ಮವಾದ ಘಟನೆ ಹಂದನಕೆರೆ ಹೋಬಳಿ ಮತಿಘಟ್ಟ ಸಮೀಪದ ಬೆಳಗಹಳ್ಳಿ ಬಳಿ ಜರುಗಿದೆ. ಮತಿಘಟ್ಟದಿಂದ ಉಪ್ಪಾರಹಳ್ಳಿಗೆ ಮೋಟರ್ ಲೈನ್ ಕರೆಂಟ್ ಸರಬರಾಜು ಮಾಡಲು ಈ ಟ್ರಾನ್ಸ್‍ಫಾರ್ಮರ್ ಅಳವಡಿಸಲಾಗಿತ್ತು. ಆದರೆ ಸಾಮಾರ್ಥಕ್ಯೂ ಮೀರಿ ರೈತರು ಈ ಟಿಸಿಯಿಂದ ವಿದ್ಯುತ್ ಸಂಪರ್ಕ ಪಡೆದಿದ್ದರು. ಪರಿಣಾಮ ಗುರುವಾರ ರಾತ್ರಿ ಓವರ್ ಲೋಡ್ ಆಗಿ ಟಿಸಿ ಬ್ಲಾಸ್ಟ್ ಆಗಿದೆ. ಟಿಸಿ ಬ್ಲಾಸ್ಟ್‍ನಿಂದ ಹೊತ್ತಿದ ಬೆಂಕಿ ಸುತ್ತಮುತ್ತಲ 4 ಫಲಭರಿತ ತೆಂಗಿನ ಮರಗಳನ್ನು ಸುಟ್ಟಿವೆ. ಅಲ್ಲದೆ ಗುರುವಾರ ರಾತ್ರಿಯಿಂದ ಈ ಭಾಗದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡು ರೈತರಿಗೆ ತೊಂದರೆಯಾಗಿದೆ. ಸ್ಥಳಕ್ಕೆ ಹಂದನಕೆರೆ ಬೆಸ್ಕಾಂ ಶಾಖಾಧಿಕಾರಿ ರಾಜಶೇಖರ್ ಅವರು ಭೇಟಿ ನೀಡಿ ಘಟನೆಯ ವಿವರ ಪಡೆದು ಮೇಲಧಿಕಾರಿಗಳಿಗೆ ತಿಳಿಸಿದ್ದಾರೆ. ಟ್ರಾನ್ಸ್‍ಫಾರ್ಮರ್ ಬದಲಾವಣೆಗೆ ನುರಿತ ಕೆಲಸಗಾರರ ತಂಡ ಬರಬೇಕಿದ್ದು ಶನಿವಾರ ಬರುವ ಭರವಸೆಯನ್ನು ನೀಡಲಾಗಿದೆ.
ತುಮಕೂರು: ಕರ್ನಾಟಕ ವಿಧಾನ ಪರಿಷತ್‍ನ ಘನತೆ, ಗೌರವವನ್ನು ಎತ್ತಿ ಹಿಡಿದು ದೇಶದಲ್ಲೇ ಮಾದರಿ ವಿಧಾನ ಪರಿಷತ್ತನ್ನಾಗಿ ಮಾಡಲು ಹಗಲಿರುಳು ಶ್ರಮಿಸುತ್ತೇನೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದರು. 113 ವರ್ಷಗಳ ಇತಿಹಾಸ ಹೊಂದಿರುವ ಕರ್ನಾಟಕ ವಿಧಾನ ಪರಿಷತ್ ಇಡೀ ದೇಶಕ್ಕೆ ಮಾದರಿಯಾಗಬೇಕಾಗಿದೆ. ಆ ನಿಟ್ಟಿನಲ್ಲಿ ತಾವು ಕಾರ್ಯನಿರ್ವಹಿಸುತ್ತೇನೆ ಎಂದು ಅವರು ಹೇಳಿದರು. ನಗರದ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಲಿಂಗೈಕ್ಯ ಹಿರಿಯ ಶ್ರೀಗಳಾದ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ ಗದ್ದುಗೆ ದರ್ಶನ ಪಡೆದು, ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿಯವರ ಆಶೀರ್ವಾದ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಭಾಪತಿ ಹುದ್ದೆ ಸಂವಿಧಾನ ಬದ್ಧವಾದ, ಜವಾಬ್ದಾರಿಯುತ ಸ್ಥಾನ. ಇಂತಹ ಸಂವಿಧಾನ ಬದ್ದವಾದ ಹುದ್ದೆಯನ್ನು ನಾನು ಅಲಂಕರಿಸಿದ್ದೇನೆ. ಸದನವನ್ನು ಉತ್ತಮ ರೀತಿಯಲ್ಲಿ ನಡೆಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು. ಸಭಾಪತಿ ಸ್ಥಾನ ಸಂವಿಧಾನ ಬದ್ಧವಾದ…
ತುಮಕೂರು: ಕರ್ನಾಟಕ ರಾಜ್ಯವೊಂದರಲ್ಲೇ ಶೇ.22.8ರಷ್ಟು ಮಂದಿ ತಂಬಾಕು ಚಟಕ್ಕೆ ದಾಸರಾಗಿದ್ದಾರೆ ಎಂದು ಇನ್ಸ್ಟಿಟ್ಯೂಟ್ ಆಫ್ ಪಬ್ಲಿಕ್ ಹೆಲ್ತ್ (IPಊ)ನ ಡಾ. ಚಂದ್ರಶೇಖರ್ ಕೊಟಗಿ ಆತಂಕ ವ್ಯಕ್ತಪಡಿಸಿದರು. ಬೆಂಗಳೂರಿನ ಇನ್ಸ್ಟಿಟ್ಯೂಟ್ ಆಫ್ ಪಬ್ಲಿಕ್ ಹೆಲ್ತ್ (IPಊ), ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಇವರ ಸಹಯೋಗದಲ್ಲಿ ಕುಣಿಗಲ್ ತಾಲೂಕಿನಲ್ಲಿಂದು ವಿವಿಧ ಶಾಲೆಗಳ ಮುಖ್ಯೋಪಧ್ಯಾಯರು ಹಾಗು ಕ್ಲಸ್ಟರ್ ಸಂಪನ್ಮೂಲ ಅಧಿಕಾರಿಗಳಿಗಾಗಿ “ತಂಬಾಕು ಮುಕ್ತ ಶೈಕ್ಷಣಿಕ ಸಂಸ್ಥೆ” ಕುರಿತು ಏರ್ಪಡಿಸಿದ್ದ ತರಬೇತಿ ಕಾರ್ಯಾಗಾರವನ್ನುದ್ದೇಶಿಸಿ ಅವರು ಮಾತನಾಡಿದರು. ತಂಬಾಕು ದುಷ್ಚಟಕ್ಕೆ ವಯಸ್ಕರಲ್ಲದೆ ಮಕ್ಕಳೂ ಸಹ ಹೆಚ್ಚಿನ ಸಂಖ್ಯೆಯಲ್ಲಿ ದಾಸರಾಗುತ್ತಿರುವುದು ಅತ್ಯಂತ ಕಳವಳಕಾರಿ ಸಂಗತಿಯಾಗಿದೆ. ಈ ನಿಟ್ಟಿನಲ್ಲಿ ಶಾಲಾ ಕಾಲೇಜುಗಳ ಸುತ್ತಮುತ್ತಲ ಪ್ರದೇಶಗಳನ್ನು ತಂಬಾಕು ಮುಕ್ತ ಗೊಳಿಸುವ ಉದ್ದೇಶದಿಂದ ಹಾಗೂ ಭವಿಷ್ಯದ ಯುವಜನತೆಯನ್ನು ಈ ದುಷ್ಚಟದಿಂದ ದೂರವಿಡಲು ಐಪಿಎಚ್ ಸಂಸ್ಥೆಯು ತುಮಕೂರು ಜಿಲ್ಲೆಯನ್ನು ಆಯ್ದುಕೊಂಡು “ತಂಬಾಕು ಮುಕ್ತ ಶಾಲೆ” ಅಭಿಯಾನವನ್ನು ಕೈಗೆತ್ತಿಕೊಂಡಿದೆ. ಈ ಅಭಿಯಾನದಡಿ ಮೊದಲ ಹಂತದಲ್ಲಿ ಜಿಲ್ಲೆಯ…
ತುಮಕೂರು : ನಗರದಲ್ಲಿಂದು ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ ಮತ್ತು ಸಿದ್ದಾರ್ಥ ವೈದ್ಯಕೀಯ ಮಹಾವಿದ್ಯಾಲಯ, ದಂತ ವೈದ್ಯಕೀಯ ಕಾಲೇಜು ತುಮಕೂರು ಇವರ ಸಂಯುಕ್ತ ಆಶ್ರದಲ್ಲಿ ರಾಷ್ಟ್ರೀಯ ಪ್ಲೋರೋಸಿಸ್ ತಡೆ ಮತ್ತು ನಿಯಂತ್ರಣ ಕಾರ್ಯಕ್ರಮದಡಿ ನಿರಂತರ ವೈದ್ಯಕೀಯ ಶಿಕ್ಷಣ ಕಾರ್ಯಕ್ರಮವನ್ನು ಸಿದ್ದಾರ್ಥ ವೈದ್ಯಕೀಯ ಕಾಲೇಜಿನ ನಾಗಾರ್ಜುನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು. ಸಿದ್ದಾರ್ಥ ವೈದ್ಯಕೀಯ ಶಿಕ್ಷಣ ಸಂಸ್ಥೆಯ ಕುಲಪತಿಗಳಾದ ಡಾ.ಜಿ.ಪರಮೇಶ್ವರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಪ್ಲೋರೋಸಿಸ್ ನಿಂದ ಆಗುವ ತೊಂದರೆಗಳನ್ನ ತಡೆಗಟ್ಟವಲ್ಲಿ ಮತ್ತು ನೀಡಲಾಗುವ ಚಿಕಿತ್ಸೆಯ ಜೊತೆಯಲ್ಲಿ ಇನ್ನಿತರ ದುಷ್ಪರಿಣಾಮಗಳ ಕುರಿತಾದ ಸಂಶೋಧನೆಗಳು ಹೆಚ್ಚು ಹೆಚ್ಚು ನಡೆಯಬೇಕೆಂದರು. ದಂತ ಪ್ಲೋರೋಸಿಸ್ ಕುರಿತಾಗಿ ಡಾ.ಭರತೇಶ್, ಮೂಳೆಗಳ ಪೆÇ್ಲೀರೋಸಿಸ್ ಕುರಿತಾಗಿ ಡಾ.ರವಿಕುಮಾರ್, ಪ್ಲೋರೋಸಿಸ್ ನಿಯಂತ್ರಣದ ಕ್ರಮಗಳ ಕುರಿತಾಗಿ ಡಾ.ಚೇಲುವೆಗೌಡ, ರಾಷ್ಟ್ರೀಯ ಪ್ಲೋರೋಸಿಸ್ ತಡೆ ಮತ್ತು ನಿಯಂತ್ರಣ ಕಾರ್ಯಕ್ರಮದಡಿಯಲ್ಲಿನ ತುಮಕೂರು ಜಿಲ್ಲೆಯಲ್ಲಿ ಕೈಗೊಂಡಿರುವ ಮಾಹಿತಿಯನ್ನು ಡಾ.ಕೇಶವರಾಜು ಅವರು ತಿಳಿಸಿದರು. ಜಿಲ್ಲಾ…











