ತಿಪಟೂರು : ಪೇದೆಗೆ ಕೊರೊನಾ ಪಾಸಿಟೀವ್ ಬಂದ ಹಿನ್ನೆಲೆಯಲ್ಲಿ ತಿಪಟೂರು ಪೊಲೀಸ್ ಠಾಣೆ ಸೀಲ್ ಡೌನ್ ಮಾಡಲಾಗಿದೆ. ತಿಪಟೂರು ಪೊಲೀಸ್ ಠಾಣೆಯಲ್ಲಿ ಓರ್ವ ಮುಖ್ಯಪೇದೆಗೆ ಕೊರೋನಾ ಸೋಂಕು ತಗುಲಿದ್ದು, ನಗರ ಪೊಲೀಸ್ ಠಾಣೆಯನ್ನು ಗ್ರಾಮಾಂತರ ಪೊಲೀಸ್ ಠಾಣೆಗೆ ಶಿಫ್ಟ್ ಮಾಡಲಾಗಿದೆ. ಪೊಲೀಸರು ಸೋಂಕಿಗೆ ಒಳಗಾಗುತ್ತಿರುವುದು ತೀವ್ರ ಆತಂಕಕ್ಕೀಡು ಮಾಡಿದೆ.
Author: News Desk Benkiyabale
ತುಮಕೂರು : ಅಕ್ಕನೊಂದಿಗೆ ಅನುಚಿತವಾಗಿ ವರ್ತಿಸಿದ ವ್ಯಕ್ತಿಯನ್ನು ಹಾಡುಹಗಲೇ ತಮ್ಮ ಕೊಲೆ ಮಾಡಿರುವ ಘಟನೆ ತುಮಕೂರು ನಗರದ ಮಂಡಿಪೇಟೆಯ ಜಾಮಿಯಾ ಮಸೀದಿ ಬಳಿ ನಡೆದಿದೆ. ದಾದಾಪೀರ್(55) ಕೊಲೆಯಾಗಿದ್ದು, ಮಧುಕುಮಾರ್ ಕೊಲೆಗೈದ ಆರೋಪಿ. ಘಟನೆಯ ವಿವರ: ಆರೋಪಿ ಮಧುಕುಮಾರ್ ಎಂಬಾತನ ಅಕ್ಕ ಲಕ್ಷ್ಮಿ ನಗರದ ಚರ್ಚ್ ವೃತ್ತದ ಬಳಿ ಕ್ಯಾಂಟೀನ್ ನಡೆಸುತ್ತಿದ್ದು, ಇಂದು ಮಧ್ಯಾಹ್ನ ಅಲ್ಲಿಗೆ ಬಂದ ದಾದಾಪೀರ್ ಬಿಸ್ಕೆಟ್ ಪ್ಯಾಕೆಟ್ ಹೇಳಿದ್ದಾನೆ. ಲಕ್ಷ್ಮಿಯವರು ಹಣ ಕೇಳಿದ್ದಾರೆ, ನಾನೇನು ದುಡ್ಡು ಪ್ರಿಂಟ್ ಮಾಡುತ್ತೇನೆಯೇ ಎಂದು ವ್ಯಂಗ್ಯವಾಗಿ ಮಾತನಾಡಿದ್ದಾನೆ ದಾದಾಪೀರ್. ಮಾತ್ರವಲ್ಲದೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಅಲ್ಲೇ ಕುಳಿತು ಟೀ ಕುಡಿಯುತ್ತಿದ್ದ ತಮ್ಮ ಮದು ದಾದಾಪೀರ್ ಗೆ ಸರಿಯಾಗಿ ಮಾತನಾಡುವಂತೆ ಹೇಳಿದ್ದಾನೆ. ಇಬ್ಬರ ನಡುವೆ ಮಾತಿನ ಚಕಮಕಿ ನಡೆದು ಸ್ಥಳೀಯರು ಆ ಜಗಳವನ್ನು ಬಿಡಿಸಿ ಕಳುಹಿಸಿದ್ದಾರೆ. ಅಷ್ಟಕ್ಕೆ ಸುಮ್ಮನಾಗದ ಮೃತ ದಾದಾಪೀರ್ ಮಧು ಕುಮಾರನನ್ನು…
ತುಮಕೂರು: ಜಿಲ್ಲೆಯಲ್ಲಿ ಬುಧವಾರ 27 ಜನರಿಗೆ ಕೊರೊನಾ ಸೋಂಕು ಕಂಡು ಬಂದಿದ್ದು, ಒಟ್ಟು ಸೋಂಕಿತರ ಸಂಖ್ಯೆ 319 ತಲುಪಿದೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಾಗೇಂದ್ರಪ್ಪ ಈ ಕುರಿತು ಮಾಹಿತಿ ನೀಡಿದ್ದು, ಚಿಕ್ಕನಾಯಕನಹಳ್ಳಿ ತಾಲ್ಲೂಕೊಂದರಲ್ಲೇ 16 ಜನರಲ್ಲಿ ಸೋಂಕು ಕಾಣಿಸಿದೆ. ಕೊರಟಗೆರೆ 1, ಮಧುಗಿರಿ 5, ತಿಪಟೂರು 3, ತುಮಕೂರಿನಲ್ಲಿ 2 ಪ್ರಕರಣ ಪತ್ತೆಯಾಗಿದೆ. ಚಿಕ್ಕನಾಯಕನಹಳ್ಳಿ – 16: ಚಿಕ್ಕನಾಯಕನಹಳ್ಳಿ ತಾಲೂಕಿನ ವಿಭಾಗದಲ್ಲಿ 38 ವರ್ಷ ಮತ್ತು 15 ವರ್ಷದ ಹೆಣ್ಣು, ಗೋಡೆ ಕೆರೆಯ 22 ವರ್ಷದ ಗಂಡು, 45 ವರ್ಷದ ಹೆಣ್ಣು, 50 ವರ್ಷದ ಗಂಡು, 70 ವರ್ಷದ ಹೆಣ್ಣು, 47 ವರ್ಷದ ಗಂಡು, 32 ವರ್ಷದ ಹೆಣ್ಣು, 18 ವರ್ಷದ ಹೆಣ್ಣು, ಹೆಸರಳ್ಳಿಯ 5 ವರ್ಷದ ಹೆಣ್ಣು, ಕಾಡೇನಹಳ್ಳಿಯ 19 ವರ್ಷದ ಗಂಡು, 45 ವರ್ಷದ ಗಂಡು, 19 ವರ್ಷದ ಗಂಡು, 62…
ತುಮಕೂರು: ಹಾಡು ಹಗಲೇ ರೌಡಿಶೀಟರ್ ಒಬ್ಬನ ಸಹಚರರು ಸಿಕ್ಕ ಸಿಕ್ಕವರಿಗೆ ಚಾಕುವಿನಿಂದ ಇರಿದು ಮಾಂಗಲ್ಯ ಸರಗಳು, ಮೋಬೈಲ್‍ಗಳನ್ನು ದೋಚುತ್ತಿದ್ದ ಖದೀಮರನ್ನು ಸಾರ್ವಜನಿಕರು ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿರುವ ಘಟನೆ ನಡೆದಿದೆ. ತುಮಕೂರು ನಗರದ ಭಾರತಿ ನಗರದ ನಿವಾಸಿಯಾದ ರೌಡಿಶೀಟರ್ ರವಿ ಎಂಬುವನ ಹಿಂಬಾಲಕರಾದ ಆನಂತ್, ಪಾಪಣ್ಣಿ, ವಿಕ್ಕಿ ಎಂಬುವವರೆ ಬಂಧಿಸಲಾಗಿರುವ ಕಳ್ಳರು. ಮೊದಲೇ ಕದ್ದಿದ್ದ ಬೈಕಿನಲ್ಲಿ ಮೂರು ಜನ ತುಮಕೂರು ಕುಣಿಗಲ್ ಮಾರ್ಗದ ಹೊನ್ನುಡಿಕೆ ಹ್ಯಾಂಡ್ ಪೆÇೀಸ್ಟ್ ಬಳಿ ಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಿನ್ನೆ ಮಧ್ಯಾಹ್ನ ಮದ್ಯಪಾನ ಹಾಗೂ ಗಾಂಜಾ ಸೇವಿಸಿ ತುಮಕೂರು ಕಡೇ ಬರುವ ಜನರ ಬಳಿ ದರೋಡೆ ಮಾಡಿದ್ದಾರೆ. ಗೂಳೊರು ಬಳಿ ಬರುತ್ತಿದ್ದ ಮಹಿಳೆಯೊಬ್ಬರನ್ನು ಅಡ್ಡಗಟ್ಟಿ ಮಾಂಗಲ್ಯ ಸರವನ್ನು ಕಿತ್ತು ಕೊಂಡು ರಸ್ತೆ ತುಂಬಾ ಅಡ್ಡಾದಿಡ್ಡಿಯಾಗಿ ಬೈಕ್ ಓಡಾಡಿದ್ದಾರೆ. ಇತ್ತ ಹೊಸ ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯ ಕಸ್ತೂರ ಬಾ ಆಸ್ಪತ್ರೆಯ ಸಮೀಪ ಮಹಿಳೆಯೂಬ್ಬರ…
ತುಮಕೂರು: ಜಿಲ್ಲೆಯಲ್ಲಿಂದು 24 ಹೊಸ ಕೊವಿಡ್-19 ಪ್ರಕರಣ ದೃಢಪಟ್ಟಿದ್ದು, ಒಟ್ಟು ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 292ಕ್ಕೆ ಏರಿಕೆಯಾಗಿದೆ ಎಂದು ಡಿ.ಹೆಚ್.ಓ ಡಾ|| ನಾಗೇಂದ್ರಪ್ಪ ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಇಂದು ಪಾವಗಡ ತಾಲ್ಲೂಕಿನಲ್ಲಿ 14, ಗುಬ್ಬಿ-3, ಕೊರಟಗೆರೆ-2 ಹಾಗೂ ಚಿಕ್ಕನಾಯಕನಹಳ್ಳಿ ಕುಣಿಗಲ್, ಮಧುಗಿರಿ, ತುಮಕೂರು, ಹಾಗೂ ತುರುವೇಕೆರೆ ತಾಲ್ಲೂಕಿನಲ್ಲಿ ತಲಾ ಒಂದು ಸೇರಿ ಒಟ್ಟು 24 ಜನರಲ್ಲಿ ಕೋವಿಡ್-19 ಸೋಂಕಿರುವುದು ದೃಢಪಟ್ಟಿದೆ. ಅಲ್ಲದೆ ಓರ್ವ ಸೋಂಕಿನಿಂದ ಮೃತಪಟ್ಟಿದ್ದಾರೆ. ಇಂದು ಆಸ್ಪತ್ರೆಯಿಂದ ಇಬ್ಬರು ಗುಣಮುಖರಾಗಿ ಬಿಡುಗಡೆಯಾಗಿದ್ದು, ಈವರೆಗೆ 67 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 215 ಸಕ್ರಿಯ ಪ್ರಕರಣಗಳಿದ್ದು, ಈವರೆಗೆ 10 ಕೋವಿಡ್-19 ಸೋಂಕಿತರು ಸಾವನ್ನಪ್ಪಿದ್ದಾರೆ ಎಂದು ಡಿ.ಹೆಚ್.ಓ. ಡಾ||ನಾಗೇಂದ್ರಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತುಮಕೂರು: ಕರ್ನಾಟಕ ರಾಜ್ಯದಲ್ಲಿ ಕೋವಿಡ್-19 ಮಹಾಮಾರಿಯಾಗಿ ಆಡಳಿತಾತ್ಮಕ, ವಾಣಿಜ್ಯ, ಸೇವಾಕ್ಷೇತ್ರ…..ಇತ್ಯಾದಿ ಎಲ್ಲಾ ಕಡೆಯಲ್ಲಿಯೂ ರಾಕ್ಷಸ ಪ್ರವೃತ್ತಿ ತೋರಿರುವುದು ಸರಿಯಷ್ಟೇ. ಕರ್ನಾಟಕ ಸರ್ಕಾರ ಈ ರೋಗ ತಡೆಗಟ್ಟಲು ಶ್ರಮಿಸುತ್ತಿರುವುದು ದೇಶದಲ್ಲಿಯೇ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಹೇಳಿದರು. ರಾಜ್ಯದಲ್ಲಿ ಮಾರ್ಚ್ 26ರಂದು ಪ್ರಾರಂಭವಾದ ಈ ಮಹಾಮಾರಿ ರೋಗ ರಾಕ್ಷಸ ಪ್ರವೃತ್ತಿ ತೋರುತ್ತಾ, ಪ್ರತಿದಿನ ಹೆಚ್ಚುತ್ತಲಿದ್ದು, ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ವ್ಯಾಪಿಸಿದ್ದು, ಜುಲೈ ಮಾಹೆಯಲ್ಲಿಯೇ ಹೆಚ್ಚಿನ ಸೋಂಕಿತ-ಸಾವಿನ ಪ್ರಕರಣಗಳು ದಾಖಲಾಗುತ್ತಿರುವುದರಿಂದ ಜನತೆ ಭೀತಿಯಲ್ಲಿ ಜೀವನ ನಡೆಸುತ್ತಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿಯೂ ಈಗೀಗ ಸೋಂಕಿತ ಪ್ರಕರಣಗಳು ಕಾಣುತ್ತಲಿದೆ. ಉದಾ: ತುಮಕೂರು ಜಿಲ್ಲೆಯಲ್ಲಿ ಮಾರ್ಚ್ ಮಾಹೆಯಲ್ಲಿ 2 ಇದ್ದ ಪರಿಮಾಣ ಜುಲೈ ಮಾಹೆಯಲ್ಲಿಯೇ 150ಕ್ಕೂ ಹೆಚ್ಚು ಪ್ರಕರಣಗಳು ಬಂದಿದ್ದು, ಜಿಲ್ಲೆಯಲ್ಲಿ ಹಾಲಿ 254 ಪ್ರಕರಣಗಳಿರುತ್ತವೆ. ರಾಜ್ಯದಲ್ಲಿಯೂ ಇಂತಹ ಪರಿಸ್ಥಿತಿ ಇದೆ. ನಾನು ಜಿಲ್ಲೆಯಲ್ಲಿ ಪ್ರವಾಸ ಮಾಡುವಾಗ ಹಾಗೂ ನನ್ನನ್ನು…
ತುರುವೇಕೆರೆ: ತಾಲೂಕಿನ ಮುನಿಯೂರು ಗ್ರಾಮದಲ್ಲಿ ಸೋಮಶೇಖರ್ ಎಂಬುವವನಿಗೆ ಮಚ್ಚಿನಿಂದ ಹಲ್ಲೆ ಮಾಡಿರುವ ಆರೋಪಿ ಪುನಿತ್ ಎಂಬುವವನನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿ ಆರಕ್ಷಕ ವೃತ್ತ ನಿರೀಕ್ಷಕರ ಕಚೇರಿ ಎದುರು ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ನೇತೃತ್ವದಲ್ಲಿ ತಾಲೂಕು ಜೆಡಿಎಸ್ ಫ್ರತಿಭಟನೆ ನಡೆಸಿತು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಜೆಡಿಎಸ್ ಕಾರ್ಯಕರ್ತರೊಂದಿಗೆ ಮೆರವಣಿಗೆ ನಡೆಸಿದ ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಆರಕ್ಷಕ ವೃತ್ತ ನಿರೀಕ್ಷಕರ ಕಚೇರಿ ಎದುರು ತಮ್ಮ ಜೆಡಿಎಸ್ ಕಾರ್ಯಕರ್ತರೊಂದಿಗೆ ಗೇಟ್ ಮುಂಬಾಗ ಕುಳಿತು ಪ್ರತಿಭಟನೆ ನಡೆಸಿದರು. ಪ್ರತಿಭಟನಾ ನಿರತರನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ತಾಲೂಕಿನಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ. ಒಬ್ಬ ಆರೋಪಿಯನ್ನು ಬಂಧಿಸುವಲ್ಲಿ ತಾರತಮ್ಯ ಎಣಿಸುತ್ತಿರುವುದು ಸರಿಯಲ್ಲ ಶಾಸಕ ಮಸಾಲ ಜಯರಾಮ್ ಆರೋಪಿಯನ್ನು ಅಡಗಿಸಿಟ್ಟಿದ್ದಾರೆ ಎನ್ನುವ ಅನುಮಾನ ಕಾಡುತ್ತಿದೆ, ಶಾಸಕರಾದವರು ಇಂತಹ ಕ್ರಿಮಿನಲ್‍ಗಳ ಪರ ನಿಲ್ಲುತ್ತಿರುವುದು ಸರಿಯಿಲ್ಲ, ಪುನಿತ್ ಎಂಬುವವನು ಬಿಜೆಪಿ ಪಕ್ಷದ ಕಾರ್ಯಕರ್ತನಾಗಿದ್ದಾನೆನ್ನುವ ಕಾರಣಕ್ಕೆ ಆತನ ಬಂಧನ ಮಾಡದಂತೆ ಪೊಲೀಸ್ ಇಲಾಖೆಯ…
ತುರುವೇಕೆರೆ: ತುರುವೇಕೆರೆ ಅಕ್ಷರಶಃ ರಾಜಕೀಯ ರಣರಂಗವಾಗಿ ಮಾರ್ಪಾಡಾಗಿದ್ದು, ಒಬ್ಬರ ಮೇಲೊಬ್ಬರು ರಾಜಕೀಯ ಕೆಸರೆರಚಾಟ ಮಾಡುತ್ತಿದ್ದಾರೆ. ತಾನು, ತನ್ನ ಅಧಿಕಾರ ಇವಷ್ಟನ್ನೇ ಗುರಿಯಾಗಿಸಿಕೊಂಡು ತನ್ನ ಬೆಂಬಲಿಗರ ಓಲೈಕೆಗಾಗಿ ತನ್ನ ಘನತೆಯ ಶೋಭೆಯನ್ನು ಮರೆತು ಎದುರಾಳಿಯ ತೇಜೋವಧೆಗೆ ಮುಂದಾಗಿರುವುದು ವಿಪರ್ಯಾಸ. ಯಾರೊಬ್ಬರು ಸಹ ತನ್ನ ನೈತಿಕತೆಯ ಹೊರೆ ಹೆಚ್ಚುವಿಕೆಗೆ ಮುಂದಾಗದೆ ಎದುರಾಳಿಯ ತೇಜೋವಧೆಯೊಂದೆ ಗುರಿಯಾಗಿಸಿಕೊಂಡು ತಾನು ತನ್ನ ಬೆಂಬಲಿಗರಿಂದ ಅಸಂಭದ್ಧ ಪದಗಳ ಬಳಕೆಯನ್ನು ಮಾಡುತ್ತಾ ರಾಜಕೀಯ ಕೆಸರೆರಚಾಟದ ಜಂಗಿ ಕುಸ್ತಿಯ ಅಖಾಡವನ್ನಾಗಿ ತುರುವೇಕೆರೆ ಕ್ಷೇತ್ರವನ್ನ ಮಾರ್ಪಡಿಸಿಕೊಂಡು ಅಭಿವೃದ್ಧಿಯ ಮೂಲ ಮಂತ್ರವನ್ನ ಹೊರಗಿಟ್ಟು ಕೊರೊನಾ ಸೋಂಕಿನಂತಹ ಆರೋಗ್ಯ ತುರ್ತುಪರಿಸ್ಥಿತಿಯ ಅರಿವಿಲ್ಲದೆ ಮಾತನಾಡುತ್ತಿರುವುದು, ಮಾತನಾಡಲು ಪ್ರೇರೇಪಿಸುತ್ತಿರುವುದು ಎಷ್ಟರಮಟ್ಟಿಗೆ ಸರಿ ಎಂಬುದು ತುರುವೇಕೆರೆ ಜನಾಭಿಪ್ರಾಯವಾಗಿದೆ. ಹಾಲಿ ಶಾಸಕರು ಮತ್ತು ಮಾಜಿ ಶಾಸಕರ ಮಾತುಗಳು ಮೌನವನ್ನೇ ಮರೆತು ರಾಜಕೀಯ ರಣಾಂಗಣವನ್ನೇ ಸೃಷ್ಟಿ ಮಾಡುತ್ತಿವೆ ಎನ್ನುವ ಮನಸ್ಥಿತಿಗೆ ಆ ಕ್ಷೇತ್ರದ ಮತದಾರ ಬಂದಿರುವಂತಿದೆ. ಬಿಜಿಪಿ…
ತುಮಕೂರು : ಪಶು ವೈದ್ಯರು ಹಳ್ಳಿಗಳಿಗೆ ತೆರಳಿ ರೈತರ ಸಮಸ್ಯೆಗಳನ್ನು ಆಲಿಸಿ ಪರಿಹಾರಕ್ಕೆ ಮುಂದಾಗಿ ಎಂದು ಪಶುಸಂಗೋಪನೆ, ಹಜ್ ಮತ್ತು ವಕ್ಫ್ ಸಚಿವ ಪ್ರಭು ಬಿ ಚವ್ಹಾಣ್ ಅವರು ಪಶು ವೈಧ್ಯಾಧಿಕಾರಿಗಳಿಗೆ ಸೂಚನೆ ನೀಡಿದರು. ತುಮಕೂರು ನಗರದಲ್ಲಿರುವ ಪಶುಪಾಲನ ಮತ್ತು ಪಶು ವೈದ್ಯ ಇಲಾಖೆಯ ಉಪನಿರ್ದೇಶಕರ ಕಚೇರಿಯಲ್ಲಿಂದು ನಡೆದ ಇಲಾಖೆಯ ಪ್ರಗತಿ ಪರೀಶೀಲನಾ ಸಭೆ ನಡೆಸಿ ಮಾತನಾಡಿದ ಅವರು ವೈದ್ಯರು ಹಳ್ಳಿಗಳಿಗೂ ಭೇಟಿ ನೀಡಿ ರೈತರ ಸಮಸ್ಯೆಗಳನ್ನು ಪರಿಹರಿಸಿ, ಪಶು ಸಂಗೋಪನೆ ಇಲಾಖೆಯಲ್ಲಿನ ಪಶುವೈದ್ಯರು ಬರೀ ಕೇಂದ್ರ ಸ್ಥಾನದ ಕಛೇರಿಯಲ್ಲಿ ಕುಳಿತು ಕೊಳ್ಳದೇ ಹಳ್ಳಿಗಳಿಗೆ ಭೇಟಿ ನೀಡಿ ಜಾನುವಾರುಗಳಿಗೆ ಚಿಕಿತ್ಸೆ ನೀಡಬೇಕು ಎಂದು ಅವರು ಹೇಳಿದರು. ನಿತ್ಯ ಹಳ್ಳಿಗಳಿಗೆ ಭೇಟಿ ನೀಡಿದ ಕೆಲಸದ ಪೋಟೊ ಹಾಗೂ ವಿವರವನ್ನು ವಾಟ್ಸಾಪ್ ಮೂಲಕ ನನಗೆ ಕಳುಹಿಸಿ. ಸದ್ಯದಲ್ಲೆ ಪಶುಸಂಗೋಪನೆ ಇಲಾಖೆಯ ವಾರ್ ರೂಮ್ ಸ್ಥಾಪನೆ ಮಾಡುವ ಆಲೋಚನೆ ಇದೆ ಎಂದು ಹೇಳಿದರು.…
ತುಮಕೂರು : ನಗರದಲ್ಲಿ ಇಂದು ಒಂದೇ ದಿನ 16 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 268 ಏರಿಕೆಯಾಗಿದೆ. ತಾಲ್ಲೂಕುವಾರು ಸೋಂಕಿತರ ವಿವರ : ತುಮಕೂರು -6 ಕೊರಟಗೆರೆ-4 ಪಾವಗಡ – 2 ಮಧುಗಿರಿ-2 ಚಿಕ್ಕನಾಯಕನಹಳ್ಳಿ-1 ಕುಣಿಗಲ್-1 ಇದರಲ್ಲಿ 65 ಮಂದಿ ಸಂಪೂರ್ಣ ಗುಣಮುಖರಾಗಿ ಜಿಲ್ಲಾ ಕೋವಿಡ್-19 ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಸದ್ಯ ಆಸ್ಪತ್ರೆಯಲ್ಲಿ 194 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಲ್ಲದೇ ಕೊರೊನಾ ಸೋಂಕಿತರೊಬ್ಬರು ಇಂದು ಸಾವನ್ನಪ್ಪ್ಪಿದ್ದಾರೆ ಎಂದು ಡಿಹೆಚ್ಒ ಡಾ. ನಾಗೇಂದ್ರಪ್ಪ ತಿಳಿಸಿದ್ದಾರೆ.