ತುಮಕೂರು : ಜಿಲ್ಲಾ ಪಂಚಾಯತ್ ಅನುದಾನದಲ್ಲಿ ವಿವಿಧ ಇಲಾಖೆಗಳು ಕೈಗೊಂಡು ಪೂರ್ಣಗೊಳಿಸಿರುವ ಯೋಜನಾ ಕಾಮಗಾರಿಗಳಿಗೆ ಸಂಬಂಧಿಸಿದ ಬಿಲ್ಲುಗಳ ಪಾವತಿಗಾಗಿ ಕೂಡಲೇ ಸಲ್ಲಿಸಬೇಕೆಂದು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಲತಾ ರವಿಕುಮಾರ್ ಇಂಜಿನಿಯರುಗಳಿಗೆ ಸೂಚನೆ ನೀಡಿದರು. ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ಜರುಗಿದ ವಿಶೇಷ ಸಾಮಾನ್ಯ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಪೂರ್ಣಗೊಂಡ ಕಾಮಗಾರಿಗಳ ಬಿಲ್ಲುಗಳನ್ನು ಸಕಾಲದಲ್ಲಿ ಸಲ್ಲಿಸದ್ದಿದ್ದರೆ ಅನುದಾನ ರದ್ದಾಗುತ್ತದೆ. ಅನುದಾನ ರದ್ದಾದರೆ ಸಂಬಂಧಿಸಿದ ಅಧಿಕಾರಿಗಳನ್ನು ನೇರ ಹೊಣೆ ಮಾಡಲಾಗುವುದೆಂದು ಎಚ್ಚರಿಕೆ ನೀಡಿದರು. ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶುಭಾ ಕಲ್ಯಾಣ್ ಮಾತನಾಡಿ, ಜಿಲ್ಲಾ ಪಂಚಾಯತ್ ಕಾರ್ಯಕ್ರಮಗಳ ವಿವಿಧ ಲೆಕ್ಕ ಶೀರ್ಷಿಕೆ/ಯೋಜನೆಗಳಡಿ ಅನುಮೋದಿತ ಕಾಮಗಾರಿಗಳನ್ನು ಬದಲಾವಣೆಗಾಗಿ ಸೂಕ್ತ ಕಾರಣ ನೀಡಿದಾಗ ಮಾತ್ರ ಬದಲಿ ಕಾಮಗಾರಿಗಳನ್ನು ಕೈಗೊಳ್ಳಲು ಅನುಮತಿ ನೀಡಲಾಗುವುದೆಂದರು. ಅನುದಾನ ಕೊರತೆ, ನ್ಯಾಯಾಲಯದ ದಾವೆ, ಏಜೆನ್ಸಿ ಬದಲಾವಣೆ ಮತ್ತಿತರ ಕಾರಣಗಳಿಂದ ಬದಲಿ ಕಾಮಗಾರಿಗಳಿಗೆ ಮನವಿ ಸಲ್ಲಿಸಲಾಗಿದೆ ಎಂದು ಅಧಿಕಾರಿಗಳು ಸಭೆಗೆ ತಿಳಿಸಿದಾಗ,…
Author: News Desk Benkiyabale
ತುಮಕೂರು : ಲಿಕ್ಕರ್ ಮಾರಾಟ ಮಾಡುವವರಿಗೆ ಅಬಕಾರಿ, ಪೆÇಲೀಸ್ ಇಲಾಖೆಯಿಂದ ಕಿರುಕುಳ ಹೆಚ್ಚಿರುವುದಲ್ಲದೆ ಭ್ರಷ್ಟಾಚಾರ ಮಿತಿ ಮೀರಿದೆ ಎಂದು ತುಮಕೂರು ಜಿಲ್ಲಾ ಮದ್ಯ ಮಾರಾಟಗಾರ ಸಂಘದ ಕಾರ್ಯದರ್ಶಿ ಎಸ್.ಆರ್.ಜಗದೀಶ್ ಆರೋಪಿಸಿದರು. ಮದ್ಯ ಮಾರಾಟಗಾರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ತುಮಕೂರು ಜಿಲ್ಲಾ ಮದ್ಯ ಮಾರಾಟಗಾರರ ಸಂಘದ ವತಿಯಿಂದ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಅವರು ಮಾತನಾಡಿದರು. ಸರ್ಕಾರ ಆನ್ ಲೈನ್ ಮೂಲಕ ಮದ್ಯಮಾರಾಟ ಮಾಡುವ ಪ್ರಸ್ತಾವನೆಯನ್ನು ಕೈಬಿಡುವಂತೆ 2018ರಲ್ಲಿಯೇ ಒಕ್ಕೂಟ ಆಕ್ಷೇಪ ವ್ಯಕ್ತಪಡಿಸಿ ಮನವಿ ಸಲ್ಲಿಸಿದ್ದರು, 2020ರಲ್ಲಿ ಹಿಪ್ ಬಾರ್ ಪ್ರೈ.ಲಿ ಒತ್ತಡದ ಮೇಲೆ ಪುನಃ ಪ್ರಸ್ತಾವ ತರುವ ಮೂಲಕ ಮದ್ಯ ಸನ್ನದುದಾರರ ಉದ್ಯೋಗವನ್ನು ಕಿತ್ತುಕೊಳ್ಳುವ ಪ್ರಯತ್ನ ಮಾಡುತ್ತಿದೆ ಎಂದು ದೂರಿದರು. ಸರ್ಕಾರ ಆನ್ ಲೈನ್ ಮದ್ಯ ಮಾರಾಟಕ್ಕ ಒಪ್ಪಿಗೆ ನೀಡದ ಬಗ್ಗೆ ಹಿಪ್ ಬಾರ್ ಪ್ರೈ.ಲಿ ನ್ಯಾಯಾಲಯದ ಮೊರೆ ಹೋಗಿದ್ದು, ನ್ಯಾಯಾಲಯ 2018…
ತುಮಕೂರು : ಕ್ರಷರ್ ಹಾಗೂ ಕಲ್ಲು ಬಂಡೆಗಳನ್ನು ಸ್ಫೋಟಿಸುವ ಜಿಲಿಟಿನ್ ಕಡ್ಡಿ ಸ್ಫೋಟಗೊಂಡು ಮನೆಯಲ್ಲಿದ್ದ ಮಹಿಳೆಯೊಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ತಾಲ್ಲೂಕಿನ ಮಸ್ಕಲ್ ಗ್ರಾಮದಲ್ಲಿ ಸೋಮವಾರ ಮಧ್ಯಾಹ್ನ ನಡೆದಿದೆ. ತಾಲ್ಲೂಕಿನ.ಹೆಬ್ಬೂರು ಪೊಲಿಸ್ ಠಾಣೆ ವ್ಯಾಪ್ತಿಯ ಹೊನ್ನುಡಿಕೆ ಬಳಿ ಇರುವ ಮಸ್ಕಲ್ ಗ್ರಾಮದ ಲಕ್ಷ್ಮೀಕಾಂತ್ ಎಂಬುವರ ಮನೆ ಜಿಲಿಟಿನ್ ಕಡ್ಡಿ ಸ್ಪೋಟಗೊಂಡು ಸಂಪೂರ್ಣ ಧ್ವಂಸವಾಗಿದ್ದು, ಮೇಲ್ಛಾವಣಿ ಸೀಟುಗಳು ನಾಶವಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಈ ಜಿಲೆಟಿನ್ ಕಡ್ಡಿ ಸ್ಫೋಟದಿಂದ ಮನೆಯಲ್ಲಿದ್ದ ಲಕ್ಷ್ಮೀಕಾಂತ ಅವರ ಪತ್ನಿ ಸುವರ್ಣಮ್ಮ ಎಂಬುವರ ತಲೆಗೆ ಸೀಟಿನ ಚೂರುಗಳು ಅಪ್ಪಳಿಸಿರುವ ಪರಿಣಾಮ ಈಕೆ ತೀವ್ರವಾಗಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಳ್ಳಿಪಾಳ್ಯದ ಬಳಿ ಶಾಲೆಯೊಂದರ ಕಾಂಪೌಂಡ್ ಅಡಿಪಾಯ ತೆಗೆಯಲು ಲಕ್ಷ್ಮೀಕಾಂತ್ ಒಪ್ಪಂದ ಮಾಡಿಕೊಂಡಿದ್ದು, ಪಾಯ ತೆಗೆಯುವಾಗ ಕಲ್ಲುಬಂಡೆ ಸಿಕ್ಕಿವೆ. ಈ ಬಂಡೆಯನ್ನು ಸಿಡಿಸಲೆಂದು ಜಿಲೆಟಿನ್ ಕಡ್ಡಿ ಬಳಸಿರುತ್ತಾನೆ. ಉಳಿದ ಜಿಲಿಟಿನ್ ಕಡ್ಡಿಗಳನ್ನು ಮನೆಗೆ ಕೊಂಡೊಯ್ದು ಇಟ್ಟಿದ್ದನೆನ್ನಲಾಗಿದೆ. …
ತುಮಕೂರು: ಇತ್ತೀಚಗೆ ನಡೆದ ಗ್ರಾಮಪಂಚಾಯಿತಿ ಚುನಾವಣೆ ಮತ ಎಣಿಕೆ ನಡೆದ ಸರಕಾರಿ ಸಮುದಾಯ ಪಾಲಿಟ್ನಕಿಕ್ ಕಾಲೇಜು, ಚುನಾವಣಾ ಮತ ಎಣಿಕೆ ಸಿಬ್ಬಂದಿ ಮತ್ತು ಅಧಿಕಾರಿಗಳಿಂದ ಸಂಪೂರ್ಣವಾಗಿ ಹಾಳಾಗಿದ್ದು, ಮಕ್ಕಳ ಹಿತದೃಷ್ಟಿಯಿಂದ ತಕ್ಷಣವೇ ಜಿಲ್ಲಾಡಳಿತ ದುರಸ್ತಿ ಮಾಡಿಸಿಕೊಡುವಂತೆ ವಿಧಾನಪರಿಷತ್ ಸದಸ್ಯ ಚಿದಾನಂದ ಎಂ ಗೌಡ ಒತ್ತಾಯಿಸಿದ್ದಾರೆ. ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನ ಮಕ್ಕಳು, ಪೋಷಕರ ದೂರಿನ ಮೇರೆಗೆ ಇಂದು ಕಾಲೇಜಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಚುನಾವಣೆ ಸಿಬ್ಬಂದಿ ತಮ್ಮ ಅನುಕೂಲಕ್ಕೆ ತಕ್ಕಂತೆ ವಿದ್ಯುತ್ ಸಂಪರ್ಕ,ಇಂಟರ್‍ನೆಟ್ ಸಂಪರ್ಕ ಪಡೆಯಲು ಇಡೀ ಕಾಲೇಜಿನ ವಿದ್ಯುತ್ ಸಂಪರ್ಕ ಜಾಲಕ್ಕೆ ಧಕ್ಕೆ ತಂದಿದ್ದಾರೆ. ಅಲ್ಲಲ್ಲಿ ವಿದ್ಯುತ್ ತಂತಿಗಳು ನೇತಾಡುತಿದ್ದ, ಯಾವ ಕ್ಷಣದಲ್ಲಾದರೂ ಅಪಾಯ ಸಂಭವಿಸುವ ಸಾಧ್ಯತೆ ಇದೆ. ಅಲ್ಲದೆ ಮತ ಪೆಟ್ಟಿಗೆ ದಾಸ್ತಾನು ಇರಿಸಿದ್ದ ಕೊಠಡಿಯ ಕಿಟಿಕಿಗಳಿಗೆ ಅಳವಡಿಸಿದ್ದ ಪ್ಲೇವುಡ್ ಶೀಟ್‍ಗಳನ್ನು ತೆಗೆದಿಲ್ಲ.ಇದರಿಂದ ಇಡೀ ಕೊಠಡಿಯೇ ಕಗ್ಗತ್ತಲಂತೆ ಕಾಣುತ್ತಿದೆ.ಅಲ್ಲದೆ ಮತ ಎಣಿಕೆಗೆ ಅಗತ್ಯವಿರುವ ಕೊಠಡಿ ಸಿದ್ದಪಡಿಸಿಕೊಳ್ಳಲು,ಆ ಕೊಠಡಿಗಳಲ್ಲಿದ್ದ…
ಹುಳಿಯಾರು : ಬುಕ್ಕಾಪಟ್ಟಣ ಅರಣ್ಯ ವಲಯ ವ್ಯಾಪ್ತಿಯ ಹುಳಿಯಾರು ಹೋಬಳಿ ಯಳನಾಡು ಸಮೀಪದ ಕಾಚನಕಟ್ಟೆ ಗಂಗಮ್ಮನ ಕೆರೆ ಬಳಿ ಅರಣ್ಯ ಇಲಾಖೆಯವರು ಇಟ್ಟಿದ್ದ ಬೋನಿಗೆ ಭಾನುವಾರ ಚಿರತೆಯೊಂದು ಸೆರೆಯಾಗಿದೆ. ಈ ಚಿರತೆ ಇದೇ ಸ್ಥಳದಲ್ಲಿ ಸೆರೆಯಾದ 3 ನೇ ಚಿರತೆಯಾಗಿದೆ. ಕಾಚನಕಟ್ಟೆಯಲ್ಲಿ ಚಿರತೆಯ ಕಾಟ ಹೆಚ್ಚಾಗಿದ್ದು ನಾಯಿ, ಕುರಿ ಸೇರಿದಂತೆ ಸಾಕು ಪ್ರಾಣಿಗಳನ್ನು ಹಿಡಿದು ತಿನ್ನುತ್ತಿದೆ. ಇದರಿಂದ ಇಲ್ಲಿನ ನಿವಾಸಿಗಳು ಹಾಗೂ ದಾರಿಹೋಕರಿಗೆ ಆತಂಕ ಹಾಗೂ ಭಯದ ವಾತಾವರಣವಿದೆ. ಹಾಗಾಗಿ ಈ ವನ್ಯ ಪ್ರಾಣಿಯು ದಿನ ನಿತ್ಯ ಓಡಾಡುವ ಜಾಗದಲ್ಲಿ ಪಂಜರ (ಬೋನು) ವನ್ನಿಟ್ಟು ಸೆರೆ ಹಿಡಿಯಲು ಕ್ರಮವಹಿಸುವಂತೆ ಗ್ರಾಮಸ್ಥರ ಮನವಿ ಮಾಡಿದ್ದರು. ಗ್ರಾಮಸ್ಥರ ಮನವಿಗೆ ಸ್ಪಂಧಿಸಿದ ಅರಣ್ಯ ಇಲಾಖೆಯವರು ಕಳೆದ 3 ತಿಂಗಳ ಹಿಂದೆ ಪಂಜರವನ್ನಿಟ್ಟು ಒಂದು ಚಿರತೆ ಸೆರೆ ಹಿಡಿದಿದ್ದರು. ನಂತರ ಮತ್ತೊಂದು ಚಿರತೆ ಗ್ರಾಮಸ್ಥರಿಗೆ ಕಾಣಿಸಿಕೊಂಡು ಆತಂಕ ಸೃಷ್ಠಿಸಿತ್ತು. ಆಗಲೂ ಪಂಜರವನ್ನಿಟ್ಟು ಚಿರತೆ ಸೆರೆ ಹಿಡಿಯಲಾಗಿತ್ತು. ಈ ಸಂದರ್ಭದಲ್ಲಿ…
ತುಮಕೂರು : ನಗರದ ಅಭಿವೃದ್ದಿಗೆ ಸಂಬಂಧಿಸಿದಂತೆ ನಡೆಯುತ್ತಿರುವ ಸ್ಮಾರ್ಟಸಿಟಿ ಯೋಜನೆಯ ಎಲ್ಲಾ ಕಾಮಗಾರಿಗಳು 2022ರ ಮಾರ್ಚ್ ಒಳಗೆ ಪೂರ್ಣಗೊಳ್ಳಬೇಕಾಗಿದ್ದು, ತ್ವರಿತವಾಗಿ ಕಾಮಗಾರಿ ನಡೆಯುವ ವೇಳೆ ಸಣ್ಣಪುಟ್ಟ ತೊಂದರೆಗಳಾದರೆ ಸಾರ್ವಜನಿಕರು ಕಾರ್ಮಿಕರೊಂದಿಗೆ ವ್ಯಾಜ್ಯಕ್ಕೆ ನಿಲ್ಲದೆ ಸಹಕರಿಸುವಂತೆ ತುಮಕೂರು ನಗರ ಶಾಸಕ ಜಿ.ಬಿ.ಜೋತಿಗಣೇಶ್ ತಿಳಿಸಿದ್ದಾರೆ. ನಗರದ 26ನೇ ವಾರ್ಡಿನ ಸಿಎಂಸಿ ಕಂಪ್ಯೂಟರ್ ಕಲಿಕಾ ಕೇಂದ್ರದಲ್ಲಿ ನಾಗರಿಕರ ಹಿತರಕ್ಷಣಾ ಸಮಿತಿಯ ಸದಸ್ಯರು ಅಹವಾಲು ಸ್ವೀಕರಿಸಿ ಮಾತನಾಡುತಿದ್ದ ಅವರು,ಸ್ಮಾರ್ಟ್‍ಸಿಟಿ ಯೋಜನೆ ನಾನು ಶಾಸಕನಾಗುವ ಮೊದಲೇ ಆರಂಭವಾಗಿದ್ದ ಯೋಜನೆ,ಆದರೆ ಈ ಹಿಂದಿನವರು ಕೇವಲ 7-8 ವಾರ್ಡುಗಳಿಗೆ ಸಿಮೀತ ಮಾಡಿದ್ದ ಅಭಿವೃದ್ದಿ ಕಾಮಗಾರಿಗಳನ್ನು ಕೆಲ ಬದಲಾವಣೆಗಳೊಂದಿಗೆ ಇಡೀ ನಗರಕ್ಕೆ ದೊರೆಯುವಂತೆ ಮಾಡಿದೆ.ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ.ಇದರ ಫಲವಾಗಿ ಸರಕಾರಿ ಜೂನಿಯರ್ ಕಾಲೇಜು, ಎಂಪ್ರೆಸ್ ಮಹಿಳಾ ಪದವಿಪೂರ್ವ ಕಾಲೇಜು, ಶಿರಾಗೇಟ್‍ನ ಸರಕಾರಿ ಶಾಲೆ,ಹಳೆಯ ಮಿಡ್ಲಸ್ಕೂಲ್ ಈ ನಾಲ್ಕು ಶಿಕ್ಷಣ ಸಂಸ್ಥೆಗಳಲ್ಲಿ ಕನಿಷ್ಠ ತಲಾ 5 ಸಾವಿರ ಮಕ್ಕಳು…
ತುಮಕೂರು : ದಿನನಿತ್ಯ ನ್ಯಾಯಾಲಯ ಕಚೇರಿ, ಕಲಾಪದಲ್ಲಿಯೇ ಕಾಲ ಕಳೆಯುತ್ತಿದ್ದ ನ್ಯಾಯಾಧೀಶರು, ವಕೀಲರುಗಳು ಇಂದು ನ್ಯಾಯಾಲಯದ ಆವರಣವನ್ನು ಸ್ವಚ್ಛಗೊಳಿಸಿದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಜಿಲ್ಲಾ ವಕೀಲರ ಸಂಘ(ರಿ)ಗಳ ಸಹಯೋಗದಲ್ಲಿ ರಾಷ್ಟ್ರೀಯ ಸ್ವಚ್ಛತಾ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಜಿ.ಎಸ್.ಸಂಗ್ರೇಶಿ ಅವರು ನ್ಯಾಯಾಲಯ ಆವರಣವನ್ನು ಸ್ವಚ್ಛಗೊಳಿಸುವ ಮೂಲಕ ಅರಿವು ಮೂಡಿಸಿದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರಾಘವೆಂದ್ರ ಶೆಟ್ಟಿಗಾರ್ ಅವರು ಮಾತನಾಡಿ, ಹುತ್ಮಾತರ ದಿನಾಚರಣೆ ಅಂಗವಾಗಿ “ನಮ್ಮ ನ್ಯಾಯಾಲಯ-ಸ್ವಚ್ಛ ನ್ಯಾಯಾಲಯ” ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಪ್ರತಿಯೊಬ್ಬ ವ್ಯಕ್ತಿಯೂ ತಾನು ವಾಸಿಸುವ ಮನೆ, ಕೆಲಸ ಮಾಡುವ ಸ್ಥಳದಲ್ಲಿ ಸ್ವಚ್ಚತೆಯನ್ನು ಕಾಪಾಡಿಕೊಳ್ಳಬೇಕು. ಸ್ವಚ್ಛತೆ ಕಾಪಾಡಿದರೆ ಪ್ರತಿಯೊಬ್ಬರ ಆರೋಗ್ಯ ಚೆನ್ನಾಗಿರುತ್ತದೆ. ಆದ್ದರಿಂದ ಸಾರ್ವಜನಿಕರು ಮನೆಯ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದು ಅವರು ಕಿವಿಮಾತು ಹೇಳಿದರು. …
ತುಮಕೂರು : ವಿವಿಧ ಯೋಜನೆಗಳಡಿ ನಿರ್ಮಾಣವಾಗುತ್ತಿರುವ ಅಂಗನವಾಡಿ ಕಟ್ಟಡಗಳ ನಿರ್ಮಾಣ ಕಾಮಗಾರಿಗಳನ್ನು ಮಾರ್ಚ್-2021ರ ಅಂತ್ಯದೊಳಗಾಗಿ ಗುಣಮಟ್ಟದೊಂದಿಗೆ ಪೂರ್ಣಗೊಳಿಸಿ, ಮಕ್ಕಳ ಬಳಕೆಗೆ ಇಲಾಖೆಗೆ ಹಸ್ತಾಂತರ ಮಾಡಲು ನಿರ್ಮಾಣ ಏಜೆನ್ಸಿಗಳಾದ ನಿರ್ಮಿತಿ ಕೇಂದ್ರ, ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ ಸೇರಿದಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಕೆ. ರಾಕೇಶ್‍ಕುಮಾರ್ ಕಟ್ಟುನಿಟ್ಟಿನ ಸೂಚನೆ ನೀಡಿದರು. ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಅನುಷ್ಠಾನವಾಗುತ್ತಿರುವ ಐ.ಸಿ.ಡಿ.ಎಸ್ ಕಾರ್ಯಕ್ರಮ ಸೇರಿದಂತೆ ವಿವಿಧ ಯೋಜನೆ/ಕಾರ್ಯಕ್ರಮಗಳ 2020-21ನೇ ಸಾಲಿನ 3ನೇ ತ್ರೈಮಾಸಿಕ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 2020-21ನೇ ಸಾಲಿನಲ್ಲಿ ಜಿಲ್ಲೆಯ ಅಂಗನವಾಡಿ ಕಟ್ಟಡಗಳ ನಿರ್ವಹಣೆಗೆ ಬಿಡುಗಡೆಯಾಗಿರುವ 170 ಲಕ್ಷ ರೂ ಅನುದಾನವನ್ನು ಸಮರ್ಪಕವಾಗಿ ಸದ್ಬಳಕೆ ಮಾಡಿಕೊಳ್ಳಬೇಕು. ಉತ್ತಮ ಗುಣಮಟ್ಟದ ಸಾಮಾಗ್ರಿಗಳನ್ನು ಬಳಸಿಕೊಂಡು ಅಂಗನವಾಡಿ ಕಟ್ಟಡ ನಿರ್ಮಾಣ ಮಾಡಬೇಕು. ನರೇಗಾ ಯೋಜನೆಯಡಿ ಶಿರಾ ಮತ್ತು ತುಮಕೂರು ಗ್ರಾಮಾಂತರದಲ್ಲಿ ಹೆಚ್ಚಿನ ಸಂಖ್ಯೆಯ…
ಕೊರಟಗೆರೆ : ರೈತರ ಅಡಿಕೆ ತೋಟಕ್ಕೆ ರಾತ್ರೋರಾತ್ರಿ ಲಗ್ಗೆಯಿಟ್ಟು 2ಕ್ವಿಂಟಲ್‍ಗೂ ಅಧಿಕ ಅಡಿಕೆ ಗೊನೆಗಳನ್ನೇ ಕಳ್ಳತನ ಮಾಡಿದ್ದ 6ಜನ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಕೊರಟಗೆರೆ ಸಿಪಿಐ ನಧಾಪ್ ಮತ್ತು ಪಿಎಸೈ ಮುತ್ತುರಾಜು ನೇತೃತ್ವದ ಪೊಲೀಸರ ತಂಡ ಶುಕ್ರವಾರ ಯಶಸ್ವಿ ಆಗಿದ್ದಾರೆ. ಕೊರಟಗೆರೆ ತಾಲೂಕು ಚನ್ನರಾಯನದುರ್ಗ ಹೋಬಳಿ ಜೆಟ್ಟಿಅಗ್ರಹಾರ ಗ್ರಾಪಂ ವ್ಯಾಪ್ತಿಯ ಥರಟಿ ಗ್ರಾಮದ ರೈತ ಗೋವಿಂದಪ್ಪನ ಅಡಿಕೆ ತೋಟದಲ್ಲಿ ಡಿ.22ರಂದು ಮಧ್ಯರಾತ್ರಿ 2ಕ್ವಿಂಟಲ್‍ನಷ್ಟು ಅಡಿಕೆ ಗೊನೆಗಳನ್ನು 6ಜನ ಕಳ್ಳರ ತಂಡ ಕಳ್ಳತನ ಮಾಡಿಕೊಂಡು ಪರಾರಿ ಆಗಿರುವ ಬಗ್ಗೆ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣದ ಪತ್ತೆಗೆ ತುಮಕೂರು ಎಸ್ಪಿ ಡಾ.ಕೋನವಂಶಿಕೃಷ್ಣ, ಹೆಚ್ಚುವರಿ ಎಸ್ಪಿ ಉದೇಶ್, ಮಧುಗಿರಿ ಡಿವೈಎಸ್ಪಿ ರಾಮಕೃಷ್ಣ ಮಾರ್ಗದರ್ಶನದಲ್ಲಿ ಕೊರಟಗೆರೆ ಸಿಪಿಐ ನಧಾಪ್, ಪಿಎಸೈ ಮುತ್ತುರಾಜು ನೇತೃತ್ವದ ವಿಶೇಷ ತಂಡವು 6ಜನ ಆರೋಪಿಗಳನ್ನು ಬೈರೇನಹಳ್ಳಿ ಮಧ್ಯದ ಅಂಗಡಿಯಲ್ಲಿ ವಶಕ್ಕೆ ಪಡೆದಿದ್ದಾರೆ. ಚಿಕ್ಕನಹಳ್ಳಿಯ ರವಿಕುಮಾರ, ವೆಂಕಟೇಶ್, ನಾರಾಯಣಸ್ವಾಮಿ,…
ಕೊರಟಗೆರೆ: ವಾಹನ ಚಾಲಕರು ಕಡ್ಡಾಯವಾಗಿ ರಸ್ತೆ ನಿಯಮ ಪಾಲಿಸುವುದರ ಮೂಲಕ ರಸ್ತೆ ಅಪಘಾತವನ್ನು ತಡೆಗಟ್ಟಿ ದೇವರು ಕೊಟ್ಟಿರುವ ಅಮೂಲ್ಯವಾದ ಜೀವ ರಕ್ಷಿಸಿಕೊಳ್ಳಿ ಎಂದು ಎ.ಎಸ್.ಐ ಯೋಗೇಶ್ ತಿಳಿಸಿದರು. ಪಟ್ಟಣದ ಎಸ್.ಎಸ್.ಆರ್ ಸರ್ಕಲ್ ನ ಬಸ್ಸ್ ನಿಲ್ದಾಣದಲ್ಲಿ ಗುರುವಾರ ನೂರಾರು ಆಟೋ ಚಾಲಕರು, ದ್ವಿಚಕ್ರ ವಾಹನ ಸವಾರು ಮತ್ತು ಶಾಲಾ-ಕಾಲೇಜು ವಿದ್ಯಾರ್ಥಿಗಳ ಒಂದೆಡೆ ಸೇರಿಸಿ ರಸ್ತೆ ಸುರಕ್ಷಾ ಸಪ್ತಾಹದ ಬಗ್ಗೆ ಅರಿವು ಮೂಡಿಸಿ ಮಾತನಾಡಿದರು. ವಾಹನ ಚಾಲಕ ನಮ್ಮ ಪಾಲಿನ ದೇವರು. ಶ್ರೀಕೃಷ್ಣ ರಥವನ್ನು ಮುನ್ನಡಿಸಿದಂತೆ ತಾವು ವಾಹನವನ್ನು ಚಲಾಯಿಸುತ್ತೀರಿ. ಕಡ್ಡಾಯವಾಗಿ ವಾಹನ ಚಾಲನಾ ಪತ್ರವನ್ನು ಪಡೆದುಕೊಂಡು ಚಲಾಯಿ ಸಬೇಕು. ಚಾಲನಾ ಪರವಾನಿಗೆ ಇಲ್ಲದೆ ಹಾಗೂ ಅಪ್ರಾಪ್ತ ಬಾಲಕರು ವಾಹನ ಚಾಲನೆ ಮಾಡುವುದು ಕಾನೂ ನು ಅಪರಾಧ ವಾಗಿದೆ. ವಾಹನಗಳಿಗೆ ಖಡ್ಡಾಯವಾಗಿ ವಿಮಾಪಾಲಿಸಿ ತಮ್ಮ ಕುಟುಂಬಗಳನ್ನು ರಕ್ಷಿಸಿ ಕೊಳ್ಳಲು ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು ಎಂದು ಹೇಳಿದರು. ಅನಿರೀಕ್ಷಿತವಾಗಿ…











