Author: News Desk Benkiyabale

ತುಮಕೂರು :        ಜಾಗತಿಕ ಮಟ್ಟಕ್ಕೆ ಸರಿಸಮಾನವಾದ ರೀತಿಯಲ್ಲಿ ತುಮಕೂರಿನ ಸಿದ್ದಾರ್ಥ ವೈದ್ಯಕೀಯ ಆಸ್ಪತ್ರೆ ಮತ್ತು ಕಾಲೇಜಿನ ‘ಸಿದ್ಧಾರ್ಥ ಅಡ್ವಾನ್ಸ್ಡ್ ಹಾರ್ಟ್‍ಸೆಂಟರ್’ನಲ್ಲಿ ಯಶಸ್ವಿಯಾಗಿ ಓಪನ್ ಹಾರ್ಟ್ ಸರ್ಜರಿಯನ್ನು ಉಚಿತವಾಗಿ ನಡೆಸಲಾಗಿದೆ. ಇದು ಇತಿಹಾಸದಲ್ಲಿ ಹೊಸ ಅಧ್ಯಾಯವನ್ನ ಸೃಷ್ಟಿಸಿದೆ ಎಂದು ಶ್ರೀ ಸಿದ್ದಾರ್ಥ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಹಾಗೂ ಮಾಜಿ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.        ಶ್ರೀ ಸಿದ್ದಾರ್ಥ ವೈದ್ಯಕೀಯ ಆಸ್ಪತ್ರ ಮತ್ತು ಕಾಲೇಜಿನಲ್ಲಿಂದು (ಜನವರಿ 19) ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ತುಮಕೂರಿನಂತಹ ಪ್ರದೇಶದಲ್ಲಿ ಇದೇ ಮೊದಲ ಬಾರಿಗೆ ಓಪನ್ ಹಾರ್ಟ್ ಸರ್ಜರಿಯನ್ನು ನಡೆಸಿ ಯಶಸ್ವಿಯಾಗಿರುವುದು ದಾಖಲಾರ್ಹ. ಶಸ್ತ್ರಚಿಕಿತ್ಸೆಯಾದ ಅರ್ಧ ತಾಸಿನಲ್ಲೇ ರೋಗಿ ಚೇತರಿಸಿಕೊಂಡು, ವೈದ್ಯರೊಂದಿಗೆ ಮಾತನಾಡಿದ್ದು, ಗಮನಾರ್ಹ ಸಂಗತಿ ಎಂದರು.       ಸಿದ್ದಾರ್ಥ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಯುಜಿಸಿಯಿಂದ ‘ಎ’ ಗ್ರೇಡ್ ಮಾನ್ಯತೆ ಪಡೆದಿದ್ದು ಸ್ವಾಯತ್ತ ವಿಶ್ವವಿದ್ಯಾಲಯವಾಗಿ ಪರಿವರ್ತನೆಗೊಂಡಿದೆ. ತಂದೆ ಶಿಕ್ಷಣ ಭೀಷ್ಮ ಡಾ.ಎಚ್.ಎಂ ಗಂಗಾಧರಯ್ಯನವರ ಆಶಯ…

Read More

ತುರುವೇಕೆರೆ:       ತಾಲ್ಲೂಕಿನ ಬಾಣಸಂದ್ರ ಗ್ರಾಮದ ಮೂಡಲಗಿರಿಯಪ್ಪ ಎಂಬುವರ ಜಮೀನಿನಲ್ಲಿ ಬೆಳೆದಿದ್ದ 125 ಅಡಿಕೆ ಸಸಿಗಳನ್ನು ವೈಯಕ್ತಿಕ ದ್ವೇಷದ ಹಿನ್ನಲೆಯಲ್ಲಿ ಕತ್ತರಿಸಿ ಹಾಕಿರುವ ಅಮಾನವೀಯ ಘಟನೆ ನೆಡೆದಿದೆ.        ಘಟನೆಯ ಬಗ್ಗೆ ವಿವರಿಸಿದ ಮೂಡಲಗಿರಿಯಪ್ಪನವರ ಮಕ್ಕಳಾದ ಶಿವಕುಮಾರ್ ಹಾಗೂ ಮಂಜುನಾಥ್ ನಮ್ಮ ತಂದೆ ನಮ್ಮ ಚಿಕ್ಕಪ್ಪಂದಿರ ನೆರವಿನೊಂದಿಗೆ ಪಿತ್ರಾರ್ಜಿ ಆಸ್ತಿಯಲ್ಲಿ ಅಡಿಕೆ ಸಸಿಗಳನ್ನು ಬೆಳೆದಿದ್ದರು. ನನ್ನ ತಂಗಿ ಪದ್ಮಾವತಿ ಗಂಡನ ಕುಮ್ಮಕ್ಕಿನಿಂದ ಅಡಿಕೆ ಸಸಿಗಳನ್ನು ಕತ್ತರಿಸಿ ಹಾಕುವ ಮೂಲಕ ವೈಯಕ್ತಿಕ ದ್ವೇಷ ಸಾಧಿಸಲು ಮುಂದಾಗಿದ್ದಾರೆಂದು ಆರೋಪಿಸಿದ್ದಾರೆ.       ಘಟನೆ ಸ್ಥಳಕ್ಕೆ ತಂಡೋಪ ತಂಡವಾಗಿ ಆಗಮಿಸುತ್ತಿರುವ ರೈತಾಪಿಗಳು ಅಡಿಕೆ ಸಸಿಗಳನ್ನು ಕತ್ತರಿಸಿ ಹಾಕಿರುವ ಕ್ರಮವನ್ನು ಖಂಡಿಸುತ್ತಿದ್ದಾರೆ.ಈ ಕುರಿತು ದಂಡಿನಶಿವರ ಪೋಲೀಸರಿಗೆ ದೂರು ನೀಡುವುದಾಗಿ ಮೂಡಲಗಿರಿಯಪ್ಪನವರ ಮಕ್ಕಳಾದ ಮಂಜುನಾಥ್ ಹಾಗೂ ಶಿವಕುಮಾರ್ ತಿಳಿಸಿದ್ದಾರೆ,

Read More

ತುಮಕೂರು :      ಎಟಿಎಂ ಕೇಂದ್ರವೊಂದಕ್ಕೆ ನುಗ್ಗಿರುವ ಕಳ್ಳರು ಹಣದ ಸಮೇತ ಎಟಿಎಂ ಯಂತ್ರವನ್ನು ಕಳವು ಮಾಡಿಕೊಂಡು ಪರಾರಿಯಾಗಿರುವ ಘಟನೆ ಇಲ್ಲಿನ ಗ್ರಾಮಾಂತರ ಪೊಲೀಸ್ ಠಾಣೆ ಸರಹದ್ದಿನ ಹೆಗ್ಗೆರೆಯಲ್ಲಿ ನಡೆದಿದೆ.       ನಗರದ ಹೊರವಲಯದ ಹೆಗ್ಗೆರೆಯಲ್ಲಿರುವ ಇಂಡಿಯನ್ ಓವರ್‍ಸಿಸ್ ಬ್ಯಾಂಕ್‍ನ ಎಟಿಎಂ ಕೇಂದ್ರದಲ್ಲಿ ಈ ಕಳ್ಳತನ ನಡೆದಿದೆ. ಮಧ್ಯರಾತ್ರಿ ನಾಲ್ಕು ಚಕ್ರದ ವಾಹನದ ಬಂದಿರುವ ಕಳ್ಳರು ಎಟಿಎಂ ಕೇಂದ್ರಕ್ಕೆ ನುಗ್ಗಿ ಚಾಣಾಕ್ಷತನದಿಂದ ಹಣದ ಸಮೇತವೇ ಎಟಿಎಂ ಯಂತ್ರವನ್ನು ಕದ್ದೊಯ್ದಿದ್ದಾರೆ.       ಈ ಬ್ಯಾಂಕ್ ಬಳಿಯೇ ಎಟಿಎಂ ಕೇಂದ್ರ ಹಾಗೂ ಜಿಮ್ ಕೇಂದ್ರ ಇದೆ. ಇಂದು ಮುಂಜಾನೆ ಜಿಮ್ ಕೇಂದ್ರಕ್ಕೆ ಬಂದ ಸ್ಥಳೀಯರು ಎಟಿಎಂ ಕೇಂದ್ರದಲ್ಲಿ ಎಟಿಎಂ ಯಂತ್ರ ಕಳುವಾಗಿರುವುದನ್ನು ಗಮನಿಸಿ ಪೊಲೀಸರಿಗೆ ದೂರವಾಣಿ ಕರೆ ಮಾಡಿ ಸುದ್ದಿ ಮುಟ್ಟಿಸಿದ್ದಾರೆ.       ಘಟನೆಯ ಸುದ್ದಿ ತಿಳಿದ ಕೂಡಲೇ ಗ್ರಾಮಾಂತರ ಠಾಣೆಯ ಸಬ್‍ಇನ್ಸ್‍ಪೆಕ್ಟರ್ ಲಕ್ಷ್ಮಯ್ಯ ಮತ್ತು ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಎಟಿಎಂ ಕೇಂದ್ರದಲ್ಲಿ ಅಳವಡಿಸಿದ್ದ…

Read More

ತುಮಕೂರು :        ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಶ್ರೀಮತಿ ಲತಾ ರವಿಕುಮಾರ್‍ರವರ ವಿರುದ್ಧ ಸೋಮವಾರ ನಡೆದ ಅವಿಶ್ವಾಸ ನಿರ್ಣಯ ಸಭೆಯನ್ನು ಕೋರಂ ಕೊರತೆಯಿಂದ ಜನವರಿ 25ಕ್ಕೆ ಮುಂದೂಡಲಾಗಿದೆ.       ಜಿಲ್ಲಾ ಪಂಚಾಯಿತಿಯಲ್ಲಿ 57 ಸದಸ್ಯರಿದ್ದು, ಕಾಂಗ್ರೇಸ್ 23,ಬಿಜೆಪಿ 19,ಜೆಡಿಎಸ್ 14 ಮತ್ತು ಪಕ್ಷೇತರ ಓರ್ವ ಸದಸ್ಯರಿದ್ದು, ಕೇವಲ ಎರಡು ಜನರು ಮಾತ್ರ ಅವಿಶ್ವಾಸ ನಿರ್ಣಯ ಸಭೆಗೆ ಹಾಜರಾಗಿದ್ದು,ಬಹುಮತಕ್ಕೆ ಅಗತ್ಯವಿದ್ದ 29 ಸದಸ್ಯರು ಸಭೆಗೆ ಹಾಜರಾಗದ ಹಿನ್ನೆಲೆಯಲ್ಲಿ ಸಭೆಯನ್ನು ಮುಂದೂಡಿ, ಪ್ರಾದೇಶಿಕ ಆಯುಕ್ತರು ಆದೇಶ ಹೊರಡಿಸಿದ್ದಾರೆ.        ಜನವರಿ 18ರ ಬೆಳಗ್ಗೆ 10 ಗಂಟೆಗೆ ಸಭೆ ನಿಗಧಿಯಾಗಿದ್ದು, ಸಭೆ ಆರಂಭವಾಗಿ ಅರ್ಧಗಂಟೆ ಕಳೆದರೂ ಹೊಯ್ಸಳಕಟ್ಟೆ ಕ್ಷೇತ್ರದ ಸದಸ್ಯ ಮಹಾಲಿಂಗಯ್ಯ ಮತ್ತು ಇನ್ನೋರ್ವ ಸದಸ್ಯರನ್ನು ಹೊರತು ಪಡಿಸಿ, ಉಳಿದ ಸದಸ್ಯರು ಹಾಜರಾಗಿರಲಿಲ್ಲ. ಹಾಗಾಗಿ ಜನವರಿ 25ಕ್ಕೆ ಸಭೆಯನ್ನು ನಿಗಧಿಪಡಿಸಿ, ಸಭೆಯನ್ನು ಮುಂದೂಡಲಾಯಿತು.ಅ        ವಿಶ್ವಾಸ ನಿರ್ಣಯ ಸಭೆಯನ್ನು ಮುಂ ದೂಡಿದ ನಂತರ ಜಿ.ಪಂ.ಅಧ್ಯಕ್ಷ…

Read More

ಕೊರಟಗೆರೆ:       ತಾಲ್ಲೂಕಿನ 24 ಗ್ರಾಮ ಪಂಚಾಯತಿಯ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಮೀಸಲಾತಿ ಪಟ್ಟಿ ಹೊರಬಿದ್ದಿದ್ದು, ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆಗೆ ಕಸರತ್ತು ಮತ್ತು ಪ್ರವಾಸ ಚುರುಕುಗೊಂಡಿದೆ.       ಪಟ್ಟಣದ ಮಾರುತಿಕಲ್ಯಾಣ ಮಂಟಪದಲ್ಲಿ ತುಮಕೂರು ಜಿಲ್ಲಾಧಿಕಾರಿ ಡಾ.ರಾಕೇಶ್‍ಕುಮಾರ್ ನೇತೃತ್ವದಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಗ್ರಾ.ಪಂ ನ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಆಯ್ಕೆ ಕ್ರಮವಾಗಿ ಈ ರೀತಿ ಇದ್ದು ಬೂದಗವಿ ಹಿಂದುಳಿದ(ಅ) ಮಹಿಳೆ, ಸಾಮಾನ್ಯ, ಪಾತಗಾನಹಳ್ಳಿ ಹಿಂದುಳಿದ(ಅ) ಮಹಿಳೆ, ಪರಿಶಿಷ್ಟ ಜಾತಿ, ತೋವಿನಕೆರೆ ಹಿಂದುಳಿದ(ಬ), ಪರಿಶಿಷ್ಟ ಜಾತಿ ಮಹಿಳೆ, ಕುರಂಕೋಟೆ ಸಾಮಾನ್ಯ ಸಾಮಾನ್ಯ ಮಹಿಳೆ, ಬುಕ್ಕಪಟ್ಟಣ ಸಾಮಾನ್ಯ, ಸಾಮಾನ್ಯ ಮಹಿಳೆ, ವಡ್ಡಗೆರೆ ಸಾಮಾನ್ಯ, ಪರಿಶಿಷ್ಟ ಪಂಗಡ ಮಹಿಳೆ, ಹುಲಿಕುಂಟೆ ಸಾಮಾನ್ಯ, ಪರಿಶಿಷ್ಟ ಪಂಗಡ, ಅರಸಾಪುರ ಸಾಮನ್ಯ ಪರಿಶಿಷ್ಟ ಜಾತಿ ಮಹಿಳೆ, ತೀತಾ ಸಾಮಾನ್ಯ, ಪರಿಶಿಷ್ಟ ಪಂಗಡ ಮಹಿಳೆ, ವಜ್ಜನಕುರಿಕೆ ಸಾಮಾನ್ಯ, ಸಾಮಾನ್ಯ ಮಹಿಳೆ, ಜೆಟ್ಟಿ ಅಗ್ರಹಾರ ಸಾಮಾನ್ಯ ಮಹಿಳೆ, ಪರಿಶಿಷ್ಟ ಜಾತಿ, ತುಂಬಾಡಿ ಸಾಮಾನ್ಯ ಮಹಿಳೆ, ಸಾಮನ್ಯ,…

Read More

  ಕೊರಟಗೆರೆ :         ಮನುಷ್ಯನ ಮುಖ ಮತ್ತು ಗೂಬೆ ಆಕಾರದ ಕಣ್ಣಿನ ಮೇಕೆ ಮರಿಯು ರೈತನ ದೊಡ್ಡಿಯಲ್ಲಿ ಜನನ ಆಗಿರುವ ಘಟನೆ ಶುಕ್ರವಾರ ಸಂಜೆ ಜರುಗಿದೆ.       ಕೊರಟಗೆರೆ ತಾಲೂಕಿನ ಕೋಳಾಲ ಹೋಬಳಿ ಪಾತಗಾನಗಳ್ಳಿ ಗ್ರಾಪಂ ವ್ಯಾಪ್ತಿಯ ವೆಂಗಳಮ್ಮನಹಳ್ಳಿಯ ರೈತ ಕುಮಾರ್ ಎಂಬಾತನ ಮನೆಯಲ್ಲಿ ಜನಿಸಿದೆ.       ಮೇಕೆ ಮರಿಗೆ ನಾಲ್ಕು ಕಾಲುಗಳಿವೆ. ಎರಡು ಕಿವಿಗಳಿವೆ. ಮನುಷ್ಯನ ರೂಪದ ತಲೆ ಇದೆ‌ ಉಳಿದಂತೆ ನಾಲಿಗೆ ಬಾಯಿಯಿಂದ ಹೊರಗಡೆ ಚಾಚಿದೆ.       ಗೂಬೆ ಕಣ್ಣಿನಂತೆ ಕಾಣುತ್ತೀರುವ ಮಿಂಚಿನ ನೋಟದ ಮೇಕೆಯ ಕಣ್ಣು ರೈತಾಪಿವರ್ಗಕ್ಕೆ ಸವಾಲಾಗಿ ಪ್ರಕೃತಿಗೆ ಸವಾಲಾಗಿರುವ ಪರಿಣಾಮ ನೋಡುಗರ ಗಮನ ಸೆಳೆದಿದೆ.       ರೈತ ಕುಮಾರ್ ಕಳೆದ ವಾರದ ಹಿಂದೆ 14 ಸಾವಿರ ವೆಚ್ಚದ ಮೇಕೆ ಖರೀದಿ ಮಾಡಿದ್ದಾನೆ. ಶುಕ್ರವಾರ ಮಧ್ಯಾಹ್ನ ವಿಚಿತ್ರ ರೂಪದ ಮೇಕೆಯ ಜನನದಿಂದ ರೈತನಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಕೊರಟಗೆರೆ ತಾಲೂಕಿನ…

Read More

 ತುಮಕೂರು :        ಕೋವಿಡ್ -19 ನಿಗ್ರಹಕ್ಕಾಗಿ ಬಿಡುಗಡೆಗೊಂಡಿರುವ ‘ಕೋವಿಶೀಲ್ಡ್’ ಲಸಿಕಾ ವಿತರಣಾ ಅಭಿಯಾನ ದೇಶದಾದ್ಯಂತ ಇಂದಿನಿಂದ (ಜನವರಿ 16) ಪ್ರಾರಂಭಗೊಳ್ಳಲಿದ್ದು, ಜಿಲ್ಲೆಯಲ್ಲಿ ಲಸಿಕೆ ನೀಡಲು ಮಾರ್ಗಸೂಚಿ ಅನ್ವಯ ಸಕಲ ಸಿದ್ಧತೆ ಜಿಲ್ಲಾಡಳಿತ ಮಾಡಿಕೊಂಡಿದೆ.       ಇಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆವಹಿಸಿದ್ದ ಜಿಲ್ಲಾಧಿಕಾರಿ ಡಾ.ಕೆ. ರಾಕೇಶ್‍ಕುಮಾರ್ ಅವರು ಮಾತನಾಡಿ, ಜಿಲ್ಲೆಯಲ್ಲಿ ಕೋವಿಡ್ ಲಸಿಕೆಯನ್ನು ಆರೋಗ್ಯ ಇಲಾಖೆ ನೀಡಿರುವ ಸೂಚನೆಗಳನ್ನು ಅನುಸರಿಸಿ ವಿತರಣೆ ಮಾಡಬೇಕೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗೆ ಸೂಚನೆ ನೀಡಿದರು.       ಮಾನ್ಯ ಪ್ರಧಾನಮಂತ್ರಿಗಳು ಲಸಿಕಾ ವಿತರಣೆಗೆ ಚಾಲನೆ ನೀಡಿದ ಬಳಿಕ ಜಿಲ್ಲೆಯಲ್ಲಿ ಲಸಿಕಾ ವಿತರಣಾ ಪ್ರಕ್ರಿಯೆ ಆರಂಭಗೊಳ್ಳಲಿದೆ. ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತೆಯರು, ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಅರೆ ವೈದ್ಯಕೀಯ ಸಿಬ್ಬಂದಿ, ವೈದ್ಯಕೀಯ ಸಿಬ್ಬಂದಿ ಸೇರಿದಂತೆ ಮುಂಚೂಣಿಯ ಕೊರೋನಾ ಯೋಧರಿಗೆ ಲಸಿಕೆ ವಿತರಿಸಲಾಗುವುದು ಎಂದು ತಿಳಿಸಿದರು.       ಸಭೆಯಲ್ಲಿ ಮಾತನಾಡಿದ ಡಿಎಚ್‍ಒ…

Read More

  ತುಮಕೂರು :       ಶ್ರೀ ಸಿದ್ದಗಂಗಾ ಮಠದ ಆವರಣದಲ್ಲಿ ಮಾರ್ಚ್ 1 ರಿಂದ 15ರವರೆಗೆ ನಡೆಯಲಿರುವ ಕೃಷಿ ಮತ್ತು ಕೈಗಾರಿಕಾ ವಸ್ತುಪ್ರದರ್ಶನದಲ್ಲಿ ಕೋವಿಡ್ ಮಾರ್ಗಸೂಚಿಯನ್ನು ಅನುಸರಿಸಿ ವಿಶಿಷ್ಟ ರೀತಿಯಲ್ಲಿ ಇಲಾಖೆಗಳು ವಸ್ತುಪ್ರದರ್ಶನವನ್ನು ಏರ್ಪಡಿಸಬೇಕೆಂದು ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಲತಾ ರವಿಕುಮಾರ್ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಸೂಚನೆ ನೀಡಿದರು.        ಶ್ರೀ ಸಿದ್ದಗಂಗಾ ಮಠದಲ್ಲಿಂದು ಜರುಗಿದ ಪೂರ್ವಭಾವಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು ವಸ್ತುಪ್ರದರ್ಶದಲ್ಲಿ ಕೋವಿಡ್-19 ಮಾರ್ಗಸೂಚಿಗಳನ್ನು ಅನುಸರಿಸಿ ಸಾರ್ವಜನಿಕರಿಗೆ ತಮ್ಮ ಇಲಾಖಾ ಯೋಜನೆಗಳ ಬಗ್ಗೆ ಅರಿವು ಮೂಡಿಸಬೇಕು. ಹೊರ ಜಿಲ್ಲೆ ಹಾಗೂ ಗ್ರಾಮೀಣ ಪ್ರದೇಶಗಳಿಂದ ಪ್ರದರ್ಶನಕ್ಕೆ ಆಗಮಿಸುವವರಿಗೆ ಅನುಕೂಲವಾಗುವಂತೆ ಯೋಜನೆಗಳ ಮಾಹಿತಿಯನ್ನು ಕನ್ನಡದಲ್ಲಿಯೇ ಪ್ರದರ್ಶಿಸಬೇಕು. ಸ್ವಚ್ಛತೆಗೆ ಆದ್ಯತೆ ನೀಡಬೇಲ್ಲದೆ ಕಳೆದ ಬಾರಿಗಿಂತಲೂ ಈ ಬಾರಿ ವಿಶೇಷವಾಗಿ ವಸ್ತುಪ್ರದರ್ಶನ ಮೂಡಿ ಬರಬೇಕೆಂದು ಸೂಚಿಸಿದರು.       ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಣಾಧಿಕಾರಿ ಶುಭಾ ಕಲ್ಯಾಣ್ ಮಾತನಾಡಿ ವಸ್ತು ಪ್ರದರ್ಶನದಲ್ಲಿ ಕೃಷಿ, ತೋಟಗಾರಿಕೆ, ರೇಷ್ಮೆ, ಮೀನುಗಾರಿಕೆ,…

Read More

ತುರುವೇಕೆರೆ:       ತಾಲೂಕಿನ ಗುಡ್ಡದಯ್ಯನಪಾಳ್ಯ ಗ್ರಾಮದ ಶಿವಣ್ಣನವರಿಗೆ ಸೇರಿದ 10,000 (ಹತ್ತು ಸಾವಿರ ) ಕೊಬ್ಬರಿ ಬೆಂಕಿಗಾಹುತಿಯಾಗಿವೆ.       ಹಡವನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಗುಡ್ಡದಯ್ಯನಪಾಳ್ಯ ಗ್ರಾಮದ ಶಿವಣ್ಣನವರ ತೋಟದಲ್ಲಿ ಶೆಡ್ ನಿರ್ಮಿಸಿ ಕೂಡಿಟ್ಟದ 10ಸಾವಿರ ಕೊಬ್ಬರಿ ಬೆಂಕಿಗಾಹುತಿಯಾಗಿದ್ದು, ರಾತ್ರಿ ಇದ್ದಕ್ಕಿದ್ದಂತೆ ಹತ್ತಿಕೊಂಡ ಬೆಂಕಿಗೆ ಕೊಬ್ಬರಿ ಸಂಪೂರ್ಣ ಸುಟ್ಟು ಕರಕಲಾಗಿದೆ. ಎಂದಿನಂತೆ ಮುಂಜಾನೆ ತೋಟಕ್ಕೆ ಭೇಟಿ ನೀಡಿದ ರೈತ ಶಿವಣ್ಣ ಕೊಬ್ಬರಿ ಸುಟ್ಟು ಕರಕಲಾಗಿರುವುದನ್ನು ಕಂಡು ಕಂಗಾಲಾಗಿದ್ದಾರೆ.       ಸ್ಥಳಕ್ಕೆ ಸ್ಥಳೀಯ ಮುಖಂಡ ಹಾಗೂ ನೂತನ ಗ್ರಾಮ ಪಂಚಾಯತಿ ಸದಸ್ಯ ಹೆಚ್.ಎಂ.ಯೋಗೀಶ್ ಸ್ಥಳಕ್ಕೆ ಭೇಟಿ ನೀಡಿ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದ್ದು ಸರ್ಕಾರ ಕೂಡಲೇ ರೈತನ ಕಷ್ಟಕ್ಕೆ ಧಾವಿಸಬೇಕು ವರ್ಷಗಳಿಂದ ಕೂಡಿಟ್ಟಿದ್ದ ಕೊಬ್ಬರಿ ಆಕಸ್ಮಿಕವಾಗಿ ಬೆಂಕಿಗಾಹುತಿಯಾಗಿದ್ದು ರೈತನ ಜೀವನ ಬೀದಿಗೆ ಬಂದಿದೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕೆಂದು ಒತ್ತಾಯಿಸಿದ್ದಾರೆ.

Read More

ಗುಬ್ಬಿ :        ಸಚಿವ ಸಂಪುಟ ವಿಸ್ತರಣೆಯಲ್ಲೇ ಕಾಲಕಳೆದ ರಾಜ್ಯ ಸರ್ಕಾರಕ್ಕೆ ತಟ್ಟುವ ಅಸಮಾಧಾನದ ಹೊಗೆಯಿಂದ ಇನ್ನೂ ಮುಂದೆ ಕೂಡಾ ಟೇಕಾಫ್ ಆಗುವ ಲಕ್ಷಣ ಕಾಣುತ್ತಿಲ್ಲ ಎಂದು ಮಾಜಿ ಸಚಿವ ಹಾಗೂ ಶಾಸಕ ಎಸ್.ಆರ್.ಶ್ರೀನಿವಾಸ್ ಟೀಕಿಸಿದರು.       ತಾಲ್ಲೂಕಿನ ಪ್ರಭುವನಹಳ್ಳಿ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆ ಆಯೋಜಿಸಿದ್ದ ಗುದ್ದಲಿಪೂಜಾ ಕಾರ್ಯಕ್ರಮದಲ್ಲಿ ಒಟ್ಟು 1 ಕೋಟಿ ರೂಗಳ ವಿವಿಧ ಗ್ರಾಮಗಳ ಎಸ್‍ಸಿಪಿ ಟಿಎಸ್‍ಪಿ ಯೋಜನೆಯ ಸಿಸಿ ರಸ್ತೆಗೆ ಚಾಲನೆ ನೀಡಿ ಮಾತನಾಡಿದ ಅವರು ಈ ವರ್ಷ ಆರ್ಥಿಕ ಸಂಕಷ್ಟ ಎದುರಿಸಿದೆ. ಸರ್ಕಾರಕ್ಕೆ ನೆರೆಹಾವಳಿ ಮತ್ತು ಕೊರೋನಾದಿಂದ ಚೇತರಿಸಿಕೊಳ್ಳಲು ಸಮಯ ಬೇಕಿದೆ. ಈ ಬಾರಿ ಲಘು ಗಾತ್ರದ ಬಜೆಟ್ ಮನ್ನಣೆ ಮಾಡುವ ಹಂತದಲ್ಲಿರುವ ಸರ್ಕಾರ ಸಚಿವರ ನೇಮಕದಲ್ಲಿ ಸಮಯ ಕಳೆದಿರುವುದು ಸರಿಯಲ್ಲ ಎಂದರು.        ಬಿಜೆಪಿ ಮತ್ತು ಯಡಿಯೂರಪ್ಪನವರನ್ನು ಹೊಗಳಿಕೊಂಡು ಬಿಜೆಪಿ ಸೇರಿದ ಎಚ್.ವಿಶ್ವನಾಥ್ ಅಧಿಕಾರದ ಆಸೆ ಈಡೇರಿಲ್ಲ. ಪ್ರಪಂಚದ ಎಲ್ಲಾ ಕಾನೂನು ಮಾತನಾಡುವ ವಿಶ್ವನಾಥ್ ಅವರಿಗೆ…

Read More