ತುಮಕೂರು: ಇತ್ತೀಚೆಗೆ ಕೊರೊನಾ ವೈರಸ್ ಸೋಂಕು ತಗುಲಿ ಮೃತಪಟ್ಟಿದ್ದ ಶಿರಾ ಪಟ್ಟಣದ ವೃದ್ಧನ 13 ವರ್ಷದ ಮಗನಲ್ಲಿ ಸೋಂಕು ಇರುವುದು ದೃಢವಾಗಿದೆ. ಈ ಕುರಿತು ಮಾಹಿತಿ ನೀಡಿರುವ ಜಿಲ್ಲಾಧಿಕಾರಿ ರಾಕೇಶ್ ಕುಮಾರ್, ಇದು ತುಮಕೂರು ಜಿಲ್ಲೆಯಲ್ಲಿ ಕೊರೊನಾ ವೈರಸ್ ಗೆ ಸಂಬಂಧಿಸಿದಂತೆ ಎರಡನೇ ಖಚಿತ ಪ್ರಕರಣ ಎಂದಿದ್ದಾರೆ. ಇತ್ತೀಚೆಗೆ ಕೊರೊನಾ ವೈರಸ್ ಸೋಂಕಿನಿಂದ ಮೃತಪಟ್ಟಿದ್ದ ಶಿರಾದ 60 ವರ್ಷದ ವಯಸ್ಸಿನ 13 ವರ್ಷದ ವಯಸ್ಸಿನ ಮಗನಿಗೆ ಸೋಂಕು ತಗುಲಿದೆ. ಈಗಾಗಲೇ ಮುನ್ನೆಚ್ಚರಿಕೆ ಕ್ರಮವಾಗಿ ಬೆಂಗಳೂರಿನಲ್ಲಿರುವ ಇಂದಿರಾಗಾಂಧಿ ಆಸ್ಪತ್ರೆಗೆ ಬಾಲಕನನ್ನು ದಾಖಲಿಸಲಾಗಿದೆ. ಮೃತ ವೃದ್ಧನೊಂದಿಗೆ ಸಂಪರ್ಕದಲ್ಲಿದ್ದವರಲ್ಲಿ ನೆಗೆಟಿವ್ ಕಂಡುಬಂದಿದೆ. ಮಾ.17ರಂದು ಮೃತ ವೃದ್ಧ ತಿಪಟೂರಿಗೆ ಹೋಗಿದ್ದರು. ಹೀಗಾಗಿ ತಿಪಟೂರಿನಲ್ಲಿ 11 ಜನರ ರಕ್ತ ಮತ್ತು ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ. ಜಿಲ್ಲೆಯಲ್ಲಿ ಒಟ್ಟು 30 ಸ್ಯಾಂಪಲ್ ಗಳ ಫಲಿತಾಂಶಕ್ಕಾಗಿ ಕಾಯಲಾಗುತ್ತಿದೆ. ಜಿಲ್ಲೆಯಲ್ಲಿ ಇಬ್ಬರು ಕೋವಿಡ್-19 ಸೋಂಕಿತರೆಂದು…
Author: News Desk Benkiyabale
ಕೊರಟಗೆರೆ: ಗಡಿಭಾಗದ ತಾಲೂಕು ಗೌರಿಬಿದನೂರು ನಗರದಲ್ಲಿ 10ಕ್ಕೂ ಹೆಚ್ಚು ಜನರಿಗೆ ಕೊರೊನಾ ಸೊಂಕು ಹರಡಿರುವ ಹಿನ್ನಲೆ ಕೊರಟಗೆರೆ ತಾಲೂಕಿಗೆ ಸಂಪರ್ಕ ಕಲ್ಪಿಸುವ 10ಕಡೆಯಿಂದಲೂ ನಾಕಾಬಂಧಿ ಹಾಕಲಾಗಿದೆ. ಪೊಲೀಸ್, ಕಂದಾಯ, ಆರೋಗ್ಯ ಮತ್ತು ಗ್ರಾಪಂಯ ಸಿಬ್ಬಂದಿಗಳಿಂದ ಸಾರ್ವಜನಿಕರ ತೀರ್ವ ತಪಾಸಣೆ ನಡೆಯುತ್ತೀದ್ದು ಕೊರಟಗೆರೆ ಕ್ಷೇತ್ರದ 8ದಿಕ್ಕುಗಳ ರಸ್ತೆಗಳನ್ನು ಬಂದೊಬಸ್ತ್ ಮಾಡಲಾಗಿದೆ. ಗೌರಿಬಿದನೂರಿನಿಂದ ಕೊರಟಗೆರೆಗೆ ಆಗಮಿಸುವ ಕಾಶಾಪುರದ ಬಳಿ, ಅಲ್ಲಿಪುರದಿಂದ- ಅಕ್ಕಾಜಿಹಳ್ಳಿ ಮೂಲಕ ಹೊಳವನಹಳ್ಳಿ, ದೊಡ್ಡಬಳ್ಳಾಪುರದಿಂದ- ಕೋಳಾಲ, ಬೆಂಗಳೂರಿನಿಂದ-ಕಾಲೋನಿ, ಮಧುಗಿರಿ-ತುಮಕೂರು-ಶಿರಾದಿಂದ-ತೋವಿನಕೆರೆ, ಮಧುಗಿರಿಯಿಂದ-ದಾಸರಹಳ್ಳಿ ಬಳಿ ಮತ್ತು ತುಮಕೂರಿನಿಂದ-ಜಂಪೇನಹಳ್ಳಿ ಮೂಲಕ ಕೊರಟಗೆರೆ ಪಟ್ಟಣಕ್ಕೆ ಆಗಮಿಸುವ 8ದಿಕ್ಕುಗಳಿಗೆ ಕಟ್ಟುನಿಟ್ಟಿನ ನಾಕಬಂದಿ ಹಾಕಲಾಗಿದೆ. ಕೊರಟಗೆರೆಯ ಹೊಳವನಹಳ್ಳಿ, ಕೋಳಾಲ, ಚನ್ನರಾಯನದುರ್ಗ ಮತ್ತು ಕಸಬಾ ಹೋಬಳಿಯ 100ಕ್ಕೂ ಹೆಚ್ಚು ಗ್ರಾಮದ ಜನರು ತಮ್ಮ ಗ್ರಾಮಕ್ಕೆ ಹೊರಗಿನವರು ಯಾರು ಬರದಂತೆ ನಿರ್ಭಂದ ಹಾಕಿಕೊಂಡು ರಸ್ತೆಗೆ ಬೇಲಿ ಹಾಕಿದ್ದಾರೆ. ಪ್ರಧಾನ ಮಂತ್ರಿಯ ಲಾಕ್‍ಡೌನ್ ಆದೇಶವನ್ನು ಪಾಲಿಸುತ್ತೇವೆ ಎಂಬ ನಾಮಫಲಕ ಹಾಕಿಕೊಂಡು ನಮ್ಮ ಗ್ರಾಮಕ್ಕೆ…
ತುಮಕೂರು : ಕೊರೋನಾ ಕೋವಿಡ್-19ರ ಹರಡುವಿಕೆಯನ್ನು ನಿಯಂತ್ರಿಸಲು ಸಾಮಾಜಿಕ ಅಂತರ ಮುಖ್ಯ. ಸುರಕ್ಷತಾ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಜಿಲ್ಲಾ ಆರೋಗ್ಯ ಕಾರ್ಯಪಡೆಯ ಸಭೆಯನ್ನು ನಡೆಸಲು ಮಾಹಿತಿ ತಂತ್ರಜ್ಞಾನವನ್ನು ಜಿಲ್ಲಾಡಳಿತ ಸಮರ್ಥವಾಗಿ ಬಳಸಿಕೊಂಡಿದೆ. ವೆಬ್‍ಬೇಸ್ಡ್ ವಿಡಿಯೋ ಕಾನ್ಫರೆನ್ಸ್‍ಅನ್ನು ಟೆಕ್ನಾಲಜಿ ತಾಂತ್ರಿಕತೆಯನ್ನು ನ್ಯಾಷನಲ್ ಇನ್‍ಪಾರೆನ್ಸ್‍ಷನ್ ಸೆಂಟರ್(ಎನ್‍ಐಸಿ)ಯ ಸಹಕಾರದೊಂದಿಗೆ ಜಿಲ್ಲಾಡಳಿತ ಬಳಕೆ ಮಾಡಲು ಮುಂದಾಗಿದೆ. ಜಿಲ್ಲಾಧಿಕಾರಿ ಡಾ: ಕೆ. ರಾಕೇಶ್ ಕುಮಾರ್ ಅವರು ತಮ್ಮ ಕಛೇರಿಯ ಸಭಾಂಗಣದಲ್ಲಿಯೇ ಕುಳಿತು, ಜಿಲ್ಲಾ ಆರೋಗ್ಯ ಪಡೆಯ ಎಲ್ಲಾ ಅಧಿಕಾರಿಗಳನ್ನು/ಸದಸ್ಯರನ್ನು ವೆಬ್ ಬೇಸ್ಟ್ ವಿಡಿಯೋ ಕಾನ್ಫೆರೆನ್ಸ್ ಮೂಲಕ ಕೋವಿಡ್-19 ಕುರಿತಂತೆ ಪರಿಶೀಲನೆ ನಡೆಸುತ್ತಿದ್ದಾರೆ. ಅಧಿಕಾರಿಗಳು ತಮ್ಮ ಕಛೇರಿಯ ಅಥವಾ ಬೇರೆ ಎಲ್ಲಿಯೇ ಇದ್ದರೂ ತಮ್ಮ ಮೊಬೈಲ್ ಅಥವಾ ಲ್ಯಾಪ್‍ಟ್ಯಾಪ್ ಮೂಲಕ ವೀಡಿಯೋ ಸಂವಾದದಲ್ಲಿ ಭಾಗವಹಿಸಬಹುದು. ಮಾಹಿತಿ ತಂತ್ರಜ್ಞಾನದ ಸಹಕಾರದಿಂದ ಸಾಮಾಜಿಕ ಅಂತರವ ನ್ನು ಕಾಯ್ದುಕೊಂಡು ಪ್ರತಿನಿತ್ಯ ಕೊರೋನಾ ಕೋವಿಡ್‍ನ…
ತುಮಕೂರು : ಜಿಲ್ಲೆಯ ತುಮಕೂರು ತಾಲೂಕು ಹೆಬ್ಬೂರು ಹೋಬಳಿ ಅರಿಯೂರು ಗ್ರಾಮಪಂಚಾಯತಿ ವ್ಯಾಪ್ತಿಯ ಚನ್ನಿಗಪ್ಪನಪಾಳ್ಯದ ಕೆರೆ ಬಳಿ ನಾಲ್ಕೈದು ದಿನಗಳಿಂದ ಪ್ರತ್ಯಕ್ಷವಾಗಿ ಸಾರ್ವಜನಿಕರಿಗೆ ಭೀತಿ ಹುಟ್ಟಿಸಿ ಸಾಕು ಪ್ರಾಣಿಗಳನ್ನು ಭಕ್ಷಿಸುತ್ತಿದ್ದ ಸುಮಾರು 2 ವರ್ಷದ ಗಂಡು ಚಿರತೆಯನ್ನು ತುಮಕೂರು ವಲಯದ ಅರಣ್ಯ ಸಿಬ್ಬಂದಿಗಳು ಇಂದು ಕಾರ್ಯಾಚರಣೆ ನಡೆಸಿ ಬೋನಿನಲ್ಲಿ ಸೆರೆ ಹಿಡಿದಿದ್ದಾರೆ. ಚಿರತೆಯನ್ನು ಸುರಕ್ಷಿತವಾಗಿ ಅರಣ್ಯ ಪ್ರದೇಶಕ್ಕೆ ಬಿಡಲಾಗಿದೆ ಎಂದು ತುಮಕೂರು ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಗಿರೀಶ್ ತಿಳಿಸಿದ್ದಾರೆ.
ತುಮಕೂರು: ಕೊರೋನಾ ವೈರಸ್(ಕೋವಿಡ್-19)ನಿಂದ ದೇಶ-ವಿದೇಶಗಳಲ್ಲಿ ಭಯಂಕರ ಸಾವು-ನೋವುಗಳು ಸಂಭವಿಸುತ್ತಿರುವುದರಿಂದ ತುಮಕೂರು ನಗರದ ಶ್ರೀನಗರ-ಬಂಡೇಪಾಳ್ಯ ಬಡಾವಣೆಯ ನಾಗರಿಕರೆಲ್ಲ ಮುಂಜಾಗ್ರತಾ ಕ್ರಮವಾಗಿ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಕರೋನ ವೈರಸ್ ಅನ್ನು ಹೊಡೆದೋಡಿಸುವ ಪಣ ತೊಟ್ಟಿದ್ದಾರೆ. ಸುತ್ತೆಲ್ಲ ದೇಶಗಳಲ್ಲಿ ಮಹಾಮಾರಿ ಕೋವಿಡ್-19 ವೈರಾಣು ತನ್ನ ಕಬಂಧ ಬಾಹುಗಳಿಂದ ಅಸಂಖ್ಯಾತ ಜನರ ಜೀವವನ್ನು ಬಲಿತೆಗೆದುಕೊಳ್ಳುತ್ತಿರುವುದನ್ನು ಕಂಡು ಎಚ್ಚೆತ್ತ ಶ್ರೀನಗರ ನಾಗರೀಕ ಕ್ಷೇಮಾಭಿವೃದ್ಧಿ ಸಮಿತಿಯು ಸ್ಥಳೀಯ ನಾಗರಿಕರೊಂದಿಗೆ ಸಮಾಲೋಚಿಸಿ ಕೆಲವು ನಿರ್ಧಾರಗಳನ್ನು ಕೈಗೊಂಡು ಕಾರ್ಯೋನ್ಮುಖವಾಗಿದೆ. ಮುಖ್ಯವಾಗಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದರಿಂದ ಈ ಮಹಾಮಾರಿ ರೋಗವನ್ನು ತೊಲಗಿಸಬಹುದೆಂದು ಸ್ಥಳೀಯರೆಲ್ಲ ತಮಗೆ ತಾವೇ ನಿರ್ಬಂಧಗಳನ್ನು ಹಾಕಿಕೊಂಡು ಇತರರಿಗೆ ಮಾದರಿಯಾಗಿದ್ದಾರೆ. ನಾಳೆ ಬನ್ನಿ : ಕೊರೋನಾ ವೈರಸ್‍ನಿಂದ ಪಾರಾಗಲು ಸಾಮಾಜಿಕ ಅಂತರ ಕಾಯ್ದುಕೊಳ್ಳವುದೇ ಉತ್ತಮ ಮಾರ್ಗೋಪಾಯವೆಂದು ಮಾನ್ಯ ಪ್ರಧಾನಿಗಳು ಮಾರ್ಚ್ 24ರ ಮಧ್ಯರಾತ್ರಿಯಿಂದ ದೇಶದಾದ್ಯಂತ ಲಾಕ್‍ಡೌನ್ ಘೋಷಿಸಿದ ಹಿನ್ನೆಲೆಯಲ್ಲಿ ಎಷ್ಟೇ ಹತ್ತಿರದ ಸಂಬಂಧಿಕರಾಗಲೀ, ಆಪ್ತ ಸ್ನೇಹಿತರಾಗಲೀ ಮನೆಗೆ ಬರದ ಹಾಗೆ…
ತುಮಕೂರು : ಜಿಲ್ಲೆಯಲ್ಲಿ ಕರೋನ ಮಹಾಮಾರಿಗೆ ಮೊದಲ ಬಲಿಯಾದ ಹಿನ್ನೆಲೆಯಲ್ಲಿ ಇಡೀ ಜಿಲ್ಲೆಯಾದ್ಯಂತ ಹೆಚ್ಚಿನ ಭದ್ರತೆಯನ್ನ ಮಾಡಿದ್ದು, ತುಮಕೂರು ನಗರ ಸೇರಿದಂತೆ ಜಿಲ್ಲೆಯ ಹಲವು ತಾಲ್ಲೂಕುಗಳಲ್ಲಿ ವ್ಯಾಪಕವಾದ ಭದ್ರತೆ ಹಾಗೂ ಗಸ್ತನ್ನು ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂಧಿ ನಿರ್ವಹಿಸುತ್ತಿದ್ದು, ಹೆದ್ದಾರಿಗಳ ಭದ್ರತೆ ಮತ್ತು ವಿನಾಕಾರಣ ಜನತೆ ರಸ್ತೆಗಿಳಿಯುವುದನ್ನ ತಡೆಗಟ್ಟುವ ನಿಟ್ಟಿನಲ್ಲಿ ಮುಖ್ಯ ರಸ್ತೆಗಳಲ್ಲಿ ಪೊಲೀಸ್ ಬ್ಯಾರಿಕೇಡ್‍ಗಳನ್ನ ಹಾಕಿ ಖುದ್ದು ಪಿಎಸ್‍ಐಗಳೇ ರಸ್ತೆಯಲ್ಲಿ ನಿಂತು ರಸ್ತೆಗಿಳಿದ ಸಾರ್ವಜನಿಕರ ತಪಾಸಣೆಗಿಳಿದಿರುವುದನ್ನ ಗಮನಿಸಿದರೆ, ಕೊರೊನಾ ಮಹಾಮಾರಿಯ ಭೀಬತ್ಸತೆಯನ್ನ ನಿಯಂತ್ರಿಸುವಲ್ಲಿ ಪೊಲೀಸ್ ಇಲಾಖೆಯ ಪಾತ್ರ ಬಹುಮುಖ್ಯ ಎನ್ನುವ ನಿರ್ಧಾರಕ್ಕೆ ಜಿಲ್ಲಾ ಪೊಲೀಸರು ಬಂದಿರುವಂತಿದೆ. ರಾಷ್ಟ್ರೀಯ ಹೆದ್ದಾರಿಗಳು ಮತ್ತು ಹೊರಜಿಲ್ಲೆಯ ಗಡಿ ಹಾಗೂ ಅಂತರಾಜ್ಯ ಗಡಿಗಳನ್ನ ಗಡಿಯ ಮುಖೇನ ಅಂತರಾಜ್ಯ ಹಾಗೂ ಹೊರಜಿಲ್ಲೆಯ ಜನತೆ ಜಿಲ್ಲೆಯೊಳಗೆ ನುಸುಳದಂತೆ ಜಾಗೃತಿ ವಹಿಸುವುದು ಒಂದೆಡೆಯಾದರೆ ತುಮಕೂರು ನಗರದ ಹಾಗೂ ಜಿಲ್ಲೆಯ ಒಳಗಿನ ಜನ ಕಾನೂನನ್ನು ಉಲ್ಲಂಘಿಸಿ ವಿನಾಕಾರಣ ರಸ್ತೆಗಿಳಿದು ಸೋಂಕನ್ನ ಹರಡುವುದು ಮತ್ತು…
ತುಮಕೂರು : ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕು ಅಮೃತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕುಖ್ಯಾತ ಕಾರುಗಳ್ಳರ ಬಂಧನವಾಗಿದೆ. ಇತ್ತೀಚಿನ ದಿನಗಳಲ್ಲಿ ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕು ಅಮೃತೂರು ಪೊಲೀಸ್ ಠಾಣಾ ಸರಹದ್ದಿನಲ್ಲಿ ನಿಲ್ಲಿಸಿದ್ದ ಕಾರಿನ ಗಾಜು ಒಡೆದು ಕಾರಿನಲ್ಲಿದ್ದ ಚಿನ್ನಾಭರಣ, ಲ್ಯಾಪ್ ಟಾಪ್, ಮೊಬೈಲ್ಗಳು ಸೇರಿದಂತೆ ಲಕ್ಷಾಂತರ ರೂ. ಮೌಲ್ಯದ ಮಾಲುಗಳನ್ನ ಕಳ್ಳತನ ಮಾಡಲಾಗಿತ್ತು. ಸದರಿ ವಿಚಾರವಾಗಿ ಅಮೃತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸರಿಯಷ್ಟೇ. ಇದಕ್ಕಾಗಿ ಮಾನ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ವಿಶೇಷ ತಂಡವನ್ನ ರಚಿಸಿದ್ದು, ಆ ತಂಡವು ಸದರಿ ಪ್ರಕರಣವನ್ನು ಬೇದಿಸುವಲ್ಲಿ ಯಶಸ್ವಿಯಾಗಿದೆ. ವಿಶೇಷ ತಂಡದ ಜಾಲದಲ್ಲಿ ಸಿಲುಕಿದ್ದ ಸದರಿ ಪ್ರಕರಣದ ಆರೋಪಿ ಲೊಕೇಶ್.ಬಿ.ಪಿ ಆಲಿಯಾಸ್ ಲೋಕಿ ಆಲಿಯಾಸ್ ಜಗ್ಗುದಾದ(41) ವೃತ್ತಿಯಲ್ಲಿ ಡ್ರೈವರ್ ಕೆಲಸ ಮಾಡುತ್ತಿದ್ದ. ಈತನು ಈ ಪ್ರಕರಣದ ಆರೋಪಿ ಎಂದು ಶಂಕಿಸಿ ಆತನನ್ನು ವಶಕ್ಕೆ ಪಡೆದು ತನಿಖೆ ನಡೆಸಿದಾಗ ಅನುಮಾನಗೊಂಡ ಆರೋಪಿಯು…
ತುಮಕೂರು : ಜಿಲ್ಲೆಯ ತುಮಕೂರು ತಾಲೂಕು ಹೆಬ್ಬೂರು ಹೋಬಳಿ ತಾವರೆಕೆರೆ ಗ್ರಾಮದಲ್ಲಿ ಹಲವಾರು ದಿನಗಳಿಂದ ಪ್ರತ್ಯಕ್ಷವಾಗಿ ಸಾರ್ವಜನಿಕರಿಗೆ ಭೀತಿ ಹುಟ್ಟಿಸಿ ಸಾಕು ಪ್ರಾಣಿಗಳನ್ನು ಭಕ್ಷಿಸುತ್ತಿದ್ದ ಸುಮಾರು 5 ವರ್ಷದ ಗಂಡು ಚಿರತೆಯನ್ನು ತುಮಕೂರು ವಲಯದ ಅರಣ್ಯ ಸಿಬ್ಬಂದಿಗಳು ಇಂದು ಕಾರ್ಯಾಚರಣೆ ನಡೆಸಿ ಬೋನಿನಲ್ಲಿ ಸೆರೆ ಹಿಡಿದಿದ್ದು, ಚಿರತೆಯನ್ನು ಸುರಕ್ಷಿತವಾಗಿ ಅರಣ್ಯ ಪ್ರದೇಶಕ್ಕೆ ಬಿಡಲಾಗಿದೆ ಎಂದು ತುಮಕೂರು ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಗಿರೀಶ್ ತಿಳಿಸಿದ್ದಾರೆ.
ತುಮಕೂರು: ಕೊರೊನಾ ಸೋಂಕಿಗೆ ಜಿಲ್ಲೆಯ ಶಿರಾ ಮೂಲದ ಸುಮಾರು 65 ವರ್ಷದ ವ್ಯಕ್ತಿ ಸಾವನ್ನಪ್ಪಿದ್ದು, ಸಾರ್ವಜನಿಕರು ಅನಗತ್ಯವಾಗಿ ಮನೆಯಿಂದ ಹೊರಗೆ ಬರದೆ ಸೋಂಕು ನಿಯಂತ್ರಣಕ್ಕೆ ಸಹಕರಿಸಬೇಕೆಂದು ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್ ಮನವಿ ಮಾಡಿದರು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾವನ್ನಪ್ಪಿರುವ ಕೊರೊನಾ ಸೋಂಕಿತ ವ್ಯಕ್ತಿಯು ಮಾರ್ಚ್ 5ರಂದು ತುಮಕೂರಿನಿಂದ ಸಂಪರ್ಕಕ್ರಾಂತಿ ರೈಲಿನಲ್ಲಿ ದೆಹಲಿಗೆ ಪ್ರಯಾಣ. ದೆಹಲಿಯ ಜಾಮೀಯಾ ಮಸೀದಿಯ ಹೋಟೆಲ್ ರೂಂನಲ್ಲಿ ವಾಸ್ತವ್ಯ. ಮಾರ್ಚ್ 11ರಂದು ಕೊಂಗು ಎಕ್ಸ್‍ಪ್ರೆಸ್‍ನಲ್ಲಿ ಯಶವಂತಪುರಕ್ಕೆ ಪ್ರಯಾಣ, ಅಲ್ಲಿಂದ ಮಾರ್ಚ್ 14ರಂದು ಚಿತ್ರದುರ್ಗ ಕಡೆ ಹೋಗುವ ಬಸ್ ಮೂಲಕ ಶಿರಾಗೆ ತಲುಪಿದ್ದರು ಎಂದು ತಿಳಿಸಿದರು. ಮಾರ್ಚ್ 18ರಂದು ಜ್ವರ ಬಂದಿದ್ದು, ಶಿರಾದಲ್ಲಿಯೇ ಖಾಸಗಿ ಆಸ್ಪತ್ರೆಯಲ್ಲಿ ಓಪಿಡಿ ಚಿಕಿತ್ಸೆ ಪಡೆದರು ಸಹ ಜ್ವರ ಕಡಿಮೆಯಾಗದ ಕಾರಣ ಮಾ.21ರಂದು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ಮಾ.23ರಂದು ಜಿಲ್ಲಾಸ್ಪತ್ರೆಯ ಒಪಿಡಿಯಲ್ಲಿ ಚಿಕಿತ್ಸೆ ಪಡೆದು ಶಿರಾಕ್ಕೆ…
ತುಮಕೂರು : ವಿಶ್ವದಾದ್ಯಂತ ಕಾಡುತ್ತಿರುವ ಕೊರೊನಾ ವೈರಾಣು ಸೋಂಕಿನ ವಿರುದ್ಧ ದೇಶ ಮತ್ತು ನಾಡಿನ ಜನತೆ ಹೋರಾಟ ನಡೆಸಬೇಕು ಎಂದು ಸಿದ್ದಗಂಗಾ ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿ ಕರೆ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಕರೆ ನೀಡಿದ್ದ ಜನತಾ ಕಫ್ರ್ಯೂನಂತೆ ಪ್ರತಿಯೊಬ್ಬರೂ ಸ್ವಯಂ ನಿಯಂತ್ರಣ ಹೇರಿಕೊಂಡು ಸುಮಾರು 15 ದಿನಗಳ ಕಾಲ ಮನೆಯಿಂದ ಹೊರಗೆ ಬಾರದೆ ಈ ಸೋಂಕು ಹರಡದಂತೆ ನಿಯಂತ್ರಿಸಲು ಸರ್ಕಾರದೊಂದಿಗೆ ಕೈಜೋಡಿಸಬೇಕು ಎಂದು ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು. ಪ್ರತಿಯೊಬ್ಬರೂ ಮನೆಯಲ್ಲೇ ಇದ್ದು, ಈ ಮಹಾಮಾರಿಯನ್ನು ದೇಶದಿಂದ ಓಡಿಸಲು ಮುಂದಾಗಬೇಕು ಎಂದು ಅವರು ಸಲಹೆ ಮಾಡಿದರು. ಭಕ್ತರಿಗೆ ನಿರ್ಬಂಧ: ರಾಜ್ಯದಲ್ಲಿ ಕೊರೊನಾ ಸೋಂಕು ಭೀತಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಿದ್ದಗಂಗಾ ಮಠಕ್ಕೆ ಭಕ್ತಾದಿಗಳ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ ಎಂದರು. ಕೊರೊನಾ ಸೋಂಕನ್ನು ತಡೆಗಟ್ಟುವ ಸಲುವಾಗಿ ನಾವೆಲ್ಲರೂ ಸ್ವಯಂ ಪ್ರೇರಿತರಾಗಿಯೇ ಮುಂದಾಗಬೇಕು. ಹಾಗಾಗಿ ಭಕ್ತರೂ…