ತುಮಕೂರು : ರಾಷ್ಟ್ರೀಯ ಹೆದ್ಧಾರಿ 2006 ರಸ್ತೆಗೆ ಹೊಂದಿಕೊಂಡಿರುವ ಮಲ್ಲಸಂದ್ರ ಗ್ರಾಮ ಪಂಚಾಯಿತಿ ನೂತನ ಕಟ್ಟಡ ನಿರ್ಮಾಣ ಮಾಡಲು ಆಡಳಿತಾಧಿಕಾರಿ ಸ್ಥಳ ಪರಿಶೀಲನೆ ನೆಡೆಸಿದರು. ತಾಲೂಕಿನ ಮಲ್ಲಸಂದ್ರ ಗ್ರಾಮದಲ್ಲಿ ರಾಷ್ಟ್ರೀಯ ಹೆದ್ಧಾರಿ ಅಗಲೀಕರಣದಿಂದ ಗ್ರಾಮ ಪಂಚಾಯಿತಿತೆರವಾಗುತ್ತಿರುವ ಹಿನ್ನೇಲೆಯಲ್ಲಿ ಗ್ರಾಮ ಪಂಚಾಯಿತಿ ಕಟ್ಟಡವನ್ನು ಸ್ಥಳಾಂತರಿಸಲಾಗುತ್ತಿದ್ದು,ನೂತನ ಕಟ್ಟಡವನ್ನು ನಿರ್ಮಾಣ ಮಾಡಲು ಗ್ರಾಮ ಪಂಚಾಯಿತಿಯ ಆಡಳಿತಾಧಿಕಾರಿ ಡಾ.ಕೆ ನಾಗಣ್ಣ ಪಂಚಾಯಿತಿ ಅಭಿವೃದ್ಧಿ ಅಕಾರಿಗಳೊಂದಿಗೆ ಸ್ಥಳ ಪರಿಶೀಲನೆ ಮಾಡಿದರು. ಈ ಸಂದರ್ಭದಲ್ಲಿ ಆಡಳಿತಾಧಿಕಾರಿ ಡಾ.ಕೆ ನಾಗಣ್ಣ ಮಾತನಾಡಿ,ಗ್ರಾಮ ಪಂಚಾಯಿತಿಯನ್ನು ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಮಾಡುವ ಹಿನ್ನೇಲೆಯಲ್ಲಿ ಪಂಚಾಯಿತಿಯನ್ನು ಸ್ಥಳಾಂತರ ಮಾಡಬೇಕಿದೆ. ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಹಿಂಭಾಗ ಸರ್ವೆ ನಂಬರ್ 34 ರಲ್ಲಿ 1.5 ಎಕರೆ ಜಾಗವಿದ್ದು,ಈ ಜಾಗದಲ್ಲಿ ಸುಸರ್ಜಿತವಾಗಿ ಗ್ರಾಮ ಪಂಚಾಯಿತಿಯ ಹೊಸ ಕಟ್ಟಡವನ್ನು ಸುಮಾರು 60-70 ಲಕ್ಷಗಳಲ್ಲಿ ನಿರ್ಮಾಣ ಮಾಡಲಾಗುವುದು.ಶೀಘ್ರವೇ ಕಾಮಗಾರಿ ಆರಂಭ ಮಾಡುವುದಾಗಿ ಹೇಳಿದರು. ಈ ಸಂದರ್ಭದಲ್ಲಿ…
Author: News Desk Benkiyabale
ತುಮಕೂರು : ಪೊಕ್ಸೊ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಪ್ರಕರಣಗಳ ಆರೋಪಿಗಳಿಗೆ ಶೀಘ್ರವಾಗಿ ಶಿಕ್ಷೆಯಾಗಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಇಲಾಖಾ ಸಚಿವರಾದ ಶಶಿಕಲಾ ಅಣ್ಣಾಸಾಹೇಬ್ ಜೊಲ್ಲೆ ಅವರು ತಿಳಿಸಿದರು. ಜಿಲ್ಲಾಧಿಕಾರಿಗಳ ಕಛೇರಿಯಲ್ಲಿಂದು ನಡೆದ ಪೊಕ್ಸೊ ಪ್ರಕರಣಗಳ ಪರಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಪೊಕ್ಸೋ ಪ್ರಕರಣಗಳಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯಾಗುವುದಕ್ಕೆ ವಿಳಂಬವಾಗಬಾರದು. ಆರೋಪಿತರಿಗೆ ಶಿಕ್ಷೆಯಾದರೆ ಬೇರೆಯವರಿಗೆ ಭಯ ಉಂಟಾಗುತ್ತದೆ. ಪ್ರಕರಣದಲ್ಲಿ ತಪ್ಪಿತಸ್ಥರು ಖುಲಾಸೆಯಾಗದಂತೆ ಸಂಬಂಧಪಟ್ಟ ಇಲಾಖೆಗಳು ಕಾರ್ಯನಿರ್ವಹಿಸಬೇಕು ಎಂದು ಅವರು ತಿಳಿಸಿದರು. ತುಮಕೂರು ಜಿಲ್ಲೆಯಲ್ಲಿ ಪೊಕ್ಸೋ ಕಾಯ್ದೆಯಡಿ ದಾಖಲಾಗಿರುವ ಪ್ರಕರಣಗಳನ್ನು ಗಮನಿಸಿದರೆ 15 ವರ್ಷದ ಮೇಲ್ಪಟ್ಟ ಮಕ್ಕಳ ಪ್ರಕರಣಗಳು ಹೆಚ್ಚಾಗಿವೆ. ಹೈಸ್ಕೂಲ್ ಮತ್ತು ಕಾಲೇಜಿನಲ್ಲಿ ಓದುತ್ತಿರುವವರು ಪ್ರೀತಿಸಿ ಓಡಿಹೋದವರು, ಪ್ರೀತಿಸಿ ಮಧುವೆಯಾದವರೂ ಇದ್ದಾರೆ. ಇಂತಹ ಪ್ರಕರಣಗಳನ್ನು ಕಿಡ್ನಾಪ್ ಪ್ರಕರಣಗಳೆಂದು ಪರಿಗಣಿಸಿ ಪೊಕ್ಸೊ ಕಾಯ್ದೆ ಹಾಕಲಾಗಿದೆ ಎಂದರು. …
ಮಧುಗಿರಿ: ರಾಜ್ಯ ಸರ್ಕಾರ ಬಳ್ಳಾರಿ ಜಿಲ್ಲೆಯನ್ನು ವಿಭಜಿಸಿ ವಿಜಯನಗರ ಜಿಲ್ಲೆಯನ್ನಾಗಿಸುವ ಪ್ರಕ್ರಿಯೆಗೆ ಅಧಿಕೃತವಾಗಿ ಚಾಲನೆ ನೀಡಿದ ನಂತರ ತುಮಕೂರು ಜಿಲ್ಲೆಯ 4 ತಾಲೂಕುಗಳನ್ನು ವಿಭಜಿಸಿ ಮಧುಗಿರಿಯನ್ನು ಜಿಲ್ಲೆಯನ್ನಾಗಿಸಬೇಕೆಂಬ ಕೂಗು ಮತ್ತೆ ಕೇಳಿ ಬರುತ್ತಿದೆ. 2013 ರ ವಿಧಾನಸಭಾ ಚುನಾವಣೆಯ ಸಮಯದಲ್ಲೇ ಕೆ.ಎನ್.ರಾಜಣ್ಣನವರು ಮಧುಗಿರಿಯನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡುತ್ತೇನೆ ಎಂದು ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿದಾಗ ಅದನ್ನು ಯಾರೂ ಸಹ ನಂಬಿರಲಿಲ್ಲ. ಅದಕ್ಕೆ ಕಾರಣಗಳೂ ಇದ್ದವು… ಏನಿದೆ ಮಧುಗಿರಿಯಲ್ಲಿ ಹದಗೆಟ್ಟ ಮತ್ತು ದೂಳು ತುಂಬಿದ ತಾಲೂಕಿನ ರಸ್ತೆಗಳು, ಕುಡಿಯಲು ನೀರಿಲ್ಲದೇ ಪರದಾಡುತ್ತಿದ್ದ ಹಳ್ಳಿಗಳು, ಪಟ್ಟಣದ ಬಹುತೇಕ ನೀರಿನ ಟ್ಯಾಂಕುಗಳ ಮುಂದೆ ಪ್ರದರ್ಶನ ನೀಡುತ್ತಿದ್ದ ಖಾಲಿ ಕೊಡಗಳು. ಪಟ್ಟಣದ ತುಂಬೆಲ್ಲಾ ನೀರು ತುಂಬಿಕೊಂಡು ಓಡಾಡುತ್ತಿದ್ದ ಟ್ಯಾಂಕರ್‍ಗಳು. ಇಷ್ಟು ಬಿಟ್ಟರೆ ಇಲ್ಲಿ ಏನೂ ಇಲ್ಲ. ನಿಜ ಹೇಳಬೇಕೆಂದರೆ ವಾಸಕ್ಕೆ ಮಧುಗಿರಿ ಯೋಗ್ಯವೇ ಅಲ್ಲ ಇನ್ನು ಜಿಲ್ಲಾ ಕೇಂದ್ರದ ವಿಷಯ ಆಗದ ಮಾತು ಬಿಡಿ ಎಂದೇ ಬಹಳಷ್ಟು ಜನ…
ಮಧುಗಿರಿ: ನರೇಗಾ ಯೋಜನೆಯಡಿ ಕೃಷಿ ಹೊಂಡ ನಿರ್ಮಾಣದಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿದ ಸಾಮಾಜಿಕ ಕಾರ್ಯಕರ್ತನ ದೂರಿಗೆ ಜಿಪಂ ಒಂಬುಡ್ಸ್ ಮನ್ ಸಿಂಗನಹಳ್ಳಿ ಗ್ರಾಮ ಪಂಚಾಯಿತಿಯ ವೆಂಗಮ್ಮನಹಳ್ಳಿ ಗ್ರಾಮದಲ್ಲಿ ಸ್ಥಳ ಪರಿಶೀಲನೆ ನಡೆಸಿದರು. ಆರ್ ಟಿಐ ಕಾರ್ಯಕರ್ತ ಗಂಗಾಧರ್ ನೀಡಿರುವ ದೂರಿನಲ್ಲಿ ಹಳೆಯ ಬಾವಿ ಮತ್ತು ಹಳೆಯ ದನದ ಕೊಟ್ಟಿಗೆಗಳನ್ನು ತೋರಿಸಿ ನರೇಗಾ ಯೋಜನೆಯಡಿ ಕಾಮಗಾರಿಗೆ ಮುನ್ನವೇ ಹಣ ಡ್ರಾ ಮಾಡಲಾಗಿದ್ದು ಕೃಷಿ ಹೊಂಡ ನಿರ್ಮಾಣವನ್ನು ಹಳೆಯ ಬಾವಿಯನ್ನು ತೋರಿಸಲಾಗಿದೆ ,ಹಳೆಯ ಗುಡಿಸಲಿನ ಶೀಟಿನ ಮನೆ ಗಳನ್ನು ತೋರಿಸಿ ದನದ ಕೊಟ್ಟಿಗೆ ಎಂದು ಹೇಳಿ ಹಳೆ ಶೆಡ್ ಗಳನ್ನು ತೋರಿಸಿ ಬಿಲ್ ಪಡೆಯಲಾಗಿದೆ ಎಂದು ಆರೋಪಿಸಿದ್ದರು . ಸರ್ವೆ ನಂಬರ್ 5/6ರಲ್ಲಿ ಹಳೆಬಾವಿ ಯನ್ನು ಕೃಷಿ ಹೊಂಡ ಎನ್ನಲಾಗಿದ್ದು 13/4 ರಲ್ಲಿ ನೂತನವಾಗಿ ಕೃಷಿಹೊಂಡ ನಿರ್ಮಿಸಿ ಕೊಡಲಾಗಿದೆ ಮತ್ತು ದನದ ಕೊಟ್ಟಿಗೆ ನಿರ್ಮಾಣ ಸ್ಥಳಗಳಿಗೆ ಓಂಬುಡ್ಸ್ ಮನ್ ವೆಂಕಟೇಶ್ವರ…
ತುಮಕೂರು : ನಗರಪಾಲಿಕೆ ಗೆ ನೇಮಕಗೊಂಡಿರುವ ನಾಮಿನಿ ಸದಸ್ಯರು ತಮ್ಮ ಇತಿಮಿತಿಯೊಳಗೆ ಸಾಧ್ಯವಾದಷ್ಟು ಮಟ್ಟಿಗೆ ಜನರ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸಲಿ ಎಂದು ತುಮಕೂರು ನಗರ ಶಾಸಕ ಜಿ.ಬಿ.ಜೋತಿಗಣೇಶ್ ಸಲಹೆ ನೀಡಿದ್ದಾರೆ. ನಗರದ ವಿಘ್ನೇಶ್ವರ ಕಂಪರ್ಟ್‍ನಲ್ಲಿ ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟ ನಗರಪಾಲಿಕೆ ಯ ನೂತನ ನ್ಯಾಮಿನಿ ಸದಸ್ಯರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡುತಿದ್ದ ಅವರು, ನಗರದಲ್ಲಿ ಕಸವಿಲೇವಾರಿ , ರಾಜಗಾಲುವೆಗಳ ಒತ್ತುವರಿ ತೆರವು,ಈ ಹಿಂದೆ ನಡೆದಿರುವ ಅಕ್ರಮ ಖಾತೆಗಳ ಕುರಿತು ಮಾಹಿತಿ ಕಲೆ ಹಾಕಿ, ಜನರ ಮುಂದಿಡುವ ಕೆಲಸವನ್ನು ನಾಮಿನಿ ಸದಸ್ಯರು ಅದ್ಯತೆಯ ಮೇರೆಗೆ ಕೈಗೆತ್ತಿಕೊಳ್ಳಬೇಕೆಂದರು. ಕೇಂದ್ರ ಸರಕಾರ ಇಡೀ ದೇಶದಲ್ಲಿಯೇ ವಿದ್ಯುತ್ ಉಳಿತಾಯದ ಹಿನ್ನೆಲೆಯಲ್ಲಿ ಬೀದಿ ದೀಪಗಳಿಗೆ ಎಲ್.ಇ.ಡಿ ಬಲ್ಪ್ ಅಳವಡಿಕೆ ಮಾಡಲಾಗುತ್ತಿದೆ. ಸ್ಮಾರ್ಟ್ ಸಿಟಿ ಅನುದಾನ ದಲ್ಲಿ ಕಂಭ ಮತ್ತು ಲೈನ್ ಎಳೆದಿರುವ ಕಡೆ ಎಲ್ ಇ ಡಿ ಬಲ್ಪ್ ಅಳವಡಿಸಲು ಟೆಂಡರ್ ನೀಡಿದೆ.…
ತುಮಕೂರು: ಪುರುಷ ಸಂತಾನನಿರೋಧ ಶಸ್ತ್ರಚಿಕಿತ್ಸೆಯು ಸರಳ ಹಾಗೂ ಸುರಕ್ಷಿತ ವಿಧಾನವಾಗಿದ್ದು, ಯಾವುದೇ ಭಯವಿಲ್ಲದೆ ಪುರುಷರು ಈ ಶಸ್ತ್ರಚಿಕಿತ್ಸೆಗೆ ಒಳಗಾಗಬಹುದೆಂದು ಕುಟುಂಬ ಕಲ್ಯಾಣಾಧಿಕಾರಿ ಡಾ: ಮಹಿಮ ತಿಳಿಸಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆರೋಗ್ಯ ಇಲಾಖೆ, ಜಿಲ್ಲಾಸ್ಪತ್ರೆಯ ಸಹಯೋಗದಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿಗಳ ಕಛೇರಿಯಲ್ಲಿಂದು ಹಮ್ಮಿಕೊಂಡಿದ್ದ ಎನ್‍ಎಸ್‍ವಿ(ನೋಸ್ಕಾಲ್‍ಪೆಲ್ ವ್ಯಾಸೆಕ್ಟಮಿ) ಪಾಕ್ಷಿಕ ಆಚರಣೆ(ನವೆಂಬರ್ 21ರಿಂದ ಡಿಸೆಂಬರ್ 4) ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮಹಿಳೆಯು ಗರ್ಭಧಾರಣೆ, ಹೆರಿಗೆ, ಬಾಣಂತನಗಳಿಂದ ಈಗಾಗಲೇ ನೋವು ಅನುಭವಿಸಿರುತ್ತಾಳೆ. ಮತ್ತೊಮ್ಮೆ ಉದರದರ್ಶಕ/ಟುಬೆಕ್ಟಮಿ ಶಸ್ತ್ರಚಿಕಿತ್ಸೆಗೆ ಒಳಗಾಗುವುದನ್ನು ತಪ್ಪಿಸಲು ವ್ಯಾಸೆಕ್ಟಮಿ ಸುಲಭೋಪಾಯವಾಗಿದೆ ಎಂದರು. ಕುಟುಂಬ ಯೋಜನೆಗಾಗಿ ಮಹಿಳೆಯರು ಒಳಗಾಗುವ ಟುಬೆಕ್ಟಮಿ ಶಸ್ತ್ರಚಿಕಿತ್ಸೆಯಲ್ಲಿ ಉದರವನ್ನು ಗಾಯಗೊಳಿಸಿ ಹೊಲಿಗೆ ಹಾಕಲೇಬೇಕಾಗುತ್ತದೆ. ಆದರೆ ಪುರುಷರು ಒಳಗಾಗುವ ವ್ಯಾಸಕ್ಟಮಿಯಲ್ಲಿ ಗಾಯವಿಲ್ಲದ ಹೊಲಿಗೆ ಇಲ್ಲದ ಸಂತಾನನಿರೋಧ ಶಸ್ತ್ರಚಿಕಿತ್ಸೆಯನ್ನು ಮಾಡಬಹುದಾಗಿದೆ. ಅರಿವಿನ ಕೊರತೆ ಇರುವುದರಿಂದ ಈ ಶಸ್ತ್ರ ಚಿಕಿತ್ಸೆಗೆ ಒಳಗಾಗಲು ಪುರುಷರು ಮುಂದೆ ಬರುತ್ತಿಲ್ಲ. ಸಂತಾನ ನಿಯಂತ್ರಿಸಲು ಪುರುಷರಿಗೆ ಮಾಡುವ ಎನ್‍ಎಸ್‍ವಿ…
ಕೊರಟಗೆರೆ: ಬೆಂಗಳೂರಿನ ರಿಯಲ್ ಎಸ್ಟೇಟ್ ಮಾಫೀಯಾದ ಏಜೆಂಟ್‍ಗಳಿಗೆ ಕೊರಟಗೆರೆ ಕ್ಷೇತ್ರದ ಕಂದಾಯ ಮತ್ತು ಪೊಲೀಸ್ ಇಲಾಖೆಯ ಅಧಿಕಾರಿವರ್ಗ ಹಣದ ದುರಾಸೆಯಿಂದ ಸಹಕಾರದ ಜೊತೆ ಪರೋಕ್ಷವಾಗಿ ಬೆಂಬಲಿಸಿ ಸ್ಥಳೀಯ ರೈತರ ಮೇಲೆ ವಿನಾಕಾರಣ ದಬ್ಬಾಳಿಕೆ ಮಾಡುತ್ತೀದ್ದಾರೆ ಎಂದು ರೈತಸಂಘದ ಜಿಲ್ಲಾಧ್ಯಕ್ಷ ಆನಂದಪಟೇಲ್ ಆರೋಪ ಮಾಡಿದರು. ತಾಲೂಕಿನ ಹೊಳವನಹಳ್ಳಿ ಹೋಬಳಿ ಬಿ.ಡಿ.ಪುರ ಗ್ರಾಪಂ ವ್ಯಾಪ್ತಿಯ ಅಕ್ಕಾಜಿಹಳ್ಳಿ ಗ್ರಾಮದ ದಾಳಿನರಸಿಂಹ ಮತ್ತು ಕಾಮಯ್ಯ ಎಂಬ ರೈತರ ಸರ್ವೆ ನಂ.33ರ ಜಮೀನಿಗೆ ಕೊರಟಗೆರೆ ಘಟಕದ ಕರ್ನಾಟಕ ರಾಜ್ಯ ರೈತಸಂಘ ಮತ್ತು ಹಸಿರುಸೇನೆಯ ಜೊತೆ ಸೋಮವಾರ ಬೇಟಿ ನೀಡಿದ ವೇಳೆ ಮಾತನಾಡಿದರು. 30ವರ್ಷದಿಂದ ಉಳು ಮೆ ಮಾಡು ತ್ತಿರುವ ಸ್ಥಳೀ ಯ ರೈತರಿಗೆ ಅನ್ಯಾಯ ಮಾಡಿ ಬೆಂಗಳೂರಿನ ಒಂದೇ ಕುಟುಂಬದ 4ಜನ ರೀಯಲ್ ಎಸ್ಟೇಟ್ ಉದ್ಯಮಿಗಳಿಗೆ ಕೊರಟಗೆರೆ ಆಡಳಿತ 8ಎಕರೇ ಜಮೀನು ಮಾರಾಟ ಮಾಡಿದೆ. ಜಮೀನಿನ ದಾಖಲೆ ಕೇಳಿದರೇ ಹಾರಿಕೆ ಉತ್ತರ ನೀಡುತ್ತಾರೆ. ನಕಲಿ ಸಾಗುವಳಿ…
ತುಮಕೂರು : ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯು ಬಹು ಆಯಾಮಗಳನ್ನು ಹೊಂದಿದ್ದು ಶಿಕ್ಷಣ ಕ್ಷೇತ್ರದಲ್ಲಿ ಹೊಸ ಯುಗವೊಂದನ್ನು ಆರಂಭಿಸಲಿದೆ. ಅದು ವಿದ್ಯಾರ್ಥಿಗಳ ಕೌಶಲಾಭಿವೃದ್ಧಿಗೆ ಹೆಚ್ಚಿನ ಒತ್ತನ್ನು ನೀಡಲಿದೆ ಎಂದು ಶಿಕ್ಷಣ ತಜ್ಞ ಡಾ. ಗುರುರಾಜ ಕರಜಗಿ ತಿಳಿಸಿದರು. ಶ್ರೀ ಸಿದ್ಧಗಂಗಾ ಸಂಜೆ ಕಾಲೇಜು ಹಾಗೂ ಆಕ್ಟ್-ಟ್ಯಾಕಲ್ ಎಜುಕೇಶನಲ್ ಸೆಂಟರ್ ಜಂಟಿಯಾಗಿ ಏರ್ಪಡಿಸಿದ್ದ `ಹೊಸ ಶಿಕ್ಷಣ ನೀತಿಯ ಸಾಧ್ಯಾಸಾಧ್ಯತೆಗಳು’ ಕುರಿತ ಎರಡು ದಿನಗಳ ವೆಬಿನಾರ್ ಅನ್ನು ಉದ್ಘಾಟಿಸಿ ಮಾತನಾಡಿದರು. ಹೊಸ ಶಿಕ್ಷಣ ನೀತಿಯು ಆರನೇ ತರಗತಿಯಿಂದಲೇ ವಿದ್ಯಾರ್ಥಿಗಳ ಕೌಶಲವನ್ನು ಅಭಿವೃದ್ಧಿಪಡಿಸಲು ವಿಶೇಷ ಕ್ರಮಗಳನ್ನು ಸೂಚಿಸಿದೆ. ವಿದ್ಯಾರ್ಥಿ ಒಂಭತ್ತನೇ ತರಗತಿ ತಲುಪಿದಾಗಲೇ ತನಗೆ ಬೇಕಾದ ವಿಷಯವನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶವನ್ನು ನೀಡಲಾಗಿದೆ. ಇದೊಂದು ಮಹತ್ವದ ಹೆಜ್ಜೆ ಎಂದರು. ಹೊಸ ಶಿಕ್ಷಣ ನೀತಿಯು ಮೂರು ವರ್ಷದ ಪೂರ್ವ ಪ್ರಾಥಮಿಕ ಹಾಗೂ ಒಂದನೇ ಮತ್ತು ಎರಡನೇ ತರಗತಿಗಳನ್ನು ಒಟ್ಟಾಗಿ ತಳಹದಿ…
ತುಮಕೂರು: ನಾಗರಹಾವೊಂದು ಕೊಳಕ ಮಂಡಲ ಹಾವನ್ನು ನುಂಗಿರುವ ಘಟನೆ ತಾಲ್ಲೂಕಿನ ತಿಮ್ಮಲಾಪುರದಲ್ಲಿ ನಡೆದಿದೆ. ತಾಲ್ಲೂಕಿನ ತಿಮ್ಮಲಾಪುರದ ಲಿಂಗರಾಜು ಎಂಬುವರ ಇಟ್ಟಿಗೆ ಗೂಡಿನಲ್ಲಿದ್ದ ಸುಮಾರು 4 ವರ್ಷದ 6 ಅಡಿ ಉದ್ದದ ನಾಗರಹಾವು 4 ಅಡಿ ಉದ್ದದ ಕೊಳಕ ಮಡಲ ಹಾವನ್ನು ನುಂಗಿದೆ. ಹಾವುಗಳನ್ನು ನೋಡಿದ ಇಟ್ಟಿಗೆ ಗೂಡಿನ ಮಾಲೀಕರಾದ ಲಿಂಗರಾಜು ಉರಗ ತಜ್ಞ ಸ್ನೇಕ್ ದಿಲೀಪ್ ರವರಿಗೆ ದೂರವಾಣಿ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಧಾವಿಸಿದ ಸ್ನೇಕ್ ದಿಲೀಪ್ ಹಾವನ್ನು ಹಿಡಿದು ದೇವರಾಯನದುರ್ಗದ ಕಾಡಿಗೆ ಬಿಟ್ಟಿದ್ದಾರೆ. ಸಾರ್ವಜನಿಕರು ಹಾವುಗಳನ್ನು ಕಂಡರೆ ಅವುಗಳನ್ನು ಕೊಲ್ಲದೆ ಉರಗ ತಜ್ಞ ಸ್ನೇಕ್ ದಿಲೀಪ್ ರವರಿಗೆ ಕರೆ ಮಾಡಿದರೆ ಅವರು ಹಾವುಗಳನ್ನು ಹಿಡಿದು ರಕ್ಷಿಸಿ, ಅರಣ್ಯಕ್ಕೆ ಬಿಡುವ ಕೆಲಸ ಮಾಡುತ್ತಾರೆ. ದಿಲೀಪ್ ರವರ ಮೊ:9916790692.
ತುಮಕೂರು: ರಾಜ್ಯದಲ್ಲಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕಾಲೇಜುಗಳನ್ನು ಆರಂಭಿಸಿದ್ದು, ಇನ್ನು ಮುಂದೆ ಕೊರೊನಾ ಪಾಸ್ ಮಾಡಲು ಅವಕಾಶ ಇಲ್ಲ ಎಂದು ಉನ್ನತ ಶಿಕ್ಷಣ ಸಚಿವ ಹಾಗೂ ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥ್‍ನಾರಾಯಣ ಇಂದಿಲ್ಲಿ ಸ್ಪಷ್ಟಪಡಿಸಿದರು. ಇದುವರೆವಿಗೂ ಕಾಲೇಜುಗಳಲ್ಲಿ ಆನ್‍ಲೈನ್ ತರಗತಿಗಳು ಮಾತ್ರ ನಡೆಯುತ್ತಿದ್ದವು. ಆದರೆ, ವಿದ್ಯಾರ್ಥಿಗಳ ಹಿತವನ್ನು ಗಮನದಲ್ಲಿಟ್ಟುಕೊಂಡು ಕಾಲೇಜುಗಳನ್ನು ಆರಂಭಿಸಿರುವುದರಿಂದ ಆಫ್ ಲೈನ್ ತರಗತಿಗಳು ನಡೆಯುತ್ತಿವೆ. ಯಾವುದೇ ಒತ್ತಡ ಇಲ್ಲದೆ ಸ್ವ ಇಚ್ಛೆಯಿಂದ ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗಬಹುದಾಗಿದೆ ಎಂದರು. ವಿದ್ಯಾರ್ಥಿ ಜೀವನ ಕಲಿಕೆಗೆ ಮೀಸಲಾಗಿರಬೇಕು. ಹಾಗಾಗಿ ವಿದ್ಯಾರ್ಥಿಗಳು ಬೇರೆ ವಿಚಾರಗಳ ಬಗ್ಗೆ ಗಮನ ಕೊಡದೆ ಪರೀಕ್ಷೆಗಳನ್ನು ಬರೆಯುವ ನಿಟ್ಟಿನಲ್ಲಿ ಅಧ್ಯಯನಶೀಲರಾಗಬೇಕು ಎಂದು ಅವರು ಸಲಹೆ ಮಾಡಿದರು. ತುಮಕೂರು ವಿಶ್ವವಿದ್ಯಾಲಯದ ಪದವಿ ಕಾಲೇಜಿಗೆ ಭೇಟಿ ನೀಡಿ ತರಗತಿಗಳನ್ನು ವೀಕ್ಷಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪದವಿ ಕಾಲೇಜುಗಳಲ್ಲಿ ಇದುವರೆಗೂ ಶೇ. 9 ರಷ್ಟು ವಿದ್ಯಾರ್ಥಿಗಳ ಹಾಜರಾತಿ ಕಂಡು ಬರುತ್ತಿದ್ದು, ದಿನದಿಂದ ದಿನಕ್ಕೆ ವಿದ್ಯಾರ್ಥಿಗಳ ಹಾಜರಾತಿ ಹೆಚ್ಚಳವಾಗುತ್ತಿದೆ. ಎಲ್ಲ ಮುಂಜಾಗ್ರತಾ ಕ್ರಮ…











