ಚಿಕ್ಕನಾಯಕನಹಳ್ಳಿ: ಬಗರ್‍ಹುಕುಂ ಸಾಗುವಳಿಮಾಡಿಕೊಂಡು ಬಂದಿದ್ದ ಬಡರೈತರ ಜಮೀನಿಗೆ ನನ್ನದೆಂದು ಬಲಿತ ರೈತನೊಬ್ಬ ಜೆಸಿಬಿ ಬಳಸಿ ಮೂರುಮಂದಿ ರೈತರು ಬೆಳೆಸಿದ್ದ ಬೆಳೆಯನ್ನು ನಾಶಪಡಿಸಿದ ಘಟನೆ ತಾಲ್ಲೂಕಿನ ಶೆಟ್ಟಿಕೆರೆ ಹೋಬಳಿ ಅಜ್ಜೇನಹಳ್ಳಿಬಳಿ ನಡೆದಿದೆ. ತಾಲ್ಲೂಕಿನ ಶೆಟ್ಟಿಕೆರೆ ಹೋಬಳಿ ಅಜ್ಜೇನಹಳ್ಳಿ ಸಾಸಲು ನಡುವೆಯ ಜಮೀನಿನಲ್ಲಿ ಕಳೆದ 35-40ವರ್ಷದಿಂದ ಬಗರ್‍ಹುಕುಂ ಜಮೀನನ್ನು ಸಾಗುವಳಿ ಮಾಡಿಕೊಂಡು ಬಂದಿದ್ದ ರೈತರಾದ ಕಲ್ಲಪ್ಪನವರ ಮಗ ಪುಟ್ಟಯ್ಯ, ಕೃಷ್ಣಪ್ಪ ಹಾಗೂ ಭಜಂತ್ರಿ ವರ್ಗಕ್ಕೆ ಸೇರಿದ ಶಶಿಕಲಾ ಎಂಬ ಮೂವರ ಜಮೀನನ್ನು ಕಬಳಿಸುವ ಉದ್ದೇಶದಂತೆ ಎ.ಎಂ.ಲಿಂಗರಾಜು ಎಂಬುವನು ಜೆಸಿಬಿ ಮೂಲಕ ಬೆಳೆದುನಿಂತ ಹುರುಳಿ, ರಾಗಿ ಬೆಳೆಯನ್ನು ನಾಶಮಾಡಿದ್ದಾನೆ. ಇದರ ಜೊತೆಗೆ ತನ್ನದಲ್ಲದ ಬೇರೆ ಸರ್ವೆ ನಂಬರ್‍ಗಳಿಗೆ ಸೇರಿದ ಬದುಗಳನ್ನು ಸಹ ದೌರ್ಜನ್ಯದಿಂದ ಜೆಸಿಬಿ ಬಳಸಿ ಒತ್ತುವರಿ ಮಾಡಿದ್ದಾನೆ. ನಾನೂ ಸಹ ಖರಾಬು ಜಮೀನಿನಲ್ಲಿ ಸಾಗುವಳಿಮಾಡಿ ಐದುಎಕರೆಗೆ ಟಿಟಿ ಕಟ್ಟಿದ್ದೇನೆ ಎಂದು ಈ ಹಿಂದೆ ಸರ್ವೇಮಾಡಿ ಹಾಕಲಾಗಿದ ಹಳೆಯ ಬಾಂದ್‍ಕಲ್ಲುಗಳನ್ನು ಕಿತ್ತು ಅವನಿಗೆ ಬೇಕಾದಕಡೆ ನೆಟ್ಟಿದ್ದಾನೆ. ಎಂದು…
Author: News Desk Benkiyabale
ಮಧುಗಿರಿ: ರಾಜ್ಯದಲ್ಲಿ ತಲೆದೋರಿರುವ ಯೂರಿಯಾ ಹಾಗೂ ರಸಗೊಬ್ಬರದ ಸಮಸ್ಯೆಯನ್ನು ನಿವಾರಣೆ ಮಾಡಬೇಕೆಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ.ಸದಾನಂದ ಗೌಡ ಅವರಿಗೆ ರಾಷ್ಟ್ರೀಯ ಕ್ರಿಬ್ಕೋ ನಿರ್ದೇಶಕ ಆರ್.ರಾಜೇಂದ್ರ ಮನವಿ ಮಾಡಿದ್ದಾರೆ . ಅವರು ನವದೆಹಲಿಯಲ್ಲಿ ಕೇಂದ್ರ ಸಚಿವರನ್ನು ಭೇಟಿ ಮಾಡಿ, ರಾಜ್ಯದಲ್ಲಿ ಉತ್ತಮವಾಗಿ ಮಳೆಯಾಗುತ್ತಿದೆ. ರೈತರು ಇಟ್ಟಿರುವ ಬೆಳೆಗಳಿಗೆ ಯೂರಿಯಾ ಹಾಗೂ ರಸಗೊಬ್ಬರ ಕೊರತೆ ಕಂಡು ಬರುತ್ತಿರುವುದರಿಂದ ರೈತರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಕ್ರಿಬ್ಕೋಗೆ ಅಗತ್ಯವಿರುವ 15 ಸಾವಿರ ಟನ್ ಯೂರಿಯಾ ಮತ್ತು ರಸಗೊಬ್ಬರ ಸರಬರಾಜು ಮಾಡಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ. ಸಮಸ್ಯೆಯ ಬಗ್ಗೆ ಪ್ರತಿಕ್ರಿಯಿಸಿದ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ.ಸದಾನಂದ ಗೌಡರವರು ರಾಜ್ಯಕ್ಕೆ ಅಗತ್ಯವಿರುವ ರಸ ಗೊಬ್ಬರವನ್ನು ಪೂರೈಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಹಾಗೂ ರೈತರ ಬೆಳೆಗಳಿಗೆ ಉಂಟಾಗಿರುವ ಸಮಸ್ಯೆಯನ್ನು ಶೀಘ್ರವಾಗಿ ಪರಿಹರಿಸುವ ಭರವಸೆ ನೀಡಿದ್ದು, ಮನವಿಗೆ ಸಕಾರಾತ್ಮಕವಾಗಿ…
ಹುಳಿಯಾರು: 19 ಕೋಟಿ ರೂ. ವೆಚ್ಚದಲ್ಲಿ ನಡೆಯುತ್ತಿರುವ ಹುಳಿ ಯಾರು ಅಣೇಕಟ್ಟೆ ರಸ್ತೆ ಕಾಮಗಾರಿಯು ತೀರ ಕಳಪೆಯಿಂದ ಕೂಡಿದ್ದು ಅತ್ತ ಡಾಂಬಾರ್ ಹಾಕಿಕೊಂಡು ಹೋಗುತ್ತಿದ್ದರೆ ಇತ್ತ ಕಿತ್ತೋಗುತ್ತಿದೆ ಎಂದು ಆರೋಪಿಸಿ ಸಾರ್ವ ಜನಿಕರು ಸಿಡಿದೆ ದ್ದು ಗುತ್ತಿಗೆದಾರನಿಗೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡು ಕಾಮಗಾರಿ ಸ್ಥಗಿತಗೊಳಿಸಿದ ಘಟನೆ ಹುಳಿಯಾರಿನಲ್ಲಿ ಶುಕ್ರವಾರ ನಡೆಯಿತು. ಹುಳಿಯಾರು ಅಣೇಕಟ್ಟೆ ರಸ್ತೆಯನ್ನು ಮೇಲ್ದರ್ಜೆಗೇರಿಸಿ 19 ಕೋಟಿ ರೂ. ವೆಚ್ಚದಲ್ಲಿ ಡಾಂಬಾರಿಕರಣ ಮಾಡಲಾಗುತ್ತಿದೆ. ಆದರೆ ಹಳೆಯ ಡಾಂಬಾರ್ ಕೀಳದೆ ಅದರ ಮೇಲೆಯೇ ಹೊಸ ಡಾಂಬಾರ್ ಹಾಕಲಾಗುತ್ತಿದೆ. ಪರಿಣಾಮ ಡಾಂಬಾರ್ ಹಾಕಿದ ಮರುಕ್ಷಣವೇ ಜಲ್ಲಿ ಕಲ್ಲುಗಳು ಮೇಲೇಳುತ್ತಿದೆಯಲ್ಲದೆ ರಸ್ತೆಯ ಅಂಚಿನಲ್ಲಿ ಕಿತ್ತೋಗುತ್ತಿದೆ ಎಂಬುದು ಸಾರ್ವಜನಿಕರ ಆರೋಪವಾಗಿತ್ತು. ಹಾಲಿ ರಸ್ತೆಯನ್ನು ಎರಡೂ ಕಡೆಯಲ್ಲೂ 1 ಮೀಟರ್ ಅಗಲೀಕರಣ ಸಹ ಮಾಡಬೇಕಿದೆಯಾದರೂ ಕೆಲವೆಡೆ ಅಗಲೀಕರಿಸಿ ಕೆಲವೆಡೆ ಕೈ ಬಿಟ್ಟಿದ್ದಾರೆ. ಅಲ್ಲದೆ ಹುಳಿಯಾರು ಪಟ್ಟಣದಲ್ಲಿ ತೀರ ಕಳಪೆಯ ಚರಂಡಿ ಕಾಮಗಾರಿ ಮಾಡಿದ್ದು ಕ್ಯೂರಿಂಗ್ ಮಾಡದೆ…
ಕೊರಟಗೆರೆ: ಗ್ರಾಮೀಣ ಪ್ರದೇಶದ ಬಡಜನತೆ ಮತ್ತು ರೈತಾಪಿವರ್ಗ ತುರ್ತು ಕೆಲಸಗಳೇ ಇಲ್ಲಿ ವಿಳಂಬ. ಮಧ್ಯವರ್ತಿ ದಳ್ಳಾಳಿಗಳ ಹಾವಳಿಯಿಂದ ತುಂಬಿ ತುಳುಕುತ್ತೀದೆ ಹೊಳವನಹಳ್ಳಿ ನಾಡಕಚೇರಿ.. ರ್ಯಾಂಕಿಂಗ್‍ನಲ್ಲಿ ಕಲ್ಪತರು ನಾಡಿಗೆ ಪ್ರಥಮ ಸ್ಥಾನದಲ್ಲಿದ್ದ ನಾಡಕಚೇರಿ ಈಗ 10 ಸ್ಥಾನಕ್ಕೆ ಇಳಿದಿದೆ. ತುಮಕೂರು ಜಿಲ್ಲಾಧಿಕಾರಿ ಮತ್ತು ಕೊರಟಗೆರೆ ತಹಶೀಲ್ದಾರ್ ನಾಡಕಚೇರಿಗೆ ತುರ್ತು ಸರ್ಜರಿ ಮಾಡಬೇಕಾದ ಅನಿವಾರ್ಯತೆ ಇದೆ. ಕೊರಟಗೆರೆ ತಾಲೂಕಿನ ಹೊಳವನಹಳ್ಳಿ ಹೋಬಳಿ ಕೇಂದ್ರದ ನಾಡಕಚೇರಿ ಉಪತಹಶೀಲ್ದಾರ್ ಶಿವಕುಮಾರ್ ಕಾಲಘಟ್ಟದಲ್ಲಿ ತುಮಕೂರು ಜಿಲ್ಲೆಗೆ ಸತತ ಎರಡು ವರ್ಷಗಳ ಕಾಲ ಪ್ರಥಮ ಸ್ಥಾನದಲ್ಲಿದ್ದ ನಾಡಕಚೇರಿ ಖಾಯಂ ಉಪತಹಸೀಲ್ದಾರ್ ಇಲ್ಲದೇ ಈಗ 10ನೇ ಸ್ಥಾನಕ್ಕೆ ತಲುಪಿದ್ದು ಪ್ರತಿನಿತ್ಯ ಸಮಸ್ಯೆಗಳ ಆಗರವಾಗಿ ಬಡಜನತೆ ಮತ್ತು ರೈತಾಪಿವರ್ಗದ ಕೆಲಸ ಕಾರ್ಯಗಳು ಸಕಾಲದಲ್ಲಿ ನಡೆಯದೇ ವಿಳಂಬವಾಗಿದೆ. ಹೊಳವನಹಳ್ಳಿ ನಾಡಕಚೇರಿ ವ್ಯಾಪ್ತಿಯ 8ಗ್ರಾಪಂಯಲ್ಲಿ ಕಂದಾಯ ಮತ್ತು ಮಜರೆ ಸೇರಿ 48 ಗ್ರಾಮಗಳಿವೆ. ಕೇಂದ್ರ ಮತ್ತು ರಾಜ್ಯ ಸರಕಾರದ ಆದೇಶ ಮಾಡಿದಂತೆ 43ಯೋಜನೆಗಳ ಮಾಹಿತಿಯೇ…
ಹುಳಿಯಾರು : ಹುಳಿಯಾರು ಸಮೀಪದ ಗೋಪಾಲಪುರದ ಗ್ರಾಮದ ಬಳಿ ಚಿರತೆಯೊಂದು ಆಗಾಗ ಕುರಿಗಳ ಮೇಲೆ ದಾಳಿ ನಡೆಸುತ್ತಿರುವುದು ಈ ಭಾಗದ ಜನರಲ್ಲಿ ಭಯದ ವಾತಾವರಣ ಸೃಷ್ಟಿಸಿದ್ದು, ಚಿರತೆಯನ್ನು ಸೆರೆ ಹಿಡಿಯುಲು ಅರಣ್ಯ ಇಲಾಖೆ ಮುಂದಾಗುವಂತೆ ಸಾರ್ವಜನಿಕರು ಮನವಿ ಮಾಡಿದ್ದಾರೆ. ಗೋಪಾಲಪುರದ ಈಶ್ವರನಗುಡಿ ಬಳಿಯ ಕೆರ ಹತ್ತಿರದ ಗದ್ದೆ ಬಯಲಿನಲ್ಲಿ ನರುಗಲ್ಲು ಗೊಲ್ಲರಹಟ್ಟಿ, ಗೋಪಾಲಪುರ ಸೇರಿದಂತೆ ಅಕ್ಕಪಕ್ಕದ ಹಳ್ಳಿಗಳ ಕುರಿಗಾರರು ತಮ್ಮ ನೂರಾರು ಕುರಿಗಳನ್ನು ಮೇಯಿಸಲು ಬರುತ್ತಾರೆ. ಸುಮಾರು ವರ್ಷಗಳಿಂದ ನೆಮ್ಮದಿಯಿಂದ ಕುರಿ ಮೇಯಿಸುತ್ತಿದ್ದ ಕುರಿಗಾರರಿಗೆ ಹದಿನೈದಿಪ್ಪತ್ತು ದಿನಗಳಿಂದ ಚಿರತೆಯೊಂದು ಆಗಾಗಾ ಪ್ರತ್ಯಕ್ಷವಾಗಿ ನೆಮ್ಮದಿ ಕೆಡಿಸಿದೆ. ಈಗಾಗಲೇ ಹತ್ತನ್ನೆರಡು ಕುರಿಗಳನ್ನು ಚಿರತೆ ಕಡಿದಿದ್ದು ಕುರಿಗಾರರ ಹೆದರಿಸಿ ಓಡಿಸಿದ ಪರಿಣಾಮ ಕುರಿಗಳು ಪ್ರಾಣಾಪಾಯದಿಂದ ಪಾರಾಗಿವೆ. ಪರಿಣಾಮ ಈ ಗದ್ದೆ ಬಯಲಿಗೆ ಕುರಿ ಮೇಯಿಸಲು ಬರಲು ಕುರಿಗಾರರು ಹೆದರುತ್ತಿದ್ದಾರೆ. ಚಿರತೆ ಇಲ್ಲೇ ಓಡಾಡಿಕೊಂಡಿರುವುದರಿಂದ ರಾತ್ರಿ ಸಮಯದಲ್ಲಿ ಜನ ಮನೆಯಿಂದ ಹೊರಬರಲು ಭಯಪಡುತ್ತಿದ್ದಾರೆ. ಗದ್ದೆ…
ತುಮಕೂರು: ಅಹೋರಾತ್ರಿ ಧರಣಿಯಲ್ಲಿ ಜೆಸಿಬಿ ವೆಂಕಟೇಶ್ , ರಾಮಯ್ಯ, ಮೋಹನ್ ಪರಮೇಶ್, ಶಿವರಾಜು, ಬಂಡೆ ಕುಮಾರ ಸದಾಶಿವ ಆಯೋಗದ ವರದಿ ಯಥಾವತ್ತಾಗಿ ಜಾರಿಗಾಗಿ ಒತ್ತಾಯಿಸಿ ಅಹೋರಾತ್ರಿ ಧರಣಿ ಮೂರನೇ ದಿನಕ್ಕೆ. ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿಯನ್ನು ಯಥಾವತ್ ಜಾರಿಗೊಳಿಸುವಂತೆ ಒತ್ತಾಯಿಸಿ ನಗರದಲ್ಲಿ ದಲಿತಪರ ಸಂಘಟನೆಗಳು ನಡೆಸುತ್ತಿರುವ ಅಹೋರಾತ್ರ ಧರಣಿ ಇಂದಿಗೆ ಮೂರನೇ ದಿನಕ್ಕೆ ಕಾಲಿಟ್ಟಿತು. ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದ ದಲಿತಪರ ಸಂಘಟನೆಯ ಮುಖಂಡ ಹಾಗೂ ಕಾಂಗ್ರೆಸ್ ನಾಯಕ ವಾಲೆ ಚಂದ್ರಯ್ಯ ಶತಶತಮಾನಗಳಿಂದ ದಲಿತರು ಹಾಗೂ ಹಿಂದುಳಿದ ಜನಾಂಗ ತುಳಿತಕ್ಕೊಳಗಾಗಿದ್ದು, ಅವರಿಗೆ ನ್ಯಾಯ ಒದಗಿಸಬೇಕಾದದ್ದು ಸರ್ಕಾರದ ಆದ್ಯ ಕರ್ತವ್ಯವಾಗಿದೆ ಸದಾಶಿವ ಆಯೋಗ ತನ್ನ ವರದಿಯನ್ನು ಸಲ್ಲಿಸಿ ಎಂಟು ವರ್ಷಗಳಾದರೂ ಯಾವುದೇ ಸರ್ಕಾರಗಳು ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡಿ ಅವರಿಗೆ ನೀಡಬೇಕಾದ ಸೌಲಭ್ಯ ನೀಡಿಲ್ಲ ಆದ್ದರಿಂದ ಕೂಡಲೇ ಎಲ್ಲ ಜನಪ್ರತಿನಿಧಿಗಳು ಸರ್ಕಾರದ ಮೇಲೆ ಒತ್ತಡ ತಂದು ಸದಾಶಿವ ಆಯೋಗದ ವರದಿಯನ್ನು ಯಥಾವತ್ತಾಗಿ ಜಾರಿಗೆ ತರಬೇಕೆಂದು ಒತ್ತಾಯಿಸಿದರು…
ತುಮಕೂರು: ಸರ್ಕಾರಿ ಆಸ್ಪತ್ರೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ, ಜಿಲ್ಲಾಸ್ಪತ್ರೆಯ ಮುಂಭಾಗ ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಸಂಘದ ವತಿಯಿಂದ ಅನಿರ್ದಿಷ್ಟಾವಧಿ ಮುಷ್ಕರ ಹಮ್ಮಿಕೊಳ್ಳಲಾಗಿದೆ. ರಾಜ್ಯ ಸರ್ಕಾರದ ಆರೋಗ್ಯ ಕ್ಷೇತ್ರದ ಬಜೆಟ್ ಶೇಕಡವಾರು ಹೆಚ್ಚಿಸಬೇಕು ಮತ್ತು ಈ ಕ್ಷೇತ್ರಕ್ಕೆ ಪ್ರಾಮುಖ್ಯತೆ ನೀಡುವ ಜೊತೆಗೆ ಅಗತ್ಯವಿರುವ ನೆರವನ್ನು ಕೇಂದ್ರ ಸರ್ಕಾರವು ನೀಡಬೇಕು, ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಅಭಿವೃದ್ಧಿಗೆ ಆದ್ಯತೆ ನೀಡಲು ಕ್ರಮವಹಿಸಬೇಕು, ಗುತ್ತಿಗೆ ಹೊರಗುತ್ತಿಗೆ ನೌಕರರಿಗೆ ಸೇವಾ ಭದ್ರತೆಯನ್ನು ಒದಗಿಸಿ, ಕಾಯಂಗೊಳಿಸಬೇಕು. ಎಲ್ಲಾ ಹುದ್ದೆಗಳಿಗೆ ವೇತನ ಭತ್ಯೆಗಳು ಮತ್ತು ವೇತನ ಶ್ರೇಣಿಯನ್ನು ನೀಡಿ, ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು ಎಂದು ಆಗ್ರಹಿಸಿದರು. ಹರಿಯಾಣ ಮಾದರಿಯಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆಯು ಜಾರಿ ಮಾಡಿರುವ ಏಕರೂಪ ವೇತನದ…
ಗುಬ್ಬಿ: ದೇವಾಲಯದ ಬಾಗಿಲು ಮುರಿದು ಹುಂಡಿ ಹಣವನ್ನು ದೋಚಿದ ಕಳವು ಪ್ರಕರಣ ತಾಲ್ಲೂಕಿನ ಕಸಬ ಹೋಬಳಿ ಮಡೇನಹಳ್ಳಿ ಗ್ರಾಮದ ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ನಡೆದಿದೆ. ಗ್ರಾಮದ ಆರಾಧ್ಯ ದೈವ ಮಹಾಲಿಂಗೇಶ್ವರ ದೇವಾಲಯದಲ್ಲಿ ಅಲವಡಿಸಲಾದ ಹುಂಡಿಯಲ್ಲಿನ ಹಣ ಮಾತ್ರ ದೋಚಲಾಗಿದೆ. ಸುಮಾರು 30 ಸಾವಿರ ರೂಗಳ ಅಂದಾಜು ದೇವಾಲಯ ಸಮಿತಿ ತಿಳಿಸುತ್ತಿದೆ. ಈ ಹಿಂದೆ ಕೂಡಾ ಹುಂಡಿ ಕಳವು ನಡೆದು ಅಂದಾಜು 50 ಸಾವಿರ ರೂ ದೋಚಲಾಗಿತ್ತು. ಎರಡು ಬಾರಿ ಕಳ್ಳತನದಲ್ಲೂ ದೇವಾಲಯದಲ್ಲಿರುವ ಇನ್ನಿತರ ಚಿನ್ನಾಭರಣ, ಬೆಳ್ಳಿ ಸಾಮಾಗ್ರಿಗಳ ಕಳ್ಳತನವಾಗಿಲ್ಲ. ಈ ಬಗ್ಗೆ ಸೂಕ್ಷ್ಮತೆ ಅರಿತು ಪೊಲೀಸರು ಚುರುಕಿನ ತೀವ್ರ ತನಿಖೆ ನಡೆಸಿ ಖದೀಮರನ್ನು ಬಂದಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಸ್ಥಳ ಮಹಜರು ನಡೆಸಿದ ಗುಬ್ಬಿ ಠಾಣಾ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಗುಬ್ಬಿ: ಅಡುಗೆ ಅನಿಲ ಸೋರಿಕೆಯಿಂದ ಹಬ್ಬಿದ ಬೆಂಕಿ ಕ್ಷಣಾರ್ಧದಲ್ಲಿ ಮನೆಯಲ್ಲಿನ ಗೃಹೋಪಯೋಗಿ ವಸ್ತುಗಳನ್ನು ಸುಟ್ಟು ಕರಕಲಾಗಿಸಿದ ಘಟನೆ ಮಂಗಳವಾರ ಪಟ್ಟಣದ ಸಿಡಿಲು ಬಸವೇಶ್ವರ ದೇವಾಲಯದ ಬಳಿ ನಡೆದಿದೆ. ಶಿಕ್ಷಕ ನಿಂಗಣ್ಣ ಅವರ ಮನೆಯಲ್ಲಿ ಬೆಳಿಗ್ಗೆ ಎಂದಿನಂತೆ ಅಡುಗೆ ಸಿದ್ದ ಪಡಿಸುತ್ತಿದ್ದ ಸಂದರ್ಭದಲ್ಲಿ ಸಿಲೆಂಡರ್ ಮೂಲಕ ಅನಿಲ ಸೋರಿಕೆಯಾಗಿ ಬೆಂಕಿ ಕೆನ್ನಾಲಿಗೆ ಅಡುಗೆಮನೆಯನ್ನು ಪಸರಿಸಿದೆ. ನಂತರ ಶಿಕ್ಷಕ ನಿಂಗಣ್ಣ ಸಿಲೆಂಡರ್ ಹೊರ ತರುವ ಪ್ರಯತ್ನ ಮಾಡಿದರೂ ಪ್ರಯೋಜನವಾಗಿಲ್ಲ. ಕ್ಷಣಾರ್ಧದಲ್ಲಿ ಮನೆಯ ಹೊರಾಂಡಕ್ಕೂ ಹಬ್ಬಿದ ಬೆಂಕಿಗೆ ಟಿವಿ, ಫ್ರಿಡ್ಜ್, ಬೀರು ಕೂಡಾ ಆಹುತಿಯಾಗಿದೆ. ಬೀರುವಿನಲ್ಲಿದ್ದ 10 ಸಾವಿರ ನಗದು ಹಣದ ಜತೆ ಬೆಲೆಬಾಳುವ ವಸ್ತ್ರಗಳು ಸುಟ್ಟು ಕರಕಲಾಗಿದೆ. ಶಿಕ್ಷಕ ನಿಂಗಣ್ಣ ಮತ್ತು ಪುತ್ರ ಇಬ್ಬರೇ ಮನೆಯಲ್ಲಿ ಅಡುಗೆ ಕೆಲಸಕ್ಕೆ ಮುಂದಾಗಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಸುಮಾರು 1.20 ಲಕ್ಷ ರೂಗಳ ನಷ್ಟ ಸಂಭವಿಸಿರುವ ಅಂದಾಜು ಮಾಡಲಾಗಿದೆ. ಅದೃಷ್ಟವಶಾತ್ ಸಿಲಿಂಡೆರ್ ಸ್ಫೋಟವಾಗಿಲ್ಲ.…
ತುಮಕೂರು: ಜಿಲ್ಲಾ ಪಂಚಾಯತ್ ಹಂತದಲ್ಲಿ ಬಗೆಹರಿಸಬಹುದಾದ ಬೇಡಿಕೆಗಳನ್ನು ಈಡೇರಿಸುವ ಭರವಸೆ ಹಿನ್ನೆಲೆಯಲ್ಲಿ ಸಿಐಟಿಯು ಸಂಯೋಜಿತ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನೌಕರರ ಸಂಘ ನೇತೃತ್ವದಲ್ಲಿ ನಗರದಲ್ಲಿ ನಡೆಯುತ್ತಿದ್ದ ಅಹೋರಾತ್ರಿ ಧರಣಿಯನ್ನು ಗ್ರಾಮ ಪಂಚಾಯತ್ ನೌಕರರು ಹಿಂತೆಗೆದುಕೊಂಡಿದ್ದಾರೆ. ಸೆಪ್ಟೆಂಬರ್ 22ರಿಂದ ಧರಣಿ ನಡೆಸುತ್ತಿದ್ದ ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ-2 ಗ್ರಾಮ ಪಂಚಾಯತ್ ನೌಕರರ ಮನವಿ ಸ್ವೀಕರಿಸಿದರು. ಬಳಿಕ ಮಾತನಾಡಿದ ಅವರು ಜಿಲ್ಲಾ ಪಂಚಾಯತ್ ಮಟ್ಟದಲ್ಲಿ ಈಡೇರಿಸಬಹುದಾದ ಬೇಡಿಕೆಗಳ ಸಂಬಂಧ ಸೆಪ್ಟೆಂಬರ್ 30ರಂದು ಸಭೆ ಕರೆಯುವುದಾಗಿ ತಿಳಿಸಿದರು. ಗ್ರಾಮ ಪಂಚಾಯ್ತಿ ನೌಕರರ ಬೇಡಿಕೆಗಳ ಸಂಬಂಧ ಎಲ್ಲಾ ತಾಲೂಕು ಪಂಚಾಯತ್ ಕಾರ್ಯನಿರ್ವಾಹ ಅಧಿಕಾರಿಗಳು ಕೂಡಲೇ ಮಾಹಿತಿಯನ್ನು ತಮಗೆ ರವಾನಿಸಬೇಕೆಂದು ಪತ್ರ ಬರೆಯಲಾಗಿದೆ ಎಂದು ಪತ್ರದ ಪ್ರತಿಯೊಂದನ್ನು ಸಂಘದ ಮುಖಂಡರಿಗೆ ನೀಡಿದರು. ಇದೇ ವೇಳೆ ಮಾತನಾಡಿ ಸಂಘದ ಜಿಲ್ಲಾಧ್ಯಕ್ಷ ಎನ್.ಕೆ.ಸುಬ್ರಮಣ್ಯ, ಇಎಫ್‍ಎಂಎಸ್ ಸೇರ್ಪಡೆ, ಉಪಧನ, ಬಾಕಿ ವೇತನ, ತೆರಿಗೆ ಸಂಗ್ರಹದಲ್ಲಿ 40ರಷ್ಟು…










