ತುಮಕೂರು: ಅನಾರೋಗ್ಯ ದಿಂದ ಬಳಲು ತ್ತಿದ್ದ ಮಹಾನಗರ ಪಾಲಿಕೆಯ ಮಾಜಿ ಮೇಯರ್ ಯಶೋಧಗಂಗಪ್ಪ (59) ಅವರು ನಿಧನರಾದರು. ಅನಾರೋಗ್ಯದಿಂದ ಬಳಲುತ್ತಿದ್ದ ಇವರನ್ನು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ. ಮೃತರು ಪತಿ ಗಂಗಪ್ಪ, ಇಬ್ಬರು ಗಂಡು ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಇಲ್ಲಿನ ಶಾಂತಿನಗರದ ವಾಸಿಯಾಗಿದ್ದ ಯಶೋಧ ಅವರು 2008 ರಲ್ಲಿ 18ನೇ ವಾರ್ಡ್‍ನಿಂದ ಸ್ಪರ್ಧಿಸಿ ಪಾಲಿಕೆ ಸದಸ್ಯರಾಗಿ ಆಯ್ಕೆಯಾಗಿದ್ದರು. 2009-10ರಲ್ಲಿ ತುಮ ಕೂರು ಮಹಾನಗರ ಪಾಲಿಕೆಗೆ ಮೇಯರ್ ಆಗಿ ಆಯ್ಕೆಯಾಗುವ ಮೊದಲ ಮಹಿಳಾ ಮೇಯರ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದರು. ಮಾಜಿ ಮೇಯರ್ ಯಶೋಧ ಗಂಗಪ್ಪ ಅವರ ನಿಧನಕ್ಕೆ ಪಾಲಿಕೆಯ ಮೇಯರ್ ಫರಿದಾಬೇಗಂ, ಉಪಮೇಯರ್, ಶಶಿಕಲಾ ಗಂಗಹನುಮಯ್ಯ, ಶಾಸಕ ಜ್ಯೋತಿಗಣೇಶ್, ಮಾಜಿ ಶಾಸಕ ಡಾ. ರಫೀಕ್‍ಅಹಮದ್ ಸೇರಿದಂತೆ ಪಾಲಿಕೆಯ ಹಾಲಿ ಮತ್ತು ಮಾಜಿ ಸದಸ್ಯರುಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
Author: News Desk Benkiyabale
ತುಮಕೂರು: ದೇಶದ ಬೆನ್ನೆಲುಬಾದ ರೈತರ ಬದುಕನ್ನು ಕೋವಿಡ್-19 ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಇಂತಹ ಸಂದರ್ಭದಲ್ಲಿ ಕೃಷಿ ಇಲಾಖೆಯು ರೈತರ ವಿವಿಧ ಸಮಸ್ಯೆಗಳನ್ನು ಬಗೆಹರಿಸಲು ಕ್ರಮ ಕೈಗೊಳ್ಳಬೇಕೆಂದು ಕಾಂಗ್ರೆಸ್ ಕಿಸಾನ್ ಘಟಕದ ವತಿಯಿಂದ ಕೆಪಿಸಿಸಿ ಮಾಧ್ಯಮ ವಿಶ್ಲೇಷಕರಾದ ಮುರಳೀಧರ ಹಾಲಪ್ಪರವರು, ಕೃಷಿ ಇಲಾಖೆ ಜಂಟಿ ನಿರ್ದೇಶಕರಿಗೆ ಮನವಿ ಸಲ್ಲಿಸಿದರು. ಕಾಂಗ್ರೆಸ್ ಮುಖಂಡರು ಹಾಗೂ ಜಿಲ್ಲೆಯ ರೈತರೊಂದಿಗೆ ನಿಯೋಗದಲ್ಲಿ ತೆರಳಿ ಮನವಿ ಸಲ್ಲಿಸಿದ ಮುರಳೀಧರ ಹಾಲಪ್ಪ ಅವರು, ಕೋವಿಡ್-19 ಮಹಾಮಾರಿ ರೈತರ ಬದುಕನ್ನು ಸಂಕಷ್ಟಕ್ಕೆ ಸಿಲುಕಿಸಿದ್ದು, ರೈತರ ಸ್ಥಿತಿ ಇಂದು ಚಿಂತಾಜನಕವಾಗಿದೆ. ರೈತರು ಸಾಲಸೋಲ ಮಾಡಿ ಬೋರ್‍ವೆಲ್ ಕೊರೆಸಿ ಹಣ್ಣು, ತರಕಾರಿ ಬೆಳೆದ ಬೆಳೆಗಾರರ ಬದುಕು ಅತಂತ್ರವಾಗಿದ್ದು, ನಿರೀಕ್ಷೆಯಷ್ಟು ಬೆಲೆ ಸಿಗದೇ ಕಂಗಾಲಾಗಿದ್ದಾರೆ. ಇಂತಹ ಸಮಯದಲ್ಲಿ ರೈತರನ್ನು ಇಲಾಖೆಗೆ ಅಲೆದಾಡಿಸದೆ ಸಮಸ್ಯೆ ನಿವಾರಿಸಬೇಕೆಂದರು ರೈತರಿಗೆ ಶೀಘ್ರ ಪರಿಹಾರ ಸಿಗಲಿ: ಫಸಲ್ ಬಿಮಾ ಯೋಜನೆಯಡಿಯಲ್ಲಿ ಇದುವರೆಗೂ ಎಷ್ಟು ರೈತರಿಗೆ ಪರಿಹಾರ ವಿತರಿಸಲಾಗಿದೆ. ಎಷ್ಟು ರೈತರು…
ತುಮಕೂರು: ನಗರದ ವಿವಿಧೆಡೆಗಳಲ್ಲಿ ಸರಕಾರ ನೀಡಿದ್ದ 25 ಕೋಟಿ ರೂ ವಿಶೇಷ ಅನುದಾನದಲ್ಲಿ ಸಿ.ಸಿ.ಚರಂಡಿ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿದ್ದು, ಕಾಮಗಾರಿ ಸಂದರ್ಭದಲ್ಲಿ ಕೆಲವು ಸಣ್ಣ,ಪುಟ್ಟ ತೊಂದರೆಗಳಾಗುವುದು ಸಹಜ, ನಾಗರಿಕರು ಸಹಕಾರ ನೀಡುವಂತೆ ಶಾಸಕ ಜಿ.ಬಿ.ಜೋತಿಗಣೇಶ್ ತಿಳಿಸಿದ್ದಾರೆ. ನಗರದ ಎಸ್.ಐ.ಟಿ. ಬಡಾವಣೆಯ 1 ರಿಂದ 3 ಅಡ್ಡರಸ್ತೆ ಹಾಗೂ 31ರಿಂದ 35ನೇ ಅಡ್ಡ ರಸ್ತೆಯಲ್ಲಿ ಸುಮಾರು 80 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಸಿ.ಸಿ.ಚರಂಡಿ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡುತಿದ್ದ ಅವರು, ಶೇ90ರಷ್ಟು ತೆರಿಗೆದಾರರಿರುವ ಈ ಬಡಾವಣೆಗೆ ಅತಿ ಹೆಚ್ಚಿನ ರೀತಿಯಲ್ಲಿಯೇ ಅನುದಾನ ಒದಗಿಸಲಾಗಿದೆ ಎಂದರು. ಕೊರೊನಾ ಸಂಕಷ್ಟದಲ್ಲಿಯೂ ಯಡಿ ಯೂರಪ್ಪನವರು ಪಾಲಿಕೆಗೆ 25 ಕೋಟಿ ರೂಗಳ ವಿಶೇಷ ಅನುದಾನ ನೀಡುವ ಮೂಲಕ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಅನುವು ಮಾಡಿಕೊಟ್ಟಿದ್ದಾರೆ. ಅದರಲ್ಲಿ ಸಿಂಹಪಾಲು ಅಂದರೆ 5.50 ಕೋಟಿ ಅನುದಾನವನ್ನು ನಗರದಲ್ಲಿ ದೊಡ್ಡ ವಾರ್ಡುಗಳಲ್ಲಿ ಒಂದಾಗಿರುವ 26ನೇ ವಾರ್ಡಿಗೆ…
ತುಮಕೂರು: ತುಮಕೂರು ನಗರ ಬಿಜೆಪಿ ವತಿಯಿಂದ ನಮ್ಮ ಬೂತ್ ನನ್ನ ಜವಾಬ್ದಾರಿ ಎಂಬ ವಿಶಿಷ್ಟ ಆಂದೋಲನವನ್ನು ಹಮ್ಮಿಕೊಳ್ಳಲಾಗಿದೆ. ತುಮಕೂರು ನಗರದ 24ನೇ ವಾರ್ಡ್ ಉಪ್ಪಾರಹಳ್ಳಿಯಲ್ಲಿ ಪ್ರತಿ ಬೂತ್ ಅಧ್ಯಕ್ಷರ ಮನೆಯ ಮುಂಭಾಗ ಪಕ್ಷದ ಜವಾಬ್ದಾರಿಯ ನಾಮಫಲಕ ಹಾಕುವ ಮೂಲಕ ತುಮಕೂರು ನಗರ ಶಾಸಕರಾದ ಜಿ.ಬಿ.ಜ್ಯೋತಿಗಣೇಶ್‍ರವರು ಈ ಅಭಿಯಾನಕ್ಕೆ ಚಾಲನೆ ನೀಡಿದರು. ಈ ಸಂರ್ಭದಲ್ಲಿ 24ನೇ ವಾರ್ಡ್‍ನ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಶಾಸಕರು ಭಾರತೀಯ ಜನತಾ ಪಾರ್ಟಿಯ ಮೂಲ ಶಕ್ತಿ ಇರುವುದು, ಬೂತ್ ಮಟ್ಟದಲ್ಲಿ. ಬೂತ್ ಮಟ್ಟದಲ್ಲಿರುವ ಬಡವರು, ಮಹಿಳೆಯರು, ದೀನದಲಿತರು, ಅಶಕ್ತರ ಅಭ್ಯುದಯಕ್ಕೆ ಸರ್ಕಾರದಿಂದ ಬರುವ ಯೋಜನೆಗಳನ್ನು ಅವರಿಗೆ ತಲುಪಿಸುವ ಮೂಲಕ ಹಾಗೂ ಕೇಂದ್ರ & ರಾಜ್ಯ ಸರ್ಕಾರದ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸಬೇಕು ಎಂದರು. ಅಲ್ಲದೇ ಕರೋನ ಸಂದರ್ಭದಲ್ಲಿ ತುಮಕೂರು ನಗರದಲ್ಲಿ ಪ್ರತಿ ಬೂತ್‍ನಲ್ಲಿ ಬಿಜೆಪಿ ಕಾರ್ಯಕರ್ತರು ಮಾಡಿದ ಸೇವಾ ಕಾರ್ಯವನ್ನು ಈ ಸಂದರ್ಭದಲ್ಲಿ ಶ್ಲಾಘೀಸಿದರು. …
ತುಮಕೂರು : ರಾಜ್ಯದಲ್ಲಿ ಅನುಷ್ಠಾನ ದಲ್ಲಿರುವ ಸ್ಮಾರ್ಟ್‍ಸಿಟಿಗಳಲ್ಲಿ ಉತ್ತಮ ಎಂಬ ಬಹುಮಾನ ಪಡೆದಿರುವ ತುಮಕೂರು ನಗರ ಮತ್ತಷ್ಟು ಸ್ಮಾರ್ಟ್ ಆಗಲು ನಾಗರಿಕರು, ಜನಪ್ರತಿನಿಧಿಗಳು, ಅಧಿಕಾರಿಗಳೊಂದಿಗೆ ಕೈಜೋಡಿಸಬೇಕು ಎಂದು ಸಿದ್ದಗಂಗಾ ಮಠಾಧ್ಯಕ್ಷ ಶ್ರೀಸಿದ್ದಲಿಂಗಸ್ವಾಮೀಜಿ ಕರೆ ನೀಡಿದ್ದಾರೆ. ಸಿದ್ದಗಂಗಾ ಮಠದಲ್ಲಿ ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಶಾಸಕ ಜಿ.ಬಿ.ಜೋತಿಗಣೇಶ್ ಅವರ 2 ವರ್ಷದ ಸಾಧನೆ ಅಭಿವೃದ್ದಿ ಪಥದತ್ತ ತುಮಕೂರು ಎಂಬ ವೆಬ್‍ಸೈಟ್ ಬಿಡುಗಡೆಗೊಳಿಸಿ ಮಾತನಾಡುತಿದ್ದ ಅವರು,ನಾಗರಿಕರು ಸ್ಮಾರ್ಟ್ ಆಗುವ ಮೂಲಕ ಈಗಾಗಲೇ ನಡೆದಿರುವ ಅಭಿವೃದ್ದಿ ಕಾರ್ಯಗಳು ಜನರ ಉಪಯೋಗಕ್ಕೆ ಬರುವಂತೆ ಮಾಡಬೇಕಿದೆ ಎಂದರು. ಕಳೆದ ಎರಡು ವರ್ಷಗಳಲ್ಲಿ ಸ್ಮಾರ್ಟ್ ಸಿಟಿ ಯೋಜನೆಗಳಲ್ಲದೆ, ಸರಕಾರದ ಅನು ದಾನವನ್ನು ಬಳಸಿ ಶಾಸಕರು, ಕುಡಿಯುವ ನೀರು, ರಸ್ತೆ, ಚರಂಡಿ,ವಿದ್ಯುತ್ ದ್ವೀಪಗಳಿಗೆ ಹೆಚ್ಚಿನ ಒತ್ತು ನೀಡಿದ್ದಾರೆ. ಈಗಾಗಲೇ ಕುಡಿಯುವ ನೀರಿಗಾಗಿ ತುಮಕೂರಿನ ಅತಿ ದೊಡ್ಡ ಕೆರೆ ಅಮಾನಿಕೆರೆಯನ್ನು ತುಂಬಿಸುವ ಕೆಲಸ ನಡೆದಿದೆ. ಇದೇ ರೀತಿ ಗಂಗಸಂದ್ರ, ಮರಳೂರು…
ತುಮಕೂರು: ನಾಯಿ ಅತ್ಯಂತ ವಿಶ್ವಾಸಾರ್ಹ ಪ್ರಾಣಿ, ಹಾಗೆಂದ ಮಾತ್ರಕ್ಕೆ ಅದು ಕಡಿದಾಗ ನಿರ್ಲಕ್ಷ್ಯವಹಿಸುವುದು ಬೇಡ. ಇದರಿಂದ ಅಪಾಯ ಕಟ್ಟಿಟ್ಟ ಬುತ್ತಿ ಎಂದು ತುಮಕೂರು ನಗರ ಶಾಸಕ ಜಿ.ಬಿ.ಜೋತಿಗಣೇಶ್ ತಿಳಿಸಿದ್ದಾರೆ. ನಗರದ ಪಶುಪಾಲನೆ ಮತ್ತು ಪಶು ವೈದ್ಯಕೀಯ ಇಲಾಖೆಯ ಆವರಣದಲ್ಲಿ ಜಿಲ್ಲಾ ಪಂಚಾಯಿತಿ, ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ಕರ್ನಾಟಕ ಪಶುವೈದ್ಯಕೀಯ ಸಂಘ(ರಿ) ಹಾಗೂ ಇನ್ನರ್ ವ್ಹೀಲ್ ಕ್ಲಬ್ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ರೇಬಿಸ್ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಸಾಕು ಪ್ರಾಣಿಗಳಿಗೆ ಉಚಿತ ರೇಬಿಸ್ ವಿರುದ್ಧ ಲಸಿಕೆ ಹಾಕುವುದು ಮತ್ತು ರೋಗದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಉದ್ಟಾಟಿಸಿ ಮಾತನಾಡುತಿದ್ದ ಅವರು, ಸಾಕಿದ ನಾಯಿಗಳಿಗಿಂತಲೂ ಬೀದಿ ನಾಯಿಗಳಿಂದ ಹೆಚ್ಚು ತೊಂದರೆಯಾಗುತ್ತಿದ್ದು, ಇದನ್ನು ತಡೆಯುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕಿದೆ ಎಂದರು. ಮನುಷ್ಯ ತನ್ನ ಒತ್ತಡದ ಜೀವನವನ್ನು ಕೊಂಚ ಹಗುರಾಗಿಸಿಕೊಳ್ಳಲು ನಾಯಿಯಂತಹ ಸಾಕು ಪ್ರಾಣಿಗಳು ಸಹಕಾರಿ, ಜೊತೆಗೆ ಇವುಗಳಿಂದ ಮನುಷ್ಯನಿಗೆ ರಕ್ಷಣೆಯೂ…
ಮಧುಗಿರಿ: ಪಟ್ಟಣದಲ್ಲಿ ಇತ್ತೀಚೆಗೆ ಬೊಲೇರೋ ವಾಹನ ಅಡ್ಡಗಟ್ಟಿ ನಗದು, ಮೊಬೈಲ್ ದೋಚಿ ಪರಾರಿಯಾಗಿದ್ದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಮಧುಗಿರಿ ಪೊಲೀಸರು ಯಶಸ್ವಿಯಾಗಿದ್ದಾರೆ. ಪಟ್ಟಣದ ಕೆ.ಆರ್ ಬಡಾವಣೆಯ ಶನಿಮಹಾತ್ಮ ಸ್ವಾಮಿ ದೇವಸ್ಥಾನದ ಸಮೀಪ ನಿವಾಸಿ ಕಾರು ಚಾಲಕ ರಾಕೇಶ್ (26), ಗೌರಿಬಿದನೂರು ರಸ್ತೆಯ ಸಮೀಪದ ನಿವಾಸಿ ಉಪೇಂದ್ರ (22) ಮತ್ತು ಕರಡಿಪುರ ನಿವಾಸಿ ಭರತ್ (22) ಬಂದಿತ ಆರೋಪಿಗಳು. ಘಟನೆಯ ವಿವರ: ಸೆ. 24 ರಂದು ಪಾವಗಡ ತಾಲೂಕಿನ ಕಡಮಲಕುಂಟೆ ಗ್ರಾಮದ ಅಮರನಾಥ ಎಂಬುವವರ ಬೊಲೆರೋ ವಾಹನವನ್ನು ಮಧುಗಿರಿಯ ಅವಲಕ್ಕಿ ಮಿಲ್ ಸಮೀಪ ವಾಹನದಲ್ಲಿ ಬಂದು ಅಡ್ಡಗಟ್ಟಿದ ಆರೋಪಿಗಳು ವಾಹನ ಅಡ್ಡಗಟ್ಟಿ ಅಮರನಾಥರವರನ್ನು ಥಳಿಸಿ 10 ಸಾವಿರ ನಗದು ಮತ್ತು ಮೊಬೈಲ್ ಕಸಿದು ಪರಾರಿಯಾಗಿದ್ದರು. ಇದರ ಬಗ್ಗೆ ಮಧುಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇತ್ತೀಚೆಗೆ ತಾಲೂಕಿನಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿರುವುದನ್ನು ಗಂಬೀರವಾಗಿ ಪರಿಗಣಿಸಿದ ಪೊಲೀಸ್…
ಮಧುಗಿರಿ: ರೈತಪರ ಸಂಘಟನೆಗಳು ಕರೆ ನೀಡಿದ್ದ ಕರ್ನಾಟಕ ಬಂದ್ ಗೆ ಮಧುಗಿರಿಯಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಯಿತು. ಪಟ್ಟಣದಲ್ಲಿರುವ ಖಾಸಗಿ ಬಸ್ ನವರು ಬೆಂಬಲ ಸೂಚಿಸಿದ್ದು ಯಾವುದೇ ಬಸ್ಸುಗಳು ಸಂಚಾರ ನಡೆಸಿಲ್ಲ. ಕೆ ಎಸ್ ಆರ್ ಟಿಸಿ ಬಸ್ಸುಗಳು ಮಾತ್ರ ಸಂಚಾರ ನಡೆಸಿದವು. ಆಟೋ ಚಾಲಕರು, ಅಂಗಡಿ ಮುಗ್ಗಟ್ಟುಗಳು, ಎಪಿಎಂಸಿ ವರ್ತಕರು, ಹಮಾಲರು,ಬೀದಿ ಬದಿ ವ್ಯಾಪಾರಿಗಳು , ಡಿಎಸ್ ಎಸ್,ಮಧುಗಿರಿ ಬ್ಲಾಕ್ ಕಾಂಗ್ರೆಸ್ ನವರು, ವಕೀಲರ ಸಂಘದವರು, ಹಾಗೂ ಕನ್ನಡ ಪರ ಹಲವು ಸಂಘಟನೆಗಳು ಬೆಂಬಲ ನೀಡಿ ಪಟ್ಟಣದ ಟೌನ್ ಹಾಲ್ ನಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ಟಿವಿವಿ ವೃತ್ತ,ನೃಪತುಂಗ ವೃತ್ತ,ಮಿನಿ ವಿಧಾನಸೌದ ರಸ್ತೆ,ಡಬಲ್ ರೋಡ್ ಮೂಲಕ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಮಾನವ ಸರಪಳಿ ರಚಿಸಿ,ಅಂಬೇಡ್ಕರ್ ಪುತ್ಥಳಿ ಗೆ ಮಾಲಾರ್ಪಣೆ ಮಾಡಿ ದಂಡೂರ ಬಾಗಿಲು ರಸ್ತೆ ಮೂಲಕ ಉಪವಿಭಾಗಾಧಿಕಾರಿ ಕಚೇರಿ ತಲುಪಿ ಪ್ರತಿಭಟನಾ ಭಾಷಣ ನಡೆಸಿದರು. ಅಗತ್ಯ ವಸ್ತುಗಳಾದ ಹಣ್ಣು ತರಕಾರಿ ಹಾಲು…
ತುಮಕೂರು: ಕಾನೂನು ಮತ್ತು ಸಂಸದೀಯ ವ್ಯವಹಾರಗಳು ಹಾಗೂ ಸಣ್ಣ ನೀರಾವರಿ ಸಚಿವ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರಿಗೆ ಕೊರೋನಾ ಪಾಸಿಟಿವ್ ಎಂದು ದೃಢಪಟ್ಟಿದ್ದು, ಚಿಕಿತ್ಸೆಗಾಗಿ ಭಾನುವಾರ ಸಂಜೆ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಧಿವೇಶನ ಮುಗಿದ ಬಳಿಕ ತಮ್ಮ ಸ್ವಾಬ್ ಟೆಸ್ಟ್ ಮಾಡಿಸಿದ್ದರು. ಭಾನುವಾರ ಸಂಜೆ ಬಂದ ವರದಿಯಲ್ಲಿ ಸಚಿವರಿಗೆ ಕೊರೋನಾ ಪಾಸಿಟಿವ್ ಎಂದು ದೃಢಪಟ್ಟ ಹಿನ್ನೆಲೆಯಲ್ಲಿ ಚಿಕಿತ್ಸೆಗಾಗಿ ಬೆಂಗಳೂರಿನ ಹಳೆ ಏರ್‍ಪೋರ್ಟ್ ರಸ್ತೆಯಲ್ಲಿರುವ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸಚಿವರಿಗೆ ಯಾವುದೇ ರೋಗ ಲಕ್ಷಣಗಳು ಇರುವುದಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರ ಆರೋಗ್ಯ ಕುರಿತಂತೆ ಜಿಲ್ಲಾಡಳಿತ ನಿರಂತರ ಸಂಪರ್ಕದಲ್ಲಿದೆ ಎಂದು ಜಿಲ್ಲಾಧಿಕಾರಿ ಡಾ: ರಾಕೇಶ್ ಕುಮಾರ್ ಅವರು ತಿಳಿಸಿದ್ದಾರೆ.
ತುಮಕೂರು: ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿ ನೇತೃತ್ವದಲ್ಲಿ ರೈತ, ಕಾರ್ಮಿಕ, ದಲಿತ ಮತ್ತು ಕನ್ನಡಪರ ಸಂಘಟನೆಗಳು ಕರೆ ನೀಡಿದ್ದ ಕರ್ನಾಟಕ ಬಂದ್‍ಗೆ ತುಮಕೂರಿನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಗರದಲ್ಲಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ವ್ಯಾಪಾರಸ್ಥರು ಬಂದ್‍ಗೆ ಬೆಂಬಲ ವ್ಯಕ್ತಪಡಿಸಿದರು. ನೂರಾರು ಪ್ರತಿಭಟನಾಕಾರರು ಟೌನ್‍ಹಾಲ್‍ನಿಂದ ನಗರದಲ್ಲಿ ಬೈಕ್ ರ್ಯಾಲಿ ನಡೆಸಲು ಮುಂದಾಗುತ್ತಿದ್ದಂತೆ ಪೊಲೀಸರು ತಡೆದರು. ಆಗ ಪೊಲೀಸರೊಂದಿಗೆ ವಾಗ್ವಾದ ನಡೆಯಿತು. ಬೈಕ್ ರ್ಯಾಲಿ ನಡೆಸಿಯೇ ತೀರುತ್ತೇವೆ ಎಂದು ಪ್ರತಿಭಟನಾಕಾರರು ಪಟ್ಟುಹಿಡಿದಾಗ ಕೆಲವರನ್ನು ವಾಹನಕ್ಕೆ ತುಂಬಿ ಬಂಧಿಸಿ ಬಿಡುಗಡೆ ಮಾಡಲಾಯಿತು. ಬೈಕ್ ರ್ಯಾಲಿಗೆ ಅನುಮತಿ ಕೊಡದಿದ್ದರಿಂದ ಪ್ರತಿಭಟನಾಕಾರರು ನಗರದಲ್ಲಿ ಮೆರವಣಿಗೆ ನಡೆಸಿದರು. ನಂತರ ಟೌನ್‍ಹಾಲ್ ಆವರಣದಲ್ಲಿ ಬಹಿರಂಗ ಸಭೆ ನಡೆಸಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನೀತಿಗಳ ವಿರುದ್ಧ ಘೋಷಣೆ ಕೂಗಿದರು. ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು, ಉಳುವವನಿಗೆ ಭೂ ಒಡೆತನ ನೀಡಿದ್ದ…











