ಗುಬ್ಬಿ: ಉತ್ತರ ಪ್ರದೇಶ ರಾಜ್ಯದಲ್ಲಿ ವಾಲ್ಮೀಕಿ ಜನಾಂಗದ ಯುವತಿಯನ್ನು ಅಪಹರಿಸಿ ಅತ್ಯಾಚಾರವೆಸಗಿ ನಾಲಿಗೆ ತಂಡರಿಸಿ ಬೆನ್ನುಮೂಳೆ ಮುರಿದು ವಿಕೃತಿ ಮೆರದ ಆರೋಪಿಗಳಿಗೆ ಗಲ್ಲು ಶಿಕ್ಷೆ ಅಥವಾ ಎನ್‍ಕೌಂಟರ್ ಮೂಲಕ ಉತ್ತರ ನೀಡಬೇಕು ಎಂದು ತಾಲ್ಲೂಕು ವಾಲ್ಮೀಕಿ ನಾಯಕ ಸಮಾಜದ ಪದಾಧಿಕಾರಿಗಳು ಸೋಮವಾರ ಮೆರವಣಿಗೆ ನಡೆಸಿ ಪ್ರತಿಭಟನೆ ನಡೆಸಿದರು. ಪಟ್ಟಣದ ಪ್ರವಾಸಿಮಂದಿರದಿಂದ ಮೆರವಣಿಗೆ ಮೂಲಕ ತಾಲ್ಲೂಕು ಕಚೇರಿ ತಲುಪಿ ಪ್ರತಿಭಟಿಸಿ ಉತ್ತರ ಪ್ರದೇಶ ಸರ್ಕಾರದ ಕ್ರಮವನ್ನು ಧಿಕ್ಕರಿಸಿ ಘೊಷಣೆ ಕೂಗಿದರು. ನ್ಯಾಯಕ್ಕೆ ಆಗ್ರಹಿಸಿ ಮಾತನಾಡಿದ ತಾಲ್ಲೂಕು ವಾಲ್ಮೀಕಿ ನಾಯಕ ಸಮಾಜ ಅಧ್ಯಕ್ಷ ಕೆ.ಆರ್.ಗುರುಸ್ವಾಮಿ, ಉತ್ತರ ಪ್ರದೇಶದ ಹತ್ರಾಸ್ ಎಂಬ ಗ್ರಾಮದಲ್ಲಿ ನಡೆದ ಅಮಾನುಷ ಘಟನೆ ನಾಗರೀಕ ಸಮಾಜ ತಲೆ ತಗ್ಗಿಸಬೇಕಿದೆ. ಈ ಮಟ್ಟದ ಅಟ್ಟಹಾಸ ಮೆರದ ಆರೋಪಿಗಳಿಗೆ ಉಗ್ರ ಶಿಕ್ಷೆಯಾಗಬೇಕಿದೆ. ಆದರೆ ಪೊಲೀಸ್ ತನಿಖೆಯಲ್ಲಿ ಗೊಂದಲ ಮೂಡುತ್ತಿರುವ ಬಗ್ಗೆ ಸಮಾಜ ಖಂಡಿಸುತ್ತದೆ ಎಂದರು. ದೇಶದ ವಾಲ್ಮೀಕಿ ಜನಾಂಗದವರು ಆಯಾ ಪಟ್ಟಣ…
Author: News Desk Benkiyabale
ತುಮಕೂರು: ಭಾರತ ಚುನಾವಣಾ ಆಯೋಗವು ಬೆಂಗಳೂರು ಶಿಕ್ಷಕರ ಹಾಗೂ ಆಗ್ನೇಯ ಪದವೀಧರರ ಕ್ಷೇತ್ರಗಳಿಗೆ ಚುನಾವಣೆ ನಡೆಸಲು ಹೊರಡಿಸಿರುವ ವೇಳಾಪಟ್ಟಿಯನ್ವಯ ಚುನಾವಣಾ ನಾಮನಿರ್ದೇಶನ ಪ್ರಕ್ರಿಯೆಗಳ ಹಿನ್ನಲೆಯಲ್ಲಿ ಅಕ್ಟೋಬರ್ 7ರಂದು ನಿಗಧಿಯಾಗಿದ್ದ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಲತಾ ಎಂ. ರವಿಕುಮಾರ್ ಅವರ ವಿರುದ್ಧ ಅವಿಶ್ವಾಸ ಸೂಚನಾ ಸಭೆಯನ್ನು ಅಕ್ಟೋಬರ್ 15ರ ಬೆಳಿಗ್ಗೆ 11.30 ಗಂಟೆಗೆ ಮುಂದೂಡಲಾಗಿದೆ. ಸಭೆಯು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆಯಲಿದೆ ಎಂದು ಪ್ರಾದೇಶಿಕ ಆಯುಕ್ತರ ಕಛೇರಿ ಪ್ರಕಟಣೆ ತಿಳಿಸಿದೆ.
ಗುಬ್ಬಿ : ಪಟ್ಟಣದ ಪರಿಸರ ಕಾಪಾಡಬೇಕಾದ ಸ್ಥಳೀಯ ಪಟ್ಟಣ ಪಂಚಾಯಿತಿ ಅಧಿಕಾರಿಗಳೇ ಮುಂದೆ ನಿಂತು ತಮ್ಮ ಕಚೇರಿ ಆವರಣದಲ್ಲಿದ್ದ ಮರವೊಂದನ್ನು ಕಡಿದು ಧರೆರುಳಿಸಿರುವ ಘಟನೆ ಶನಿವಾರ ನಡೆದಿದೆ. ಸಾರ್ವಜನಿಕರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಪಟ್ಟಣ ವ್ಯಾಪ್ತಿಯಲ್ಲಿ ಉದ್ಯಾನವನಗಳಲ್ಲಿ ಹಾಗೂ ರಸ್ತೆ ಬದಿಗಳಲ್ಲಿ ಗಿಡ ನೆಟ್ಟು ಪೋಷಿಸುವ ಜವಾಬ್ದಾರಿ ಕೆಲಸ ಮಾಡಬೇಕಾದ ಪಪಂ ಅಧಿಕಾರಿಗಳು ಕಚೇರಿ ಆವರಣದಲ್ಲಿದ್ದ ಸುಮಾರು 30 ವರ್ಷದ ಹಳೆಯ ಹೊಂಗೇಮರವನ್ನು ಕಡಿದಿದ್ದಾರೆ. ಕೆಲ ದಿನಗಳ ಹಿಂದೆ ಒಣಗಿದ ರೀತಿ ಕಾಣುವಂತೆ ಮಾಡಲಾಗಿ ನಂತರ ತುಂಡರಿಸಲಾಗಿದೆ. ಶುದ್ದ ಗಾಳಿ ಒದಗಿಸುವ ಕೆಲಸ ಸ್ಥಳೀಯ ಸಂಸ್ಥೆಯಾದ ಪಟ್ಟಣ ಪಂಚಾಯಿತಿ ಜವಾಬ್ದಾರಿ ಎನ್ನುವುದು ಮರೆತು ಇನ್ನೂ ಹಸಿಯಾದ ಮರವನ್ನು ಕಡಿಯುವ ಅಗತ್ಯವೇನಿತ್ತು ಎನ್ನುವುದು ಪ್ರಜ್ಞಾವಂತರ ಪ್ರಶ್ನೆಯಾಗಿದೆ. ಬೆಳಿಗ್ಗೆ ಕಚೇರಿ ಸಮಯಕ್ಕೆ ಮುನ್ನವೇ ಧರೆಗುರುಳಿದ ಹೊಂಗೇಮರದ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಪರಸರ ಕಾಳಜಿವಹಿಸಬೇಕಿದ್ದ ಅಧಿಕಾರಿಗಳು ಈ ಕೃತ್ಯವೆಸಗಿರುವುದು ಸರಿಯಲ್ಲ ಎನ್ನುವ…
ತುಮಕೂರು: ಸ್ಮಾರ್ಟ್ ಸಿಟಿ ವತಿಯಿಂದ ಗಾಂಧಿಜಯಂತಿ ಪ್ರಯುಕ್ತ ಅಕ್ಟೋಬರ್ 2ರಂದು ಸ್ವಚ್ಛ ಪರಿಸರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಗಾಂಧೀಜಿಯವರ ಕನಸಿನ ಸ್ವಚ್ಛಭಾರತ ಅಭಿಯಾನದಡಿ ನಾಮದ ಚಿಲಮೆಯಲ್ಲಿನ ಪ್ಲಾಸ್ಟಿಕ್ ಸ್ವಚ್ಛಗೊಳಿಸುವ ಮೂಲಕ ಈ ಸ್ವಚ್ಛಪರಿಸರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಗಾಂಧಿಜಯಂತಿಯನ್ನು ಇನ್ನಷ್ಟು ಅರ್ಥಪೂರ್ಣವನ್ನಾಗಿಸುವ ಸಲುವಾಗಿ ಪರಿಸರ ಸ್ನೇಹಿ ಮತ್ತು ಆರೋಗ್ಯವನ್ನು ವೃದ್ಧಿಸುವ ಸೈಕಲ್ ತುಳಿಯುವ ಹವ್ಯಾಸವನ್ನು ಹೆಚ್ಚಿಸುವ ನಿಟ್ಟಿನಲ್ಲಿ 150 ಹವ್ಯಾಸಿ ಸೈಕ್ಲಿಸ್ಟ್‍ಗಳನ್ನೊಳಗೊಂಡ ತಂಡವು ನಗರದ ಬಾಲಗಂಗಾಧರ ಸ್ವಾಮಿ ವೃತ್ತದಿಂದ ಪ್ರವಾಸಿ ತಾಣವಾದ ನಾಮದ ಚಿಲುಮೆಯವರೆಗೂ ಸೈಕ್ಲೋಥಾನ್ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಸ್ಮಾರ್ಟ್‍ಸಿಟಿ ಲಿಮಿಟೆಡ್‍ನ ವ್ಯವಸ್ಥಾಪಕ ನಿರ್ದೇಶಕರು ಮತ್ತು ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಬಿ.ಟಿ ರಂಗಸ್ವಾಮಿ ಹಾಗೂ ಮಹಾನಗರ ಪಾಲಿಕೆ ಆಯುಕ್ತೆ ರೇಣುಕಾ ಸೈಕ್ಲೋಥಾನ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ತುಮಕೂರು ನಗರದಲ್ಲಿ ಹಸಿರೀಕರಣವನ್ನು ಹೆಚ್ಚಿಸುವ ನಿಟ್ಟಿನಲ್ಲಿ 150 ಸಸಿಗಳನ್ನು ಆದರ್ಶನಗರದ ಉದ್ಯಾನವನದಲ್ಲಿ ಮತ್ತು ವರ್ತುಲ ರಸ್ತೆ ಬದಿಯಲ್ಲಿ ನೆಡಲಾಯಿತಲ್ಲದೆ,…
ಹುಳಿಯಾರು: ಚಿಕ್ಕ ನಾಯಕನಹಳ್ಳಿ ತಾಲೂಕಿನ ಹುಳಿಯಾರು ಹಾಗೂ ಶೆಟ್ಟಿಕೆರೆ ಗ್ರಾಮಗಳ ಹವ್ಯಾಸಿ ಚಾರಣಿಗರು ಪ್ರಸಕ್ತ ಸಾಲಿನ ಚಾರಣವನ್ನು ಭಾರತದ ಹತ್ತು ಎತ್ತರದ ಜಲಪಾತಗಳಲ್ಲಿ ಒಂದಾದ ಬರ್ಕಣ ಜಲಪಾತಕ್ಕೆ 2 ದಿನಗಳ ಚಾರಣ ಶಿಬಿರವನ್ನು ಅಕ್ಟೋಬರ್ 3 ಮತ್ತು 4 ರಂದು ಹಮ್ಮಿಕೊಂಡಿದ್ದಾರೆ. ದಶಕದ ಹಿಂದೆ ನೆಹರು ಯುವ ಕೇಂದ್ರ ಸಕಲೇಶಪುರದಿಂದ ಕುಕ್ಕೆ ಸುಬ್ರಹ್ಮಣ್ಯಕ್ಕೆ ಏರ್ಪಡಿಸಿದ್ದ ಸಾಹಸ ಚಾರಣ ಶಿಬಿರದಿಂದ ಈ ತಂಡದ ಚಾರಣದ ಹವ್ಯಾಸ ಆರಂಭವಾಗಿದ್ದು ಪ್ರತಿವರ್ಷ ಒಂದು ಚಾರಣದಂತೆ ಇಲ್ಲಿಯವರೆವಿಗೆ ಇಪ್ಪತ್ತಕ್ಕೂ ಹೆಚ್ಚು ಚಾರಣ ಶಿಬಿರ ಸಂಘಟಿಸಿದೆ. ಇವುಗಳಲ್ಲಿ ಬುರುಡೆಜೋಗ, ಅನಡ್ಕ, ಬಲ್ಲಾಳರಾಯನದುರ್ಗ, ಅರಿಶಿನಗುಂಡಿ, ಹಿಡ್ಲುಮನೆ, ದೇವಕಾರು, ಭಂಡಾಜೆ, ಕೊಡಚಾದ್ರಿ, ಕೂಡ್ಲುತೀರ್ಥ, ಬೆಳ್ಳಿಗುಂಡಿ ಪ್ರಮುಖವಾಗಿದ್ದಾಗಿದ್ದು ಬೀಚ್ ಟ್ರಕ್, ಕೇರಳದ ವಹಿನಾಡು ಚಾರಣ ವಿಶೇಷವಾಗಿದ್ದಾಗಿದೆ. ಸರ್ಕಾರದ ಹಾಗೂ ದಾನಿಗಳ ಧನಸಹಾಯ ಪಡೆಯದೆ ತಮ್ಮ ಸ್ವಂತ ಖರ್ಚಿನಲ್ಲಿ ಚಾರಣ ಕೈಗೊಳ್ಳುತ್ತಿರುವ ಈ ತಂಡ ಈ ಭಾರಿ…
ತುಮಕೂರು: ತುಮಕೂರು ಗ್ರಾಮಾಂತರ ಪೊಲೀಸ್ ವೃತ್ತ ನಿರೀಕ್ಷಕರ ಕಛೇರಿಯಲ್ಲಿ ಗುರುವಾರ ಬೆಳಗಿನ ಜಾವ ಕಳ್ಳತನವಾಗಿದ್ದು ಕಛೇರಿಯ ಬೀಗ ಮುರಿದು ಟಿವಿ ಕದ್ದೊಯ್ಯಲಾಗಿದ್ದು, ಈ ಸಂಬಂಧ ತುಮಕೂರು ನಗರ ಪೊಲೀಸ್ ಠಾಣೆಯಲ್ಲಿ ಕಳ್ಳತನ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಾದ ಕೆಲವೇ ಗಂಟೆಗಳಲ್ಲಿ ಕಳ್ಳತನ ಮಾಡಿದ್ದ ಆರೋಪಿಯನ್ನ ಮಾಲು ಸಮೇತ ಬಂಧಿಸಲಾಗಿದ್ದು, ಆರೋಪಿ ಮಂಜುನಾಥ್ ಆಲಿಯಾಸ್ ಕಳ್ಳಮಂಜ, ಚೆನ್ನರಾಯಪಟ್ಟಣ ತಾಲೂಕಿನ ಕಾರೇಹಳ್ಳಿಯ ವಾಸಿ. ಈತ ವೃತ್ತಿನಿರತ ಕಳ್ಳತನದ ಆರೋಪಿಯಾಗಿದ್ದು, ತುಮಕೂರು ನಗರ ಠಾಣೆಯಲ್ಲಿ ದ್ವಿಚಕ್ರ ವಾಹನಗಳ ಕಳ್ಳತನದ ಆರೋಪದ ಮೇಲೆ ಆರೋಪಿಯ ಮೇಲೆ ಈ ಹಿಂದೆ ಪ್ರಕರಣಗಳು ದಾಖಲಾಗಿದೆ. ಹೊಸಬಡಾವಣೆ ಪೊಲೀಸ್ ಠಾಣೆ ಸೇರಿದಂತೆ ಬಹಳಷ್ಟು ಕಡೆಗಳಲ್ಲಿ ಕಳ್ಳಮಂಜನ ವಿರುದ್ಧ ಸುಮಾರು 15 ಕ್ಕೂ ಹೆಚ್ಚು ಕಳ್ಳತನದ ಪ್ರಕರಣಗಳು ದಾಖಲಾಗಿವೆ ಎಂದು ತಿಳಿದುಬಂದಿದೆ. ಕಳ್ಳತನದ ಆರೋಪಕ್ಕೆ ಸಂಬಂಧಿಸಿದಂತೆ ಕಳ್ಳತನ ಪ್ರಕರಣದ ವಿಚಾರವಾಗಿ ತುಮಕೂರು ನ್ಯಾಯಾಲಯಕ್ಕೆ ಬಂದಿದ್ದು, ನ್ಯಾಯಾಲಯದಲ್ಲಿ ಬುಧವಾರ ಎಂದಿನಂತೆ ತನ್ನ…
ತುಮಕೂರು: ಶಿರಾ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಅಧಿಸೂಚನೆಯನ್ನು ಅಕ್ಟೋಬರ್ 9ರಂದು ಹೊರಡಿಸಲಿದ್ದು, ಚುನಾವಣೆಯನ್ನು ಮುಕ್ತ ಹಾಗೂ ನ್ಯಾಯಸಮ್ಮತವಾಗಿ ನಡೆಸಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳಾದ ಡಾ: ಕೆ. ರಾಕೇಶ್ ಕುಮಾರ್ ತಿಳಿಸಿದ್ದಾರೆ. ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ವೇಳಾಪಟ್ಟಿಯನ್ನು ಭಾರತೀಯ ಚುನಾವಣಾ ಆಯೋಗ ಪ್ರಕಟಿಸಿದ್ದು, ಅದರಂತೆ ಅಕ್ಟೋಬರ್ 16ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ನಾಮಪತ್ರಗಳ ಪರಿಶೀಲನೆಗೆ ಅಕ್ಟೋಬರ್ 17, ನಾಮಪತ್ರ ಹಿಂಪಡೆಯಲು ಅಕ್ಟೋಬರ್ 19 ಕೊನೆಯ ದಿನವಾಗಿರುತ್ತದೆ. ನವೆಂಬರ್ 3ರಂದು ಚುನಾವಣಾ ಮತದಾನ ನಡೆಯಲಿದ್ದು, ನವೆಂಬರ್ 10ರಂದು ಮತ ಎಣಿಕೆ ನಡೆಯಲಿದೆ ಎಂದು ಅವರು ತಿಳಿಸಿದರು. ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಮಧುಗಿರಿ ಉಪವಿಭಾಗದ ಉಪವಿಭಾಗಾಧಿಕಾರಿ ಡಾ: ನಂದಿನಿದೇವಿ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಲಿದ್ದು, ಶಿರಾ ತಾಲ್ಲೂಕಿನ ತಹಶೀಲ್ದಾರ್ ನಾಹೀದಾ ಝಂ ಝಂ ಸಹಾಯಕ…
ತುಮಕೂರು: ಇಡೀ ಪ್ರಪಂಚದಲ್ಲಿ ಶೈಕ್ಷಣಿಕ ಸಂಶೋಧನೆಗಳಿಗೆ ಮನ್ನಣೆ ದೊರೆಯುತ್ತಿರುವ ಸಂದರ್ಭದಲ್ಲಿ ನಮ್ಮಲ್ಲಿಯೂ ಸಾಮಾಜಿಕ ಅಭಿವೃದ್ಧಿ ಕ್ಷೇತ್ರದ ಬಗ್ಗೆ ಸಂಶೋಧನೆ ನಡೆಯಬೇಕು. ಸಂಶೋಧನೆಗಳನ್ನು ವಿಮರ್ಶಾತ್ಮಕವಾಗಿ ವಿಶ್ಲೇಷಿಸಿ, ಸಂಶೋಧನಾ ಲೇಖನಗಳನ್ನು ದಾಖಲಿಸುವ ಕೆಲಸಕ್ಕೆ ಉನ್ನತ ಶಿಕ್ಷಣ ಸಂಸ್ಥೆಗಳು ಮುಂದಾಗುವ ಅನಿವಾರ್ಯತೆ ಇಂದಿನದಾಗಿದೆ ಎಂದು ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಹಾಗೂ ಸಾಹೇ ವಿಶ್ವವಿದ್ಯಾನಿಲಯದ ಕುಲಾಧಿಪತಿ ಡಾ.ಜಿ.ಪರಮೇಶ್ವರ್ ಅಭಿಪ್ರಾಯಪಟಿದ್ದಾರೆ. ನಗರದ ಸಿದ್ದಾರ್ಥನಗರದಲ್ಲಿ ಶ್ರೀ ಸಿದ್ದಾರ್ಥ ಅಕಾಡೆಮಿಕ್ ಆಫ್ ಹೈಯರ್ ಎಜುಕೇಷನ್ (ಸಾಹೇ ವಿಶ್ವವಿದ್ಯಾಲಯ) ಏರ್ಪಡಿಸಿದ್ದ ಸಂಯೋಜಿತ ವಿಷಯಗಳ ಸಂಶೋಧನಾತ್ಮಕ ಪ್ರಕಟಣೆಗಳಾದ ‘ಸಾಹೇ ಜರ್ನಲ್ಸ್ ಆಪ್ ಇಂಟರ್ ಡಿಸಿಪ್ಲಿನರಿ ರೀಸರ್ಚ್ ಮತ್ತು ಜರ್ನಲ್ಸ್ ಆಪ್ ಆ್ಯಕ್ಸನ್ ರೀಸರ್ಚ್ ಆ್ಯಂಡ್ ಸೋಷಿಯಲ್ ಡೆವೆಲಪ್‍ಮೆಂಟ್’ ಬಿಡುಗಡೆ ಮಾಡಿ ಮಾತನಾಡಿದರು. ಇಡೀ ಪ್ರಂಚದಲ್ಲಿ ಅಂತರ ಶಿಕ್ಷಣ ಮತ್ತು ಸಂಶೋಧನೆಗಳು ನಡೆಯುತ್ತಿವೆ. ಸಮಾಜದಲ್ಲಿ ಸವiತೋಲದ ಶೈಕ್ಷಣಿಕ ಚಟುವಟಿಕೆಗಳು ಗರಿಗೆದರಿವೆ. ಸಂಶೋಧಕರ ಮಸಸ್ಥಿತಿಗಳು ಬದಲಾಗುತ್ತಿರುವ ಕಾಲಘಟ್ಟದಲ್ಲಿರುವುದರಿಂದ ಸಾಮಾಜಿಕ ಅಭಿವೃದ್ದಿ ಕುರಿತ ಗುಣಮಟ್ಟದ ಸಂಶೋಧನಾ…
ತುಮಕೂರು: ಜಿಲ್ಲೆಯಲ್ಲಿ ಅಕ್ಟೋಬರ್ 4ರಂದು ನಡೆಯುವ ಶಿಕ್ಷಕರ ಅರ್ಹತಾ ಪರೀಕ್ಷೆಯು(ಕೆ.ಎ.ಆರ್.ಟೆ.ಇ.ಟಿ) ಸುರಕ್ಷಿತ ಹಾಗೂ ಯಶಸ್ವಿಯಾಗಿ ಜರುಗಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ ಅವರು ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಜರುಗಿದ ಪೂರ್ವಭಾವಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಅಕ್ಟೋಬರ್ 4ರಂದು ನಡೆಯುವ ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ ಯಾವುದೇ ಲೋಪದೋಷಗಳು ಕಂಡು ಬರದಂತೆ ನಿಗಾವಹಿಸಬೇಕು. ಕೋವಿಡ್-19 ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಪರೀಕ್ಷಾ ಕೇಂದ್ರಗಳಲ್ಲಿ ಮುಂಜಾಗೃತ ಕ್ರಮ ಕೈಗೊಳ್ಳಬೇಕು. ಪರೀಕ್ಷೆಗೆ ಹಾಜರಾಗುವ ಪ್ರತಿಯೊಬ್ಬರನ್ನು (ಆರೋಗ್ಯ ತಪಾಸಣಾ ಕೌಂಟರ್)ನಲ್ಲಿ ಅರೆ ವೈದ್ಯಕೀಯ ಸಿಬ್ಬಂದಿಯಿಂದ ಕಡ್ಡಾಯವಾಗಿ ಥರ್ಮಲ್ ಸ್ಕ್ರೀನಿಂಗ್‍ಗೆ ಒಳಪಡಿಸಬೇಕು ಎಂದರು. ಕೋವಿಡ್-19 ಸೋಂಕು ನಿಯಂತ್ರಣಕ್ಕೆ ಪರೀಕ್ಷಾ ಕೇಂದ್ರದ ಕೊಠಡಿಗಳನ್ನು ಸ್ವಚ್ಚಗೊಳಿಸಿ ಸ್ಯಾನಿಟೈಸ್ ಸಿಂಪಡಿಸಬೇಕು. ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಗಳು ಮಾಸ್ಕ್, ಸ್ಯಾನಿಟೈಸರ್ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ನೋಡಿಕೊಳ್ಳಬೇಕು. ಕೋವಿಡ್-19 ಪಾಸಿಟಿವ್ ಎಂದು ದೃಢಪಟ್ಟ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ಜಿಲ್ಲಾ…
ತುಮಕೂರು: ಧರ್ಮದ ಮೂಲಕ ಸಂಸ್ಕೃತಿಯನ್ನು ಗಟ್ಟಿಗೊಳಿಸುವ ಕಾರ್ಯ ಮಾಡಬೇಕಾಗಿದೆ ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಅರುಣಾದೇವಿ ಉದಯಕುಮಾರ್ ಹೇಳಿದರು. ನಗರದ ಸಿದ್ದಗಂಗಾ ಮಠಕ್ಕೆ ಪತಿ ಉದಯಕುಮಾರ್, ಪುತ್ರಿ ಮಾಧುರ್ಯರವರೊಂದಿಗೆ ಭೇಟಿ ನೀಡಿದ ಲಿಂ.ಡಾ.ಶ್ರೀ ಶಿವಕುಮಾರ ಸ್ವಾಮೀಜಿಯವರ ಗದ್ದುಗೆ ದರ್ಶನ ಪಡೆದು, ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿಯವರ ಆಶೀರ್ವಾದ ಪಡೆದ ನಂತರ ಮಾತನಾಡಿದ ಅವರು, ಪ್ರಸ್ತುತ ದಿನಗಳಲ್ಲಿ ನಾವೆಲ್ಲರೂ ಕುಟುಂಬ ವ್ಯವಸ್ಥೆ ಬಗ್ಗೆ ಗಮನ ಹರಿಸುವ ಅಗತ್ಯವಿದೆ ಎಂದರು. ನಾಲ್ಕು ಗೋಡೆಗಳ ಮಧ್ಯೆ ಇರುವ ಮಹಿಳೆಯರನ್ನು ಸಮಾಜದ ಮುಖ್ಯವಾಹಿನಿಗೆ ಕರೆ ತರುವ ಕೆಲಸ ಮಾಡುವ ಚಿಂತನೆ ಹೊಂದಲಾಗಿದೆ ಎಂದು ಅವರು ಹೇಳಿದರು. ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದಿರುವ ಕುಟುಂಬ ಮಕ್ಕಳನ್ನು ಗುರುತಿಸಿ ಅವರ ಶಿಕ್ಷಣಕ್ಕೆ ನೆರವು ನೀಡಲಾಗುವುದು. ಈ ನಿಟ್ಟಿನಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾದ ಮಹಿಳಾ ಘಟಕ ಕಾರ್ಯನಿರ್ವಹಿಸಲಿದೆ ಎಂದರು.…











