Author: News Desk Benkiyabale

ಹುಳಿಯಾರು:       ಕೆಲಸ ಎಷ್ಟಾದ್ರೂ ಕೇಳಿ, ಶಕ್ತಿ ಮೀರಿ ಮಾಡ್ತೀನಿ. ಆದರೆ, ಹಣಕೇಳೋಕೆ ನನ್ನ ಹತ್ತಿರ ಅವಕಾಶ ಇಲ್ಲಾ. ಇದೊಂದೇ ಕಾರಣಕ್ಕೆ ಕೆಲವರು ನನ್ನ ಬೈಕೊಂಡ್ ಓಡಾಡುತ್ತಾರೆ. ಹೀಗಂತ ಹೇಳಿದ್ದು ಜಿಲ್ಲಾ ಉಸ್ತುವಾರಿ ಸಚಿವರಾದ ಜೆ.ಸಿ.ಮಾಧುಸ್ವಾಮಿ.       ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದ ಶಿಡ್ಲೆಕೋಣ ಗ್ರಾಮದಲ್ಲಿನ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ನೂತನ ಕಟ್ಟಡದ ಉದ್ಘಾಟನೆ ಮಾಡಿ ಮಾತನಾಡಿದರು      ಸಚಿವರು ನಾನು ಯಾರ ಜೇಬಿಗೂ ಕೈ ಇಟ್ಟವನಲ್ಲ. ಅಡ್ಡದಾರಿ ಹಿಡಿದು ದುಡ್ದು ಮಾಡಿ ರಾಜಕಾರಣ ಮಾಡೋ ಜಾಯಮಾನ ನನ್ನದಲ್ಲ. ಇದೇ ಸಿದ್ಧಾಂತ ಮೈಗೂಡಿಸಿಕೊಂಡು 30 ವರ್ಷ ರಾಜಕಾರಣದಲ್ಲಿ ಹೆಜ್ಜೆ ಸವೆಸಿದ್ದೇನೆ. ನಿಮ್ಮ ಪ್ರೀತಿ, ವಿಶ್ವಾಸ ಎಂದೆಂದಿಗೂ ಹೀಗೆಯೇ ಮುಂದುವರಿಯಲಿ. ಮತ ನೀಡಿ ಚುನಾಯಿಸಿದ ನಿಮ್ಮ ಋಣವನ್ನ ಪ್ರಾಮಾಣಿಕವಾಗಿಯೇ ತೀರಿಸುವೆ ಎಂದು ಭಾವುಕರಾಗಿ ನುಡಿದರು.       ಯಾವುದೇ ನೀರಾವರಿ ಯೋಜನೆ ಕಾಣದ ಬುಕ್ಕಾ ಪಟ್ಟಣ ಹೋಬಳಿಗೆ ಭದ್ರಾಮೇಲ್ದಂಡೆ ಯೋಜ ನೆಯಡಿಯಲ್ಲಿ ನೀರು…

Read More

ತುಮಕೂರು:      ಪದೋನ್ನತಿ ಹೊಂದಿ ರುವ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಅಧೀಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದ ಹೆಚ್.ಸವಿತ ಹಾಗೂ ಧಾರ್ಮಿಕ ದತ್ತಿ ಇಲಾಖೆಯಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ ಸೇವೆ ಸಲ್ಲಿಸುತ್ತಿದ್ದ ಕೆ.ಎನ್. ಸೌಭಾಗ್ಯ ಅವರಿಗೆ ಜಿಲ್ಲಾಧಿಕಾರಿ ಡಾ: ಕೆ. ರಾಕೇಶ್ ಕುಮಾರ್ ಅವರು ಸೋಮವಾರ ಆತ್ಮೀಯವಾಗಿ ಬೀಳ್ಕೊಡುಗೆ ನೀಡಿದರು.      ಸವಿತಾ ಅವರು ಚಿಕ್ಕಬಳ್ಳಾಪುರ ಜಿಲ್ಲೆ ಧಾರ್ಮಿಕ ದತ್ತಿ ಇಲಾಖೆ ತಹಶೀಲ್ದಾರರಾಗಿ ಹಾಗೂ ಸೌಭಾಗ್ಯ ಅವರು ಸಿದ್ದರಬೆಟ್ಟ ಶ್ರೀ ಸಿದ್ದೇಶ್ವರ ದೇವಾಲಯದ ಪ್ರಥಮ ದರ್ಜೆ ಸಹಾಯಕ ಹುದ್ದೆಗೆ ಪದೋನ್ನತಿ ಹೊಂದಿದ್ದಾರೆ.       ಬೀಳ್ಕೊಡುಗೆ ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಜಿಲ್ಲಾಧಿಕಾರಿಗಳು ಪದೋನ್ನತಿ ಹೊಂದಿದವರು ಸಲ್ಲಿಸಿದ ಸೇವೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಮುಂದೆಯೂ ಇದೇ ರೀತಿ ಉತ್ತಮ ಸೇವೆ ಸಲ್ಲಿಸಬೇಕೆಂದು ಶುಭ ಹಾರೈಸಿದರು.       ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಕೆ. ಚೆನ್ನಬಸಪ್ಪ, ಉಪವಿಭಾಗಾಧಿಕಾರಿ ಅಜಯ್, ಯಡಿಯೂರು ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮಿ, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ವೈ.ಎಸ್.…

Read More

ಹುಳಿಯಾರು:       ಹುಳಿಯಾರು ಪಟ್ಟಣದ ಭೀಮಮ್ಮನ ದೇವಾಲಯದ ಬಳಿ ಇಟ್ಟಿಗೆ ತುಂಬಿದ ಲಾರಿ ಅಪಘಾತಕ್ಕೀಡಾಗಿ ಕೂದಳೆಲೆ ಅಂತರದಲ್ಲಿ ದೊಡ್ಡ ಅನಾಹುತ ತಪ್ಪಿದೆ.       ಶಿರಾ-ಹುಳಿಯಾರು ರಾಷ್ಟ್ರೀಯ ಹೆದ್ದಾರಿಯಲ್ಲಿ ಇಟ್ಟಿಗೆ ತುಂಬಿದ ಲಾರಿ ಪಟ್ಟಣದ ಕಡೆ ಹೋಗುವಾಗ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಗುಂಡಿಗೆ ಉರುಳಿದೆ. ಒಂದಿಂಚು ಮುಂದೆ ಬಿದ್ದಿದ್ದರೂ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗುತ್ತಿತ್ತು.      ಅದು ಹೈವೋಲ್ಟೇಜ್ ಇರುವ ಲೈನ್ ಆಗಿರುವುದರಿಂದ ದೊಡ್ಡ ಅನಾಹುತ ಸಂಭವಿಸುವ ಸಾಧ್ಯತೆ ಇತ್ತು. ಅದೃಷ್ಟವಶತ್ ಕಂಬದ ಸಮೀಪದ ಗುಂಡಿಗೆ ಬಿದ್ದಿದೆ. ಲಾರಿ ತಲೆಕೆಳಗಾಗಿ ಬಿದ್ದಿದ್ದು ಇಟ್ಟಿಗೆ ಚಲ್ಲಾಪಿಲ್ಲಿಯಾಗಿ ಬಿದಿದ್ದು ಚಾಲಕ, ಕ್ಲೀನರ್ ಅನಾಹುತದಿಂದ ಪಾರಾಗಿದ್ದಾರೆ.

Read More

ಗುಬ್ಬಿ:       ಹೆದ್ದಾರಿ ರಸ್ತೆ ಬದಿ ಯಲ್ಲಿ ನಿಂತಿದ್ದ ಟಿಪ್ಪರ್ ಲಾರಿ ಯ ಹಿಂಬದಿಗೆ ಗುದ್ದಿದ್ದ ಸರ್ಕಾರಿ ಬಸ್ ಸಂಪೂರ್ಣ ಜಖಂಗೊಂಡು ಇಬ್ಬರು ಪ್ರಯಾಣಿಕರು ಸಾವನ್ನಪ್ಪಿ ಏಳು ಮಂದಿ ಗಂಭೀರ ಗಾಯಗೊಂಡ ಘಟನೆ ಮುಂಜಾನೆ ನುಸುಕಿನಲ್ಲಿ ತಾಲ್ಲೂಕಿನ ನಿಟ್ಟೂರು ಬಾಗೂರು ಬಳಿ ರಾ.ಹೆ 206 ರಲ್ಲಿ ನಡೆದಿದೆ.       ಬಸ್‍ನಲ್ಲಿ ಬೆಂಗಳೂರಿನಿಂದ ಚಿಕ್ಕಮಗಳೂರು ತರೀಕೆರೆ ತಾಲ್ಲೂಕು ತಡಿಗೆಬಯಲು ಗ್ರಾಮಕ್ಕೆ ಪ್ರಯಾಣ ಬೆಳೆಸಿದ್ದ ಶಿವಮೂರ್ತಿ(24) ಹಾಗೂ ಪೂಜಾ(20) ಮೃತರಾದ ದುರ್ದೈವಿಗಳು. ಬಸ್ ಚಾಲಕನ ಅಜಗರೂಕತೆಯಿಂದ ಈ ದುರ್ಘಟನೆ ಸಂಭವಿಸಿದೆ. ರಸ್ತೆ ಬದಿ ನಿಂತಿದ್ದ ಟಿಪ್ಪರ್ ಲಾರಿ ಗಮನಿಸದೇ ವೇಗವಾಗಿ ಬಂದು ಗುದ್ದಿದ ಚಾಲಕ ಪಾರಾಗಿದ್ದು, ಎಡ ಬದಿಯಲ್ಲಿ ಕುಳಿತಿದ್ದ ಈ ಇಬ್ಬರು ಬಲಿಯಾದರು.       ಶಿವಮೂರ್ತಿ ಮತ್ತು ಪೂಜಾಳನ್ನು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆ ಫಲಕಾರಿಯಾದೇ ಈರ್ವರು ಮೃತಪಟ್ಟರು. ಉಳಿದಂತೆ ಏಳು ಮಂದಿಗೆ ತೀವ್ರ ಸ್ವರೂಪದ ಗಾಯಗೊಂಡವರನ್ನು ಬೆಂಗಳೂರು ಮತ್ತು ತುಮಕೂರು ಆಸ್ಪತ್ರೆಯಲ್ಲಿ…

Read More

ತುಮಕೂರು :        ಮೋಟಾರ್ ಸೈಕಲ್ ಗಳನ್ನು ಕಳವು ಮಾಡುತ್ತಿದ್ದ ಕಳ್ಳನನ್ನು ಬಂಧಿಸಲಾಗಿದೆ.        ಆರೋಪಿಯನ್ನು ಜಗನ್ನಾಥ ಗೌಡ (28 ವರ್ಷ) ಎಂದು ಗುರುತಿಸಲಾಗಿದೆ.         ಸೆ. 20 ರಂದು ಕ್ಯಾತ್ಸಂದ್ರ ಪೊಲೀಸ್ ಠಾಣೆ ಪಿ.ಎಸ್.ಐ. ಮಂಜುಳ ರವರು ಹಿರೇಹಳ್ಳಿ ಕೈಗಾರಿಕಾ ಪ್ರದೇಶದದಲ್ಲಿ ತನ್ನ ಸಿಬ್ಬಂದಿಗಳೊಂದಿಗೆ ಗಸ್ತು ಮಾಡುತ್ತಿರುವಾಗ ಪಂಡಿತನಹಳ್ಳಿ ಕಡೆಯಿಂದ ಬೈಕ್‌ನಲ್ಲಿ ಬರುತ್ತಿದ್ದ ಒಬ್ಬ ಅಸಾಮಿಯು ಅನುಮಾನಸ್ಪದವಾಗಿ ಪೊಲೀಸ್ ಜೀಪನ್ನು ನೋಡಿ ಬೈಕನ್ನು ತಿರುಗಿಸಿಕೊಂಡು ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ ಹಿಡಿದುಕೊಂಡು ಠಾಣೆಗೆ ಕರೆತಂದು ವಿಚಾರಣೆ ಮಾಡಲಾಗಿ ಆರೋಪಿಯು ಶಿರಾ, ಕ್ಯಾತ್ಸಂದ್ರ, ಮತ್ತು ಬೆಂಗಳೂರು ನಗರದ ಪೊಲೀಸ್ ಠಾಣೆಗಳಲ್ಲಿ ಸುಮಾರು 1 ಲಕ್ಷ ರೂ ಮೌಲ್ಯದ ಒಟ್ಟು 03 ಮೋಟಾರ್ ಸೈಕಲ್‌ಗಳನ್ನು ಕಳವು ಮಾಡಿರುವುದಾಗಿ ತಿಳಿದು ಬಂದಿರುತ್ತದೆ.       ಸದರಿ ಆರೋಪಿಯು ಈ ಹಿಂದೆ 2018 ನೇ ಸಾಲಿನಲ್ಲಿ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯ ಪ್ರಕರಣಗಳಲ್ಲಿ ಬಾಗಿಯಾಗಿಯಾಗಿವುದಾಗಿ ತಿಳಿದು ಬಂದಿರುತ್ತದೆ.…

Read More

ತುಮಕೂರು:       ಒಳಮೀಸಲಾತಿ ಪರ್ಗೀಕರಣ ಸಂಬಂಧ ನ್ಯಾ. ಎ.ಜೆ. ಸದಾಶಿವ ಆಯೋಗದ ವರದಿ ಜಾರಿಗೆ ಆಗ್ರಹಿಸಿ ನ್ಯಾ. ಎ.ಜೆ. ಸದಾಶಿವ ಆಯೋಗ ಜಾರಿ ಹಕ್ಕೋತ್ತಾಯ ಸಮಿತಿ ವತಿಯಿಂದ ನಗರದಲ್ಲಿ ಅಹೋರಾತ್ರಿ ಪ್ರತಿಭಟನೆಯಲ್ಲಿ ನಡೆಸಲಾಗುತ್ತಿದೆ.       ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿರುವ ಸಮಿತಿಯ ಪದಾಧಿಕಾರಿಗಳು ಒಳಮೀಸಲಾತಿ ವರ್ಗೀಕರಣಕ್ಕಾಗಿ ಎ.ಜೆ. ಸದಾಶಿವ ಆಯೋಗದ ವರದಿಯ ಶಿಫಾರಸ್ಸುಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೂಡಲೇ ಅನುಷ್ಟಾನಗೊಳಿಸಬೇಕು ಎಂದು ಆಗ್ರಹಿಸಿದರು. ಈ ಅಹೋರಾತ್ರಿ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ ಮಾಜಿ ಶಾಸಕ ಕೆ.ಎನ್. ರಾಜಣ್ಣ ಅವರು, ನ್ಯಾ. ಎ.ಜೆ. ಸದಾಶಿವ ಆಯೋಗದ ವರದಿಯ ಶಿಫಾರಸ್ಸುಗಳನ್ನು ಜಾರಿಗಾಗಿ ಬಹಳ ದಿನದಿಂದ ಹೋರಾಟ ನಡೆಯುತ್ತಲೇ ಇದೆ. ನ್ಯಾಯುಯತ ಬೇಡಿಕೆಗಳಿಗೆ ಯಾವುದೇ ಸರ್ಕಾರ ಸ್ಪಂದನೆ ಮಾಡದಿದ್ದರೆ ಆ ಸಮುದಾಯಗಳಿಗೆ ಆಗುವ ಅನ್ಯಾಯವನ್ನು ಸರಿಪಡಿಸಲು ಸಾಧ್ಯವಿಲ್ಲ. ಆದ್ದರಿಂದ ಆದಷ್ಟು ಬೇಗ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸದಾಶಿವ ಆಯೋಗದ…

Read More

ತುಮಕೂರು:        ಕೊರೊನಾ ವಾರಿಯರ್ಸ್ ಎಂದೇ ಹೆಸರಾದ ರಾಜ್ಯದ 42,000 ಆಶಾ ಕಾರ್ಯಕರ್ತೆಯರು ಎರಡು ತಿಂಗಳ ಹಿಂದೆ 20 ದಿನಗಳ ನಿರಂತರ ಹೋರಾಟ ಮಾಡಿದ ಸಂದರ್ಭದಲ್ಲಿ ವೇತನ ಹೆಚ್ಚಳ ಮಾಡಲಾಗುವುದು ಎಂಬ ಭರವಸೆ ನೀಡಿ, ಇದೀಗ ಎರಡು ತಿಂಗಳು ತಾಳ್ಮೆಯಿಂದ ಕಾಯ್ದು ಕೊರೊನಾ ವಿರುದ್ಧದ ಹೋರಾಟದಲ್ಲಿ ಕರ್ತವ್ಯನಿರತರಾದ ಆಶಾಗಳಿಗೆ ಕೊಟ್ಟ ಮಾತಿಗೆ ತಪ್ಪಿದ ಸರ್ಕಾರದ ವಿರುದ್ಧ ಮತ್ತೇ ರಾಜ್ಯದಾದ್ಯಂತ ಆಶಾ ಕಾರ್ಯಕರ್ತೆಯರು ಎಐಯುಟಿಯುಸಿ ಸಂಯೋಜಿತ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ನೇತೃತ್ವದಲ್ಲಿ ಹೋರಾಟಕ್ಕಿಳಿಯಲು ನಿರ್ಧರಿಸಿದ್ದಾರೆ.       ಅಂತೆಯೇ ರಾಜ್ಯದಾದ್ಯಂತ ಎಲ್ಲಾ ಶಾಸಕರು, ಸಂಸದರು ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿ ಆಶಾ ಪರ ಧ್ವನಿಯೆತ್ತುವಂತೆ ಆಗ್ರಹಿಸಲಾಗುವುದು. ಹಾಗೆಯೇ ದಿನಾಂಕ 21 ರಿಂದ 10 ದಿನಗಳ ಕಾಲ ನಡೆಯುವ ವಿಧಾನಸಭೆಯ ಅಧಿವೇಶನ ನಡೆಯುವ ಸಂದರ್ಭದಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ವಿವಿಧ ರೀತಿಯ ಹೋರಾಟಗಳನ್ನು ಹಮ್ಮಿಕೊಳ್ಳಲಾಗುವುದು.       ಕಳೆದ ಸುಮಾರು 10-11 ವರ್ಗಗಳಿಂದ ಆಶಾ ಕಾರ್ಯಕರ್ತೆಯರು…

Read More

ಶಿರಾ:      ಚುನಾವಣೆ ಘೋಷಣೆಗೂ ಮುನ್ನವೇ ರಾಜ್ಯದ ಗಮನಸೆಳೆಯುತ್ತಿರೋ ತುಮಕೂರಿನ ಶಿರಾ ಕ್ಷೇತ್ರ ಮತ್ತಷ್ಟು ರಂಗೇರಿದೆ. ಈವರೆಗೂ ಖಾತೆಯೇ ತೆರೆಯದ ಬಿಜೆಪಿ ಪಕ್ಷ ಈ ಬಾರಿಯ ಉಪಚುನಾವಣೆಯನ್ನ ಗಂಭೀರವಾಗಿ ಪರಿಗಣಿಸಿದಂತಿದೆ. ಶಿರಾ ಕ್ಷೇತ್ರವನ್ನ ತಮ್ಮದಾಗಿಸಿಕೊಳ್ಳಲು ಪಣತಟ್ಟಿರೋ ಮೂರು ಪಕ್ಷಗಳು ತಮ್ಮದೇ ಆದ ಕಾರ್ಯತಂತ್ರ ರೂಪಿಸುತ್ತಿವೆ.       ಶಿರಾಗೆ ಭೇಟಿ ನೀಡಿದ ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರ, ಶಿರಾ ಪಟ್ಟಣದ ದೇವಮೂಲೆಯಲ್ಲಿರೋ ಕೋಟೆ ಆಂಜನೇಯ ದೇವಾಲಯದಲ್ಲಿ ಪೂಜೆ ಸಲ್ಲಿಸುವ ಮೂಲಕ ಬೂತ್ ಮಟ್ಟದ ಪ್ರಚಾರ ಸಭೆಯಲ್ಲಿ ಭಾಗವಹಿಸಿದ್ದರು. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇರೋದ್ರಿಂದ ಈ ಉಪಚುನಾವಣೆಯನ್ನ ಗಂಭೀರವಾಗಿ ಪರಿಗಣಿಸಿದ್ದು, ಕೆ.ಆರ್.ಪೇಟೆ ಮಾದರಿಯಲ್ಲೇ ಶಿರಾ ಉಪಚುನಾವಣೆಗೆ ಬಿಜೆಪಿ ಸಜ್ಜಾಗಿದೆ ಎಂದು ಬಿ.ವೈ.ವಿಜಯೇಂದ್ರ ಹೇಳಿದ್ದಾರೆ. ಕೆ.ಆರ್.ಪೇಟೆಯಲ್ಲಿ ವಿಜಯ ಸಾಧಿಸಿದಂತೆ ಶಿರಾದಲ್ಲೂ ಖಾತೆ ತೆರೆಯಲ್ಲಿದ್ದು, ಮಂಡ್ಯದಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲೋದಿಲ್ಲ ಎಂದು ವಿರೋಧ ಪಕ್ಷ ಬೊಬ್ಬೆ ಹೊಡೆದಿದ್ರು, ನಮ್ಮನ್ನ ಲೆಕ್ಕಕೆ ತೆಗೆದುಕೊಂಡಿರಲಿಲ್ಲ. ಮುಖಂಡರು, ಕಾರ್ಯಕರ್ತರು ಎಲ್ಲಾ ಒಗ್ಗಟ್ಟಾಗಿ ಪ್ರಯತ್ನ ಮಾಡಿದ್ವಿ. ಕೆ.ಆರ್.ಪೇಟೆಯಲ್ಲಿ 10…

Read More

ಹುಳಿಯಾರು:      ಹುಳಿಯಾರಿನ ಪಾನಿಪುರಿ ಮಂಜಣ್ಣನ ಮಗ ಎಂ.ರಾಘವೇಂದ್ರ (23) ಹಾಗೂ ಬಿಜಾಪುರದ ಬಸವರಾಜು (22) ಎಂಬಿಬ್ಬರು ರಸ್ತೆ ಅಪಘಾತದಲ್ಲಿ ಸ್ಥಳದಲ್ಲೇ ಸಾವನ್ನಪ್ಪಿನ ಘಟನೆ ತಿಪಟೂರಿನ ಕೋಟನಾಯಕನಹಳ್ಳಿ ಬಳಿ ಭಾನುವಾರ ಸಂಜೆ ಜರುಗಿದೆ.       ಯಗಟಿಯಲ್ಲಿ ಮದುವೆ ಕಾರ್ಯಕ್ರಮಕ್ಕೆಂದು ಬೊಲೆರೋ ವಾಹನದಲ್ಲಿ ತಾಯಿ ಗೌರಮ್ಮ ಮತ್ತು ಸಂಬಂಧಿ ಸುಮಾ ಅವರೊಂದಿಗೆ ತೆರಳಿದ್ದರು. ಇವರು ಮದುವೆ ಮುಗಿಸಿಕೊಂಡು ಹಿಂತಿರುಗುತ್ತಿದ್ದಾಗ ತಿಪಟೂರಿನಲ್ಲಿ ಚಾಲಕ ಮುತ್ತು ತನ್ನ ಸಂಬಂಧಿ ಬಿಜಾಪುರದ ಬಸವರಾಜು ಅವರನ್ನು ಹತ್ತಿಸಿಕೊಂಡಿದ್ದಾರೆ. ಈ ಐವರೂ ಹುಳಿಯಾರಿಗೆ ಬರುತ್ತಿರುವಾಗ ಕೋಟನಾಯಕನಹಳ್ಳಿ ಬಳಿ ಕೆಎಸ್‍ಆರ್‍ಟಿಸಿ ಬಸ್‍ಗೆ ಮುಖಾಮುಖಿಯಾಗಿ ಡಿಕ್ಕಿಯಾಗಿದೆ. ಪರಿಣಾಮ ಹುಳಿಯಾರಿನ ಪಾನಿಪುರಿ ರಾಘವೇಂದ್ರ ಹಾಗೂ ಬಿಜಾಪುರದ ಬಸವರಾಜು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.       ಚಾಲಕ ಮುತ್ತು ಪರಾರಿಯಾಗಿದ್ದು ಗೌರಮ್ಮ ಹಾಗೂ ಸುಮಾ ಅವರಿಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದು ತಿಪಟೂರಿನ ಜನರಲ್ ಆಸ್ಪತ್ರೆಗೆ ಸೇರಿಸಲಾಗಿದೆ. ಅಪಘಾತದ ಬೀಕರತೆ ಹೇಗಿತ್ತೆಂದರೆ ಕೆಎಸ್‍ಆರ್‍ಟಿಸಿ ಬಸ್ ಮುಭಾಂಗ ಹಾಗೂ ಬೊಲೇರೋ ಕಾರಿನ ಮುಂಭಾಗ ನಜ್ಜುಗುಜ್ಜಾಗಿದೆ. ಅಲ್ಲದೆ…

Read More

ಮಧುಗಿರಿ :        ಕೆಟ್ಟು ನಿಂತಿದ್ದ ಲಾರಿಗೆ ಇನ್ನೋವಾ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದು, ಮೂವರು ಗಂಬೀರವಾಗಿ ಗಾಯಗೊಂಡಿರುವ ಘಟನೆ ಶುಕ್ರವಾರ ರಾತ್ರಿ ನಡೆದಿದೆ.        ತಾಲೂಕಿನ ಮಿಡಿಗೇಶಿ ಹೋಬಳಿ ಚಂದ್ರಬಾವಿ ಬಳಿ ಘಟನೆ ನಡೆದಿದ್ದು, ಸೀಮಾಂದ್ರದ ಎನ್.ಆರ್. ರೊಪ್ಪಂ ಗ್ರಾಮದ ನರಸಿಂಹಮೂರ್ತಿ(32), ಪಾವಗಡ ತಾಲೂಕಿನ ನಲ್ಲಿಗಾನಹಳ್ಳಿಯ ದುರ್ಗಪ್ಪ(21), ನರಸಮ್ಮ(35) ಸ್ಥಳದಲ್ಲೇ ಮೃತಪಟ್ಟವರು.        ಗೋವಿಂದಪ್ಪ, ಅಲುವೇಲಮ್ಮ, ಮಾರಪ್ಪ ಗಂಬೀರವಾಗಿ ಗಾಯಗೊಂಡಿದ್ದು, ವಾಹನದ ಹಿಂಬದಿಯಲ್ಲಿ ಕುಳಿತಿದ್ದ ಗೋಪಾಲ್ ಎಂಬುವವರು ಯಾವುದೇ ಪ್ರಾಣಾಪಾಯವಿಲ್ಲದೇ ಪಾರಾಗಿದ್ದಾರೆ.       ಇವರೆಲ್ಲರೂ ಇನ್ನೋವಾ ವಾಹನದಲ್ಲಿ ಬೆಂಗಳೂರಿಗೆ ಹೋಗಿ ಪಾವಗಡಕ್ಕೆ ವಾಪಾಸ್ಸಾಗುವಾಗ ಘಟನೆ ನಡೆದಿದ್ದು, ಮಿಡಿಗೇಶಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More