Author: News Desk Benkiyabale

ಹುಳಿಯಾರು: ಹುಳಿಯಾರು ಹೋಬಳಿಯ ಕೋರಗೆರೆ ಗ್ರಾಮ ಪಂಚಾಯ್ತಿಯ ನೂತನ ಉಪಾಧ್ಯಕ್ಷರಾಗಿ ಭಟ್ಟರಹಳ್ಳಿ ಶೇಖರ್ ಚುನಾಯಿತರಾಗಿದ್ದಾರೆ. 15 ಮಂದಿ ಸದಸ್ಯ ಬಲವುಳ್ಳ ಕೋರಗೆರೆ ಗ್ರಾಪಂ ಉಪಾಧ್ಯಕ್ಷರ ಆಯ್ಕೆಗೆ ಬುಧವಾರ ಚುನಾವಣೆ ನಡೆದಿದ್ದು ಶಿವಮ್ಮ ಮತ್ತು ಶೇಖರ್ ಇಬ್ಬರು ನಾಮಪತ್ರ ಸಲ್ಲಿಸಿದ್ದರು. ಶೇಖರ್ 11 ಮತಗಳನ್ನು, ಶಿವಮ್ಮ 4 ಮತಗಳನ್ನು ಪಡೆದಿದ್ದರು. ಚುನಾವಣಾಧಿಕಾರಿಯಾಗಿ ಕೆ.ಪುರಂದಯ್ಯ ಕರ್ತವ್ಯ ನಿರ್ವಹಿಸಿದ್ದರು. ಪಿಡಿಒ ನವೀನ್, ಅಧ್ಯಕ್ಷರಾದ ದಿನೇಶ್, ಸೇರಿದಂತೆ ಗ್ರಾಪಂ ಸದಸ್ಯರು ಉಪಸ್ಥಿತರಿದ್ದರು.

Read More

ತುಮಕೂರು: ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಇತ್ತೀಚೆಗೆ ನಿಧನರಾದ ಹಿರಿಯ ಕಾಂಗ್ರೆಸ್ ಮುಖಂಡರುಗಳಾದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಹಾಗು ಮಾಜಿ ಶಾಸಕ ಆರ್.ನಾರಾಯಣ್ ಅವರುಗಳಿಗೆ ಶ್ರದ್ಧಾಂಜಲಿ ಹಾಗು ಜನವರಿ 21 ರಂದು ಬೆಳಗಾವಿಯಲ್ಲಿ ನಡೆಯಲಿರುವ ಜೈ ಬಾಪು,ಜೈ ಅಂಬೇಡ್ಕರ್ ಮತ್ತು ಜೈ ಸಂವಿಧಾನ ಕಾರ್ಯಕ್ರಮದ ಪೂರ್ವಭಾವಿ ಸಭೆಯನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ.ಚಂದ್ರಶೇಖರ ಗೌಡ ಅವರ ಅಧ್ಯಕ್ಷತೆಯಲ್ಲಿ ಕರೆಯಲಾಗಿತ್ತು. ಕಾರ್ಯಕ್ರಮದಲ್ಲಿ ಅಗಲಿದ ಗಣ್ಯರ ಭಾವಚಿತ್ರಗಳಿಗೆ ಪುಷ್ಪ ನಮನ ಸಲ್ಲಿಸಲಾಯಿತು.ಈ ವೇಳೆ ಮಾತನಾಡಿದ ಮುಖಂಡರಾದ ಇಕ್ಬಾಲ್ ಅಹಮದ್,ಇಡೀ ಪ್ರಪಂಚವೇ ಹಣದುಬ್ಬರದಿಂದ ತಲ್ಲಣಿಸಿದ್ದ ಸಂದರ್ಭದಲ್ಲಿ ಭಾರತ ಮಾತ್ರ ಇದರ ಹೊಡೆತಕ್ಕೆ ಸಿಕ್ಕದೆ ಸುರಕ್ಷಿತವಾಗಿರಲು ಹಣಕಾಸು ತಜ್ಞರಾದ ಮನಮೋಹನ್ ಸಿಂಗ್ ಅವರ ದೂರದೃಷ್ಟಿಯೇ ಕಾರಣ.ಐಎಂಎಫ್ ಅಧ್ಯಕ್ಷರಾಗಿ,ರಾಷ್ಟಿçÃಯ ನೀತಿ ಆಯೋಗದ ಅಧ್ಯಕ್ಷರಾಗಿ, ಆರ್.ಬಿ.ಐ ಗೌರ್ನರ್ ಆಗಿ,ಹಣಕಾಸು ಸಚಿವರಾಗಿ ಅವರು ಮಾಡಿದ ಸುಧಾರಣೆಗಳು ಇಡೀ ವಿಶ್ವಕ್ಕೆ ಮಾದರಿಯಾಗಿವೆ.ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿ ಯಾಗಿದ್ದ ಸಂದರ್ಭದಲ್ಲಿ ತೆಗೆದುಕೊಂಡು ನಿರ್ಧಾರದ ಫಲವಾಗಿ ಇಂದು ಕರ್ನಾಟಕ ಐಟಿ,ಬಿಟಿ ಹಬ್ ಆಗಿ…

Read More

ತುಮಕೂರು: ಹಸುಗಳ ಕೆಚ್ಚಲು ಕೊಯ್ದು ವಿಕೃತಿ ಮೆರೆದಿರುವ ಘಟನೆಯನ್ನು ಖಂಡಿಸಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ ರವರ ನಿವಾಸಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲು ಮುಂದಾಗ ಶಾಸಕ ಸುರೇಶ್‌ಗೌಡ ಸೇರಿದಂತೆ ಹಲವು ಮಂದಿ ಬಿಜೆಪಿ ಕಾರ್ಯಕರ್ತರು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹಸುಗಳ ಕೆಚ್ಚಲು ಕೊಯ್ದು ವಿಕೃತಿ ಮೆರೆದಿರುವ ಘಟನೆಯನ್ನು ಖಂಡಿಸಿ ಭಾರತೀಯ ಜನತಾ ಪಾರ್ಟಿ ಇಂದು ಗೃಹ ಸಚಿವರ ನಿವಾಸದ ಮುಂದೆ ಪ್ರತಿಭಟನೆ ನಡೆಸಲು ಕಾರ್ಯಕರ್ತರಿಗೆ ಕರೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಗೃಹ ಸಚಿವರ ನಿವಾಸಕ್ಕೆ ಬಿಗಿ ಪೊಲೀಸ್ ಬಂದೋ ಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ನಗರದ ಹೊರವಲಯದ ಸಿದ್ದಾರ್ಥ ನಗರದಲ್ಲಿರುವ ಗೃಹ ಸಚಿವ ಡಾ. ಜಿ. ಪರಮೇಶ್ವರ್ ನಿವಾಸದ ಮುಂದೆ ಬೆಳಿಗ್ಗೆಯಿಂದಲೇ ಬಿಜೆಪಿ ಪ್ರತಿಭಟನೆ ಕರೆ ಹಿನ್ನೆಲೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳಿಗೆ ಆಸ್ಪದವಾಗದಂತೆ ಓರ್ವ ಅಡಿಷನಲ್ ಎಸ್ಪಿ, ಇಬ್ಬರು ಡಿವೈಎಸ್ಪಿ ನೇತೃತ್ವದಲ್ಲಿ ಸುಮಾರು 150ಕ್ಕೂ ಅಧಿಕ ಪೊಲೀಸರನ್ನು ಬಿಗಿ ಪೊಲೀಸ್ ಬಂದೋಬಸ್ತ್ಗೆ ನಿಯೋಜಿಸಲಾಗಿದ್ದು, ಪೊಲೀಸರು ಈ ಭಾಗದ ರಸ್ತೆಯಲ್ಲಿ…

Read More

ತುಮಕೂರು: ದೇಶದ ಜನರಲ್ಲಿ ಭಕ್ತಿ ಭಾವನೆ ಉಳಿದಿರುವುದರಿಂದ ಆಧುನಿಕತೆಯ ಎಷ್ಟೇ ಬದಲಾವಣೆಗಳಾದರೂ ಆಚರಣೆಗಳಿಂದ ನಮ್ಮ ಸಂಸ್ಕೃತಿ, ಸಂಪ್ರದಾಯಗಳು ಉಳಿದು ಮುಂದುವರೆದಿವೆ. ಶಬರಿಮಲೆಗೆ ಹೋಗಿ ಅಯ್ಯಪ್ಪನ ದರ್ಶನ ಮಾಡಿದರೆ ಜೀವನದಲ್ಲಿ ಬದಲಾವಣೆ ಆಗುತ್ತದೆ ಎಂದು ಅಲ್ಲಿಗೆ ಹೋಗಿಬಂದ ಅನೇಕರು ಹೇಳಿದ್ದಾರೆ. ಈ ನಂಬಿಕೆಯಿAದಲೇ ಶಬರಿಮಲೆ ಕ್ಷೇತ್ರ ವಿಶ್ವವಿಖ್ಯಾತವಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು. ನಗರದ ಗೋಕುಲ ಬಡಾವಣೆಯ ಶ್ರೀ ಅಯ್ಯಪ್ಪ ಸ್ವಾಮಿ ಭಕ್ತ ಬಳಗದಿಂದ ಭಾನುವಾರ ಸಂಜೆ ನಡೆದ 30ನೇ ವರ್ಷದ ಅಯ್ಯಪ್ಪ ಸ್ವಾಮಿ ಭಜನಾ ಮಹೋತ್ಸವದ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಚಿವರಿಗೆ ಈ ವೇಳೆ ಅಯ್ಯಪ್ಪ ಸ್ವಾಮಿ ಭಕ್ತಿ ಬಳಗ ಪ್ರದಾನ ಮಾಡಿದ ತುಮಕೂರು ದಸರಾ ಹಮ್ಮೀರಾ ಪ್ರಶಸ್ತಿ ಹಾಗೂ ಬೆಳ್ಳಿ ಖಡ್ಗ ಸ್ವೀಕರಿಸಿ ಮಾತನಾಡಿದರು. ಶಬರಿಮಲೆ ಮಾದರಿಯಲ್ಲಿ ಮಂಟಪ ನಿರ್ಮಾಣ ಮಾಡಿ ಅಯ್ಯಪ್ಪ ಸ್ವಾಮಿ ಪ್ರತಿಷ್ಠಾಪನೆ ಮಾಡಿ, ಶಬರಿಮಲೆಗೆ ಹೋಗಲು ಸಾಧ್ಯವಾಗದವರಿಗೆ ಇಲ್ಲಿಯೇ ಅಯ್ಯಪ್ಪನ ದರ್ಶನದ ವ್ಯವಸ್ಥೆ ಮಾಡಿದ್ದಾರೆ. ಅಯ್ಯಪ್ಪಸ್ವಾಮಿಗೆ ಹೊರದೇಶಗಳಲ್ಲೂ ಭಕ್ತರಿದ್ದಾರೆ. ಅವರೂ ಶಬರಿಮಲೆಗೆ ಬಂದು ದೇವರ…

Read More

ತುಮಕೂರು: ಕರ್ನಾಟಕ ಸಂಸ್ಕೃತಿ ರಕ್ಷಣಾ ವೇದಿಕೆಯಿಂದ ಸೋಮವಾರ ನಗರದ ಸರ್ಕಾರಿ ಪಾಲಿಟೆಕ್ನಿಕ್ ಎದುರು ವೈಭವದ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು. ಇದರ ಅಂಗವಾಗಿ ಏರ್ಪಡಿಸಿದ್ದ ವಿವಿಧ ಸಾಂಸ್ಕೃತಿಕ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಜಿಲ್ಲಾ ಕನ್ನಡ ಸೇನೆ ಅಧ್ಯಕ್ಷ ಧನಿಯಾಕುಮಾರ್ ಕಾರ್ಯಕ್ರಮ ಉದ್ಘಾಟಿಸಿ, ಕನ್ನಡ ನಾಡು, ನುಡಿ, ನೆಲ, ಜಲ ರಕ್ಷಣೆಗೆ ಕನ್ನಡಪರ ಸಂಘಟನೆಗಳು ಸಕ್ರಿಯ ಹೋರಾಟ ನಡೆಸಿದ ಪರಿಣಾಮ ಇಂದು ನಾಡಿನಲ್ಲಿ ಕನ್ನಡಿಗರಿಗೆ ದೊಡ್ಡ ಶಕ್ತಿ ಬಂದಿದೆ. ಪರಭಾಷಿಕರ ಹಾವಳಿಯಲ್ಲಿ ಕನ್ನಡದ ಅಸ್ತಿತ್ವ ಕಾಪಾಡಿಕೊಳ್ಳುವಂತಾಗಿದೆ ಎಂದರು. ಕನ್ನಡ ಸಂಘಟನೆಗಳು ಕನ್ನಡ ರಾಜ್ಯೋತ್ಸವ ಆಚರಣೆ ಜೊತೆಗೆ ನಾಡಿನ ಎಲ್ಲರಲ್ಲೂ ಭಾಷಾಭಿಮಾನ ಬೆಳೆಸಬೇಕು. ಪೋಷಕರು ಮಕ್ಕಳಲ್ಲಿ ಕನ್ನಡ ಅಭಿಮಾನ ಮೂಡಿಸಬೇಕು, ಕನ್ನಡ ನಾಡಿಗೆ ಕೊಡುಗೆ ನೀಡಿದ ಮಹನೀಯರ ಸಾಧನೆಯನ್ನು ಪರಿಚಯಿಸಬೇಕು. ಕನ್ನಡ ನಾಡಿನಲ್ಲಿ ಕನ್ನಡದ ವೈಭವ ಮೆರೆಯಬೇಕು ಎಂಬ ಆಶಯ ವ್ಯಕ್ತಪಡಿಸಿದರು. ಕರ್ನಾಟಕ ಸಂಸ್ಕೃತಿ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಹೊಸಕೋಟೆ ನಟರಾಜ್, ಜಿಲ್ಲಾಧ್ಯಕ್ಷ ಧೃವಕುಮಾರ್, ಮಹಿಳಾ ಘಟಕ ಅಧ್ಯಕ್ಷೆ ಸುಧಾ, ಲಲಿತಾ ಹನುಮಂತಪ್ಪ, ವಿವಿಧ…

Read More

ತುಮಕೂರು: ಸಿರಿಧಾನ್ಯ ಕುರಿತು ಜನಾಂದೋಲನ ರೂಪದಲ್ಲಿ ಪ್ರಚಾರ ಕೈಗೊಂಡು ರಾಜ್ಯವನ್ನು ಸಿರಿಧಾನ್ಯಗಳಿಗೆ ಜಾಗತಿಕ ಕೇಂದ್ರವನ್ನಾಗಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ: ಜಿ. ಪರಮೇಶ್ವರ ತಿಳಿಸಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಹಾಗೂ ಕೃಷಿ ಇಲಾಖೆ ಸಹಯೋಗದಲ್ಲಿ ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ 2 ದಿನಗಳ ಜಿಲ್ಲಾ ಮಟ್ಟದ ಸಿರಿಧಾನ್ಯ ಹಬ್ಬ ಹಾಗೂ ಸಿರಿಧಾನ್ಯ ಉತ್ಪಾದಕರು ಮತ್ತು ಮಾರುಕಟ್ಟೆದಾರರ ರಾಜ್ಯ ಮಟ್ಟದ ಕಾರ್ಯಾಗಾರವನ್ನು ಒನಕೆಯಲ್ಲಿ ಭತ್ತ ಕುಟ್ಟುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ಸಿರಿಧಾನ್ಯಗಳು ಹೆಚ್ಚಿನ ರೋಗ ನಿರೋಧಕ ಶಕ್ತಿಯೊಂದಿಗೆ ಹೇರಳವಾದ ಪೋಷಕಾಂಶಗಳನ್ನು ಹೊಂದಿವೆ. ಸಿರಿಧಾನ್ಯ ಸೇವನೆಯಿಂದ ಆರೋಗ್ಯವರ್ಧನೆಯಾಗುವುದಲ್ಲದೆ ರೋಗ ಮುಕ್ತರಾಗಿ ಆಸ್ಪತ್ರೆಯಿಂದ ದೂರವಿರಬಹುದು ಎಂದು ತಿಳಿಸಿದರು. ತಾಯಂದಿರು ತಮ್ಮ ಮಕ್ಕಳಿಗೆ ಸಿರಿಧಾನ್ಯ ಪದಾರ್ಥಗಳ ಸೇವನೆಯ ಅಭ್ಯಾಸ ಮಾಡಿಸಬೇಕು. ನಿಧಾನವಾಗಿ ಜೀರ್ಣವಾಗಿ ದೇಹಕ್ಕೆ ಶಕ್ತಿವರ್ಧಕವಾಗಿ ಕೆಲಸ ಮಾಡುವ ಗುಣಧರ್ಮವನ್ನು ಹೊಂದಿರುವ ಸಿರಿಧಾನ್ಯಗಳನ್ನು ಜನರು ಹೆಚ್ಚಾಗಿ ಬಳಸಬೇಕು ಎಂದರಲ್ಲದೆ, ಜಿಲ್ಲೆಯು ಸಿರಿಧಾನ್ಯಗಳ ತವರೂರು ಎಂದೆನೆಸಿಕೊAಡಿದೆ.…

Read More

ತುಮಕೂರು; ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕ ತುಮಕೂರು ಇವರ ವತಿಯಿಂದ ಚೊಚ್ಚಲ ಬಾರಿಗೆ ಕಲ್ಪತರು ನಗರಿ ತುಮಕೂರಿನಲ್ಲಿ ರಾಜ್ಯಮಟ್ಟದ 39ನೇ ಪತ್ರಕರ್ತರ ಸಮ್ಮೇಳನವನ್ನು ನಡೆಸಲು ನಿಶ್ಚಯಿಸಿದ್ದು ಈಗಾಗಲೇ ನಿರೀಕ್ಷೆಗೂ ಮೀರಿದ ಸಿದ್ಧತೆಗಳನ್ನ ಕೈಗೊಳ್ಳಲಾಗಿದ್ದು ಕಲ್ಪತರು ನಾಡಿನಲ್ಲಿ ನಡೆಯುವ ರಾಜ್ಯಮಟ್ಟದ ಪತ್ರಕರ್ತರ ಸಮ್ಮೇಳನ ಅರ್ಥಗರ್ಭಿತವಾಗಿ ನಡೆಯಬೇಕಿದೆ ಎಂದು ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ತಿಳಿಸಿದರು. ನಗರದ ಎಸ್‌ಎಸ್‌ಐಟಿ ಕಾಲೇಜು ಕ್ಯಾಂಪಸ್ ಆವರಣದ ಸ್ಟೇಪ್ ಬಿಲ್ಡಿಂಗ್ ಸಭಾಂಗಣದಲ್ಲಿ ರಾಜ್ಯಮಟ್ಟದ ಪತ್ರಕರ್ತರ ಸಮ್ಮೇಳನದ ಕುರಿತಾಗಿ ತುಮಕೂರು ಜಿಲ್ಲಾ ಘಟಕದ ವಿವಿಧ ಉಪ ಸಮಿತಿಗಳ ಸಿದ್ಧತೆ ಮತ್ತು ಕಾರ್ಯವೈಕರಿಗಳ ಬಗ್ಗೆ ಚರ್ಚೆ ನಡೆಸಲು ಕರೆದಿದ್ದ ಸಭೆಯಲ್ಲಿ ಮಾತನಾಡಿದ ಅವರು ಶ್ರೇಷ್ಠತೆಗಳಲ್ಲಿ ವಿಶೇಷತೆ ಎನಿಸಿರುವ ತುಮಕೂರು ಜಿಲ್ಲೆಯು ಶೈಕ್ಷಣಿಕ, ಕಲೆ, ಸಾಹಿತ್ಯ, ರಂಗಭೂಮಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ತನ್ನದೇ ಆದ ಸಾಧನೆಯನ್ನು ತನ್ನ ಮುಡಿಗೇರಿಸಿಕೊಂಡಿದೆ ಅದೇ ನಿಟ್ಟಿನಲ್ಲಿ ಈ ಬಾರಿ ಇಲ್ಲಿ ನಡೆಯುವ 39ನೇ ರಾಜ್ಯಮಟ್ಟದ ಪತ್ರಕರ್ತರ ಸಮ್ಮೇಳನವೂ ಕೂಡ ಇತಿಹಾಸದ ಮೈಲಿಗಲ್ಲು…

Read More

ತುಮಕೂರು: ಕಳೆದ ಐದು ದಿವಗಳಿಂದ ಕರ್ನಾಟಕ ನಾಟಕ ಅಕಾಡೆಮಿ ಹಾಗೂ ಗುಬ್ಬಿ ವೀರಣ್ಣ ಟ್ರಸ್ಟï ವತಿಯಿಂದ ನಡೆದ ಐದು ದಿವಸಗಳ ಹಾಸ್ಯ ಬ್ರಹ್ಮ ದಿ. ನರಸಿಂಹರಾಜು ನಾಟಕೋತ್ಸವಕ್ಕೆ ವಿದ್ಯುಕ್ತವಾಗಿ ತೆರೆ ಬಿತ್ತು. ದಾಕ್ಷಾಯಿಣಿ ಭಟï ನಿರ್ದೇಶನದ ತಾಜï ಮಹಲï ಟೆಂರ್ಡ ನಾಟಕ ಪ್ರದರ್ಶಿಸುವ ಮೂಲಕ ನರಸಿಂಹರಾಜು ನಾಟಕೋತ್ಸವಕ್ಕೆ ತೆರ ಬಿತ್ತು. ಕಾರ್ಯಕ್ರಮದಲ್ಲಿ ಸಮಾರೋಪ ಭಾಷಣ ಮಾಡಿದ ಗುಬ್ಬಿ ವೀರಣ್ಣ ಟ್ರಸ್ಟï ನ ಅಧ್ಯಕ್ಷೆ ಬಿ. ಜಯಶ್ರೀ ಅವರು ನರಸಿಂಹರಾಜು ತುಂಬಿದ ಕೊಡ ಎಂದು ಶ್ಲಾಘಿಸಿದರು. ನಾನು ನಾಲ್ಕು ವರ್ಷದ ಹುಡುಗಿಯಾಗಿz್ದÁಗ ನರಸಿಂಹರಾಜಣ್ಣನವರನ್ನು ನೋಡಿದ್ದು ಅವರು ರಂಗದ ಮೇಲೆ ಬಂದರೆAದರೆ ಜನ ನಗುತ್ತಿದ್ದರು ನಮ್ಮ ಕಂಪೆನಿಯಲ್ಲಿz್ದÁಗ ಅವರು ಹೆಚ್ಚು ಹಾಸ್ಯ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದರು ಎಂದರು. ಗುಬ್ಬಿ ವೀರಣ್ಣನವರ ಹೆಸರಿನಲ್ಲಿ ಕಟ್ಟಿರುವ ರಂಗಮAದಿರದಲ್ಲಿ ಸಂಸ್ಕೃತಿ ಪರಂಪರೆಯನ್ನು ಉಳಿಸಲು ಇಲ್ಲಿಯವರೆಗೆ ಹಲವಾರು ನಾಟಕ ಗಳನ್ನು ಮಾಡಿದ್ದೀವಿ ಆದರೆ ಗುಬ್ಬಿಯ ಜನ ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಬಂದು ನಾಟಕಗಳನ್ನು ಪ್ರೋತ್ಸಾಹಿಸುವ ಅವಶ್ಯಕತೆ ಇದೆ ಎಂದ ಅವರು ನರಸಿಂಹರಾಜು…

Read More

ತುಮಕೂರು: ಒರ್ವ ವ್ಯಕ್ತಿ ಪರಿಪೂರ್ಣ ವ್ಯಕ್ತಿತ್ವವನ್ನು ಹೊಂದಲು ನಾಲ್ಕು ಗೋಡೆಗಳ ಮದ್ಯೆ ಕಲಿಯುವ ಶಿಷ್ಠ ಶಿಕ್ಷಣದ ಜೊತೆಗೆ, ಜಾನಪದಿಂದ ಕಲಿಯುವ ಮಾನವೀಯ ಮೌಲ್ಯಗಳು ಅಗತ್ಯ ಎಂದು ಜಿಲ್ಲಾ ಪಂಚಾಯಿತಿ ಸಿಇಓ ಜಿ.ಪ್ರಭು ಅಭಿಪ್ರಾಯಪಟ್ಟಿದ್ದಾರೆ. ತುಮಕೂರು ವಿವಿ ವಿಜ್ಞಾನ ಕಾಲೇಜಿನ ಸರ್.ಎಂ.ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಕರ್ನಾಟಕ ಜಾನಪದ ಅಕಾಡೆಮಿ, ತುಮಕೂರು ವಿವಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಜಾನಪದದ ನಡೆ, ವಿದ್ಯಾರ್ಥಿಗಳ ಕಡೆ ಎಂಬ ವಿಚಾರ ಸಂಕಿರಣ, ಜಾನಪದ ಗಾಯಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತಿದ್ದ ಅವರು,ಬದುಕಿಬೇಕಾದ ಶೇ45-50ರಷ್ಟು ಅನುಭವಗಳನ್ನು ಶಿಷ್ಠ ಶಿಕ್ಷಣದಿಂದ ಪಡೆದರೆ, ಶೇ35-40ರಷ್ಟು ಅಂಶಗಳನ್ನು ನಾವು ಸಮಾಜವನ್ನು ನೋಡುವುದರಿಂದ ಕಲಿಯುತ್ತೇವೆ.ಆದರೆ ಉಳಿದ 10ರಷ್ಟು ಅಂಶಗಳು ನಮಗೆ ಜಾನಪದದಿಂದ ಸಿಗುತ್ತವೆ.ನಮ್ಮ ನಡೆ, ನುಡಿ, ಆಚಾರ, ವಿಚಾರ ಎಲ್ಲದರ ಮೇಲೆ ಆಯಾಯ ಭಾಗದ ಜನಪದ ಆಚರಣೆಗಳ ಮೇಲೆ ಅವಲಂಬಿತವಾಗಿರುತ್ತವೆ ಎಂದರು. ಜಗತ್ತಿನ ಬೇರೆ ದೇಶಗಳಿಗೆ ಹೊಲಿಸಿದರೆ ಭಾರತದ ದುಡಿಯವ ವಯಸ್ಸಿನ ಮಾನವ ಸಂಪನ್ಮೂಲಕ್ಕೆ ಇಡೀ ಪ್ರಪಂಚದಾದ್ಯAತ ಬೇಡಿಕೆ ಇದೆ. ಐದು ಸಾವಿರದಿಂದ 10 ಸಾವಿರ ವರ್ಷಗಳ ನಾಗರಿಕತೆಯ…

Read More

ಕೊರಟಗೆರೆ: ತುಮಕೂರು ಅಥವಾ ನೆಲಮಂಗಲ ಸಮೀಪ ಅಂತರಾಷ್ಟಿçÃಯ ವಿಮಾನ ನಿಲ್ದಾಣ ಆಗ್ಬೇಕು. ಇದರ ಬಗ್ಗೆ ಗೃಹಸಚಿವ ಡಾ.ಜಿ.ಪರಮೇಶ್ವರ ಜೊತೆ ನಾನು ಈಗಾಗಲೇ ಚರ್ಚಿಸಿದ್ದೀನಿ. ನೀವೇನಾದ್ರು ಬೇರೆಕಡೆ ಮಾಡೋಕೆ ಪ್ರಯತ್ನ ಪಟ್ರೇ ನಮಗೇ ಹೆಚ್‌ಎಎಲ್ ನಿಲ್ದಾಣವೇ ಸಾಕು ಅಂತೀವಿ. ರಾಜ್ಯ ಸರಕಾರಕ್ಕೆ ನಾನು ಟ್ರಂಪ್‌ಕಾರ್ಡ್ ಕೊಟ್ಟಿದ್ದೀನಿ ಎಂದು ಕೇಂದ್ರ ರೈಲ್ವೆಖಾತೆ ಸಚಿವ ವಿ.ಸೋಮಣ್ಣ ತಿಳಿಸಿದರು. ಕೊರಟಗೆರೆ ತಾಲೂಕು ಕೋಳಾಲದ 7ಗ್ರಾಪಂ ಮತ್ತು ಕಸಬಾ ಹೋಬಳಿಯ 6ಗ್ರಾಪಂ ವ್ಯಾಪ್ತಿಯ ಸಾರ್ವಜನಿಕರ ಕುಂದುಕೊರತೆ ಸಭೆ ಹಾಗೂ ಕೇಂದ್ರ ಸರಕಾರದ ಯೋಜನೆಯಡಿ ಬರುವ ಪಲಾನುಭವಿಗಳಿಗೆ ವಿವಿಧ ಇಲಾಖೆಯ ಸವಲತ್ತು ವಿತರಣೆ ಕಾರ್ಯಕ್ರಮವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು. ಕೇಂದ್ರ ಹಣಕಾಸು ಮಂತ್ರಾಲಯ ರಾಜ್ಯ ಸರಕಾರಕ್ಕೆ 6310ಕೋಟಿ ಹಣ ಬಿಡುಗಡೆ ಮಾಡಿದೆ. ಭದ್ರಾಮೆಲ್ದಂಡೆ ಯೋಜನೆಯ ನೀರಾವರಿ ಯೋಜನೆಗೆ ನರೇಂದ್ರಮೋದಿ ಸರಕಾರ ಅಸ್ತು ಅಂದಿದೆ. ತುಮಕೂರು ಜಿಲ್ಲೆಯಲ್ಲಿ 4ದಿಕ್ಕಿನಲ್ಲಿಯು ಅಂತರಾಷ್ಟಿçÃಯ ಹೈವೇಗಳಿವೆ. 40ಸಾವಿರ ಎಕರೇ ಪ್ರದೇಶದಲ್ಲಿ ಇಂಡಸ್ಟಿçÃಯಲ್ ಏರಿಯಾ ಇದೆ. ತುಮಕೂರು ನಗರ ರಾಜಧಾನಿಗೆ ಹತ್ತಿರವಾಗಿ ಬೆಳೆಯುತ್ತೀದೆ. ಗೃಹಸಚಿವ ಡಾ.ಜಿ.ಪರಮೇಶ್ವರ ಹತ್ತಿರ…

Read More