ತುಮಕೂರು: ವೈದ್ಯಕೀಯ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿ ಭಾರತರತ್ನ ಪ್ರಶಸ್ತಿ ಪಡೆದ ಡಾ.ಭಿದಾನ್ ಚಂದ್ರರಾಯ್ ಅವರನ್ನು ಇಂದಿನ ವೈದ್ಯರು ಆದರ್ಶವಾಗಿಟ್ಟುಕೊಂಡು ಸೇವೆ ಮಾಡಬೇಕು. ೧೯೪೮-೧೯೬೨ ರವರೆಗೆ ಸುಮಾರು ೧೪ ವರ್ಷಗಳ ಕಾಲ ಭಾರತದ ಪಶ್ಚಿಮ ಬಂಗಾಳದ ಎರಡನೇ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು, ಇತಿಹಾಸದಲ್ಲಿ ಕೆಲವರು ತಮ್ಮ ಎಫ್.ಆರ್.ಸಿ.ಎಸ್. ಮತ್ತು ಎಂ.ಆರ್.ಸಿ.ಪಿ. ಏಕಕಾಲದಲ್ಲಿ ಅತಿ ಕಡಿಮೆ ಅವಧಿಯಲ್ಲಿ ಪದವಿಯನ್ನು ಪಡೆದರು. ಉತ್ತಮ ಆರೋಗ್ಯ ಸೇವೆಗಳ ಜನಸಾಮಾನ್ಯರಿಗೆ ದೊರಕುವಂತೆ ಸೇವೆ ನಿರ್ವಹಿಸಬೇಕು. ಭಾರತದಲ್ಲಿ ರಾಷ್ಟಿçÃಯ ವೈದ್ಯರ ದಿನವನ್ನು ಪ್ರತಿ ವರ್ಷ ಜುಲೈ ೧ ರಂದು ಹುಟ್ಟಿದ ದಿನ ಮತ್ತು ಮರಣ ಹೊಂದಿದ ದಿನಾಂಕವನ್ನು ಆಚರಿಸಲಾಗುತ್ತದೆ ಎಂದು ತುಮಕೂರು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಚಂದ್ರಶೇಖರ್.ಇ.ಡಿ.ರವರು ತಿಳಿಸಿದರು. ನಗರದ ಶೆಟ್ಟಿಹಳ್ಳಿ ಹೊರವಲಯದ ಜಯನಗರ ದಕ್ಷಿಣದಲ್ಲಿರುವ ವರದರಾಜ ಚಾರಿಟಬಲ್ ಟ್ರಸ್ಟ್ನ ವತಿಯಿಂದ ವರದರಾಜ ನರ್ಸಿಂಗ್ ಕಾಲೇಜು ಹಾಗೂ ಕಸ್ತೂರ್ಬಾ ಆಸ್ಪತ್ರೆಯ ಸಂಯುಕ್ತಾಶ್ರಯದಲ್ಲಿ ಅಂತರಾಷ್ಟಿçÃಯ ವೈದ್ಯರ ದಿನಾಚರಣೆಯನ್ನು-೨೦೨೫ ಜಾಥಾವನ್ನು ಟೌನ್ಹಾಲ್ ಸರ್ಕಲ್ನಿಂದ ಆರಂಭವಾಗಿ ಎಸ್.ಎಸ್.ಪುರಂನ ಕಸ್ತೂರ್ಬಾ ಆಸ್ಪತ್ರೆಯವರೆಗೆ ಜಾಗೃತಿ ಜಾಥಾವನ್ನು ಜುಲೈ…
Author: News Desk Benkiyabale
ತುಮಕೂರು: ಪ್ರಸ್ತುತ ಜಗತ್ತು ವಿಜ್ಞಾನದ ಮೇಲೆ ಅವಲಂಬಿತವಾಗಿದೆ. ದೇಶದ ಅಭಿವೃದ್ಧಿಯನ್ನು ವಿಜ್ಞಾನದ ಮೇಲೆ ಅಳೆಯಲಾಗುತ್ತಿದೆ. ಈ ವಿಜ್ಞಾನ ದುಡಿಮೆಯನ್ನು ಕಲಿಸುತ್ತದೆ. ಕೇವಲ ದುಡಿಮೆಯೇ ಜೀವನವಲ್ಲ ಈ ವಿಜ್ಞಾನದ ಜೊತೆಗೆ ಜ್ಞಾನವೂ ಬೇಕು. ಅತ್ಯುತ್ತಮ ಜೀವನ ಶಿಸ್ತುಬದ್ಧ ನಡತೆಯನ್ನು ಸಾಹಿತ್ಯದ ಅಧ್ಯಯನದಿಂದ ಮಾತ್ರ ಸಾಧ್ಯ. ಇದು ಒಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನು ರೂಪಿಸುವ ಸಾಧನವಾಗಿದೆ ಎಂದು ಜಿಲ್ಲಾ ಪಂಚಾಯತ್ ಸಿ.ಇ.ಓ ಪ್ರಭುರವರು ಅಭಿಪ್ರಾಯಪಟ್ಟರು. ಅವರು ನಗರದ ಎಂಪ್ರೆಸ್ ಪ್ರೌಢಶಾಲೆಯಲ್ಲಿ ಜಿಲ್ಲಾಡಳಿತದ ಸಹಯೋಗದಿಂದಿಗೆ ಜಿಲ್ಲಾ ಕಸಾಪ ಏರ್ಪಡಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ನಡೆ ಶಾಲಾ ಕಾಲೇಜು ಕಡೆ ಎಂಬ ಮೊದಲ ಹಂತದ ೫೩ ಶಾಲೆಗಳಲ್ಲಿ ಏರ್ಪಾಟಾಗಿರುವ ಕಾರ್ಯಕ್ರಮವನ್ನು ಉದ್ಘಾಟಿಸುವ ಮೂಲಕ ಚಾಲನೆ ನೀಡಿದರು. ಜಗತ್ತಿನಲ್ಲಿ ೪೫೦೦ ಭಾಷೆಗಳಿವೆ, ಸಂವಹನ ಕಲೆಯಾದ ಈ ಭಾಷೆಯಲ್ಲಿ ಕನ್ನಡ ಅತ್ಯಂತ ಸುಂದರವಾದುದು. ಕನ್ನಡವನ್ನು ಲಿಪಿಗಳ ರಾಣಿ ಎಂದು ಕರೆಯುವರು ಇಂತಹ ಕನ್ನಡಕ್ಕೆ ಏಳು ಜ್ಞಾನಪೀಠ ಪ್ರಶಸ್ತಿಗಳ ಜೊತೆಗೆ ಅಂತರಾಷ್ಟಿçÃಯ ಬೂಕರ್ ಪ್ರಶಸ್ತಿ ಬಂದಿದೆ. ಇದರಿಂದ ಕನ್ನಡ ಸಾಹಿತ್ಯದ ಆಳ ಅಗಲ…
ತುಮಕೂರು : ಜುಲೈ ೧ ಎಂದಕೂಡಲೇ ಕನ್ನಡ ಪತ್ರಿಕಾ ದಿನ ನೆನಪಾಗುತ್ತದೆ. ಅದನ್ನು ಆಚರಿಸುವುದು, ಸ್ಮರಿಸುವುದು ಎಲ್ಲ ಪತ್ರರ್ತ ರ್ತವ್ಯ. ಪತ್ರಿಕೋದ್ಯಮ ವಿದ್ಯರ್ಥಿಗಳು ಪತ್ರಿಕೋದ್ಯಮದದ ಆಸ್ತಿಯಾಗಬೇಕು ಎಂದು ತುಮಕೂರು ವಿವಿಕುಲಪತಿಗಳಾದ ಪ್ರೊ. ವೆಂಕಟೇಶ್ವರಲು ಕರೆ ನೀಡಿದರು. ತುಮಕೂರು ವಿಶ್ವವಿದ್ಯಾನಿಲಯ ದಲ್ಲಿ ಮಂಗಳವಾರದಂದು ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗ, ತುಮಕೂರು ಜಿಲ್ಲಾ ಕರ್ಯನಿರತ ಪತ್ರರ್ತರ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ ಕನ್ನಡ ಪತ್ರಿಕಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು. ಇತ್ತೀಚಿನ ದಿನಗಳ ಮುದ್ರಣ ಮಾಧ್ಯಮದ ರ್ಚಸ್ಸು ಕಡಿಮೆ ಆಗ್ತಾಯಿದೆ. ಡಿಜಿಟಲೀಕರಣಕ್ಕೆ ಮಾರುಹೋಗ್ತಾ ಇದೆ. ಆದರೆ ಮುದ್ರಣ ಪತ್ರಿಕೋದ್ಯಮ ಇತಿಹಾಸವನ್ನು ತಿಳಿಯುವುದು ಮುಖ್ಯ ಎಂದರು. ಪತ್ರಿಕೆಗಳಿಂದ ಜ್ಞಾನ, ಅಭಿವೃದ್ದಿ, ಸಮಾಜದ ಬದಲಾವಣೆಗೂ ಪತ್ರಿಕೆಗಳ ಪಾತ್ರ ಮುಖ್ಯವಾದದ್ದು. ಒಂದು ಪತ್ರಿಕೆಯಿಂದ ರಾಜಕೀಯವನ್ನು ಬದಲಾಯಿಸುವ ಶಕ್ತಿ ಇದೆ ಎಂದರು. ಪತ್ರಿಕೆಗಳನ್ನು ಓದುವ ಮತ್ತು ಬರೆಯುವ ಕೌಶಲ್ಯಗಳನ್ನು ಬೆಳೆಸಿಕೊಳ್ಳ ಬೇಕು. ಓದುವ ಅವ್ಯಾಸವನ್ನು ವಿದ್ಯರ್ಥಿ ಜೀವನದಲ್ಲೇ ಬೆಳೆಸಿಕೊಳ್ಳಬೇಕು. ಅದರಿಂದ ಜ್ಞಾನ ಭಂಡಾರ ಹೆಚ್ಚಾಗುತ್ತದೆ. ಡಿಜಿಟಲೀಕರಣ ದಿಂದ ಜಡ್ಜ್ ಮಾಡುವುದನ್ನೇ ಮರೆತು…
ಹುಳಿಯಾರು: ಹುಳಿಯಾರಿನ ಪರ್ತಕರ್ತ ಎಚ್.ಎ.ರಮೇಶ್ ಅವರ ಸಂಕಷ್ಟಕ್ಕೆ ಶಾಸಕ ಸಿಬಿ ಸುರೇಶ್ ಬಾಬು ಅವರು ಸ್ಪಂದಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಎಚ್.ಎ.ರಮೇಶ್ ಅವರಿಗೆ ಬ್ರೆöÊನ್ ಟುಮರ್ ಆಗಿ ಎರಡು ಕಣ್ಣುಗಳು ಕಾಣದಾಗಿದ್ದವು. ಜಿಲ್ಲಾ ಪತ್ರಕರ್ತರ ಸಂಘ ಆಯುಷ್ಮಾನ್ ಭಾರತ್ ಶಸ್ತç ಚಿಕಿತ್ಸೆಗೆ ವ್ಯವಸ್ಥೆ ಮಾಡಿಕೊಟ್ಟಿತ್ತು. ಚಿಕ್ಕನಾಯಕನಹಳ್ಳಿ ತಾಲೂಕು ಪತ್ರಕರ್ತರ ಸಂಘ ೪೪ ಸಾವಿರ ರೂ. ಸಂಗ್ರಹಿಸಿ ಕೊಟ್ಟಿತ್ತು. ಕಳೆದ ವಾರ ಮೆದುಳಿನ ಶಸ್ತç ಚಿಕಿತ್ಸೆ ಮಾಡಲಾಗಿತ್ತಾದರೂ ಸಹ ಕಣ್ಣುಗಳು ಮೊದಲಿನಂತಾಗಲಿಲ್ಲ. ವೈದ್ಯರು ಕೂಡ ದೇವರ ಮೇಲೆ ಭಾರ ಹಾಕಿ ಇನ್ನೆರಡು ತಿಂಗಳಲ್ಲಿ ಕಣ್ಣು ಬಂದರು ಬರಬಹುದು ಎಂದು ಹೇಳಿ ಕಳಿಸಿದ್ದಾರೆ. ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಸಾಕಿ ಸಲುಹಿಸಬೇಕಿದ್ದ ಕುಟುಂಬದ ಯಜಮಾನ ಎರಡು ಕಣ್ಣು ಕಾಣದೆ ಅಸಹಾಯಕ ಸ್ಥಿತಿಗೆ ಜಾರಿಕೊಂಡಿದ್ದ. ಪರಿಣಾಮ ಮಕ್ಕಳ ವಿದ್ಯಾಭ್ಯಾಸ ಕುಟುಂಬದ ನಿರ್ವಹಣೆ ನೆನೆದು ಪತ್ನಿ ಚಿಂತಾಕ್ರಾAತರಾಗಿದ್ದರು. ವಿಷಯ ತಿಳಿದ ಚಿಕ್ಕನಾಯಕನಹಳ್ಳಿ ಶಾಸಕ ಸಿಬಿ ಸುರೇಶ್ ಬಾಬು ಅವರು ಪತ್ರಕರ್ತನ ಮನೆಗೆ ಖುದ್ದು ಭೇಟಿ ನೀಡಿ ವೈಯಕ್ತಿಕವಾಗಿ…
ತುಮಕೂರು: ವಿದ್ಯುತ್ ಅವಘಡಗಳನ್ನು ತಪ್ಪಿಸಲು ಸಾರ್ವಜನಿಕರು ಸುರಕ್ಷತಾ ನಿಯಮಗಳನ್ನು ಪಾಲಿಸಬೇಕು ಎಂದು ಬೆಸ್ಕಾಂ ಅಧೀಕ್ಷಕ ಇಂಜಿನಿಯರ್ ನರಸಿಂಹಮೂರ್ತಿ ಮನವಿ ಮಾಡಿದರು. ರಾಷ್ಟಿçÃಯ ವಿದ್ಯುತ್ ಸುರಕ್ಷತಾ ಸಪ್ತಾಹ-೨೦೨೫ರ ಅಂಗವಾಗಿ ನಗರದ ಬೆಸ್ಕಾಂ ಅಧೀಕ್ಷಕ ಇಂಜಿನಿಯರ್ ಅವರ ಕಚೇರಿ ಆವರಣದಲ್ಲಿಂದು ಏರ್ಪಡಿಸಿದ್ದ ವಿದ್ಯುತ್ ಸುರಕ್ಷತಾ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸಾರ್ವಜನಿಕರಿಗೆ ಅರಿವಿಲ್ಲದೆ ಹಲವಾರು ವಿದ್ಯುತ್ ಅವಘಡಗಳು ಸಂಭವಿಸುತ್ತವೆ. ಈ ನಿಟ್ಟಿನಲ್ಲಿ ವಿದ್ಯುತ್ ಬಳಕೆ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಈ ಜಾಥಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ವಿದ್ಯುತ್ ಅವಘಡಗಳಿಗೆ ಸಂಬAಧಿಸಿದAತೆ ದೂರು ಕರೆಗಳು ಬಂದರೆ ಬೆಸ್ಕಾಂನಿAದ ತುರ್ತಾಗಿ ಸೇವೆ ಒದಗಿಸಲಾಗುವುದು ಎಂದು ಹೇಳಿದರು. ಕಾರ್ಯನಿರ್ವಾಹಕ ಇಂಜಿನಿಯರ್ ಹಾಗೂ ವಿದ್ಯುತ್ ಪರಿವೀಕ್ಷಕ ಪ್ರಶಾಂತ್ ಕೂಡ್ಲಿಗಿ ಮಾತನಾಡಿ, ಸಾರ್ವಜನಿಕರೊಂದಿಗೆ ಹೆಚ್ಚಿನ ಸಂಪರ್ಕದಲ್ಲಿರುವ ಲೈನ್ ಮ್ಯಾನ್ಗಳು ವಿದ್ಯುತ್ ಅವಘಡ ಸಂಭವಿಸದAತೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಜನಜಾಗೃತಿ ಮೂಡಿಸಬೇಕು. ವಿದ್ಯುತ್ ಸುರಕ್ಷತಾ ನಿಯಮಗಳನ್ನು ಪಾಲಿಸುವುದರಿಂದ ಉಂಟಾಗಬಹುದಾದ ವಿದ್ಯುತ್ ಅವಘಡಗಳನ್ನು ತಪ್ಪಿಸಬಹುದು ಎಂದರು. ಬೆಸ್ಕಾA ಉಪವಿದ್ಯುತ್ ಪರಿವೀಕ್ಷಕ…
ಚಿಕ್ಕನಾಯಕನಹಳ್ಳಿ: ಸರ್ಕಾರಿ ಜಾಗದಲ್ಲಿ ೭೦ವರ್ಷದಿಂದ ವಾಸವಿರುವ ನಿವೇಶನರಹಿತ ಕುಟುಂಬಗಳಿಗೆ ಜಾಗದ ಹಕ್ಕುಪತ್ರ ನೀಡುವಂತೆ ಒತ್ತಾಯಿಸಿ ಭಾರತೀಯ ಕಿಸಾನ್ ಸಂಘದಿAದ ಸಂತ್ರಸ್ಥರಪರವಾಗಿ ವರಿಷ್ಠರ ವಿಳಾಸಕ್ಕೆ ಅಂಚೆ ಮೂಲಕ ಮನವಿಸಲ್ಲಿಸಲಾಯಿತು. ಪಟ್ಟಣದ ಅಂಚೆ ಇಲಾಖೆಯ ಮುಂದೆ ಹಕ್ಕುಪತ್ರ ವಂಚಿತ ವಸತಿರಹಿತರ ಪರವಾಗಿ ಭಾರತೀಯ ಕಿಸಾನ್ ಸಂಘದ ರಾಷ್ಟಿçÃಯ ಅಧ್ಯPಕ್ಷ ಎಚ್.ಆರ್. ಭೋಜರಾಜ್ ಮಾತನಾಡಿ ತಾಲ್ಲೂಕಿನ ಶೆಟ್ಟಿಕೆರೆ ಗ್ರಾಮದ ಸ.ನಂ.೮/೧.೮/೨.೮/೩ರ ೨.೨೬ ಎಕರೆ ಸರ್ಕಾರಿ ಜಾಗದಲ್ಲಿ ಅತಿ ಹಿಂದುಳಿದ ಹಾಗೂ ದಲಿತರ ೩೦ ಕುಟುಂಬಗಳು ಸುಮಾರು ೭೦ವರ್ಷದಿಂದ ಮನೆಗಳನ್ನು ನಿರ್ಮಿಸಿಕೊಂಡು ವಾಸಿಸುತ್ತಿದ್ದಾರೆ. ಈ ಮನೆಗಳಿಗೆ ನಲ್ಲಿ ಹಾಗೂ ವಿದ್ಯುತ್ಸಂಪರ್ಕಮುAತಾದ ಮೂಲಭೂತ ಸೌಕರ್ಯಗಳನ್ನು ನೀಡಲಾಗಿದೆ. ಆದರೆ ಹಲವು ವರ್ಷಗಳಿಂದ ಇಲ್ಲಿನ ನಿವಾಸಿಗಳು ಹಲವು ಬಾರಿ ಜಾಗದ ಹಕ್ಕುಪತ್ರ ನೀಡುವಂತೆ ಗ್ರಾಮ ಪಂಚಾಯಿತಿಗೆ ಮನವಿ ಮಾಡಿಕೊಂಡು ಬಂದಿದ್ದರೂ ಈವರೆಗೂ ನೀಡುತ್ತಿಲ್ಲ, ಸದರಿ ಜಾಗದಲ್ಲಿ ವಾಸಿಸುವ ಕೆಲವೇ ಕುಟುಂಬಗಳಿಗೆ ಹಕ್ಕುಪತ್ರ ನೀಡಿದ್ದು, ನಮಗೆ ನೀಡದೆ ತಾರತಮ್ಯ ನೀತಿ ಅನುಸರಿಸುತ್ತಿದ್ದಾರೆ. ೧೯೬೭ ರಲ್ಲಿ ತಾಲ್ಲೂಕು ಡೆವಲಪ್ಮೆಂಟ್ ಬೋರ್ಡ್ಗೆ ಈ ನಿವೇಶನದ ಅಲಿನೇಷನ್ಗೆ…
ಚಿಕ್ಕನಾಯಕನಹಳ್ಳಿ: ತಾಲ್ಲೂಕಿನ ೨೬ಕೆರೆಗಳಿಗೆ ಹೇಮಾವತಿ ನಾಲೆಯಿಂದ ನೀರುಣಿಸುವ ಯೋಜನೆ ಜಾರಿಯಾಗಿ ಹಲವು ವರ್ಷಕಳೆದರೂ ಮುಗಿಯದ ಕಾರಣ ಯೋಜನೆಯ ಅನುಷ್ಠಾನಕ್ಕಾಗಿ ನಾಲಾ ಭಾಗದ ರೈತರಿಂದ ಪೂರ್ವಬಾವಿ ಸಭೆ ನಡೆಯಿತು. ಶನಿವಾರ ತಾಲ್ಲೂಕಿನ ಶೆಟ್ಟಿಕೆರೆಯ ಶ್ರೀ ಕಟ್ಟೆರಂಗನಾಥಸ್ವಾಮಿ ದೇವಾಲಯದ ಬಳಿ ನಡೆದ ಸಭೆಯಲ್ಲಿ. ಸಾರ್ವಜನಿಕ ಸುರಕ್ಷಿತ ಸೇವಾ ಸಂಘದ ರಾಜ್ಯಾಧ್ಯಕ್ಷ ಎ.ಬಿ. ಶರತ್ಕುಮಾರ್ ಮಾತನಾಡಿ ಹೇಮಾವತಿ ನಾಲೆಯು ಈ ಭಾಗಕ್ಕೆ ಹರಿಯವಲ್ಲಿ ನಮ್ಮದೆ ಹೋರಾಟದ ಇತಿಹಾಸವಿದೆ, ಈ ಭಾಗಕ್ಕೆ ನೀರೇ ಹರಿಯುವುದಿಲ್ಲ ಎಂಬ ಭಾವನೆಯನ್ನು ಸುಳ್ಳು ಮಾಡಿ, ಸರ್ವೆ ಕಾರ್ಯಕ್ಕೆ ಸರ್ಕಾರದಿಂದ ಅನುಮೂದನೆ ಪಡೆದು, ನಂತರದ ವರದಿಯ ಆಧಾರದ ಮೇಲೆ ಜನಜಾನುವಾರುಗಳ ಕುಡಿಯುವ ನೀರಿಗಾಗಿ ಹಾಗೂ ಅಂತರ್ಜಲ ಅಭಿವೃದ್ದಿಗಾಗಿ ೨೬ಕೆರೆಗಳಿಗೆ ನೀರುಣಿಸು ಯೋಜನೆ ಸಿದ್ದವಾಯಿತೆಂದರು. ಆದರೆ ಈ ವರೆಗೂ ಯೋಜನೆಯ ಕಾಲುಭಾಗವೂ ಅನುಷ್ಠಾನವಾಗಿಲ್ಲ. ರಾಜಕೀಯ ನಾಯಕರು ಇದನ್ನು ದಾಳವಾಗಿ ಪರಿಗಣಿಸಿದರ ಫಲವನ್ನು ತಾಲ್ಲೂಕಿನ ರೈತರು ಅನುಭವಿಸುತ್ತಿದ್ದಾರೆ. ಈ ನೀರಿನ ಅಂತರ್ಜಲದ ಆಧಾರದಮೇಲೆ ಕೃಷಿ ಮಾಡುತ್ತಿರುವ ರೈತರು ಆತಂಕದಲ್ಲಿಯೇ ಇರುವಂತಾಗಿದೆ. ತಾಲ್ಲೂಕಿನ ರೈತರ ಶಾಶ್ವತ ನೀರಿನ…
ತುಮಕೂರು: ಪ್ರಸ್ತುತ ದಿನಗಳಲ್ಲಿ ಕನ್ನಡದ ಸಾಹಿತಿಗಳು, ಕವಿಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಅಗತ್ಯವಿದೆ ಎಂದು ಕರ್ನಾಟಕ ಭೋವಿ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಹೆಚ್.ಹೆಚ್. ವೆಂಕಟೇಶ್ ತಿಳಿಸಿದರು. ನಗರದ ಕನ್ನಡ ಭವನದಲ್ಲಿ ಹನಿ ನಿಧಿ ಸಾಹಿತ್ಯ ಸಾಂಸ್ಕöÈತಿಕ ಕಲಾ ಟ್ರಸ್ಟ್, ಗುಬ್ಬಿ, ಕಸಾಪ ಜಿಲ್ಲಾ ಘಟಕ ಹಾಗೂ ತಾಲ್ಲೂಕು ಘಟಕ ಗುಬ್ಬಿ ಮತ್ತು ಶ್ರೀಗಂಧ ಸಾಹಿತ್ಯ ಸಾಂಸ್ಕöÈತಿಕ ಕಲಾ ಬಳಗದ ಸಂಯುಕ್ತಾಶ್ರಯದಲ್ಲಿ ೩ನೇ ರಾಜ್ಯಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ, ಪುಸ್ತಕ ಮತ್ತು ಸಾಹಿತ್ಯ ನಿಧಿ ಮಾಸ ಪತ್ರಿಕೆ ಬಿಡುಗಡೆ ಹಾಗೂ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭ ಮತ್ತು ಕವಿಗೋಷ್ಠಿಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಪ್ರತಿಯೊಬ್ಬರೂ ಸಹ ಕನ್ನಡ ಸಾಹಿತ್ಯ ಕಾರ್ಯ ಕ್ರಮಗಳಿಗೆ ಹೆಚ್ಚು ಒತ್ತು ಕೊಡಬೇಕು. ಎಲ್ಲೆಡೆ ಕನ್ನಡ ಅಭಿಮಾನ ಮೊಳಗಬೇಕು. ಹೀಗಾದಾಗ ಮಾತ್ರ ಕನ್ನಡವನ್ನು ಉಳಿಸಿ ಬೆಳೆಸಲು ಸಾಧ್ಯವಾಗಲಿದೆ ಎಂದು ಅವರು ಹೇಳಿದರು. ಇಂದಿನ ಯುವ ಸಮೂಹ ಕನ್ನಡದ ಕಾರ್ಯಕ್ರಮಗಳ ಬಗ್ಗೆ ಹೆಚ್ಚು ಹೆಚ್ಚು ಒಲವು ತೋರಬೇಕು. ಇಂತಹ ಕಾರ್ಯಕ್ರಮಗಳಿಗೆ ತಾವು…
ತುಮಕೂರು: ತುಮಕೂರು ರಾಜ್ಯ ರಾಜ್ಯಧಾನಿಗೆ ಹತ್ತಿರವಾಗಿ ವೇಗವಾಗಿ ಬೆಳವಣಿಗೆ ಕಾಣುತ್ತಿರುವ ನಗರವಾಗಿದ್ದು ಇಲ್ಲಿ ಪ್ರತಿನಿತ್ಯ ಒಂದಿಲ್ಲೊ0ದು ಸಮಸ್ಯೆಗಳು ನಾಗರೀಕರನ್ನ ಕಾಡುತ್ತಿವೆ ನಗರದ ಗುಬ್ಬಿ ಗೇಟ್ ಬಳಿ ಇರುವ ರಿಂಗ್ ರಸ್ತೆ, ಗಾರ್ಡನ್ ರಸ್ತೆ, ಸೇರಿದಂತೆ ಇತರೆ ರಸ್ತೆಗಳಲ್ಲಿ ಅಳವಡಿಸಿರುವ ಯುಜಿಡಿ ಚೇಂಬರ್ ನಿಂದ ಅಪಘಾತಗಳಾಗಿ ಪ್ರಾಣ ಹಾನಿಗಳಾಗಿರುವ ಘಟನೆಗಳು ನಡೆದಿದ್ದು ಇಂತಹ ದುರ್ಘಟನೆಗಳು ನಡೆಯದಂತೆ ಜಿಲ್ಲಾಧಿಕಾರಿಗಳು ಮತ್ತು ಪಾಲಿಕೆ ಆಯುಕ್ತರು ಸೂಕ್ತ ಕ್ರಮ ವಹಿಸಬೇಕು ಎಂದು ಡಾ. ಎಪಿಜೆ ಅಬ್ದುಲ್ ಕಲಾಂ ಫೌಂಡೇಶನ್ ಅಂಡ್ ಅಕಾಡೆಮಿ ಅಧ್ಯಕ್ಷರು, ಸಾಮಾಜಿಕ ಕಾರ್ಯಕರ್ತರಾದ ನಿಸಾರ್ ಅಹಮದ್ ಆರಿಫ್ ಅವರು ಒತ್ತಾಯಿಸಿದ್ದಾರೆ. ನಗರದ ಪ್ರಮುಖ ರಸ್ತೆಗಳಲ್ಲಿ ಅಳವಡಿಸಿರುವ ಯುಜಿಡಿ ಚೆಂಬರ್ ನಿಂದಾಗಿ ಪ್ರತಿನಿತ್ಯ ಅಪಘಾತಗಳು ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಇದನ್ನು ಮನಗಂಡ ಸಾಮಾಜಿಕ ಕಾರ್ಯಕರ್ತ ನಿಸಾರ್ ಅಹಮದ್ ಆರಿಫ್ ಪಾಲಿಕೆ ವ್ಯಾಪ್ತಿಯಲ್ಲಿ ನಿರ್ಮಾಣ ಮಾಡಿರುವ ಯುಜಿಡಿ ಕಾಮಗಾರಿಗಳು ಅವೈಜ್ಞಾನಿಕವಾಗಿದ್ದು ಕಳಪೆ ಗುಣಮಟ್ಟದಿಂದ ಕೂಡಿರುತ್ತದೆ ನನಗೂ ಕೂಡ ಈ ಅಪಘಾತದ ಅನುಭವವಾಗಿದ್ದು ದಿನಾಂಕ ೨೧-೦೫-೨೦೨೫ ರ ರಾತ್ರಿ ಸುಮಾರು…
ತುಮಕೂರು: ಭಾರತ ಸರಕಾರ ಹಣಕಾಸು ಇಲಾಖೆಯ ಅಡಿಯಲ್ಲಿ ಬರುವ ಹಣಕಾಸು ಸಾಕ್ಷರತೆ ಯೋಜನೆಯಲ್ಲಿ ಜನರಿಗೆ ಡಿಜಿಟಲೀಕರಣದ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಮೊಬೈಲ್ ಡಿಜಿಟಲ್ ವಾಹನಕ್ಕೆ ಚಾಲನೆ ನೀಡಲಾಗಿದೆ. ಇದರ ಸದುಪಯೋಗವನ್ನು ಗ್ರಾಮೀಣ ಜನರು ಪಡೆದುಕೊಳ್ಳಬೇಕೆಂದು ಕೇಂದ್ರ ಜಲಶಕ್ತಿ ಮತ್ತು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ. ಪ್ರವಾಸಿ ಮಂದಿರದಲ್ಲಿ ಇರುವ ತಮ್ಮ ಕಚೇರಿಯಲ್ಲಿ ತುಮಕೂರು ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಸಂಚರಿಸಿ, ಜನಸಾಮಾನ್ಯರಿಗೆ ಅಗತ್ಯವಿರುವ ಡಿಜಿಟಲ್ ಸೇವೆ ಒದಗಿಸುವ ಮೊಬೈಲ್ ಸೇವೆಗೆ ಚಾಲನೆ ನೀಡಿ ಮಾತನಾಡಿದ ಅವರು,ಈ ಮೊಬೈಲ್ ಸಿಎನ್ಸಿ ಸೆಂಟರ್ನಿ0ದ ಕೇಂದ್ರ ಮತ್ತು ರಾಜ್ಯ ಸರಕಾರಗಳ ಎಲ್ಲಾ ಯೋಜನೆಗಳ ಫಲಾನುಭವಿಗಳಿಗೆ ಅನುಕೂಲವಾಗಲಿದೆ.sÀಸಲ್ ಭೀಮಾದಿಂದ ಹಿಡಿದು,ಕೃಷಿಕ ಸನ್ಮಾನ್ ಸೇರಿದಂತೆ ಎಲ್ಲಾ ನೇರ ನಗದು ವರ್ಗಾವಣೆ ಯೋಜನೆಗಳ ಸೇವೆಯನ್ನು ಪಡೆದುಕೊಳ್ಳಬಹುದಾಗಿದೆ ಎಂದರು. ತುಮಕೂರು ಜಿಲ್ಲೆಯ ಸರ್ವಾಂಗೀಣ ಅಭಿವೃದ್ದಿಯಲ್ಲಿ ದಾಪುಗಾಲು ಇಡುವ ನಿಟ್ಟಿನಲ್ಲಿ ಆಗಿಂದಾಗ್ಗೆ ಹಿರಿಯ ಮಂತ್ರಿಗಳು, ಅಧಿಕಾರಿಗಳನ್ನು ಭೇಟಿಯಾಗುವುದು ಸಾಮಾನ್ಯವಾಗಿದೆ.ಕೆ,ಎನ್.ರಾಜಣ್ಣ ಅವರ ಸೆಪ್ಟಂಬರ್ ಕ್ರಾಂತಿ ಕುರಿತು ಮಾತನಾಡಿದ ವಿ.ಸೋಮಣ್ಣ, ಸಿದ್ದರಾಮಯ್ಯ ನೇತೃತ್ವದ…