ತುಮಕೂರು: ಜಿಲ್ಲೆಯಾದ್ಯಂತ ನಡೆಯುತ್ತಿರುವ ಮೇ ೫ ರಿಂದ ಪರಿಶಿಷ್ಟ ಜಾತಿಯ ಉಪಜಾತಿಗಳ ಸಮಗ್ರ ಸಮೀಕ್ಷಾ ಕಾರ್ಯವು ಕೆಲ ತಾಲೂಕುಗಳಲ್ಲಿ ನಿಧಾನಗತಿಯಲ್ಲಿ ಸಾಗುತ್ತಿದ್ದು, ನಿರೀಕ್ಷಿತ ಮಟ್ಟದಲ್ಲಿ ಸಮೀಕ್ಷಾ ಕಾರ್ಯ ನಡೆಯುತ್ತಿಲ್ಲ. ಈ ಹಿನ್ನೆಲೆಯಲ್ಲಿ ಸಮೀಕ್ಷಾ ಕಾರ್ಯಕ್ಕೆ ಹಾಜರಾಗದ ಗಣತಿದಾರರಿಗೆ ಶೋಕಾಸ್ ನೋಟಿಸ್ ನೀಡಬೇಕೆಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಡಿಡಿಪಿಐಗಳಿಗೆ ಖಡಕ್ ಸೂಚನೆ ನೀಡಿದರು. ಜಿಲ್ಲಾಧಿಕಾರಿಗಳ ಕಚೇರಿ ಕೆಸ್ವಾನ್ ಸಭಾಂಗಣದಲ್ಲಿ ಶುಕ್ರವಾರ ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಮಗ್ರ ಪರಿಶಿಷ್ಟ ಜಾತಿ ಉಪಜಾತಿಯ ಸಮೀಕ್ಷೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು ಗಣತಿದಾರರು ಪ್ರಾಮಾಣಿಕತೆ ಹಾಗೂ ನಿಷ್ಠೆಯಿಂದ ಸಮೀಕ್ಷೆಯನ್ನು ನಡೆಸಬೇಕು. ನೋಡಲ್ ಅಧಿಕಾರಿಗಳು ಪ್ರತಿ ದಿನಗಳಿಗೊಮ್ಮೆ ಸಮೀಕ್ಷೆ ನಡೆಯುವ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು. ಕ್ಷೇತ್ರ ಶಿಕ್ಷಣಾಧಿಕಾರಿಗಳು ಪ್ರತಿದಿನ ಗಣತಿ ನಡೆಯುವ ಸ್ಥಳಕ್ಕೆ ಭೇಟಿ ನೀಡಿ ಗಣತಿದಾರರಿಗೆ ಮಾರ್ಗದರ್ಶನ ನೀಡಬೇಕು ಎಂದು ನಿರ್ದೇಶನ ನೀಡಿದರು. ಪರಿಶಿಷ್ಟ ಜಾತಿ ಸಮೀಕ್ಷೆಯನ್ನು ಯಾವುದೇ ಗೊಂದಲಗಳುAಟಾಗದAತೆ ನಡೆಸಿ ನೈಜ ಮಾಹಿತಿಯನ್ನು ಸಂಗ್ರಹಿಸಬೇಕು. ನೆಟ್ವರ್ಕ್ ಸಮಸ್ಯೆ…
Author: News Desk Benkiyabale
ತುಮಕೂರು: ಸ್ಲಂ ಜನಾಂದೋಲನ ಕರ್ನಾಟಕ ಮತ್ತು ತುಮಕೂರು ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿಯಿಂದ ಇದೇ ಮೇ ೨೫ ರಂದು ನಡೆಯಲಿರುವ ಸ್ಲಂ ಜನರ ಹಬ್ಬ, ಸಮಾವೇಶ ಮತ್ತು ಪ್ರತಿಭಾಪುರಸ್ಕಾರದ ಕರಪತ್ರ ಬಿಡುಗಡೆ ಮಾಡಲಾಯಿತು. ನಗರದ ಸೂಫಿಯಾ ಕಾನೂನು ಕಾಲೇಜಿನ ಪ್ರಾಂಶುಪಾಲರಾದ ಡಾ.ಎಸ್ ರಮೇಶ್ ಕರಪತ್ರ ಬಿಡುಗಡೆ ಮಾಡಿ ಪ್ರತಿಯೊಂದು ಸ್ಲಂಗಳು ಪುಟ್ಟ ಭಾರತ ಇಲ್ಲಿರುವ ಬಹುತ್ವಯುತ ಸಂಸ್ಕೃತಿ, ಸಂಪ್ರದಾಯ, ಆಚಾರ, ವಿಚಾರ, ಜಾತಿ, ಧರ್ಮ, ಭಾಷೆಗಳಿದ್ದರು ಸ್ಲಂಗಳಲ್ಲಿ ಸೋದರತೆಯ ಸೌಹಾರ್ಧತೆಯಲ್ಲಿ ಬದುಕು ಕಟ್ಟಿಕೊಳ್ಳುತ್ತಿರುವುದು ಇಂದಿನ ಮನುಷ್ಯ ಸಮಾಜಕ್ಕೆ ಮಾದರಿಯಾಗಿದೆ. ಕಳೆದ ೨೦ ವಷಗಳಲ್ಲಿ ಕರ್ನಾಟಕದ ನಗರ ಪ್ರದೇಶಗಳಲ್ಲಿ ಕೆಳಜಾತಿಯ ಬಡ ಜನರು ವಾಸಿಸುವ ಕೊಳಚೆ ಪ್ರದೇಶಗಳಲ್ಲಿರುವ ಶ್ರಮ ಸಂಸ್ಕೃತಿ ಹಲವಾರು ಪಲ್ಲಟನೆಗಳನ್ನು ತಂದಿದ್ದು ಶ್ರಮಿಕರ ಸಾಂಸ್ಕೃತಿಕತೆಯನ್ನು ಬೆಸೆಯುತ್ತಿದ್ದು ೨೦೦೭ರಲ್ಲಿ ಪ್ರಾರಂಭಿಸಲಾದ ಸ್ಲಂ ಹಬ್ಬ ಸ್ಲಂ ನಿವಾಸಿಗಳಿಗೆ ನಗರದ ಮೇಲಿನ ಉತ್ತರದಾಯಕತ್ವಕ್ಕಾಗಿ ಮತ್ತು ಸಾಂಸ್ಕೃತಿಕ ನೆಲೆಗಾಗಿ ತಳಸಮುದಾಯಗಳನ್ನು ಕಲೆಗಳ ಅನಾವರದಿಂದಾಗಿ ನಗರ ಪ್ರದೇಶಗಳಲ್ಲಿರುವ ಅಭಿವೃದ್ಧಿ ತಾರತಮ್ಯ, ಅಸಮಾನತೆಗಳನ್ನು ನಗರ ವಂಚಿತ ಸಮುದಾಯಗಳು…
ತುಮಕೂರು: ಮನುಷ್ಯನನ್ನು ಕಾಡುತ್ತಿರುವ ಅನೇಕ ಗಂಬೀರ ಕಾಯಿಲೆಗಳಿಗೆ ಇಂದಿನ ತಾಂತ್ರಿಕ ನಡೆಯುತ್ತಿರುವ ವೈದ್ಯಕೀಯ ಸಂಶೋಧನೆಗಳು ಉತ್ತರ ನೀಡಿವೆ ಎಂದು ಸಾಹೇ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಡಾ. ಕೆ.ಬಿ.ಲಿಂಗೇಗೌಡ ಅವರು ತಿಳಿಸಿದರು. ನಗರದ ಸಮೀಪದ ನೆಲಮಂಗಲ ಸಮೀಪದ ಟಿ.ಬೇಗೂರಿನ ಶ್ರೀ ಸಿದ್ದಾರ್ಥ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಅಂಡ್ ರಿಸರ್ಚ್ ಸೆಂಟರ್‌ನಲ್ಲಿ ಇಂದು (ಮೇ.೯)ಸಾಹೇ ವಿಶ್ವವಿದ್ಯಾಲಯ, ಕಾಲೇಜಿನ ಆತಂರಿಕ ಗುಣಮಟ್ಟ ಘಟಕ ಹಾಗೂ ಕರ್ನಾಟಕ ಆರೋಗ್ಯ ಇಲಾಖೆ, ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ‘ನಿರಂತರ ವೈದ್ಯಕೀಯ ಶಿಕ್ಷಣ’ ಎಂಬ ಘೋಷ ವಾಕ್ಯದೊಂದಿಗೆ ‘ಆಧುನಿಕ ವೈದ್ಯಕೀಯ ಕೌಶಲ್ಯ ಪರಿಪಕ್ವತೆ ಸಂಶೋಧನಾ ವಿಧಾನಗಳು’ ವಿಷಯ ಕುರಿತು ಕಾರ್ಯಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಬೆಂಗಳೂರು ಗ್ರಾಮೀಣ ಭಾಗದ ಜನಸಾಮಾನ್ಯರಿಗೆ ಶಿಕ್ಷಣ ನೀಡಬೇಕು ಎಂಬ ಎಪ್ಪತ್ತರ ದಶಕದ ಕನಸು ಕಂಡಿದ್ದ ಓರ್ವ ಸಾಮಾನ್ಯ ಶಾಲಾ ಶಿಕ್ಷಕ ಗಂಗಾಧರಯ್ಯನವರು ಕನಸಿನಂತೆ ಸಿದ್ದಾರ್ಥ ಶಿಕ್ಷಣ ಸಂಸ್ಥೆಯನ್ನು ಮುಗಿಲು ಎತ್ತರಕ್ಕೆ ಕಟ್ಟಿ ಬೆಳೆಸಿರುವ ಸಾಹೇ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಡಾ. ಜಿ ಪರಮೇಶ್ವರ್ ಅವರು ಉತ್ತಮವಾದ…
ತುರುವೇಕೆರೆ: ಅಕ್ರಮ ಕಲ್ಲುಗಣಿಗಾರಿಕೆ ನೆಡೆಸುತ್ತಿರುವ ಕ್ರಷರ್ ಮಾಲೀಕರ ವಿರುದ್ಧ ಜಿಲ್ಲಾ, ತಾಲೂಕು ಆಡಳಿತ ಕೂಡಲೇ ಕ್ರಮ ಕೈಗೊಂಡು ಕ್ರಷರ್ ಯಂತ್ರ ತೆರವುಗೊಳಿಸದಿದ್ದರೆ ರೈತರೇ ತೆರವುಗೊಳಿಸಲು ಮುಂದಾಗಬೇಕಾಗುತ್ತದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಧನಂಜಯ ಆರಾದ್ಯ ಎಚ್ಚರಿಸಿದರು. ತಾಲೂಕಿನ ಕೋಳಘಟ್ಟ ಗ್ರಾಮದ ಸರ್ವ ನಂಬರ್ ನಲ್ಲಿ ನೆಡೆಯುತ್ತಿರುವ ಕಲ್ಲು ಗಣಿಗಾರಿಕೆ ಕ್ರಷರ್ ಮಾಲೀಕನ ವಿರುದ್ದ ಗ್ರಾಮಸ್ಥರು ನೆಡೆಸುತ್ತಿರುವ ಆಹೋ ರಾತ್ರಿ ಪ್ರತಿಭಟನೆ ಹೋರಾಟದಲ್ಲಿ ಶುಕ್ರವಾರ ಭಾಗವಹಿಸಿ ಮಾತನಾಡಿದ ಅವರು ಈ ಭಾಗದ ರೈತರಿಗೆ ಮಾರಕವಾಗಿರುವ ಕಲ್ಲು ಕ್ರಷರ್ ಸ್ಥಗಿತಗೊಳಿಸುವಂತೆ ಸುಮಾರು ದಿನಗಳಿಂದ ಕೋಳಘಟ್ಟ ಭಾಗದ ಗ್ರಾಮದ ರೈತರು ಹೋರಾಟ ಮಾಡುತ್ತಿದ್ದರು ಜಿಲ್ಲಾ ಹಾಗೂ ತಾಲೂಕು ಆಡಳಿತ, ದಂಡಿನಶಿವರ ಪೋಲೀಸರು ಮತ್ತು ಗಣಿಗಾರಿಕೆ ಇಲಾಖಾ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ. ಎಲ್ಲ ಅಧಿಕಾರಿಗಳು ಯಾವುದೋ ಅಮಿಷಕ್ಕೆ ಒಳಗಾಗಿ ಕ್ರಷರ್ ಮಾಲೀಕನ ಜೊತೆ ಶಾಮೀಲಾಗಿರುವ ಅನುಮಾನ ಮೂಡುತ್ತಿದೆ. ಕ್ರಷರ್ ಮಾಲೀಕ ಸರ್ಕಾರಿ ಗೋಮಾಳದಲ್ಲಿ ಕ್ರಷರ್ ಯಂತ್ರ ಹಾಗೂ ತೂಕದ ಯಂತ್ರಗಳನ್ನು ಅಳವಡಿಸಿಕೊಂಡಿದ್ದಾರೆ ಎಂದು ಸರ್ವೆಯಲ್ಲಿ…
ತುಮಕೂರು: ಗೃಹಿಣಿಯಾಗಿಯೇ, ತನ್ನಕುಟುಂಬವನ್ನುತಿದ್ದಿ, ತೀಡಿ, ಸಮಾಜದಲ್ಲಿಆದರ್ಶ ವ್ಯಕ್ತಿಗಳನ್ನಾಗಿ ರೂಪಿಸುವ ಮೂಲಕ ಮಹಾಸಾದ್ವಿ ಹೇಮರೆಡ್ಡಿ ಮಲ್ಲಮ್ಮ, ಭಾರತೀಯಗೃಹಿಣಿಯರಿಗೆ ಮಾದರಿಯಾಗಿದ್ದಾರೆಎಂದುತುಮಕೂರು ತಹಶೀಲ್ದಾರ್ ರಾಜೇಶ್ವರಿಅಭಿಪ್ರಾಯಪಟ್ಟಿದ್ದಾರೆ. ನಗರದಡಾ.ಗುಬ್ಬಿ ವೀರಣ್ಣಕಲಾಕ್ಷೇತ್ರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ,ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಸಾಹಿತ್ಯ ಪರಿಷತ್ ಹಾಗೂ ಜಿಲ್ಲಾರೆಡ್ಡಿಜನಸಂಘ(ರಿ), ವತಿಯಿಂದ ಆಯೋಜಿಸಿದ್ದ ಹೇಮರೆಡ್ಡಿ ಮಲ್ಲಮ್ಮಜಯಂತಿಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತಿದ್ದಅವರು,ಹೇಮರೆಡ್ಡಿ ಮಲ್ಲಮ್ಮ, ವಿಜ್ಞಾನಿಯಾಗಿರಲಿಲ್ಲ, ವೈದ್ಯರಾಗಿರಲಿಲ್ಲ. ರಾಣಿಯಾಗಿರಲಿಲ್ಲ. ಶಿಕ್ಷಕರು ಅಲ್ಲ, ಆದರುಅವರನ್ನು ನಾವು ಇಂದು ಪೂಜ್ಯನೀಯ ಭಾವನೆಯಿಂದ ನೋಡುತ್ತಿದ್ದೇವೆಎಂದರೆ, ಅವರು ಸಂಸಾರಿಕ ಜೀವನದಲ್ಲಿಇದ್ದುಕೊಂಡೇ ಸಂತರರೀತಿ ಬದುಕಿದವರು.ಪಾಮರನಾಗಿದ್ದ ಪತಿಯನ್ನು ಪಂಡಿತನಾಗಿಸಿದ್ದಲ್ಲದೆ,ಲೋಪಪನಾಗಿದ್ದ ಮೈದುನ ವೇಮನನ್ನು ತಪಸ್ವಿಯಾಗಿಸಿದ್ದು ಈಕೆಯದೊಡ್ಡ ಸಾಧನೆಎಂದರು. ಸಾAಸಾರಿಕಜೀವನದಲ್ಲಿಎಲ್ಲರಿಗೂಅತ್ತೆ, ನಾದಿನಿಯರ ಕಾಟ ಇದ್ದದ್ದೇ, ಆದರೆಅವೆಲ್ಲವನ್ನು ಮೀರಿ, ತನ್ನ ಸಹನೆ, ತಾಳ್ಮೆ, ಪ್ರೀತಿಯಿಂದ ಮಲ್ಲಿಕಾರ್ಜುನನ್ನೇ ಒಲಿಸಿಕೊಂಡ ಮಹಾನ್ ಸಾದ್ವಿ ಹೇಮರೆಡ್ಡಿ ಮಲ್ಲಮ್ಮ.ಜೀವನದಲ್ಲಿ ನಡೆದಅಹಿತಕರಘಟನೆಯನ್ನೇ ನೆಪಮಾಡಿಕೊಂಡುಕೊರಗೆದೆ, ಅದರ ಹೊರಬರಲುಆಧ್ಯಾತ್ಮದ ಮೊರೆ ಹೋಗಿ,ಇಡೀ ಮಹಿಳಾ ಕುಲಕ್ಕೆ ಕಳಸ ಪ್ರಾಯರಾಗಿದ್ದಾರೆ.ಸ್ವಾರ್ಥವಿಲ್ಲದಅವರ ನಡೆಇಡೀಗೃಹಿಣಿಯರಿಗೆ ಮಾದರಿಯಾದುದ್ದುಎಂದು ತಹಶೀಲ್ದಾರ್ ರಾಜೇಶ್ವರಿ ನುಡಿದರು. ಕಸಾಪ ಜಿಲ್ಲಾಧ್ಯಕ್ಷರಾದ ಕೆ.ಎಸ್.ಸಿದ್ದಲಿಂಗಪ್ಪ ಮಾತನಾಡಿ,ಅವಿಭಕ್ತಕುಟುಂಬದಓರ್ವ ಸೊಸೆಯಾಗಿ,ತನಗಾದಎಲ್ಲಅವಮಾನ, ಅಪಮಾನಗಳನ್ನು ಸಹಿಸಿಕೊಂಡು, ಸಮಾಜದಎದುರುಕುಟುಂಬದಘನತೆಯನ್ನುಎತ್ತಿ ಹಿಡಿದಕೀರ್ತಿ…
ತುಮಕೂರು: ಭಾರತ ಪಾಕ್ ನಡುವಿನ ಯುದ್ಧದ ಕಾರ್ಮೋಡ ಕವಿದಿರುವ ಹಿನ್ನೆಲೆಯಲ್ಲಿ ತುಮಕೂರು ರೈಲ್ವೆ ನಿಲ್ದಾಣದಲ್ಲಿ ವಿದ್ವಂಸಕ ಕೃತ್ಯ ತಪಾಸಣಾ ತಂಡವು ನಿರಂತರವಾಗಿ ಮುಂಜಾಗ್ರತಾ ಕ್ರಮವಾಗಿ ಪರಿಶೀಲನೆ ನಡೆಸುತ್ತಿದೆ. ಅಲ್ಲದೆ ತುಮಕೂರು ನಗರದ ಪ್ರಮುಖ ಜನನಿ ಬಿಡ ಪ್ರದೇಶಗಳಾದ ಪ್ರವಾಸಿ ಮಂದಿರ, ಬಸ್ ನಿಲ್ದಾಣ, ಮಾಲ್ ಗಳು ಸೇರಿದಂತೆ ಅನೇಕ ಕಡೆಗಳಲ್ಲಿ ನೆನ್ನೆಯಿಂದ ನಿರಂತರವಾಗಿ ತಪಾಸಣೆ ನಡೆಸುತ್ತಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಅವರ ನೇತೃತ್ವದಲ್ಲಿ ಪೊಲೀಸ್ ಅಧಿಕಾರಿಗಳ ತಂಡ ಜನರ ಬಳಿ ಜಾಗೃತಿ ಮೂಡಿಸುತ್ತಿದೆ. ವಿದ್ವಂಸಕ ಕೃತ್ಯಗಳ ಕುರಿತು ಸುಳಿವು ದೊರೆತರೆ ತಕ್ಷಣ ಸಮೀಪದ ಪೊಲೀಸ್ ಸಿಬ್ಬಂದಿಗಳಿಗೆ ಮಾಹಿತಿ ನೀಡುವಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಅಲ್ಲದೆ ಕಟ್ಟೆಚ್ಚರ ವಹಿಸುವಂತೆ ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ಮುಂದಾಗ ಬೇಕಿದೆ ಎಂದು ಹೇಳುತ್ತಿದ್ದಾರೆ. ನಿನ್ನೆಯಿಂದ ನಿರಂತರವಾಗಿ ತುಮಕೂರು ನಗರದಲ್ಲಿಡೆ ಪೊಲೀಸ್ ಸಿಬ್ಬಂದಿಗಳು ಭಾರೀ ಅಲರ್ಟ್ ಆಗಿದ್ದಾರೆ.
ತುಮಕೂರು: ಪೆಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ನಡೆದ ಉಗ್ರರ ದಾಳಿಯಲ್ಲಿ ಮೃತರಾದ ಜನರ ಆತ್ಮಕ್ಕೆ ಶಾಂತಿ ಕೋರಿ, ಹಾಗೆಯೇ ಉಗ್ರರ ವಿರುದ್ದ ದಾಳಿಗೆ ಮುಂದಾಗಿರುವ ಭಾರತೀಯ ಸೇನೆ ವಿಜಯ ಸಾಧಿಸಲಿ ಎಂದು ಇಂದು ಮುಸ್ಲಿಂ ಬಾಂಧವರು ನಗರದ ಮೆಕ್ಕಾ ಮಸೀದಿ ಸೇರಿದಂತೆ ಜಿಲ್ಲೆಯ ಎಲ್ಲಾ ಮಸೀದಿಗಳಲ್ಲಿ ಮುತ್ತುವಲ್ಲಿಗಳ ನೇತೃತ್ವದಲ್ಲಿ ವಿಶೇಷ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ವಕ್ಫ್ ಮತ್ತು ಅಲ್ಪಸಂಖ್ಯಾತರ ಸಚಿವರಾದ ಜಮೀರ್ ಅಹಮದ್ ಖಾನ್ ಅವರ ಕರೆಯ ಮೇರೆಗೆ ರಾಜ್ಯದಲ್ಲಿ ಶುಕ್ರವಾರದ ಮಧ್ಯಾಹ್ನದ ಪ್ರಾರ್ಥನೆಯ ವೇಳೆ ದೇಶದ ಸೇನಗೆ ನೈತಿಕ ಬೆಂಬಲ ಕೋರಿ, ಹಾಗೂ ಯುದ್ದದಲ್ಲಿ ಭಾರತೀಯ ಸೇನೆಗೆ ವಿಜಯ ಲಭಿಸಲಿ ಎಂದು ಕೋರಿದರು. ಈ ವೇಳೆ ಮಾತನಾಡಿದ ಅಲ್ಪಸಂಖ್ಯಾತ ಮುಖಂ ಡರಾದ ತಾಜುದ್ದೀನ್ ಷರಿಫ್,ಭಾರತದಲ್ಲಿರುವ ಮುಸ್ಲಿಂರಿಗೆ ಭಾರತವೇ ತಾಯ್ನಾಡು.ದೇಶ ಮೊದಲು ಹಾಗಾಗಿ ಪಾಕಿಸ್ಥಾನದೊಂದಿಗೆ ಆರಂಭ ಗೊಂಡಿರುವ ಯುದ್ದದಲ್ಲಿ ಭಾರತದ ಸೇನೆ ವಿಜಯ ಸಾಧಿಸುವುದರ ಜೊತೆಗೆ, ಪೆಹಲ್ಗಾಮ್ ದಾಳಿಯಲ್ಲಿ ಮೃತರ ಆತ್ಮಕ್ಕೆ ಶಾಂತಿ ದೊರಕಿಸಲು, ಪ್ರವಾಸಿಗರ ಮೇಲೆ ದಾಳಿ ನಡೆಸಿದ ಎಲ್ಲಾ ಉಗ್ರರನ್ನು…
ಹುಳಿಯಾರು: ಪಟ್ಟಣ ಪಂಚಾಯ್ತಿಯ ವಾಣಿಜ್ಯ ಮಳಿಗೆಗಳ ಬಾಡಿಗೆ ಸಂಗ್ರಹ ಪುಸ್ತಕ ನಾಪತ್ತೆಯಾಗಿದೆ. ಯಾವ ಮಳಿಗೆಯವರು ಎಷ್ಟು ಬಾಡಿಗೆ ಕಟ್ಟಿದ್ದಾರೆ, ಎಷ್ಟು ಬಾಕಿ ಉಳಿದಿದೆ ಎನ್ನುವ ಯಾವ ನಿಖರ ಮಾಹಿತಿಯೂ ಇಲ್ಲಿ ಲಭ್ಯವಿಲ್ಲ. ಬರೋಬ್ಬರಿ ಐವತ್ತಕ್ಕೂ ಹೆಚ್ಚು ವಾಣಿಜ್ಯ ಮಳಿಗೆಗಳಿಂದ ಮಾಸಿಕ ಲಕ್ಷಾಂತರ ರೂ.ಬಾಡಿಗೆ ಸಂಗ್ರಹವಾಗುವ ಹಣಕಾಸಿನ ವಹಿವಾಟಿನ ಪುಸ್ತಕ ಇಲ್ಲದಿರುವುದು ಅವ್ಯವಹಾರ ನಡೆಯುತ್ತಿರುವ ಅನುಮಾನವನ್ನು ಹುಟ್ಟುಹಾಕಿದೆ. ಹುಳಿಯಾರು ಪಂಚಾಯ್ತಿಯ ಪ್ರಮುಖ ಆದಾಯ ಮೂಲವೇ ಐವತ್ತಕ್ಕೂ ಹೆಚ್ಚು ವಾಣಿಜ್ಯ ಮಳಿಗೆಗಳು. ಬರೋಬ್ಬರಿ ೪೦ ವರ್ಷಗಳಿಂದ ಈ ಮಳಿಗೆಗಳನ್ನು ವಿವಿಧ ವ್ಯಾಪಾರಕ್ಕೆ ಬಾಡಿಗೆ ಕೊಟ್ಟಿದ್ದಾರೆ. ಈ ಮಳಿಗೆಗಳ ಬಾಡಿಗೆ ಎಷ್ಟು, ಯಾವ ಸಭೆಯಲ್ಲಿ ಬಾಡಿಗೆ ನಿಗದಿ ಮಾಡಲಾಯಿತು. ಯಾವ ಮಾಹೆಯಲ್ಲಿ ಯಾರು ಎಷ್ಟು ಬಾಡಿಗೆ ಕಟ್ಟಿದ್ದಾರೆ. ಎಷ್ಟು ಬಾಡಿಗೆ ಬಾಕಿ ಉಳಿದಿದೆ ಎನ್ನುವ ನಿಖರ ಮಾಹಿತಿಯ ಡಿಸಿಬಿ ಪುಸ್ತಕ ಪಂಚಾಯ್ತಿಯಲ್ಲಿ ನಿರ್ವಹಿಸಬೇಕಿದೆ. ಆದರೆ ಒಬ್ಬೊಬ್ಬರು ಬಿಲ್ ಕಲೆಕ್ಟರ್‌ಗಳು ತಮ್ಮತಮ್ಮ ಅವಧಿಯಲ್ಲಿ ಒಂದೊAದು ಪುಸ್ತಕ ಇಟ್ಟಿದ್ದಾರೆ. ಅದರಲ್ಲಿ ಬಾಡಿಗೆದಾರರು ಬ್ಯಾಂಕ್‌ನಲ್ಲಿ ಕಟ್ಟಿದ ಅಥವಾ ಬಿಲ್ ಕಲೆಕ್ಟರ್…
ತುಮಕೂರು: ಸಹಕಾರ ಸಚಿವರಾದ ಕೆ.ಎನ್.ರಾಜಣ್ಣ ಅವರ ಅಭಿಮಾನಿಗಳು, ಹಿತೈಷಿಗಳು, ಸಹಕಾರ ಕ್ಷೇತ್ರದ ಜನರು ಕೆ.ಎನ್.ಆರ್‌ಅವರಿಗೆ ೭೫ ವರ್ಷ ತುಂಬಿದ ಹಿನ್ನೆಲೆಯಲ್ಲಿ ಮೇ.೧೩ ರಂದು ಆಯೋಜಿಸಿದ್ದ ಅಮೃತ ಮಹೋತ್ಸವ ಹಾಗೂ ಅಭಿನಂದನಾ ಗ್ರಂಥ ಬಿಡುಗಡೆ ಸಮಾರಂಭವನ್ನು, ದೇಶದಲ್ಲಿ ಯುದ್ದದ ಕಾರ್ಮೋಡ ಕವಿದಿರುವ ಹಿನ್ನೆಲೆಯಲ್ಲಿ ಭಾರತದ ಸೈನಿಕರಿಗೆ ಬೆಂಬಲವಾಗಿ ನಿಲ್ಲುವ ಉದ್ದೇಶದಿಂದ ಮುಂದೂಡಲಾಗಿದೆ ಎಂದು ವಿಧಾನಪರಿಷತ್ ಸದಸ್ಯ ಆರ್.ರಾಜೇಂದ್ರ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,ಕಾಶ್ಮೀರದ ಪೆಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಉಗ್ರರು ನಡೆಸಿದ ದಾಳಿಯ ಪ್ರತಿಕಾರವಾಗಿ ಭಾರತ ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಿರುವುದು ಪಾಕಿಸ್ಥಾನ ಮತ್ತು ಭಾರತದ ನಡುವೆ ಯುದ್ದದ ವಾತಾವರಣ ನಿರ್ಮಾಣವಾಗಿದೆ.ಎರಡು ದೇಶಗಳ ನಡುವೆ ನಡೆಯುತ್ತಿರುವ ಕ್ಷಿಪಣ್ಣಿ ಮತ್ತು ಯುದ್ದ ವಿಮಾನಗಳ ಶೆಲ್ ದಾಳಿಯಿಂದ ಉಗ್ರರ ನೆಲೆಗಳು ದ್ವಂಶಗೊAಡಿವೆ. ಇಂತಹ ಸಂದರ್ಭದಲ್ಲಿ ಭಾರತೀಯರೆಲ್ಲರೂ ಸೈನಿಕರೊಂದಿಗೆ ನಿಲ್ಲಬೇಕಾಗಿದೆ. ಹಾಗಾಗಿ ಮೇ.೧೩ರ ಕಾರ್ಯಕ್ರಮವನ್ನು ಮುಂದೂಡಿದ್ದು,ದೇಶದಲ್ಲಿ ವಾತಾವರಣ ತಿಳಿಗೊಂಡ ನಂತರ ಕಾರ್ಯಕ್ರಮದ ಮುಂದಿನ ದಿನಾಂಕವನ್ನು ಅಭಿನಂದನಾ ಸಮಿತಿ ತಿಳಿಸಲಿದೆ ಎಂದರು. ಕಾಶ್ಮೀರದಲ್ಲಿ ಪ್ರವಾಸಿಗರ ಮೇಲೆ ಭಯೋತ್ಪಾಧಕರು ದಾಳಿ…
ತುಮಕೂರು: ಕಣ್ಣು ದೇಹದ ಪ್ರಮುಖ ಅಂಗ ಮತ್ತು ಸೂಕ್ಷö್ಮ ಅಂಗ,ಅದನ್ನು ಚೆನ್ನಾಗಿ ಕಾಪಾಡಿಕೊಳ್ಳಿ,ಗೃಹರಕ್ಷಕರು ನಮ್ಮ ದೇಶದ ಆಸ್ತಿ, ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ,ಹಗಲು ರಾತ್ರಿ ಪೋಲೀಸರೊಂದಿಗಿದ್ದು ಸಮಾಜವನ್ನು ಕಾಪಾಡುವ ಜೀವಗಳು ಆದ್ದರಿಂದ ಅವರ ಕಣ್ಣನ್ನು ನಾವು ಕಾಪಾಡುವುದು ನಮ್ಮ ಜವಾಬ್ದಾರಿ,ಗೃಹರಕ್ಷಕರು ಆರೋಗ್ಯವನ್ನು ಚೆನ್ನಾಗಿ ನೋಡಿಕೊಳ್ಳಬೇಕು ಪ್ರತಿ ವರ್ಷಕ್ಕೊಮ್ಮೆ ಎಲ್ಲರೂ ಆರೋಗ್ಯ ತಪಾಸಣೆಯನ್ನು ಮಾಡಿಸಿಕೊಳ್ಳಬೇಕು,ರೋಗ ಇರಲಿ ಇಲ್ಲದಿರಲಿ ಉತ್ತಮ ಆರೋಗ್ಯಕ್ಕಾಗಿ ಎಲ್ಲರೂ ಪ್ರತಿ ವರ್ಷಕ್ಕೊಮ್ಮೆ ದೇಹ,ಕಣ್ಣು,ಇತರೆ ಎಲ್ಲ ಅಂಗಾAಗಗಳ ತಪಾಸಣೆ ಮುಖ್ಯ, ವೈದ್ಯರ ಸಲಹೆಯಂತೆ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಸಂಕಲ್ಪ ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಘ(ಎನ್.ಜಿ.ಓ)ದ ಅಧ್ಯಕ್ಷ ರಾದ ರಮೇಶ್ ರವರು ತಿಳಿಸಿದರು. ಅಸಂಕಲ್ಪ ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಘ(ಎನ್.ಜಿ.ಓ)ದ ಕಾರ್ಯದರ್ಶಿ ಶ್ರೀಮತಿ ಗೀತಾನಾಗೇಶ್ ರವರು ಮಾತನಾಡುತ್ತಾ ಪೋಲೀ ಸರು ನಮ್ಮ ಸಮಾಜಕ್ಕೆ ಎಷ್ಟು ಮುಖ್ಯವೋ ಗೃಹ ರಕ್ಷಕರು ಸಹ ಅಷ್ಟೇ ಮುಖ್ಯ,ಗೃಹರಕ್ಷಕರು ಸದಾ ಒತ್ತಡದಲ್ಲಿರುತ್ತಾರೆ ಕಾನೂನು ಸುವ್ಯವಸ್ಥೆ ಕಾಪಾಡಲು ಅವರ ಕೊಡುಗೆ ಸಮಾಜಕ್ಕೆ ಅತ್ಯಂತ ಅವಶ್ಯ ಮತ್ತು ದೊಡ್ಡದು,ಈ ನಿಟ್ಟಿನಲ್ಲಿ ಅವರು ಆಸ್ಪತ್ರೆಗೆ…











