ತುರುವೇಕೆರೆ: ಜಲ ಜೀವನ್ ಮಿಷನ್ ಆಡಿಯಲ್ಲಿ ತಾಲೂ ಕಿನ ದಬ್ಬೇಘಟ್ಟ ಹೋಬಳಿ ತಂಡಗ ಹಾಗೂ ಸೋಪ್ಪನಹಳ್ಳಿ ಗ್ರಾಮಗಳಲ್ಲಿ ಮನೆಮನೆ ಗಂಗಾ ಯೋಜನೆ ಕಾಮಗಾರಿಗಳಿಗೆ ಶಾಸಕ ಎಂ.ಟಿ.ಕೃಷ್ಣಪ್ಪನವರು ಬುಧುವಾರ ಭೂಮಿ ಪೂಜೆ ನೆರವೇರಿಸಿದರು. ತಾಲೂಕಿನ ದಬ್ಬೇಘಟ್ಟ ಹೋಬಳಿ ತಂಡಗ ಗ್ರಾಮದಲ್ಲಿ ಗ್ರಾಮಾಭಿವೃದ್ದಿ ಹಾಗೂ ಪಂಚಾ ಯತ್‌ರಾಜ್ ವಿಶೇಷ ಯೋಜನೆಯಡಿಯಲ್ಲಿ ಅಂದಾಜು ವೆಚ್ಚ ೮೦ಲಕ್ಷ ಹಾಗೂ ಸೋಪ್ಪನಹಳ್ಳಿ ಗ್ರಾಮದಲ್ಲಿ ಅಂದಾಜು ೪೪.೨೩ ಲಕ್ಷ ವ್ಯಚ್ಚದಲ್ಲಿನ ಕಾಮಗಾರಿಗಳಿಗೆ ಶಾಸಕರು ಭೂಮಿ ಪೂಜೆ ನೆರವೇರಿಸಿದರು. ದಬ್ಬೇಘಟ್ಟ ಹೋಬಳಿ ಕೋಳಾಲ ಕೆರೆಯ ಕೋಡಿ ಹಳ್ಳಕ್ಕೆ ಹೇಮಾವತಿ ಎಡದಂಡೆ ನಾಲಾ ವಿಭಾಗದಿಂದ ಸುಮಾರು ೪೬.೫೬ ಲಕ್ಷ ವೆಚ್ಚದಲ್ಲಿ ಸೇತುವೆ ನಿರ್ಮಾಣ ಕಾಮಗಾರಿಗೆ ಶಾಸಕರು ಚಾಲನೆ ನೀಡಿದರು. ಶಾಸಕ ಎಂ.ಟಿ.ಕೃಷ್ಣಪ್ಪ ಮಾತನಾಡಿ ಗ್ರಾಮೀ ಣ ಭಾಗದ ಜನರಿಗೆ ಮನೆಯ ಬಳಿಗೆ ಶುದ್ದ ಕುಡಿಯುವ ನೀರು ಪೂರೈಸಲು ಕೇಂದ್ರ ಸರ್ಕಾರದ ಇದೋಂದು ಮಹತ್ವಾಕಾಂಕ್ಷೆ ಯೋಜನೆಯಾಗಿದೆ. ಗ್ರಾಮೀಣ ಭಾಗದ ಜನರು ಇದರ ಸದೂಪಯೋಗ ಪಡಿಸಿಕೊಳ್ಳಬೇಕು. ಈಗಾಗಲೇ ತಾಲ್ಲೂಕಿನ ೨೫೦ಕ್ಕು ಹೆಚ್ಚು ಗ್ರಾಮಗಳಿಗೆ ಸಂಪರ್ಕ ಕಲ್ಪಿಸಿಲಾಗಿದೆ.…
Author: News Desk Benkiyabale
ತುಮಕೂರು: ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ ಕಲ್ಪಿಸುವುದಕ್ಕಾಗಿ ರಾಜ್ಯದಲ್ಲಿ ನಡೆದಿರುವ ಸಮೀಕ್ಷೆಯಲ್ಲಿ ಮನೆಗೆ ಬರುವ ಸಮೀಕ್ಷೆ ಅಧಿಕಾರಿಗಳಿಗೆ ಜಿಲ್ಲೆಯ ಲಂಬಾಣಿ ಸಮುದಾಯದವರು ತಪ್ಪದೇ ಬಂಜಾರ(ಲAಬಾಣಿ) ಎಂದು ನಮೂದಿಸಬೇಕು ಎಂದು ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ ಅಧ್ಯಕ್ಷ ಎನ್.ಜಯದೇವ ನಾಯ್ಕ ಮನವಿ ಮಾಡಿದರು. ನಗರದ ಮರಳೂರುದಿಣ್ಣೆಯ ಬಂಜಾರ ಭವನದಲ್ಲಿ ಗುರುವಾರ ನಡೆದ ಮುಖಂಡರ ಸಭೆಯಲ್ಲಿ ಸೇವಾಲಾಲ್ ಹಾಗೂ ಡಾ.ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ಬಂಜಾರ ಸಮುದಾಯದವರು ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದಿದ್ದಾರೆ. ನಮಗೆ ನಿರ್ದಿಷ್ಟ ಕುಲಕಸುಬು ಇಲ್ಲ, ಕೂಲಿನಾಲಿ ನಂಬಿ ಬದುಕುತ್ತಿರುವವರು. ಈ ಪರಿಸ್ಥಿತಿಯಲ್ಲಿ ಸರ್ಕಾರದ ಮೀಸಲಾತಿ ಸೌಲಭ್ಯ ಪಡೆಯಲು ಸಮುದಾಯದವರು ತಮ್ಮದೇ ಸಮೀಕ್ಷೆಯಲ್ಲಿ ಭಾಗವಹಿಸಿ ನಿಖರವಾದ ಮಾಹಿತಿಯನ್ನು ನೊಂದಾಯಿಸುವAತೆ ಕೋರಿದರು. ತಾಂಡಾದ ನಾಯಕ, ಡಾವೋ, ಕಾರಬಾರಿ, ಗ್ರಾಮ ಪಂಚಾಯ್ತಿ ಸದಸ್ಯರು, ವಿದ್ಯಾವಂತರು ಮುಂದೆ ನಿಂತು ಸಮೀಕ್ಷಾ ಕಾರ್ಯದಲ್ಲಿ ಸಹಕರಿಸಿ ನಮ್ಮ ಸಮುದಾಯದವರನ್ನು ಸಮೀಕ್ಷೆಯಲ್ಲಿ ನೋಂದಣಿ ಮಾಡಿಸಬೇಕು. ಸಮೀಕ್ಷೆಯಲ್ಲಿ ಜನಸಂಖ್ಯೆ, ಕುಟುಂಬಗಳ ಸಂಖ್ಯೆ, ಪಡೆದಿರುವ ಶಿಕ್ಷಣ, ವೃತ್ತಿ, ವಾಸಿಸುವ ಪ್ರದೇಶ,…
ತುಮಕೂರು: ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ: ಜಿ. ಪರಮೇಶ್ವರ ಅವರು ನಗರದ ಜಿಲ್ಲಾಸ್ಪತ್ರೆ ಆವರಣದಲ್ಲಿ ೧೩೨ ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ನೂತನ ಕಟ್ಟಡದ ನೀಲನಕ್ಷೆಯನ್ನು ಪರಿಶೀಲಿಸಿದರು. ಜಿಲ್ಲಾಸ್ಪತ್ರೆಗೆ ಗುರುವಾರ ಭೇಟಿ ನೀಡಿ ನೂತನ ಕಟ್ಟಡ ವಿನ್ಯಾಸದ ನೀಲನಕ್ಷೆ ಪರಿಶೀಲಿಸಿದ ನಂತರ ಅಧಿಕಾರಿಗಳೊಂದಿಗೆ ನೂತನ ಕಟ್ಟಡ ನಿರ್ಮಾಣದ ಬಗ್ಗೆ ಚರ್ಚಿಸಿದ ಅವರು, ಪ್ರಸ್ತುತ ಇರುವ ಜಿಲ್ಲಾಸ್ಪತ್ರೆಯ ಕಟ್ಟಡವು ೭೮ ವರ್ಷ ಹಳೆಯದಾಗಿದ್ದು, ಆಧುನೀಕರಿಸಲು ಸಾಧ್ಯವಿಲ್ಲ. ಕಟ್ಟಡದ ಹಲವು ಭಾಗಗಳು ಶಿಥಿಲಗೊಳ್ಳುತ್ತಿವೆ. ಅಲ್ಲದೆ ಹಳೆಯ ಕಟ್ಟಡದ ಮೇಲೆ ಮೇಲಂತಸ್ತುಗಳ ನಿರ್ಮಾಣ ಸಾಧ್ಯವಿಲ್ಲದೆ ಇರುವುದರಿಂದ ನೂತ ನವಾಗಿ ಸುಸಜ್ಜಿತ ಹಾಗೂ ಆಧುನಿಕವಾದ ೩೦೦ ಹಾಸಿಗೆಗಳ ಕಟ್ಟಡವನ್ನು ನಿರ್ಮಿಸಲು ಉದ್ದೇ ಶಿಸಲಾಗಿದೆ ಎಂದು ತಿಳಿಸಿದರು. ಕಟ್ಟಡ ಕಾಮಗಾರಿಯನ್ನು ಗಣಿಬಾಧಿತ ಪ್ರದೇ ಶಗಳ ಸಮಗ್ರ ಪುನಃಶ್ಚೇತನ ಯೋಜನೆಯಡಿ ಕೈಗೊಳ್ಳಲಾಗುವುದು. ಕಾಮಗಾರಿ ಕೈಗೊಳ್ಳುವ ಮುನ್ನ ಬೇರೆ ಜಿಲ್ಲೆಯಲ್ಲಿ ಆಧುನಿಕವಾಗಿ ನಿರ್ಮಿ ಸಿರುವ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು ಎಂದರಲ್ಲದೆ,…
ತುಮಕೂರು: ಗುರುವಾರ ಬೆಳಗ್ಗೆ ೧೧:೦೦ ಗಂಟೆಯ ಸಮಯದಲ್ಲಿ ನೂತನ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾಗಿ ಪುರುಷೋತ್ತಮ ಎಂ.ಎಲ್,( ಅಪರಾಧ) ಕೆ.ಎಸ್.ಪಿ.ಎಸ್ ರವರು ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಸಿ. ಗೋಪಾಲ್ ರವರ ಕಡೆಯಿಂದ ಅಧಿಕಾರ ವಹಿಸಿಕೊಂಡರು. ಇವರು ಈ ಹಿಂದೆ ಬೆಂಗಳೂರು ನಗರ,ಚಿಕ್ಕಬಳ್ಳಾಪುರ, ಮಾಗಡಿ,ಸಿಐಡಿ, ಲೋಕಾಯುಕ್ತ, ಎಸಿಬಿ ಹಾಸನ ಗಳಲ್ಲಿ ಕರ್ತವ್ಯವನ್ನು ನಿರ್ವಹಿಸಿರುತ್ತಾರೆ.
ತುಮಕೂರು: ಹಾಂಗ್ ಕಾಂಗ್ ವಿಶ್ವವಿದ್ಯಾಲಯ ಹಾಗೂ ಸ್ಥಳೀಯ ಹಾಂಗ್ ಕಾಂಗ್ ಕನ್ನಡ ಸಂಘದ ಸಂಯುಕ್ತ ಆಶ್ರಯದಲ್ಲಿ ಹಾಂಗ್ ಕಾಂಗ್‌ನಲ್ಲಿ ಆಯೋಜಿಸಲಾಗಿದ್ದ ‘ಮಲ್ಟಿ-ಕಲ್ಚರಲ್ ಅಂಡ್ ಗ್ಲೋಬಲ್ ಡೈವರ್ಸಿಟಿ ಪ್ರಾಜೆಕ್ಟ್’ ಅಂತರರಾಷ್ಟಿçÃಯ ಸಾಂಸ್ಕೃತಿಕ ವೇದಿಕೆಯಲ್ಲಿ ತುಮಕೂರಿನ ಪ್ರತಿಷ್ಠಿತ ಕಲಾಸಂಸ್ಥೆ ಸ್ವರವಿ ಆರ್ಟ್ಸ್ ಫೌಂಡೇಶನ್ ರಾಜ್ಯವನ್ನು ಪ್ರತಿನಿಧಿಸಿ ಉತ್ತಮ ಪ್ರದರ್ಶನ ನೀಡಿ, ಗಮನ ಸೆಳೆದಿದೆ. ಹಾಂಗ್‌ಕಾ0ಗ್ ವಿಶ್ವವಿದ್ಯಾಲಯದ ಪ್ರಸಿದ್ಧ ರೇಸನ್ ಹುವಾಂಗ್ ರಂಗಮAದಿರದಲ್ಲಿ ಆಯೋಜನೆಯಾದ ಈ ಕಾರ್ಯಕ್ರಮದಲ್ಲಿ, ಸ್ವರವಿ ತಂಡವು ಕರ್ನಾಟಕದ ಶಾಸ್ತ್ರೀಯ ಕಲಾ ಪ್ರಕಾರವಾದ ಭರತನಾಟ್ಯಕ್ಕೆ ವಿಶೇಷ ಒತ್ತು ನೀಡಿ, ಕಲೆಯ ಔನ್ನತ್ಯತೆ ಹಾಗೂ ವೈಶಿಷ್ಟ್ಯತೆಯನ್ನು ಪ್ರಪಂಚದ ಎದುರು ಪ್ರದರ್ಶಿಸಿತು. ಕರ್ನಾಟಕದ ಹೆಮ್ಮೆಯ ಜಾನಪದ ಕಲೆಯಾದ ಯಕ್ಷಗಾನದ ರೋಮಾಂಚಕ ಪ್ರಸ್ತುತಿಯೊಂದಿಗೆ ಅವರು ಪ್ರೇಕ್ಷಕರನ್ನು ಮತ್ತಷ್ಟು ಆಕರ್ಷಿಸಿದರು. ತಂಡವು ನೀಡಿದ ಎರಡೂವರೆ ಗಂಟೆಗಳ ಅತ್ಯುತ್ತಮ ಪ್ರದರ್ಶನದಲ್ಲಿ, ಸಂವಾದಕ ಭರತನಾಟ್ಯ ಹಾಗೂ ಜನಪದ ಕಾರ್ಯಾಗಾರಗಳು ಸಹ ಸೇರಿದ್ದವು. ಈ ಪ್ರದರ್ಶನಕ್ಕೆ ಕಲಾವಿದರಿಗೆ ಉತ್ತಮ ಬೆಂಬಲದ ಪ್ರತಿಕ್ರಿಯೆ ದೊರೆಯಿತು. ಕಾರ್ಯಕ್ರಮದಲ್ಲಿ ಭಾರತದ ಹಾಂಗ್‌ಕಾAಗ್ ಕಾನ್ಸುಲೇಟ್‌ನ ಕೌನ್ಸುಲ್ ಶ್ರೀಮತಿ ಸುರಭಿ…
ತುಮಕೂರು: ನಗರದ ಸಮೀಪದ ಅಗಳಕೋಟೆಯಲ್ಲಿರುವ ಶ್ರೀ ಸಿದ್ದಾ ರ್ಥ ದಂತ ವೈದ್ಯಕೀಯ ಆಸ್ಪತ್ರೆ ಮತ್ತು ಕಾಲೇಜಿನ ಕೃತಕ ದಂತ ಚಿಕಿತ್ಸಾ ವಿಭಾಗದ ವೈದ್ಯರ ತಂಡ ವಿಶ್ವ ಬಾಯಿ ಆರೋಗ್ಯ ದಿನದ ಅಂಗವಾಗಿ ನಗರದ ಶ್ರೀ ಶಾರದಾಂಬ ಟ್ರಸ್ಟ್ ನಡೆಸುತ್ತಿರುವ ವೃದ್ಧಾಶ್ರಮ ಮತ್ತು ಅನಾಥಾಶ್ರಮದಲ್ಲಿ ಉಚಿತ ದಂತ ತಪಾಸಣೆ ಮತ್ತು ದಂತ ಜೋಡಣಾ ಶಿಬಿರವನ್ನು ಯಶಸ್ವಿಯಾಗಿ ನಡೆಸಲಾಯಿತು. ಅನಾಥಾಶ್ರಮದ ಆವರಣದಲ್ಲಿ ನಡೆದ ವಿಶ್ವ ಬಾಯಿ ಆರೋಗ್ಯದಿನದ ಕಾರ್ಯಕ್ರಮದಲ್ಲಿ ಕೃತಕ ದಂತ ಚಿಕಿತ್ಸಾ ವಿಭಾಗದ ಮುಖ್ಯಸ್ಥರಾದ ಡಾ. ರಾಘವೇಂದ್ರ ಪ್ರಸಾದ್ ಮಾತನಾಡಿ, ಪ್ರತಿ ವರ್ಷ ವಿಶ್ವ ಬಾಯಿಯ ಆರೋಗ್ಯ ದಿನವು ಉತ್ತಮ ಸಾಮಾನ್ಯ ಆರೋಗ್ಯ ಕಾಪಾಡಿಕೊಳ್ಳಲು ಉತ್ತಮ ಮೌಖಿಕ ನೈರ್ಮಲ್ಯದ ಪ್ರಾಮುಖ್ಯತೆಯ ಜ್ಞಾಪನೆಯಾಗಿ ಕಾರ್ಯನಿರ್ವಹಿಸುತ್ತದೆ. ಪ್ರತಿ ಯೊಬ್ಬರು ತಮ್ಮ ಮೌಖಿಕ ಆರೋಗ್ಯದ ಜವಾಬ್ದಾರಿಯನ್ನು ನಿರ್ವಹಿಸಿಕೊಳ್ಳಬೆಕು. ಮೌಖಿಕ ಆರೋಗ್ಯ ಮತ್ತು ಸಾಮಾನ್ಯ ಆರೋಗ್ಯವು ಪರಸ್ಪರ ಸಂಬAಧ ಹೊಂದಿದೆ ಎಂದರು. ಬಾಯಿ ಆರೋಗ್ಯ ಎಂದರೆ ಆತ್ಮವಿಶ್ವಾಸ ಹೆಚ್ಚಿಸುವುದು, ಆರೋಗ್ಯ ಕಾಪಾಡಿಕೊಳ್ಳುವುದು. ದಿನಕ್ಕೆ ೨ ಬಾರಿ ಹಲ್ಲುಜ್ಜಿ, ಫ್ಲೋಸಿಂಗ್…
ಚಿಕ್ಕನಾಯಕನಹಳ್ಳಿ: ಟೀಕಿಸುವವರು ಟೀಕಿಸಲಿ ಜನರಿಗೆ ಮಾತ್ರ ಮನೆ ಮಗ ಮನೆ ಬಾಗಿಲಿಗೆ ಕಾರ್ಯಕ್ರಮ ವಿಶ್ವಾಸ ಮೂಡಿಸಿದೆ ಜನರ ಬಳಿಯೇ ತಾಲ್ಲೂಕು ಆಡಳಿತಾಧಿಕಾರಿಗಳು ಹೋಗಿ ಸಮಸ್ಯೆಗಳನ್ನು ಆಲಿಸಿ ಪರಿಹಾರ ನೀಡುತ್ತಿರುವುದು ಶ್ಲಾಘನೀಯವಾಗಿದ್ದು ಇದರೊಂದಿಗೆ ಇನ್ನು ತ್ವರಿತವಾಗಿ ಕೆಲಸಗಳು ನಡೆಯಲಿ ಎಂಬ ಕಾರಣಕ್ಕೆ ನಮ್ಮ ಸಿ.ಬಿ.ಎಸ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಲ್ಯಾಬ್ ಟಾಪ್ ವಿತರಣೆ ಮಾಡಲಾಗುತ್ತಿದೆ ಎಂದು ಶಾಸಕ ಸಿ.ಬಿ.ಸುರೇಶ್ ಬಾಬು ತಿಳಿಸಿದರು. ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಚಿಕ್ಕನಾಯಕನಹಳ್ಳಿ ವಿಧಾನ ಸಭಾಕ್ಷೇತ್ರದ ಎಲ್ಲಾ ಗ್ರಾಮಪಂಚಾಯಿತಿಗಳ ಅಭಿವೃದ್ದಿ ಅಧಿಕಾರಿಗಳಿಗೆ ಸಿ.ಬಿ.ಎಸ್ ಟ್ರಸ್ಟ್ ವತಿಯಿಂದ ಲ್ಯಾಬ್ ಟಾಪ್ ವಿತರಣೆ ಮಾಡಿ ಮಾತನಾಡಿದ ಅವರು ನಮ್ಮ ಸಿ.ಬಿ.ಎಸ್.ಚಾರಿಟಬಲ್ ಟ್ರಸ್ಟ್ ವತಿಯಿಂದ ಆರೋಗ್ಯ ಹಾಗೂ ಶಿಕ್ಷಣಕ್ಕೆ ಒತ್ತು ನೀಡಲಾಗುತ್ತಿದೆ ಈ ನಿಟ್ಟಿನಲ್ಲಿ ತಾಲ್ಲೂಕು ಆಡಳಿತದ ಎಲ್ಲಾ ಅಧಿಕಾರಿಗಳು ನನ್ನೊಂದಿಗೆ ವಾರದಲ್ಲಿ ಎರಡು ದಿನಗಳ ಕಾಲ ಕೈಜೊಡಿಸಿ ಯಾವುದೇ ಜಾತಿ, ಪಕ್ಷ, ಬೇದ ಬಾವ ಇಲ್ಲದೇ ಜನರ ಸಮಸ್ಯೆಗಳನ್ನು ಸ್ಥಳದಲ್ಲೇ ಪರಿಹರಿಸುವ ಜನರಲ್ಲಿ ವಿಶ್ವಾಸ ಮೂಡಿಸುವ ಕೆಲಸನವ್ನು ಮಾಡಲಾಗುತ್ತಿದೆ…
ಚಿಕ್ಕನಾಯಕನಹಳ್ಳಿ: ದಿನೇ ದಿನೇ ಹೆಚ್ಚುತ್ತಿರುವಂತಹ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ನಿರಂತರವಾಗಿ ಶಿಸ್ತುಬದ್ದವಾಗಿ ಅಧ್ಯಯನ ನಡೆಸಿ ಅರ್ಥೈಹಿಸಿಕೊಂಡು ಪರೀಕ್ಷೆಗಳನ್ನು ಹೆದರಿಸಿದರೆ ಖಂಡಿತವಾಗಿಯೂ ಸಾಧನೆ ಮಾಡಲು ಸಾದ್ಯ ಎಂದು ಶಾಸಕ ಸಿ.ಬಿ.ಸುರೇಶ್ ಬಾಬು ತಿಳಿಸಿದರು. ಪಟ್ಟಣದಲ್ಲಿ ಅವರ ಗೃಹಕಚೇರಿಯ ಸಭಾಂಗಣದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ತೇರ್ಗಡೆ ಆಗಿ, ಕೃಷಿ ಕೊಟಾ ಅಡಿಯಲ್ಲಿ ಹಲವಾರು ಕೋರ್ಸ್ ಗಳಿಗೆ ಸೇರ ಬಯಸುವ ವಿಧ್ಯಾರ್ಥಿಗಳಿಗೆ ಎಸ್.ಬಿ.ಚಾರಿಟಬಲ್ ಟ್ರಸ್ಟ್ನ ವತಿಯಿಂದ ಕಳೆದ ಮೂರುದಿನಗಳಿಂದ ನಡೆದ ಪ್ರಾಯೋಗಿಕ ತರಬೇತಿಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು ತಂದೆತಾಯಿಗಳಿಗೆ ಹೊರೆಯಾಗದಂತೆ ಉತ್ತಮ ವಾಗಿ ಅದ್ಯಯನ ನಡೆಸಿ ನಿರಂತರ ಕಲಿಕೆಯನ್ನು ರೂಢಿಸಿಕೊಳ್ಳಿ ಸರ್ಕಾರಿ ಕೋಟಾದಡಿ ಸೀಟುಗಳನ್ನು ತೆಗೆದುಕೊಂಡು ನಿಮ್ಮ ಮುಂದಿನ ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳಿ ಇರುವಂತಹ ಸೌಲಭ್ಯಗಳನ್ನು ಬಳಸಿಕೊಂಡು ಗ್ರಾಮೀಣ ಭಾಗದ ವಿದ್ಯಾರ್ಥಿಗಳು ನಗರ ಪ್ರದೇಶದ ವಿದ್ಯಾರ್ಥಿಗಳಿಗಿಂತ ಕಡಿಮೆ ಇಲ್ಲ ಎಂಬುದನ್ನು ಸಾಧಿಸಿ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪೂರಕವಾಗುವಂತಹ ತರಬೇತಿ ಇದಾಗಲೆಂದೆ ನುರಿತ ಹಾಗೂ ಅತ್ಯುನ್ನತವಾದ ಅಂತಹ ಸಂಪನ್ಮೂಲನ ವ್ಯಕ್ತಿಗಳಿಂದ ನಿಮಗೆ ತರಬೇತಿ ನೀಡಿಸಲಾಗಿದೆ ಇ೯ದರಿಂದ ನೀವುಗಳು…
ತುಮಕೂರು: ನಡೆ ನುಡಿಯಲ್ಲಿ ಒಂದಾಗಿದ್ದ ಜಿ.ಎಸ್.ಸಿದ್ದಲಿಂಗಯ್ಯನವರು ತ್ರಿಕರಣ ಶುದ್ಧಿ ಏನು ಅನ್ನುವುದನ್ನು ಅವರ ಬದುಕಿನಿಂದ ಕಲಿಯಬಹುದು. ಮಾತಿನಲ್ಲಾಗಲೀ, ನಡತೆಯಲ್ಲಾಗಲೀ ಎಂದೂ ಅಶೌಚಕ್ಕೆ ಆಸ್ಪದ ಕೊಟ್ಟವರಲ್ಲ. ಬಹಳ ವರ್ಷಗಳಿಂದ ಅವರು ಸ್ವತಂತ್ರವಾಗಿ ನಡೆಯಲಾರದ ಸ್ಥಿತಿಯಲ್ಲಿದ್ದವರು. ೯೫ ವರ್ಷಗಳ ಸಾರ್ಥಕ ಬದುಕನ್ನು ಸವೆಸಿದ ಜಿ.ಎಸ್.ಸಿದ್ದಲಿಂಗಯ್ಯನವರು ಕನ್ನಡ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಅವರ ಅಗಲುವಿಕೆ ಸಾಹಿತ್ಯ ಕ್ಷೇತ್ರಕ್ಕೆ ತುಂಬಲಾರದ ನಷ್ಟ ಎಂದು ನಾಡಿನ ಪ್ರಸಿದ್ಧ ಸಾಹಿತಿ ಡಾ. ಎಸ್.ಪಿ.ಪದ್ಮಪ್ರಸಾದ್ ನುಡಿದರು. ಅವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನಗರದ ಕನ್ನಡ ಭವನದಲ್ಲಿ ಏರ್ಪಡಿಸಿದ್ದ ಜಿ.ಎಸ್.ಸಿದ್ದಲಿಂಗಯ್ಯನವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಜಿಲ್ಲಾ ಕಸಾಪ ಸಂಚಾಲಕರಾದ ಕೆ.ಎಸ್.ಉಮಾಮಹೇಶ್ ಮಾತನಾಡಿ ಮಧುಗಿರಿಯಲ್ಲಿ ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಸ್ಥಾನವನ್ನು ಅಲಂಕರಿಸಿದರೂ ಅವರಿಗೆ ಅಖಿಲ ಭಾರತ ಮಟ್ಟದ ಸಾಹಿತ್ಯ ಸಮ್ಮೇಳನಾಧ್ಯಕ್ಷ ಪದವಿ ಒದಗಿ ಬರದೆ ಇದ್ದುದು ವಿಷಾದನೀಯ ಸಂಗತಿ ಎಂದರು. ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಎಂ.ಜಿ.ಸಿದ್ಧರಾಮಯ್ಯ ಮಾತನಾಡಿ ಜಿ.ಎಸ್.ಸಿದ್ದಲಿಂಗಯ್ಯನವರು ಸಿದ್ಧಗಂಗಾ ಮಠದೊಂದಿಗೆ ಉತ್ತಮ ಬಾಂಧವ್ಯವನ್ನು…
ತುಮಕೂರು: ಮಹಾನಗರಪಾಲಿಕೆ ಆಯುಕ್ತ ಬಿ.ವಿ. ಅಶ್ವಿಜ ಅವರು ಬುಧವಾರ ಪಾಲಿಕೆ ವ್ಯಾಪ್ತಿಯಲ್ಲಿರುವ ೪ ಇಂದಿರಾ ಕ್ಯಾಂಟೀನ್‌ಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಪಾಲಿಕೆಯ ಅಧೀಕ್ಷಕ ಅಭಿಯಂತರರು, ಕಾರ್ಯಪಾಲಕ ಅಭಿಯಂತರರು, ಆರೋಗ್ಯಾ ಧಿಕಾರಿ ಹಾಗೂ ಮತ್ತಿತರ ಅಧಿಕಾರಿಗಳ ತಂಡ ದೊಂದಿಗೆ ಇಂದಿರಾ ಕ್ಯಾಂಟೀನ್‌ಗೆ ಭೇಟಿ ನೀಡಿದ ಅವರು ಸ್ವಚ್ಛತೆ, ಮೂಲಸೌಕರ್ಯಗಳ ಬಗ್ಗೆ ಪರಿಶೀಲಿಸಿದರು. ಕ್ಯಾಂಟೀನ್‌ನಲ್ಲಿ ಸಾರ್ವಜನಿಕರೊಂದಿಗೆ ಆಹಾರ ಸೇವಿಸುವ ಮೂಲಕ ಆಹಾರದ ಗುಣಮಟ್ಟ ಹಾಗೂ ಶುಚಿ-ರುಚಿಯನ್ನು ಪರಿಶೀಲಿಸಿದರು. ಇತರೆ ಹೋಟೆಲ್‌ಗಳಿಗಿಂತ ಭಿನ್ನ ರೀತಿಯಲ್ಲಿ ಕಾಣಿಸುವಂತೆ ಇಂದಿರಾ ಕ್ಯಾಂಟೀನ್‌ಗಳನ್ನು ಸೌಂದರ್ಯೀಕರಣಗೊಳಿಸಲಾಗಿದೆ. ಪ್ರಸ್ತುತ ಇರುವ ೪ ಇಂದಿರಾ ಕ್ಯಾಂಟೀನ್‌ಗಳೊAದಿಗೆ ಶಿರಾಗೇಟ್ ಹಾಗೂ ಜಿಲ್ಲಾಸ್ಪತ್ರೆ ಆವರಣದಲ್ಲಿ ಇಂದಿರಾ ಕ್ಯಾಂಟೀನ್‌ಗಳನ್ನು ೨ ಹೊಸದಾಗಿ ಅನು ಷ್ಠಾನಗೊಳಿಸಲು ಸರ್ಕಾರ ಅನುಮೋದನೆ ನೀಡಿದೆ. ಮುಂದಿನ ೨ ವಾರಗಳಲ್ಲಿ ಹೊಸ ಇಂದಿರಾ ಕ್ಯಾಂಟೀ ನ್‌ಗಳಲ್ಲಿ ಉತ್ತಮ ಗುಣಮಟ್ಟದ ಶುಚಿ-ರುಚಿಯಾದ ವಿತರಣೆ, ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗುವುದು. ಇಂದಿರಾ ಕ್ಯಾಂಟೀನ್‌ಗಳಲ್ಲಿ ತಿಂಡಿಗೆ ೫ ರೂ. ಹಾಗೂ ಊಟಕ್ಕೆ ೧೦ ರೂ.ಗಳ ದರ ನಿಗಧಿಪಡಿಸಲಾಗಿದೆ ಎಂದು ತಿಳಿಸಿದರು.









