Author: News Desk Benkiyabale

ತುಮಕೂರು: ದೇಶದಲ್ಲಿ ಜಾತಿ ಗಣತಿ ಮಾಡುವ ಅಧಿಕಾರ ಇರುವುದು ಕೇಂದ್ರ ಸರ್ಕಾರಕ್ಕೆ ಮಾತ್ರ. ಹಾಗಾಗಿ ರಾಜ್ಯ ಸರ್ಕಾರದ ಜಾತಿ ಗಣತಿಗೆ ಬೆಲೆ ಇಲ್ಲ. ಈ ಜಾತಿ ಗಣತಿ ವರದಿ ತನ್ನಿಂದ ತಾನಾಗಿಯೇ ನಿಷ್ಕಿçÃಯವಾಗುತ್ತದೆ ಎಂದು ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ರಾಜ್ಯ ಖಾತೆ ಸಚಿವ ವಿ. ಸೋಮಣ್ಣ ಹೇಳಿದರು. ರಾಜ್ಯ ಸರ್ಕಾರ ನಡೆಸಿರುವ ಜಾತಿ ಗಣತಿಗೆ ಯಾವುದೇ ಕಿಮ್ಮತ್ತಿಲ್ಲ. ಹಾಗಾಗಿ ಈ ಸರ್ಕಾರದ ಜಾತಿ ಗಣತಿ ಹೊರಟು ಹೋಗಿದೆ. ದೇಶದ ಜಾತಿ ಗಣತಿಯನ್ನು ಕೇಂದ್ರ ಸರ್ಕಾರವೇ ಮಾಡಲಿದೆ ಎಂದು ಅವರು ತಿಳಿಸಿದರು. ನಗರದಲ್ಲಿ ಶಾಸಕ ಜ್ಯೋತಿಗಣೇಶ್ ರವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ದೇಶ, ಒಂದು ಚುನಾವಣೆ, ಮಹಿಳಾ ಮೀಸಲಾತಿ ಬಿಲ್, ಜಾತಿ ಗಣತಿ ಇವೆಲ್ಲಾ ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಠಿಯ ಚಿಂತನೆ. ರಾಜ್ಯ ಸರ್ಕಾರ ವಿನಾ ಕಾರಣ ಗಾಳಿಯಲ್ಲಿ ಗುಂಡು ಹೊಡೆಯುವುದನ್ನು ಬಿಟ್ಟು ರಾಜ್ಯದ ಅಭಿವೃದ್ಧಿಗೆ ಶ್ರಮಿಸುವುದು ಉತ್ತಮ ಎಂದರು. ಪ್ರಧಾನಿ ನರೇಂದ್ರ ಮೋದಿಯವರು…

Read More

ಹುಳಿಯಾರು: ಕ್ರಾಂತಿಕಾರಿ ವಿಚಾರದ ವ್ಯಕ್ತಿಯಾದ ಬಸವಣ್ಣನವರು ಜಗತ್ತಿನಲ್ಲಿ ಸಮಾನತೆಯನ್ನು ಸ್ಥಾಪಿಸಲು ಶ್ರಮಿಸಿದ ಶಕ್ತಿ ಹಾಗೂ ಲಿಂಗ ತಾರತಮ್ಯವನ್ನು ವಿರೋಧಿಸಿದ ಮೊದಲ ವ್ಯಕ್ತಿಯಾಗಿ ಜಗತ್ತಿಗೇ ಜ್ಯೋತಿಯಾದವರು ಎಂದು ತಿಮ್ಲಾಪುರ ಗ್ರಾಪಂ ಸದಸ್ಯ ನಂದಿಹಳ್ಳಿ ದೇವರಾಜು ತಿಳಿಸಿದರು. ಹುಳಿಯಾರು ಸ್ಪೋರ್ಟ್ಸ್ ಅಂಡ್ ರಿಕ್ರಿಯೇಷನ್À ಅಸೋಸಿಯೇಷನ್ ವತಿಯಿಂದ ಬುಧವಾರ ಆಯೋಜಿಸಿದ್ದ ಶ್ರೀ ಬಸವೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಸುಮಾರು ೮೦೦ ವರ್ಷಗಳ ಹಿಂದೆ ಸಮಾಜದಲ್ಲಿ ಅಸಮಾನತೆ ತಾಂಡವಾಡುತ್ತಿದ್ದಾಗ ಅದನ್ನು ತೊಡೆದುಹಾಕಲು ಅವಿರತವಾಗಿ ಶ್ರಮಿಸಿದವರು. ತಮ್ಮ ತತ್ವ, ವಚನಗಳ ಮೂಲಕ ಉತ್ತಮ ಸಂದೇಶವನ್ನು ಸಮಾಜಕ್ಕೆ ನಿರಂತರವಾಗಿ ನೀಡಿದರು. ಅವುಗಳನ್ನು ನಾವು ನಿಜಜೀವನದಲ್ಲಿ ಅಳವಡಿಸಿಕೊಂಡರೆ ಬಸವಣ್ಣನವರು ಕಂಡ ಸುಂದರ ಸಮಾಜ ನಿರ್ಮಿಸಬಹುದು ಎಂದರು. ಜಯಕರ್ನಾಟಕ ಸಂಘಟನೆಯ ಮೋಹನ್‌ಕುಮಾರ್ ರೈ ಮಾತನಾಡಿ ಬಸವ ಜಯಂತಿಯAದು ಮಾತ್ರ ಬಸವಣ್ಣನವರನ್ನು ನೆನಪಿಸಿ ಕೊಂಡರೆ ಸಾಲದು. ನಿತ್ಯ ಬದುಕಿನಲ್ಲಿ ಬಸವಣ್ಣನವರ ತತ್ವಗಳನ್ನು ಅಳವಡಿಸಿಕೊಳ್ಳಬೇಕಾಗಿದೆ. ಕಾಯಕದಲ್ಲಿಯೆ ಭಗವಂತನನ್ನು ಕಾಣುವ ಗುಣವನ್ನು ನಾವು ಬೆಳೆಸಿ ಕೊಳ್ಳಲು ಪ್ರಯತ್ನಿಸಬೇಕು ಎಂದರು. ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯ…

Read More

ತುಮಕೂರು: ಸ್ಲಂ ಜನಾಂದೋಲನ ಕರ್ನಾಟಕ ಮತ್ತು ತುಮ ಕೂರು ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿಯಿಂದ ವಿಶ್ವಗುರು ಬಸವಣ್ಣನವರ ೮೯೨ನೇ ಜಯಂತಿ ಹಾಗೂ ಪ್ರೊ. ಬಿ ಕೃಷ್ಣಪ್ಪನವರ ೨೨ನೇ ಸ್ಮರಣೆಯ ಅಂಗವಾಗಿ ಕಾಯಕ ಚಳುವಳಿ ಕುರಿತು ಉಪನ್ಯಾಸ ಕಾರ್ಯಕ್ರಮವನ್ನು ಸ್ಲಂ ಭವನದಲ್ಲಿ ಆಯೋ ಜಿಸಲಾಯಿತು. ಕಾರ್ಯಕ್ರಮದ ಆರಂಭದಲ್ಲಿ ಸಮಾಜದಲ್ಲಿ ವಿವಿಧ ಸ್ಥರಗಳಲ್ಲಿ ಕೆಲಸ ಮಾಡುವ ಮಹಿಳೆಯರು ಮತ್ತು ಕಾಯಕ ಜೀವಿಗಳು ಪುಷ್ಪ ನಮನ ಸಲ್ಲಿಸಿ ಉದ್ಘಾಟಿಸಿದರು. ವಿಶೇಷ ಉಪನ್ಯಾಸ ನೀಡಿದ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ಅಧ್ಯಕ್ಷರಾದ ಬಿ.ಉಮೇಶ್ ಮಾತನಾಡಿ, ಬಸವಣ್ಣನವರ ಕಾಯಕ ಸಿದ್ದಾಂತ ಭಾರತದ ಆರ್ಥಿಕ ಚಲನೆಗೆ ಕಾರಣವಾಗಿದೆ ಜನರ ಭಾಷೆಯಲ್ಲಿ ವಚನಗಳ ರಚನೆ ಮಾಡಿ ಕರ್ಮ ಸಿದ್ದಾಂತದ ಬದಲಾಗಿ ಕಾಯಕ ಸಿದ್ದಾಂತವನ್ನು ಬಸವಣ್ಣನವರು ಚಾಲನೆಗೆ ತಂದರು ಈ ಮೂಲಕ ಶ್ರಮ ಸಂಸ್ಕೃತಿಯ ಪರಿಕಲ್ಪನೆ ಕಾಯಕ ಮತ್ತು ದಾಸೋಹಕ್ಕೆ ಪೂರಕವಾಗಿಸಿತ್ತು. ಅಂದು ಸ್ಥಿತಿ ಪ್ರಜ್ಞೆ ಇದ್ದಂತಹ ಸಮಾಜದಲ್ಲಿ ಪ್ರೀತಿ, ತಾಳ್ಮೆ ಲಿಂಗ ಸಮಾನತೆ ಸಂವೇಧನೆ ಸಾಮಾನ್ಯ ಜನರಲ್ಲಿ…

Read More

ತುಮಕೂರು: ೦೩ ವರ್ಷಗಳ ನಂತರ ನಡೆಯುತ್ತಿರುವ ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿ ಯಾರು ಹೋಬಳಿ ಕೆಂಕೆರೆ ಗ್ರಾಮದ ಇತಿಹಾಸ ಪ್ರಸಿದ್ದ ಶ್ರೀಚನ್ನಬಸವೇಶ್ವರ ಸ್ವಾಮಿಯ ರಥೋತ್ಸ ವ ಇದು ವಿವಿಧ ಧಾರ್ಮಿಕ ಕೈಂಕರ್ಯಗಳೊAದಿಗೆ ಸಹಸ್ತ್ರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿ ಮಹಾ ರಥೋತ್ಸವ ಜರುಗಿತು. ಬಸವ ಜಯಂತಿ ಹಿನ್ನೆಲೆ ಚನ್ನಬಸವೇಶ್ವರ ಸ್ವಾಮಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು,ಇಂದು ಮುಂಜಾನೆ ಮಹದೇವಮ್ಮ , ಚನ್ನಬಸವಯ್ಯ ದಂಪತಿಗಳು ರಥಕ್ಕೆ ಪುಣ್ಯಾಹ ಕಾರ್ಯ ನಡೆಸಿ ಕಳಸ ಸ್ಥಾಪಿಸುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ನಂತರ ಸ್ವಾಮಿಯನ್ನು ಬಸವನ ಉತ್ಸವ ಹಾಗೂ ಧ್ವಜದ ಕುಣಿತದೊಂದಿಗೆ ಮೆರವಣಿಗೆಯಲ್ಲಿ ಕರೆತಂದು,ರAಗುರAಗಿನ ಬಾವುಟ,ಎಳನೀರ ಗೊಂಚಲು,ಬಾಳೆಗೊನೆ,ಕೊಬ್ಬರಿಹಾರ ಸೇರಿದಂತೆ ವಿವಿಧ ಮಾದರಿಯ ಹೂ,ಹಾರಗಳಿಂದ ಶೃಂಗರಿಸಿದ್ದ ರಥಕ್ಕೆ ಚನ್ನಬಸವೇಶ್ವರ ಸ್ವಾಮಿ ತೋರಿಸಿ ಗ್ರಾಮಸ್ಥರು ಜಯ ಘೋಷ ಹಾಕಿ ರಥವನ್ನು ಹಿಡಿದು ಅದ್ದೂರಿಯಾಗಿ ಸಂಭ್ರಮಿಸಿದರು. ಮಹಿಳೆಯರು ಹಾಗೂ ಮಕ್ಕಳು ಸೇರಿದಂತೆ ವಿವಿಧೆಡೆಯಿಂದ ಆಗಮಿಸಿದ್ದವರು,ರಥದ ಗಾಲಿಗೆ ಕಾಯಿ ಹೊಡೆದು ಪೂಜೆ ಸಲ್ಲಿಸಿದರು. ಜಾತ್ರೆಗೆ ಆಗಮಿಸಿದ್ದ ಭಕ್ತಾಧಿಗಳಿಗೆ ಪಾನಕ,ಪನಿವಾರ ಹಾಗೂ ಉಪಹಾರ ವ್ಯವಸ್ಥೆ ಮಾಡಲಾಗಿತ್ತು.

Read More

ತುರುವೇಕೆರೆ: ತಾಲ್ಲೂಕು ಆಡಳಿತದ ವತಿಯಿಂದ ಪಟ್ಟಣದ ತಾಲ್ಲೂಕು ಕಚೇರಿ ಆವರಣದಲ್ಲಿ ಬುಧವಾರ ಬಸವ ಜಯಂತಿಯನ್ನು ಆ ಚರಿಸಲಾಯಿತು. ಶಾಸಕ ಎಂ.ಟಿ.ಕೃಷ್ಣಪ್ಪನವರು ಬಸವಣ್ಣನವರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದ ಅವರು ಸಮಾಜದ ವಿವಿಧ ಸ್ತರದ ಜನರು ತಮ್ಮ ಕಾಯಕವನ್ನು ನಿಷ್ಠೆಯಿಂದ ಮಾಡುವ ಮೂಲಕ ಅದರಲ್ಲೇ ಆಧ್ಯಾತ್ಮಿಕ ನೆಲೆಯನ್ನು ಕಂಡುಕೊಳ್ಳುವAತೆ ಮಾಡಿದ ಮಹಾನ್ ಜ್ಞಾನಿಯಾಗಿದ್ದರು. ನಡೆ ನುಡಿಗಳು ಒಂದಾದಾಗ ಮಾತ್ರ ವ್ಯಕ್ತಿತ್ವ ಪರಿಪೂರ್ಣಗೊಳ್ಳಲು ಸಾದ್ಯವಿದೆ ಎಂದು ನಂಬಿದ್ದವರು. ‘ಇವನಾರವ ಇವನಾರವ ಎನ್ನದೆ, ಇವ ನಮ್ಮವ’ ಎನ್ನುವ ಮೂಲಕ ಸಮಾಜದಲ್ಲಿ ಮೇಲು ಕೀಳು ಎಂಬ ಬೇಧಬಾವ ಬಿಡಬೇಕು. ಸಾಮಾಜಿಕ, ಧಾರ್ಮಿಕವಾಗಿ ಎಲ್ಲರೂ ಸಮಾಜದಲ್ಲಿ ಸರಿಸಮಾನತೆ ಜೀವನ ನಡೆಸ ಬೇಕು. ಢಾಂಬಿಕತೆ ತೊರೆದು ನಿಷ್ಕಲ್ಮಶ ಭಕ್ತಿಯನ್ನು ಹೊಂದ ಬೇಕು. ಹೆಣ್ಣು, ಗಂಡಿನ ನಡುವೆ ಯಾವುದೇ ಬೇಧ ತೊರಬಾರದು ಇಬ್ಬರ ಸಮಾನರು. ಮಹಿಳೆಗೆ ಶಿಕ್ಷಣದ ಜೊತೆಗೆ ಧಾರ್ಮಿಕ ಸ್ವಾತಂತ್ರ‍್ಯವನ್ನು ನೀಡಬೇಕು ಎಂದು ತಮ್ಮ ವಚನಗಳಲ್ಲಿ ತಿಳಿಸಿದ್ದಾರೆ ಎಂದರು. ತಹಶೀಲ್ದಾರ್ ಎನ್.ಎ.ಕುಂಞಅಹಮದ್ ಮಾತನಾಡಿ, ಬಸವಾಧಿ ಶರಣರ ವಚನಗಳು ಮನುಷ್ಯನ…

Read More

ತುಮಕೂರು: ನಗರ ವೀರಶೈವ ಸಮಾಜ ಸೇವಾ ಸಮಿತಿ, ವೀರಶೈವ ಸಮಾಜದ ಅಂಗ ಸಂಸ್ಥೆಗಳು ಇವರುಗಳ ಸಂಯುಕ್ತಾಶ್ರಯದಲ್ಲಿ ಜಗದ್ಗುರು ರೇಣುಕಾಚಾರ್ಯರ, ಜಗಜ್ಯೋತಿ ಶ್ರೀ ಬಸವೇಶ್ವರರ ಮತ್ತು ಕಾಯಕ ಯೋಗಿ ಶ್ರೀ ಸಿದ್ದರಾಮೇಶ್ವರರ ಜಂಟಿ ಜಯಂತ್ಯೋತ್ಸವ ಹಾಗೂ ಬಸವಜಯಂತಿ ಅಂಗವಾಗಿ ಅರಳೇಪೇಟೆ ಶ್ರೀ ಬಸವೇಶ್ವರ ದೇವಾಲಯದಲ್ಲಿ ಬೆಳಗ್ಗೆ ರುದ್ರಾಭಿಷೇಕ, ಮಹಾಮಂಗಳರಾತಿ, ಪ್ರಸಾದ ವಿನಿಯೋಗ ನಡೆಯಿತು. ಬುಧವಾರ ಸಂಜೆ ಮೆರವಣಿಗೆಯು ಅರಳೇಪೇಟೆ ದೇವಾಲಯದಿಂದ ಹೊರಪೇಟೆ, ಮಂಡಿಪೇಟೆ ಆಯಿಲ್ ಮಿಲ್ ರಸ್ತೆ, ನರಸಿಂಗ ಸ್ಟೋರ್ ಮುಂಭಾಗದಿAದ ಮಂಡಿಪೇಟೆಯ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನದ ಬಳಿ ಮುಕ್ತಾಯವಾಯಿತು. ಜಗದ್ಗುರು ಶ್ರೀ ರೇಣುಕಾಚಾರ್ಯರ, ಜಗಜ್ಯೋತಿ ಶ್ರೀ ಬಸವೇಶ್ವರರ ಮತ್ತು ಕಾಯಕ ಯೋಗಿ ಶ್ರೀ ಸಿದ್ದರಾಮೇಶ್ವರರ ಜಂಟಿ ಉತ್ಸವ ವಿವಿಧ ಕಲಾ ತಂಡ ಹಾಗೂ ಆನೆ ಲಕ್ಷಿö್ಮ ಪಾಲ್ಗೊಳ್ಳುವಿಕೆಯೊಂದಿಗೆ ವೈಭವವಾಗಿ ನಡೆಯಿತು ನಡೆಯಿತು. ಸಿದ್ಧಗಂಗಾ ಮಠಾಧ್ಯಕ್ಷರಾದ ಶ್ರೀ ಸಿದ್ಧಲಿಂಗ ಸ್ವಾಮಿಗಳು ಉತ್ಸವದ ಉದ್ಘಾಟನೆ ನೆರವೇರಿಸುವರು. ಶ್ರೀ ಚನ್ನಬಸವರಾಜೇಂದ್ರ ಸ್ವಾಮಿಗಳು, ಶ್ರೀ ಅಟವೀ ಶಿವಲಿಂಗ ಸ್ವಾಮಿಗಳು, ಡಾ.ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮಿಗಳು, ಶ್ರೀ ವೀರಭದ್ರ…

Read More

ಹುಳಿಯಾರು: ಹೋಬಳಿ ಕೆಂಕೆರೆ ಗ್ರಾಮದ ಇತಿಹಾಸ ಪ್ರಸಿದ್ದ ಶ್ರೀಚನ್ನಬಸವೇಶ್ವರ ಸ್ವಾಮಿಯ ರಥೋತ್ಸವ ಬುಧ ವಾರ ವಿವಿಧ ಧಾರ್ಮಿಕ ಕೈಂಕರ್ಯಗಳೊAದಿಗೆ ಸಹ ಸ್ತಾçರು ಭಕ್ತರ ಸಮ್ಮು ಖದಲ್ಲಿ ಅದ್ದೂರಿ ಜರುಗಿತು. ಬಸವ ಜಯಂತಿ ಹಿನ್ನೆಲೆ ಚನ್ನಬಸವೇಶ್ವರ ಸ್ವಾಮಿಗೆ ವಿಶೇಷ ಅಲಂಕಾರ ಮಾಡಲಾ ಗಿತ್ತು, ಸ್ವಾಮಿಯನ್ನು ಬಸ ವನ ಉತ್ಸವ ಹಾಗೂ ಧ್ವಜದ ಕುಣಿತದೊಂದಿಗೆ ಮೆರವ ಣಿಗೆಯಲ್ಲಿ ಕರೆತಂದು, ಗಣ ಪತಿ ಪೂಜೆ, ಪುಣ್ಯಾಹ, ದಿಕ್‌ಬಲಿ ಹರಣ ಮತ್ತು ಅಷ್ಟೋತ್ತರ ಪೂಜೆ ಮುಂತಾದ ಪೂಜಾ ಕೈಂಕರ್ಯದೊAದಿಗೆ ಆರಂಭವಾದ ಶ್ರೀ ಸ್ವಾಮಿಯವರ ಮಹಾ ರಥೋತ್ಸವಕ್ಕೆ ದೇವಸ್ಥಾವದ ಸಮಿತಿ ಸದಸ್ಯರು ಹಾಗೂ ಗ್ರಾಮಸ್ಥರು ವಿಶೇಷ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಲಾಯಿತು. ರಂಗು ರಂಗಿನ ಬಾವುಟಗಳು, ತಳಿರು ತೋರಣಗಳು, ಎಳನೀರಿನ ಗೊಂಚಲುಗಳು, ಬಾಳೆಗೊನೆ, ಕೊಬ್ಬರಿಹಾರ ಹಾಗೂ ಹೂವಿನ ಹಾರಗಳಿಂದ ಶೃಂಗಾರಗೊAಡು, ಮಂಗಳ ವಾದ್ಯಗಳೊಂದಿಗೆ ಸಾಗಿಬಂದ ಅದ್ದೂರಿ, ಆಕರ್ಷಕ, ವೈಭವದ ಮಹಾ ರಥೋತ್ಸವವನ್ನು ಗ್ರಾಮಸ್ಥರು ಜಯ ಘೋಷದೊಂದಿಗೆ ರಥ ಎಳೆದು ಸಂಭ್ರಮಿಸಿದರು. ೩ ವರ್ಷಗಳ ನಂತರ ನಡೆಯು ತ್ತಿರುವ ರಥೋತ್ಸವ…

Read More

ತುಮಕೂರು: ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ಹಾಗೂ ಅಖಿಲ ಭಾರತ ಡಾ. ಅಂಬೇಡ್ಕರ್ ಪ್ರಚಾರ ಸಮಿತಿಯ ವತಿಯಿಂದ ೮೮೯ನೇ ಬಸವೇಶ್ವರ ಜಯಂತಿಯನ್ನು ನಗರದ ಅಮಾನಿಕೆರೆಯ ಪಾರ್ಕ್ನಲ್ಲಿ ಆಚರಿಸಲಾಯಿತು. ಬಸವ ಜಯಂತಿ ಪ್ರಯುಕ್ತ ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ಹಾಗೂ ಅಖಿಲ ಭಾರತ ಡಾ. ಅಂಬೇಡ್ಕರ್ ಪ್ರಚಾರ ಸಮಿತಿಯ ಜಿಲ್ಲಾಧ್ಯಕ್ಷರಾದ ಎನ್.ಕೆ.ನಿಧಿಕುಮಾರ್‌ರವರು ಮಾತನಾಡುತ್ತಾ ೧೨ನೇ ಶತಮಾನದಲ್ಲಿ ವಚನ ಕ್ರಾಂತಿಯ ಮೂಲಕ ಸಮಾಜದಲ್ಲಿ ಸಮಾನತೆಯನ್ನು ಸಾಧಿಸಿದ, ದಾರ್ಶನಿಕ, ಸಾಂಸ್ಕೃತಿಕ ನಾಯಕ ವೀರ ಶರಣ ಜಗಜ್ಯೋತಿ ಬಸವಣ್ಣನವರ ಚಿಂತನೆಗಳು, ತತ್ವ ಆ ದರ್ಶಗಳು, ಇಂದಿಗೂ ಪ್ರಸ್ತುತ. ಸಾಮಾಜಿಕ ಸುಧಾರಣೆಗೆ ಅವರು ನೀಡಿರುವ ಕೊಡುಗೆಗಳು ಅಪಾರ, ಶಿವಶರಣರ ಒಗ್ಗೂಡುವಿಕೆಗೆ ರಚಿಸಿದ ಅನುಭವ ಮಂಟಪವು, ದೇಶದ ಸಂಸತ್ ಭವನ ನಿರ್ಮಾಣಕ್ಕೂ ಪ್ರೇರಣೆಯಾಗಿದೆ. ದಯೆ ಇಲ್ಲದ ಧರ್ಮ ಯಾವುದಯ್ಯ ಎಂದು ಪ್ರಶ್ನಿಸಿದ ಬಸವಣ್ಣನವರ ಅನೇಕ ವಚನಗಳು ಸಾಮಾಜಿಕ, ಧಾರ್ಮಿಕ ಕ್ರಾಂತಿಗೆ ಕಾರಣವಾಗಿದೆ. ಬಸವಣ್ಣನವರು ಬಿಜ್ಜಳನ ಆಸ್ಥಾನದಲ್ಲಿ ಸ್ಥಾನ ಪಡೆದು ಸರ್ವ ಧರ್ಮದ ಸಮಾನತೆಯನ್ನು ಸಾರಿ, ಬಡ ಜನತೆಗೆ…

Read More

ಪಟ್ಟನಾಯಕನಹಳ್ಳಿ: ಜನ್ಮ ಕೊಟ್ಟ ತಂದೆ-ತಾಯಿ, ವಿದ್ಯೆ ಕಲಿಸಿ ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ಬದುಕಲು ಜ್ಞಾನವನ್ನು ನೀಡುವ ಗುರುಗಳನ್ನು ನಮ್ಮ ಬದುಕಿನಲ್ಲಿ ಆದರ್ಶವಾಗಿಟ್ಟುಕೊಂಡು ಮುನ್ನಡೆ ದಾಗ ಯಶಸ್ಸು ತಾನಾಗಿಯೇ ಲಭಿಸಲಿದೆ ಎಂದು ನಾರು ಅಭಿವೃದ್ಧಿ ನಿಗಮ ಮಾಜಿ ಅಧ್ಯಕ್ಷ ಬಿ.ಕೆ.ಮಂಜುನಾಥ್ ಹೇಳಿದರು. ಶಿರಾ ತಾಲೂಕಿನ ಗೌಡಗೆರೆ ಹೋಬಳಿಯ ಚಂಗಾವರ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಸುಧೀರ್ಘ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಪಿ.ಜಿ. ಮಂಜುನಾಥ್ ರವರಿಗೆ ಬೀಳ್ಕೊಡುಗೆ ಮತ್ತು ಗುರುವಂದನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು. ವಿದ್ಯಾರ್ಥಿ ಜೀವನದಲ್ಲಿ ಜ್ಞಾನ ಎಂಬ ವಿದ್ಯ ನೀಡಿ ಸಮಾಜದಲ್ಲಿ ಸುಸಂಸ್ಕೃತ ವ್ಯಕ್ತಿಯಾಗಿ ಬದುಕಲು ದಾರಿದೀಪವಾದ ಶಿಕ್ಷಕರು ದೈವ ಸ್ವರೂಪಿಗಳು ಎಂದರು. ಶಿರಾ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶಿವು ಚಂಗಾವರ ಮಾತನಾಡಿ ಹಲವಾರು ದಶಕ ಗಳಿಂದ ಚಂಗಾವರ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯೆಯನ್ನು ಕಲಿಸಿ ಯಶಸ್ವಿ ವ್ಯಕ್ತಿಗಳಾಗಿ ರೂಪಿಸಿದ ಮುಖ್ಯ ಶಿಕ್ಷಕರಾದ ಪಿ.ಜಿ. ಮಂಜುನಾಥ್ ರವರ ಸೇವೆ ಅವಿಸ್ಮರಣೀಯ ಎಂದರು. ತಾಲೂಕು ಪಂಚಾಯಿತಿ ಕಾರ್ಯ ನಿರ್ವ ಹಣಾಧಿಕಾರಿ…

Read More

ತುಮಕೂರು:  ಆಡುವುದೊಂದು ಮಾಡುವುದೊಂದು ಆದರೆ ವ್ಯಕ್ತಿಯನ್ನು ಸಮಾಜ ಗೌರವಿಸುವುದಿಲ್ಲ. ಮಾತು ಕೃತಿಗೆ ಬಂದಾಗಲೇ ವ್ಯಕ್ತಿ ಶ್ರೇಷ್ಠನೆನಿಸಿಕೊಳ್ಳುವುದು ಎಂದು ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ತಿಳಿಸಿದರು. ತುಮಕೂರು ವಿಶ್ವವಿದ್ಯಾನಿಲಯದ ಬಸವೇಶ್ವರ ಅಧ್ಯಯನ ಪೀಠ ಬುಧವಾರ ಹಮ್ಮಿಕೊಂಡಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ವಿವಿ ಆವರಣದಲ್ಲಿರುವ ಬಸವೇಶ್ವರರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದರು. ಬಸವಣ್ಣ ಮೊದಲಾದ ಮಹಾತ್ಮರನ್ನು ನಿರ್ದಿಷ್ಟ ಜಾತಿ, ಸಮುದಾಯಗಳಿಗೆ ಸೀಮಿತಗೊಳಿಸಬಾರದು. ಅವರ ತತ್ವಗಳ ಸ್ಮರಣೆ ಜಯಂತಿಗಳಿಗೂ ಸೀಮಿತವಾಗಬಾರದು ಎಂದರು. ಕಾಯಕವೇ ಕೈಲಾಸ ತತ್ವವೊಂದನ್ನು ಅಳವಡಿಸಿಕೊಂಡರೆ ವ್ಯಕ್ತಿ ಮಹಾತ್ಮನಾಗುತ್ತಾನೆ. ಸಮಾಜ ಸುಧಾರಣೆಯ ಪ್ರಕ್ರಿಯೆ ವಿಶ್ವವಿದ್ಯಾನಿಲಯಗಳಿಂದ ಆರಂಭವಾಗಬೇಕು ಎಂದು ಅಭಿಪ್ರಾಯಪಟ್ಟರು. ಕುಲಸಚಿವೆ ನಾಹಿದಾ ಜûಮ್ ಜûಮ್ ಮಾತನಾಡಿ, ಸಮಾನತೆಯ ಹರಿಕಾರರಾದ ಬಸವಣ್ಣನವರು ಹನ್ನೆರಡನೆಯ ಶತಮಾನದಲ್ಲೇ ಮಹಿಳಾ ಸಬಲೀಕರಣದ ಬಗ್ಗೆ ಗಟ್ಟಿ ದನಿಯಲ್ಲಿ ಮಾತನಾಡಿದವರು. ಗುಡಿಯಲ್ಲಿದ್ದ ದೇವರನ್ನು ಅಂಗೈಗಳಿಗೆ ತಂದಿಟ್ಟವರು ಎಂದರು. ಬಸವೇಶ್ವರ ಅಧ್ಯಯನ ಪೀಠದ ಸಂಚಾಲಕ ಡಾ. ವೆಂಕಟರೆಡ್ಡಿ ರಾಮರೆಡ್ಡಿ ಮಾತನಾಡಿ, ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಗೆ ಬಸವಣ್ಣನವರು ನೀಡಿದ ಕೊಡುಗೆ ಅಪಾರ.…

Read More