ತುಮಕೂರು: ಕಲಾವಿದರು, ಸಾಹಿತಿಗಳು ,ರಾಜಕಾರಣಿಗಳ ನುಡಿ, ನಡೆಗಳಲ್ಲಿ ನೈತಿಕತೆ ಕಾಣೆಯಾಗುತ್ತಿರುವ ಈ ಕಾಲದಲ್ಲಿ, ಡಾ.ರಾಜ್‌ಕುಮಾರ್ ತಾವು ಬದುಕಿರುವಷ್ಟು ಕಾಲವೂ ನುಡಿ, ನಡೆಯಲ್ಲಿ ನೈತಿಕತೆಯನ್ನು ಉಳಿಸಿಕೊಂಡು, ಜನರ ಅಭಿರುಚಿ ಕೆಡಿಸದೆ ಕಲಾಸೇವೆ ಮಾಡಿದ ಮಹಾನ್ ಕಲಾವಿದರು ಎಂದು ಪ್ರೊ.ಬರಗೂರು ರಾಮಚಂದ್ರಪ್ಪ ತಿಳಿಸಿದ್ದಾರೆ. ನಗರದ ಕನ್ನಡ ಭವನದಲ್ಲಿ ಅಮರಜೋತಿ ಸಾಂಸ್ಕೃತಿಕ ಟ್ರಸ್ಟ್ ದಿಬ್ಬೂರು ಆಯೋಜಿಸಿದ್ದ ಡಾ.ರಾಜ್‌ರತ್ನ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಪತ್ರಕರ್ತರಾದ ಗಂಗಾಧರ ಮೊದಲಿಯಾರ್ ಮತ್ತು ಸಂಗೀತ ನಿರ್ದೇಶಕ ಐ.ಎಲ್.ರಂಗಸ್ವಾಮಯ್ಯ ಅವರಿಗೆ ೨೦೨೫ನೇ ಸಾಲಿನ ಡಾ.ರಾಜರತ್ನ ಪ್ರಶಸ್ತಿ ಪ್ರಧಾನ ಮಾಡಿ ಮಾತನಾಡುತಿದ್ದ ಅವರು,ಚಮ್ಮಾರನಿಂದ ಹಿಡಿದು, ಚಕ್ರವರ್ತಿಯವರೆಗೆ ಎಲ್ಲಾ ರೀತಿಯ ಪಾತ್ರಗಳನ್ನು ಮಾಡುವ ಮೂಲಕ ಎಲ್ಲಾ ವರ್ಗದ ಜನರನ್ನು ಪ್ರತಿನಿಧಿಸಿದ ಏಕೈಕ ಕಲಾವಿದ ಡಾ.ರಾಜ್ ಎಂದರು. ಕನ್ನಡ ಕಲಾವಿದರಲ್ಲಿ ಜಾತಿ ಮೀರಿ ಕಲಿತವರು ಇದ್ದಾರೆ, ಕಲಿಸಿದವರು ಇದ್ದಾರೆ. ಇದೇ ನಿಜವಾದ ಅಂತಃಸತ್ವ.ಆದರೆ ರಾಜಕುಮಾರ್ ಎಂದಿಗೂ ತನ್ನ ತಾರಮೌಲ್ಯವನ್ನು ತಲೆಗೆ ಏರಿಸಿಕೊಳ್ಳದೆ ಅದನ್ನು ಪ್ರೇಕ್ಷಕರ ಹೃದಯಕ್ಕೆ ತಲುಪಿಸಿದವರು ಡಾ.ರಾಜ್‌ಕುಮಾರ್.ಹಾಗಾಗಿಯೇ ಅವರು ಚಲನಚಿತ್ರರಂಗದಲ್ಲಿ ಡಾ.ರಾಜಕುಮಾರ್ ಆಗಿದ್ದರೂ, ಪ್ರೇಕ್ಷಕರ ಪಾಲಿಗೆ…
Author: News Desk Benkiyabale
ತುಮಕೂರು: ಚುನಾವಣೆ ಸಂದರ್ಭದಲ್ಲಿ ಮಾತ್ರ ರಾಜಕಾರಣ ಮಾಡಬೇಕು. ಉಳಿದಂತೆ ಅಭಿವೃದ್ಧಿ ಕಾರ್ಯಗಳು ಸದ್ದು ಮಾಡಬೇಕು. ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಯೇ ನನ್ನ ಗುರಿ ಎಂದು ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಹೇಳಿದರು. ಜಿಲ್ಲೆಯ ತುರುವೇಕೆರೆ-ತಿಪಟೂರು ತಾಲ್ಲೂಕಿನ ಗಡಿಭಾಗ ಕುಂದೂರು ಬಳಿ ರಾಷ್ಟಿçÃಯ ಹೆದ್ದಾರಿ ೧೫೦ಎ ನ ೪೨.೨೩೬ ಕಿ.ಮೀ. ಉದ್ಧದ ಕೆ.ಬಿ. ಕ್ರಾಸ್, ಬಾಣಸಂದ್ರ, ತುರುವೇಕೆರೆ, ಮಾಯಸಂದ್ರ, ಚುಂಚನಹಳ್ಳಿ ಹಾಗೂ ನೆಲ್ಲಿಗೆರೆ ಭಾಗದ ಸುಮಾರು ೬೧೭.೨೮ ಕೋಟಿ ರೂ. ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು. ಅಭಿವೃದ್ಧಿ ವಿಚಾರದಲ್ಲಿ ನಾನು ರಾಜಕಾರಣ ಮಾಡುವುದಿಲ್ಲ. ಚುನಾವಣೆ ಸಂದರ್ಭದಲ್ಲಿ ಮಾತ್ರ ಪಕ್ಷ. ಉಳಿದ ದಿನಗಳಲ್ಲಿ ಪಕ್ಷಾತೀತವಾಗಿ ಕೆಲಸ ಮಾಡಬೇಕು. ಯಾವುದೇ ಪಕ್ಷದವರಿಗೆ ನನ್ನಿಂದ ಒಂದು ಸಣ್ಣ ಅಪಚಾರವಾಗಿದ್ದರೆ ನಾನು ಒಂದು ಸೆಕೆಂಡ್ ಸಹ ರಾಜಕಾರಣದಲ್ಲಿ ಇರುವುದಿಲ್ಲ ಎಂದರು. ಸರ್ಕಾರಗಳಿಗೆ ತೆರಿಗೆ ರೂಪದಲ್ಲಿ ಬರುವ ಸಾರ್ವಜನಿಕರ ಹಣವನ್ನು ಇನ್ನೊಂದು ರೀತಿಯಲ್ಲಿ…
ತುರುವೇಕೆರೆ: ಕಾರ್ಮಿಕರಲ್ಲಿ ಸಂಘಟನೆ ಕೊರತೆಯಿದ್ದು ಕಾರ್ಮಿಕರು ಸಂಘಟಿತರಾದಾಗ ಮಾತ್ರ ಸಾಧನೆ ಮಾಡಲು ಸಾದ್ಯವಿದೆ ಕಸಾಪ ತಾಲ್ಲೂಕು ಅಧ್ಯಕ್ಷ ಡಿ.ಪಿ.ರಾಜು ತಿಳಿಸಿದರು. ಶ್ರೀ ಸತ್ಯಗಣಪತಿ ಆಸ್ಥಾನ ಮಂಟಪದಲ್ಲಿ ಶ್ರೀ ಮಂಜುನಾಥ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಒಕ್ಕೂಟ ತುರುವೇಕೆರೆ, ಶ್ರಮಜೀವಿ ಕಟ್ಟಡ ಕಾರ್ಮಿಕರ ಹಿತರಕ್ಷಣಾ ಸಮಿತಿ ಕುಣಿಗಲ್, ಕರ್ನಾಟಕ ರಾಜ್ಯ ಕಟ್ಟಡ ಮಹಾತ್ಮಗಾಂಧಿ ನರೇಗಾ ಇತರೆ ನಿರ್ಮಾಣ ಅಸಂಘಟಿತ ಕಾರ್ಮಿಕರ ಸಂಘ ಇವುಗಳ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಕಾರ್ಮಿಕ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಕಾರ್ಮಿಕರು ಸಂಘಟಿತರಾಗದ ಹೊರತು ಸಂಘದ ಅಭಿವೃದ್ದಿ ಸಾದ್ಯವಿಲ್ಲ. ಇಂತಹ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಮೂಲಕ ಸರ್ಕಾರದ ವಿವಿಧ ಸವಲತ್ತುಗಳನ್ನು ಪಡೆದುಕೊಂಡು ಮುಖ್ಯವಾಹಿನಿಗೆ ಬರಬೇಕೆಂದು ಕಿವಿಮಾತು ಹೇಳಿದರು. ಶ್ರಮಜೀವಿ ಕಟ್ಟಡ ಕಾರ್ಮಿಕ ಹಿತರಕ್ಷಣಾ ಸಮಿತಿ ಕುಣಿಗಲ್ ಅಧ್ಯಕ್ಷರಾದ ಕೃಷ್ಣರಾಜ್ ಮಾತನಾಡಿ ನಿರ್ಧಿಷ್ಟ ಕಾನೂನುಗಳು ರೂಪಿತವಾಗುವ ಮುಂಚೆ ಕಾರ್ಮಿಕರಿಗೆ ಸೂಕ್ತ ನಿಯಮಗಳಿರಲಿಲ್ಲ. ಆ ವೇಳೆ ಕಾರ್ಮಿಕರು ಅನಾರೋಗ್ಯ ಇನ್ನಿತರ ತೊಂದರೆಗಳಿಗೆ ಒಳಗಾಗುತ್ತಿದ್ದರು. ಭಾರತದಲ್ಲಿ ೧೯೨೩ರ ನಂತರ ಅಧಿಕೃತವಾಗಿ…
ಕೊರಟಗೆರೆ: ಪಟ್ಟಣದ ಭಕ್ತರ ಅಡಿಗಡೆಯ ಧಾರ್ಮಿಕ ನಿಷ್ಠೆಯ ಫಲವಾಗಿ ಇಲ್ಲಿನ ಬಹುತೇಕ ದೇವಾಲಯಗಳು ಈಗಾಗಲೇ ಜೀರ್ಣೋದ್ಧಾರಗೊಂಡಿವೆ,ಆದರೆ ಪಟ್ಟಣದ ಎತ್ತರದ ಸ್ಥಳದಲ್ಲಿ ನೆಲೆಸಿರುವ ಗಂಗಾಧರೇಶ್ವರ ದೇವಾಲಯ ಮಾತ್ರ ಇನ್ನು ಪುನರ್‌ನಿರ್ಮಾಣದ ನಿರೀಕ್ಷೆಯಲ್ಲಿದೆ,ಈ ದೇವಾಲಯದ ಜೀರ್ಣೋದ್ಧಾರಕ್ಕೆ ತಕ್ಷಣ ಕ್ರಮವಹಿಸುವಂತೆ ಸಿದ್ದರಬೆಟ್ಟದ ಬಾಳೆಹೊನ್ನೂರು ಖಾಸ ಶಾಖಾಮಠದ ಪೀಠಾಧ್ಯಕ್ಷ ವೀರಭದ್ರ ಶಿವಾಚಾರ್ಯ ಸ್ವಾಮೀಜಿಗಳು ಮನವಿ ಮಾಡಿದರು. ಪಟ್ಟಣದಲ್ಲಿ ಕಳೆದ ಮೂರು ದಿನಗಳಿಂದ ವಿಜೃಂಭಣೆಯಿAದ ನಡೆಯುತ್ತಿದ್ದ ಮಾರಮ್ಮ ಮತ್ತು ಕೊಲ್ಲಾಪುರದಮ್ಮ ದೇವಿಯ ಪ್ರತಿಷ್ಠಾಪನ ಮಹೋತ್ಸವದ ಅಂತಿಮ ದಿನವಾದ ಗುರುವಾರ ನಡೆದ ಕುಂಭಕಳಶ ಪ್ರತಿಷ್ಠಾಪನ ಕಾರ್ಯಕ್ರಮದಲ್ಲಿ ದಿವ್ಯ ಸ್ಥಾನ ವಹಿಸಿ ಮಾತನಾಡಿದರು. “ಪುನಃ ನವೀಕರಣಗೊಂಡ ದೇವಾಲಯಗಳು ನಮ್ಮ ಸಂಸ್ಕೃ ತಿಯ ಸಂಜೀವಿನಿಯAತೆ ಭಕ್ತರಲ್ಲಿ ನಂಬಿಕೆಯನ್ನು ತುಂಬುತ್ತವೆ,” ಎಂದು ಸ್ವಾಮೀಜಿಗಳು ಅಭಿಪ್ರಾಯಪಟ್ಟರು. ಗಂಗಾಧರೇಶ್ವರ ದೇವಾಲಯವು ಎತ್ತಿನ ಬೆಟ್ಟದ ಮೇಲೆ ಇರುವ ಕಾರಣದಿಂದಾಗಿ ಭಕ್ತರ ನೆರೆದಾಣಿಕೆಗೆ ಸವಾಲಾಗಿದ್ದು, ಪುನರ್ ನಿರ್ಮಾಣದೊಂದಿಗೆ ಮೂಲ ಸೌಲಭ್ಯಗಳ ಸಹಿತ ಅಭಿವೃದ್ಧಿ ಅಗತ್ಯವಿದೆ ಎಂದು ತಿಳಿಸಿದರು. ದೇವಾಲಯದ ಜೀರ್ಣೋದ್ಧಾರ ಕಾರ್ಯಕ್ಕೆ ಮಾರಮ್ಮ ದೇವಾಲಯ ಸಮಿತಿಯೇ ಮುನ್ನಡೆವಹಿಸಬೇಕು. ಇಂತಹ ಪವಿತ್ರ…
ತುಮಕೂರು: ದೇಶದ ಆರ್ಥಿಕ ಕ್ಷೇತ್ರದಲ್ಲಿ ಖಾಸಗೀಕರಣಕ್ಕೆ ಹೆಚ್ಚು ಉತ್ತೇಜನ ನೀಡಲು ಪ್ರಾರಂಭವಾದಗಿನಿAದ ಸಾರ್ವಜನಿಕ ಉದ್ದಿಮೆಗಳು, ಸಾರ್ವಜನಿಕ ಆಸ್ತಿಗಳ ಮೇಲೆ ಪಕ್ಷಬೇದವಿಲ್ಲದೆ ಆಡಳಿತ ನಡೆಸಿದವರು ಹೊಸ ರೀತಿಯ ಮೊಳೆಗಳನ್ನು ಹೊಡೆಯಲು ಪ್ರಾರಂಭವಾಗಿದೆ. ೧೯೮೩ರಲ್ಲಿ ಗ್ಯಾಟ್ ಒಪ್ಪಂದ, ಡೆಂಕಲ್ ಒಪ್ಪಂದಕ್ಕೆ ಸಹಿ ಹಾಕಿದಾಗ ಆರಂಭವಾದ ಖಾಸಗೀಕರಣ, ಜಾಗತೀಕರಣ, ಉದಾರೀಕರಣದಂತಹ ಅತಂಕರಣಗಳಿಲ್ಲದೆ ಕರಣಗಳು ಪ್ರಾರಂಭವಾಗಿ ಉದ್ಯೋಗ, ಸಾಮಾಜಿಕ ಭದ್ರತೆಗಳನ್ನು ಕಿತ್ತುಕೊಳ್ಳುವ ಕೆಲಸಗಳು ನಡೆಯುತ್ತಿವೆ. ಈ ನೀತಿಗಳ ವಿರುದ್ದ ಕಾರ್ಮಿಕ ಸಂಘಗಳು ನಿರಂತರವಾಗಿ ಸಾಮಾಜಿಕ ಭದ್ರತೆಗಾಗಿ ಹೋರಾಟಗಳನ್ನು ನಡೆಸುತ್ತಿವೆ ಎಂದು ಖ್ಯಾತ ಚಲನಚಿತ್ರ ನಿರ್ದೇಶಕ, ರಂಗಕರ್ಮಿ, ನಟ ಬಿ. ಸುರೇಶ್ ಅಭಿಪ್ರಯಪಟ್ಟರು. ಅವರು ವಿಶ್ವಕಾರ್ಮಿಕರ ದಿನಾಚರಣೆಯ (ಮೇ ದಿನಾಚರಣೆ) ಅಂಗವಾಗಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ ಸಿಐಟಿಯು ತುಮಕೂರು ನಗರದ ಟೌನ್‌ಹಾಲ್ ವೃತ್ತದಲ್ಲಿ ಹಮ್ಮಿಕೊಂಡಿದ್ದ ಬಹಿರಂಗ ಸಭೆಯನ್ನು ಉದ್ಘಾಟಿಸಿ ಪ್ರಸ್ತುತ ಕಾರ್ಮಿಕರನ್ನು ನಿಶಸ್ತçಗೊಳಿಸುವುದರ ವಿರುದ್ಧ ವಿಶ್ವ ಕಾರ್ಮಿಕರ ದಿನಾಚರಣೆಯಲ್ಲಿ ಮಾತನಾಡಿದರು. ಮುಂದುವರುದು ದಿನಕ್ಕೆ ೧೬ ರಿಂದ ೧೮ ಗಂಟೆಗಳ ಕಾಲ ದುಡಿಸಿಕೊಳ್ಳುತ್ತಿದ್ದ ಬಂಡವಾಳಗಾರರ ವ್ಯವಸ್ಥೆಯ…
ನಗರದ ಎಸ್.ಎಸ್.ಪುರಂ ಮಾರುತಿ ವಿದ್ಯಾಕೇಂದ್ರದಲ್ಲಿ ಅಧ್ಯಯನ ಮಾಡು ತ್ತಿದ್ದ ಹರಿಪ್ರಿಯಾ ಡಿ. ಇವರು ಈ ಬಾರಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶೇ.೯೫.೩೬ ಫಲಿತಾಂಶ ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ. ಪತ್ರಕರ್ತ ಟಿ.ಇ.ಧ್ರವಕುಮಾರ್ ಮತ್ತು ಲಕ್ಷಿö್ಮ ದಂಪತಿಯ ಮಗಳಾಗಿದ್ದು, ಇವರು ಕನ್ನಡದಲ್ಲಿ ೧೧೯, ಇಂಗ್ಲೀಷ್ ನಲ್ಲಿ ೧೦೦, ಹಿಂದಿ ೯೯, ಗಣಿತ ೯೬, ವಿಜ್ಞಾನ ೯೪ ಹಾಗೂ ಸಮಾಜ ವಿಜ್ಞಾನದಲ್ಲಿ ೮೮ ಅಂಕ ಪಡೆಯುವ ಮೂಲಕ ೬೨೫ಕ್ಕೆ ೫೯೬ ಅಂಕ ಪಡೆದು ಉತ್ತಮ ಸಾಧನೆ ಮಾಡಿದ್ದಾರೆ.
ತುಮಕೂರು: ಅಖಿಲ ಭಾರತ ದಲಿತಾ ಕ್ರಿಯಾ ಸಮಿತಿ ಹಾಗೂ ಅಖಿಲ ಭಾರತ ಡಾ. ಅಂಬೇಡ್ಕರ್ ಪ್ರಚಾರ ಸಮಿತಿಯ ವತಿಯಿಂದ ಮೇ ೧ ಕಾರ್ಮಿಕರ ದಿನಾಚರಣೆಯನ್ನು ಜಿಲ್ಲಾ ಕಛೇರಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಕಾರ್ಮಿಕರ ಕಾರ್ಯಕ್ಷಮತೆಯನ್ನು ಸ್ಮರಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಎನ್.ಕೆ.ನಿಧಿಕುಮಾರ್ ಮಾತನಾಡುತ್ತಾ ಪ್ರಪಂಚದಾದ್ಯAತ ಕಾರ್ಮಿಕರು ವಿವಿಧ ರೀತಿಯ ಕೆಲಸ ಕಾರ್ಯಗಳನ್ನು ನಿರ್ವಹಣೆ ಮಾಡುತ್ತಾ, ತಮ್ಮದೇ ಆದ ಕೊಡುಗೆಗಳನ್ನು ಈ ಭೂಮಿಗೆ ನೀಡುತ್ತಿದ್ದಾರೆ, ಆದರೆ ಕಾರ್ಮಿಕ ವರ್ಗವನ್ನು ಈ ಜಗತ್ತು ನೋಡುವ ದೃಷ್ಠಿಯೇ ಬೇರೆ, ಸಂಬಳ-ವೇತನ ಪಡೆದು ಕೆಲಸ ನಿರ್ವಹಣೆ ಮಾಡುವ ಪ್ರತಿಯೊಬ್ಬರೂ ಸಹ ಕಾರ್ಮಿಕರೇ ಎಂಬುದು ನನ್ನ ಭಾವನೆ, ಏಕೆಂದರೆ ಕಾರ್ಮಿಕ ಮಾಡುವ ಕೆಲಸ ಕಾರ್ಯಗಳು ವಿಭಿನ್ನವಾಗಿರುತ್ತವೆ, ಅವರವರ ಕಾರ್ಯಕ್ಷಮತೆ, ಬುದ್ಧಿಕ್ಷಮತೆ, ಬಲದ ಆಧಾರದ ಮೇಲೆ ಕಾರ್ಮಿಕರು ತಮ್ಮ ಕೆಲಸಗಳನ್ನು ನಿರ್ವಹಿಸುತ್ತಾರೆ, ಕಾರ್ಮಿಕರಲ್ಲದ ಭೂಮಿಯನ್ನು ಊಹಿಸಿಕೊಳ್ಳಲು ಅಸಾಧ್ಯವೆಂಬುದು ನನ್ನ ಭಾವನೆ ಎಂದು ತಿಳಿಸಿದರು. ನಂತರ ಕಾರ್ಮಿಕ ಘಟಕದ ಅಧ್ಯಕ್ಷರಾದ ಟೈಲರ್ ಜಗದೀಶ್ ಮಾತನಾಡುತ್ತಾ ಕಾರ್ಮಿಕರಿಗೆ ತಮ್ಮ ಇಂತಿಷ್ಟ…
ತುಮಕೂರು: ನಗರದ ಜನಪರ-ಚಳವಳಿಗಳ ಕೇಂದ್ರ ಕಛೇರಿ’ಯಲ್ಲಿ ಕಾರ್ಮಿಕ ಚಳವಳಿಯ ಸಂಗಾತಿಗಳು ಮತ್ತು ರಂಗಾಭ್ಯಾಸಿಗಳು ಬಸವ-ಜಯಂತಿಯನ್ನು ಆಚರಿಸಿದರು. ಈ ಸಂದರ್ಭದಲ್ಲಿ ಸಿಐಟಿಯು, ಸಿಪಿಐ(ಎಂ) ಹಾಗೂ ಬಯಲ-ಕರ್ನಾಟಕದ ಸೃಜನಶೀಲ ಕಲಾವಿದರ ಒಕ್ಕೂಟವಾದ ಬಯಲು ಸೀಮೆ ಕಂಪನಿ-ತುಮಕೂರು, ಹಿರಿ-ಕಿರಿಯ ರಂಗಾ ಭ್ಯಾಸಿಗಳು, ಕಾರ್ಮಿಕ ಹಾಗೂ ಜನಪರ ಚಳವಳಿಗಳ ಸಂಗಾತಿಗಳು ಉಪಸ್ಥಿತರಿದ್ದರು. ಬಸವಣ್ಣನವರ ಡೆಮಾಕ್ರಟಿಕ್-ಸೊಸೈಟಿಯ ಆಶಯಗಳನ್ನು ಕುರಿತು ವಿಸ್ತಾರವಾಗಿ ಮಾತನಾಡಿದ ರಂಗ-ನಿರ್ದೇಶಕ ನಟರಾಜ್ ಹೊನ್ನವಳ್ಳಿ, ಶೋಷ ಣೆ, ತಾರತಮ್ಯ, ಅಸಮಾನತೆ ಮತ್ತು ವೃತ್ತಿ-ಆ ಧಾರಿತ ಜಾತಿಗಳ ಅಸ್ತಿತ್ವವನ್ನು ಬಲವಾಗಿ ವಿವೇಚಿಸಿ ಶ್ರಮಣ ಧಾರೆಗಳನ್ನು ಗುರ್ತಿಸಿ ನಿರೂಪಿಸ ಬಯ ಸಿದ್ದವರು. ಕುಲದ ಮೂಲ ನೆಲೆಗಳವರೆಗೂ ಪ್ರಭಾವಿಸುವಷ್ಟು ಪ್ರಭಾವಶಾಲಿಯಾಗಿದ್ದ ಉತ್ತರ-ಭಾರತೀಯ ವೈದಿಕ ಧರ್ಮಾಚರಣೆಗಳನ್ನು ಕನ್ನಡಿ ಗರು ನಿರಾಕರಿಸಬೇಕಾದ ನಿರ್ವಸಾಹತೀಕರಣ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದವರು. ಈಕ್ವಾಲಿಟಿ ಮತ್ತು ಡೆಮಾಕ್ರಸಿಯನ್ನು ಬಲವಾಗಿ ಪ್ರತಿಪಾದಿಸಿದ ಬಸವಣ್ಣನವರು ಇವನಾರವ-ಇವನಾರವ ಎಂದು ಮನುಷ್ಯಕುಲಂ-ತಾನೊAದೆ ವಲಂ ಎಂಬುದನ್ನು ಸ್ಪಷ್ಟ ನಿರ್ವಚಿಸಬಲ್ಲವರಾಗಿದ್ದರು. ಆ ನೆಲೆಯಿಂದಲೇ ಕಲ್ಯಾಣದ ಪರಿಕಲ್ಪನೆಯನ್ನು ಹರವಿದರು. ಸಿಐಟಿಯು-ತುಮಕೂರಿನ ಸುಬ್ರಹ್ಮಣ್ಯ ಮಾತ ನಾಡಿ, ನಮ್ಮ ಕಲ್ಯಾಣ-ಕರ್ನಾಟಕದ ಸಾಂಸ್ಕೃತಿಕ ನಾಯಕರಾದ ಬಸವಣ್ಣನವರನ್ನು…
ಮಧುಗಿರಿ: ಜಾತಿ ಗಣತಿಯ ನಮೂನೆಯ ಕಾಲಂ೬೧ ರಲ್ಲಿ ಮಾದಿಗ ಸಮುದಾಯದವರೆಂದು ನಮೂ ದಿಸುವಂತೆ ಮಾಜಿ.ಜಿ.ಪಂ ಸದಸ್ಯ ಹೆಚ್ ಡಿ ಕೃಷ್ಣಪ್ಪ ಕರೆ ನೀಡಿದರು. ಪಟ್ಟಣದ ಪ್ರವಾಸಿ ಮಂದಿರದ ಸಭಾಂಗಣದಲ್ಲಿ ಜಿಲ್ಲಾ ಮಾದಿಗ ಪದವೀಧರರ ವೇದಿಕೆ ಹಾಗೂ ಒಳ ಮೀಸಲಾತಿ ತಾಲೂಕು ಹೋರಾಟ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಿಶಿಷ್ಟ ಜಾತಿಯಲ್ಲಿ ೧೦೧ಜಾತಿಗಳ ಪೈಕಿ ಒಳಮಿಸಲಾತಿ ವರ್ಗಿಕರಣದ ಸಮೀಕ್ಷೆಗೆ ಬರುವಂತಹ ಅಧಿಕಾರಿಗಳ ಬಳಿ ನಮ್ಮ ಸಮು ದಾಯದವರು ಯಾವುದೇ ಕಾರಣಕ್ಕೂ ಆದಿ ಕರ್ನಾಟಕ, ಆದಿ ದ್ರಾವಿಡ ಇತ್ಯಾದಿ ಜಾತಿ ಸೂಚಕವಲ್ಲದ ಪದಗಳನ್ನು ಬರೆಸಬಾರದೆಂದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಗೋಪಾಲಯ್ಯ ಮಾತನಾಡಿ ಮಾದಿಗ ಸಂಬAಧಿತ ಜಾತಿಗಳು ಸರ್ಕಾರದ ಪ್ರತಿನಿಧಿಗಳು ಜಾತಿ ಸಮೀಕ್ಷೆಗೆ ಬರುತ್ತಿದ್ದು ತಪ್ಪದೆ ಆಯಾ ಗ್ರಾಮದಲ್ಲಿರುವ ವಿದ್ಯಾರ್ಥಿಗಳು ,ಯುವಕರು,ಸಂಘಟನೆಯ ಮುಖಂಡರುಗಳು ಗ್ರಾಮದ ಯಾವುದೇ ಕುಟುಂಬ ಈ ಜಾತಿ ಸಮೀಕ್ಷೆಯಿಂದ ಹೊರ ಗುಳಿಯದಂತೆ ಎಚ್ಚರ ವಹಿಸ ಬೇಕೆಂದರು. ಮಾಜಿ ತಾ.ಪಂ ಸದಸ್ಯ ಸೊಸೈಟಿ ರಾಮಣ್ಣ ಮಾತನಾಡಿ ಒಳ ಮೀಸಲಾತಿಯು…
ತುಮಕೂರು: ತುಮಕೂರು ನಗರ ಶಾಸಕ ಜಿ.ಬಿ.ಜೋತಿಗಣೇಶ್ ಅವರ ೫೦ನೇ ಹುಟ್ಟು ಹಬ್ಬವನ್ನು ಟೌನ್ ಹಾಲ್‌ನಲ್ಲಿರುವ ಶಾಸಕರ ಕಚೇರಿ ಮುಂಭಾಗದಲ್ಲಿ ಸಾರ್ವಜನಿಕರಿಗೆ ಆರೋಗ್ಯ ತಪಾಸಣೆಯ ಜೊತೆಗೆ ಹಲವು ಸವಲತ್ತು ಹಾಗು ಸಲಕರಣೆಗಳನ್ನು ವಿತರಿಸುವ ಮೂಲಕ ಜೋತಿ ಗಣೇಶ್ ಅಭಿಮಾನಿ ಬಳಗದವತಿಯಿಂದ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಜೋತಿಗಣೇಶ್ ಅಭಿಮಾನಿ ಬಳಗದ ಭಾರತದ ಸೈನಿಕರ ಕಲ್ಯಾಣ ನಿಧಿಗೆ ನೀಡಿದ ಒಂದು ಲಕ್ಷ ರೂಗಳ ಚೆಕ್ ವಿತರಿಸಿ ಹಾಗೂ ಶಾಸಕರಿಗೆ ಅಭಿನಂದಿಸಿ ಮಾತನಾಡಿದ ಕೇಂದ್ರ ಜಲಶಕ್ತಿ ಮತ್ತು ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ, ಶಾಸಕರಾಗಿರುವ ಜೋತಿಗಣೇಶ್ ಒರ್ವ ಅಪರೂಪದ ರಾಜಕಾರಣಿ. ಜನಸಾಮಾನ್ಯರ ಪರವಾಗಿ ಸದಾ ತುಡಿಯುವ ವ್ಯಕ್ತಿತ್ವ ಹೊಂದಿದ್ದಾರೆ.ಇವರ ತಂದೆ ಜಿ.ಎಸ್.ಬಸವರಾಜು ಅವರು ಐದು ಬಾರಿ ಸಂಸದರಾಗಿ ಜನಾನುರಾಗಿಯಾಗಿದ್ದಾರೆ.ಇವರು ಎರಡು ಬಾರಿ ವಿಧಾನಸಭಾ ಸದಸ್ಯರಾಗಿ ಜನಮನ್ನಣೆ ಗಳಿಸಿದ್ದಾರೆ.ನಿನ್ನೆ ದಿನ ನಾನು ಸಂಸತ್ತಿನಲ್ಲಿ ಜಗಜ್ಯೋತಿ ಬಸವೇಶ್ವರರ ಜಯಂತಿಯನ್ನು ಮೊಟ್ಟ ಮೊದಲ ಬಾರಿಗೆ ಆಚರಿಸುವ ಮೂಲಕ ತುಮಕೂರು ಜಿಲ್ಲೆಯ ಜನರ ಆಶಯವನ್ನು ಈಡೇರಿಸಿದ್ದೇನೆ.ಇದುವರೆಗೂ ಯಾರು ಸಹ ಬಸವ ಜಯಂತಿಯನ್ನು ಮಾಡಿರಲಿಲ್ಲ.ಹೊಸ ಸಂಸತ್…











