ಶಿರಾ: ಗುರು ಕಲಿಸಿದ ವಿದ್ಯೆ ಕಲಿತು, ಜೊತೆಗೆ ಸಮಾಜದಲ್ಲಿ ಎಲ್ಲರನ್ನೂ ಗೌರವಿಸುವಂತಹ ಸಂಸ್ಕಾರ ಬೆಳಸಿಕೊಂಡ ಪ್ರತಿಯೊಬ್ಬ ವಿದ್ಯಾರ್ಥಿ ಕೂಡ ಎಷ್ಟೇ ದಶಕಗಳು ಕಳೆದರೂ ಗುರು- ಶಿಷ್ಯರ ಬಾಂಧವ್ಯ ಸದಾ ನೆನಪಿನಲ್ಲಿಟ್ಟುಕೊಳ್ಳುತ್ತಾರೆ. ಇಂತಹ ಹಳೆಯ ವಿದ್ಯಾರ್ಥಿಗಳು ಮುಂದಿನ ಯುವ ಪೀಳಿಗೆಗೆ ಆದರ್ಶವಾಗಬೇಕು ಎಂದು ನಿವೃತ್ತ ಮುಖ್ಯ ಶಿಕ್ಷಕ ಬಿ. ಎಲ್. ಅಶ್ವತ್ ನಾರಾಯಣ ಹೇಳಿದರು. ಶಿರಾ ತಾಲೂಕಿನ ಕರೇಜವ ನಹಳ್ಳಿ ಗ್ರಾಮದ ತೋಟದ ಮನೆಯಲ್ಲಿ ಕಠಾವೀರನಹಳ್ಳಿ ಶ್ರೀರಂಗನಾಥ ವಿದ್ಯಾಸಂಸ್ಥೆಯ ೧೯೮೪- ೮೫ನೇ ಸಾಲಿನ ಎಸ್ ಎಸ್ ಎಲ್ ಸಿ ಹಳೆಯ ವಿದ್ಯಾ ರ್ಥಿ, ವಿದ್ಯಾರ್ಥಿನಿಯರು ಭಾನುವಾರ ಆಯೋಜಿಸಿದ್ದ ಸ್ನೇಹಕೂಟ ಸಮಾರಂಭ ಉದ್ಘಾಟಿಸಿ ಮಾತನಾಡಿದರು ೪೦ ವರ್ಷಗಳ ನಂತರ ನಾನು ಬೋಧನೆ ಮಾಡುತ್ತಿದ್ದ ಶಾಲೆಯಲ್ಲಿ ವಿದ್ಯೆ ಕಲಿತ ವಿದ್ಯಾರ್ಥಿಗಳು, ಇಂದು ಸ್ನೇಹ ಮಿಲನಗೊಂಡು ವೈಶಿಷ್ಟ್ಯ ಪೂರ್ಣ ಕ್ಷಣ ಒದಗಿಸಿರುವುದು ನಾನು ಕಲಿಸಿದ ವಿದ್ಯೆ ಸಾರ್ಥಕವಾಯಿತು ಎಂಬ ಮನೋಭಾವ ಮೂಡಿದೆ. ಇದೇ ರೀತಿ ತಮ್ಮ ಮಕ್ಕಳಿಗೆ, ಮೊಮ್ಮಕ್ಕಳಿಗೆ ಇಂತಹ ಸಂಸ್ಕಾರವನ್ನು ಕಲಿಸಿ ಪರಸ್ಪರ ಸ್ನೇಹ ಬಾಂಧವ್ಯವನ್ನು…
Author: News Desk Benkiyabale
ತುಮಕೂರು: ಮಂಗಳೂರು ಘಟನೆಗೆ ಸಂಬAಧಿಸಿದAತೆ ರಾಜ್ಯ ಸರಕಾರ ನಿಷ್ಕ್ರಿಯ ಆದಾಗ ಎನ್ ಐಎ ಮತ್ತು ಕೇಂದ್ರ ಸರಕಾರ ಮಧ್ಯೆ ಪ್ರವೇಶಿಸಲಿದೆ. ಅಂತಹ ಆರೋಪಿಗಳನ್ನು ರಕ್ಷಣೆ ಮಾಡುವುದನ್ನು ರಾಜ್ಯ ಸರಕಾರ ಬಿಡಬೇಕು. ಮನುಷ್ಯನ ಜೀವವನ್ನು ತೆಗೆಯುತ್ತೇವೆ ಎಂಬುವರ ಮೇಲೆ ಅನುಕಂಪ ತೋರಿಸಬಾರದು. ಪಹಲ್ಲಾಮ್ ಘಟನೆಗೆ ಸಂಬAಧಿಸಿದAತೆ ತೆಗೆದುಕೊಂಡ ಕಠಿಣ ಕ್ರಮವನ್ನು ಮಂಗಳೂರು ಘಟನೆಗೂ ತೆಗೆದುಕೊಳ್ಳಬೇಕು ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ. ತುಮಕೂರು ಜಿಲ್ಲೆಯಲ್ಲಿ ಮಾತನಾಡಿದ ಅವರು, ಮುಲಾಜಿಲ್ಲದೆ ಗೃಹ ಸಚಿವ ತಮ್ಮ ಅನುಭವವನ್ನು ಇದ್ರಲ್ಲಿ ತೋರಿಸಬೇಕು. ಇಲ್ಲದಿದ್ದರೆ ಯಾವ ರೀತಿ ಕ್ರಮ ತೆಗೆದುಕೊಳ್ಳಬೇಕು ಎಂಬುದನ್ನು ಗೊತ್ತಾಗದಿದ್ದಲ್ಲಿ ಕೇಂದ್ರ ಸರಕಾರ ಪತ್ರ ಬರೆಯಲಿ, ೧೦ ನಿಮಿಷದಲ್ಲಿ ಕ್ರಮ ಆಗಲಿದೆ ಎಂದರು. ಕೆಲ ಅಯೋಗ್ಯರು, ದೇಶಕ್ಕೆ ಮಾರಕವಾಗಿರ ಬಗ್ಗೆ ಮೃಧು ಧೋರಣೆ ಅನುಸರಿಸಿದರೆ ಬಹಳ ಕಷ್ಟವಾಗಲಿದೆ. ಆರೋಪಿಗಳು ಎಷ್ಟೆ ದೊಡ್ಡವರಾದ್ರೂ ಅವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದರು. ರಾಜ್ಯ ಸರಕಾರ ಮಾತನಾಡುವುದನ್ನು ಕಡಿಮೆ ಮಾಡಿ, ಆರೊಪಿಗಳನ್ನು ಸರಿಯಾದ ಕ್ರಮ…
ತುಮಕೂರು: ಕೊಳವೆಬಾವಿ ಕೊರೆದು ವರ್ಷಗಳೇ ಕಳೆದರೂ ಪಂಪು ಮೋಟಾರ್ ವಿತರಣೆ ಮಾಡದೆ ವಿಳಂಬ ಧೋರಣೆ ಅನುಸರಿಸಿರುವ ಅಧಿಕಾರಿಗಳ ಮತ್ತು ಗುತ್ತಿಗೆದಾರರ ವಿರುದ್ಧ ಶಾಸಕ ಬಿ ಸುರೇಶ್ ಗೌಡರು ತೀವ್ರ ಆಕ್ರೋಶಗೊಂಡರು. ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹೊನ್ನೊಡುಕೆ ಗ್ರಾಮದಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಗಂಗಾ ಕಲ್ಯಾಣ ಯೋಜನೆಯಡಿ ಫಲಾನುಭವಿಗಳಿಗೆ ಪಂಪು ಮೋಟಾರ್ ವಿತರಣಾ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ದಲಿತರು ಎಂದರೆ ಈ ಸರ್ಕಾರಕ್ಕೆ ತಾತ್ಸಾರ ಮನೋಭಾವ ಇದೆ. ದಲಿತರ ಹಾಗೂ ಹಿಂದುಳಿದ ವರ್ಗಗಳ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯರವರು ದಲಿತರಿಗೆ ಮೀಸಲಾಗಿರುವ ಎಲ್ಲ ನಿಗಮಗಳಲ್ಲೂ ಕೂಡ ಅವ್ಯಾಹತವಾಗಿ ಹಗರಣಗಳು ನಡೆದಿವೆ ಬೋವಿ ನಿಗಮ ವಾಲ್ಮೀಕಿ ನಿಗಮ ಅಂಬೇಡ್ಕರ್ ಅಭಿವೃದ್ಧಿ ನಿಗಮದಲ್ಲಿ ವ್ಯಾಪಕವಾದ ಭ್ರಷ್ಟಾಚಾರ ಇದೆ. ಮೋಸ ಮಾಡಲು ದಲಿತರೇ ಬೇಕೆ ದಲಿತೋದ್ಧಾರಕ ಎಂದು ಉದ್ಘಾರ ಮಾಡುವ ಮುಖ್ಯಮಂತ್ರಿಗಳು ಈ ಬಗ್ಗೆ ಗಮನ ಹರಿಸದೆ ಇರುವುದು ನೋಡಿದರೆ ಅವರಿಗೆ ದಲಿತರ ಉದ್ಧಾರ…
ಕೊರಟಗೆರೆ: ಮಡಿವಾಳ ಸಮುದಾಯ ಅತ್ಯಂತ ಹಿಂದುಳಿದ ಸಮುದಾಯವಾಗಿದ್ದು ಸಮಾಜದಲ್ಲಿ ಸಮುದಾಯವು ಮುನ್ನೆಲೆಗೆ ಬರಬೇಕಾದರೆ ನಮ್ಮ ಮಕ್ಕಳು ಕಡ್ಡಾಯವಾಗಿ ವಿದ್ಯಾವಂತಗರಾಗಲೇಬೇಕು ಅದಕ್ಕಾಗಿ ಮಡಿವಾಳ ಯುವ ವೇದಿಕೆಯಿಂದ ಎಲ್ಲಾ ರೀತಿಯ ಪ್ರೋತ್ಸಾಹವನ್ನು ನೀಡಲಾಗುವುದು ಎಂದು ವೇದಿಕೆಯ ಅಧ್ಯಕ್ಷ ಕಾಂತರಾಜು ತಿಳಿಸಿದರು. ಪಟ್ಟಣದ ಹೊರವಲಯದ ನವೀನ್‌ಕಂಫರ್ಟ್ ಸಭಾಂಗಣದಲ್ಲಿ ಮಡಿವಾಳ ಯುವ ವೇದಿಕೆ ಮತ್ತು ಮಡಿವಾಳ ಮಲ್ಲಿಗಮ್ಮ ಸೇವಾ ಟ್ರಸ್ಟ್ ವತಿಯಿಂದ ನಡೆದ ಮಡಿವಾಳ ಜನಾಂಗದ ಪ್ರತಿ ಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿ ಮಡಿವಾಳ ಜನಾ ಂಗವು ಹಿಂದುಳಿದ ಜನಾಂಗಗಳಲ್ಲಿ ಅತ್ಯಂತ ಹಿಂದೆ ಇರುವ ಸಮುದಾಯವಾಗಿದೆ. ಹಿಂದಿನಿAದಲೂ ಈ ಸಮುದಾಯವನ್ನು ಸಮಾಜದಲ್ಲಿ ಕೀಳು ಭಾವನೆಯಿಂದ ನೋಡುತ್ತಿದ್ದಾರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಮ್ಮ ಜನಾಂಗಕ್ಕೆ ಸಿಗಬೇಕಿದ್ದ ಪರಿಶಿಷ್ಠ ಜಾತಿಯ ಸ್ಥಾನ ಸಿಗಲಿಲ್ಲ ಆದರ ಹೋರಾಟ ಮುಂದುವರೆಯುತ್ತಿದೆ ಎಂದರು. ಮಡಿವಾಳ ಮಲ್ಲಿಗಮ್ಮ ಸೇವಾ ಟ್ರಸ್ಟ್ನ ಕಾರ್ಯ ದರ್ಶಿ ತೋಳಸಮ್ಮ ಮಾತನಾಡಿ ಈ ಸಮಾಜಕ್ಕೆ ಮಡಿವಾಳ ಜನಾಂಗ ಅನೇಕ ಕೊಡಿಗೆಗಳನ್ನು ನೀಡಿದೆ ಸಮಾಜದ ಹೆಣ್ಣು ಮಕ್ಕಳ ಶೈಕ್ಷಣಿಕ ಪ್ರಗತಿಗೆ…
ತುಮಕೂರು: ರಾಜ್ಯದಲ್ಲಿ ಪರಿಶಿಷ್ಟ ಜಾತಿಯಲ್ಲಿನ ಒಳಮೀಸಲಾತಿಗೆ ಸಂಬAಧಿಸಿದAತೆ ಎಂಪಾರಿಕಲ್ ಡಾಟಾ ಸಂಗ್ರಹಕ್ಕೆ ಸಮೀಕ್ಷೆ ಆರಂಭವಾಗುವ ಹಿನ್ನೆಲೆಯಲ್ಲಿ ತಾಲೂಕಿನಲ್ಲಿರುವ ಛಲವಾದಿ ಸಮುದಾಯದ ಜನರು ಸಮೀಕ್ಷೆಯಲ್ಲಿ ಹೇಗೆ ಪಾಲ್ಗೊಳ್ಳಬೇಕು ಎಂಬ ಮಾಹಿತಿ ನೀಡುವ ಸಲುವಾಗಿ ಜಿಲ್ಲಾ ದಲಿತ ಛಲವಾದಿ ಸಮುದಾಯ ಭವನದಲ್ಲಿ ಸಭೆ ಆಯೋಜಿಸಲಾಗಿತ್ತು. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಹಿರಿಯ ಛಲವಾದಿ ಮುಖಂಡರುಗಳು ಸಭೆಗೆ ಚಾಲನೆ ನೀಡಿ ಮಾತನಾಡಿ, ಕರ್ನಾಟಕ ರಾಜ್ಯ ಛಲವಾದಿ ಮಹಾಸಭಾದ ಜಿಲ್ಲಾಧ್ಯಕ್ಷ ಸಿ.ಭಾನುಪ್ರಕಾಶ್,ರಾಜ್ಯದಲ್ಲಿ ಎಕೆ, ಎಡಿ, ಎಎ ಉಪಜಾತಿಗಳ ಹೆಸರಿನಲ್ಲಿ ಉಂಟಾಗಿರುವ ಗೊಂದಲವನ್ನು ಬಗೆಹರಿಸಿಕೊಳ್ಳಲು ಇದು ಸುವರ್ಣ ಅವಕಾಶ. ಹಾಗಾಗಿ ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ ಎಲ್ಲರು ಈ ಸಮೀಕ್ಷೆಯಲ್ಲಿ ಪಾಲ್ಗೊಂಡು, ಉಪಜಾತಿಯ ಕಲಂನಲ್ಲಿ ಅವರ ಉಪಜಾತಿಯ ಹೆಸರನ್ನು ಸ್ಪಷ್ಟವಾಗಿ ನಮೂದಿಸಬೇಕು ಎಚ್ಚರಿಕೆ ನೀಡಿದರು. ಜಿಲ್ಲಾ ಛಲವಾದಿ ಮಹಾಸಭಾದ ತಾಲೂಕು ಮುಖಂಡ ಗಿರೀಶ್, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಗಂಗಾAಜನೇಯ, ಸಭೆಯಲ್ಲಿ ಛಲವಾದಿ ಮುಖಂಡರಾದ ಡಾ.ಪಿ.ಚಂದ್ರಪ್ಪ,ಶ್ರೀನಿವಾಸ್,ಹೊನ್ನುಡಿಕೆ ಗ್ರಾ.ಪಂ.ಸದಸ್ಯ ಗಿರೀಶ್, ಗಳಿಗೇನಹಳ್ಳಿ ಗ್ರಾ.ಪಂ.ಅಧ್ಯಕ್ಷ ಬಿ.ಮಂಗಳಮ್ಮ, ಮಲ್ಲಸಂದ್ರ…
ಪಾವಗಡ: ತಾಲ್ಲೂಕಿನ ಮುಗದಾಳಬೆಟ್ಟದ ಗೊಲ್ಲರಹಟ್ಟಿಗೆ ಶನಿವಾರ ಮಧ್ಯಾಹ್ನ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಭೇಟಿ ನೀಡಿ, ಹಟ್ಟಿಯ ನಿವಾಸಿಗಳ ಸಮಸ್ಯೆಗಳನ್ನು ಪರಿಶೀಲಿಸಿದರು. ಈ ವೇಳೆ ಮೂಲಭೂತ ಸೌಕರ್ಯಗಳ ಕೊರತೆಯ ಬಗ್ಗೆ ಆತಂಕ ವ್ಯಕ್ತಪಡಿಸಿ, ಸ್ಥಳದಲ್ಲೇ ಹಾಜರಿದ್ದ ಅಧಿಕಾರಿಗಳಿಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಖಡಕ್ ಸೂಚನೆ ನೀಡಿದರು. ಹೆಣ್ಮಕ್ಕಳು ಸೀರೆಯನ್ನು ಪರದೆಯಾಗಿ ಕಟ್ಟಿಕೊಂಡು ಸ್ನಾನ ಮಾಡುತ್ತಿರುವ ಸ್ಥಿತಿಯು ನಾಗರಿಕ ಸಮಾಜಕ್ಕೆ ತಲೆತಗ್ಗಿಸುವ ಸಂಗತಿಯೆAದು ಅಭಿಪ್ರಾಯಪಟ್ಟ ಅವರು, ವಿಷಯ ನ್ಯಾಯಾಲ ಯದಲ್ಲಿದ್ದರೂ, ಜೂನ್ ೧೬ರ ಬಳಿಕ ಮೂಲಭೂತ ಸೌಕರ್ಯ ಕಲ್ಪಿಸಲಾಗುವುದು ಎಂದರು. ಈವರೆಗೆ ತಾತ್ಕಾಲಿಕ ಪರಿಹಾರವಾಗಿ ಮೊಬೈಲ್ ಶೌಚಾಲಯಗಳನ್ನು ಹಟ್ಟಿಯಲ್ಲಿ ಸ್ಥಾಪಿಸಲು ಇ.ಒ. ಜಾನಕಿರಾಂ ಅವರಿಗೆ ಸೂಚನೆ ನೀಡಿದರು. ಇದೇ ಸಂದರ್ಭದಲ್ಲಿ, ನಿವೇಶನ ಹಕ್ಕುಪತ್ರಗಳನ್ನು ನೀಡುವ ಬಗ್ಗೆ ತಹಶೀಲ್ದಾರ್ ವರದರಾಜುಗೆ ಸೂಚಿಸಿದ ಡಾ. ನಾಗಲಕ್ಷ್ಮಿ, ಹಟ್ಟಿಯಲ್ಲಿನ ಕರಡಿಗಳ ಹಾವಳಿಯನ್ನು ಗಮನಿಸಿ, ಮಧ್ಯಭಾಗದಲ್ಲಿ ಡೂಮ್ ಲೈಟ್ ವ್ಯವಸ್ಥೆ ಕಲ್ಪಿಸುವ ಅಗತ್ಯವಿದೆ ಎಂದು ಹೇಳಿದರು. ವಿಶೇಷ ಅತಿಥಿಯಾಗಿ ಬಂದ ಅಧ್ಯಕ್ಷೆ ಯನ್ನು ಹಟ್ಟಿಯ…
ತುಮಕೂರು: ನಗರದ ಮಹಾಲಕ್ಷ್ಮಿ ಬಡಾವಣೆ ವಾಸಿ ಶಿವಣ್ಣ ಟೈರ್ಸ್ ಮಾಲಿಕರಾದ ಕಾರ್ತಿಕ್ ರವರ ಕಟ್ಟಡ ಕಾರ್ಮಿಕರ ಶೆಡ್ ನಲ್ಲಿ ಕಾಣಿಸಿಕೊಂಡ ೪೩ ಕೊಳಕುಮಂಡಲ (ರಸೆಲ್ಸ್ ವೈಪರ್) ಮರಿಗಳು ಹಾಗೂ ೪ ಅಡಿ ಉದ್ದದ ತಾಯಿ ಕೊಳಕುಮಂಡಲ ಹಾವು ಕಾಣಿಸಿಕೊಂಡಿದೆ. ಈ ಹಾವುಗಳು ನವೆಂಬರ್ ಡಿಸೆಂಬರ್ ನಲ್ಲಿ ಮಿಲನಗೊಂಡು ಪೂರ್ವ ಮುಂಗಾರು ಸಮಯದಲ್ಲಿ ಸಂತಾನೋತ್ಪತಿ ಮಾಡುತ್ತವೆ. ಕೊಳಕುಮಂಡಲ ಹಾವುಗಳು (ಔvoviviಠಿಚಿಡಿous) ಅಂದರೆ ತಾಯಿಯ ದೇಹದೊಳಗೆ ಮೊಟ್ಟೆಗಳು ಬೆಳೆದು ಹೊಟ್ಟೆ ಒಳಗಿನಿಂದಲೆ ಜೀವಂತ ಮರಿಗಳು ಹೊರಬಂದಿವೆ. ಈ ವಿಷಯ ತಿಳಿದ ವನ್ಯಜೀವಿ ಜಾಗೃತಿ ಹಾಗೂ ಉರಗ ಸಂರಕ್ಷಣಾ ಸಂಸ್ಥೆಯ (ವಾರ್ಕೊ) ಉರಗ ರಕ್ಷಕರಾದ ಚಂದನ್, ಮನು ಅಗ್ನಿವಂಶಿ ಮತ್ತು ಕಾರ್ತಿಕ್ ಸಿಂಗ್ ರವರು ಸುರಕ್ಷಿತವಾಗಿ ಹಾವಿನ ಮರಿಗಳನ್ನು ರಕ್ಷಸಿ ಸಮೀಪದ ದೇವರಾಯನ ದುರ್ಗಾ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ. ತುಮಕೂರು ನಗರ ಹಾಗೂ ಹೊರವಲಯಗಳಲ್ಲಿ ಈ ಪ್ರಕ್ರಿಯೆ ಪ್ರಸ್ತುತ ಪ್ರಾರಂಭವಾಗಿದ್ದು ಸಾರ್ವಜನಿಕರು ಹೆಚ್ಚು ಜಾಗೃತವಾಗಿರಬೇಕು, ಮನೆಯ ಸುತ್ತಮುತ್ತ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು. ಸಂಜೆ ಕತ್ತಲು ಸಮಯದಲ್ಲಿ ಟಾರ್ಚ್…
ಪಾವಗಡ: ರಾಷ್ಟ್ರೀಯ ಗೋರ್ ಸಿಕವಾಡಿ & ಗೋರ್ ಸೇನಾ ಸಂಘಟನೆ ಹಾಗೂ ಭೀಮಾಸತಿ ಗ್ರಾಮೀಣಾಭಿವೃದ್ಧಿ ಮತ್ತು ಯುವಕರ ಸಬಲೀಕರಣ ಸಂಸ್ಥೆ(ರಿ.) ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಎಲ್ಲಾ ಬಂಜಾರ ತಾಂಡಾಗಳಲ್ಲಿ ಪರಿಶಿಷ್ಟ ಜಾತಿಗಳ ಉಪವರ್ಗೀಕರಣ (ಒಳಮೀಸಲಾತಿ) ಸಮೀಕ್ಷೆಯ ಕುರಿತು ಜನಜಾಗೃತಿ ಹಾಗೂ ಸಮಾಲೋಚನ ಅಭಿಯಾನ ನಡೆಯಿತು. ಪ್ರತಿ ತಾಂಡದಲ್ಲಿ ಜಾತಿ ಸಮೀಕ್ಷೆಯ ಉದ್ದೇಶ, ಅಗತ್ಯ ಮಾಹಿತಿ, ತಾಂಡಾದ ಪ್ರತಿ ಮನೆ ಯೂ, ಕುಟುಂಬದ ಸದಸ್ಯನೂ ಅವರು ಎಲ್ಲೇ ಇದ್ದರೂ, ಈ ಒಂದು ಸಮೀಕ್ಷೆ ಯಿಂದ ಹೊರಗುಳಿಯಬಾರದು ಹಾಗೂ ಉಪಜಾತಿ ಕಾಲಂನಲ್ಲಿ ಕಡ್ಡಾಯವಾಗಿ ಲಂಬಾಣಿ ಎಂದು ಬರೆಸಲು ಮಾಹಿತಿ ನೀಡಲಾಯಿತು. ಪ್ರತಿ ತಾಂಡಾದ ಹಿರಿಯರು, ಯುವಕರು ಮತ್ತು ಮಹಿಳೆಯರು ತುಂಬಾ ಒಳ್ಳೆಯ ಸಂದೇಶ, ಕೆಲಸ ಮಾಡುತ್ತಿದ್ದೀರಿ ತಮಗೆ ಧನ್ಯವಾದಗಳು ತಿಳಿಸಿದರು. ಅವರಿಗೆಲ್ಲರಿಗೂ ಅಭಾರಿ ಯಾಗಿರುತ್ತೇವೆ ಎಂದರು. ತಾAಡಾಗಳ ನಾಯಕ್, ಡಾವೋ, ಕಾರಬಾರಿ ಮತ್ತು ಪ್ರತಿನಿಧಿಗಳು, ವಿದ್ಯಾವಂತ ಯುವಕ, ಯುವತಿಯರು ಈ ಸಮೀಕ್ಷೆಯನ್ನು ತಮ್ಮ ಸ್ವಂತ ಕೆಲಸವೆಂದು ತಿಳಿದು ತಮ್ಮ ಊರಿನ, ತಾಂಡಾದ ಸಮೀಕ್ಷೆಯನ್ನು…
ತುಮಕೂರು: ಮಧುಗಿರಿ ಪಟ್ಟಣದಲ್ಲಿ ದಿನಾಂಕ: ೧೨-೦೩-೨೦೨೧ ರಂದು ಬೆಳಗ್ಗೆ ಸುಮಾರು ೦೯:೧೫ ಗಂಟೆ ಸಮಯದಲ್ಲಿ ಕೂಲ್ ಹೇರ್ ಸ್ಟೈಲ್ ಕಟಿಂಗ್ ಶಾಪ್ ಎದುರು ಇದೇ ಮಧುಗಿರಿಯ ಗುರುಕಿರಣ್ ಬಿನ್ ಗಂಗಾಧರಪ್ಪ, ಮಧುಗೌಡ ಬಿನ್ ರಂಗಪ್ಪ, ಎಂ.ವಿ. ಧನಂಜಯಾ ಬಿನ್ ವೀರಣ್ಣ ಇವರುಗಳು ಕೂಲ್ ಹೇರ್ ಸ್ಟೈಲ್ ಅಂಗಡಿಯ ಮುಂಭಾಗದ ಸಿಮೆಂಟ್ ಕಟ್ಟೆಯ ಮೇಲೆ ಕುಳಿತಿದ್ದ ಮೃತ ಆರ್.ವೀರಭದ್ರ ಸ್ವಾಮಿಯನ್ನು ಕೊಲೆ ಮಾಡುವ ಉದ್ದೇಶದಿಂದ ಕೆಳಕ್ಕೆ ಎಳೆದುಕೊಂಡು ಆರೋಪಿ-೧ ಗುರುಕಿರಣ್ ಡ್ರಾಗರ್ ನಿಂದ, ೨ನೇ ಆರೋಪಿ ಮಧುಗೌಡ ಬಟನ್ ಚಾಕುವಿನಿಂದ, ೩ನೇ ಆರೋಪಿ ಸ್ಟೀಲ್ ರಾಡಿನಿಂದ ಮಾರಣಾಂತಿಕ ಹಲ್ಲೆ ಮಾಡಿದ್ದು, ಚಿಕಿತ್ಸೆ ಫಲಕಾರಿಯಾಗದೇ ಅದೇ ದಿನ ಆರ್.ವಿ ಸ್ವಾಮಿ ತುಮಕೂರಿನ ಸಿದ್ದಗಂಗಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಸದರಿ ೩ ಜನ ಆರೋಪಿತರಿಗೆ ಹಾಗೂ ಕೊಲೆಗೆ ಕುಮ್ಮಕ್ಕು ನೀಡಿದ ಚಂದನ್ ಕುಮಾರ್ ಬಿನ್ ರಾಮಪ್ಪ ಇವರುಗಳು ಸಂಚು ರೂಪಿಸಿ ಕೊಲೆ ಮಾಡಿದ್ದು ತನಿಖೆಯಿಂದ ದೃಢಪಟ್ಟ ಮೇರೆಗೆ ಅಂದಿನ ತನಿಖಾಧಿಕಾರಿಯಾದ ಎಂ.ಎಸ್ ಸರ್ದಾರ್ ರವರು…
ಸಿರಾ: ದಿ. ೧೪-೦೪-೨೦೨೫ ರಂದು ರಾತ್ರಿ ೦೭-೧೫ ಗಂಟೆಗೆ ಪಿರ್ಯಾದಿ ಶ್ರೀಮತಿ ಪುಟ್ಟರಂಗಮ್ಮ ಕೊಂ ಲೇಟ್ ಮರಡಿರಂಗಯ್ಯ, ರವರು ಠಾಣೆಗೆ ಹಾಜರಾಗಿ ದಿನಾಂಕ:೧೪-೦೪-೨೦೨೫ ರಂದು ಮಧ್ಯಾಹ್ನ ೦೧-೩೦ ಗಂಟೆ ಸಮಯದಲ್ಲಿ ಮರಡಿ ರಂಗನಾಥ ಸ್ವಾಮಿ ದೇವಸ್ಥಾನದ ಜಾತ್ರ ರ ಥೋತ್ಸವದಲ್ಲಿದ್ದಾಗ ಯಾರೋ ಒಬ್ಬ ಅಪರಿಚಿತ ವ್ಯಕ್ತಿ ಪಿರ್ಯಾದಿಯ ಕೊರಳಿದ್ದ ಸುಮಾರು ೩೬ ಗ್ರಾಂ ತೂಕದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಹೋಗಿರುತ್ತಾನೆ. ಕಳ್ಳನನ್ನು ಪತ್ತೆ ಮಾಡಿ ಕಿತ್ತುಕೊಂಡು ಹೋದ ಸರವನ್ನು ಪತ್ತೆ ಮಾಡಿಕೊಡ ಬೇಕೆಂದು ನೀಡಿದ ದೂರಿನ ಮೇರೆಗೆ ಸಿರಾ ಠಾಣಾ ಮೊ ನಂ ೧೭೭/೨೦೨೫ ಕಲಂ ೩೦೯(೪) ಬಿ.ಎನ್.ಎಸ್ ರೀತ್ಯಾ ಪ್ರಕರಣ ದಾಖಲಿಸಿರುತ್ತೆ. ಮಾನ್ಯ ತುಮಕೂರು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಅಶೋಕ್ ಕೆ.ವಿ ರವರ ಮಾರ್ಗದರ್ಶನದಲ್ಲಿ ತುಮಕೂರು ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರವರುಗಳಾದ ಗೋಪಾಲ್ ಸಿ ಹಾಗೂ ಬಿ.ಎಸ್. ಅಬ್ದುಲ್ ಖಾದರ್ ರವರ ನೇತೃತ್ವದಲ್ಲಿದಲ್ಲಿ, ಶಿರಾ ಉಪ ವಿಭಾಗದ ಡಿ.ಎಸ್.ಪಿ ಯವರಾದ ಬಿ.ಕೆ ಶೇಖರ್ ರವರ ಮಾರ್ಗಸೂಚನೆ ಮೇರೆಗೆ ಶಿರಾ ಪೊಲೀಸ್…










