ತುಮಕೂರಿನಿಂದ 765 ವಲಸೆ ಕಾರ್ಮಿಕರಿಗೆ ಬಸ್ಸಿನಲ್ಲಿ ಪ್ರಯಾಣ ವ್ಯವಸ್ಥೆ

ತುಮಕೂರು:

      ಲಾಕ್‍ಡೌನ್ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲೇ ಉಳಿದುಕೊಂಡಿದ್ದ ರಾಜ್ಯದ ವಿವಿಧ ಜಿಲ್ಲೆಗಳ 765 ವಲಸೆ ಕಾರ್ಮಿಕರು ತಮ್ಮ ಊರಿಗೆ ಪ್ರಯಾಣ ಬೆಳೆಸಲು ಒಟ್ಟು 24 ಬಸ್‍ಗಳ ವ್ಯವಸ್ಥೆ ಮಾಡಲಾಗಿತ್ತು ಎಂದು ಕ.ರಾ.ರ.ಸಾ.ನಿ.ದ ವಿಭಾಗೀಯ ನಿಯಂತ್ರಣಾಧಿಕಾರಿ ಗಜೇಂದ್ರ ಕುಮಾರ್ ತಿಳಿಸಿದ್ದಾರೆ.

      ತುಮಕೂರು ನಗರದ ಬಸ್ ನಿಲ್ದಾಣದಿಂದ ಮುದ್ದೇಬಿಹಾಳ್, ರಾಯಚೂರು, ಶಿವಮೊಗ್ಗ, ಹಾವೇರಿ, ಕಲ್ಬುರ್ಗಿ, ಬಾಗಲಕೋಟೆ, ಹುಬ್ಬಳ್ಳಿ, ಬೆಂಗಳೂರು, ಯಾದಗಿರಿ, ರಾಯಚೂರು-ಬಳ್ಳಾರಿ, ಹಾಸನ-ಶಿವಮೊಗ್ಗ, ಯಾದಗಿರಿ-ಕಲ್ಬುರ್ಗಿ ಜಿಲ್ಲೆಗಳಿಗೆ ಒಟ್ಟು 13 ಬಸ್‍ಗಳಲ್ಲಿ 438 ಕಾರ್ಮಿಕರು ಪ್ರಯಾಣ ಮಾಡಿದರು.

      ಗುಬ್ಬಿ ಬಸ್ ನಿಲ್ದಾಣದಿಂದ ಕಲ್ಬುರ್ಗಿ ಜಿಲ್ಲೆಗೆ 30; ಕುಣಿಗಲ್‍ನಿಂದ ಕರಟಗಿ ಹಾಗೂ ಬಾಗಲಕೋಟೆ-ವಿಜಾಪುರ ಜಿಲ್ಲೆಗಳಿಗೆ ಒಟ್ಟು 73; ಮಧುಗಿರಿಯಿಂದ ತುಮಕೂರಿಗೆ 22; ಚಿಕ್ಕನಾಯಕನಹಳ್ಳಿಯಿಂದ ಬೆಂಗಳೂರು ಹಾಗೂ ವಿಜಾಪುರಕ್ಕೆ 91; ತುರುವೇಕೆರೆ ಬಸ್‍ನಿಲ್ದಾಣದಿಂದ ಬೆಂಗಳೂರು, ರಾಯಚೂರು ಹಾಗೂ ವಿಜಾಪುರಕ್ಕೆ 111 ಪ್ರಯಾಣಿಕರು ತಮ್ಮ ಊರಿಗೆ ಸೇರಲು ಒಟ್ಟು 11 ಬಸ್‍ಗಳ ವ್ಯವಸ್ಥೆ ಮಾಡಲಾಗಿತ್ತು ಎಂದು ಅವರು ತಿಳಿಸಿದ್ದಾರೆ.

(Visited 11 times, 1 visits today)

Related posts