ಕಾಂಗ್ರೆಸ್ ಸೋಲಿಗೆ ಮುಖ್ಯಮಂತ್ರಿ ಆಡಳಿತ ಕಾರಣ: ಆರ್ ರಾಜೇಂದ್ರ

      ಕಾಂಗ್ರೆಸ್ ಸೋಲಿಗೆ ಮುಖ್ಯಮಂತ್ರಿ ಆಡಳಿತ ಕಾರಣ ಎಂದು ರಾಜ್ಯ ಯುವ ಕಾಂಗ್ರೆಸ್ ಉಪಾಧ್ಯಕ್ಷ ಆರ್.ರಾಜೇಂದ್ರ,  ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ವಿರುದ್ದ ಹರಿಹಾಯ್ದರು.

     ಬಿಜೆಪಿಗೆ ಮೊದಲನೆಯದಾಗಿ ಅಭಿನಂದನೆಯನ್ನು ಸಲ್ಲಿಸುತ್ತಾ ಮಾತು ಆರಂಬಿಸಿದ ರಾಜ್ಯ ಯುವ ಕಾಂಗ್ರೆಸ್ ಉಪಾಧ್ಯಕ್ಷ ಆರ್.ರಾಜೇಂದ್ರ, ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಕೇವಲ ಒಂದು ಸ್ಥಾನಕ್ಕಿಳಿದಿದೆ ಹಾಗಾಗಿ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಅನಿವಾರ್ಯತೆಯಿದೆ ಎಂದರು.  ಸರ್ಕಾರದ ಆಡಳಿತದಲ್ಲಿರುವ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿರವರು  ಸರಿಯಾಗಿ ಅನುದಾನವನ್ನು ಬಿಡುಗಡೆ ಮಾಡುತ್ತಿಲ್ಲ ಹಾಗಾಗಿ ಕೆಲಸ ಕಾರ್ಯಗಳು ನಡೆಯುತ್ತಿಲ್ಲ.

        ಮುಖ್ಯಮಂತ್ರಿಗಳು ಎಲ್ಲಿ ಹೆಚ್ಚು ಕಾಲ ಕಳೆಯುತ್ತಿದ್ದರೆಂದರೆ ತಾಜ್ ವೆಸ್ಟ್‌  ಎಂಡ್ ಹೋಟೆಲ್ನಲ್ಲಿ  ಕಾಲಕಳೆಯುತ್ತಿದ್ದಾರೆ. ದೇವೇಗೌಡರು ಸೋಲು  ಅನುಭವಿಸಲು ಮೂಲ ಕಾರಣ ಒಬ್ಬ ವ್ಯಕ್ತಿ. ಕೆಎನ್ ರಾಜಣ್ಣ ಮತ್ತು ಮುದ್ದಹನುಮೇಗೌಡರ ವಿರುದ್ಧ ಹಣದ ವಿಚಾರವಾಗಿ ಆಪಾದಿಸಿದ ಹಿನ್ನೆಲೆಯಲ್ಲಿ ಸೋಲನ್ನು ಅನುಭವಿಸಬೇಕಾಯಿತು ದೇವೇಗೌಡರು ಸೋಲಿಗೆ  ಬಹು ಮುಖ್ಯ ಕಾರಣ ಈ ಜಿಲ್ಲೆಯ ಉಸ್ತುವಾರಿ  ತೆಗೆದುಕೊಂಡಂತಹವರು. ದೇವೇಗೌಡರು  ಬೆಂಗಳೂರಿಂದ ಬರುವಾಗ ಮತ್ತು  ತುಮಕೂರಿನಿಂದ ಬೆಂಗಳೂರಿಗೆ ಹೋಗುವಾಗ ಬಿ ಹೆಚ್ಚ್ ರಸ್ತೆಯಲ್ಲಿ ಸಂಚರಿಸುತ್ತಿದ್ದರೂ ಸಹ ದೇವೇಗೌಡರು ಕೆ ಎನ್ ರಾಜಣ್ಣ ಅವರ ಮನೆಗೆ ಬರಲಿಲ್ಲ ಅವರು ಹಿಂದುಳಿದ ವರ್ಗದ ನಾಯಕ ಎನ್ನುವ ಕಾರಣಕ್ಕಾಗಿ ಅವರ ಮನೆಗೆ ಹೋಗಲಿಲ್ಲ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ ಅಂತಹ ಪ್ರಯತ್ನವನ್ನೂ ಮಾಡಲಿಲ್ಲ ಜೆಡಿಎಸ್ ಪಕ್ಷದವರ ಜೊತೆಗೆ ಹೋದರೆ ನಾವು ಶೂನ್ಯ ಸ್ಥಾನವನ್ನು ತಲುಪುತ್ತೇವೆ ಇದರಲ್ಲಿ ಸಂದೇಹವಿಲ್ಲ ಎಂದರು.

      ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕ ಡಿಸಿ ಗೌರಿ ಶಂಕರ್ ತಮ್ಮ ಪಕ್ಷದ ವರಿಷ್ಠ ಹೆಚ್ಚ್ ಡಿ ದೇವೇಗೌಡರಿಗೆ ಹೆಚ್ಚು ಮತ ಹಾಕಿಸಲಾಗಿಲ್ಲ. ಬಿಜೆಪಿಗೆ ಎಂಟುಸಾವಿರ ಲೀಡ್ ಬಂದಿದೆ ಹಾಗಾಗಿ ಹತಾಶ  ಮನೋಭಾವದಿಂದ ಮಾತನಾಡುತ್ತಿದ್ದಾರೆ. ಅವರಿಗೆ ಮಧುಗಿರಿಯಲ್ಲಿ ಅಂದು ಗೆಲುವು ಸಿಕ್ಕಿದ್ದು ವಿಷಯವಲ್ಲ ಇನ್ನೂರೈವತ್ತು ಮತಗಳ ಅಂತರದಿಂದ ಗೆದ್ದಿದ್ದು ಅದು ಬಹುಮತಗಳಿಂದ ಅಲ್ಲ. ಗೆದ್ದ ನಂತರ ವಿಧಾನಸೌಧದ ಮೆಟ್ಟಿಲುಗಳು ಎಷ್ಟಿವೆ ಎಂದು ಎಣಿಕೆ ಮಾಡುವುದಕ್ಕೂ ಮುನ್ನವೇ ರಾಜೀನಾಮೆ ಕೊಟ್ಟರು. ಇದೀಗ ಬೇರೆಯವರ ಗಂಡಸುತನದ ಬಗ್ಗೆ ಮಾತನಾಡುವ  ವ್ಯಕ್ತಿ ಸದಾಶಿವನಗರದಲ್ಲಿ  ತನ್ನ ಸ್ವಂತ ಕಾರಿನಲ್ಲಿ ತಾನೇ ಡ್ರೈವಿಂಗ್  ಮಾಡಿಕೊಂಡು ಬಿಜೆಪಿಯವರ ಬಳಿ ಹೋಗಿ ಹಣ ಪಡೆದುಕೊಂಡು ಬಂದಿದ್ದಾರೆ. ಅದೇ ಕಾರಣದಿಂದ ಈಗ ಬಿಜೆಪಿ ಬಗ್ಗೆ ಮಾತನಾಡುತ್ತಿರುವುದು.  ಇನ್ನು ಗೋಲಿ  ಆಡುತ್ತಿರುವ ಹುಡುಗ ಗೌರಿ ಶಂಕರ್ ಹೀಗೆ ಮಾತನಾಡುವುದು ಸರಿಯಲ್ಲ. ನಾಲಿಗೆ  ಹಿಡಿತದಲ್ಲಿಟ್ಟುಕೊಂಡು ಮಾತನಾಡಲಿ.  ಶಾಸಕರಾಗಿ ಅಧಿಕಾರದಲ್ಲಿದ್ದಾಗಲೇ ಎಂಟು ಸಾವಿರಗಳ ಮತಗಳು ಬಿಜೆಪಿಗೆ ಲೀಡ್ ಆಗುತ್ತಿದೆ ಎಂದರೆ ಯಾವ ರೀತಿ ಇವರ ಆಡಳಿತವಿದೆ ಎಂದು ಯೋಚಿಸಬೇಕಾಗುತ್ತದೆ. ಸದಾ ಎಲ್ಲೆಲ್ಲೂ ಹಣ ವಸೂಲಿ ಮಾಡುವುದನ್ನೇ ಪ್ರವೃತ್ತಿ ಮಾಡಿಕೊಂಡಿರುವ ಇವರು ಹಣಕ್ಕಾಗಿ ಹಾಹಾಕಾರ ಪಡುತ್ತಿದ್ದಾರೆ ಎಂದರು.  

       ಜಿಲ್ಲಾಧ್ಯಕ್ಷರಾಗಿದ್ದ  ಕೆಂಚಮಾರಯ್ಯ ನವರು ಕಳೆದ ಚುನಾವಣೆಯಲ್ಲಿ  ಹಾಲಿ ಶಾಸಕ ವೀರಭದ್ರಯ್ಯ ಅವರಿಂದ ಹಣ ಪಡೆದು ನೂರು ನೂರಾ ನಲವತ್ತು ಜನರ ಪಟ್ಟಿಯನ್ನು ಕೊಟ್ಟು ಅವರಿಗೆ ಹಣವನ್ನು ಕೊಡಿಸಿದ್ದಾರೆ. ನಾನು ಸಹ ಜೆಡಿಎಸ್ ಗೆ  ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ. ಜಿಲ್ಲಾಧ್ಯಕ್ಷ ಹುದ್ದೆಯಲ್ಲಿ ಇದ್ದುಕೊಂಡು ಪಕ್ಷದ್ರೋಹ ಚಟುವಟಿಕೆ ಮಾಡಿರುವಂತಹ ಕೆಂಚಮಾರಯ್ಯ ನವರು ಈಗ ಪಕ್ಷ ಮತ್ತು ಪಕ್ಷದ ನಾಯಕರ ವಿರುದ್ಧವೇ ಮಾತನಾಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಇವರಿಗೆ ನೈತಿಕತೆ ಇದೆಯೇ ಎಂದು ಹರಿಹಾಯ್ದರು.

(Visited 930 times, 1 visits today)

Related posts