ಪಾವಗಡ :

      ಮಹರ್ಷಿ ವಾಲ್ಮೀಕಿ ಒಂದು ಸಮಾಜಕ್ಕೆ ಸಿಮಿತವಾಗದೆ ಸರ್ವಜನಾಂಗಗಳು ಪೂಜಿಸುವ ವ್ಯಕ್ತಿ ಮಹರ್ಷಿ ವಾಲ್ಮೀಕಿ ಎಂದು ಶಿಡ್ಲಕೋಣ ವಾಲ್ಮೀಕಿ ಸಂಸ್ಥಾನದ ಸಂಜಯ್ ಕುಮಾರ್ ಸ್ವಾಮಿಜಿ ತಿಳಿಸಿದರು.

       ಪಾವಗಡ ತಾಲ್ಲೂಕು ನಾಗಲಮಡಿಕೆ ಗ್ರಾಮದಲ್ಲಿ ಶುಕ್ರವಾರ ಮಹರ್ಷಿ ವಾಲ್ಮೀಕಿ ವಿಗ್ರಹ ಪ್ರತಿಷ್ಠಾಪನೆ ನೆರವೇರಿಸಿ ಮಾತನಾಡಿದ ಅವರು, ವಿಶ್ವದಲ್ಲೇ ಮಹರ್ಷಿ ವಾಲ್ಮೀಕಿ ರಾಮಾಯಣ ಅತ್ಯುತ್ತಮ ಹಿಂದೂ ಧರ್ಮದ ಗ್ರಂಥವಾಗಿದೆ. ಪೂಜನೀಯ ಗ್ರಂಥವಾಗಿದೆ ಎಲ್ಲರ ಸಮಸ್ಯೆಗಳಿಗೆ ಎಲ್ಲಾ ಕಾಲಕ್ಕೂ ಪರಿಹರಿಸಬಲ್ಲ ಶಕ್ತಿ ಈ ಗ್ರಂಥಕ್ಕೆ ಇದೆ ಎಂಬುದು ಎಲ್ಲರೂ ಕಂಡುಕೊಂಡಿರುವ ಸತ್ಯವಾಗಿದೆ ಎಂದರು.

     ಒಂದೇ ಜಾತಿಗೆ ವಾಲ್ಮೀಕಿ ಸೀಮಿತವಾಗಿದೆ ಸರ್ವಜನಾಂಗಳ ಆರಾಧಕನಾಗಿರುವುದು ನಾಯಕ ಸಮಾಜಕ್ಕೆ ಹೆಮ್ಮೆಯ ಸಂಗತಿಯಾಗಿದೆ. ರಾವi ರಾಜ್ಯದ ಪರಿಕಲ್ಪನೆಯನ್ನು ರಾಮಾಯಣದಲ್ಲಿ ಮಹರ್ಷಿ ಉಲ್ಲೇಖಿಸಿದ ಕಾರಣದಿಂದ ಮಹಾತ್ಮ ಗಾಂಧೀಜಿಯವರು ಭಾರತ ದೇಶಕ್ಕೆ ರಾವiರಾಜ್ಯದ ಪರಿಕಲ್ಪನೆಗೆ ಒತ್ತು ನೀಡಿದರು ಎಂದು ತಿಳಿಸಿದರು.

      ಲೋಕೇಶ್ ಪಾಳೇಗಾರ್ ಮಾತನಾಡಿ, ದೇಶದಲ್ಲಿ ಕೇಲವೆ ವರ್ಷಗಳಲ್ಲಿ ಪ್ರತಿ ಹಳ್ಳಿಯಲ್ಲೂ ನಾವು ಮಹರ್ಷಿ ವಾಲ್ಮೀಕಿ ವಿಗ್ರಹವನ್ನು ಕಾಣುವಾ ಸುದಿನಗಳು ಸನ್ನಿಹಿತವಾಗಿದ್ದು ಸಮುದಾಯದ ಜನತೆ ಶೈಕ್ಷಣಿಕ, ರಾಜಕೀಯ ಮತ್ತು ಆರ್ಥಿಕವಾಗಿ ಸಫಲರಾಗಬೇಕೆಂದು ತಿಳಿಸಿದರು.

(Visited 14 times, 1 visits today)