ತುಮಕೂರು: ಶಿಕ್ಷಣ ಮನುಷ್ಯನನ್ನು ಕತ್ತಲೆಯಿಂದ ಬೆಳಕಿನೆಡೆಗೆ ಕೊಂಡೊಯುವ ಪ್ರಮುಖಆಸ್ತç. ಹಾಗಾಗಿ ಅಲ್ಪಸಂಖ್ಯಾತರ ಮಕ್ಕಳು ಶಿಕ್ಷಣವೆಂಬ ಬೆಳಕನ್ನು ತನ್ನದಾಗಿಸಿಕೊಳ್ಳಬೇಕೆಂದು ಕಾಂಗ್ರೆಸ್ ಮುಖಂಡ ಹಾಗೂ ಸಲಾಮ್‌ಏಜುಕೇಷನ್‌ಅಂಡ್‌ಚಾರಿಟಬಲ್ ಟ್ರಸ್ಟ್ನ ಕಾರ್ಯದರ್ಶಿ ಇಕ್ಬಾಲ್‌ಅಹಮದ್ ತಿಳಿಸಿದ್ದಾರೆ.
ನಗರದಇಸ್ರಾ ಶಾದಿಮಹಲ್‌ನಲ್ಲಿ ಅಕ್ಸಾಏಜುಕೇಷನ್ ಸೊಸೈಟಿ ಮತ್ತು ಸಲಾಮ್ ಎಜುಕೇಷನ್ ಅಂಡ್‌ಚಾರಿಟಬಲ್ ಟ್ರಸ್ಟ್ (ರಿ), ತುಮಕೂರು ವತಿಯಿಂದ,ಆರ್.ವೈ.ಟಿ. ಹಾಗೂ ರೆಹಮಾನಿ-೩೦ ಸಂಸ್ಥೆಗಳ ಸಹಯೋಗದಲ್ಲಿ ಹೈಸ್ಕೂಲ್ ಮತ್ತುಕಾಲೇಜು ಮಕ್ಕಳಿಗಾಗಿ ಹಮ್ಮಿಕೊಂಡಿದ್ದ ಕೇರಿಯರ್‌ಗೈಡ್‌ಲೈನ್ಸ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕಾಲ ಬದಲಾದಂತೆ ಶಿಕ್ಷಣಕ್ಕೆ ಎಲ್ಲಿಲ್ಲದ ಮಹತ್ವ ಬಂದಿದೆ.ಹಾಗಾಗಿ ಪೋಷಕರುತಮ್ಮ ಮಕ್ಕಳನ್ನು ಶಿಕ್ಷಣವಂತರನ್ನಾಗಿಸಲು ಪ್ರಯತ್ನಿಸಬೇಕಿದೆ. ಅಲ್ಪಸಂಖ್ಯಾತರ ಮಕ್ಕಳ ಶಿಕ್ಷಣಕ್ಕಾಗಿ ಹಲವಾರು ಸಂಘ ಸಂಸ್ಥೆಗಳು ಹಗರಲಿರುಳು ದುಡಿಯುತ್ತಿದ್ದು, ವಿದ್ಯಾರ್ಥಿಗಳು ಮತ್ತು ಪೋಷಕರುಇದರ ಲಾಭವನ್ನು ಪಡೆದು ಕೊಳ್ಳಬೇಕೆಂದರು.
ನ್ಯಾ.ರಾಜೇAದ್ರ ಸಾಚಾರ ವರದಿ ಸೇರಿದಂತೆದೇಶದಅರ್ಥಿಕ, ಸಾಮಾಜಿಕ, ಶೈಕ್ಷಣಿಕ ಸ್ಥಿತಿ, ಗತಿಗಳನ್ನು ಅಧ್ಯಯನ ನಡೆಸಿದ ಸಂಸ್ಥೆಗಳ ವರದಿಗಳಲ್ಲಿ ಶಿಕ್ಷಣದಲ್ಲಿ ಅಲ್ಪಸಂಖ್ಯಾತರು, ಅದರಲ್ಲಿಯೂ ಮುಸ್ಲಿಂರು ಶೈಕ್ಷಣಿಕವಾಗಿ ಬಹಳ ಹಿಂದುಳಿದ್ದಾರೆ. ಹೈಸ್ಕೂಲ್ ನಂತರದಲ್ಲಿಅವರ ಸಂಖ್ಯೆಇನ್ನೂಕಡಿಮೆ.ಹಾಗಾಗಿ ಅಕ್ಸಾ, ಸಲಾಮ್ ಸೇರಿದಂತೆ ಹಲವಾರು ಸಂಸ್ಥೆಗಳು ಸಮುದಾಯದ ಶೈಕ್ಷಣಿಕ ಮಟ್ಟವನ್ನು ಉತ್ತಮ ಪಡಿಸಲು ನಿರಂತರವಾಗಿ ಶ್ರಮಿಸುತ್ತಿವೆ. ತಂದೆ ತಾಯಿಗಳು ಲಕ್ಷಾಂತರ ರೂ ಖರ್ಚು ಮಾಡಿ, ಅತಿ ಚಿಕ್ಕ ವಯಸ್ಸಿನಲ್ಲಿ ಮದುವೆ ಮಾಡುವ ಬದಲುಅವರಿಗೆ ಒಳ್ಳೆಯ ಉನ್ನತ ಶಿಕ್ಷಣ ದೊರೆಯುವಂತೆ ಮಾಡಿದರೆ, ನಿಮ್ಮ ಮಕ್ಕಳು ಸಹ ಐಎಎಸ್, ಐಪಿಎಸ್,ಲಾಯರ್, ಜಡ್ಜ್, ಪೈಲೆಟ್, ಪೊಲೀಸ್‌ಇನ್ನಿತರ ಹುದ್ದೆಗಳಿಗೆ ಹೋಗಲು ಸಾಧ್ಯ. ಇದರಿಂದ ಮಕ್ಕಳು ಕುಟುಂಬದ ಆಸ್ತಿಯಾಗುವ ಜೊತೆಗೆ, ಸಮಾಜದ, ದೇಶದ ಆಸ್ತಿಯಾಗಲಿದ್ದಾರೆ ಎಂದುಇಕ್ಬಾಲ್‌ಅಹಮದ್ ಸಲಹೆ ನೀಡಿದರು.
ಇಂದುಅಕ್ಸಾ ಮತ್ತು ಸಲಾಮ್ ಶಿಕ್ಷಣ ಸಂಸ್ಥೆಗಳು ಎಸ್.ಎಸ್.ಎಲ್.ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನಡೆಸುವ ಮೂಲಕ ಕಿರಿಯರಿಗೆ ಸ್ಪೂರ್ತಿ ನೀಡುವ ಕೆಲಸ ಮಾಡುತ್ತಿದೆ. ಕೇಂದ್ರ ಮತ್ತುರಾಜ್ಯ ಸರಕಾರಗಳು ಶಿಕ್ಷಣಕ್ಕೆ ಹೆಚ್ಚಿನಒತ್ತು ನೀಡುತ್ತಿದ್ದು, ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮ, ಅಲ್ಪಸಂಖ್ಯಾತರಕಲ್ಯಾಣ ಇಲಾಖೆ ಮೂಲಕ ಶಿಕ್ಷಣಕ್ಕೆ ಪೂರಕವಾದ ಸಾಲ, ಸೌಲಭ್ಯಗಳನ್ನು ನೀಡುತ್ತಾ ಬಂದಿದೆ. ಇದರ ಲಾಭವನ್ನುಎಲ್ಲರೂ ಪಡೆದುಕೊಂಡು ತಮ್ಮ ಸಾಮಾಜಿಕ,ಶೈಕ್ಷಣಿಕ, ಅರ್ಥಿಕಅಭಿವೃದ್ದಿಗೆ ಬಳಕೆ ಮಾಡಿಕೊಳ್ಳುವಂತೆ ಇಕ್ಬಾಲ್‌ಅಹಮದ್ ಮನವಿ ಮಾಡಿದರು.
ವೇದಿಕೆಯಲ್ಲಿಆರ್.ವೈ.ಟಿ. ಸಂಸ್ಥೆಯ ಸೈಯದ್ ಸದಾತ್, ರೆಹಮಾನಿ೩೦ ಸಂಸ್ಥೆಯ ಮೆಹಬೂಬ್‌ಇರ್ಷಾದ್, ಅಕ್ವಾ ಸಂಸ್ಥೆಯಜೀ ಮೌಲಾನ, ಜಾವಿದ್‌ಅಹಮದ್, ಜಿಯಾ ವುಲ್ಲಾ, ಗುಲ್ಜಾರ್,ಇಸ್ಮಾಯಿಲ್ ಹಾಗೂ ಅಕ್ವಾ ಶಾಲೆಯ ಉಪನ್ಯಾಸಕರುಗಳು ಪಾಲ್ಗೊಂಡಿದ್ದರು.