ತುಮಕೂರು: ನಗರದ ಶ್ರೀ ಸಿದ್ದಾರ್ಥ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ವಿಭಾಗ ಹಾಗೂ ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ಇವರ ಸಹಯೋಗದಲ್ಲಿ ಚಕೋರ (ತುಮಕೂರು ಜಿಲ್ಲೆ ಉಪನ್ಯಾಸ ಮಾಲಿಕೆ-೬) “ಬುಡಕಟ್ಟು ಕಾವ್ಯಗಳಲ್ಲಿ ಮಹಿಳೆ” ಎಂಬ ವಿಷಯದ ಬಗ್ಗೆ ಉಪನ್ಯಾಸಮಾಲೆ ಹಮ್ಮಿಕೊಂಡಿದ್ದು ಸಸಿಗೆ
ನೀರರೆಯುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಲಾಯಿತು.
ಕಾರ್ಯಕ್ರಮದಲ್ಲಿ ಚಿಕ್ಕನಾಯಕನಹಳ್ಳಿ ಜನಪ ದ ವಿದ್ವಾಂಸರಾದ ಶ್ರೀ ಉಜ್ಜಜ್ಜಿ ರಾಜಣ್ಣ ಬುಡಕಟ್ಟು ಕಾವ್ಯಗಳಲ್ಲಿ ಮಹಿಳೆ ವಿಷ ಯದ ಬಗ್ಗೆ ಯಾವ ರೀತಿ ಮಹಿಳೆಯರು ಸಮಾ ಜದಲ್ಲಿ ಸೋಲು ಗೆಲುವನ್ನು ಜಾತಿ ಬೇದ ಭಾವವನ್ನು ಎದುರಿಸುತ್ತಾ ಇದ್ದಾರೆ ಹಾಗೂ ಬಂದAತಹ ಕಷ್ಟಗಳಿಗೆ ಪರಿಹಾರವನ್ನು ಕೂಡ ಕಂಡುಕೊAಡು ಸಮಾಜದಲ್ಲಿ ಜೀವಿಸುತ್ತಿದ್ದಾರೆ ಎಂದು ಉಪನ್ಯಾಸಮಾಲೆಯಲ್ಲಿ ವಿದ್ಯಾರ್ಥಿಗಳಿಗೆ ತಿಳಿಸಿದರು.
ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯರಾದ ಶ್ರೀಮತಿ ಸುಮಾ ಸತೀಶ್ ಚಕೋರ ಆಯೋಜನೆ ಹಾಗೂ ಉಪನ್ಯಾಸ ಮಾಲೆ ಬಗ್ಗೆ ಸಂಕ್ಷಿಪ್ತವಾಗಿ ಹೇಳಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾ ಲರದ ಡಾ. ಪಿ ಹೇಮಲತಾ ಅಧ್ಯಕ್ಷತೆ ವಹಿಸಿ ಅಧ್ಯಕ್ಷತೆ ನುಡಿಗಳನ್ನಾಡಿದರು. ಕಾರ್ಯಕ್ರಮದಲ್ಲಿ ಚಕೋರ ಸಂಚಾಲಕರಾದ ಡಾ. ನಾಗಭೂಷಣ್ ಬಗ್ಗನಡು, ಶ್ರೀಮತಿ ಮಲ್ಲಿಕಾ ಬಸವರಾಜು, ಶ್ರೀ ಸಿದ್ಧಾರ್ಥ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ರಮೇಶ್ ಮಣ್ಣೆ ಹಾಗೂ ಎಲ್ಲಾ ವಿಭಾಗದ ಭೋದಕ-ಬೋಧ ಕೇತರ ಸಿಬ್ಬಂದಿ ವರ್ಗದವರು ವಿದ್ಯಾರ್ಥಿಗಳು ಭಾಗಿಯಾಗಿದ್ದರು.
(Visited 1 times, 1 visits today)