Author: News Desk Benkiyabale

ತುಮಕೂರು ಕನ್ನಡ ಅಸ್ಮಿತೆಗೆ ದಕ್ಕೆ ತರುವ ಎಷ್ಟೇ ಒತ್ತಡಗಳು ಬಂದರೂ ನಾಡು ನುಡಿಯ ಬಗ್ಗೆ ನಮ್ಮ ಶ್ರದ್ಧೆ ಹಾಗೂ ಬದ್ಧತೆ ಯಾವತ್ತೂ ಬದಲಾಗಬಾರದು ಎಂದು ಸಿದ್ಧಗಂಗಾ ಆಸ್ಪತ್ರೆ ನಿರ್ದೇಶಕ ಡಾ.ಎಸ್.ಪರಮೇಶ್ ತಿಳಿಸಿದರು. ಅವರು ಸಿದ್ಧಗಂಗಾ ಆಸ್ಪತ್ರೆಯಲ್ಲಿ ಕನ್ನಡ ದ್ವಜಾರೋಹಣ ಕಾರ್ಯಕ್ರಮದಲ್ಲಿ ಮಾತನಾಡಿ ಕನ್ನಡ ನಮ್ಮ ಔದ್ಯೋಗಿಕ ಭಾಷೆಯಾಗಿಸುವ ನಿಟ್ಟಿನಲ್ಲಿ ನಾವೆಲ್ಲರೂ ಪಣ ತೊಡಬೇಕು. ಎರಡು ಸಾವಿರ ವರ್ಷ ಇತಿಹಾಸವುಳ್ಳ ಕನ್ನಡ ನಮ್ಮ ಹೆಮ್ಮೆ. ಅದನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಎಲ್ಲ ಕನ್ನಡಿಗರ ಮೇಲಿದೆ ಎಂದರು. ಸಿದ್ಧಗಂಗಾ ಮೆಡಿಕಲ್ ಕಾಲೇಜು ಪ್ರಾಂಶುಪಾಲರಾದ ಡಾ.ಶಾಲಿನಿ ಮಾತನಾಡಿ ನಾವು ಎಲ್ಲಾ ಭಾಷೆಗಳನ್ನು ಗೌರವಿಸಬೇಕು ಹಾಗೂ ಪ್ರೀತಿಸಬೇಕು ಆದರೆ ಮಾತೃಭಾಷೆ ನಮ್ಮ ಆಧ್ಯತೆಯಾಗಿರಬೇಕು. ಕನ್ನಡನಾಡನ್ನು ಕಟ್ಟಲು ಶ್ರಮಿಸಿದ ಮಹನೀಯರ ಸ್ಮರಣೆ ಹಾಗೂ ಅಧ್ಯಯನ ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯ ಎಂದರು. ಕ್ಯಾನ್ಸರ್‍ನಿಂದ ಗುಣಮುಖರಾದ ಸಿದ್ಧಗಂಗಮ್ಮ ಧ್ವಜಾರೋಹಣ ನಡೆಸಿದ್ದು ವಿಶೇಷವಾಗಿತ್ತು. ಸಿದ್ಧಗಂಗಾ ಮೆಡಿಕಲ್ ಕಾಲೇಜು ಮೇಲ್ವಿಚಾರಕ ಡಾ.ನಿರಂಜನಮೂರ್ತಿ, ಸಿಇಓ ಡಾ.ಸಂಜೀವ್ ಕುಮಾರ್, ಕ್ಯಾನ್ಸರ್ ತಜ್ಞರಾದ ಡಾ.ಮಧುಮಾಲಿತಿ, ಸ್ತ್ರೀರೋಗ ತಜ್ಞರಾದ ಡಾ.ಮನಸ್ವಿ,…

Read More

ತುಮಕೂರು ಎಲ್ಲಾ ಶಾಲೆಗಳಲ್ಲಿಯೂ ದೈಹಿಕ ಶಿಕ್ಷಣದ ರೀತಿಯಲ್ಲಿಯೇ ಮಕ್ಕಳಿಗೆ ಭರತನಾಟ್ಯ,ಸಂಗೀತ, ನೃತ್ಯ, ಶಾಸ್ತ್ರೀಯ ವಾದ್ಯಗಳ ಕಲಿಕೆಗೆ ಅವಕಾಶ ಕಲ್ಪಿಸಿದರೆ ದೇಶ ಹೆಚ್ಚು ಸಾಂಸ್ಕøತಿಕವಾಗಿ ಮುಂದೆ ಬರಲು ಸಾಧ್ಯ ಎಂದು ಆರ್.ಎಸ್.ಎಸ್.ನ ತುಮಕೂರು ವಿಭಾಗೀಯ ಸಂಚಾಲಕ ಎನ್.ಎಸ್.ನಾಗೇಂದ್ರಪ್ರಸಾದ್ ಅಭಿಪ್ರಾಯಪಟ್ಟಿದ್ದಾರೆ. ನಗರದ ಕನ್ನಡ ಭವನದಲ್ಲಿ ಇಂಟರ್ ನ್ಯಾಶನಲ್ ಆಟ್ರ್ಸ್ ಅಂಡ್ ಕಲ್ಚರಲ್ ಫೌಂಡೇಶನ್ ಸಂಸ್ಥೆಯು ದಶಮಾನೋತ್ಸವದ ಅಂಗವಾಗಿ ಸಂಸ್ಥೆಯ ನಿರ್ದೇಶಕರಾದ ಶ್ರೀವತ್ಸ ಶಾಂಡಿಲ್ಯ ಅವರ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಅಮೃತ್ ಕಲಾ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತಿದ್ದ ಅವರು, ಮಕ್ಕಳನ್ನು ಕೇವಲ ಅಂಕ ಪಡೆಯುವ ಮಿಷನ್‍ಗಳಂತೆ ಪರಿಗಣಿಸುವ ಬದಲು, ಅವರಿಗೆ ಕಲೆ, ಸಾಹಿತ್ಯ, ಸಂಗೀತ ಕಲಿಸುವ ಮೂಲಕ ಮಕ್ಕಳ ಸಮಗ್ರ ವಿಕಾಸಕ್ಕೆ ಶಾಲಾ, ಕಾಲೇಜುಗಳು ಮುಂದಾಗಬೇಕೆಂದರು. ಮಕ್ಕಳಿಗೆ ಸ್ವಾತಂತ್ರ ಹೋರಾಟಗಾರರಾದ ರಾಣಿ ಅಬ್ಬಕ್ಕ ,ಕಿತ್ತೂರು ರಾಣಿ ಚನ್ನಮ್ಮ, ನವದುರ್ಗೆಯರ ಪಾತ್ರಗಳನ್ನು ಭರತನಾಟ್ಯದ ಮೂಲಕ ತೋರಿಸುವ ಮೂಲಕ ಅವರ ಮನಸ್ಸಿನಲ್ಲಿ ಅಚ್ಚಳಿಯದಂತೆ ಮಾಡಲಾಗುತ್ತಿದೆ. ಸರಕಾರದಿಂದ ಯಾವುದೇ ಸಹಾಯವಿಲ್ಲದಿದ್ದರೂ ಶ್ರೀವತ್ಸ ಶಾಂಡಿಲ್ಯ ಅವರು ನಿರಂತರ ಪ್ರಯತ್ನ ನಡೆಸುತ್ತಿದ್ದಾರೆ.ಮಕ್ಕಳು ಸಹ…

Read More

ಚಿಕ್ಕನಾಯಕನಹಳ್ಳಿ ನಾಡ ಕಟ್ಟಿದ ನಾಡಪ್ರಭು ಕೆಂಪೇಗೌಡರ ಶತಾಬ್ದಿ ಅಂಗವಾಗಿ ರಾಜ್ಯದ ಮೂಲೆ ಮೂಲೆಗಳ ಮೃತ್ತಿಕೆ ಸಂಗ್ರಹಿಸುವ ಮೂಲಕ ಅವರ ಹೆಸರು ಮುಂದಿನ ಯುವ ಪೀಳಿಗೆಗೆ ಉಳಿಯುವಂತೆ ಮಾಡುವ ಕೆಲಸ ನಮ್ಮ ಸರ್ಕಾರದ್ದಾಗಿದೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದರು. ಅವರು ಇಂದು ಚಿಕ್ಕನಾಯಕನಹಳ್ಳಿ ತಾಲೂಕಿನ ಆಗಮಿಸಿದ ನಾಡಪ್ರಭು ಕೆಂಪೇಗೌಡರ ವೃತ್ತಿಕೆ ರಥ ವನ್ನು ಬರಕ್ ನಾಳು ಗ್ರಾಮ ಪಂಚಾಯಿತಿಗೆ ಬರಮಾಡಿಕೊಂಡು ನಮಸ್ಕರಿಸಿ ಗ್ರಾಮದ ಕೆಂಪಮ್ಮ ದೇವಿಯ ಸಾನಿಧ್ಯದಲ್ಲಿ ಪೂಜೆ ನೆರವೇರಿಸಿ ಶಾಸಕ ಹಾಗೂ ಕಾನೂನು ಸಚಿವರ ಮೂಲಕ ವೃತ್ತಿಕೆಯನ್ನು (ಮಣ್ಣನ್ನು) ಸ್ವೀಕರಿಸಿ ರಥಕ್ಕೆ ಅರ್ಪಿಸಿ ಅವರು ಮಾತನಾಡುತ್ತಾ ಹೆಮ್ಮೆಯ ನಮ್ಮ ನಾಡುವ ರಾಜರು ಕಟ್ಟಿರುವ ನಾಡುಗಳು ಇಂದು ಪಳೆಯುಳಿಕೆಯಾಗಿದೆ ರಾಜರ ಆಳ್ವಿಕೆಯ ಸಾಮಂತರಾಗಿ ದುಡಿಯುತ್ತಿದ್ದ ನಾಡಪ್ರಭು ಕೆಂಪೇಗೌಡರು ಕಟ್ಟಿದ ಬೆಂಗಳೂರು ಇಂದು ಬೃಹತ್ ನಗರಗಳು ನಮ್ಮ ಕಡೆ ನೋಡುತ್ತಾ ದಿನ ಕಳೆದಂತೆ ಜಗತ್ತನ್ನೇ ಆಕರ್ಷಿಸುವಂತೆ ಮಾಡಿದ್ದಾರೆ. ಇವರ 108 ಅಡಿ ಇರುವ ಪ್ರತಿಮೆಯನ್ನು ನವಂಬರ್ 11ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ…

Read More

ತುರುವೇಕೆರೆ ತಾಲೂಕಿನ ತಂಡಗ ಗ್ರಾಮಪಂಚಾಯ್ತಿ ಯ ನೂತನ ಉಪಾಧ್ಯಕ್ಷರಾಗಿ ಕೋಳಾಲ ಕ್ಷೇತ್ರದ ಸದಸ್ಯ ಕೆ.ಆರ್.ರೇಣುಕುಮಾರ್ ರವರು ಆಯ್ಕೆಯಾಗಿದ್ದಾರೆ. ಶುಕ್ರವಾರ ನಡೆದ ಉಪಾಧ್ಯಕ್ಷರ ಚುನಾವಣೆಗೆ ಕೆ.ಆರ್.ರೇಣುಕುಮಾರ್ ಮತ್ತು ಚನ್ನಬಸವೇಗೌಡ ನಾಮಪತ್ರ ಸಲ್ಲಿಸಿದ್ದರು. ತಹಸೀಲ್ದಾರ್ ರೇಣುಕುಮಾರ್ ರವರು ಚುನಾವಣಾಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸಿದರು. ಒಟ್ಟು 15 ಸದಸ್ಯರಿರುವ ಪಂಚಾಯ್ತಿಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿದ್ದ ಕೆ.ಆರ್.ರೇಣುಕುಮಾರ್ ರವರಿಗೆ 8 ಮತ್ತು ಚನ್ನಬಸವೇಗೌಡರಿಗೆ 5 ಮತಗಳು ಲಭಿಸಿತು. 2 ಮತಗಳು ಅಸಿಂಧುಗೊಂಡವು. ಈ ಹಿಂದೆ ಉಪಾಧ್ಯಕ್ಷರಾಗಿದ್ದ ದಿಲೀಪ್ ರವರು ರಾಜೀನಾಮೆ ನೀಡಿದ್ದರಿಂದ ಉಪಾಧ್ಯಕ್ಷ ಸ್ಥಾನ ತೆರವಾಗಿತ್ತು. ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತರಾಗಿರುವ ಮಾರಪ್ಪನಹಳ್ಳಿಯ ಗಂಗಮ್ಮ ಮುಂದುವರೆದಿದ್ದಾರೆ. ಪಿಡಿಓ ಭೈರಪ್ಪ, ಕಾರ್ಯದರ್ಶಿ ಶ್ರೀನಿವಾಸ್ ಮತ್ತು ಕಂದಾಯಾಧಿಕಾರಿ ರಂಗಸ್ವಾಮಿ ಚುನಾವಣಾ ಪ್ರಕ್ರಿಯೆಯಲ್ಲಿ ಸಹಕರಿಸಿದರು. ಸದಸ್ಯರುಗಳಾದ ರಂಗನಹಳ್ಳಿ ಆರ್.ಬಿ.ಮಂಜುನಾಥ್, ಚಂದ್ರಾಪುರ ಹರೀಶ್ ಕುಮಾರ್, ಕೋಳಾಲದ ಕಲಾವತಿ ಮಹಾಲಿಂಗಯ್ಯ, ಮಾರಪ್ಪನಹಳ್ಳಿಯ ಮಂಜುಳಾ ಪುಟ್ಟಣ್ಣ, ತಂಡಗದ ರೇಖಾಮಣಿ ಬಸವರಾಜು, ಕೋಳಾಲ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಕೋಳಾಲ ರಘು ಸೇರಿದಂತೆ ಹಲವರು ನೂತನ ಉಪಾಧ್ಯಕ್ಷರನ್ನು ಅಭಿನಂದಿಸಿದರು.

Read More

ತುಮಕೂರು ಮಾರಿಯಮ್ಮ ಯುವಕರ ಸಂಘಟನೆಯಿಂದ ಡಾ.ಪುನೀತ್ ರಾಜ್‍ಕುಮಾರ್‍ರವರ ಒಂದು ವರ್ಷದ ಪುಣ್ಯಸ್ಮರಣೆ ಅಂಗವಾಗಿ ನಗರದ ಮಂಡಿಪೇಟೆ ವೃತ್ತದಲ್ಲಿ ಮೌನಾಚರಣೆ ಹಮ್ಮಿಕೊಂಡು ಅನ್ನ ಸಂತರ್ಪಣಾ ಕಾರ್ಯಕ್ರಮ ನೆರವೇರಿಸಲಾಯಿತು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾರಿಯಮ್ಮ ಯುವಕರ ಸಂಘದ ಅಧ್ಯಕ್ಷರಾದ ಕಣ್ಣನ್ ಮಾತನಾಡಿ ಡಾ.ಪುನೀತ್‍ರಾಜ್‍ಕುಮಾರ್ ರವರು ಅಪ್ರತಿಮ ನಟ ಕರ್ನಾಟಕದಲ್ಲಿ ಕನ್ನಡನಾಡು ನುಡಿಗಷ್ಟೇ ಅಲ್ಲದೇ ಹಸಿದವರ.ಧಣಿದವರ ಅನಾರೋಗ್ಯಕ್ಕೊಳಗಾದವರಿಗೆ ಆಸರೆಯಾಗಿ. ಸಾವಿನಲ್ಲು ಸಾರ್ಥಕತೆ ಮೆರೆದು ತಮ್ಮ ದೇಹದ ಅಂಗಾಂಗಗಳನ್ನು ಧಾನ ಮಾಡಿ ಇಡೀ ದೇಶದ ಜನರಿಗೆ ಮಾದರಿ ಸಂದೇಶ ರವಾನಿಸಿ ಹೀಗು ಬದುಕಬಹುದು ಎಂದು ತೊರಿಸಿಕೊಟ್ಟಿದ್ದಾರೆ. ಬಡವರನ್ನು ಅಶಕ್ತರನ್ನು ಕೈಹಿಡಿದು ಹೆಜ್ಜೆ ಹಾಕಿದವರು ಇಂದು ನಮ್ಮೆಲ್ಲರನ್ನಗಲಿ ಒಂದು ವರ್ಷ ಕಳೆದಿದೆ ಅವರ ಪುಣ್ಯಸ್ಮರಣೆ ಅಂಗವಾಗಿ ಮಾರಿಯಮ್ಮ ಯುವಕರ ಸಂಘದ ಪದಾಧಿಕಾರಿಗಳು ಹಾಗೂ ಇಲ್ಲಿನ ಮುಖಂಡರು ಒಂದು ದಿನದ ತಮ್ಮ ಕೂಲಿಯನ್ನು ಅನ್ನ ಸಂತರ್ಪಣಾ ಕಾರ್ಯಕ್ರಮಕ್ಕೆ ಬರಿಸಿದ್ದಾರೆ, ಅವರೆಲ್ಲರೂ ಪುನೀತ್ ರಾಜ್‍ಕುಮಾರ್ ರವರ ಮೇಲಿನ ಅಭಿಮಾನವನ್ನು ಸಾರ್ಥಕತೆಗೊಳಿಸಲು ಸಾಕ್ಷಿಯಾಗಿದ್ದಾರೆ ಎಂದರು. ನಂತರ ತುಮಕೂರು ಜಿಲ್ಲಾ ಕೊಳಗೇರಿ ಸಮಿತಿಯ ಅರುಣ್ ಮಾತನಾಡಿ…

Read More

ತುಮಕೂರು ಪ್ರತಿ ವರ್ಷದಂತೆ ಈ ಬಾರಿಯೂ ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದ್ದು, ನವೆಂಬರ್ 1 ರಿಂದ ಮನೆ-ಮನೆಗಳಲ್ಲಿ ಕನ್ನಡ ಭಾವುಟ ಎನ್ನುವ ಅಭಿಯಾನ ಕೈಗೊಳ್ಳಲು ಜಾತ್ಯಾತೀತ ಜನತಾ ದಳ ನಿರ್ಧಾರ ಕೈಗೊಂಡಿದೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಆರ್.ಸಿ. ಆಂಜಿನಪ್ಪ ತಿಳಿಸಿದರು. ಇಲ್ಲಿನ ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಈ ಅಭಿಯಾನದ ಅಡಿಯಲ್ಲಿ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರು, ಮುಖಂಡರು ಮತ್ತು ಬೆಂಬಲಿಗರ ಮನೆಗಳ ಮೇಲೆ ಕನ್ನಡ ಭಾವುಟ ಮತ್ತು ಪಕ್ಷದ ಭಾವುಟಗಳನ್ನು ಹಾರಿಸಬೇಕು ಎಂದರು. ತಮ್ಮ ಕ್ಷೇತ್ರದಲ್ಲಿರುವ ನೆರೆ-ಹೊರೆಯವರ ಮನೆ ಮೇಲೆ ಕೂಡ ಕನ್ನಡ ಭಾವುಟ ಹಾರಿಸಲು ಭಾವುಟ ನೀಡುವುದು ಮತ್ತು ನೆರೆ-ಹೊರೆಯವರನ್ನು ಸಹ ಪಕ್ಷದ ಭಾವುಟವನ್ನು ಹಾರಿಸಲು ಮನವೊಲಿಸಬೇಕು. ಆದರೆ, ಒತ್ತಾಯ ಮತ್ತು ಬಲವಂತದಿಂದ ಬಾವುಟಗಳನ್ನು ಹಾರಿಸಲು ಪ್ರಯತ್ನ ಮಾಡಬಾರದು ಎಂದು ಹೇಳಿದರು. ಪಕ್ಷದ ವತಿಯಿಂದ ಈ ವರ್ಷದ ಕನ್ನಡ ರಾಜ್ಯೋತ್ಸವವನ್ನು ಇಡೀ ನವೆಂಬರ್ ತಿಂಗಳಲ್ಲಿ ಕನ್ನಡ ರಾಜೋತ್ಸವ ಆಚರಣೆ ಮಾಸವೆಂದು ಆಚರಿಸಲು…

Read More

ತುಮಕೂರು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ದೇಶದ ಪ್ರಥಮ ಮಹಿಳಾ ಪ್ರಧಾನಿ ಇಂದಿರಾ ಗಾಂಧಿ ಅವರ ಪುಣ್ಯ ಸ್ಮರಣೆ ಕಾರ್ಯಕ್ರಮವನ್ನು ಡಿಸಿಸಿ ಅಧ್ಯಕ್ಷ ಆರ್.ರಾಮಕೃಷ್ಣ ಅವರ ಅಧ್ಯಕ್ಷತೆಯಲ್ಲಿ ಕೈಗೊಳ್ಳಲಾಗಿತ್ತು. ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಆರ್.ರಾಮಕೃಷ್ಣ, ಗರೀಬ್ ಹಠಾವೋ ಎಂಬ ಘೋಷ ವ್ಯಾಕದ ಮೂಲಕ ದೇಶದ ಬಡಜನರಿಗೆ ಸೂರು, ಊಟ, ವಸತಿ ಕಲ್ಪಿಸಲು ಹಗಲಿರುಳು ಶ್ರಮಿಸಿದ ಇಂದಿರಾಗಾಂಧಿ ಅವರು, ಈ ದೇಶ ಕಂಡ ಅಪ್ರತಿಮ ರಾಜಕಾರಣಿ. ಬರಗಾಲದಿಂದ ಅನ್ನ, ಆಹಾರವಿಲ್ಲದ ಪರಿತಪಿಸುತಿದ್ದ ರಾಷ್ಟ್ರದ ಜನತೆಗಾಗಿ,ವಿದೇಶಗಳಿಂದ ಗೋಧಿ,ಕೆಂಪು ಜೋಳ ತಂದು,ಬಡವರ ಹೊಟ್ಟೆ ತುಂಬಿಸಿದ ಇಂದಿರಾಗಾಂಧಿ,ಪಾಕಿಸ್ಥಾನದ ಮೇಲೆ ಯುದ್ದ ಮಾಡಿ, ಬಾಂಗ್ಲಾ ದೇಶ ಉದಯಕ್ಕೆ ಕಾರಣರಾದರು. ಅವರು ಎಂದಿಗೂ ಯುದ್ದಗಳನ್ನು ತಮ್ಮ ರಾಜಕೀಯ ಬೆಳವಣಿಗೆಗೆ ಬಳಸಿಕೊಂಡವರಲ್ಲ. ಅವರ ಧೈರ್ಯ ಮತ್ತು ಚಾಣಾಕ್ಷತನ ಇಂದಿನ ರಾಜಕಾರಣಿಗಳಿಗೆ ಮಾದರಿಯಾಗಬೇಕು ಎಂದರು. ಬ್ಯಾಂಕುಗಳ ರಾಷ್ಟ್ರೀಕರಣ, ಸಾರಿಗೆ ರಾಷ್ಟ್ರೀಕರಣ, ಉಳುವವನೇ ಭೂಮಿ ಒಡೆಯ, 20 ಅಂಶಗಳ ಕಾರ್ಯಕ್ರಮಗಳು ಇಡೀ ಪ್ರಪಂಚದಲ್ಲಿಯೇ ಬಡವರ ಏಳಿಗೆಗೆ ನಡೆದ ಮಹತ್ವಾಕಾಂಕ್ಷೆಯ…

Read More

ತುಮಕೂರು ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರಿಗೆ ಸಮಾಜದಲ್ಲಿ ಗೌರವಯುತ ಬದುಕು ದೊರೆಯಬೇಕು. ನಿವೃತ್ತ ಪೊಲೀಸ್ ಸಿಬ್ಬಂದಿ ಪೊಲೀಸ್ ಠಾಣೆಗೆ ಬಂದರೆ ಅವರ ಗೌರವಕ್ಕೆ ಧಕ್ಕೆ ಆಗದಂತೆ ನಡೆಸಿಕೊಳ್ಳಬೇಕು ಎಂದು ಎಲ್ಲಾ ಸಿಬ್ಬಂದಿಗೂ ಸೂಚನೆ ನೀಡಿದ್ದೇನೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್‍ಕುಮಾರ್ ಶಹಪೂರವಾಡ ಹೇಳಿದರು. ಶನಿವಾರ ನಗರದ ಚಿಲುಮೆ ಪೊಲೀಸ್ ಸಮುದಾಯ ಭವನದಲ್ಲಿ ನಡೆದ ಜಿಲ್ಲಾ ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಇತ್ತೀಚೆಗೆ ಜನ ಪೊಲೀಸರ ವಿರುದ್ಧ ಮಾತನಾಡಲು ಶುರು ಮಾಡಿದ್ದಾರೆ. ಇಲಾಖೆಯ ಕರ್ತವ್ಯದ ಅನುಭವ, ಕಾರ್ಯವೈಖರಿ, ಮೌಲ್ಯದ ಬಗ್ಗೆ ಅಂತಹವರಿಗೆ ಇರುವ ತಪ್ಪು ಕಲ್ಪನೆ ನಿವಾರಿಸಿ ತಿಳುವಳಿಕೆ ನೀಡುವ ಮೂಲಕ ಪೊಲೀಸ್ ಇಲಾಖೆಯ ಘನತೆ ಎತ್ತಿಹಿಡಿಯಲು ಸಹಕರಿಸಬೇಕು ಎಂದು ಮನವಿ ಮಾಡಿದರು. ಜಿಲ್ಲಾ ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಮನವಿ ಮೇರೆಗೆ ನಗರದ ಪೊಲೀಸ್ ಹುತಾತ್ಮ ಸ್ಮಾರಕದ ಹಿಂಭಾಗದಲ್ಲಿರುವ ನಿವೇಶನವನ್ನು ಜಿಲ್ಲಾ ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಕಟ್ಟಡ…

Read More

ತುಮಕೂರು ಆಭಾ ಕಾರ್ಡ್ ಹೊಂದಿರುವ ಯಾವುದೇ ವ್ಯಕ್ತಿ ದೇಶದ ಯಾವುದೇ ಸರ್ಕಾರಿ/ಅನುಮೋದಿತ ಖಾಸಗಿ ಆಸ್ಪತ್ರೆಗಳಲ್ಲಿ 5 ಲಕ್ಷದವರೆಗೆ ಉಚಿತ ಚಿಕಿತ್ಸೆಯನ್ನು ಪಡೆಯಬಹುದಾಗಿದ್ದು, ನಾಗರೀಕರು ಆಯುμÁ್ಮನ್ ಭಾರತ್ ಹೆಲ್ತ್ ಅಕೌಂಟ್ (ಆಭಾ) ಕಾರ್ಡುಗಳನ್ನು ಪಡೆಯಲು ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ತಿಳಿಸಿದರು. ತಮ್ಮ ಕಚೇರಿಯ ಕೆಸ್ವಾನ್ ಸಭಾಂಗಣದಲ್ಲಿಂದು ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಸಭೆ ನಡೆಸಿ ಮಾತನಾಡಿದ ಅವರು, ಸರ್ಕಾರ ಜನಸಾಮಾನ್ಯರ ಆರೋಗ್ಯದ ಕಾಳಜಿಗಾಗಿ ಯೋಜನೆ ಜಾರಿಗೆ ತಂದಿದ್ದು ಗ್ರಾಮ ಒನ್ ಸೇರಿದಂತೆ ನಿಗಧಿತ ಸೇವಾ ಕೇಂದ್ರಗಳಲ್ಲಿ ಆಭಾ ಕಾರ್ಡ್ ಒದಗಿಸಲು ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು ಎಂದು ಸೂಚಿಸಿದರು. ಡಿಸೆಂಬರ್ 5ರಿಂದ 1ರಿಂದ 15ನೇ ವಯಸ್ಸಿನ ಮಕ್ಕಳಿಗೆ ಜೆಇ ಲಸಿಕಾ ಅಭಿಯಾನ ನಡೆಯುವ ಹಿನ್ನೆಲೆಯಲ್ಲಿ ಕೋವಿಡ್ ತಡೆಗಟ್ಟಲು ಮಕ್ಕಳಿಗೆ ನೀಡಲಾಗುತ್ತಿರುವ ಲಸಿಕಾಕರಣವನ್ನು ನವೆಂಬರ್ 10ರೊಳಗೆ ಪೂರ್ಣಗೊಳಿಸಬೇಕು ಎಂದು ಅವರು ಸೂಚಿಸಿದರು. ವಿಕಲಚೇತನರಿಗೆ ವೈದ್ಯಕೀಯ ಪ್ರಾಧಿಕಾರಗಳಿಂದ ದೃಢಿಕರಿಸಲಾಗುವ ವೈದ್ಯಕೀಯ ಪ್ರಮಾಣಪತ್ರದ ಸಮಗ್ರ ಮಾಹಿತಿಯುಳ್ಳ ಗಣಕೀಕೃತ ಗುರುತಿನ ಚೀಟಿ (ಯುಡಿಐಡಿ) ಕಾರ್ಡ್‍ಗಳನ್ನು ಅರ್ಹ ವಿಕಲಚೇತನರಿಗೆ…

Read More

ತುಮಕೂರು ಕನ್ನಡ ರಾಜ್ಯೋತ್ಸವ ದಿನದಂದು ಕನ್ನಡಾಂಬೆ ತಾಯಿ ಭುವನೇಶ್ವರಿ ದೇವಿ ಪ್ರತಿಮೆಯನ್ನು ಬೆಳ್ಳಿ ರಥದಲ್ಲಿರಿಸಿ ವಿವಿಧ ಕಲಾ ತಂಡಗಳೊಂದಿಗೆ ಅದ್ದೂರಿ ಮೆರವಣಿಗೆ ಮಾಡಬೇಕೆಂದು ಉಪವಿಭಾಗಾಧಿಕಾರಿ ವಿ. ಅಜಯ್ ಅಧಿಕಾರಿಗಳಿಗೆ ಸೂಚನೆ ನೀಡಿದರು. ತಮ್ಮ ಕಚೇರಿಯಲ್ಲಿಂದು ಪೂರ್ವಭಾವಿ ಸಭೆ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಭುವನೇಶ್ವರಿ ದೇವಿ ಪ್ರತಿಮೆಯನ್ನಿರಿಸುವ ಬೆಳ್ಳಿ ರಥ ವಾಹನವನ್ನು ತಳಿರು-ತೋರಣ-ಹೂವಿನಿಂದ ಸಿಂಗರಿಸಬೇಕು. ಮೆರವಣಿಗೆಯಲ್ಲಿ ಭಾಗವಹಿಸುವ ವಿವಿಧ ಇಲಾಖೆಗಳ ಸ್ತಬ್ದಚಿತ್ರಗಳನ್ನು ಉತ್ತಮವಾಗಿ ರೂಪಿಸಿ ನವೆಂಬರ್ 1ರ ಬೆಳಿಗ್ಗೆ 7.30 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಸಿದ್ಧರಿರಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಮೆರವಣಿಗೆಯು ನವೆಂಬರ್ 1ರ ಬೆಳಿಗ್ಗೆ 9 ಗಂಟೆಯೊಳಗೆ ನಗರದ ಸರ್ಕಾರಿ ಜ್ಯೂನಿಯರ್ ಕಾಲೇಜು ಮೈದಾನವನ್ನು ಸೇರಬೇಕು. ಮೈದಾನ ಸೇರಿದ ನಂತರ ಬೆಳಿಗ್ಗೆ 9 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವರಿಂದ ಧ್ವಜಾರೋಹಣ ನೆರವೇರಿಸಿ ಗೌರವರಕ್ಷೆ ಸ್ವೀಕರಿಸಲಿದ್ದಾರೆ. ನಂತರ ಸಚಿವರು ಜಿಲ್ಲೆಯ ಜನತೆಯನ್ನುದ್ದೇಶಿಸಿ ರಾಜ್ಯೋತ್ಸವ ಸಂದೇಶ ನೀಡಲಿದ್ದಾರೆ. ಎಲ್ಲಾ ಕಾರ್ಯಕ್ರಮಗಳನ್ನು ಸುಗಮವಾಗಿ ನಡೆಸಲು ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಬೇಕು. ಲೋಪದೋಷಗಳುಂಟಾದಲ್ಲಿ ಸಂಬಂಧಿಸಿದ…

Read More