ತುಮಕೂರು ರಾಜಧಾನಿಗೆ ಅತಿ ಹತ್ತಿರದಲ್ಲಿರುವ ತುಮಕೂರು ನಗರದ ಸಮಗ್ರ ಅಭಿವೃದ್ಧಿ ದೃಷ್ಟಿಯಲ್ಲಿ ಜೆಡಿಎಸ್ ಪಕ್ಷದ ಪಂಚರತ್ನ ಯೋಜನೆಯಲ್ಲಿ ನಗರದ ಜನತೆಗೆ ಉಚಿತವಾಗಿ ಕುಡಿಯುವ ನೀರು,200 ಯುನಿಟ್ ವರೆಗೆ ಉಚಿತ ವಿದ್ಯುತ್,ಗುಣಮಟ್ಟದ ಆರೋಗ್ಯ ಸೇವೆ ಇನ್ನಿತರ ಯೋಜನೆಗಳನ್ನು ಜಾರಿಗೆ ತರಲು ಮುಂದಾಗಿರುವುದಾಗಿ ಜೆಡಿಎಸ್ ಅಭ್ಯರ್ಥಿ ಎನ್.ಗೋವಿಂದರಾಜು ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಜೆಡಿಎಸ್ ಪಕ್ಷ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಲ್ಲಿ ರೈತರೊಂದಿಗೆ, ಮಧ್ಯಮವರ್ಗ ಹಾಗು ಬಡಜನರಿಗಾಗಿ,ಮೂಲಭೂತ ಸೌಕರ್ಯ ಗಳಾದ ಕುಡಿಯುವ ನೀರು, ವಿದ್ಯುತ್, ಶಿಕ್ಷಣ,ಆರೋಗ್ಯ ಸೇವಗಳನ್ನು ಒಳಗೊಂಡ ಹಲವಾರು ಜನಮುಖಿ ಯೋಜನೆಗಳನ್ನು ಜಾರಿಗೆ ತರಲಿದೆ.ಹೆಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಕೈಗೊಂಡ ಹಲವಾರು ಕಾರ್ಯಕ್ರಮಗಳು ಇಂದಿಗೂ ಜನಮಾನಸದಲ್ಲಿವೆ.ಅದೇ ಮಾದರಿಯಲ್ಲಿ ತುಮಕೂರು ಜಿಲ್ಲೆಯಲ್ಲಿಯೂ ಅಭಿವೃದ್ದಿ ಯೋಜನೆಗಳು ಜಾರಿಗೆ ಬರಲಿವೆ ಎಂದರು. ಜನರಿಗೆ ದಿನದ 14 ಗಂಟೆ,ವಾರದ ಏಳು ದಿನವೂ ಉಚಿತವಾಗಿ ಶುದ್ದ ಕುಡಿಯುವ ನೀರು ಒದಗಿಸುವುದು, ಅದೇ ರೀತಿಯಲ್ಲಿ ನಗರದ ಎಲ್ಲಾ ವಾರ್ಡುಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ತರೆದು ಗುಣಮಟ್ಟದ ಸೇವೆ ಒದಗಿಸುವುದು,ಅಲ್ಲದೆ ವಿದ್ಯಾವಂತ ಯುವ…
Author: News Desk Benkiyabale
ತುಮಕೂರು ತುಮಕೂರು ಮಹಾನಗರ ಪಾಲಿಕೆಯ ನೂತನ ಆಯುಕ್ತರಾಗಿ ಯೋಗಾನಂದ ಸಿ. ಅವರು ವರ್ಗಾವಣೆಗೊಂಡಿರುವ ಆಯುಕ್ತೆ ರೇಣುಕಾ ಅವರಿಂದ ಸೋಮವಾರ ಅಧಿಕಾರ ಸ್ವೀಕರಿಸಿದರು. ಅಧಿಕಾರ ಸ್ವೀಕರಿಸಿದ ನಂತರ ಮಾತನಾಡಿದ ನೂತನ ಆಯುಕ್ತ ಯೋಗಾನಂದ್ ಮಾತನಾಡಿ, ಈ ಹಿಂದೆ ನಾನು ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಆಯುಕ್ತರಾಗಿ, ತುಮಕೂರು ಮಹಾನಗರ ಪಾಲಿಕೆಯಲ್ಲಿ ಉಪಆಯುಕ್ತರಾಗಿ ಕಾರ್ಯನಿರ್ವಹಿಸಿದ್ದೇನೆ ಎಂದರು. ಸರ್ಕಾರ ನನ್ನನ್ನು ತುಮಕೂರು ಮಹಾನಗರ ಪಾಲಿಕೆ ಆಯುಕ್ತರನ್ನಾಗಿ ವರ್ಗಾವಣೆ ಮಾಡಿದೆ. ಈ ಹಿಂದಿನ ಆಯುಕ್ತರಾದ ರೇಣುಕಾ ಅವರು ಉತ್ತಮವಾಗಿ ಕಾರ್ಯನಿರ್ವಹಿಸಿದ್ದು, ನಾನು ಸಹ ಅದೇ ಮಾದರಿಯಲ್ಲಿ ಕಾರ್ಯನಿರ್ವಹಿಸಿಕೊಂಡು ಹೋಗುತ್ತೇನೆ ಎಂದರು. ನಗರದ ಶಾಸಕರು, ಸಂಸದರು, ವಿಧಾನ ಪರಿಷತ್ ಸದಸ್ಯರು ಹಾಗೂ ಪಾಲಿಕೆ ಸದಸ್ಯರುಗಳ ಸಲಹೆ, ಸೂಚನೆ ಪಡೆದು ನಗರದ ಅಭಿವೃದ್ಧಿಗೆ ಶ್ರಮ ವಹಿಸಿ ಕೆಲಸ ಮಾಡುತ್ತೇನೆ ಎಂದು ಅವರು ಹೇಳಿದರು. ಸಾರ್ವಜನಿಕ ಸೇವೆಯಲ್ಲಿ ಪಾರದರ್ಶಕವಾಗಿ ಸೇವೆ ಸಲ್ಲಿಸಲು ಕಟಿಬದ್ಧನಾಗಿದ್ದೇನೆ. ನಗರದ ನಾಗರಿಕರಿಗೆ ಮೂಲಭೂತ ಸೌಕರ್ಯ ಸೇರಿದಂತೆ ಅಭಿವೃದ್ಧಿ ಕಾರ್ಯಗಳಿಗೆ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿಕೊಂಡು ಹೋಗುತ್ತೇನೆ ಎಂದು ಅವರು ಹೇಳಿದರು.
ತುಮಕೂರು ಕನ್ನಡ ರಾಜ್ಯೋತ್ಸವ ದಿನದಂದು ಕನ್ನಡಾಂಬೆ ತಾಯಿ ಭುವನೇಶ್ವರಿ ದೇವಿ ಪ್ರತಿಮೆಯನ್ನು ಬೆಳ್ಳಿ ರಥದಲ್ಲಿರಿಸಿ ವಿವಿಧ ಕಲಾ ತಂಡಗಳೊಂದಿಗೆ ಅದ್ದೂರಿ ಮೆರವಣಿಗೆ ಮಾಡಬೇಕೆಂದು ಉಪವಿಭಾಗಾಧಿಕಾರಿ ವಿ. ಅಜಯ್ ಅಧಿಕಾರಿಗಳಿಗೆ ಸೂಚನೆ ನೀಡಿದರು. ತಮ್ಮ ಕಚೇರಿಯಲ್ಲಿಂದು ಪೂರ್ವಭಾವಿ ಸಭೆ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಭುವನೇಶ್ವರಿ ದೇವಿ ಪ್ರತಿಮೆಯನ್ನಿರಿಸುವ ಬೆಳ್ಳಿ ರಥ ವಾಹನವನ್ನು ತಳಿರು-ತೋರಣ-ಹೂವಿನಿಂದ ಸಿಂಗರಿಸಬೇಕು. ಮೆರವಣಿಗೆಯಲ್ಲಿ ಭಾಗವಹಿಸುವ ವಿವಿಧ ಇಲಾಖೆಗಳ ಸ್ತಬ್ದಚಿತ್ರಗಳನ್ನು ಉತ್ತಮವಾಗಿ ರೂಪಿಸಿ ನವೆಂಬರ್ 1ರ ಬೆಳಿಗ್ಗೆ 7.30 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಸಿದ್ಧರಿರಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಮೆರವಣಿಗೆಯು ನವೆಂಬರ್ 1ರ ಬೆಳಿಗ್ಗೆ 9 ಗಂಟೆಯೊಳಗೆ ನಗರದ ಸರ್ಕಾರಿ ಜ್ಯೂನಿಯರ್ ಕಾಲೇಜು ಮೈದಾನವನ್ನು ಸೇರಬೇಕು. ಮೈದಾನ ಸೇರಿದ ನಂತರ ಬೆಳಿಗ್ಗೆ 9 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವರಿಂದ ಧ್ವಜಾರೋಹಣ ನೆರವೇರಿಸಿ ಗೌರವರಕ್ಷೆ ಸ್ವೀಕರಿಸಲಿದ್ದಾರೆ. ನಂತರ ಸಚಿವರು ಜಿಲ್ಲೆಯ ಜನತೆಯನ್ನುದ್ದೇಶಿಸಿ ರಾಜ್ಯೋತ್ಸವ ಸಂದೇಶ ನೀಡಲಿದ್ದಾರೆ. ಎಲ್ಲಾ ಕಾರ್ಯಕ್ರಮಗಳನ್ನು ಸುಗಮವಾಗಿ ನಡೆಸಲು ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಬೇಕು. ಲೋಪದೋಷಗಳುಂಟಾದಲ್ಲಿ ಸಂಬಂಧಿಸಿದ…
ತುಮಕೂರು ಹಿಂದಿನ ದಿನಗಳಲ್ಲಿನ ಓದಿಗೂ ಮತ್ತು ಇಂದಿನ ಓದಿಗೂ ವ್ಯತ್ಯಾಸ ಬಹಳ ಇದೆ. ಇಂದು ವೈವಿಧ್ಯಮಯ ಅವಕಾಶಗಳ ಆಗರವೇ ವಿದ್ಯಾರ್ಥಿಗಳ ಮುಂದಿದೆ. ಭಾರತ ಇಂದು 5ನೇ ದೊಡ್ಡ ಆರ್ಥಿಕತೆ ಹೊಂದಿದ ದೇಶ, 2028ರ ಹೊತ್ತಿಗೆ ಭಾರತ 3ನೇ ದೊಡ್ಡ ಆರ್ಥಿಕತೆ ಹೊಂದುವ ದೇಶವಾಗಿ ಹೊರಹೊಮ್ಮಲಿದೆ ಎಂದು, ಬೆಂಗಳೂರಿನ ಸೈಟ್ ಕೇರ್ ಆಸ್ಪತ್ರೆಯ ಸಹ ಸಂಸ್ಥಾಪಕರು ಮತ್ತು ಅಧ್ಯಕ್ಷರಾದ ಡಾ. ಫರ್ಜಾನ್ ಎಂಜಿನೀರ್ ಅವರು ಪ್ರತಿಪಾದಿಸಿದರು. ನಗರದ ಶ್ರೀ ಸಿದ್ಧಾರ್ಥ ವೈದ್ಯಕೀಯ ಕಾಲೇಜಿನ ಹೆಚ್.ಎಮ್.ಗಂಗಾಧರಯ್ಯ ಸ್ಮಾರಕ ಭವನದಲ್ಲಿ (ಅಕ್ಟೋಬರ್ 29 ರಂದು )ನಡೆದ ಸಾಹೇ(ಶ್ರೀ ಸಿದ್ಧಾರ್ಥ ಆಕಾಡೆಮಿ ಆಫ್ ಹೈಯರ್ ಎಜುಕೇಷನ್) ವಿಶ್ವವಿದ್ಯಾಲಯದ 11 ನೇ ಘಟಿಕೋತ್ಸದಲ್ಲಿ ಮಾತನಾಡಿದ ಅವರು, ಇಂದು ಭಾರತ ರಾಷ್ಟ್ರ ಸೇವಾ ಕ್ಷೇತ್ರ ಮಾತ್ರವಲ್ಲದೆ ಉತ್ಪಾದನಾ ರಂಗದಲ್ಲೂ ಮುಂಚೂಣಿಗೆ ಬಂದು ನಿಂತಿದೆ. ಬದಲಾಗುತ್ತಿರುವ ಸನ್ನಿವೇಶಗಳಿಗೆ ಅನುಗುಣವಾಗಿ ವಿದ್ಯಾರ್ಥಿಗಳನ್ನು ಪದವೀಧರರನ್ನಾಗಿ ಮಾತ್ರವಲ್ಲ ಕೌಶಲ್ಯವಂತರನ್ನಾಗಿ ಮಾಡುವ ಜವಾಬ್ದಾರಿ ವಿದ್ಯಾ ಸಂಸ್ಥೆಗಳ ಮೇಲಿದೆ ಎಂದರು. ಇಂದಿನ ವಿದ್ಯಾರ್ಥಿಗಳು ತಂತ್ರಜ್ಞಾನ, ಸಂಶೋಧನೆಗೂ ಹೆಚ್ಚಿನ ಮಹತ್ವವನ್ನು…
ತುಮಕೂರು ಬಿಜೆಪಿಯ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅಲ್ಪಸಂಖ್ಯಾತರ ಅಭಿವೃದ್ಧಿಗೆ ಭಾರಿ ಪ್ರಮಾಣದಲ್ಲಿ ಕೊಡುಗೆ ನೀಡಿ ಸೂಕ್ತ ಸ್ಥಾನಮಾನ ನೀಡಿ ಗೌರವ ನೀಡುತ್ತಿದೆ. ಬಿಜೆಪಿ ಬಗ್ಗೆ ಅಲ್ಪಸಂಖ್ಯಾತರು ಭಯ ಪಡುವುದು ಬೇಡ ಎಂದು ಬಿಜೆಪಿ ರಾಜ್ಯ ಅಲ್ಪಸಂಖ್ಯಾತರ ಮೋರ್ಚಾ ಉಪಾಧ್ಯಕ್ಷ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ನಜೀರ್ ಪಾಷ ತಿಳಿಸಿದರು. ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಅಲ್ಪಸಂಖ್ಯಾತರ ಮೋರ್ಚಾದ ನಗರ ಮಂಡಲ ಸಭೆಯಲ್ಲಿ ದೀನ್‍ದಯಾಳ್ ಉಪಾಧ್ಯಾಯ, ಶ್ಯಾಮ್‍ಪ್ರಕಾಶ ಮುಖರ್ಜಿ ಹಾಗೂ ಭಾರತಮಾತಾ ಭಾವಚಿತ್ರಕ್ಕೆ ಪುಷ್ಪ ನಮನ ಅರ್ಪಿಸಿ ಮಾತನಾಡುತ್ತಾ, ಬಿಜೆಪಿಯ ಡಬ್ಬಲ್ ಇಂಜಿನ್ ಸರ್ಕಾರಗಳು ಅಲ್ಪಸಂಖ್ಯಾತರ ಕ್ಷೇಮಾಭಿವೃದ್ಧಿಗೆ ಪ್ರಾಮುಖ್ಯತೆ ನೀಡಿ, ಅಲ್ಪಸಂಖ್ಯಾತ ಬಂಧುಗಳನ್ನು ಸಮಾಜದ ಮುಖ್ಯವಾಹಿನಿಗೆ ತೆಗೆದುಕೊಂಡು ಹೋಗುವಲ್ಲಿ ಯಶಸ್ವಿಯಾಗಿದೆ. ಅಲ್ಪಸಂಖ್ಯಾತ ಸಮಾಜದ ಕಡು ಬಡವರು, ವಿದ್ಯಾವಂತರು, ಮಹಿಳೆಯರು ಮತ್ತು ವಿದ್ಯಾಭ್ಯಾಸ ಮಾಡುವ ಮಕ್ಕಳಿಗೆ ಭರಪೂರದ ಕಲ್ಯಾಣ ಕಾರ್ಯಕ್ರಮಗಳ ಮೂಲಕ ಸಾವಿರಾರು ಕೋಟಿ ರೂ.ಗಳ ಅನುದಾನದ ಹಣವನ್ನು ನೀಡುತ್ತಿವೆ ಎಂದರು. ತುಮಕೂರು ಜಿಲ್ಲೆಯ ಎಲ್ಲಾ ಮಂಡಲ, ವಾರ್ಡ್, ಮೊಹಲ್ಲಾಗಳಲ್ಲಿ ಅಲ್ಪಸಂಖ್ಯಾತರ ಮೋರ್ಚಾಕ್ಕೆ ಕಾರ್ಯಕರ್ತರನ್ನು…
ಮಧುಗಿರಿ ತಾಲೂಕಿಗೆ ಆಗಮಿಸುತ್ತಿರುವ ಕೆಂಪೇಗೌಡ ರಥಯಾತ್ರೆಗೆ ಜನತೆ ಪಕ್ಷಾತೀತವಾಗಿ ಬೆಂಬಲ ನೀಡಬೇಕು ಎಂದು ಪೀಣ್ಯ ದಾಸರಹಳ್ಳಿ ಜೆಡಿಎಸ್ ಕಾರ್ಯಾಧ್ಯಕ್ಷ ಮುನೇಗೌಡ ಮನವಿ ಮಾಡಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು. ಕೆಂಪೇಗೌಡರು ಸರ್ವ ಧರ್ಮ ಸಹಿಷ್ಣುರಾಗಿದ್ದು, ನಾಡಿನ ಹೆಮ್ಮೆಯಾಗಿದ್ದಾರೆ. ಇಂತಹ ಮಹಟಿನೀಯರ ರಥಯಾತ್ರೆ ತಾಲೂಕಿಗೆ ಆಗಮಿಸುತ್ತುರುವುದು ನಮ್ಮ ಸುದೈವ. ಇಂತಹ ಅವಕಾಶ ಮತ್ತೆ ಬರುವುದಿಲ್ಲ. ಆದ್ದರಿಂದ ಈ ರಥ ಯಾತ್ರೆಯನ್ನು ಅದ್ದೂರಿಯಾಗಿ ಸ್ವಾಗತಿಸಬೇಕು. ರಥಯಾತ್ರೆ ಯಶಸ್ವಿಗೊಳಿಸುವ ಉದ್ದೇಶದಿಂದ ಕುಂಚಿಟಿಗ ವಕ್ಕಲಿಗರ ಸಂಘದ ಮೂಲಕ ಕೆಂಪೇಗೌಡರ ರಥಯಾತ್ರೆಗೆ ವೈಯಕ್ತಿಕವಾಗಿ 5 ಲಕ್ಷ ರೂಗಳನ್ನು ದೇಣಿಗೆಯಾಗಿ ನೀಡಲಾಗಿದೆ ಎಂದರು. ಬೆಂಗಳೂರಿನ ಬಾಗಲಗುಂಟೆ ಯ ಸುತ್ತಮುತ್ತ ಮಧುಗಿರಿ ತಾಲೂಕಿನ 17 ಸಾವಿರ ಮತದಾರರಿದ್ದು, ಈ ಭಾಗ ಮಿನಿ ಮಧುಗಿರಿಯಾಗಿದ್ದು, ಅವರ ಕಷ್ಟ ಸುಖಕ್ಕೆ ಸ್ಪಂದಿಸಿದ್ದು, ಅವರ ಮತ್ತು ಇಲ್ಲಿನ ಕುಂಚಿಟಿಗ ವಕ್ಕಲಿಗರ ಸಂಘದವರ ಆಹ್ವಾನದ ಮೇರೆಗೆ ಈ ರಥಯಾತ್ರೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದೇನೆ ಎಂದರು. ನೀವು ಜೆಡಿಎಸ್ ಪಕ್ಷದಿಂದ ಮಧುಗಿರಿ ವಿಧಾನಸಭಾ ಕ್ಷೇತ್ರದ…
ತುಮಕೂರು ನವೆಂಬರ್ 13 ರಂದು ತುಮಕೂರು ನಗರದ ಮಹಾವೀರ ಕಲ್ಯಾಣ ಮಂಟಪದಲ್ಲಿ ನಡೆಯಲಿರುವ ನೇಕಾರರ ಒಕ್ಕೂಟದ ರಾಜ್ಯ ಸಮಾವೇಶದ ಹಿನ್ನೇಲೆಯಲ್ಲಿ ಶನಿವಾರ ನೇಕಾರರ ಒಕ್ಕೂಟದ ರಾಜ್ಯಾಧ್ಯಕ್ಷ ಬಿ.ಎಸ್.ಸೋಮಶೇಕರ್ ಹಾಗೂ ಒಕ್ಕೂಟದ ಪದಾಧಿಕಾರಿಗಳು ಸಮಾವೇಶವನ್ನು ಯಶ್ವಸಿಗೊಳಿಸುವ ನಿಟ್ಟಿನಲ್ಲಿ ಪೂರ್ವಭಾವಿ ಸಭೆಯನ್ನು ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟದ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ರಾಜ್ಯಾಧ್ಯಕ್ಷ ಬಿ.ಎಸ್.ಸೋಮಶೇಖರ್,ನವೆಂಬರ್ 13 ರಂದು ತುಮಕೂರು ನಗರದಲ್ಲಿ ನೇಕಾರರ ರಾಜ್ಯ ಸಮಾವೇಶ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಹಮ್ಮಿಕೊಳ್ಳಲಾಗಿದೆ.ಇದು ರಾಜ್ಯ ಸಮಾವೇಶ ಆದ ಕಾರಣ ಇಡೀ ರಾಜ್ಯಾದ್ಯಂತ ಪ್ರವಾಸ ಕೈಗೊಂಡು, ಸಮಾವೇಶ ಯಶಸ್ವಿಗೊಳಿಸಲು ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗಿದೆ.ನಮ್ಮೊಂದಿಗೆ ತುಮಕೂರು ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟ, ತುಮಕೂರು ಜಿಲ್ಲಾ ನೇಕಾರರ ಸಮುದಾಯಗಳ ಒಕ್ಕೂಟ ಸಹ ಕೈಜೊಡಿಸಿದೆ.ಇದೇ ಮೊದಲ ಬಾರಿಗೆ ಪ್ರತಿಭಾಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು. ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟದ ಅಧ್ಯಕ್ಷ ಧನಿಯಕುಮಾರ್ ಮಾತನಾಡಿ,ರಾಜ್ಯದಲ್ಲಿ ನೇಕಾರರ ಕಷ್ಟ ಸುಖಃಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ನೇಕಾರರ ಒಕ್ಕೂಟ…
ತುಮಕೂರು ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮ. ಶ್ರೀ ವೀರಭದ್ರ ಸ್ವಾಮಿ ಗ್ರಾಮಾಂತರ ಪ್ರೌಢಶಾಲೆ. ಹರಳೂರು.ತುಮಕೂರು ತಾಲ್ಲೂಕು.ತುಮಕೂರು ಗ್ರಾಮಾಂತರ ಜಿಲ್ಲೆ. ಈ ಶಾಲೆಯಲ್ಲಿ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಕಾರ್ಯಕ್ರಮದಲ್ಲಿ ಎಸ್ ಗುರುಮೂರ್ತಿ ರವರು ಮುಖ್ಯ ಶಿಕ್ಷಕರು ಅಧ್ಯಕ್ಷತೆ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ವಿಜಯಕುಮಾರಿ ಪಾಲನೇತ್ರಯ್ಯ ರವರು. ಗ್ರಾಮ ಪಂಚಾಯಿತಿ ಸದಸ್ಯರು. ಹರಳೂರು. ಇವರು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದರು. ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ವಸ್ತ್ರ ವಿತರಣೆ ಮಾಡಿ . ವಿದ್ಯಾರ್ಥಿಗಳು ಜೀವನದಲ್ಲಿ ನಯ, ವಿನಯ, ಸಂಸ್ಕಾರಗಳನ್ನು ರೂಢಿಸಿಕೊಂಡು ದೇಶದ ಒಳ್ಳೆಯ ನಾಗರೀಕ ಪ್ರಜೆಗಳಾಗಿ, ಉತ್ತಮ ಅಧಿಕಾರಿಗಳಾಗಿ ಜನ ಸೇವೆ ಮಾಡಬೇಕು.ಶಾಲೆಗೆ.ತಂದೆ ತಾಯಿ ಯವರಿಗೆ ಕೀರ್ತಿ ತರಬೇಕೆಂದು ಕಿವಿ ಮಾತು ಹೇಳಿದರು. ಶಾಲೆಯ ವಿದ್ಯಾರ್ಥಿಗಳು ಮಾಡಿದ್ದ ವಿಜ್ಞಾನ ವಸ್ತು ಪ್ರದರ್ಶನದ ಹಲವಾರು ವಸ್ತುಗಳ ಬಗ್ಗೆ ಮಾಹಿತಿ ಪಡೆದರು.ವಿದ್ಯಾರ್ಥಿಗಳು ಬಹಳ ಶ್ರಮ ವಹಿಸಿ ಹಲವಾರು ವಸ್ತುಗಳನ್ನು ತಯಾರಿಸಿ ತಂದಿದ್ದರು. 8 ನೇ ತರಗತಿಯ ಪರಮೇಶ್ ತಯಾರಿಸಿದ್ದು ರಾಕೇಟ್ ಎಲ್ಲರೂ ಗಮನ ಸೆಳೆಯಿತು. ಸೌರಮಂಡಲ. ಮೆಣಸಿನ ಕಾಯಿ ಪುಡಿ…
ಭಾರತದ ಮೊದಲ ಗೃಹ ಮಂತ್ರಿ, ಭಾರತದ ಏಕೀಕರಣಕ್ಕಾಗಿ ಶ್ರಮಿಸಿದ ಧೀಮಂತ, ರಕ್ತರಹಿತ ಕ್ರಾಂತಿಯ ನೇತಾರ ಸರ್ದಾರ್ ವಲ್ಲಭಭಾಯಿ ಪಟೇಲ್‍ರವರು ಸುಮಾರು ಐನೂರಕ್ಕೂ ಹೆಚ್ಚು ಆಶ್ರಿತ ಸಂಸ್ಥಾನಗಳಲ್ಲಿ ಹರಿದು ಹಂಚಿ ಹೋಗಿದ್ದಂತಹ ಆಡಳಿತವನ್ನು ಸಮಗ್ರ ಭಾರತವೆಂಬ ಒಂದೇ ಚೌಕಟ್ಟಿನಲ್ಲಿ ತರಲು ಶಸ್ತ್ರ ಹಿಡಿಯದೆ ಶ್ರಮ ವಹಿಸಿ ಯಶಸ್ವಿಯಾದ ಧೀಮಂತರು. ಅಹರ್ನಿಶಿ ದೇಶಪ್ರೇಮಿ, ಸ್ವಾತಂತ್ರ್ಯ ಹೋರಾಟಗಾರರಾದ ಇವರು 1875 ರ ಅಕ್ಟೋಬರ್ 31 ರಂದು ಗುಜರಾತ್ ರಾಜ್ಯದ ನದಿಯಾಡ್ ಎಂಬ ಗ್ರಾಮದಲ್ಲಿ ರೈತ ಕುಟುಂಬವೊಂದರಲ್ಲಿ ಜನಿಸಿದರು. ವಿಠಲಭಾಯಿ ಪಟೇಲ್ ಇವರ ಸೋದರರು. ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಈ ಇಬ್ಬರೂ ಸೋದರರು ವಹಿಸಿದ ಪಾತ್ರ ಅವಿಸ್ಮರಣೀಯ. ಸರ್ದಾರ್ ವಲ್ಲಭಭಾಯಿ ಪಟೇಲ್‍ರವರು ಕಾನೂನು ಪದವೀಧರರಾಗಿ ವಕೀಲ ವೃತ್ತಿಯನ್ನು ಹಲವಾರು ವರ್ಷಗಳ ಕಾಲ ನಿರ್ವಹಿಸಿ ಯಶಸ್ಸು ಕಂಡವರು. ನಿರಪರಾಧಿಗಳನ್ನು ಶಿಕ್ಷೆಯಿಂದ ತಪ್ಪಿಸುವಲ್ಲಿ ಪಟೇಲರು ಹೆಚ್ಚು ಶ್ರಮ ವಹಿಸುತ್ತಿದ್ದರು. ಒಂದು ಸಲ ಅವರು ನ್ಯಾಯಾಲಯದಲ್ಲಿ ಕ್ರಿಮಿನಲ್ ಮೊಕದ್ದಮೆ ಕುರಿತು ವಾದಿಸುತ್ತಿದ್ದಾಗ ಅವರ ಹೆಂಡತಿ ತೀರಿಕೊಂಡ ಸುದ್ದಿ ಬಂದಿತಂತೆ. ಅವರು ಆ…
ತುಮಕೂರು ಕರ್ನಾಟಕ ರತ್ನ ಪವರ್‍ಸ್ಟಾರ್ ಪುನೀತ್ ರಾಜಕುಮಾರ್ ನಟಿಸಿರುವ ಕೊನೆಯ ಸಿನಿಮಾ ಗಂಧದಗುಡಿ ಸಾಕ್ಷ್ಯಚಿತ್ರ ರೂಪದಲ್ಲಿ ತೆರೆಗೆ ಅಪ್ಪಳಿಸುತ್ತಿದ್ದಂತೆ ಮಾಜಿ ಸಚಿವರಾದ ಸೊಗಡು ಶಿವಣ್ಣ ಅವರ ಕುಟುಂಬ ನಗರದ ಎಸ್. ಮಾಲ್‍ನಲ್ಲಿ ಮಾಧ್ಯಮ ಪ್ರತಿನಿಧಿಗಳು ಹಾಗೂ ಸ್ನೇಹಿತ ವರ್ಗಕ್ಕೆ ಗಂಧದ ಗುಡಿ ಸಾಕ್ಷ್ಯಚಿತ್ರವನ್ನು ವೀಕ್ಷಿಸಲು ಉಚಿತ ವ್ಯವಸ್ಥೆ ಮಾಡುವುದರ ಜತೆಗೆ ಸಾಕ್ಷ್ಯಚಿತ್ರ ವೀಕ್ಷಿಸಿದ ನಂತರ ಉಚಿತವಾಗಿ ಗಂಧದ ಸಸಿಗಳನ್ನು ವಿತರಣೆ ಮಾಡಿ ಪರಿಸರ ಕಾಳಜಿ ಮೆರೆದಿದ್ದಾರೆ. ಚಿತ್ರ ವೀಕ್ಷಣೆಯ ನಂತರ ಸಸಿಗಳನ್ನು ವಿತರಿಸಿ ಮಾತನಾಡಿದ ಮಾಜಿ ಸಚಿವರಾದ ಸೊಗಡು ಶಿವಣ್ಣ ಅವರ ಪುತ್ರ ಕುಮಾರಸ್ವಾಮಿ, ನಟ ಪುನೀತ್ ರಾಜ್‍ಕುಮಾರ್ ಅವರು ನಮ್ಮನ್ನು ಅಗಲಿ ಒಂದು ವರ್ಷ ಸಂದಿದ್ದು, ಅವರ ಗಂಧದ ಗುಡಿ ಸಾಕ್ಷ್ಯಚಿತ್ರದ ಮೂಲಕ ಜನರಲ್ಲಿ ಪರಿಸರ ಕಾಳಜಿ ಮೂಡಿಸುವ ಕೆಲಸ ಮಾಡಿದ್ದಾರೆ. ಇದು ಅವರು ಸಮಾಜಕ್ಕೆ ಒಂದು ಸ್ಪಷ್ಟ ಸಂದೇಶ ನೀಡಿದ್ದಾರೆ ಎಂದರು. ಗಂಧದಗುಡಿ ಸಾಕ್ಷ್ಯಚಿತ್ರದ ಮೂಲಕ ನಾಡಿನ ನೆಲ, ಜಲ, ಅರಣ್ಯ ಸಂಪತ್ತು ಪ್ರವಾಸಿ ತಾಣಗಳನ್ನು ಕಣ್ಮುಂದೆ ತಂದು…










