ತುಮಕೂರು ಉತ್ತಮ ಆಡಳಿತ ಸುಸ್ಥಿತಿಯಲ್ಲಿರಲು ಮಾಹಿತಿ ಹಕ್ಕು ಕಾಯ್ದೆ ಜನರಿಗೆ ಸಿಕ್ಕಿರುವ ಪ್ರಮುಖ ಅಸ್ತ್ರ ಎಂದು ಎಸ್ಪಿ ರಾಹುಲ್ ಕುಮಾರ್ ಶಹಪೂರವಾಡ್ ತಿಳಿಸಿದರು. ಕನ್ನಡಭವನದಲ್ಲಿ ನಡೆದ ಮಾಹಿತಿ ಹಕ್ಕು ದಿನಾಚರಣೆ ಮತ್ತು ಕಾನೂನು ಅರಿವು ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಆಡಳಿತದಲ್ಲಿ ಜನರ ಸಹಭಾಗಿತ್ವದಿಂದ ಆಡಳಿತದಲ್ಲಿದ್ದ ಕತ್ತಲನ್ನು ದೂರ ಮಾಡಲು ಮಾಹಿತಿ ಹಕ್ಕು ಕಾರಣವಾಗಿದೆ ಎನ್ನುವುದು ಸತ್ಯ ಎಂದರು. ಪ್ರಜಾಪ್ರಭುತ್ವದ ಯಶಸ್ವಿಗೊಳಿಸಲು ಜನರ ಸಹಭಾಗಿತ್ವ ಅವಶ್ಯಕ, ಸಹಭಾಗಿತ್ವ ಇಲ್ಲದೇ ಪ್ರಜಾಪ್ರಭುತ್ವ ಯಶಸ್ವಿಯಾಗಿಲ್ಲ ಅದೇ ಕಾರಣಕ್ಕಾಗಿ ಮಾಹಿತಿ ಹಕ್ಕು ಅಧಿನಿಯಮವನ್ನು ಜಾರಿಗೆ ತರಲಾಯಿತು, ಆಡಳಿತದ ಯಂತ್ರ ಪಾರದರ್ಶಕತೆ ಕಾಯ್ದುಕೊಳ್ಳಲು ಮಾಹಿತಿ ಹಕ್ಕು ನೆರವಾಗಿದೆ ಎಂದರು. ಲೋಕಾಯುಕ್ತ ವಲೀಬಾಷ ಅವರು ಮಾತನಾಡಿ, ಮಾಹಿತಿ ಹಕ್ಕು ಕಾರ್ಯಕರ್ತರು ಗ್ರಾಮೀಣ ಭಾಗದಲ್ಲಿಯೂ ಅರಿವು ಮೂಡಿಸುವ ಮೂಲಕ ಮಾಹಿತಿ ಹಕ್ಕನ್ನು ಬಲಪಡಿಸಬೇಕು, ಮಾಹಿತಿ ಹಕ್ಕು ಕಾಯ್ದೆಯ ಬಗ್ಗೆ ಅರಿವು ಮೂಡಿದಾಗ ಮಾತ್ರ ಪಾರದರ್ಶಕ ಆಡಳಿತ ಸಾಮಾನ್ಯರಿಗೆ ದೊರೆಯಲಿದೆ ಎಂದರು. ಮಾಹಿತಿ ಹಕ್ಕು ಕಾರ್ಯಕರ್ತರ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ…
Author: News Desk Benkiyabale
ತುಮಕೂರು ತುಮಕೂರು ವಿಶ್ವವಿದ್ಯಾಲಯದಿಂದ ನಡೆಸುತ್ತಿರುವ ಸ್ನಾತಕೋತ್ತರ ಪದವಿ ಹಾಸ್ಟೆಲ್ ನಲ್ಲಿ ವಿದ್ಯಾರ್ಥಿಗಳಿಗೆ ತೆಂಗಿನ ಚಿಪ್ಪಿನ ಸೌಟ್ ನಲ್ಲಿ ಆಹಾರ ಬಡಿಸಿರುವುದನ್ನು ಖಂಡಿಸಿ ಎಸ್‍ಎಫ್‍ಐ ನೇತೃತ್ವದಲ್ಲಿ ವಿದ್ಯಾರ್ಥಿಗಳು ಕುಲಪತಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ಪ್ರತಿಭಟನೆ ಸ್ಥಳಕ್ಕೆ ಆಗಮಿಸಿದ ಕುಲಸಚಿವ ಶಿವಚಿತ್ತಪ್ಪ ಅವರು ವಿದ್ಯಾರ್ಥಿಗಳ ಸಮಸ್ಯೆಗಳನ್ನು ಆಲಿಸಿ ಸಮಸ್ಯೆಗೆ ಪರಿಹಾರ ನೀಡಲಾಗುವುದು. ಈ ಅವಾಂತರಕ್ಕೆ ಕಾರಣವಾಗಿರುವ ಅಡುಗೆ ಸಿಬ್ಬಂದಿಯ ವಿರುದ್ದ ಶಿಸ್ತುಕ್ರಮ ಕೈಗೊಳ್ಳಲಾಗುವುದು. ಯಾವುದೇ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಗಮನಹರಿಸಲಾಗುವುದು. ಹಾಸ್ಟೆಲ್ ಸಿಬ್ಬಂದಿ ಮತ್ತು ಮೇಲ್ವಿಚಾರಕರನ್ನು ಬದಲಾವಣೆ ಮಾಡಲು ಸೂಚಿಸಲಾಗಿದೆ ಎಂದು ತಿಳಿಸಿದರು. ಕಳೆದ ಮೂರು ದಿನಗಳ ಹಿಂದೆ ಸಾಂಬಾರ್ ಬಡಿಸುವ ಸ್ಟೀಲ್ ಸೌಟ್ ನಾಪತ್ತೆಯಾಗಿದೆ ಎಂದು ಭಟ್ಟರು ತೆಂಗಿನ ಚಿಪ್ಪಿನಲ್ಲೇ ವಿದ್ಯಾರ್ಥಿಗಳಿಗೆ ಆಹಾರ ಮತ್ತು ಸಾಂಬರು ಬಡಿಸಿದ್ದಾರೆ. ಮೂರು ದಿನಗಳಿಂದಲೂ ತೆಂಗಿನ ಚಿಪ್ಪಿನಲ್ಲೇ ಆಹಾರ ನೀಡುವುದನ್ನು ಖಂಡಿಸಿ ಎಸ್‍ಎಫ್‍ಐ ನೇತೃತ್ವದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ ನಿಲಯ ಪಾಲಕರು ಪ್ರತಿದಿನ ಹಾಸ್ಟೆಲ್‍ಗೆ ಭೇಟಿ ನೀಡಿ ಸಮಸ್ಯೆಗಳನ್ನು ಆಲಿಸಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ…
ತುಮಕೂರು ಕೊರಟಗೆರೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ತುಮಕೂರು ತಾಲ್ಲೂಕಿನ ಕೋರಾ ಹೋಬಳಿ ಹಂಚಿಹಳ್ಳಿಯಲ್ಲಿ ಆಶ್ರಯ ಯೋಜನೆಯ ನಿವೇಶನಗಳು ಹಂಚಿಕೆಯಾಗಿದ್ದರೂ ಸಹ ಈ ವಿಚಾರದಲ್ಲಿ ಗೊಂದಲಗಳು ಸೃಷ್ಠಿಯಾಗಿವೆ. ಕೂಡಲೇ ಅಧಿಕಾರಿಗಳು ಗಮನ ಹರಿಸಿ ಈ ನಿವೇಶನ ವಿಚಾರದಲ್ಲಿ ಉಂಟಾಗಿರುವ ಗೊಂದಲಗಳನ್ನು ನಿವಾರಿಸಲು ಕ್ರಮ ಕೈಗೊಳ್ಳುವಂತೆ ಮಾಜಿ ಉಪಮುಖ್ಯಮಂತ್ರಿ ಹಾಗೂ ಕೊರಟಗೆರೆ ಶಾಸಕರಾದ ಡಾ. ಜಿ. ಪರಮೇಶ್ವರ್ ಸೂಚನೆ ನೀಡಿದರು. ಕೊರಟಗೆರೆ ವಿಧಾನಸಭಾ ಕ್ಷೇತ್ರಕ್ಕೆ ಒಳಪಡುವ ತುಮಕೂರು ತಾಲ್ಲೂಕು ಕೋರಾ ಹೋಬಳಿಯ ಹಂಚಿಹಳ್ಳಿ ಗ್ರಾಮ ಮಳೆಯಿಂದಾಗಿ ಜಲಾವೃತಗೊಂಡಿದ್ದ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಅಲ್ಲಿನ ಜನರಿಗೆ ಆಶ್ರಯ ಯೋಜನೆಯ ನಿವೇಶನ ಗೊಂದಲ ಸೇರಿದಂತೆ ಮೂಲಭೂತ ಸೌಕರ್ಯಗಳಿಂದಲೂ ವಂಚಿತರಾಗಿರುವುದು ಕಂಡು ಬಂದಿದೆ. ಕೂಡಲೇ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿ ಹಂಚಿಹಳ್ಳಿ ಗ್ರಾಮದಲ್ಲಿ ಆಶ್ರಯ ಯೋಜನೆಯ ನಿವೇಶನಗಳಲ್ಲಿ ಉಂಟಾಗಿರುವ ಗೊಂದಲವನ್ನು ಬಗೆಹರಿಸಬೇಕು ಎಂದು ತಾಕೀತು ಮಾಡಿದರು. ಇಲ್ಲಿನ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಕೋರಾ ಹೋಬಳಿಯ ಹಂಚಿಹಳ್ಳಿ ಆಶ್ರಯ ಯೋಜನೆಗೆ ಸಂಬಂಧಪಟ್ಟಂತೆ ನಿವೇಶನಗಳ ಗೊಂದಲ, ಅಭಿವೃದ್ಧಿ ಕಾರ್ಯಗಳ…
ತುಮಕೂರು ಕರುನಾಡ ವಿಜಯಸೇನೆ ತುಮಕೂರು ಜಿಲ್ಲಾ ಘಟಕದ ವತಿಯಿಂದ ಕರುನಾಡಿಗೆ ಕರ್ನಾಟಕ ಎಂದು ನಾಮಕರಣ ಮಾಡಿದ 50ನೇ ವರ್ಷದ ಸವಿನೆನಪಿಗಾಗಿ ನವೆಂಬರ್ 05 ಮತ್ತು 06 ರಂದು ಕರುನಾಡ ಸಾಂಸ್ಕøತಿಕ ಹಬ್ಬ ಎಂಬ ಶಿರ್ಷೀಕೆ ಅಡಿಯಲ್ಲಿ ಸಾಂಸ್ಕತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ವಿಜಯಸೇನೆಯ ರಾಜ್ಯಾಧ್ಯಕ್ಷ ಹೆಚ್.ಎನ್.ದೀಪಕ್ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,ನಗರದ ಸರಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆಯುವ ಎರಡು ದಿನಗಳ ಕರುನಾಡ ಸಾಂಸ್ಕøತಿಕ ಹಬ್ಬದಲ್ಲಿ ನಾಡಿನ ಹಿರಿಯ ಸಾಹಿತಿಗಳು, ಕಲಾವಿದರು,ಚಲನಚಿತ್ರ ನಟ, ನಟಿಯರು ಹಾಗು ಸ್ಥಳೀಯ ರಾಜಕಾರಣಿಗಳು ಭಾಗವಹಿಸಲಿದ್ದಾರೆ ಎಂದರು. ನವೆಂಬರ್ 05ರ ಶನಿವಾರ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ನಾಡಿನ ಹಿರಿಯ ಸಾಹಿತಿಯೊಬ್ಬರು ಭಾಗವಹಿಸ ಲಿದ್ದಾರೆ.ಇವರೊಂದಿಗೆ ಕನ್ನಡ ಭಾಷೆ,ನೆಲ,ಜಲ ವಿಚಾರವಾಗಿ ದುಡಿದ ಹಿರಿಯರನ್ನು ಗೌರವಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ಉದ್ಘಾಟನಾ ಕಾರ್ಯಕ್ರಮದ ನಂತರ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ನೇತೃತ್ವದಲ್ಲಿ ಹೆಸರಾಂತ ಗಾಯಕ, ಗಾಯಕಿಯರು, ಕಾಮಿಡಿ ಕಿಲಾಡಿಗಳ ಖ್ಯಾತಿಯ ಕಲಾವಿದರು ಗಾಯನ, ನೃತ್ಯ ಕಾರ್ಯಕ್ರಮ ನಡೆಯಲಿದೆ ಎಂದು ಹೆಚ್.ಎನ್.ದೀಪಕ್ ತಿಳಿಸಿದರು. ನವೆಂಬರ್…
ತುರುವೇಕೆರೆ ಹತ್ತು ಹದಿನೈದು ವರ್ಷಗಳಿಂದ ಹಿಡಿದಿದ್ದ ಶನಿಯು ನಾಲ್ಕು ವರ್ಷಗಳ ಹಿಂದೆ ಬಿಟ್ಟಿರುವ ಕಾರಣ ತಾಲೂಕು ಅಭಿವೃದ್ದಿ ಹೊಂದಿದೆ ಎಂದು ತುರುವೇಕೆರೆ ಕ್ಷೇತ್ರ ಶಾಸಕ ಮಸಾಲೆ ಜಯರಾಮ್ ತಿಳಿಸಿದರು ತಾಲೂಕಿನ ಕುಣಾಘಟ್ಟ ಗೊಲ್ಲರಹಟ್ಟಿ ಗ್ರಾಮದಲ್ಲಿ ರಸ್ತೆ ಗುದ್ದಲಿ ಪೂಜೆ ಹಾಗೂ ಜಲ್ ಜೀವನ್ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು ನರೇಂದ್ರ ಮೋದಿಯವರ ಕನಸಿನ ಜಲ್ ಜೀವನ್ ಕಾಮಗಾರಿಗಳನ್ನು 6ಕೋಟಿ ವೆಚ್ಚದಲ್ಲಿ ಇಡಿ ತುರುವೇಕೆರೆ ಕ್ಷೇತ್ರಕ್ಕೆ ಸಮಾನವಾಗಿ ಯೋಜನೆಯನ್ನು ರೂಪಿಲಾಗಿದೆ ಎಂದು ತಿಳಿಸಿದ ಅವರು ತಾಲೂಕಿನಲ್ಲಿ 72ಗೊಲ್ಲರಹಟ್ಟಿಗಳು ಇದ್ದು, ಇಲ್ಲಿಯವರೆವಿಗೂ ಗೆದ್ದಂತಹ ಜನಪ್ರತಿನಿಧಿಗಳು ಗೊಲ್ಲರ ಹಟ್ಟಿಗಳಿಗೆ ಯಾವುದೇ ಸೌಲಭ್ಯ ನೀಡದೆ ಅವರನ್ನು ಕತ್ತಲೆಯಲ್ಲಿ ಇರುವಂತೆ ಮಾಡಿರುವುದು ವಿಷಾದನೀಯ ನನ್ನ ಅವಧಿಯ ನಾಲ್ಕು ವರ್ಷ ಅವಧಿಯಲ್ಲೇ ಗೊಲ್ಲರ ಹಟ್ಟಿಗಳಿಗೆ ಸಿಗಬೇಕಾದ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಇದರಿಂದ ತಳಮಟ್ಟದ ಸಮುದಾಯಕ್ಕೂ ಎಲ್ಲಾ ಸೌಲಭ್ಯಗಳನ್ನು ನನ್ನ ಅವಧಿಯಲ್ಲಿ ಕಲ್ಪಿಸಲಾಗಿದೆ ಎಂದು ತಿಳಿಸಿದರು. ನನ್ನ ತಾಲೂಕಿನ ಕಲ್ಲೂರು ಕಲ್ಲೂರು ಕ್ರಾಸ್, ದಂಡಿನಶಿರ, ಬನಸಂದ್ರ ಗ್ರಾಮಗಳ ಅಭಿವೃದ್ಧಿಗೆ 25…
ಪಾವಗಡ ತಾಲ್ಲೂಕಿನ ಸಿಕೆ ಪುರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಕೊತ್ತೂರು ಗ್ರಾಮದ ಸಣ್ಣ ನೀರಾವರಿ ಇಲಾಖೆಗೆ ಸೇರಿದ ಕರಿಯಣ್ಣನಕೆರೆ ತುಂಬಿ ಹರಿಯುತ್ತಿದ್ದು ಈ ಕೆರೆಗೆ ಆಂಧ್ರಪ್ರದೇಶದ ಕಾಲುವೆ ನೀರು ಯಥೇಚ್ಛವಾಗಿ ಹರಿಯುತ್ತಿರುವುದರಿಂದ ಎರಡು ಕೊಡಿಗಳಲ್ಲಿಯೂ ಸಹ 3 ರಿಂದ 4 ಅಡಿ ನೀರು ಹರಿಯುತ್ತಿದ್ದು ಸುಮಾರು 8 ರಿಂದ 10 ಹಳ್ಳಿಗಳ ಸಂಪರ್ಕ ಸಂಪೂರ್ಣ ಸ್ಥಗಿತಗೊಂಡಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ. ಈ ವೇಳೆ ಕೊತ್ತೂರು ಗ್ರಾಮದ ಮುಖಂಡರಾದ ಕೊಂಡಪ್ಪನವರು ಪತ್ರಿಕೆಯೊಂದಿಗೆ ಪ್ರತಿಕ್ರಿಸುತ್ತಾ , ಸುಮಾರು ಒಂದು ವಾರದಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಹಾಗೂ ಆಂಧ್ರಪ್ರದೇಶದ ಶಾಶ್ವತ ನೀರಾವರಿ ಹಾಗೂ ಕುಡಿಯುವ ನೀರಿನ ಯೋಜನೆಗಾಗಿ ನಿರ್ಮಿಸಿರುವ ಕಾಲುವೆಯಿಂದ ಯಥೇಚ್ಛವಾಗಿ ಕರಿಯಣ್ಣನ ಕೆರೆಗೆ ಹರಿತಿರುವುದರಿಂದ ಈ ಕೆರೆ ಅಪಾಯದ ಅಂಚಿನಲ್ಲಿದೆ. ಮತ್ತು ಈ ನೀರು ರಸ್ತೆ ಮೇಲೆ ಹರಿಯುವುದರಿಂದ ಆಂಧ್ರಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಕಡಿತಗೊಂಡಿದ್ದು ಹಿರಿತಿರ್ಪಿ, ದಾಸರಹಳ್ಳಿ ,ಕರೆಕೆರೆ ,ಹೆಚ್ ಗೊಲ್ಲರಹಟ್ಟಿ , ನಾಗೇನಹಳ್ಳಿ, ಮಾರ್ಗವಾಗಿ ಕರ್ನಾಟಕದ ಹಿರಿಯೂರು ಮುಖ್ಯ ರಸ್ತೆಯ…
ತುಮಕೂರು ಘನ ಕರ್ನಾಟಕ ಸರ್ಕಾರ ವಿವಿಧ ಅಭಿವೃದ್ಧಿ ನಿಗಮಗಳ ಅನೇಕ ಯೋಜನೆಗಳನ್ನು ಘೋಷಣೆ ಮಾಡಿ ಆಯಾ ವರ್ಗ, ಸಮುದಾಯದ ವಿದ್ಯಾವಂತ ನಿರುದ್ಯೋಗ ಯುವಕ ಯುವತಿಯರಿಗೆ ಉಪ-ಜೀವನ ನಿರ್ವಹಣೆಗಾಗಿ ಸಹಕಾರ ನೀಡಿದ್ದು ಸಮೃದ್ಧಿ ಯೋಜನೆ ನಿರುದ್ಯೋಗ ಯುವಕ ಯುವತಿಯರಿಗೆ ಉಪಜೀವನ ಕಟ್ಟಿಕೊಳ್ಳುವಲ್ಲಿ ಸಹಕಾರಿಯಾಗಲಿದ್ದು ಇದನ್ನು ಸದ್ಬಳಕೆ ಮಾಡಿಕೊಂಡು ಪರಿಶಿಷ್ಟ ಜಾತಿಯ ಯುವಕ-ಯುವತಿಯರು ಆರ್ಥಿಕವಾಗಿ ಸಬಲೀಕರಣ ಹೊಂದಬೇಕು ಎಂದು ನಗರ ಶಾಸಕ ಜ್ಯೋತಿ ಗಣೇಶ್ ಅವರು ತಿಳಿಸಿದರು. ನಗರದ ರೈಲ್ವೆ ಸ್ಟೇಷನ್ ರಸ್ತೆಯ ಪ್ರಥಮ ದರ್ಜೆ ಕಾಲೇಜುಗಳ ಬಳಿ ಆದಿಜಾಂಬವ ಅಭಿವೃದ್ಧಿ ನಿಗಮದಿಂದ ಸಮೃದ್ಧಿ ಯೋಜನೆಯಡಿ ಮಂಜೂರಾದ ಮಿಲ್ಕ್ ವೇ ಎಕ್ಸ್‍ಪ್ರೆಸ್ ಫ್ರಾಂಚೈಸಿಯನ್ನ ಉದ್ಘಾಟಿನೆ ಮಾಡಿ ನಂತರ ಮಾತನಾಡಿದ ಶಾಸಕರು ಮರಳೂರಿನ ಫಲಾನುಭವಿ ಶ್ರೀಕಾಂತ ಬಿನ್ ಕೋದಂಡರಾಮ ಎನ್ನುವವರು 2018- 19 ನೇ ಸಾಲಿನಲ್ಲಿ ಸಮೃದ್ಧಿ ಯೋಜನೆಯಡಿ ಅರ್ಜಿ ಸಲ್ಲಿಸಿ ಅರ್ಹತೆ ಆಧಾರದ ಮೇಲೆ ಸರ್ಕಾರ ಮಟ್ಟದಲ್ಲಿ ಫಲಾನುಭವಿಯಾಗಿ ಆಯ್ಕೆಯಾಗಿ ಜೀವನ ರೂಪಿಸಿಕೊಳ್ಳಲು ಸರಬರಾಜು ಫ್ರಾಂಚೈಸಿಯನ್ನು ಆಯ್ಕೆ ಮಾಡಿಕೊಂಡಿಕೊಂಡಿದ್ದಾರೆ. ಆದಿಜಾಂಬವ ಅಭಿವೃದ್ಧಿ ನಿಗಮವು ಫಲಾನುಭವಿಯ…
ತುಮಕೂರು ತುಮಕೂರು ತಾಲ್ಲೂಕಿನ ಹೆಬ್ಬಾಕದಲ್ಲಿ ವಾರದಿಂದ ಬಿದ್ದ ಮಳೆಗೆ ಮನೆಯೊಂದು ಕುಸಿದು ಬಿದ್ದ ಪರಿಣಾಮ ಕುಟುಂಬವೊಂದು ಬೀದಿ ಪಾಲಾದರೂ ಗ್ರಾಮ ಪಂಚಾಯಿತಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡದೆ ನಿರ್¯ಕ್ಷ್ಯ ತೋರಿದ್ದರಿಂದ ಕುಟುಂಬ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ತುಮಕೂರು ತಾಲ್ಲೂಕಿನ ದಲಿತ ಕಾಲೋನಿಯ ದೊಡ್ಡಯ್ಯ ಮತ್ತು ಲಕ್ಷ್ಮಮ್ಮ ಅವರ ಮನೆಯು ವಾರದಿಂದ ಬಿದ್ದ ವಿಪರೀತ ಮಳೆಗೆ ಮಂಗಳವಾರ ರಾತ್ರಿ ಕುಸಿದು ಬಿದಿದ್ದು, ದಂಪತಿಗಳಿಬ್ಬರು ಆ ರಾತ್ರಿ ಮಗನ ಮನೆಗೆ ಹೋಗಿದ್ದರಿಂದ ಪ್ರಾಣಾಪಯದಿಂದ ಪಾರಾಗಿದ್ದಾರೆ. ಮಂಗಳವಾರ ರಾತ್ರಿಯೇ ಮನೆ ಕುಸಿದಿದ್ದರೂ, ಈ ಸಂಬಂಧ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ವಿಷಯ ಮುಟ್ಟಿಸಿದ್ದರೂ ಇದುವರೆವಿಗೂ ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿಲ್ಲ. ದಂಪತಿಗಳಿಬ್ಬರೂ ಈಗ ಬೀದಿ ಪಾಲಾಗಿದ್ದು, ಮನೆಯ ವಸ್ತುಗಳೆಲ್ಲಾ ಮಣ್ಣಿನಡಿಯಲ್ಲಿ ಸೇರಿ ಹೋಗಿವೆ. ಸಂಬಂಧ ಪಟ್ಟ ಅಧಿಕಾರಿಗಳು ಬುಧವಾರ ಬೆಳಿಗ್ಗೆಯಿಂದ ಸ್ಥಳಕ್ಕೆ ಆಗ ಬರುತ್ತೇವೆ-ಈಗ ಬರುತ್ತೇವೆ ಎಂದು ಕಾಲ ದೂಡುತ್ತಿದ್ದಾರೆ. ಜಿಲ್ಲಾಧಿಕಾರಿಗಳು ಎಲ್ಲಿಯೇ ಮಳೆಗೆ ಅನಾಹುತ ಸಂಬಂಧಿಸಿರೂ ಕೂಡಲೇ ಸ್ಪಂಧಿಸಲು ಸೂಚಿಸಿದ್ದರೂ ಗ್ರಾಮ ಪಂಚಾಯಿತಿ…
ತುಮಕೂರು ಕಲ್ಪತರುನಾಡಿನಲ್ಲಿ ಬಿಟ್ಟೂ ಬಿಡದೆ ಧಾರಕಾರವಾಗಿ ಸುರಿಯುತ್ತಿರುವ ರಣ ರಕ್ಕಸ ವರುಣನ ರಣಾರ್ಭಟ ಅವಾಂತರಗಳನ್ನು ಸೃಷ್ಠಿಸಿದ್ದು, ಪೂನಾ-ಬೆಂಗಳೂರು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ-48 ಸಂಪೂರ್ಣ ಮುಳುಗಡೆಯಾಗಿ ಈ ರಸ್ತೆಯಲ್ಲಿ ನದಿಯಂತೆ ನೀರು ಹರಿದಿದೆ. ರಾತ್ರಿ ಸುರಿದ ರಣಚಂಡಿ ಮಳೆಗೆ ಹೆಬ್ಬಾಕ ಅಮಾನಿಕೆರೆ ಒಳ ಮತ್ತು ಹೊರ ಹರಿವು ಜಾಸ್ತಿಯಾಗಿ ರಾಷ್ಟ್ರೀಯ ಹೆದ್ದಾರಿ-40 ಹಾಗೂ ಅಂಚಿಹಳ್ಳಿ ಗ್ರಾಮ ಜಲಾವೃತವಾಗಿದೆ. ರಣರಕ್ಕಸ ಮಳೆಯಿಂದಾಗಿ ಊರುಕೆರೆ ಮತ್ತು ಕೋರ ನಡುವೆ ರಾಷ್ಟ್ರೀಯ ಹೆದ್ದಾರಿ-48 ಸಂಪೂರ್ಣ ಜಲಾವೃತಗೊಂಡಿರುವುದರಿಂದ ಸುಮಾರು 4 ಕಿಲೋ ಮೀಟರ್ ವರೆಗೆ ಮಳೆ ನೀರು ತುಂಬಿ ವಾಹನಗಳು ಸಂಚರಿಸಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಹೆಬ್ಬಾಕ ಮತ್ತು ಅಂಚಿಹಳ್ಳಿ ಗ್ರಾಮದ ಗ್ರಾಮಸ್ಥರು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಹೊರಗೆ ಹೋಗಲು ಸಾಧ್ಯವಾಗದೆ ನೀರಿನ ಅಬ್ಬರಕ್ಕೆ ತತ್ತರಿಸುವಂತಾಗಿದೆ. ಹೆಬ್ಬಾಕ ಅಮಾನಿಕೆರೆ ಅಪಾಯಮಟ್ಟ ಮೀರಿ ಹರಿಯುತ್ತಿರುವುದರಿಂದ ಹೆಬ್ಬಾಕ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಜನತೆ ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಗ್ರಾಮಸ್ಥರಿಗೆ ಜಲದಿಗ್ಬಂಧನ ಹೆಬ್ಬಾಕ ಅಮಾನಿಕೆರೆ ಅಪಾಯಮಟ್ಟ ಮೀರಿ ಹರಿಯುತ್ತಿರುವುದರಿಂದ ಹೆಬ್ಬಾಕ ಮತ್ತು ಊರುಕೆರೆ ನಡುವೆ…
ತುಮಕೂರು ವಿಶ್ವವಿದ್ಯಾನಿಯದಿಂದ ಶೈಕ್ಷಣಿಕ ಮತ್ತು ಆಡಳಿತಾತ್ಮಕ ಅಧ್ಯಯನಕ್ಕಾಗಿ ವಿವಿಧ ವಿಶ್ವವಿದ್ಯಾನಿಲಯಗಳ ಭೇಟಿ ಮಾಡುವ ನಿಟ್ಟಿನಲ್ಲಿ ಸಿಂಡಿಕೇಟ್ ಸದಸ್ಯರು ಉತ್ತರಕಾಂಡ್ ನ ಡೂನ್ ವಿಶ್ವವಿದ್ಯಾನಿಲಯಕ್ಕೆ ಭೇಟಿ ನೀಡಿದ್ದಾರೆ. ಡೂನ್ ವಿಶ್ವವಿದ್ಯಾನಿಲಯದ ಕುಲಸಚಿವರಾದ ಡಾ. ಮಂಗಲ್ ಸಿಂಗ್ ಮಂಡ್ರವಾಲ್ ಅವರನ್ನು ಭೇಟಿಮಾಡಿ ಹಲವು ಆಡಳಿತಾತ್ಮಕ ವಿಷಯಗಳ ಬಗ್ಗೆ ಸುದೀರ್ಘವಾದ ಚರ್ಚೆಯನ್ನು ನಡೆಸಿ ನಂತರ ಕುಲಪತಿಗಳಾದ ಪ್ರೊ. ಸುರೇಖ ದಂಗ್‍ವಾಲ್ ಅವರೊಂದಿಗೆ ಮಾಹಿತಿ ವಿನಿಮಯ ಮಾಡಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ವಿಶ್ವವಿದ್ಯಾನಿಲಯದ ಬೋಧಕ ಸಿಬ್ಬಂದಿ ಮತ್ತು ಪ್ರಾಚಾರ್ಯರನ್ನೊಳಗೊಂಡ ವಿಶೇಷ ಸಭೆಯನ್ನು ಕರೆದು ಶೈಕ್ಷಣಿಕ ಮತ್ತು ಆಡಳಿತಾತ್ಮಕ ವಿಷಯಗಳ ಬಗ್ಗೆ ಚರ್ಚಿಸಲಾಯಿತು. ಈ ಸಂದರ್ಭದಲ್ಲಿ ಪೂರ್ಣ ಕಾಲಿಕ ಪ್ರಾಧ್ಯಾಪಕರು ಸೇರಿದಂತೆ ವಿಶ್ವವಿದ್ಯಾನಿಲಯದ ಬೋಧಕ ಬೋಧಕೇತರ ಸಿಬ್ಬಂಧಿಗೆ ಕಲ್ಪಿಸಿರುವ ಸೌಲಭ್ಯಗಳು, ವಿಶ್ವವಿದ್ಯಾನಿಲಯದಲ್ಲಿನ ಕ್ರೀಡಾ ಚಟುವಟಿಕೆಗಳು ಮತ್ತು ಅವುಗಳಿಗೆ ಸಂಬಂಧಿಸಿದಂತಹ ಮೂಲಭೂತ ಸೌಕರ್ಯಗಳು ಸೇರದಂತೆ ತಂತ್ರಾಂಶಗಳನ್ನು ಉನ್ನತೀಕರಿಸಿ ಬಳಸಿಕೊಂಡಿರುವ ಬಗ್ಗೆ, ವಿಶ್ವವಿದ್ಯಾನಿಲಯದ ಒಟ್ಟಾರೆ ಆಡಳಿತವನ್ನು ಕೇಂದ್ರೀಕೃತವಾಗಿ ನಿರ್ವಹಣೆ ಮಾಡುತ್ತಿರುವ ಹಲವು ವಿಷಯಗಳ ಬಗ್ಗೆ ಚರ್ಚಿಸಲಾಯಿತು. ಈ ಸಂದರ್ಭದಲ್ಲಿ ಎಲ್ಲಾ ವಿಭಾಗಗಳ ಮುಖ್ಯಸ್ಥರೊಂದಿಗೆ…











