Author: News Desk Benkiyabale

ಮಧುಗಿರಿ 18 ವರ್ಷವಾದರೂ ಬಾರದ ಪಿಂಚಣಿ ಸೌಲಭ್ಯ, ಹಕ್ಕುಪತ್ರವಿದ್ದರೂ ಬೇರೆಯವರಿಗೆ ನಿವೇಶನ ಪರಬಾರೆ, ಪುರಸಭೆ ಅಂಗಡಿ ಮಳಿಗೆಗಳ ಹರಾಜು, ಮದುಗಿರಿಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಕೇಂದ್ರವಿದ್ದರೂ ಖಾಸಗಿ ಆಸ್ಪತ್ರೆಗೆ ರವಾನೆ, ಬಗರ್ ಹುಕುಂ ಅರ್ಜಿಗಳು ಸೇರಿದಂತೆ ಇನ್ನಿತರೆ ಸಮಸ್ಯೆಗಳ ಬಗ್ಗೆ ಲೋಕಾಯುಕ್ತರ ಎಸ್ಪಿ ವಲಿಬಾಷ ರವರ ಅಧ್ಯಕ್ಷತೆಯಲ್ಲಿ ಹಮ್ಮಿಕೊಂಡಿದ್ದ ಕುಂದುಕೊರತೆ ಸಭೆಯಲ್ಲಿ ಸಾರ್ವಜನಿಕರು ಅಹವಾಲು ಸಲ್ಲಿಸಿದರು. ದೊಡ್ಡೇರಿ ಹೋಬಳಿಯ ಬಡವನಹಳ್ಳಿ ಗ್ರಾಮದ ರಂಗಮ್ಮ ಎಂಬುವವರ ಪರವಾಗಿ ದೊಡ್ಡೇರಿ ಕಣಿಮಯ್ಯ ಮಾತನಾಡಿ ಇವರ ಪತಿ ಓಬಳರಂಗಯ್ಯ 2004 ರಲ್ಲಿ ದೊಡ್ಡೇರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಿವೃತ್ತಿ ಹೊಂದಿ ನಂತರದ ದಿನಗಳಲ್ಲಿ ಮೃತಪಟ್ಟಿದ್ದು, ನನ್ನ ಗಂಗನ ಸೇವಾವಧಿ ನಕಲು ನೀಡುವಂತೆ ಹಲವಾರು ಬಾರಿ ಅರ್ಜಿ ಸಲ್ಲಿಸಿದ್ದರೂ ಸುಖಾಸುಮ್ಮನೆ ಕಚೇರಿಗೆ ಬೆಂಕಿ ಬಿದ್ದಿದೆ ಎಂದು ಸಬೂಬು ಹೇಳುತ್ತಾ ವಿನಾ ಕಾರಣ ವಿಳಂಬ ನೀತಿ ಅನುಸರಿಸುತ್ತಿರುವ ಅಧಿಕಾರಿಗಳ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಮನವಿ ಮಾಡಿದಾಗ, ನಿವೃತ್ತಿ ಹೊಂದಿ 18 ವರ್ಷಗಳಾದರೂ ಏಕೆ ಸೇವಾವಧಿ ನಕಲು…

Read More

ಮದುಗಿರಿ ಪಟ್ಟಣದಲ್ಲಿ ಮಂಜೂರಾಗಿದ್ದ ಪಾಲಿಟೆಕ್ನಿಕ್ ಕಾಲೇಜನ್ನು ಬೇರೆಡೆಗೆ ಸ್ಥಳಾಂತರಿಸಲು ಹುನ್ನಾರ ನಡೆಸಲಾಗುತ್ತಿದೆ ಎಂದು ಮುಖಂಡ ವೆಂಕಟಾಪುರ ಗೋವಿಂದರಾಜು ಪತ್ರಿಕಾ ಹೇಳಿಕೆಯಲ್ಲಿ ಆರೋಪಿಸಿದ್ದಾರೆ. ತಾಲೂಕಿನ ಜನತೆಯ ಬಹುದಿನಗಳ ಬೇಡಿಕೆಯಾದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜನ್ನು ಮಧುಗಿರಿಗೆ 2016-17 ನೇ ಸಾಲಿನಲ್ಲಿ ಅಂದಿನ ಸರ್ಕಾರ ಮಂಜೂರು ಮಾಡಿತ್ತು. ನಂತರದ ದಿನಗಳಲ್ಲಿ ಆಯುಕ್ತರು ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಇವರ ಕೋರಿಕೆಯಂತೆ ಮತ್ತು ಮಧುಗಿರಿ ಶಾಸಕರ ಆದೇಶದಂತೆ ಮಧುಗಿರಿಯ ಅಂದಿನ ತಹಶೀಲ್ದಾರ್ ರವರು ಪಟ್ಟಣದ ಗುರುವಡೇರಹಳ್ಳಿ ಗ್ರಾಮದ ಸರ್ವೇ ನಂಬರ್ 26 ರಲ್ಲಿ 4 ಎಕರೆ ಜಮೀನನ್ನು ಮಂಜೂರು ಮಾಡಿ ಆದೇಶಿಸಿ, ಮಂಜೂರಾತಿ ಪತ್ರವನ್ನು ಆಯುಕ್ತರು ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ, ಬೆಂಗಳೂರು ಇವರಿಗೆ ಕಳುಹಿಸಿ ಕೊಟ್ಟಿರುತ್ತಾರೆ ಆದರೆ ಇತ್ತೀಚೆಗೆ ಕೆಲವೊಂದು ಕಾಣದ ಕೈಗಳು ಮಧುಗಿರಿ ಪಟ್ಟಣದಲ್ಲಿ ಮಂಜೂರಾಗಿರುವ ಪಾಲಿಟೆಕ್ನಿಕ್ ಕಾಲೇಜನ್ನು ಮಿಡಿಗೇಶಿ ಹೋಬಳಿಯ ಬೇಡತ್ತೂರು ಗ್ರಾಮದ ಬಳಿ ನಿರ್ಮಾಣ ಮಾಡಿಸುವ ಉದ್ದೇಶದಿಂದ ಉನ್ನತ ಶಿಕ್ಷಣ ಸಚಿವರ ಆಪ್ತರೊಬ್ಬರ ಮೂಲಕ ಮತ್ತೊಮ್ಮೆ ಭೂ ಮಂಜೂರಾತಿಗಾಗಿ…

Read More

ತುಮಕೂರು ಅನುದಾನಿತ ಶಾಲಾ, ಕಾಲೇಜುಗಳ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಒಂದೆಡೆ ಆಡಳಿತ ಮಂಡಳಿ, ಮತ್ತೊಂದೆಡೆ ಆಡಳಿತಶಾಹಿಯ ಕಿರುಕುಳದ ನಡುವೆ ಬೆಂದು ಹೋಗಿದ್ದಾರೆ. ಶೀಘ್ರದಲ್ಲಿಯೇ ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯುವ ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು ಎಂದು ಸರಕಾರದ ಮುಖ್ಯಸಚೇತಕ ಡಾ.ವೈ.ಎ.ನಾರಾಯಣಸ್ವಾಮಿ ತಿಳಿಸಿದ್ದಾರೆ. ನಗರದ ಮುರುಘಾಮಠದ ಸಭಾಂಗಣದಲ್ಲಿ ತುಮಕೂರು ಜಿಲ್ಲಾ ಅನುದಾನಿತ ಪದವಿಪೂರ್ವ ಕಾಲೇಜುಗಳ ಬೋಧಕ ಮತ್ತು ಬೋಧಕೇತರ ನೌಕರರ ಸಂಘ(ರಿ) ಏರ್ಪಡಿಸಿದ್ದ ಶೈಕ್ಷಣಿಕ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡುತಿದ್ದ ಅವರು, ಅಧಿಕಾರಿಗಳು ಅನುದಾನಿತ ಶಾಲಾ,ಕಾಲೇಜುಗಳಿಗೆ ವಿಧಿಸುವ ಹಲವು ಷರತ್ತುಗಳನ್ನು ಪೂರೈಸಲು ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಸಿದ್ದವಿಲ್ಲ. ಷರತ್ತುಗಳನ್ನು ಪೂರೈಸದಿದ್ದರೆ ವೇತನ, ತುಟ್ಟಿಭತ್ಯೆ ಇಲ್ಲ. ಹೀಗಾಗಿ ಸರಕಾರ ಮತ್ತು ಆಡಳಿತ ಮಂಡಳಿಯ ಹಗ್ಗ ಜಗ್ಗಾಟದ ನಡುವೆ ಸಿಬ್ಬಂದಿಗಳು ಬೆಂದು ಹೋಗಿದ್ದಾರೆ ಎಂದರು. ಸರಕಾರಕ್ಕೆ ಪೂರಕವಾಗಿ ಸ್ವಾತಂತ್ರಪೂರ್ವದಲ್ಲಿ ಮತ್ತು ನಂತರದಲ್ಲಿ ಮಠ, ಮಾನ್ಯಗಳು, ಸಂಘ, ಸಂಸ್ಥೆಗಳು ಶಾಲೆಗಳನ್ನು ತೆರೆದು ಮಕ್ಕಳಿಗೆ ಶಿಕ್ಷಣ ನೀಡಿದ್ದರ ಫಲವಾಗಿ ಇಂದು ಕರ್ನಾಟಕ ಜ್ಞಾನದ ನಾಡು ಎಂದು ಕರೆಯಿಸಿಕೊಳ್ಳುತ್ತಿದೆ.ಆದರೆ…

Read More

ಮದುಗಿರಿ ಪಟ್ಟಣದ ಕೆ ಆರ್ ಬಡಾವಣೆ 19ನೇ ವಾರ್ಡಿನ ನಿವಾಸಿ ಚಾಲಕರಮೇಶ್ ಕಳೆದ ನಾಲ್ಕು ವರ್ಷದಿಂದ ಅನಾರೋಗ್ಯದಿಂದ ಬಳಲುತ್ತಿದ್ದು. ಈ ವಿಚಾರವನ್ನು ಚಾಲಕ ಸಂಘದವರು ಮಾಜಿ ಶಾಸಕ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷರು ಕೆ ಎನ್ ರಾಜಣ್ಣ ನವರ ಗಮನಕ್ಕೆ ತಂದಾಗ ಅವರ ಮನೆಗೆ ತೆರಳಿ ಆ ಕುಟುಂಬಕ್ಕೆ ಧೈರ್ಯವನ್ನು ತುಂಬಿ ವೈಯಕ್ತಿಕವಾಗಿ ನೆರವು ನೀಡಿದರು ಮುಂದಿನ ದಿನದಲ್ಲಿ ಅಗತ್ಯವಿದ್ದಲ್ಲಿ ನನ್ನ ಗಮನಕ್ಕೆ ತಂದರೆ ಮತ್ತಷ್ಟು ನೆರವು ನೀಡುತ್ತೇನೆ. ಚಿಕಿಸ್ತಾವೆ ವೆಚ್ಚಕ್ಕೆ ತಗಲಿರುವ ವೈದ್ಯಕೀಯ ಬಾಪ್ತಿನ ಬಿಲ್ಲುಗಳನ್ನು ನೀಡಿದ್ದಲ್ಲಿ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ನೆರೆವು. ಕೊಡುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಪುರಸಭಾ ಮಾಜಿ ಅಧ್ಯಕ್ಷ ಎಂ ಕೆ ನಂಜುಂಡಯ್ಯ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ವೀರಣ್ಣ, ಪುರಸಭೆ ಸದಸ್ಯಗಳಾದ ಮಂಜುನಾಥ್ ಆಚಾರ್, ಲಾಲಪೇಟೆ ಮಂಜುನಾಥ್, ಗ್ರಾಮ ಪಂಚಾಯತಿ ಸದಸ್ಯರಾದ ಬಂದ್ರಳ್ಳಿ ಮಂಜುನಾಥ್. ಮುಖಂಡರಗಳಾದ ತಲ್ಲಿ ಮಂಜುನಾಥ್, ಎಸ ವಿ ಪಿ ಮಂಜುನಾಥ್, ಚಾಲಕ ಸಂಘದವರು ಪ್ರಸಾದು, ಹೆoಜಾರಪ್ಪ.ಮತ್ತಿತರರು ಹಾಜರಿದ್ದರು.

Read More

ತುಮಕೂರು ವಿಶ್ವೇಶ್ವರಯ್ಯ ಅವರು ಬದುಕಿದ್ದ ಕೊನೆ ಕ್ಷಣದವರೆಗೆ ದೇಶದ ಪ್ರಗತಿಗೆ ಚಿಂತಿಸಿದರು, ಜೀವನವನ್ನು ಮುಡುಪಾಗಿಟ್ಟವರು ಎಂದು ಸರ್.ಎಂ.ವಿಶ್ವೇಶ್ವರಯ್ಯ ಅವರ ಮೊಮ್ಮಗ ಶೇಷಾದ್ರಿ ಮೋಕ್ಷಗುಡಂ ತಿಳಿಸಿದರು. ನಗರದ ಜಿಲ್ಲಾಸ್ಪತ್ರೆ ಸಭಾಂಗಣದಲ್ಲಿ ಎಂಜನಿಯರ್ ಅಸೋಸಿಯೇಷನ್ ತುಮಕೂರು, ರಾಮ್ಕೋ ಸಿಮೆಂಟ್ ಸಹಭಾಗಿತ್ವದಲ್ಲಿ ಏರ್ಪಡಿಸಿದ್ದ ಎಂಜನಿಯರ್ ಡೇ ಉದ್ಘಾಟಿಸಿ ಅವರು ಮಾತನಾಡಿದರು. ಮುಂದಿನ ಜನಾಂಗ ಸರ್.ಎಂ.ವಿಶ್ವೇಶ್ವರಯ್ಯ ಅವರಂತವರು ಬದುಕಿದ್ದರು, ಅವರು ಇಷ್ಟೆಲ್ಲ ಕೆಲಸ ಮಾಡಿದ್ದರು ಎನ್ನುವುದನ್ನು ನಂಬುವುದಿಲ್ಲ, ಅಷ್ಟು ಕೆಲಸವನ್ನು ತಮ್ಮ ಬದುಕಿನ ಅವಧಿಯಲ್ಲಿ ಮಾಡಿದ್ದಾರೆ, ಅವರಷ್ಟು ಕಾರ್ಯಕ್ಷಮತೆಯಿಂದ ಕೆಲಸ ಮಾಡುವುದು ಇಂದಿನ ಆಧುನಿಕ ಜಗತ್ತಿನಲ್ಲಿಯೂ ಅಸಾಧ್ಯವಾಗಿದೆ ಎಂದರು. ಎಲ್ಲಿಯೂ ಉತ್ತಮ ಎಂಜನಿಯರ್ ಗಳ ಅವಶ್ಯಕತೆ ಇರುತ್ತದೆಯೋ ಅಲ್ಲಿಗೆ ಬ್ರಿಟಿಷ್ ಸರ್ಕಾರ ಸರ್ ಎಂವಿ ಅವರನ್ನು ನೇಮಿಸುತ್ತಿತ್ತು, ಅರ್ಹತೆ, ಯೋಗ್ಯತೆ ಇದ್ದರು ಉತ್ತಮ ಸ್ಥಾನಮಾನ ದೊರಕದೇ ಇದ್ದರಿಂದ ರಾಜೀನಾಮೆ ನೀಡಿ ಬ್ರಿಟಿಷ್ ಸರ್ಕಾರದಿಂದ ಹೊರಬಂದರು ಸಹ, ಸರ್ ಎಂವಿ ಅವರಿಗೆ ಬ್ರಿಟಿಷ್ ಸರ್ಕಾರ ಅಜೀವ ಪರ್ಯಂತ ಪಿಂಚಣಿ ನೀಡುತ್ತದೆ ಎಂದು ಸ್ಮರಿಸಿದರು. ಮೈಸೂರು ಸರ್ಕಾರ ಶಿಕ್ಷಣ ಮತ್ತು…

Read More

ತುಮಕೂರು ನಮ್ಮ ಸುತ್ತಮುತ್ತಲ ಪರಿಸರದಲ್ಲಿ ಎಲ್ಲೆಂದರಲ್ಲಿ ಕಸ ಬಿಸಾಡದೆ ಸ್ವಚ್ಛತೆ ಕಾಪಾಡಿಕೊಂಡು ಇತರರಿಗೂ ಸ್ವಚ್ಛತೆ ಕಾಪಾಡುವ ಬಗ್ಗೆ ಪ್ರೇರಣೆ ನೀಡಬೇಕೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ತಿಳಿಸಿದರು. ತಾಲ್ಲೂಕಿನ ಊರ್ಡಿಗೆರೆ ಗ್ರಾಮಪಂಚಯತಿ ವ್ಯಾಪ್ತಿ ದೇವರಾಯನ ದುರ್ಗದ ಇತಿಹಾಸ ಪ್ರಸಿದ್ಧ ಶ್ರೀ ಭೋಗ ನರಸಿಂಹಸ್ವಾಮಿ ಸುಕ್ಷೇತ್ರದಲ್ಲಿಂದು ಸ್ವಚ್ಛತಾ ಸೇವಾ ಆಂದೋಲನ ಕಾರ್ಯಕ್ರಮದಡಿ ಹಮ್ಮಿಕೊಂಡಿದ್ದ ಕಲ್ಯಾಣಿಯನ್ನು ಸ್ವಚ್ಛಗೊಳಿಸುವ ಶ್ರಮದಾನ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ನಮ್ಮೆಲ್ಲರ ಆರೋಗ್ಯದ ದೃಷ್ಟಿಯಿಂದ ಮುಂದಿನ ಪೀಳಿಗೆಗೆ ಉತ್ತಮ ಪರಿಸರವನ್ನು ಉಳಿಸುವ ಸಲುವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಿರ್ದೇಶನದನ್ವಯ ಜಿಲ್ಲಾದ್ಯಂತ ಸೆಪ್ಟೆಂಬರ್ 15 ರಿಂದ ಅಕ್ಟೋಬರ್ 2ರವರೆಗೆ ಸ್ವಚ್ಛತಾ ಹೀ ಸೇವಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಡಿ ಗ್ರಾಮೀಣ ನೈರ್ಮಲ್ಯವನ್ನು ಸುಧಾರಿಸುವ ನಿಟ್ಟಿನಲ್ಲಿ ಸ್ವಚ್ಛತೆ ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದು ತಿಳಿಸಿದರು. ದಿನನಿತ್ಯ ಬಳಕೆಯಲ್ಲಿ ಪ್ಲಾಸ್ಟಿಕ್ ಅನ್ನು ಬಳಸದೇ ಪರಿಸರ ಸ್ನೇಹಿ ಕೈಚೀಲ ವಸ್ತುಗಳನ್ನು ಉಪಯೋಗಿಸಬೇಕು. ಪ್ರತಿಯೊಬ್ಬರೂ ಅವರ ಮನೆಯ ಕಸವನ್ನು ಹಸಿ ಮತ್ತು…

Read More

ತುಮಕೂರು ಅತ್ಯಂತ ಹಿಂದುಳಿದಿರುವ ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸುವ ವಿಚಾರದಲ್ಲಿ ಸರ್ಕಾರದ ವಿವಿಧ ಮಂತ್ರಿಗಳ ನಡುವೆ ಗೊಂದಲದ ಹೇಳಿಕೆಗಳು ಸದನದ ಚರ್ಚೆಯ ವೇಳೆ ವ್ಯಕ್ತವಾಗಿದ್ದು, ಸರ್ಕಾರದ ಈ ನಡೆಗೆ ಜಿಲ್ಲಾ ಮಡಿವಾಳ ಸಮಾಜದ ಅಧ್ಯಕ್ಷ ಲಕ್ಷ್ಮಣ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನಸಭೆ ಅಧಿವೇಶನದ ಸಂದರ್ಭದಲ್ಲಿ ಬಿಜಾಪುರ ಕ್ಷೇತ್ರದ ಶಾಸಕರಾದ ಬಸವನಗೌಡ ಪಾಟೀಲ್ ಯತ್ನಾಳ್ ಅವರು ಪಂಚಮಶಾಲಿ ಲಿಂಗಾಯಿತ ಸಮುದಾಯವನ್ನು ಪ್ರವರ್ಗ 1 ಕ್ಕೆ ಮತ್ತು ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸುವ ಸಂಬಂಧ ಚುಕ್ಕೆ ಗುರುತಿನ ಪ್ರಶ್ನೆಯನ್ನು ಕೇಳಿದಾಗ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ವಿಚಾರವಾಗಿ ಸರ್ವಪಕ್ಷ ಸಭೆ ಕರೆದು ಚರ್ಚೆ ನಡೆಸಿ, ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಉತ್ತರ ನೀಡಿದ್ದಾರೆ ಎಂದರು. ಇದೇ ವಿಚಾರವಾಗಿ ಶಾಸಕರಾದ ಕೌಜಲಗಿ ಮಹಾಂತೇಶ್ ಶಿವಾನಂದ ಸದನದಲ್ಲಿ ಮಡಿವಾಳ ಸಮುದಾಯವನ್ನು ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸುವ ಸಂಬಂಧ ಸರ್ಕಾರ ಕೈಗೊಂಡಿರುವ ಕ್ರಮಗಳ ಕುರಿತು ಚುಕ್ಕೆ…

Read More

ತುಮಕೂರು ರಾಜ್ಯದಲ್ಲಿ ಎಲ್ಲ ವಾಣಿಜ್ಯ ವಾಹನಗಳು, ಲಾರಿ ಸೇರಿದಂತೆ ಎಲ್ಲ ಸಾರಿಗೆ ವಾಹನಗಳಿಗೆ ರೆಟ್ರೋ ರಿಪ್ಲೆಕ್ಟಿವ್ ಟೇಪ್ ಅಳವಡಿಸುವಂತೆ ಸರ್ಕಾರ ಹೊರಡಿಸಿರುವ ಆದೇಶವನ್ನು ಮತ್ತೊಮ್ಮೆ ಪರಿಶೀಲಿಸಿ, ಈ ಟೇಪ್‍ಗಳ ಅಳವಡಿಕೆಗೆ ಇನ್ನು 10 ದಿನಗಳ ಕಾಲ ಕಾಲಾವಕಾಶ ನೀಡಬೇಕು ಎಂದು ಫೆಡರೇಷನ್ ಕರ್ನಾಟಕ ಲಾರಿ ಮಾಲೀಕರ ಸಂಘ, ಗೂಡ್ಸ್ ವಾಹನ ಅಸೋಸಿಯೇಷನ್, ಲಾರಿ ಮಾಲೀಕರ ಸಂಘ, ಟ್ಯಾಕ್ಸಿ ಅಸೋಸಿಯೇಷನ್ ವತಿಯಿಂದ ಸಾರಿಗೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಕೋರಲಾಗಿದೆ. ಪ್ರಾದೇಶಿಕ ಸಾರಿಗೆ ಅಧಿಕಾರಿ ರಾಜು ಅವರಿಗೆ ಮನವಿ ಸಲ್ಲಿಸಿ ಮಾತನಾಡಿದ ಫೆಡರೇಷನ್ ಕರ್ನಾಟಕ ಲಾರಿ ಮಾಲೀಕರ ಸಂಘದ ಜಂಟಿ ಕಾರ್ಯದರ್ಶಿ ಕೃಷ್ಣಮೂರ್ತಿ, ಕೆಲವು ದಿನಗಳಿಂದ ವಾಣಿಜ್ಯ ವಾಹನ, ಲಾರಿಗಳು ಸೇರಿದಂತೆ ಎಲ್ಲ ಸಾರಿಗೆ ವಾಹನಗಳಿಗೆ ರಿಪ್ಲೆಕ್ಟ್ ಟೇಪ್ ಅಂಟಿಸುವಂತೆ ಸರ್ಕಾರ ಆದೇಶ ಮಾಡಿದೆ. ವಾಹನಗಳಿಗೆ ಈ ಟೇಪ್ ಅಂಟಿಸಲು 12 ದಿನಗಳ ಕಾಲಾವಕಾಶ ನೀಡಲಾಗಿತ್ತು. ಆದರೆ ಈ ಟೇಪ್ ಬೆಲೆ ತುಂಬಾ ದುಬಾರಿಯಾಗಿರುವ ಕಾರಣ ಇನ್ನು ವಾಹನಗಳಿಗೆ ಅಳವಡಿಸಲು ಸಾಧ್ಯವಾಗಿಲ್ಲ. ಹಾಗಾಗಿ ಇನ್ನು…

Read More

ಮಧುಗಿರಿ ಗಂಜಲಗುಂಟೆ ಗ್ರಾ.ಪಂ ನ ಹಿಂದಿನ ಪಿಡಿಓ ರವಿಚಂದ್ರ ಅವಧಿಯಲ್ಲಿ ಬಹಳಷ್ಟು ಬ್ರಷ್ಟಾಚಾರ ನಡೆದಿದ್ದು, ಇದರ ಬಗ್ಗೆ ಲೋಕಾಯುಕ್ತಕ್ಕೆ ದೂರು ನೀಡಲಾಗುವುದು ಎಂದು ಗಂಜಲಗುಂಟೆ ಗ್ರಾ.ಪಂ ಅಧ್ಯಕ್ಷೆ ಸಾವಿತ್ರಮ್ಮ ಡಿ.ಹೆಚ್. ನಾಗರಾಜು ತಿಳಿಸಿದರು. ತಾಲೂಕಿನ ಗಂಜಲಗುಂಟೆ ಗ್ರಾ.ಪಂ ನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಹಿಂದಿನ ಪಿಡಿಓ ರವರ ಅವಧಿಯಲ್ಲಿನ ಭ್ರಷ್ಟಾಚಾರದ ಬಗ್ಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಣಾಧಿಕಾರಿಗಳಿಗೆ ದೂರು ನೀಡಿದ್ದರಿಂದ ಪಿಡಿಓ ನಮ್ಮ ವಿರುದ್ದ ಸೇಡು ತೀರಿಸಿಕೊಳ್ಳುವ ಹೊರಟಿದ್ದು, ನನ್ನ ಮೇಲೆ ಕೆಲವು ಗ್ರಾ. ಪಂ ಸದಸ್ಯರನ್ನು ಎತ್ತಿಕಟ್ಟಿ ರಾಜಕೀಯ ನಡೆಸಿ ನನ್ನನ್ನು ಅಧಿಕಾರದಿಂದ ಕೆಳಗಿಳಿಸಲು ಯತ್ನಿಸಿ ನನ್ನ ತೇಜೋವಧೆಗೆ ಪ್ರಯತ್ನಿಸಿದ್ದು, ನಾನು ಅಧ್ಯಕ್ಷೆಯಾದ ಮೇಲೆ ಗ್ರಾ.ಪಂ ನೌಕರರ 18 ತಿಂಗಳ ವೇತನ ಪಾವತಿ ಮಾಡಿದ್ದೇನೆ. ಸುಳ್ಳು ಆರೋಪಗಳನ್ನು ಮಾಡಿ ನನ್ನನ್ನು ತೇಜವಧೆ ಮಾಡಲು ಪ್ರಯತ್ನಿಸುತ್ತಿದ್ದು, ನನ್ನ ಅವಧಿಯಲ್ಲಿ ಯಾವುದೇ ಭ್ರಷ್ಟಾಚಾರ ನಡೆದಿಲ್ಲ ಎಂದರು. ಗ್ರಾ.ಪಂ ಸದಸ್ಯ ವೀರೇಶ್ ಮಾತನಾಡಿ ನಾನು ಇಂಜಿನಿಯರಿಂಗ್ ಪದವಿಧರನಾಗಿದ್ದು, ಗ್ರಾಮಗಳ ಅಭಿವೃದ್ಧಿ ದೃಷ್ಟಿಯಿಂದ…

Read More

ತುಮಕೂರು ಯುವಜನರು, ಒಳ್ಳೆಯದು, ಕೆಟ್ಟದ್ದರ ಬಗ್ಗೆ ಅರಿವು ಮೂಡಿಸುತ್ತಾ, ಉತ್ತಮ ಪ್ರಜೆಗಳನ್ನು ರೂಪಿಸುವ ಮೂಲಕ ದೇಶದ ದಿಕ್ಸೂಚಿ ಬದಲಿಸುವ ಶಕ್ತಿ ಇರುವುದು ಶಿಕ್ಷಕ ವೃಂದಕ್ಕೆ ಮಾತ್ರ ಎಂದು ತುಮಕೂರು ನಗರ ಶಾಸಕ ಜಿ.ಬಿ.ಜೋತಿಗಣೇಶ್ ತಿಳಿಸಿದ್ದಾರೆ. ನಗರದ ಬಾಲಭವನದಲ್ಲಿ ಕರುನಾಡ ವಿಜಯಸೇನೆ ಆಯೋಜಿಸಿದ್ದ ಜಿಲ್ಲೆಯ ಅತ್ಯುತ್ತಮ ಶಿಕ್ಷಕರಿಗೆ ವಿದ್ಯಾವಾರಧಿ ಪ್ರಶಸ್ತಿ ನೀಡಿ ಗೌರವಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತಿದ್ದ ಅವರು,ಭವಿಷ್ಯದ ಪ್ರಜೆಗಳಾದ ಮಕ್ಕಳನ್ನು ತಿದ್ದಿ, ತೀಡುವ, ಅವರ ಸರಿ,ತಪ್ಪುಗಳನ್ನು ಗುರುತಿಸಿ, ಅವರನ್ನು ಸರಿದಾರಿಗೆ ತರುವ ನಿಟ್ಟಿನಲ್ಲಿ ಶಿಕ್ಷಕರ ಪಾತ್ರ ಮಹತ್ವದೆಂದರು. ಶಿಕ್ಷಕರಾಗಿದ್ದುಕೊಂಡು ರಾಷ್ಟ್ರಪತಿಯಂತಹ ಅತ್ಯುನ್ನತ ಹುದ್ದೆಯನ್ನು ಅಲಂಕರಿಸಿದ,ಡಾ.ಎ.ಪಿ.ಜೆ.ಅಬ್ದುಲ್ ಕಲಾಂ, ಉಪರಾಷ್ಟ್ರತಿಯಾಗಿದ್ದ ಡಾ.ರಾಧಾಕೃಷ್ಣನ್,ಮೊದಲ ಮಹಿಳಾ ಶಿಕ್ಷಕಿ ಸಾವಿತ್ರಬಾಯಿ ಪುಲೆ ಇವರೆಲ್ಲರೂ ಶಿಕ್ಷಣ ಕ್ಷೇತ್ರದ ಆದರ್ಶ ವ್ಯಕ್ತಿಗಳು.ಅವರ ಸಾಲಿಗೆ ನೀವೆಲ್ಲರೂ ಸೇರುವಂತಹ ಉತ್ತಮ ಅಂಶಗಳನ್ನು ನಿಮ್ಮ ಭೋಧನಾ ಕ್ರಮದಲ್ಲಿ ಅಳವಡಿಸಿಕೊಳ್ಳಿ ಎಂದು ಸಲಹೆ ನೀಡಿದ ಶಾಸಕ ಜೋತಿಗಣೇಶ್,ವಿದ್ಯೆಯ ಜೊತೆಗೆ ದೇಶಪ್ರೇಮವನ್ನು ಮಕ್ಕಳಿಗೆ ಕಲಿಸುವಂತೆ ಮನವಿ ಮಾಡಿದರು. ಕನ್ನಡ ನಾಡು,ನುಡಿ ವಿಚಾರದಲ್ಲಿ ಯಾವುದೇ ತೊಂದರೆಯಾದಾಗಲು ನಾಡಿನ ಜನರೊಂದಿಗೆ…

Read More