Author: News Desk Benkiyabale

ತುಮಕೂರು ವಿದ್ಯಾರ್ಥಿಗಳು ಓದಿನ ಜತೆಗೆ ಕ್ರೀಡಾ ಚಟುವಟಿಕೆಗಳಲ್ಲೂ ಆಸಕ್ತಿ ವಹಿಸಿ ಪಾಲ್ಗೊಳ್ಳಬೇಕು ಎಂದು ಶಾಸಕ ಜ್ಯೋತಿಗಣೇಶ್ ಕರೆ ನೀಡಿದರು. ನಗರದ ಎಸ್‍ಎಸ್‍ಐಟಿ ಆವರಣದಲ್ಲಿ ಜಿಲ್ಲಾ ಪ.ಪೂ. ಕಾಲೇಜುಗಳ ಪ್ರಾಂಶಪಾಲರ ಸಂಘ, ಉಪನ್ಯಾಸಕರ ಸಂಘ, ದೈಹಿಕ ಶಿಕ್ಷಣ ಉಪನ್ಯಾಸಕರ ಸಂಘ ಹಾಗೂ ಬೋಧಕೇತರ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ 2022-23ನೇ ಸಾಲಿನ ಜಿಲ್ಲಾ ಮಟ್ಟದ ಪ.ಪೂ. ಕಾಲೇಜು ವಿದ್ಯಾರ್ಥಿಗಳ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಶಾಲಾ-ಕಾಲೇಜು ಹಂತದಲ್ಲಿ ವಿದ್ಯಾರ್ಥಿಗಳು ಪಾಠದ ಕಲಿಕೆಯ ಜತೆಗೆ ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಂಡು ಮಾನಸಿಕ-ದೈಹಿಕ ಸದೃಢತೆಯನ್ನು ಕಾಪಾಡಿಕೊಳ್ಳಬೇಕು. ಈ ಮೂಲಕ ಕ್ರೀಡೆಯ ಬಗ್ಗೆ ಪ್ರತಿಯೊಬ್ಬರೂ ಒಲವು ತೋರಬೇಕು ಎಂದರು. ಕ್ರೀಡೆಯಲ್ಲಿ ಭಾಗವಹಿಸಿದರೆ ಕ್ರೀಡಾಪಟುಗಳಾದರೆ ಮುಂದಿನ ದಿನಗಳಲ್ಲಿ ಉದ್ಯೋಗದಲ್ಲೂ ಮೀಸಲಾತಿಯೂ ಸಿಗಲಿದೆ. ಹಾಗಾಗಿ ವಿದ್ಯಾರ್ಥಿಗಳು ಓದಿನ ಜತೆಗೆ ಕ್ರೀಡೆಗೂ ಒತ್ತು ನೀಡಬೇಕು ಎಂದು ಅವರು ಸಲಹೆ ಮಾಡಿದರು. ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ವಿದ್ಯಾರ್ಥಿಗಳು ವಿಜೇತರಾಗಿ ರಾಜ್ಯಮಟ್ಟದ ಕ್ರೀಡಾಕೂಟದಲ್ಲೂ ಪಾಲ್ಗೊಳ್ಳುವಂತಾಗಲಿ ಎಂದು ಆಶಿಸಿದರು. ಪದವಿ ಪೂರ್ವ ಶಿಕ್ಷಣ ವಿದ್ಯಾರ್ಥಿಗಳಿಗೆ ಅತ್ಯಂತ ಮಹತ್ವದ…

Read More

ತುಮಕೂರು ಕೇಂದ್ರ ಸರ್ಕಾರದ ನಶ ಮುಕ್ತ ಭಾರತ ಅಭಿಯಾನದಡಿ ಜಿಲ್ಲೆಯಲ್ಲಿ ಮಾದಕ ವ್ಯಸನಿಗಳಿಗೆ ವ್ಯಸನದಿಂದ ದೂರವಿರುವಂತೆ ಮಾಹಿತಿ, ಶಿಕ್ಷಣ, ಸಂವಹನದ ಮೂಲಕ ಜಾಗೃತಿ ಮೂಡಿಸಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಪೋಸ್ಟರ್‍ಗಳನ್ನು ಹಾಕಿ ಅರಿವು ಮೂಡಿಸಬೇಕು. ಈ ನಿಟ್ಟಿನಲ್ಲಿ ಜಿಲ್ಲಾ ಮತ್ತು ತಾಲ್ಲೂಕು ಆರೋಗ್ಯಾಧಿಕಾರಿಗಳು ಸೂಕ್ತ ಕ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ತಿಳಿಸಿದರು. ತಮ್ಮ ಕಚೇರಿಯ ಕೆಸ್ವಾನ್ ಸಭಾಂಗಣದಲ್ಲಿಂದು ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಸಭೆ ನಡೆಸಿ ಮಾತನಾಡಿದ ಅವರು, ಮಾದಕ ವಸ್ತುಗಳ ಬಳಕೆ ಹಾನಿಕಾರವಾಗಿದ್ದು, ಜಿಲ್ಲೆಯಲ್ಲಿ ವ್ಯಾಪಕ ಪ್ರಚಾರ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು. ಜಿಲ್ಲೆಯಲ್ಲಿರುವ ಮದ್ಯವರ್ಜನ ಮತ್ತು ಸಮಗ್ರ ಪುನರ್ವಸತಿ ಕೇಂದ್ರಗಳ ಮೂಲಕ ಹೆಚ್ಚಿನ ಜಾಗೃತಿ ಮೂಡಿಸಬೇಕು ಎಂದು ಅವರು ತಿಳಿಸಿದರು. ಜಿಲ್ಲೆಯಲ್ಲಿ ಲಸಿಕಾಕರಣ ಗುರಿ ತಲುಪಬೇಕು. ಆಯುμÁ್ಮನ್ ಭಾರತ್ ಹೆಲ್ತ್ ಅಕೌಂಟ್(ಆಭಾ) ಕಾರ್ಡುಗಳ ಮೂಲಕ ಸಾರ್ವಜನಿಕರು ಉಚಿತ ಆರೋಗ್ಯ ಸೇವೆಗಳನ್ನು ಪಡೆಯಬಹುದಾಗಿದೆ. ಗ್ರಾಮ ಒನ್ ಕೇಂದ್ರಗಳಲ್ಲಿ ಆಭಾ ಕಾರ್ಡುಗಳನ್ನು ನೀಡುವುದರ ಮೂಲಕ ನಿಗಧಿಪಡಿಸಿರುವ ಗುರಿ ತಲುಪಬೇಕು. ಶಾಲಾ ಮಕ್ಕಳಿಗೆ ಆಭಾ…

Read More

ತುಮಕೂರು ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆಯ ದಾರಿ ಬದಲಾಗುವ ಸಾಧ್ಯತೆ ಇದೆ ಎಂದು ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ತಿಳಿಸಿದರು. ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಭಾರತ್ ಜೋಡೋ ಅಭಿಯಾನದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ತುಮಕೂರು ಜಿಲ್ಲೆಯಲ್ಲಿಯೇ ಹೆಚ್ಚಿನ ಅವಧಿಯಲ್ಲಿ ರಾಹುಲ್ ಗಾಂಧಿ ಸಂಚರಿಸಲಿದ್ದಾರೆ, ಇದನ್ನು ಯಶಸ್ವಿಗೊಳಿಸಬೇಕಾದ ಹೊಣೆಗಾರಿಕೆ ಜಿಲ್ಲೆಯ ನಾಯಕರ ಮೇಲಿದೆ ಎಂದರು. ಭಾರತ್ ಜೋಡೋ ಯಾತ್ರೆ ಮೂಲ ಆದಿಚುಂಚನಗಿರಿ, ತುರುವೇಕೆರೆ, ಚಿಕ್ಕನಾಯಕಹಳ್ಳಿ, ಹುಳಿಯಾರು ಮೂಲಕ ಚಿತ್ರದುರ್ಗ ಜಿಲ್ಲೆಗೆ ಹೋಗಬೇಕಿತ್ತದರು, ಆ ದಾರಿಯಲ್ಲಿ ಗ್ರಾಮಗಳ ಸಂಖ್ಯೆ ಕಡಿಮೆ ಇರುವುದರಿಂದ ಕೆಪಿಸಿಸಿ ಅಧ್ಯಕ್ಷರು ಮಾರ್ಗ ಬದಲಾವಣೆ ಮಾಡಿದ್ದರು, ಈಗ ಮೂಲ ಮಾರ್ಗದಲ್ಲಿಯೇ ಯಾತ್ರೆ ಸಾಗಬೇಕು ಎಂದು ರಾಹುಲ್ ಗಾಂಧಿ ಕಚೇರಿಯಿಂದ ಪತ್ರ ಬಂದಿದ್ದು, ಮೂಲ ಮಾರ್ಗದ ಬಗ್ಗೆ ತಾಂತ್ರಿಕ ತಂಡ ಪರಿಶೀಲನೆ ನಡೆಸುತ್ತಿದೆ ಎಂದರು. ಮಾರ್ಗ ಯಾವುದೇ ಆದರೂ ಅಕ್ಟೋಬರ್ 8ರಂದು ಜಿಲ್ಲೆಯ ಟಿಬಿ ಕ್ರಾಸ್ನಲ್ಲಿ ಪ್ರಾರಂಭವಾಗಲಿರುವ ಯಾತ್ರೆಗೆ ಕನಿಷ್ಠ 5 ಸಾವಿರ ಜನರು ಅವರೊಂದಿಗೆ ಹೆಜ್ಜೆ ಹಾಕಬೇಕಿದ್ದು, ಯೂತ್…

Read More

ತುಮಕೂರು ನಗರದ ಎಸ್.ಐ.ಟಿ. ಮುಖ್ಯರಸ್ತೆಯ ಸಿದ್ದೇಶ್ವರ ಕನ್ವೆಷನ್ ಹಾಲ್ ಬಳಿ ಇರುವ ಶ್ರೀವಿನಾಯಕ ಯೂತ್ ಆಸೋಸಿಯೇಷನ್ ವತಿಯಿಂದ ಹಸಿರು ತುಮಕೂರಿಗಾಗಿ ಓಟ ಎಂಬ 6ಕಿ.ಮಿ.ಗಳ ಮುಕ್ತ ಆಹ್ವಾನಿತ ಮ್ಯಾರಥಾನ್ ಓಟವನ್ನು ಆಯೋಜಿಸಲಾಗಿತ್ತು. ಪುರುಷರು,ಮಹಿಳೆಯರು,ಬಾಲಕರು, ಬಾಲಕಿಯರು ಈ ನಾಲ್ಕು ವಿಭಾಗಗಳಲ್ಲಿ ನಡೆದ 6 ಕಿ.ಮಿ.ಗಳ ಮ್ಯಾರಥಾನ್ ಓಟಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್‍ಕುಮಾರ್ ಶಹಪೂರ್‍ವಾಡ್ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು. ಈ ವೇಳೆ ಮಾಜಿ ಮಂತ್ರಿ ಹಾಗೂ ಬಿಜೆಪಿ ಮುಖಂಡರಾದ ಸೊಗಡು ಶಿವಣ್ಣ ಜೊತೆಗಿದ್ದರು. ಎಸ್.ಐ.ಟಿಯ ಸಿದ್ದೇಶ್ವರ ಕನ್ವೆಷನ್ ಹಾಲ್ ಮುಂಭಾಗದ ಆರಂಭವಾದ ಮ್ಯಾರಥಾನ್ ಓಟ, ಗಂಗೋತ್ರಿ ನಗರ ಮುಖ್ಯರಸ್ತೆ, ಬಿ.ಹೆಚ್.ರಸ್ತೆಯ ಮೂಲಕ ಭದ್ರಮ್ಮ ವೃತ್ತ,ಡಾ.ರಾಧಾಕೃಷ್ಣ ರಸ್ತೆ, ಎಸ್.ಎಸ್.ಪುರಂ ಮುಖ್ಯರಸ್ತೆ ಮೂಲಕ ಹಾದು ಸಿದ್ದೇಶ್ವರ ಕನ್ವೆಷನ್ ಹಾಲ್ ಬಳಿ ಮುಕ್ತಾಯಗೊಂಡಿತ್ತು. 250ಕ್ಕೂ ಹೆಚ್ಚು ವಿವಿಧ ವಯೋಮಾನದ ಓಟಗಾರರು ಭಾಗವಹಿಸಿದ್ದ ಓಟದಲ್ಲಿ ನಾಲ್ಕು ವಿಭಾಗದಲ್ಲಿ ಮೊದಲು ಮೂರು ಸ್ಥಾನಗಳನ್ನು ಪಡೆದ ಕ್ರೀಡಾಪಟುಗಳಿಗೆ ನಗದು ಬಹುಮಾನ ನೀಡಿ ಪುರಸ್ಕರಿಸಲಾಯಿತು. ಹಸಿರು ತುಮಕೂರಿಗಾಗಿ ಓಟದಲ್ಲಿ…

Read More

ತುಮಕೂರು ಬೆಳಗಾವಿ ಜಿಲ್ಲೆ ಅಥಣಿ ಶ್ರೀ ಮೋಟಗಿಮಠದ ಶ್ರೀ ಪ್ರಭುಚನ್ನಬಸವ ಸ್ವಾಮೀಜಿ(ಅಥಣೀಶ) ವಿರಚಿತ “ ಮಹಾತ್ಮರ ಚರಿತಾಮೃತ” ಗ್ರಂಥ(ಕೃತಿ)ವು ಪ್ರತೀ ಮನೆ, ಮಠ, ಶಾಲೆ, ಗ್ರಂಥಾಲಯದಲ್ಲಿಡಬೇಕಾದ ಅಮೂಲ್ಯ ಕೃತಿ ಎಂದು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ|| ಸಿ. ಸೋಮಶೇಖರ ಅಭಿಪ್ರಾಯಪಟ್ಟರು. ಶ್ರೀ ಸಿದ್ದಗಂಗಾಮಠ ಶ್ರೀ ಉದ್ದಾನೇಶ್ವರ ಸ್ವಾಮಿ ಸಮುದಾಯಭವನದಲ್ಲಿಂದು ಆಯೋಜಿಸಿದ್ದ ಮಹಾತ್ಮರ ಚರಿತಾಮೃತ ಗ್ರಂಥದ ಐದನೇ ಮುದ್ರಣದ ಲೋಕಾರ್ಪಣೆ ಮತ್ತು ಗ್ರಂಥದ ಪ್ರಥಮ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ಅಥಣೀಶ ಎಂಬ ಕಾವ್ಯನಾಮದಿಂದ ಪ್ರಭುಚನ್ನಬಸವ ಸ್ವಾಮೀಜಿಯವರು ರಚಿಸಿರುವ ಮಹಾತ್ಮರ ಚರಿತಾಮೃತ ಗ್ರಂಥದ ಮೂಲಕ 216 ವಿಶ್ವ ವಿಭೂತಿಗಳನ್ನು ಜಗತ್ತಿಗೆ ಒಂದೆಡೆ ಪರಿಚಯಿಸುವ ಸಾಹಸದ ಕಾರ್ಯ ಮಾಡಿದ್ದಾರೆ. ವಿಶ್ವ ಮಾನವ ಪ್ರಜ್ಞೆಯನ್ನು ಸಮಾಜಕ್ಕೆ ಸಾರುವ ಕೃತಿ ಇದಾಗಿದ್ದು, ಸಿದ್ದರು, ಶಿವಯೋಗಿಗಳು, ಶರಣ-ಶರಣೆಯರು, ಅನುಭಾವಿಗಳು, ದಾರ್ಶನಿಕರು, ಅವಧೂತರು, ಸೂಫಿಗಳು, ಸಂತರು, ಆದಿಗುರುಗಳು, ಸದ್ಗುರುಗಳು, ರಾಜಗುರು, ಜಗದ್ಗುರುಗಳು, ಭಾವೈಕ್ಯತೆಯ ಸಾರಥಿಗಳು, ಗಾನಯೋಗಿಗಳು, ದಾಸರು, ತತ್ವಪದಕಾರರು, ಜ್ಞಾನಿಗಳು, ಮಹನೀಯರ ಜೀವನ ಕಥಾನಕಗಳನ್ನು…

Read More

ತುಮಕೂರು ಬಡವರಿಗೆ ಮತ್ತು ಕಕ್ಷಿದಾರರಿಗೆ ತ್ವರಿತವಾಗಿ ನ್ಯಾಯ ಸಿಗಬೇಕಾದರೆ ಸಂಧಾನದ ಮೂಲಕ ದಾವೆಗಳು ಆದಷ್ಟು ಬೇಗ ಇತ್ಯರ್ಥವಾಗಬೇಕು,ನ್ಯಾಯಾಧೀಶರುಗಳಿಗೆ ಇಂತಹ ಮಧ್ಯಸ್ಥಿಕೆ ಪುನರ್ಮನನ ತರಬೇತಿ ಕಾರ್ಯಾಗಾರದ ಅಗತ್ಯತೆ ಇದೆ,ಇಂದು ಪ್ರಸ್ತುತ ದಿನಗಳಲ್ಲಿ ನ್ಯಾಯಾಲಯಗಳಲ್ಲಿ ಹೆಚ್ಚಾಗಿ ದಾವೆಗಳು ಹೆಚ್ಚುತ್ತಿವೆ, ರಾಜಿ ಸಂಧಾನದ ಮೂಲಕ ದಾವೆಗಳು ಇತ್ಯರ್ಥವಾದರೆ ಎರಡೂ ಕಡೆಯ ಪಕ್ಷಗಾರರಿಗೆ ಅನುಕೂಲವಾಗಲಿದೆ ಎಂದು ರಾಜ್ಯ ಉಚ್ಛನ್ಯಾಯಾಲಯದ ನ್ಯಾಯಾಧೀಶರಾದ ಜಸ್ಟೀಸ್ ಎನ್.ಎಸ್.ಸಂಜಯಗೌಡರವರು ತಿಳಿಸಿದರು. ಅವರು ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ,ಜಿಲ್ಲಾ ನ್ಯಾಯಾಂಗ ತುಮಕೂರು,ಬೆಂಗಳೂರು ಮಧ್ಯಸ್ಥಿಕೆ ಕೇಂದ್ರ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಹಯೋಗದಲ್ಲಿ ತುಮಕೂರು ಜಿಲ್ಲಾ ಗೌರವಾನ್ವಿತ ನ್ಯಾಯಾಧೀಶರುಗಳಿಗೆ ಮಧ್ಯಸ್ಥಿಕೆ ಪುನರ್ಮನನ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ||ವಿದ್ಯಾಕುಮಾರಿರವರು ತರಬೇತಿ ಕಾರ್ಯಾಗಾರದ ಮುಖ್ಯ ಉದ್ದೇಶ ಪಕ್ಷಗಾರರಿಗೆ ಬೇಗ ನ್ಯಾಯದಾನ ಸಿಗಬೇಕು ಆಗ ಮಾತ್ರ ಇಂತಹ ಕಾರ್ಯಾಗಾರ ಯಶಸ್ವಿಯಾಗುತ್ತದೆ,ಈ ಹಿಂದೆ ತುಮಕೂರು ಜಿಲ್ಲೆಯಲ್ಲಿ ನಡೆದ ಬೃಹತ್ ಲೋಕ್ ಅದಾಲತ್…

Read More

ಮಧುಗಿರಿ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಹೊತ್ತು ನೀಡಬೇಕಾಗಿದೆ ಎಂದು ಮಧು ಚಾರಿ ಟಬಲ್ ಟ್ರಸ್ಟ್ ಅಧ್ಯಕ್ಷ ಹಾಗೂ ಸಮಾಜ ಸೇವಕ ಮಧು ಜೀಡಿಪಾಳ್ಯ ತಿಳಿಸಿದ್ದಾರೆ. ತಾಲೂಕಿನ ಲಕ್ಲಿಹಟ್ಟಿ ಹೊಸಕೆರೆ ತೆರೆಯೂರು ಕಡಗತೂರು ಗ್ರಾಮಗಳಲ್ಲಿ ನಡೆದ ಧಾರ್ಮಿಕ ಕಾರ್ಯ ಕ್ರಮಗಳಲ್ಲಿ ಭಾಗವಹಿಸಿ ಮಾತನಾಡುತ್ತಾ ಪ್ರತಿ ಮನೆ ಪ್ರತಿ ಗ್ರಾಮ ಅಭಿವೃದ್ಧಿಯಾಗಬೇಕಾದರೆ ಶಿಕ್ಷಣ ಕಾರಣ ಪ್ರತಿ ಗ್ರಾಮಗಳಲ್ಲಿ ಹೆಚ್ಚು ಹೆಚ್ಚು ಮಂದಿ ಶಿಕ್ಷಣವಂತರಾದಾಗ ಆ ಗ್ರಾಮ ಅಭಿವೃದ್ಧಿಯಾಗುತ್ತದೆ ಮಧು ಚಾರಿಟಬಲ್ ಟ್ರಸ್ಟ್ ಮೂಲಕ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಹೊತ್ತು ನೀಡಲಾಗಿದೆ ಎಂದರು. ಅಲ್ಲದೆ ಮಧುಗಿರಿ ತಾಲೂಕನ್ನು ಮಾದರಿ ತಾಲೂಕಾಗಿ ಮಾಡಲಾಗುವುದು ಮತ್ತು ಗುಡಿಸಲು ಮುಕ್ತ ತಾಲೂಕಾಗಿ ಮಾಡುವ ಯೋಜನೆ ಇದೆ ನಾನು ಶಾಸಕನಾಗಿ ಆಯ್ಕೆಯಾದರೆ ಮಧುಗಿರಿಯನ್ನು ಜಿಲ್ಲಾ ಕೇಂದ್ರ ಮಾಡುವುದು ಹೋಬಳಿ ಮಟ್ಟಗಳಲ್ಲಿ ಕೈಗಾರಿಕೆಗಳ ಸ್ಥಾಪನೆ ಮಧುಗಿರಿಯಲ್ಲಿ ವಿಶ್ವವಿದ್ಯಾಲಯ ಸ್ಥಾಪನೆ. ಪ್ರವಾಸೋದ್ಯಮ ಕೇಂದ್ರಗಳ ಸ್ಥಾಪನೆ .ನೀರಾವರಿ ಯೋಜನೆಗಳಿಗೆ ಆದ್ಯತೆ. ನನ್ನ ಪಂಚಯೋಜನೆಗಳಾಗಿದ್ದು ಇವುಗಳ ಜಾರಿ ಮಾಡಲು ನನ್ನನ್ನು ಶಾಸಕರಾಗಿ ಆಯ್ಕೆ ಮಾಡಿ ನಿಮ್ಮ ಗ್ರಾಮಗಳ…

Read More

 ತುಮಕೂರು ನಗರದ ಕುಣಿಗಲ್ ರಸ್ತೆಯಲ್ಲಿ ಗುಂಡಿ ಬಿದ್ದು ತೀವ್ರ ಹದಗೆಟ್ಟು ವಾಹನಗಳು ಸಂಚರಿಸಲು ಹರಸಾಹಸಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದನ್ನು ಮನಗಂಡಿರುವ ಶಾಸಕ ಜ್ಯೋತಿಗಣೇಶ್ ಅವರು ಈ ರಸ್ತೆ ದುರಸ್ಥಿ ಕಾರ್ಯಕ್ಕೆ ಚಾಲನೆ ನೀಡಿದರು. ನಗರದ ಸಿದ್ದಾರ್ಥ ತಾಂತ್ರಿಕ ಮಹಾವಿದ್ಯಾಲಯದ ಮುಂಭಾಗ ಕುಣಿಗಲ್ ರಸ್ತೆಯ ದುರಸ್ಥಿ ಮತ್ತು ಅಭಿವೃದ್ಧಿ ಕಾರ್ಯಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಿ ಮಾತನಾಡಿದ ಶಾಸಕ ಜ್ಯೋತಿಗಣೇಶ್ ಅವರು, ಕೆಶಿಪ್ ಮತ್ತು ಲೋಕೋಪಯೋಗಿ ಇಲಾಖೆಯ ರಾಜ್ಯ ಹೆದ್ದಾರಿ ವಿಭಾಗದಿಂದ ಶಾಸಕರ ನಿಧಿಗೆ ಮುಖ್ಯಮಂತ್ರಿ 12 ಕೋಟಿ ರೂ. ನೀಡಿದ್ದು, ಈ ಪೈಕಿ ಎರಡೂವರೆ ಕೋಟಿ ರೂ. ಹಣವನ್ನು ಕುಣಿಗಲ್ ರಸ್ತೆಯ ನಾಲ್ಕು ಜಂಕ್ಷನ್‍ಗಳಲ್ಲಿ ಕಾಂಕ್ರೀಟ್ ಹಾಕಲು ನೀಡಲಾಗಿದೆ ಎಂದರು. ಕುಣಿಗಲ್ ರಸ್ತೆಯ ಎಸ್‍ಎಸ್‍ಐ ಕಾಲೇಜು ಮುಂಭಾಗ, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಮುಂಭಾಗ, ಕೃಷ್ಣ ಬೇಕರಿ ಮುಂಭಾಗ ಹಾಗೂ ಹೇಮಾವತಿ ಕಚೇರಿ ಮುಂಭಾಗದ ಜಂಕ್ಷನ್‍ಗಳು ರಸ್ತೆ ತುಂಬಾ ಹಾಳಾಗಿದೆ. ಇದರಿಂದಾಗಿ ನಾಗರಿಕರು ಸುಗಮವಾಗಿ ಸಂಚರಿಸಲಾಗದೆ ತೀವ್ರ ಪ್ರಯಾಸಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ರಸ್ತೆ…

Read More

ತುರುವೇಕೆರೆ: ನಮ್ಮ ವಿಧಾನಸಭಾ ಕ್ಷೇತ್ರವನ್ನು ಸಂಪೂರ್ಣವಾಗಿ ಗುಡಿಸಲು ರಹಿತ ಗ್ರಾಮವನ್ನಾಗಿ ನಿರ್ಮಿಸುವ ಗುರಿ ಇದ್ದು, ಈಗಾಗಲೇ ಗೊಲ್ಲ ಸಮುದಾಯಕ್ಕೆ 1500 ಮನೆಗಳು ಮಂಜೂರಾಗಿದ್ದು, ಇನ್ನೂ ಸಹ ಗೊಲ್ಲ ಜನಾಂಗದವರು ಮನೆಗಳ ಅವಶ್ಯಕತೆ ಇದ್ದರೆ ಕೂಡಲೇ ಗ್ರಾಮ ಪಂಚಾಯಿತಿ ಅಥವಾ ನಮ್ಮ ಬಳಿ ಅಗತ್ಯ ದಾಖಲೆ ಒದಗಿಸಿದರೆ ಸರ್ಕಾರದಿಂದ ಇನ್ನೂ ಸಹ ಹೆಚ್ಚಿನ ಮನೆಗಳನ್ನು ತರುವುದಾಗಿ ಶಾಸಕ ಮಸಾಲಾ ಜಯರಾಮ್ ತಿಳಿಸಿದರು. ಮಾಯಸಂದ್ರ ಹೋಬಳಿಯ ವರಾಹಸಂದ್ರ ಗೊಲ್ಲರಹಟ್ಟಿ ಗ್ರಾಮದಲ್ಲಿ ಗಣಪತಿ ವಿಸರ್ಜನಾ ಕಾರ್ಯಕ್ರಮದಲ್ಲಿ ಏರ್ಪಡಿಸಿದ್ದ ಆರ್ಕೆಸ್ಟ್ರಾ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಕಾಡುಗೊಲ್ಲ ಜನಾಂಗವನ್ನು ಪರಿಶಿಷ್ಟ ಜಾತಿಗೆ ಸೇರಿಸುವಂತೆ ಈಗಾಗಲೇ ವಿಧಾನಸಭೆಯಲ್ಲಿ ಪ್ರಸ್ತಾವನೆ ಸಲ್ಲಿಸಿದ್ದು, ಮಾನ್ಯ ಸಚಿವರು ಇದಕ್ಕೆ ಸಕಾರಾತ್ಮಕವಾಗಿ ಉತ್ತರ ನೀಡಿದ್ದು, ಲೋಕಸಭೆಯ ಅಧಿವೇಶನದಲ್ಲಿ ಇದರ ಬಗ್ಗೆ ಚರ್ಚಿಸುವಂತೆ ರಾಜ್ಯದ ಹಲವಾರು ಮಂತ್ರಿಗಳು, ಶಾಸಕರ ಜೊತೆ ತಾಲೂಕಿನ ಗೊಲ್ಲ ಸಮಾಜದ ಮುಖಂಡರುಗಳನ್ನು ದೆಹಲಿಗೆ ಕರೆದುಕೊಂಡು ಹೋಗಲಾಗುವುದು ಎಂದರು. ತಾಲೂಕಿನಲ್ಲಿರುವ ಸುಮಾರು 70 ಕ್ಕೂ ಹೆಚ್ಚು ಗೊಲ್ಲರಹಟ್ಟಿಗಳಿಗೆ ಮೂಲಭೂತ ಸೌಕರ್ಯ ಒದಗಿಸಿ, ಕಾಂಕ್ರೀಟ್ ರಸ್ತೆ ನಿರ್ಮಾಣ…

Read More

ಚಿಕ್ಕನಾಯಕನಹಳ್ಳಿ: ಮತ್ತಿಘಟ್ಟ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಹಾಲಿ ನಿರ್ದೇಶಕ ಸಚಿವರ ಕಟ್ಟಾ ಬೆಂಬಲಿಗ ನಿರಂಜನ್ ಮೂರ್ತಿ ಅಧಿಕಾರದ ಅಮಲಿನಲ್ಲಿ ಇಡೀ ಆಡಳಿತ ಮಂಡಳಿಯನ್ನೇ ದುರುಪಯೋಗಪಡಿಸಿಕೊಂಡು ರೈತರಿಗೆ ಸಿಗಬೇಕಾದ ಸಾಲ ಸೌಲಭ್ಯವನ್ನು ಅರ್ಹ ಫಲಾನುಭವಿಗಳಾಗಿದ್ದರು ರಾಜಕೀಯ ದುರುದ್ದೇಶದಿಂದ ಅವರ ಹೆಸರುಗಳನ್ನು ಪಟ್ಟಿಯಿಂದ ತೆಗೆಯುವ ಮೂಲಕ ರೈತರಿಗೆ ಅನ್ಯಾಯವೆಸಗಿದ್ದಾರೆ ಎಂದು ಷೇರುದಾರ ಓಬಳಯ್ಯ ಆರೋಪಿಸಿದರು ಶುಕ್ರವಾರ ಹಂದನಕೆರೆ ಹೋಬಳಿ ಮತ್ತಿ ಕಟ್ಟಾ ಗ್ರಾಮದ ಸಂತೆ ಮೈದಾನದ ಆವರಣದಲ್ಲಿ ಮತ್ತಿಘಟ್ಟ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ಸಂಘದ ಅಧ್ಯಕ್ಷರಾದ ನಟರಾಜು ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅವರು ಆರೋಪಿಸಿದರು ಓಬಳಯ್ಯ ಮಾತನಾಡುತ್ತಾ ತಾಲೂಕಿನ ಯಾವುದೇ ಸಹಕಾರಿ ಸಂಘದ ಮೂಲಕ ಅರ್ಹ ರೈತರಿಗೆ ಸಾಲ ನೀಡಲು ಜಿಲ್ಲಾ ಸಹಕಾರಿ ಬ್ಯಾಂಕ್ ಮುಂದಾಗಿದ್ದರು ರಾಜಕೀಯ ದುರುದ್ದೇಶದಿಂದ ಇಂತಹ ಪ್ರಕರಣಗಳು ಸರ್ವೇಸಾಮಾನ್ಯವಾಗಿ ಕಾಣಸಿಗುತ್ತದೆ ಮತ್ತಿಘಟ್ಟ ಸಹಕಾರಿ ಬ್ಯಾಂಕಿನಲ್ಲಿ ರತ್ನಮ್ಮ ಎಂಬುವರಿಗೆ 3,20, 000 ಗಳು ಹಾಗೂ ಲೋಕೇಶ್ ಎಂಬವರಿಗೆ ಮೂರು ಲಕ್ಷ…

Read More