ತುಮಕೂರು: ವ್ಯಕ್ತಿ ಗಳಿಸುವ ರಾಜಕೀಯ ಸರಕಾರಿ ಹುದ್ದೆಯ ಸ್ಥಾನಮಾನಗಳು, ಆತ ಕಲಿತ ಶೈಕ್ಷಣಿಕ ಆರ್ಹತೆಯಿಂದ ಸಿಗುವಂತಹದ್ದೇ ಹೊರತು ಯಾರು ಕೊಡುವಂತಹದ್ದಲ್ಲ ಎಂದು ಆರ್.ಡಿ.ಪಿ.ಆರ್ ಇಲಾಖೆ ನಿವೃತ್ತ ಜಂಟಿ ನಿರ್ದೇಶಕ ಡಾ.ಬೂವನಹಳ್ಳಿ ನಾಗರಾಜು ಅಭಿಪ್ರಾಯಪಟ್ಟಿದ್ದಾರೆ. ನಗರದ ಕುಂಚಟಿಗರ ಭವನದ ಕುಂಚಶ್ರೀ ಪ್ಯಾಲೇಸ್ ನಲ್ಲಿ ಕುಂಚಟಿಗ ಒಕ್ಕಲಿಗರ ವಿದ್ಯಾಭಿವೃದ್ದಿ ಸಂಘ(ರಿ) ಆಯೋಜಿಸಿದ್ದ ಬಿ.ರಂಗಣ್ಣ ಸ್ಮಾರಕ ಬಾಲಕರ ಮತ್ತು ಶ್ರೀಮತಿ ಲಕ್ಷ್ಮಮ್ಮ ಮಾಲಿಮರಿಯಪ್ಪ ಬಾಲಕಿಯರ ವಿದ್ಯಾರ್ಥಿನಿಲಯಗಳ ಹಾಸ್ಟಲ್ ಡೇ ಮತ್ತು ಬಹುಮಾನ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡುತಿದ್ದ ಅವರು,ನಮ್ಮ ಜಾತಿ, ಧರ್ಮಗಳ ಆಚೆಗು ನಾವು ಪಡೆಯುವ ಪದವಿಗಳು ಸರಕಾರಿ ಹುದ್ದೆಗಳಲ್ಲಿ ಮೇಲ್ಮುಖವಾಗಿ ತೆಗೆದುಕೊಂಡು ಹೋಗಬಲ್ಲವು ಎಂದರು. ಶಿರಾ ತಾಲೂಕಿನ ಸಣ್ಣ ಹಳ್ಳಿಯಲ್ಲಿ ಹುಟ್ಟಿ, ತುತ್ತು ಅನ್ನಕ್ಕೂ ಕಷ್ಟಪಡುತ್ತಿದ್ದ ನಾನು ಇಂದು ಸರಕಾರದ ವಿವಿಧ ಹುದ್ದೆಗಳ ಕೆಲಸ ಮಾಡಿ, ನಿವೃತ್ತಿಯ ನಂತರವೂ ಕೆಲವು ಇಲಾಖೆಗಳ ಮೇಲುಸ್ತುವಾರಿ ಅಧಿಕಾರಿಯಾಗಿ ಮುಂದುವರೆದಿದ್ದರೆ,ಬಡತನ, ನೋವು, ಅವಮಾನಗಳ ನಡುವೆ ನಾನು ಕಲಿತ ವಿದ್ಯೆ.ಹಾಗಾಗಿ ಹಳ್ಳಿಗಾಡಿನ ಮಕ್ಕಳಿಗೆ ನೋವು ಮತ್ತು ಅವಮಾನಗಳೇ ಆದರ್ಶವಾಗಬೇಕು.ಅಂಕಗಳ ಜೊತೆಗೆ,ಪ್ರಾಮಾಣಿಕತೆ,ಸಿಕ್ಕ…
Author: News Desk Benkiyabale
ತುಮಕೂರು: ಸಮಾರೋಪ ಸಮಾರಂಭ ಈ ಕಾರ್ಯಕ್ರಮದ ಮುಖ್ಯ ಭಾಷಣ ಮಾಡಿದ ಗೌರವಾನ್ವಿತ ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಶ್ರೀ ಎನ್.ಎಸ್. ಸಂಜಯ್ ಗೌಡ ರವರು ವಿದ್ಯಾರ್ಥಿಗಳಿಗೆ ಹಿತ ವಚನ ನೀಡುತ್ತಾ ನಿಮ್ಮ ನಿಜ ಜೀವನ ಇನ್ನು ಮುಂದೆ ಪ್ರಾರಂಭವಾಗುತ್ತದೆ. ಜಾಗೃತರಾಗಿ ಕಕ್ಷಿದಾರರನ್ನು ಗೌರವಿಸಿ, ಅವರಿಗೆ ನ್ಯಾಯ ನೀಡುವಂತೆ, ಅಧ್ಯಯನ ಮಾಡಿ ಸಮರ್ಥವಾಗಿ ವಾದ ಮಂಡಿಸಿ, ನ್ಯಾಯ ಒದಗಿಸಿಕೊಡಿರಿ ಎಂದು ಕರೆ ನೀಡಿದರು. ಆತ್ಮ ತೃಪ್ತಿಯಿಂದ ಕೆಲಸ ಮಾಡಿರಿ ನಿಮಗೂ ಈ ಮೂಲಕ ಸಂತೋಷ ಉಂಟಾಗುತ್ತದೆ. ಹಣ ಬರುತ್ತದೆ ಹೋಗುತ್ತದೆ ಹಣದ ಹಿಂದೆ ಹೋಗಬೇಡಿ ಕಕ್ಷಿದಾರರ ಅಥವಾ ನೀವು ಕೆಲಸ ಮಾಡುವಾಗ ನ್ಯಾಯ ಒದಗಿಸಿಕೊಡುವ ಎಲ್ಲಾ ಸಂದರ್ಭಗಳನ್ನು ಸಂತೋಷವಾಗಿ ಅನುಭವಿಸಿ ಜೀವನ ಸಾರ್ಥಕಗೊಳಿಸಿ ಎಂದು ಹೇಳಿದರು. ಇದನ್ನೇ ವೃತ್ತಿಯಲ್ಲಿ ಬದ್ದತೆ ಎಂದು ತಿಳಿಸಿದರು. ಇದೇ ಸಂಧರ್ಭದಲ್ಲಿ ವಿದ್ಯಾರ್ಥಿಗಳ ಪ್ರತಿಭೆಯನ್ನು ಹೊರಹೊಮ್ಮಿಸುವ ‘ಅರಿವು’ ವಾರ್ಷಿಕ ಸಂಚಿಕೆಯನ್ನು ಬಿಡುಗಡೆ ಮಾಡಿದರು. ಈ ಸಂಚಿಕೆಯನ್ನು ಇತ್ತೀಚೆಗೆ ಕೀರ್ತೀಶೇಷರಾದ ಶ್ರೀ ಹೆಚ್.ಎಸ್.ಶೇಷಾದ್ರಿಯವರಿಗೆ ಸಮರ್ಪಣೆ ಮಾಡಲಾಗಿದೆ. ಕರ್ನಾಟಕ ರಾಜ್ಯ ವಕೀಲರ…
ಗುಬ್ಬಿ : ಪಟ್ಟಣ ಪಂಚಾಯಿತಿ ಅಧ್ಯಕ್ಷ ಏಳು ತಿಂಗಳು ಕಳೆದರೂ ಸಭೆಯನ್ನು ಕರೆಯದೇ ಇದ್ದು ಪಟ್ಟಣದ ಅಭಿವೃದ್ಧಿಗೆ ಕುಂಠಿತವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಪಟ್ಟಣ ಪಂಚಾಯಿತಿ ವತಿಯಿಂದ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪೌರ ಕಾರ್ಮಿಕರ ದಿನಾಚರಣೆಯಲ್ಲಿ ಪೌರ ಕಾರ್ಮಿಕರನ್ನು ಸನ್ಮಾನಿಸಿ ಮಾತನಾಡಿದ ಅವರು ಆರಂಭದಿಂದಲೂ ಪಕ್ಷವನ್ನು ಬದಿಗಿಟ್ಟು ಒಕ್ಕೊರಲಿನಿಂದ ಕೆಲಸ ಮಾಡುವಂತೆ ತಿಳಿಸಿದರೂ ಸಹ ರಾಜಕಾರಣ ದ್ವೇಷವನ್ನೇ ಮಾಡುತ್ತಾ ಬಂದು ತಾವೇ ಜೈಲಿಗೆ ಹೋಗುವಂತಹ ಸ್ಥಿತಿಯನ್ನು ತಂದುಕೊಂಡಿರುವುದು ಒಂದೆಡೆಯಾದರೆ, ಭೂ ಹಗರಣದಲ್ಲಿ ತಪ್ಪಿತಸ್ಥನಲ್ಲದೆ ಹೋಗಿದ್ದರೆ ನ್ಯಾಯಾಲಯದ ಮೊರೆ ಹೋಗಿ ಜಾಮೀನು ಅರ್ಜಿ ತಿರಸ್ಕೃತವಾಗಿ ಸಾರ್ವಜನಿಕರ ಮಾತಿಗೆ ಗ್ರಾಸವಾಗಿದೆ ಎಂದ ಅವರು ರಾಜಕೀಯ ವ್ಯಕ್ತಿಗಳ ಪ್ರಭಾವದಿಂದ ತಪ್ಪಿಸಿಕೊಳ್ಳಬಹುದೆಂಬ ಭಾವನೆಯಿದ್ದರೆ ಅದು ಕಷ್ಟಸಾಧ್ಯ. ಕಾನೂನು ಎಲ್ಲರಿಗೂ ಒಂದೇ. ಈಗಾಗಲೇ 573 ಎಕರೆ ಕಬಳಿಕೆ ಮಾಡಿರುವುದು ತನಿಖೆಯಿಂದ ಧೃಢಪಟ್ಟಿದ್ದು, ಸುಮಾರು ನೂರರಿಂದ ನೂರೈವತ್ತು ಮಂದಿ ಜೈಲಿಗೆ ಹೋಗುವಂಥ ಸ್ಥಿತಿ ನಿರ್ಮಾಣವಾಗಿದೆ ಎಂದು ತಿಳಿಸಿದರು. ಪಟ್ಟಣದ ಅಭಿವೃದ್ಧಿಗೆ ಎರಡು ಕೋಟಿ 70 ಲಕ್ಷ ರುಗಳನ್ನು ನಗರಾಭಿವೃದ್ಧಿ…
ಮಧುಗಿರಿ: ತಾಲೂಕಿನ ಮಿಡಿಗೇಶಿ ಗ್ರಾಮದಲ್ಲಿ ಗಣೇಶ ದೇವಸ್ಥಾನದ ನಿವೇಶನದ ವಿಚಾರವಾಗಿ ನಡೆದ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದಲ್ಲಿ ಶಾಮೀಲಾಗಿರುವ ಎಲ್ಲಾ ಆರೋಪಿಗಳನ್ನು ಬಂಧಿಸುವವರೆಗೆ ಮಾರಣೋತ್ತರ ಪರೀಕ್ಷೆಗೆ ಅವಕಾಶ ನೀಡುವುದಿಲ್ಲವೆಂದು ಗ್ರಾಮಸ್ಥರು ಮತ್ತು ಸಂಬಂಧಿಕರು ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಮತ್ತು ಮಿಡಿಗೇಶಿ ಪೆÇಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸಿದ ಘಟನೆ ಶುಕ್ರವಾರ ನಡೆಯಿತು ಗುರುವಾರ ರಾತ್ರಿ ಕೊಲೆ ನಡೆಯುವುದಕ್ಕೂ ಮುಂಚೆ ಐದು ಜನ ಆರೋಪಿಗಳು ಮಿಡಿಗೇಶಿ ಗ್ರಾಮದ ಅಂಗಡಿಯೊಂದರ ಬಳಿ ಸಭೆ ನಡೆಸಿ ಕೊಲೆ ಮಾಡಲು ತೀರ್ಮಾನಿಸಿದ ಆರೋಪಿಗಳು ಊಟ ಮುಗಿಸಿ ಮನೆಯ ಮುಂದೆ ಓಡಾಡುತ್ತಿದ್ದ ನನ್ನ ಪತ್ನಿ ಶಿಲ್ಪ ಮತ್ತು ಸಂಬಂಧಿಕರಾದ ರಾಮಾಂಜನೇಯನವರ ಮೇಲೆ ಜೆಡಿಎಸ್ ಮುಖಂಡನಾದ ಶ್ರೀಧರ ಗುಪ್ತ ಎಂಬುವವನು ಏಕಾಏಕಿ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ದು, ಬಿಡಿಸಿಕೊಳ್ಳಲು ಹೋದ ಮಲ್ಲಿಕಾರ್ಜುನಯ್ಯ ನವರಿಗೂ ಚಾಕುವಿನಿಂದ ಇರಿದು ಗಂಭಿರವಾಗಿ ಗಾಯಗೊಳಿಸಿದ್ದು, ಈ ಕೊಲೆಗೆ ಗ್ರಾಮದ ಜೆಡಿಎಸ್ ಮುಖಂಡರಾದ ಗ್ರಾ.ಪಂ ಉಪಾಧ್ಯಕ್ಷ ಸುರೇಶ್, ರಾಮಾಂಜನೇಯ, ರವಿ ಮತ್ತು ಮಂಜುನಾಥ ಈ…
ತುಮಕೂರು: ಸರ್ಕಾರವು ಮುನಿಸಿಪಲ್ ಕಾರ್ಮಿಕರು ನಡೆಸಿದ ಮುಷ್ಕರ ಸಮಯದಲ್ಲಿ ನೀಡಿದ ಭರವಸೆಯನ್ನು ಮರೆತು ಬರಿ ನೇರ ಪಾವತಿ ಯಡಿಯಲ್ಲಿನ 11 ಸಾವಿರ ಪೌರ ಕಾರ್ಮಿಕರನ್ನು ಮಾತ್ರ ಖಾಯಂ ಮಾಡುವ ಸಚಿವ ಸಂಪುಟದ ತೀರ್ಮಾನವು ಕಾರ್ಮಿಕರಲ್ಲಿ ಒಡಕು ಉಂಟುಮಾಡುವ ಉಳಿದ 35000 ಇತರೆ ಗುತ್ತಿಗೆ ಆಧಾರದಲ್ಲಿ ದುಡಿಯುತ್ತಿರುವ ಮುನಿಸಿಪಲ್ ಕಾರ್ಮಿಕರಿಗೆ ಅನ್ಯಾಯ ಮಾಡಿದಂತೆ ಅಗುತ್ತದೆ. ಸರ್ಕಾರ ಎಲ್ಲಾರನ್ನು ಸಮಾನವಾಗಿ ನಡೆಸಿಕೊಳ್ಳಬೇಕಾದ ಸಂವಿಧಾನ ಬದ್ದ ಕರ್ತವ್ಯವನ್ನು ಹೋಂದಿದೆ ಎಲ್ಲರನ್ನು ಹಂತ ಹಂತ ವಾಗಿ ಖಾಯಂ ಮಾಡಬೆಕು ಅದುವರೆವಿಗೆ ಎಲ್ಲಾರನ್ನು ನೇರ ಪಾವತಿ ಅಡಿಯಲ್ಲಿ ತಂದು ಸಮಾನ ಕೆಲಸ ಸಮಾನ ವೇತವನ್ನು ನಿಡಬೇಕು, ಲ್ಲಾ ಗುತ್ತಿಗೆ ಮುನಿಸಿಪಾಲ್ ಕಾರ್ಮಿಕರು ಅಲ್ಪ ವೇತನದಲ್ಲಿ ಬದುಕುತ್ತಿರುವ ಕಾರಣ ಎಲ್ಲರಿಗೂ ಸರ್ಕಾರದ ಗೃಹಭಾಗ್ಯ ಯೋಜನೆಯಡಿಯಲ್ಲಿ ಒಳಗೊಂಡು ಉಚಿತ ನೀವೆಶನವನ್ನು ನೀಡಬೇಕು, ಎಂದು ಒತ್ತಾಯಿಸಿ ವಿವಿಧ ಮುನಿಸಿಪಲ್ ಕಾರ್ಮಿಕರು ಸೆ.23 ರಂದು ಶುಕ್ರವಾರ ಮಧ್ಯಾನ್ಹ ತುಮಕೂರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು ಪ್ರತಿಭಟನಾ ಸ್ಥಳಕ್ಕೆ ಅಗಮಿಸಿದ ಜಿಲ್ಲಾಧಿಕಾರಿಗಳಾದ ಶ್ರೀ ಪಾಟಿಲ್…
ತುಮಕೂರು ತುಮಕೂರು ನಗರ ಕಾಂಗ್ರೆಸ್ ಅಸಂಘಟಿತ ಕಾರ್ಮಿಕರ ವಿಭಾಗದಿಂದ ನಗರದ 35 ವಾರ್ಡ್‍ಗಳ ಅಧ್ಯಕ್ಷರನ್ನು ನೇಮಕ ಮಾಡಲಾಯಿತು. ಮಾಜಿ ಶಾಸಕರು ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಡಾ.ರಫೀಕ್ ಅಹ್ಮದ್ ಈ ನೇಮಕಾತಿ ಪತ್ರವನ್ನು ನೀಡಿ ಪಕ್ಷ ಸಂಘಟನೆ ಮಾಡುವಂತೆ ಸಲಹೆ ಸೂಚನೆ ನೀಡಿದರು. ಹಾಗೂ ಭಾರತ್ ಜೋಡೋ ಯಾತ್ರೆಯಲ್ಲಿ ಭಾಗಿಯಾಗುವಂತೆ ಪ್ರೇರೇಪಿಸಿದರು. ಕೆಪಿಸಿಸಿ ಕಾರ್ಯದರ್ಶಿ ಡಾ. ಇಮ್ತಿಯಾಜ್, ಜಿಲ್ಲಾ ಅಸಂಘಟಿತ ಕಾರ್ಮಿಕರ ಅಧ್ಯಕ್ಷರಾದ ನಿಶಾತ್, ತಾಲ್ಲೂಕು ವಿಭಾಗದ ಅಧ್ಯಕ್ಷರಾದ ಬಷೀರ್ ಅಹಮದ್ ಹಾಜರಿದ್ದರು.
ತುಮಕೂರು ಯುವಜನಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಮೂಲಕ ತಮ್ಮದೈಹಿಕಆರೋಗ್ಯ ಹಾಗೂ ಆರೋಗ್ಯಕರ ಮನಸ್ಥಿತಿ ಬೆಳೆಸಿಕೊಳ್ಳಬೇಕು.ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರಕ್ರೀಡೆಗೆ ಹೆಚ್ಚು ಒತ್ತು ನೀಡಿದ್ದು, ಇಂದು ನಮ್ಮ ಕ್ರೀಡಾಪಟುಗಳು ಅಂತರಾಷ್ಟ್ರೀಯ ಮಟ್ಟದ ಕ್ರೀಡೆಗಳಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದಾರೆಎಂದುರಾಜ್ಯರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಎಸ್.ಶಿವಪ್ರಸಾದ್ ಹೇಳಿದರು. ಪ್ರಧಾನಿ ನರೇಂದ್ರ ಮೋದಿಯವರಜನ್ಮದಿನಾಚರಣೆ ಅಂಗವಾಗಿ ಜಿಲ್ಲಾ ಬಿಜೆಪಿ ರೈತ ಮೋರ್ಚಾ ನಗರದ ಸರ್ಕಾರಿಜ್ಯೂನಿಯರ್‍ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದಕಬಡ್ಡಿ ಪಂದ್ಯಾವಳಿಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ದೇಶದ ಭವಿಷ್ಯರೂಪಿಸಬೇಕಾದಯುವಜನರುದೇಶಾಭಿಮಾನ ಬೆಳೆಸಿಕೊಂಡು ದೇಶವನ್ನು ಮುನ್ನಡೆಸುವ ಸಾಮಥ್ರ್ಯ ಬೆಳೆಸಿಕೊಳ್ಳಬೇಕು.ಇಂದು ಬಿಜೆಪಿ ಸರ್ಕಾರಕ್ರೀಡೆಗೆ ಹೆಚ್ಚು ಉತ್ತೇಜನ ನೀಡುತ್ತಿದೆ.ಜನರಿಂದಕಣ್ಮರೆಯಾಗುತ್ತಿರುವ ದೇಸಿ ಕ್ರೀಡೆಗಳನ್ನು ಉಳಿಸಿ, ಬೆಳೆಸಬೇಕು. ಕಬಡ್ಡಿಯಂತಹಗ್ರಾಮೀಣ ದೇಸಿ ಕ್ರೀಡೆಗೆಒತ್ತು ನೀಡಬೇಕುಎಂದು ಹೇಳಿದರು. ಬೆಳಿಗ್ಗೆ ಶಾಸಕ ಜಿ.ಬಿ.ಜ್ಯೋತಿಗಣೇಶ್ ಆಗಮಿಸಿ ಪಂದ್ಯಾವಳಿಗೆ ಶುಭಕೋರಿದರು. ಜಿಲ್ಲಾ ಬಿಜೆಪಿ ಅಧ್ಯಕ್ಷ ಹೆಬ್ಬಾಕರವಿಶಂಕರ್, ಟೂಡಾಅಧ್ಯಕ್ಷಚಂದ್ರಶೇಖರ್, ಮಾಜಿಅಧ್ಯಕ್ಷ ಬಾವಿಕಟ್ಟೆ ನಾಗಣ್ಣ, ಸದಸ್ಯ ಸತ್ಯಮಂಗಲ ಜಗದೀಶ್, ರೈತ ಮೋರ್ಚಾರಾಜ್ಯಉಪಾಧ್ಯಕ್ಷೆ ಮಂಜುಳ, ಜಿಲ್ಲಾ ಬಿಜೆಪಿ ರೈತ ಮೋರ್ಚಾಅಧ್ಯಕ್ಷ ಶಿವಶಂಕರ್ ಬಾಬು, ನಗರ ಪಾಲಿಕೆ ಸದಸ್ಯರಾದ ಸಿ.ಎಸ್.ರಮೇಶ್, ಮಂಜುನಾಥ್,…
ಕೊರಟಗೆರೆ ತಾಲ್ಲೂಕಿನ ಹುಲಿಕುಂಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಂಡಿನ ಪಾಳ್ಯದ ಹಾಲು ಉತ್ಪಾದಕರ ಸಂಘದ ರಾಸುಗಳ ಗುಂಪು ವಿಮಾ ಯೋಜನೆಯನ್ನು ತುಮಕೂರು ಹಾಲು ಉತ್ಪಾದಕರ ಸಂಘದ ನಿರ್ದೇಶಕರಾದ ಈಶ್ವರಯ್ಯರವರು ಉದ್ಘಾಟಿಸಿ. ಮಾತನಾಡಿದ ಅವರು ,ಹಾಲು ಉತ್ಪಾದಕರ ಸಂಘದ ಸಭೆ ಕರೆದಾಗ ಎಲ್ಲ ರೈತರು ಸಭೆಯಲ್ಲಿ ಹಾಜರಾಗಿ ನಿಮ್ಮ ಅನುಕೂಲಕ್ಕಾಗಿ ಇರುವ ಕೆಲವು ಯೋಜನೆಗಳ ಬಗ್ಗೆ ತಿಳಿದುಕೊಳ್ಳುವಂತೆ ಸಲಹೆ ನೀಡಿದರು. ರಾಸುಗಳನ್ನು ಹೇಗೆ ನೋಡಿಕೊಳ್ಳಬೇಕು? ಪೆÇೀಷಣೆ ಹೇಗೆ ಮಾಡಬೇಕು? ವಿಮೆ ಮಾಡಿಸಿದರೆ ರೈತರಿಗೆ ಯಾವ ರೀತಿಯ ಲಾಭ ಇರುತ್ತದೆ ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಅಧಿಕಾರಿಗಳು ನೀಡುತ್ತಾರೆ. ರೈತರು ಸಭೆಗೆ ಹಾಜರಾಗದಿದ್ದರೆ ಈ ಎಲ್ಲ ಮಾಹಿತಿಗಳು ಸಿಗುವುದಿಲ್ಲ. ಆದ್ದರಿಂದ ತಾವೆಲ್ಲರೂ ಸಭೆಗೆ ಹಾಜರಾಗಬೇಕು. ಹಾಗೆ ನಿಮ್ಮ ಮನೆಯ ಎಲ್ಲಾ ರಾಸುಗಳಿಗೂ ವಿಮೆ ಮಾಡಿಸಿ ಹಾಲು ಉತ್ಪಾದಕರ ಸಂಘದಿಂದ ಬರುವ ಅನುಕೂಲಗಳನ್ನು ಎಲ್ಲಾ ರೈತರು ಪಡೆದುಕೊಳ್ಳಬೇಕು ಎಂದು ತಿಳಿಸಿದರು. ಗುಂಡಿನ ಪಾಳ್ಯದಲ್ಲಿ ನೂತನ ಹಾಲು ಉತ್ಪಾದಕರ ಕಟ್ಟಡಕ್ಕೆ ಗುದ್ದಲಿಪೂಜೆ ನೆರವೇರಿಸಿದರು. 2021-2022ನೇ ಸಾಲಿನಲ್ಲಿ ಸಂಘಕ್ಕೆ…
ತುಮಕೂರು ಭಿಕ್ಷಾಟನೆ ನಿರ್ಮೂಲನೆಗಾಗಿ ಜನರಲ್ಲಿ ಅರಿವು ಮೂಡಿಸಲು ಪ್ರಚಾರ ವಾಹನದ ಮೂಲಕ ಸೆಪ್ಟೆಂಬರ್ ಮಾಹೆ ಅಂತ್ಯದವರೆಗೂ ಜನ-ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಟಿ.ಎಸ್.ಎಲ್ ಪ್ರೇಮಾ ತಿಳಿಸಿದರು. ಜಿಲ್ಲಾಡಳಿತ, ಸಮಾಜ ಕಲ್ಯಾಣ ಇಲಾಖೆ, ಕೇಂದ್ರ ಪರಿಹಾರ ಸಮಿತಿ, ನಿರಾಶ್ರಿತರ ಪರಿಹಾರ ಕೇಂದ್ರದ ಸಂಯುಕ್ತಾಶ್ರಯದಲ್ಲಿಂದು ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಕಚೇರಿಯ ಮುಂಭಾಗದಲ್ಲಿ ಭಿಕ್ಷಾಟನೆ ನಿರ್ಮೂಲನೆಗಾಗಿ – ಜನಜಾಗೃತಿ ಕಾರ್ಯಕ್ರಮದ ಪ್ರಚಾರ ವಾಹನಕ್ಕೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಸಾರ್ವಜನಿಕ ಸ್ಥಳಗಳಲ್ಲಿ ಹಾಡುವುದು, ಕುಣಿಯುವುದು, ಭವಿಷ್ಯ ಹೇಳುವುದು, ಕೈಚಳಕಗಳನ್ನು ಮಾಡಿ ತೋರಿಸುವುದು, ಭಿಕ್ಷೆಯನ್ನು ಬೇಡುವ ನೆಪದಲ್ಲಿ ಗಾಯವನ್ನು ಪ್ರದರ್ಶಿಸುವುದು, ಪ್ರಾಣಿಗಳನ್ನು ಪ್ರದರ್ಶಿಸುವ ನೆಪದಲ್ಲಿ ಭಿಕ್ಷೆ ಬೇಡುವುದು, ಮೈಗೆ ಚಾಟಿಯನ್ನು ಹೊಡೆದುಕೊಂಡು ಪ್ರದರ್ಶನ ನೀಡುವುದು, ಕೈಕಾಲುಗಳಿಲ್ಲವೆಂದು ನಟನೆ ಮಾಡುವುದು ಇವೆಲ್ಲವುಗಳನ್ನು ಕಾನೂನು ಪ್ರಕಾರ ಭಿಕ್ಷಾಟನೆಯೆಂದು ಪರಿಗಣಿಸಲಾಗಿದೆ. ಇದನ್ನು ತಪ್ಪಿಸಿ ಅಂತಹವರಿಗೆ ಬೇರೆ-ಬೇರೆ ರೀತಿಯ ಉದ್ಯೋಗಾವಕಾಶಗಳನ್ನು ನೀಡುವ ಉದ್ದೇಶದಿಂದ ಭಿಕ್ಷಾಟನೆ ನಿರ್ಮೂಲನೆಗಾಗಿ ಜನ-ಜಾಗೃತಿ ಕಾರ್ಯಕ್ರಮ…
ತುಮಕೂರು ಡಾ. ಬಿ.ಆರ್. ಅಂಬೇಡ್ಕರ್ ಅವರ ಬದುಕು, ಬರಹ, ಸಾಧನೆ ಈ ದೇಶದ ಪ್ರತಿಯೊಬ್ಬ ನಾಗರಿಕನಿಗೂ ಆದರ್ಶವಾಗಬೇಕು. ಎಲ್ಲರೂ ಅವರನ್ನು ಪೂಜ್ಯನೀಯ ಭಾವನೆಯಿಂದ ಸ್ಮರಿಸಬೇಕು ಎಂದು ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕøತ ಕಲಾಶ್ರೀ ಡಾ.ಲಕ್ಷ್ಮಣ್ ದಾಸ್ ಅಭಿಪ್ರಾಯಪಟ್ಟರು. ಈ ದೇಶದ ಎಲ್ಲಾ ನಾಗರೀಕರು ಮುಕ್ತ ಮನಸ್ಸಿನಿಂದ ಬಾಬಾ ಸಾಹೇಬರ ಚಿಂತನೆಗಳನ್ನು ಸ್ವೀಕರಿಸಬೇಕು. ಭೌದ್ಧಿಕ ಶಕ್ತಿಯನ್ನು ವಿಸ್ತರಿಸಿಕೊಳ್ಳುವುದರ ಮೂಲಕ ಸಮಾಜವನ್ನು ಅರ್ಥ ಮಾಡಿಕೊಂಡು ಸಮಾಜದ ಸಮಸ್ಯೆಗಳಿಗೆ ಉತ್ತರವನ್ನು ಕಂಡುಕೊಳ್ಳಬೇಕು. ಭಾರತದ ಬಹುತ್ವದ ನೆಲೆಯೊಳಗೆ ಪ್ರತಿಯೊಂದು ಮತ, ಧರ್ಮಕ್ಕೂ ಸಮಾನತೆಯನ್ನು ಕಲ್ಪಿಸಿ ಸ್ವಾತಂತ್ರ್ಯ, ಸಮಾನತೆ, ಸಾಮಾಜಿಕ ನ್ಯಾಯವನ್ನು ದೊರಕಿಸಿಕೊಡಲು ಸಂವಿಧಾನವನ್ನು ಬರೆಯಲಾಗಿದೆ ಎಂದರು. ಸಂವಿಧಾನವು ಈ ನೆಲದ ಶ್ರೇಷ್ಠ ಗ್ರಂಥವಾಗಿ ಮಾರ್ಪಟ್ಟಿರುವುದು, ಜಗತ್ತಿನ ವಿವಿಧ ದೇಶಗಳಿಗೆ ಆದರ್ಶವಾಗಿರುವುದು ನಮ್ಮೆಲ್ಲರ ಹೆಮ್ಮೆಯ ವಿಷಯ. ಬಾಬಾ ಸಾಹೇಬ್ ಅಂಬೇಡ್ಕರ್ ಕಡು ಬಡತನದ ಕುಟುಂಬದಲ್ಲಿ ಹುಟ್ಟಿ ಜಗತ್ತೆ ಬೆರಗಾಗುವಂತೆ ಅತ್ಯುನ್ನತ ಪದವಿಗಳನ್ನು ಪಡೆದು ಶಿಕ್ಷಣ ಕ್ಷೇತ್ರದ ಮೇರು ಶಿಖರವಾಗಿ ಉಳಿದಿದ್ದಾರೆ. ಅವರ ಜ್ಞಾನದ ಕಾತುರತೆ ಇಂದಿನ…






