ತುಮಕೂರು: ಭಿಕ್ಷಾಟನೆ ನಿರ್ಮೂಲನೆಗಾಗಿ ಜನರಲ್ಲಿ ಅರಿವು ಮೂಡಿಸಲು ಪ್ರಚಾರ ವಾಹನದ ಮೂಲಕ ಸೆಪ್ಟೆಂಬರ್ ಮಾಹೆ ಅಂತ್ಯದವರೆಗೂ ಜನ-ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಟಿ.ಎಸ್.ಎಲ್ ಪ್ರೇಮಾ ತಿಳಿಸಿದರು. ಜಿಲ್ಲಾಡಳಿತ, ಸಮಾಜ ಕಲ್ಯಾಣ ಇಲಾಖೆ, ಕೇಂದ್ರ ಪರಿಹಾರ ಸಮಿತಿ, ನಿರಾಶ್ರಿತರ ಪರಿಹಾರ ಕೇಂದ್ರದ ಸಂಯುಕ್ತಾಶ್ರಯದಲ್ಲಿಂದು ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಕಚೇರಿಯ ಮುಂಭಾಗದಲ್ಲಿ ಭಿಕ್ಷಾಟನೆ ನಿರ್ಮೂಲನೆಗಾಗಿ – ಜನಜಾಗೃತಿ ಕಾರ್ಯಕ್ರಮದ ಪ್ರಚಾರ ವಾಹನಕ್ಕೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಸಾರ್ವಜನಿಕ ಸ್ಥಳಗಳಲ್ಲಿ ಹಾಡುವುದು, ಕುಣಿಯುವುದು, ಭವಿಷ್ಯ ಹೇಳುವುದು, ಕೈಚಳಕಗಳನ್ನು ಮಾಡಿ ತೋರಿಸುವುದು, ಭಿಕ್ಷೆಯನ್ನು ಬೇಡುವ ನೆಪದಲ್ಲಿ ಗಾಯವನ್ನು ಪ್ರದರ್ಶಿಸುವುದು, ಪ್ರಾಣಿಗಳನ್ನು ಪ್ರದರ್ಶಿಸುವ ನೆಪದಲ್ಲಿ ಭಿಕ್ಷೆ ಬೇಡುವುದು, ಮೈಗೆ ಚಾಟಿಯನ್ನು ಹೊಡೆದುಕೊಂಡು ಪ್ರದರ್ಶನ ನೀಡುವುದು, ಕೈಕಾಲುಗಳಿಲ್ಲವೆಂದು ನಟನೆ ಮಾಡುವುದು ಇವೆಲ್ಲವುಗಳನ್ನು ಕಾನೂನು ಪ್ರಕಾರ ಭಿಕ್ಷಾಟನೆಯೆಂದು ಪರಿಗಣಿಸಲಾಗಿದೆ. ಇದನ್ನು ತಪ್ಪಿಸಿ ಅಂತಹವರಿಗೆ ಬೇರೆ-ಬೇರೆ ರೀತಿಯ ಉದ್ಯೋಗಾವಕಾಶಗಳನ್ನು ನೀಡುವ ಉದ್ದೇಶದಿಂದ ಭಿಕ್ಷಾಟನೆ ನಿರ್ಮೂಲನೆಗಾಗಿ ಜನ-ಜಾಗೃತಿ ಕಾರ್ಯಕ್ರಮ…
Author: News Desk Benkiyabale
ತುಮಕೂರು : ಗುರು ಎನ್ನಿಸಿಕೊಂಡಿರುವವನು ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸಬೇಕು. ಇದರ ಹಾದಿಯಲ್ಲಿ ಭಾರತದ ಸರ್ವಶ್ರೇಷ್ಠ ಶಿಕ್ಷಕರಾದ ಡಾ. ಸರ್ವೆಪಲ್ಲಿ ರಾಧಾಕೃಷ್ಣನ್ ಮತ್ತು ಭಾರತದ ಸರ್ವಶ್ರೇಷ್ಠ ಇಂಜಿನಿಯರ್ ಭಾರತ ರತ್ನ ಪುರಸ್ಕøತ ವಿಶ್ವೇಶ್ವರಯ್ಯನವರು ಭಾರತಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಹಿಂದೂಸ್ತಾನ್ ಎರೋನಾಟಿಕ್ಸ್ ಲಿಮಿಟೆಡ್‍ನ ನಿರ್ವಹಣಾಧಿಕಾರಿ ಬಿ. ಕೃಷ್ಣಕುಮಾರ್ ನೆನೆದರು. ನಗರದ ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಶಿಕ್ಷಕರ ಮತ್ತು ಇಂಜಿನಿಯರ್ ದಿನಾಚರಣೆಯನ್ನು ದೀಪ ಬೆಳಗಿಸುವ ಮೂಲಕ ಬಿ. ಕೃಷ್ಣಕುಮಾರ್‍ವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಶಿಕ್ಷಣ ಭೀಷ್ಮ ಡಾ.ಹೆಚ್.ಎಂ ಗಂಗಾಧರಯ್ಯರವರನ್ನು ನೆನೆದು ಸಮಾಜಕ್ಕೆ ಅವರ ಕೊಡುಗೆ ಅಪಾರ ಎಂದರು. ಮಕ್ಕಳಿಗೆ ಶಿಕ್ಷಣ ನೀಡುವುದರ ಜೊತೆಗೆ ಅವರ ಭವಿಷ್ಯ ರೂಪಿಸುವುದರೊಂದಿಗೆ ದೇಶದ ಭವಿಷ್ಯವನ್ನು ರೂಪಿಸಬಹುದಾಗಿದೆ. ಇಂದಿನ ದಿನದಲ್ಲಿ ಇಂಜಿನಿಯರಿಂಗ್ ವೃತ್ತಿ ಮೌಲ್ಯವು ಹೆಚ್ಚುತ್ತಿರುವುದರಿಂದ ವಿದ್ಯಾರ್ಥಿಗಳು ಹೆಚ್ಚಾಗಿ ಐಟಿ ವಲಯವನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ ಎಂದರು. ನಗರ ಕೇಂದ್ರೀಯ ವಿದ್ಯಾಲಯದ ಮತ್ತು ರಾಷ್ಟ್ರ ಪ್ರಶಸ್ತಿ ಪುರಷ್ಕøತರಾದ ಜಿ ಪೊನಶಂಕರಿ ಮಾತನಾಡಿ, ಸಮಾಜದ ಅಭಿವೃದ್ಧಿಗೆ…
ತುಮಕೂರು ಒಂದು ಕಾಲದಲ್ಲಿ ರಾಜಾಧಿರಾಜರಾಗಿ ಮೆರೆದ ಕ್ಷತ್ರಿಯ ಸಮಾಜ ಇಂದು ಮೀಸಲಾತಿಗಾಗಿ ಬೇಡುವಂತಹ ಸ್ಥಿತಿಗೆ ಬಂದಿದ್ದರೆ, ಅದಕ್ಕೆ ಸ್ವಾತಂತ್ರ ನಂತರದಲ್ಲಿ ನಮ್ಮ ಸಮಾಜದ ಇತಿಹಾಸ, ಪರಂಪರೆಯನ್ನು ಮರೆತಿದ್ದೇ ಕಾರಣ ಎಂದು ಕರ್ನಾಟಕ ಕ್ಷತ್ರಿಯ ಒಕ್ಕೂಟ(ರಿ)ರಾಜ್ಯಾಧ್ಯಕ್ಷ ಉದಯಸಿಂಗ್ ಅಭಿಪ್ರಾಯಪಟ್ಟಿದ್ದಾರೆ. ನಗರದ ಕೊಲ್ಲಾಪುರದಮ್ಮ ಸಮುದಾಯಭವನದಲ್ಲಿ ಕರ್ನಾಟಕ ಕ್ಷತ್ರಿಯ ಒಕ್ಕೂಟದಿಂದ ಆಯೋಜಿಸಿದ್ದ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತಿದ್ದ ಅವರು,ರಾಜರಾಗಿ, ಸಾಮಂತರಾಗಿ, ಒಡೆಯರಾಗಿ ಆಳ್ವಿಕೆ ನಡೆಸಿದ ಕ್ಷತ್ರಿಯ ಸಮಾಜ ಪ್ರಜಾಪ್ರಭುತ್ವ ಬಂದು ಕೇವಲ 70-80ವರ್ಷದಲ್ಲಿ ದಯನೀಯ ಸ್ಥಿತಿಗೆ ಬಂದಿದ್ದೇವೆ.ನಮ್ಮ ತನವನ್ನೇ ಮರೆತಿದ್ದು ಮತ್ತು ನಮ್ಮೊಳಗಿನ ಉಪಪಂಗಡಗಳ ನಡುವಿನ ವೈಮನಸ್ಸು ಇಂದಿನ ಸ್ಥಿತಿಗೆ ಕಾರಣವಾಗಿದೆ ಎಂದರು. ರಾಜ್ಯದಲ್ಲಿರುವ ಸುಮಾರು 36 ಕ್ಷತ್ರಿಯ ಉಪಪಂಗಡಗಳು ಒಂದುಗೂಡಿದರೆ ರಾಜ್ಯದ ಒಟ್ಟಾರೆ ಜನಸಂಖ್ಯೆಯ ಶೇ22ರಷ್ಟಿದೆ. ಅಂದರೆ 1.50 ಕೋಟಿ ಜನರಿದ್ದೇವೆ. ತಿಗಳ, ಅಗ್ನಿವಂಶ ತಿಗಳ, ಆಗ್ನಿಕುಲ, ಶಂಭುಕುಲ,ವೈನಿಕುಲ ಎಂದು ವಿಭಾಗವಾದಷ್ಟು ರಾಜಕೀಯ ಅಧಿಕಾರದಿಂದ ದೂರವೇ ಉಳಿಯುತ್ತಿವೆ. ನಾವು ಇಂದು ಅನುಭವಿಸುತ್ತಿರುವ ಅರ್ಥಿಕ, ಸಮಾಜಿಕ ಶೈಕ್ಷಣಿಕ ಸಮಸ್ಯೆಗೆ ರಾಜಕೀಯ ಅಧಿಕಾರವೇ ಪರಿಹಾರವಾಗಿರುವ ಹಿನ್ನೆಲೆಯಲ್ಲಿ…
ತುಮಕೂರು ಶಿಕ್ಷಣದ ಜತೆಗೆ ಕ್ರೀಡೆಯನ್ನು ನಾನಾ ಮಜಲುಗಳಲ್ಲಿ ಜೋಡಣೆ ಮಾಡಿದರೆ ಮಾತ್ರ ಕ್ರೀಡೆ ಬೆಳೆಯಲು ಮತ್ತು ಜಾಗತಿಕ ಮಟ್ಟದ ಸವಾಲುಗಳನ್ನು ಎದುರಿಸಲು ಸಾಧ್ಯ. ಸರ್ಕಾರ ಪರಿಣಾಮಕಾರಿಯಾದ ‘ಕ್ರೀಡಾನೀತಿ’ ಜಾರಿಗೊಳಿಸಲು ಮುಂದಾಗಬೇಕು ಎಂದು ಹಾಲಪ್ಪ ಪ್ರತಿಷ್ಠಾನದ ಅಧ್ಯಕ್ಷರಾದ ಮುರಳೀಧರ ಹಾಲಪ್ಪ ಅಭಿಪ್ರಾಯಪಟ್ಟರು. ನಗರದ ರವೀಂದ್ರ ಕಲಾನಿಕೇತನದಲ್ಲಿ ನಗರವೂ ಸೇರಿದಂತೆ ಜಿಲ್ಲೆಯ ಎಲ್ಲಾ 10 ತಾಲ್ಲೂಕುಗಳ ಕ್ರೀಡಾಸಕ್ತರು, ತರಬೇತುದಾರರು, ಕ್ರೀಡಾಪಟುಗಳೊಂದಿಗೆ ಮಂಗಳವಾರ ಸಭೆ ನಡೆಸಿ ಚರ್ಚಿಸಿದ ಅವರು, ‘ಕ್ರೀಡಾನೀತಿ’ ಜಾರಿಗೊಳಿಸಬೇಕೆಂಬ ಉದ್ಧೇಶವನ್ನಿಟ್ಟುಕೊಂಡು ಸರ್ಕಾರದ ಮೇಲೆ ಒತ್ತಡ ಹೇರಲು ಇಂದು ಇಲ್ಲಿ ಸಭೆ ಸೇರಿ ಚರ್ಚಿಸಲಾಗುತ್ತಿದೆ ಎಂದರು. ಪ್ರತಿ ಪಂಚಾಯಿತಿ ಮಟ್ಟದಲ್ಲೂ ಬಿಪಿಎಡ್, ಎಂಪಿಎಡ್ ತರಬೇತಿ ಹೊಂದಿದ ತರಬೇತುದಾರರನ್ನು ಇಬ್ಬರು ಅಥವಾ ಮೂವರು ಅಭ್ಯರ್ಥಿಗಳನ್ನು ಸರ್ಕಾರದ ವತಿಯಿಂದ ಗೌರವಧನದ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಬೇಕು, ತಾಲ್ಲೂಕುಗಳಲ್ಲಿರುವ ಕ್ರೀಡಾಂಗಣಗಳನ್ನು ಸುವ್ಯವಸ್ಥೆಯಾಗಿ ಅಭಿವೃದ್ಧಿಪಡಿಸಲು ಕ್ರೀಡಾಂಗಣದ ಸುತ್ತಲೂ ಫೆನ್ಸಿಂಗ್ ಅಳವಡಿಸುವುದು, ಶೌಚಾಲಯಗಳು, ನೀರಿನ ವ್ಯವಸ್ಥೆ, ಸೂಪರ್ ವೈಸರ್, ಸೆಕ್ಯುರಿಟಿ ವ್ಯವಸ್ಥೆ ಸೇರಿದಂತೆ ಕನಿಷ್ಠ ಸೌಲಭ್ಯಗಳು ದೊರಕುವಂತಾಗಬೇಕು, ಹಾಗೆಯೇ ಕ್ರೀಡಾಂಗಣ ನಿರ್ವಹಣೆಗಾಗಿ…
ತುಮಕೂರು ಕುಂಚಿಟಿಗ ಜನಾಂಗವನ್ನು ಕೇಂದ್ರ ಸರ್ಕಾರದ ಓಬಿಸಿ ಪಟ್ಟಿಗೆ ಸೇರಿಸಲು ಗ್ರಾಮಾಂತರ ಮತ್ತು ಹೋಬಳಿ ಮಟ್ಟದಲ್ಲಿ ಹೋರಾಟ ಅನಿವಾರ್ಯ ಎಂದು ಎಲೆ ರಾಂಪುರದ ಕುಂಚಿಟಿಗ ಮಠದ ಪೀಠಾಧ್ಯಕ್ಷ ಶ್ರೀ ಶ್ರೀ ಹನುಮಂತನಾಥ ಸ್ವಾಮೀಜಿ ತಿಳಿಸಿದ್ದಾರೆ. ಮಧುಗಿರಿ ತಾಲೂಕು ಕುಂಚಿಟಿಗರ ಸಂಘದ ವಾರ್ಷಿಕ ಸಭೆಯ ದಿವ್ಯ ಸಾನಿಧ್ಯ ವಹಿಸಿ ಮಾತನಾಡುತ್ತಾ ಮೀಸಲಾತಿ ಪಡೆಯುವುದರ ಜೊತೆಗೆ ನಮ್ಮ ಅಸ್ತಿತ್ವ ಉಳಿಸಿಕೊಳ್ಳಬಹುದು ಜಿಲ್ಲೆಯ ಕುಂಚಿಟಿಗ ಸಂಘಗಳಲ್ಲಿ ಮಧುಗಿರಿ ಸಂಘ ಪ್ರಥಮ ಸ್ಥಾನದಲ್ಲಿದೆ ಮುಂದಿನ ದಿನಗಳಲ್ಲಿ ತಾಲೂಕು ಸಂಘದಲ್ಲಿ ಕನಿಷ್ಠ ಮೂವತ್ತು ಸಾವಿರ ಸದಸ್ಯರನ್ನು ಹೊಂದಬೇಕಾಗಿದೆ ಅದೇ ರೀತಿ ರಾಜ್ಯದಲ್ಲಿ ಕನಿಷ್ಠ 10 ಮಂದಿ ಕುಂಚಟಿಗ ಶಾಸಕರನ್ನು ಆಯ್ಕೆ ಮಾಡಬೇಕಾಗಿದೆ ಕುಂಚಿಟಿಗ ಸಂಘದಲ್ಲಿ ಕೇವಲ ವಿಸಿಟಿಂಗ್ ಕಾರ್ಡ್ ಗೋಸ್ಕರ ನಿರ್ದರ್ಶಕರಾಗಬೇಡಿ ಜವಾಬ್ದಾರಿ ಮತ್ತು ಬದ್ಧತೆ ಅರಿತು ಕೆಲಸ ಮಾಡಿ ಪ್ರತಿಯೊಬ್ಬರೂ ಸಮಾಜಕ್ಕೆ ತಮ್ಮ ಕೊಡುಗೆ ಏನು ಎಂಬ ಬಗ್ಗೆ ಆತ್ಮ ವಿಮರ್ಶೆ ಮಾಡಿಕೊಳ್ಳಿ ಎಂದರು. ಕುಂಚಿಟಿಗರ ಸಂಘದ ಅಧ್ಯಕ್ಷ ಪಿ ಎನ್ ರಾಜಶೇಖರ್ ಅಧ್ಯಕ್ಷತೆ ವಹಿಸಿ ಮಾತನಾಡಿದರು…
ತುಮಕೂರು ಜಿಲ್ಲೆಯ ಶಿರಾ ನಗರದಲ್ಲಿ ಸೆಪ್ಟಂಬರ್ 6 ಮತ್ತು 7 ರಂದು ನಡೆದ ಸಿಪಿಐ 13ನೇ ಜಿಲ್ಲಾ ಸಮ್ಮೇಳನದಲ್ಲಿ ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರದ ವಿವಿಧ ಸಮಸ್ಯೆಗಳ ಪರಿಹಾರ ಕುರಿತಂತೆ 22 ನಿರ್ಣಯಗಳನ್ನು ಕೈಗೊಂಡಿದ್ದು, ಮುಂದಿನ ಮೂರು ವರ್ಷಗಳ ಕಾಲ ಇವುಗಳ ಜಾರಿಗಾಗಿ ವಿವಿಧ ರೀತಿಯ ಹೋರಾಟ ಹಮ್ಮಿಕೊಳ್ಳುವುದಾಗಿ ಸಿಪಿಐ ಜಿಲ್ಲಾ ಕಾರ್ಯದರ್ಶಿ ಗಿರೀಶ್ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,ಬೆಳೆಹಾನಿ ವೈಜ್ಞಾನಿಕ ಪರಿಹಾರ, ಜಾನುವಾರುಗಳ ಅಕಾಲಿಕ ಮರಣಕ್ಕೆ ಪರಿಹಾರ, 12 ಗಂಟೆಗಳ ಕಾರ್ಮಿಕರ ದುಡಿಮೆ ರದ್ದು, ಮುರುಘಾ ಶರಣರ ವಿರುದ್ದ ಸೂಕ್ತ ತನಿಖೆಗೆ ಒತ್ತಾಯ ಸೇರಿದಂತೆ ಹಲವು ಸ್ಥಳೀಯ ಸಮಸ್ಯೆಗಳ ಪರಿಹಾರದ ಕುರಿತು ನಿರ್ಣಯ ಕೈಗೊಳ್ಳಲಾಗಿದ್ದು, ಇದೇ ತಿಂಗಳ 24-27ರವರೆಗೆ ಹಾಸನದಲ್ಲಿ ನಡೆಯುವ ರಾಜ್ಯಮಟ್ಟದ 24ನೇ ಸಮ್ಮೇಳನದಲ್ಲಿ ಈ ವಿಚಾರಗಳನ್ನು ಮಂಡಿಸಲಾಗುವುದು ಎಂದರು. ಕೇಂದ್ರ ಸರಕಾರದ ಇತ್ತೀಚಿನ ಬಹುತೇಕ ಕಾಯ್ದೆಗಳು ಕಾರ್ಮಿಕರಿಗೆ ಮಾರಕ, ಉದ್ದಿಮೆದಾರರಿಗೆ ಪೂರಕ ಎಂಬಂತಾಗಿವೆ. ಹಾಗಾಗಿ ಸರಕಾರಗಳು ಕಾರ್ಮಿಕರ ಪರವಾದ ಕಾಯ್ದೆಗಳನ್ನು ಜಾರಿಗೆ ತರಬೇಕು, ದುಡಿಮೆಯ ಅವಧಿಯನ್ನು ಈ…
ತುಮಕೂರು ಜನರು ನಮಗೆ ಗೌರವ ಕೊಡುತ್ತಾರೆ ಎಂದರೆ, ಅವರು ನಮ್ಮಿಂದ ಕೆಲವನ್ನು ನಿರೀಕ್ಷಿಸುತ್ತಾರೆ.ಹಾಗಾಗಿ ಪುರೋಹಿತರಾಗಿರುವ ನಾವುಗಳು, ಜನರ ನಿರೀಕ್ಷೆಗೆ ತಕ್ಕಂತೆ, ಆಚಾರ, ವಿಚಾರ, ಉಡುಗೆ, ತೊಡುಗೆಗಳನ್ನು ಹೊಂದುವುದು ಸೂಕ್ತ ಎಂದು ಹಿರೇಮಠದ ಡಾ.ಶ್ರೀಶಿವಾನಂದ ಶಿವಾಚಾರ್ಯಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ. ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಅಖಿಲ ಕರ್ನಾಟಕ ವೀರಶೈವ ಪುರೋಹಿತ ಮಹಾಸಭಾ(ರಿ)ನ ತುಮಕೂರು ಜಿಲ್ಲಾ ಶಾಖೆ ಉದ್ಘಾಟನೆ ಹಾಗೂ ಶ್ರೀವೀರಭದ್ರೇಶ್ವರರ ಜಯಂತೋತ್ಸವ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡುತಿದ್ದ ಅವರು,ಮಂತ್ರಗಳ ಸ್ಪಷ್ಟ ಉಚ್ಚಾರಣೆಯ ಜೊತೆಗೆ,ಅವುಗಳ ಅರ್ಥವನ್ನು ಜನರಿಗೆ ಬಿಡಿಸಿ ಹೇಳುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳಿ, ಎಂದಿಗೂ ಮಂತ್ರಕ್ಕಾಗಿ ಮೊಬೈಲ್ ಮೊರೆ ಹೋಗಬೇಡಿ ಎಂದು ಕಿವಿ ಮಾತು ಹೇಳಿದರು. ತುಮಕೂರಿನ ಹಿರೇಮಠದ ವತಿಯಿಂದ ಹಳೆ ನಿಜಗಲ್ ಬಳಿ ನಿರ್ಮಾಣವಾಗಿರುವ ಶ್ರೀವೀರಭದ್ರಸ್ವಾಮಿ ತಪೋವನದಲ್ಲಿ ವೇದೋಪನಿಷತ್ತಿನ ಜೊತೆಗೆ, ರುದ್ರ, ಅಷ್ಟೋತ್ತರ ಸೇರಿದಂತೆ ಹಲವು ಮಂತ್ರ ಕಲಿಸುವ ತರಗತಿಯನ್ನು ಮೇಲಿಂದ ಮೇಲೆ ನಮ್ಮ ನೇತೃತ್ವದಲ್ಲಿಯೇ ಆಯೋಜಿಸಲಾಗುತ್ತದೆ. ತಮ್ಮಲ್ಲಿ ಯಾರಾದರು ಕಲಿಯಲು ಆಸಕ್ತಿ ಉಳ್ಳವರು ಬಂದರೆ, ಅವರಿಗೆ ಎಲ್ಲಾ ರೀತಿಯ ವ್ಯವಸ್ಥೆ ಮಾಡಿಕೊಡಲಾಗುವುದು…
ತುಮಕೂರು ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿಯ ನೂರಾರು ಕೋಟಿ ಹಣವನ್ನು ವಸತಿ ಸಚಿವ ಶ್ರೀ ಸೋಮಣ್ಣ ಹಾಗೂ ಕಾರ್ಮಿಕ ಸಚಿವ ಶ್ರೀ ಶಿವರಾಮ ಹೆಬ್ಬಾರ್ ದುರ್ಬಳಕೆ ಮಾಡಿ ಸ್ಲಂಬೋರ್ಡ ಫಲಾನುಭವಿಗಳಿಗೆ ನೀಡಿದ್ದಾg.É ಇದು ನೈಜ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಬಗೆದ ದ್ರೋಹವಾಗಿದ್ದು ಇದರ ವಿರುದ್ದ ಇದೇ ಸೆಪ್ಟೆಂಬರ್ 22 ರಂದು ರಾಜ್ಯದ್ಯಾಂತ ನೈಜ ಕಟ್ಟಡ ಕಾರ್ಮಿಕರು ಹೋರಾಟ ನಡೆಸಲು ನಿರ್ಧರಿಸಿದ್ದಾರೆ. 1996 ರಲ್ಲಿ ಜಾರಿಗೊಂಡ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಾನೂನಿನ ಅಡಿಯಲ್ಲಿ ಕರ್ನಾಟಕದಲ್ಲಿ 2007 ರಿಂದ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿ ಅಸ್ತಿತ್ವಕ್ಕೆ ಬಂದಿದೆ. ಆದರೆ 2007 ರಿಂದ ಕಲ್ಯಾಣ ಮಂಡಳಿಯ ಪ್ರಮುಖ ಯೋಜನೆಯಾದ `ವಸತಿ ನಿರ್ಮಾಣಕ್ಕೆ ಸಾಲ ಅಥವಾ ಮುಗಂಡ ಹಣ ಪಾವತಿ ಯೋಜನೆ ಇದುವರೆಗೂ ಒಬ್ಬನೇ ಒಬ್ಬ ಕಟ್ಟಡ ಕಾರ್ಮಿಕನಿಗೂ ದೊರೆತಿಲ್ಲ. ಪರಿಸ್ಥಿತಿ ಹೀಗಿರುವಾಗ ಕಳೆದ ವರ್ಷದಿಂದ ವಸತಿ ಸಚಿವ ಶ್ರೀ ವಿ, ಸೋಮಣ್ಣ…
ತುಮಕೂರು ನಮ್ಮಲ್ಲಿ ಏಕತೆ ಇದ್ದರು ಸಹ ಬಹುತ್ವಕ್ಕೆ ಅದು ವಿರುದ್ಧವಾಗಿಲ್ಲ. ಏಕ ರಸತ್ವವನ್ನು ಒಳಗೊಂಡಿರುವ ಬಹುತ್ವ ನಮ್ಮ ಭಾರತೀಯ ಸಂಸ್ಕøತಿಯನ್ನು ಒಳಗೊಂಡಿದೆ ಎಂದು ಬಹುಮುಖಿ ಸಂಸ್ಕøತಿಯ ಚಿಂತಕ ಪೆÇ್ರ. ಹೆಚ್ ಎಸ್ ಶಿವಪ್ರಕಾಶ್ ಅಭಿಪ್ರಾಯ ಪಟ್ಟರು. ವಿಶ್ವವಿದ್ಯಾನಿಲಯ ಕಲಾ ಕಾಲೇಜು ಆವರಣದಲ್ಲಿ 21, ಬುಧವಾರ ಆಯೋಜಿಸಿದ್ದ ಕಲಾಸಿರಿ ಕಾಲೇಜು ವಾರ್ಷಿಕೋತ್ಸವ ಜಾನಪದ ಕಲಾಮೇಳ ಕಾರ್ಯಕ್ರಮದಲ್ಲಿ ‘ಕಲಾಸಿರಿ’ ವಾರ್ಷಿಕ ಸಂಚಿಕೆಯನ್ನ ಉದ್ಘಾಟಿಸಿ ಮಾತನಾಡಿದ ಅವರು ಜನರ ಮುಖಾ- ಮುಖಿಯಿಂದಾಗಿ ಜನಪದ ಕಲೆ ಸಂಸ್ಕøತಿಗಳು ತಮ್ಮನ್ನು ತಾವು ಬಿಂಬಿಸಿಕೊಂಡಿವೆ. ಯುವ ಸಮುದಾಯವು ಅಕ್ಷರ ಬಲ್ಲೆವೆಂದು ಅಹಂಕಾರ ಪಡದೆ ಜನಪದ ಗೌರವಿಸುವ ಕೆಲಸವಾಗಬೇಕು ಹಾಗೆಯೇ ಅವರಿಗೆ ಪೆÇ್ರೀತ್ಸಾಹ ನೀಡಬೇಕು ಎಂದು ತಿಳಿಸಿದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಪೆÇ್ರ. ಎಸ್ ಸಿದ್ದರಾಮಯ್ಯ ಮಾತನಾಡಿ, ಭಾರತವು ಬಹುತ್ವ ಸಂಸ್ಕøತಿಯನ್ನು ಒಳಗೊಂಡಿದೆ. ಆದರೆ ಇತ್ತೀಚಿಗೆ ಜನಪದ ಕಲೆಗಳನ್ನು ತಾತ್ಸಾರ ಮನೋಭಾವದಿಂದ ಕಾಣಲಾಗುತ್ತಿದೆ. ಇವತ್ತಿನ ಶಿಕ್ಷಣ ಪದ್ದತಿಯು ನೆಲಮೂಲ ಸಂಸ್ಕøತಿಯನ್ನು ಸ್ವಪೆÇೀಹನ ಪಡೆಯುತ್ತಿದೆ. ನಾವು ಈ ಕೂಡಲೇ ಎಚ್ಚೆತ್ತುಕೊಳ್ಳದಿದ್ದರೆ…
ತುಮಕೂರು ಗ್ರಾಮಾಂತರದ ಮೈದಾಳ ಗ್ರಾಮದಲ್ಲಿ ಪೆÇೀಷಣ್ ಮಾಸಾಚರಣೆ ಕಾರ್ಯಕ್ರಮ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀಮತಿ ಕಮಲಮ್ಮರವರು, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶಶಿಧರ್, ಕ್ಷೇತ್ರ ಆರೋಗ್ಯ ಅಧಿಕಾರಿ ಜಯಣ್ಣ, ಮೈದಾಳ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಮಾಲ ಮಂಜುನಾಥ್, ಉಪಾಧ್ಯಕ್ಷರಾದ ನರಸಿಂಹ ಮೂರ್ತಿ, ಮೇಲ್ವಿಚಾರಕಿ ಚಿಕ್ಕಮ್ಮ ಸೇರಿದಂತೆ ಶ್ರೀಶಕ್ತಿ ಸಂಘದ ಸದಸ್ಯರು ಗರ್ಭಿಣಿಯರು ಬಾಣಂತಿಯರು ಹಾಗೂ ಅಂಗನವಾಡಿ ಕಾರ್ಯಕರ್ತೆರು ಉಪಸ್ಥಿತರಿದ್ದರು.










