Author: News Desk Benkiyabale

ತುಮಕೂರು ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮವು ಜನಪರ ಹಾಗೂ ಪಾರದರ್ಶಕತೆಯಿಂದ ಕೂಡಿದ್ದು, ಗ್ರಾಮದ ಸಮಸ್ಯೆಗಳ ಬಗ್ಗೆ ನೇರವಾಗಿ, ಮುಕ್ತವಾಗಿ ಚರ್ಚಿಸಲು ಉತ್ತಮ ವೇದಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ತಿಳಿಸಿದರು. ತಿಪಟೂರು ತಾಲ್ಲೂಕು ಹೊನ್ನವಳ್ಳಿ ಹೋಬಳಿ ಮಣಕಿಕೆರೆ ಗ್ರಾಮಪಂಚಾಯತಿ ವ್ಯಾಪ್ತಿಯ ಹಾಲೇನಹಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಈ ಕಾರ್ಯಕ್ರಮದಡಿ ಗ್ರಾಮದಲ್ಲಿ ಬಗೆಹರಿಯದ ಸಮಸ್ಯೆಗಳಿದ್ದಲ್ಲಿ ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡುವುದರ ಮೂಲಕ ಪರಿಹಾರ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದರು. ಗ್ರಾಮಿಣ ಭಾಗದ ಯುವ ಜನತೆ ಸ್ಥಳೀಯ ಸಂಪನ್ಮೂಲ ಹಾಗೂ ಸರ್ಕಾರದ ವಿವಿಧ ಯೋಜನೆಗಳ ನೆರವಿನಿಂದ ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳುವತ್ತ ಮುಂದಾಗಬೇಕು. ರೈತಾಪಿ ವರ್ಗದವರು ಕೃಷಿ, ಹೈನುಗಾರಿಕೆಗಾಗಿ ಸರ್ಕಾರ ನೀಡುವ ಸವಲತ್ತುಗಳನ್ನು ಬಳಸಿಕೊಂಡು ಆರ್ಥಿಕವಾಗಿ ಸದೃಢರಾಗಬೇಕು. ಎಂದು ತಿಳಿಸಿದರು. ಈ ಹಿಂದೆ ತಿಪಟೂರು ಉಪವಿಭಾಗಾಧಿಕಾರಿಯಾಗಿ ಸೇವೆ ಸಲ್ಲಿಸಿದ ಅವಧಿಯಲ್ಲಿ ಮಾಡಿದ ಕೆಲಸಗಳು ಸದಾ ನೆನಪಲ್ಲಿ ಉಳಿಯುವಂತಹವು ಎಂದ ಅವರು, ಜಿಲ್ಲಾಧಿಕಾರಿಯಾಗಿ…

Read More

ತುಮಕೂರು ರೈತ ದೇಶಕ್ಕೆ ಬೆನ್ನೆಲುಬಾದರೆ, ವಿಶ್ವಕರ್ಮ ಜನಾಂಗದವರು ಕೃಷಿ ಉಪಕರಣಗಳನ್ನು ತಯಾರಿಸಿ ನೀಡುವ ಮೂಲಕ ರೈತರಿಗೆ ಬೆನ್ನೆಲುಬಾಗಿ ನಿಂತಿದ್ದಾರೆ ಎಂದು ಮಧುಗಿರಿ ತಾಲ್ಲೂಕು ನಿಟ್ಟರಹಳ್ಳಿಯ ಶ್ರೀಶ್ರೀಶ್ರೀ ನೀಲಕಂಠಾಚಾರ್ಯ ಸ್ವಾಮೀಜಿ ತಿಳಿಸಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಜಿಲ್ಲಾ ವಿಶ್ವಕರ್ಮ ಸೇವಾ ಸಮಿತಿ ಇವರುಗಳ ಸಂಯುಕ್ತಾಶ್ರಯದಲ್ಲಿ ನಗರದ ಡಾ: ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿಂದು ‘ಶ್ರೀ ವಿಶ್ವಕರ್ಮ ಜಯಂತಿ ಆಚರಣೆ’ ಕಾರ್ಯಕ್ರಮನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿಶ್ವವನ್ನು ಸೃಷ್ಟಿ ಮಾಡಿದಂತಹ ವಿಶ್ವಕರ್ಮ ಸಮಾಜವು ಸದಾ ಒಗ್ಗಟ್ಟಿನಲ್ಲಿ ಬದುಕುವಂತಹ ಸಮಾಜವಾಗಿದೆ ಎಂದರಲ್ಲದೆ, ಭೂಮಿ, ಸೂರ್ಯನನ್ನು ನೆನೆಸುವಂತೆ ಪ್ರತಿನಿತ್ಯ ವಿಶ್ವಕರ್ಮನನ್ನು ನೆನೆಪು ಮಾಡಿಕೊಳ್ಳಬೇಕು ಎಂದು ತಿಳಿಸಿದರು. ಸಂಸದ ಜಿ.ಎಸ್. ಬಸವರಾಜು ಮಾತನಾಡಿ, ವಿಶ್ವಕರ್ಮ ಜಂಯತಿಯು ಬಹಳ ಹಿಂದಿನಿಂದ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಈ ಸಮಾಜ ಮತ್ತಷ್ಟು ಗುರುತಿಸಿಕೊಳ್ಳುವಂತಾಗಲಿ ಎಂದು ತಿಳಿಸಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿದ್ಧಲಿಂಗ್ಯಯ ಮಾತನಾಡಿ, ವಿಶ್ವಕರ್ಮ ಜನಾಂಗದವರು ತಮ್ಮ…

Read More

ತುಮಕೂರು ಪ್ರಧಾನ ಮಂತ್ರಿಗಳಾದ ಸನ್ಮಾನ್ಯ ಶ್ರೀ ನರೇಂದ್ರ ಮೋದಿಜೀ ಅವರಿಗೆ ಜನ್ಮದಿನದ ಪ್ರಯುಕ್ತ ಇಂದು ಶಿರಾ ಭಾರತೀಯ ಜನತಾ ಪಾರ್ಟಿ ವತಿಯಿಂದ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಹಮ್ಮಿಕೊಂಡಿದ್ದ ಆರೋಗ್ಯ ಮೇಳ ಕಾರ್ಯಕ್ರಮದಲ್ಲಿ * ವಿಧಾನಪರಿಷತ್ ಸದಸ್ಯರಾದ ಚಿದಾನಂದ್ ಎಂ ಗೌಡ ರವರುಭಾಗವಹಿಸಿ . ಮಾತನಾಡಿದ ಚಿದಾನಂದ ಗೌಡರು,* ಸ್ವಾತಂತ್ರ್ಯ ಭಾರತದ ಇತಿಹಾಸದಲ್ಲಿಯೇ ಭಾರತವನ್ನು ವಿಶ್ವ ಗುರುವಿನ ಸ್ಥಾನಕ್ಕೆ ಮುಟ್ಟಿಸಿದ ಹಾಗೂ ಭಾರತವನ್ನು ಜಗತ್ತಿನ ಮುಂದೆ ಪ್ರಜ್ವಲಿಸುವಂತೆ ಮಾಡಿದ ಮಹಾನಾಯಕ ಮೋದಿಜಿ. ಸನ್ಮಾನ್ಯ ಮೋದಿಜಿ ರವರು ಭವ್ಯ ಮತ್ತು ಸ್ವಾವಲಂಬಿ ಭಾರತವನ್ನು ನಿರ್ಮಿಸಲು ಸಮರ್ಪಿತ ಮನೋಭಾವದೊಂದಿಗೆ ಅವಿರತವಾಗಿ ಶ್ರಮಿಸುತ್ತಿರುವ ಕಾಯಕಯೋಗಿಯಾಗಿ, ದೇಶವನ್ನು ಉನ್ನತ ಮಟ್ಟಕ್ಕೆ ಏರಿಸಿದ ಕೀರ್ತಿ ನಮ್ಮ ಧೀಮಂತ ನಾಯಕರಾದ ಮೋದಿಜಿ ರವರಿಗೆ ಸಲ್ಲುತ್ತದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಶಾಸಕರಾದ ರಾಜೇಶ್ ಗೌಡ, ಭಾಜಪ ಜಿಲ್ಲಾಧ್ಯಕ್ಷರಾದ ಬಿ.ಕೆ ಮಂಜುನಾಥ್, ನಗರಾಧ್ಯಕ್ಷ ವಿಜಯರಾಜು, ಗ್ರಾಮಾಂತರ ಅಧ್ಯಕ್ಷರಾದ ರಂಗಸ್ವಾಮಿ, ಜಿಲ್ಲಾ ಉಪಾಧ್ಯಕ್ಷರಾದ ಬಸವರಾಜು, ನಗರಸಭೆ ಸದಸ್ಯರಾದ ರಂಗರಾಜು, ಶ್ರೀನಿವಾಸ್, ವೈದ್ಯರುಗಳಾದ ಶ್ರೀನಾಥ್, ಡಿ.ಎಂ…

Read More

ತುಮಕೂರು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತುಮಕೂರು ಜಿಲ್ಲಾಧ್ಯಕ್ಷರಾದ ಚಿ.ನಿ. ಪುರಷೋತ್ತಮ್‍ರವರು ಕರಾಮುವಿ ತುಮಕೂರು ಪ್ರಾದೇಶಿಕ ಕೇಂದ್ರದ ಹೊಸದಾಗಿ ಸ್ಥಾಪಿಸಲಾದ ಗ್ರಂಥಾಲಯ ವಿಭಾಗವನ್ನು ಉದ್ಘಾಟನೆ ನೆರವೇರಿಸಿದರು. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು ಉನ್ನತ ಶಿಕ್ಷಣದಿಂದ ವಂಚಿತರಿಗಾಗಿ “ಉನ್ನತ ಶಿಕ್ಷಣ ಎಲ್ಲರಿಗೂ ಎಲ್ಲೆಡೆ” ಎಂಬ ಘೋಷವಾಕ್ಯದೊಂದಿಗೆ ಕರ್ನಾಟಕದಾದ್ಯಂತ 23 ಪ್ರಾದೇಶಿಕ ಕೇಂದ್ರಗಳನ್ನು ತೆರೆದು ವಿದ್ಯಾರ್ಥಿಗಳಿಗೆ ಶಿಕ್ಷಣ ಕೊಡುವಲ್ಲಿ ಮುಂಚೂಣಿಯಲ್ಲಿದೆ. ಕರಾಮುವಿಯು ಉನ್ನತ ಶಿಕ್ಷಣದಲ್ಲಿ ಉಡಿoss ಇಟಿಡಿoಟmeಟಿಣ ಖಚಿಣio ಹೆಚ್ಚಳ ಮಾಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತ್ತಿದೆ. ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು ತುಮಕೂರಿನಲ್ಲಿ 2010ರಲ್ಲಿ ಪ್ರಾದೇಶಿಕ ಕೇಂದ್ರವನ್ನು ಸ್ಧಾಪಿಸುವುದರ ಮೂಲಕ ತುಮಕೂರು ಜಿಲ್ಲೆಯ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ನೀಡಲು ಪ್ರಯತ್ನಿಸುತ್ತಿದೆ. ಸದರಿ ಕೇಂದ್ರವು 2018ರಲ್ಲಿ ತುಮಕೂರಿನಲ್ಲಿ ಸ್ವಂತ ಕಟ್ಟಡ ಹೊಂದಿದ್ದು, ಈ ಕಟ್ಟಡ ಮೂರು ಅಂತಸ್ತು ಇದ್ದು, 13 ಉಪನ್ಯಾಸ ಕೊಠಡಿಗಳನ್ನು ಹಾಗೂ ಇತರೆ ಸೌಲಭ್ಯಗಳನ್ನು ಒಳಕೊಂಡಿದ್ದು ಮತ್ತು ಈ ಕಛೇರಿಯಲ್ಲಿ ನುರಿತ ಸಿಬ್ಬಂದಿಗಳು ಕಾರ್ಯ ನಿರ್ವಹಿಸುತ್ತಿದ್ದು ವಿದ್ಯಾರ್ಥಿಗಳಿಗೆ ಕರಾಮುವಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು…

Read More

ತುಮಕೂರು ಭಾರತ ಕಮ್ಯೂನಿಸ್ಟ ಪಕ್ಷ [ಮಾಕ್ರ್ಸವಾಧಿ] ರಾಜ್ಯ ಸಮಿತಿಯು ಸೆ.18 ರಾಜ್ಯ ಮಟ್ಟದ ರಾಜಕೀಂiÀi ಸಮಾವೇಶವನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೆಪಲ್ಲಿಯಲ್ಲಿ ಅಯೋಜಿಸಿದೆ. ಕೇಂದ ್ರ- ರಾಜ್ಯ ಸರ್ಕಾರಗಳು ನಿರಂತರವಾಗಿ ಜನತೆಯ ಮೇಲೆ ನಡೆಸುತ್ತಿರುವ ದಾಳಿಗಳ ಹಿನ್ನೆಲೆಯಲ್ಲಿ ದೇಶದ ಪರ್ಯಾಯ ಜನಪರ ನೀತಿಗಳಿಗಾಗಿ ಈ ಸಮಾವೇಶವನ್ನು ಸಂಘಟಿಸಲಾಗುತ್ತಿದೆ. ನಿರಂತರವಾಗಿ ಬೆಲೆ ಏರಿಕೆಯ, ಹಣದುಬ್ಬರ, ಭ್ರಷ್ಠಾಚಾರ ದಂಧೆಯಲ್ಲಿ ತೊಡಗಿರುವ ಸರ್ಕಾರಗಳು ಜನತೆಯ ಸಂಕಷ್ಟಗಳನ್ನು ಬಗೆಹರಿಸದೆ ಅಂತರಾಷ್ಟೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಇಳಿಕೆ ಕಂಡರು ಅದರ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸದೆ ಕಂಪನಿಗಳಿಗೆ ಲಾಭ ಜನತೆಗೆ ಕಷ್ಟವನ್ನು ನೀಡುತ್ತಿದೆ. ಆಹಾರಧಾನ್ಯಗಳ ಮೇಲೆ ಜಿ.ಎಸ್.ಟಿ. ಮೂಲಕ ಜನತೆಗೆ ಬರೆ ಎಳದಿರುವ ಸರ್ಕಾರ ವಸೂಲಾಗದ ಸಾಲ ಲಕ್ಷಾಂತರ ಕೋಟಿಗಳನ್ನು ವಸೂಲು ಮಾಡುವುದಿರಲಿ ಸಾಲ ಪಡೆದವರ ಹೆಸರುಗಳನ್ನು ಬಹಿರಂಗಪಡಿಸಲು ತಯಾರಿಲ್ಲದೆ ಬಂಡವಾಳಶಾಹಿ ವಂಚಕರನ್ನು ಸಂರಕ್ಷಿಸುತ್ತಿದೆ ಇದನ್ನು ಪಕ್ಷ ಖಂಢಿಸಿದೆ. ಈ ಹಿನ್ನೆಲೆಯಲ್ಲಿ ನಡೆಯುವ ಸಮಾವೇಶವನ್ನು ಕೇರಳ ರಾಜ್ಯದ ಮುಖ್ಯ ಮಂತ್ರಿಗಳು ಸಿಪಿಐ[ಎಂ] ಪಾಲಿಟ್ ಬ್ಯೂರೋ ಸದಸ್ಯರಾದ ಕಾಂ; ಪಿಣರಾಯ್ ವಿಜಯನ್ ಅವರು…

Read More

ತುಮಕೂರು ತಾಲ್ಲೂಕ್ ಪಂಚಾಯತಿಯ ಆವರಣದಲ್ಲಿರುವ ಸಾಮಥ್ರ್ಯ ಸೌದದಲ್ಲಿ ಕಾರ್ಯನಿರ್ವಾಹಕ ಅಧಿಕಾರಿಯವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು. ಬಾಕಿ ಇರುವ ಆಡಿಟ್ ಆಕ್ಷೇಪಣೆ ಮತ್ತು ವಸೂಲಾತಿ ಕಂಡಿಕೆಗಳ ತೀರುವಳಿಗೆ ಸರ್ಕಾರದ ಆದೇಶದನ್ವಯ ಪ್ರತಿ ಮಾಯೆಯಾನ ಎರಡು ಅಡಹಾಕ್ ಸಭೆಯನ್ನು ನಡೆಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದರು. ಈ ಸಂದರ್ಭದಲ್ಲಿ ಸ್ಥಳಿಯ ಲೆಕ್ಕಪರಿಶೋಧನಾ ವರ್ತುಲದ ಉಪ ನಿರ್ದೇಶಕರಾದ ಚಂದ್ರಶೇಖರ್, ಜಿಲ್ಲಾ ಪಂಚಾಯತ್ ಲೆಕ್ಕಾಧಿಕಾರಿಗಳಾದ ಮಂಜುನಾಥ್ ಮತ್ತು ನಾಗೇಶ್, ತಾಲ್ಲೂಕು ಪಂಚಾಯತಿಯ ಸಹಾಯಕ ಲೆಕ್ಕಾಧಿಕಾರಿಗಳಾದ ಲೋಕೇಶ್ ಕುಮಾರ್,ವಿಷಯ ನಿರ್ವಾಹಕರಾದ ವಿನಯ್ ಕುಮಾರ್ ಹಾಗೂ ತಾಲ್ಲೂಕಿನ ಎಲ್ಲಾ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಉಪಸ್ಥಿತರಿದ್ದರು.

Read More

ತುಮಕೂರು ಬಿಜೆಪಿ ಹಿರಿಯ ನಾಯಕರು ಮತ್ತು ಕಟ್ಟಾಳು 1980ರಲ್ಲಿ ಬಿಜೆಪಿ ಪ್ರಾರಂಭಗೊಂಡ ಸಂಧರ್ಭದಲ್ಲಿ ಜಿಲ್ಲೆಯ ಪ್ರಪ್ರಥಮ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಗೊಂಡು, ಎರಡು ದಶಕಗಳ ಕಾಲ ಸಕ್ರೀಯವಾಗಿ ಪಕ್ಷದ ಜವಾಬ್ದಾರಿ ನಿರ್ವಹಿಸಿದ್ದ ಕೊರಟಗೆರೆ ತಾಲ್ಲೂಕು ಜಟ್ಟಿ ಅಗ್ರಹಾರದ ಎ.ಎಂ.ಬಾಬು ರಾಜೇಂದ್ರ ಪ್ರಸಾದ್ (79) ಇಂದು (17.09.2022)ರ ಶನಿವಾರ ಬೆಳಗ್ಗೆ ತುಮಕೂರಿನ ಸಿದ್ದಗಂಗಾ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಇವರ ನಿಧನಕ್ಕೆ ಬಿಜೆಪಿ ತುಮಕೂರು ಜಿಲ್ಲಾ ಘಟಕ ತೀವ್ರ ಸಂತಾಪ ವ್ಯಕ್ತಪಡಿಸುತ್ತದೆ. ಇವರಿಗೆ ಕಳೆದ ಮಂಗಳವಾರ ಜಟ್ಟಿ ಅಗ್ರಹಾರದಲ್ಲಿ ರಸ್ತೆ ದಾಟುವಾಗ ಅಪಘಾತವಾಗಿ, ಚಿಕಿತ್ಸೆಗೆ ಸಿದ್ದಗಂಗಾ ಆಸ್ಪತ್ರೆಯಲ್ಲಿ ದಾಖಲಾಗಿ, ಇಂದು ನಿಧರಾಗಿದ್ದಾರೆ. ಇವರ ಹುಟ್ಟೂರು ಜಿಟ್ಟಿ ಅಗ್ರಹಾರದಲ್ಲಿ ಅಂತ್ಯಕ್ರಿಯೆಯನ್ನು ನಡೆಸಲಾಗುವುದು. ಇವರು ಬಿಜೆಪಿಯ ಸಾವಿರಾರು ಹೋರಾಟಗಳನ್ನು ಸಂಘಟಿಸಿ ಹೋರಾಟ ಮಾಡಿದ್ದರು. ಹಿಂದೂ ಸಮಾಜೋತ್ಸವ, ದೋಡಾ, ಲಾಲ್ ಚೌಕ್, ಕಿತ್ತೂರುರಾಣಿ ಚೆನ್ನಮ್ಮ ಮೈದಾನ ಹೋರಾಟ, ಅಯೋಧ್ಯೆ ಕರಸೇವಕರಾಗಿ ಹಾಗೂ ಹಲವಾರು ಹೋರಾಟಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ, ಪ್ರಮುಖ ಮುಂಚೂಣಿ ನಾಯಕರಾಗಿ ಬಿಜೆಪಿಯಲ್ಲಿ ಬಾಬಣ್ಣ ಎಂದೇ ಪ್ರಖ್ಯಾತರಾಗಿದ್ದರು. ಪಕ್ಷದ ಹಿರಿಯರಾಗಿದ್ದ ಎಸ್.ಮಲ್ಲಿಕಾರ್ಜುನಯ್ಯ,…

Read More

ತುಮಕೂರು ಭಾರತರತ್ನ ಸರ್ ಎಂ. ವಿಶ್ವೇಶ್ವರಯ್ಯ ಅವರು ಜಲಾಶಯದಲ್ಲಿ ಸ್ವಯಂ ಚಾಲಿತ ವೇರ್‍ವಾಟರ್ ಫ್ಲಡ್‍ಗೇಟ್ ವಿನ್ಯಾಸಕ್ಕೆ ಪೇಟೆಂಟ್ ಪಡೆದ ಮೊದಲ ವ್ಯಕ್ತಿಯಾಗಿದ್ದರು ಎಂದು ನಿವೃತ್ತ ಕಾರ್ಯಪಾಲಕ ಇಂಜಿನಿಯರ್ ಗಂಗಾಧರ ಕೊಡ್ಲಿಯವರ ಅವರು ತಿಳಿಸಿದರು. ಸರ್ ಎಂ. ವಿಶ್ವೇಶ್ವರಯ್ಯ ಅವರ ಜನ್ಮ ದಿನಾಚರಣೆ ಅಂಗವಾಗಿ ಲೋಕೋಪಯೋಗಿ ಇಲಾಖೆ ವಿಭಾಗೀಯ ಕಚೇರಿ ಆವರಣದಲ್ಲಿಂದು ಆಯೋಜಿಸಿದ್ದ “ಇಂಜಿನಿಯರ್ಸ್ ದಿನಾಚರಣೆ” ಕಾರ್ಯಕ್ರಮದಲ್ಲಿ ವಿಶ್ವೇಶ್ವರಯ್ಯ ಅವರ ಕುರಿತು ಉಪನ್ಯಾಸ ನೀಡುತ್ತಾ ಮಾತನಾಡಿದ ಅವರು, ನಾಡಿನಲ್ಲಿ ಜಲಾಶಯಗಳಿಗೆ ಅಣೆಕಟ್ಟು ನಿರ್ಮಾಣ, ನೀರು ಸರಬರಾಜು, ಒಳಚರಂಡಿ ವ್ಯವಸ್ಥೆ, ಪ್ರವಾಹ ರಕ್ಷಣೆ ವ್ಯವಸ್ಥೆಯೊಂದಿಗೆ ಕೈಗಾರಿಕೆಗಳ ಸ್ಥಾಪನೆಯಲ್ಲಿ ವಿಶ್ವೇಶ್ವರಯ್ಯ ಅವರ ಕೊಡುಗೆ ಅಪಾರವಾಗಿದೆ ಎಂದು ತಿಳಿಸಿದರು. ವಿಶ್ವೇಶ್ವರಯ್ಯ ಅವರು ಬಡತನದಲ್ಲಿ ಜನಿಸಿದರೂ ಲಭ್ಯವಿರುವ ಸೌಲಭ್ಯದಲ್ಲಿಯೇ ಹಲವಾರು ಉನ್ನತ ಸ್ಥಾನಗಳನ್ನು ಅಲಂಕರಿಸಿ ನಾಡಿಗೆ ಕೀರ್ತಿ ತಂದಿದ್ದರು. ತಾವು ಬದುಕಿದ 101 ವರ್ಷಗಳ ಕಾಲ ಜನಾನುಕೂಲಕ್ಕಾಗಿಯೇ ವಿನೂತನ ಯೋಜನೆಗಳನ್ನು ರೂಪಿಸಿ ಕಾರ್ಯಗತಗೊಳಿಸಿದ್ದರು. ಚಿಕ್ಕಬಳ್ಳಾಪುರ ತಾಲ್ಲೂಕು ಮುದ್ದೇನಹಳ್ಳಿಯಲ್ಲಿ 1861ರ ಸೆಪ್ಟೆಂಬರ್ 15ರಂದು ಜನಿಸಿದ ಇವರು ಇಂಜಿನಿಯರ್ ಪದವಿ ಗಳಿಸಿ…

Read More

ತುಮಕೂರು ಕಾರ್ಯಾಗಾರದಲ್ಲಿ ವರ್ತಮಾನದ ಸವಾಲುಗಳು ಮತ್ತು ಮಹಿಳಾ ನಾಯಕತ್ವ ಕುರಿತು ವಿಷಯ ಮಂಡನೆ ಮಾಡಿದ ಸ್ಲಂ ಜನಾಂದೋಲನದ ಕರ್ನಾಟಕ ಸಂಚಾಲಕ ಎ.ನರಸಿಂಹಮೂರ್ತಿ ಇಂದು ದೇಶದಲ್ಲಿ 4ಜನರು ಆಡಳಿತ ಮಾಡುತ್ತಿದ್ದು ಇಬ್ಬರು ಮಾರಾಟಗಾರರು ಇನ್ನಿಬ್ಬರು ಖರೀದಾರರಿದ್ದು ಇವರಿಗಾಗಿ ಇಡೀ ದೇದಲ್ಲಿರುವ ಜನರು ದುಡಿಯಬೇಕಿದೆ ಅದಾನಿ ಅಂಬಾನಿ ಆದಾಯವನ್ನು ದೇಶದ ಆದಾಯವೆಂಬಂತೆ ಪ್ರಚಾರ ಮಾಡಿ ಜಗತ್ತಿನಲ್ಲಿ ಭಾರತ ಆರ್ಥಿಕವಾಗಿ 5ನೇ ಸ್ಥಾನದಲ್ಲಿದೆ ಎಂದು ಬಿಂಬಿಸಲಾಗುತ್ತಿದೆ. ಆದರೆ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ 126ನೇ ಹಾಗೂ ಹಸಿವಿನಲ್ಲಿ 131ನೇ ಸ್ಥಾನದಲ್ಲಿದೆ. ಇತ್ತಿಚೆಗೆ 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸಿದ್ದು ಕಾರ್ಮಿಕರು ರೈತರು, ಸಣ್ಣ ವ್ಯಾಪಾರಿಗಳು ಹಾಗೂ ಜನಸಾಮಾನ್ಯರು ತೆರಿಗೆ ಹೆಚ್ಚಳ ಮತ್ತು ಜಿಎಸ್‍ಟಿ ಯಿಂದ ಹಾಗೂ ಕಾಯ್ದೆಗಳ ನಿರಂತರ ತಿದ್ದುಪಡಿಯಿಂದ ಸಂವಿಧಾನದ ಮೇಲಿನ ಹಲ್ಲೆಯಿಂದ ದಿವಾಳಿಯಾಗಿದ್ದಾರೆ, 40 ವರ್ಷಗಳಲ್ಲಿ ಕಂಡರಿಯದಷ್ಟು ನಿರುದ್ಯೋಗ ದೇಶದಲ್ಲಿ ತಾಂಡವವಾಡುತ್ತಿದೆ. 2014ರಲ್ಲಿ ದೇಶದ ಸಾಲ 53 ಲಕ್ಷ ಕೋಟಿ ಪ್ರಸ್ತುತ 130 ಲಕ್ಷ ಕೋಟಿ ಸಾಲ ಮಾಡಿದ್ದು ರಾಜ್ಯ ಸರ್ಕಾರ 2013ರಲ್ಲಿ 1.5ಲಕ್ಷ…

Read More

ಬಾಗೇಪಲ್ಲಿ ಸೌಹಾರ್ದ, ಸಮೃದ್ಧ, ಜನತಾ ಕರ್ನಾಟಕ ನಿರ್ಮಾಣಕ್ಕಾಗಿ ಭಾರತ ಕಮ್ಯೂನಿಸ್ಟ್ ಪಕ್ಷ (ಮಾಕ್ರ್ಸ್‍ವಾದಿ)-ಸಿಪಿಐ(ಎಂ) ವತಿಯಿಂದ ರಾಜ್ಯ ಮಟ್ಟದ ಬೃಹತ್ ರಾಜಕೀಯ ಸಮಾವೇಶವು ಸೆಪ್ಟಂಬರ್ 18(ಭಾನುವಾರ) ಹಮ್ಮಿಕೊಳ್ಳಲಾಗಿದೆ. ಸಮಾವೇಶವು ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲ್ಲೂಕಿನ ಕೆಹೆಚ್‍ಬಿ ಲೇಔಟ್ (ಕೆಎಸ್‍ಆರ್‍ಟಿಸಿ ಬಸ್ ಡಿಪೆÇೀ ರಸ್ತೆ) ನಲ್ಲಿ ನಡೆಯಲಿದೆ. ಇದನ್ನು ಮುಂಚಿತವಾಗಿ ಬೆಳಿಗ್ಗೆ 11.00ಗಂಟೆಗೆ ನ್ಯಾಷನಲ್ ಕಾಲೇಜು ಮುಂಭಾಗದಿಂದ ಬೃಹತ್ ಮೆರವಣಿಗೆ ನಡೆಯಲಿದೆ. ಸಮಾವೇಶಕ್ಕೆ ಸಿಪಿಐ(ಎಂ) ಪೆÇಲಿಟ್ ಬ್ಯೂರೋ ಸದಸ್ಯರು ಹಾಗೂ ಕೇರಳ ಎಡರಂಗ ಸರ್ಕಾರದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅಗಮಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಸಿಪಿಐ(ಎಂ) ಪೆÇಲಿಟ್ ಬ್ಯೂರೋ ಸದಸ್ಯರಾದ ಎಂ.ಎ. ಬೇಬಿ ಹಾಗೂ ಬಿ.ವಿ. ರಾಘವಲು, ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಯು. ಬಸವರಾಜ ಭಾಗವಹಿಸಿ ಮಾತನಾಡಲಿದ್ದಾರೆ. ರಾಜಕೀಯ ಸಮಾವೇಶದ ಭಾಗವಾಗಿ ಈಗಾಗಲೇ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಪ್ರಚಾರ, ಸಾಂಸ್ಕೃತಿಕ ಕಾರ್ಯಕ್ರಮಗಳು, ಕೆಂಪು ಕಾರ್ಯಕರ್ತರ ಪಡೆ, ವೇದಿಕೆ ನಿರ್ಮಾಣಕ್ಕೆ ಸಂಬಂಧಿಸಿದ ಸಮಿತಿಗಳನ್ನು ರಚಿಸಿ ಜವಾಬ್ದಾರಿ ಹಂಚಿಕೆ ಮಾಡಲಾಗಿದೆ. ಸಿಪಿಐ(ಎಂ) ಮುಖಂಡರು ತಮ್ಮ ತಮ್ಮ ಜವಾಬ್ದಾರಿ ಕೆಲಸಗಳನ್ನು ಕೈಗೊಂಡಿದ್ದಾರೆ. ಈಗಾಗಲೇ…

Read More