ತುಮಕೂರು ಕರ್ನಾಟಕ ಸರಕಾರದ ವಾಲ್ಮೀಕಿ ಅಭಿವೃದ್ದಿ ನಿಗಮದಲ್ಲಿ ಜನರಿಗೆ ಸಾಲ, ಸೌಲಭ್ಯ ಕೊಡಿಸುವುದಾಗಿ ನಂಬಿಸಿ, ಗುಬ್ಬಿ ತಾಲೂಕು ಕೊಮ್ಮನಹಳ್ಳಿಯ ಗುರುಸ್ವಾಮಿ ಕೆ.ಆರ್.ಬಿನ್ ರಂಗಶಾಮಯ್ಯ ನೂರಾರು ಜನರಿಂದ 10 ಲಕ್ಷಕ್ಕೂ ಹೆಚ್ಚು ಹಣ ವಸೂಲಿ ಮಾಡಿ, ಪರಾರಿಯಾಗಿದ್ದು,ಇತನ ವಿರುದ್ದ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿ,ಗುಬ್ಬಿ ತಾಲೂಕಿನ ಹತ್ತಾರು ಜನರು ಇಂದು ಕುಪ್ಪೂರು ಶ್ರೀಧರನಾಯಕ್ ನೇತೃತ್ವದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ನಗರದ ಎಸ್.ಪಿ.ಕಚೇರಿಗೆ ಮನವಿ ಸಲ್ಲಿಸಿದ ಗುಬ್ಬಿ ತಾಲೂಕಿನ ಸಾಗಸಂದ್ರದ ಬಸವರಾಜು,ನಾಗಣ್ಣ,ಶಂಕರಮ್ಮ,ನಟರಾಜು ಉನಗನಾಲದ ಕೃಷ್ಣಮೂರ್ತಿ,ಕೆರೆಮಾದನಹಳ್ಳಿಯ ಬಸವರಾಜು,ಮಹಾಲಿಂಗಪ್ಪ ಸೇರಿದಂತೆ ಹತ್ತಕ್ಕೂ ಹೆಚ್ಚು ಜನರು, ಗುರುಸ್ವಾಮಿ ಕೆ.ಆರ್.ಅವರು ನನಗೆ ಶಾಸಕರು,ಸಚಿವರು,ನಿಗಮದ ಅಧ್ಯಕ್ಷರುಗಳು ಗೊತ್ತು ಎಂದು ಹೇಳಿ,ನಿಮಗೆ ನಿಗಮದವತಿ ಯಿಂದ ಗಂಗಕಲ್ಯಾಣದಲ್ಲಿ ಕೊಳವೆ ಬಾವಿ, ನೇರ ಸಾಲದಲ್ಲಿ ಟ್ಯಾಕ್ಟರ್ ಖರೀದಿಗೆ ಸಾಲ,ಮಕ್ಕಳ ವಿದ್ಯಾಭ್ಯಾಸಕ್ಕೆ ಧನ ಸಹಾಯ ಕೊಡಿಸುವುದಾಗಿ ಹತ್ತಾರು ಸಾವಿರ ರೂ ಪಡೆದು, ಪರಾರಿಯಾಗಿದ್ದಾನೆ. ಗುರುಸ್ವಾಮಿ ಕೆ.ಆರ್. ಬಿನ್ ರಂಗಶಾಮಯ್ಯ ಅವರು ನಮ್ಮ ಬಳಿ ವ್ಯವಹಾರ ನಡೆಸುವಾಗ ನೀಡಿದ್ದ ಎರಡು ಪೋನ್ ನಂಬರ್ ಗಳಿಗೆ ಕರೆ…
Author: News Desk Benkiyabale
ತುಮಕೂರು ತಾಲ್ಲೂಕಿನ ವಿವಿಧ ವಸತಿ ನಿಲಯಗಳಲ್ಲಿ ಹಾಗೂ ವಸತಿ ಶಾಲೆಗಳಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಹಾಸ್ಟೆಲ್ ಕಾರ್ಮಿಕರ ಬಾಕಿ ವೇತನ ಬಿಡುಗಡೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಸಂಯುಕ್ತ ವಸತಿ ನಿಲಯ ಕಾರ್ಮಿಕರ ಸಂಘದ (ಎಐಯುಟಿಯುಸಿ) ವತಿಯಿಂದ ನಗರದ ಜಿಲ್ಲಾ ಪಂಚಾಯ್ತಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು. ಹಾಸ್ಟೆಲ್ ಕಾರ್ಮಿಕರಿಗೆ ಕಳೆದ 2-3 ತಿಂಗಳಿಂದ ವೇತನ ಬಿಡುಗಡೆಯಾಗಿಲ್ಲ. ಇಎಸ್‍ಐ, ಪಿಎಫ್ ಹಣ ಕಟ್ಟಿರುವ ಬಗ್ಗೆ ಮಾಹಿತಿ ಇಲ್ಲ. ವೇತನ ಆಯಾ ತಿಂಗಳಲ್ಲಿ ಬಿಡುಗಡೆಯಾಗಿದೆ. ಕಾರ್ಮಿಕರು ಜೀವನ ನಡೆಸುವುದು ಕಷ್ಟವಾಗಿದೆ. ಇತ್ತೀಚೆಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ಹೊರಡಿಸಿದ ಸುತ್ತೊಲೆಯಂತೆ ಹಾಸ್ಟೆಲ್ ಕಾರ್ಮಿಕರಿಗೆ ತಿಂಗಳ ವೇತನ ಆಯಾ ತಿಂಗಳ 5ನೇ ತಾರೀಖಿನ ಒಳಗೆ ತಲುಪಿಸಬೇಕು, ವೇತನ ಚೀಟಿ ನೀಡಬೇಕು, ಇಎಸ್‍ಐ, ಪಿಎಫ್ ಜಮಾ ಆಗಿರುವ ಬಗ್ಗೆ ಸಂಬಂಧಪಟ್ಟವರಿಂದ ದಾಖಲಾತಿ ಒದಗಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ರಾಜ್ಯ ಕಾರ್ಯದರ್ಶಿ ಕೆ.ವಿ. ಭಟ್ ಮಾತನಾಡಿ, ಬೆಲೆ ಏರಿಕೆಯ ಈ…
ತುಮಕೂರು ಶಾಲಾ ದತ್ತು ಕಾರ್ಯಕ್ರಮ’ ಯೋಜನೆಯಡಿ ಎಲ್ಲಾ ತಾಲ್ಲೂಕು ಮಟ್ಟದ ಅಧಿಕಾರಿಗಳು ಗ್ರಾಮೀಣ ಭಾಗದ ಶಾಲೆಗಳನ್ನು ದತ್ತು ಪಡೆಯುವ ಮೂಲಕ ಮಕ್ಕಳ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವ ಪೂರಕ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅವರು ಅಧಿಕಾರಿಗಳಿಗೆ ಸೂಚಿಸಿದರು. ಶಾಲೆಗಳಲ್ಲಿನ ಸಂಪನ್ಮೂಲಗಳನ್ನು ಗರಿಷ್ಠ ಪ್ರಮಾಣದಲ್ಲಿ ಬಳಕೆ ಮಾಡಿ ಶಿಕ್ಷಣ ಸಂಸ್ಥೆಗಳ ಸಮಗ್ರ ಅಭಿವೃದ್ಧಿಗೆ ಶ್ರಮಿಸಲು ಎಲ್ಲ ಇಲಾಖೆಗಳ ಎಲ್ಲ ಹಂತದ ಅಧಿಕಾರಿಗಳಿಗೆ ಸರ್ಕಾರಿ ಶಾಲೆಗಳನ್ನು ದತ್ತು ನೀಡುವ ಕಾರ್ಯಕ್ರಮವನ್ನು ರೂಪಿಸಿದ್ದು, ಅಧಿಕಾರಿಗಳು ತಮ್ಮ ಕಾರ್ಯ ವ್ಯಾಪ್ತಿಗೆ ಸೇರಿದ ಯಾವುದಾದರೂ ಒಂದು ಶಾಲೆಯನ್ನು ದತ್ತು ಪಡೆದು ನಿರಂತರ ಸಂಪರ್ಕದಲ್ಲಿದ್ದು, ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವ ಕಾರ್ಯಕ್ರಮ ಇದಾಗಿದ್ದು, ಎಲ್ಲ ಅಧಿಕಾರಿಗಳು ಶಾಲೆಗಳನ್ನು ದತ್ತು ಪಡೆಯಬೇಕು ಎಂದು ಸೂಚಿಸಿದರು. ಮನೆಹಾನಿ ಪ್ರಕರಣಗಳಿಗೆ ಪರಿಹಾರ ಮತ್ತು ಬೆಳೆಹಾನಿಗೆ ಸಂಬಂಧಿಸಿದಂತೆ ಪರಿಹಾರ ಪೋರ್ಟಲ್‍ನಲ್ಲಿ ಅಗತ್ಯ ಮಾಹಿತಿಯನ್ನು ನಮೂದಿಸುವುದು ಸೇರಿದಂತೆ ಯಾವುದೇ ಕೆಲಸಗಳು ಬಾಕಿಯಿರಬಾರದು ಎಂದು ತಹಶೀಲ್ದಾರ್ ಮತ್ತು ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಸೂಚಿಸಿದರು. ತಮ್ಮ ಕಚೇರಿಯ…
ತುಮಕೂರು ನಗರದ ಎಂಪ್ರೆಸ್ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವತಿಯಿಂದ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಾರ್ಷಿಕ ವಿಶೇಷ ಶಿಬಿರವನ್ನು ಗಾಂಧಿ ಜಯಂತಿ ಪ್ರಯುಕ್ತ ಇತ್ತೀಚೆಗೆ ತುಮಕೂರಿನ ಬೆಳಗುಂಬದಲ್ಲಿರುವ ಭಾರತೀಯ ರೆಡ್ ಕ್ರಾಸ್ ಸಮಿತಿ ವತಿಯಿಂದ ನಡೆಸುತ್ತಿರುವ ವಾಕ್ ಮತ್ತು ಶ್ರವಣ ದೋಷವುಳ್ಳ ಮಕ್ಕಳ ವಸತಿ ಶಾಲೆಯ ಆವರಣದಲ್ಲಿ ಏರ್ಪಡಿಸಲಾಗಿತ್ತು. ಪ್ರಾಂಶುಪಾಲರಾದ ಎಸ್. ಷಣ್ಮುಖ ಮತ್ತು ಇತಿಹಾಸ ಉಪನ್ಯಾಸಕರಾದ ಎ.ಒ. ನರಸಿಂಹಮೂರ್ತಿ ಇವರುಗಳು ಶಿಬಿರದ ಮಾರ್ಗದರ್ಶಕರಾಗಿದ್ದರು 7 ದಿನಗಳ ಕಾಲ ನಡೆದ ಈ ಶಿಬಿರದಲ್ಲಿ 50ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಭಾಗವಹಿಸಿದ್ದರು. ಪತಂಜಲಿ ಯೋಗ ಶಿಕ್ಷಣ ಸಮಿತಿಯ ರಮೇಶ್ ರವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿನಿಯರಿಗೆ ಯೋಗಭ್ಯಾಸವನ್ನು ಮಾಡಿಸಲಾಯಿತು. ಆರ್ಟ್ ಆಫ್ ಲಿವಿಂಗ್ ನ ಶಿಕ್ಷಕಿ ಭಾಗ್ಯರವರು ಹೆಣ್ಣು ಮಕ್ಕಳ ಮಾಸಿಕ ಋತುಮತಿ ಸಂಬಂಧಿತ ಸಮಸ್ಯೆಗಳಿಗೆ ಜಾಗೃತಿಯನ್ನು ಮೂಡಿಸಿ ಪರಿಹಾರಗಳನ್ನು ಸೂಚಿಸಿದರು ಶಿಬಿರದಲ್ಲಿ ಕಾನೂನು, ಶಿಕ್ಷಣ ,ಆರೋಗ್ಯ, ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಉಪನ್ಯಾಸ ನೀಡಲಾಯಿತು. ಈ ಶಿಬಿರದಲ್ಲಿ ಪ್ರಾಂಶುಪಾಲರಾದ ಬಿ. ಮರುಳಯ್ಯ, ಜಿ.ಎಚ್. ಮಹದೇವಪ್ಪ…
ಚಿಕ್ಕನಾಯಕನಹಳ್ಳಿ ಭಾರತ ಜೋಡೋ ಯಾತ್ರೆಯ ರಾಷ್ಟ್ರಮಟ್ಟದ ರೈತರ ಅಗತ್ಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ರೈತರೊಂದಿಗೆ ಸಂವಾದ ನಡೆಸಲು ಚಿಕ್ಕನಾಯಕನಹಳ್ಳಿಯ ತರಬೇನಹಳ್ಳಿ ಷಡಕ್ಷರಿ ತೋಟ ಅಣಿಯಾಗಿದೆ ರಾಹುಲ್ ಗಾಂಧಿಯವರು ಕಲ್ಪತರು ನಾಡಿಗೆ ನಾವೆಲ್ಲರೂ ಬರಮಾಡಿಕೊಂಡು ಈ ಭಾಗದ ವಾಣಿಜ್ಯ ಬೆಳೆಗಳಾದ ತೆಂಗು ಅಡಿಕೆ ಬಾಳೆ ಇನ್ನು ಇತರೆ ಸ್ಥಳೀಯ ಸಮಸ್ಯೆಗಳ ಬಗ್ಗೆ ರೈತರ ಬೆಳೆದ ಬೆಳೆಗೆ ಬೆಂಬಲ ಬೆಲೆ ಮತ್ತು ಮಾರುಕಟ್ಟೆ ಧಾರಣೆ ಸಮಸ್ಯೆಗಳ ಬಗ್ಗೆ ಹತ್ತು ಹಲವಾರು ಸಮಸ್ಯೆಗಳನ್ನು ಮನವರಿಕೆ ಮಾಡಿಕೊಡುವ ಮೂಲಕ ಮುಂದಿನ ರೈತರ ಬದುಕು ಹಸನು ಮಾಡುವ ಮಹತ್ತರ ಕಾರ್ಯ ಇದಾಗಲಿದೆ ಎಂದು ಕೌಶಲ್ಯ ಅಭಿವೃದ್ಧಿ ಮಂಡಳಿಯ ಮಾಜಿ ಅಧ್ಯಕ್ಷ ಹಾಗೂ ಕೆಪಿಸಿಸಿಯ ವೀಕ್ಷಕ ಮುರಳಿಧರ್ ಹಾಲಪ್ಪ ಹೇಳಿದರು. ಅವರು ತಾಲೂಕಿನ ಗೋಡೆ ಕೆರೆ ಪಂಚಾಯತಿ ವ್ಯಾಪ್ತಿಯ ತರಬೇನಹಳ್ಳಿ ಗ್ರಾಮದ ಷಡಾಕ್ಷರಿಯವರ ತೋಟದ ಭೇಟಿ ನೀಡಿ ಸ್ಥಳ ಪರಿಶೀಲಿಸಿ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಾ ರಾಹುಲ್ ಗಾಂಧಿಯವರ ಪಾದಯಾತ್ರೆ ಇಂದು ರಾತ್ರಿ ಆದಿಚುಂಚನಗಿರಿಗೆ ಬಂದು ವಾಸ್ತವ್ಯ ಮಾಡಲಿದ್ದಾರೆ ನಾಳೆ…
ತುಮಕೂರು ಸರ್ವರಿಗೂ ಶಾಂತಿ ಮತ್ತು ನೆಮ್ಮದಿಯ ಜೀವನವನ್ನು ಬಯಸುವ ಈದ್ ಮಿಲಾದ್ ಹಬ್ಬದ ಅಂಗವಾಗಿ ನಡೆಯುವ ಸಾಮೂಹಿಕ ದಾಸೋಹ ಕಾರ್ಯಕ್ಕೆ ಜೆಡಿಎಸ್ ಮುಖಂಡ ಹಾಗೂ ಜಿಲ್ಲಾ ಗೆಳೆಯರ ಬಳಗದ ಅಧ್ಯಕ್ಷ ಎನ್.ಗೋವಿಂದರಾಜು ಅಕ್ಕಿ ಮೂಟೆಗಳನ್ನು ವಿತರಿಸಿದರು. ತಮ್ಮ ಗೃಹ ಕಚೇರಿಯಲ್ಲಿ ನಗರದ ಸುಮಾರು 88ಕ್ಕೂ ಹೆಚ್ಚು ಮಸೀದಿಗಳ ಮುತ್ತುವಲ್ಲಿಗಳು, ಮಸೀದಿಗಳ ಮುಖ್ಯಸ್ಥರು ಹಾಗೂ ಹಿರಿಯ ಮುಖಂಡರುಗಳ ಸಮ್ಮುಖದಲ್ಲಿ ಉಚಿತವಾಗಿ ಸಾಮೂಹಿಕ ದಾಸೋಹಕ್ಕೆ ಬಳಸಲು ಅಕ್ಕಿಮೂಟೆಗಳನ್ನು ನೀಡಿ, ಈದ್ ಮಿಲಾದ್ ಹಬ್ಬಕ್ಕೆ ಶುಭಕೋರಿದರು. ಈ ವೇಳೆ ಮಾತನಾಡಿದ ತುಮಕೂರು ಜಿಲ್ಲಾ ಗೆಳೆಯರ ಬಳಗದ ಅಧ್ಯಕ್ಷ ಹಾಗೂ ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎನ್.ಗೋವಿಂದರಾಜು, 2010 ರಿಂದಲೂ ತುಮಕೂರು ನಗರದ ಜನತೆಗೆ ಉಚಿತವಾಗಿ ಕುಡಿಯುವ ನೀರು ವಿತರಿಸುವ ಕೆಲಸವನ್ನು ನಾವು ಮಾಡಿಕೊಂಡು ಬಂದಿದ್ದೇವೆ.ಅಲ್ಲದೆ ಎಲ್ಲಾ ಸಮುದಾಯಗಳ ಹಬ್ಬ ಹರಿದಿನಗಳಲ್ಲಿ ಅವರಿಗೆ ಬೇಕಾದ ದಿನಸಿ,ಇನ್ನಿತರ ಪದಾರ್ಥಗಳನ್ನು ನೀಡಿ,ಎಲ್ಲಾ ಸಮುದಾಯ ಬಡವರು ಸಹ ಸಂತೋಷದಿಂದ ಹಬ್ಬ ಆಚರಿಸುವಂತೆ ಪ್ರೇರೆಪಿಸಿದ್ದೇವೆ. ಈ ಬಾರಿಯೂ ಮಸೀದಿಗಳಲ್ಲಿ,ಬಡಾವಣೆಗಳಲ್ಲಿ ಈದ್…
ತುಮಕೂರು ನಗರದ ಶ್ರೀರಾಜರಾಜೇಶ್ವರಿ ನೃತ್ಯ ಕಲಾಮಂದಿರ 60ನೇ ವಾರ್ಷಿಕೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ನೂಪುರ ಚರಣ-2022 ಕಾರ್ಯಕ್ರಮಕ್ಕೆ ವಿವಿಧ ಕ್ಷೇತ್ರಗಳ ಗಣ್ಯರು ನಟರಾಜ ಮೂರ್ತಿಗೆ ಪೂಜೆ ಸಲ್ಲಿಸಿ, ದೀಪ ಬೆಳಗುವ ಮೂಲಕ ಚಾಲನೆ ನೀಡಿದರು. ಮೈಸೂರು ವಿವಿಯ ಫೈನ್ ಆರ್ಟ್ ವಿಭಾಗ ಮುಖ್ಯಸ್ಥರು ಹಾಗೂ ಪ್ರಾಧ್ಯಾಪಕರಾದ ಕರ್ನಾಟಕ ಕಲಾಶ್ರೀ ಡಾ.ಕೆ.ಕುಮಾರ್,ತುಮಕೂರು ವಿವಿ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಡಾ.ಸಿಬಂತಿ ಪದ್ಮನಾಭ.ಕೆ.ವಿ ಹಾಗೂ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸದಸ್ಯರು ಹಾಗೂ ಯಕ್ಷದೀವಿಗೆ(ರಿ) ಅಧ್ಯಕ್ಷರಾದ ಶ್ರೀಮತಿ ಆರತಿ ಪಟ್ರಮೇ,ಶಿವಶಕ್ತಿ ನೃತ್ಯಕೇಂದ್ರ ಬೆಂಗಳೂರು ಇದರ ಅಧ್ಯಕ್ಷರು,ಭರತನಾಟ್ಯ ಕಲಾವಿದೆ ವಿದುಷಿ ಶ್ರೀಮತಿ ಗುಣವತಿ ಪ್ರಭಾಕರ್,ನಾಟ್ಯಶ್ರೀ ಕೆ.ಎಂ.ರಾಮನ್ ಅವರ ಶಿಷ್ಯೆ.ಭರತನಾಟ್ಯ ಕಲಾವಿದೆ ಶ್ರೀಮತಿ ಉಪಾಪ್ರಿಯೆ ಹಾಗೂ ಪ್ರಾಚೀನ ಕಾವ್ಯಗಳ ಪ್ರವಚನಕಾರರು ಮತ್ತು ಜ್ಞಾನಬುತ್ತಿ ಸತ್ಸಂಗ ಕೇಂದ್ರದ ಅಧ್ಯಕ್ಷರಾದ ಟಿ.ಮುರುಳಿಕೃಷ್ಣಪ್ಪ ಅವರುಗಳು ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಶಾಂತಲಾ ನಾಟ್ಯ ಪ್ರಶಸ್ತಿ ಪುರಸ್ಕøತ ಕೆ.ಎಂ.ರಾಮನ್ ಮತ್ತು ದೇವಕಿ ರಾಮನ್ ಅವರು 1962 ರಲ್ಲಿ ಸ್ಥಾಪಿಸಿದ ಶ್ರೀ ರಾಜರಾಜೇಶ್ವರಿ ದೇವಸ್ಥಾನಕ್ಕೆ ಕಲಾ ಮಂದಿರ ಅರವತ್ತು ವಸಂತಗಳನ್ನು…
ತುಮಕೂರು ಪ್ರಸನ್ನನಂದ ಸ್ವಾಮೀಜಿಗಳು 240 ದಿನಗಳಿಂದ ಸುದೀರ್ಘ ಕಾಲದ ಅಹೋರಾತ್ರಿ ದರಣಿ ನೆಡೆಸುತ್ತಿದ್ದಾರೆ, ಆದರೆ ಸರ್ಕಾರವು ಇಲ್ಲಿಯ ತನಕ ಈ ನಮ್ಮ ಹೋರಾಟಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿರುವುದಿಲ್ಲ. ಆದ ಕಾರಣ ನಮ್ಮ ಎಲ್ಲಾ ಎಸ್.ಸಿ./ಎಸ್.ಟಿ. ಸ್ವಾಮೀಜಿಗಳು ದಿನಾಂಕ 09-10-2022 ರಂದು ನಡೆಯಲಿರುವ ಮಹರ್ಷಿ ವಾಲ್ವೀಕಿ ಜಯಂತಿಯಂದು ರಾಜ್ಯದ ಎಲ್ಲಾ ಎಸ್.ಸಿ/ಎಸ್.ಟಿ ಬಂಧುಗಳು ಬೆಂಗಳೂರಿನಲ್ಲಿ ಸಮಾವೇಶಗೊಳ್ಳಬೇಕೆಂದು ತೀರ್ಮಾನಿಸಿರುತ್ತಾರೆ. ಈ ದಿನಾಂಕದೊಳಗೆ ಸರ್ಕಾರವು ಸಕಾರಾತ್ಮಕವಾಗಿ ನಿರ್ಧಾರ ಕೈಗೊಂಡು ಮೀಸಲಾತಿ ಹೆಚ್ಚಳ ಮಾಡುವ ಆದೇಶ ಮಾಡಿದ್ದಲ್ಲಿ, ಆ ದಿನಾಂಕದಂದು ನಮ್ಮ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಬೇಕೆಂದು ಎಸ್.ಸಿ./ಎಸ್.ಟಿ ಸ್ವಾಮೀಜಿಗಳು ನಿರ್ಧರಿಸಿದ್ದಾರೆ. ಪೂಜ್ಯ ಸ್ವಾಮೀಜಿಗಳ ನಿರ್ಣಯವನ್ನು ನಮ್ಮ ಬಹುಜನ ಸಮಾಜ ಪಾರ್ಟಿ ಸಂಪೂರ್ಣವಾಗಿ ಬೆಂಬಲಿಸಿ ದಿನಾಂಕ 09-10-2022 ರ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದೀವಿ. ಈ ಸಮಾವೇಶದಲ್ಲಿ ಬಾಂಸೆಪ್, ಡಿಎಸ್4, ಬಿ.ಎಸ್.ಪಿ. ಯ ಸಂಸ್ಥಾಪಕರಾದ ಮಾನ್ಯ ಕಾನ್ಷಿರಾಂಜೀ ರವರ ಪರಿನಿಬ್ಬಾಣ ದಿನವನ್ನು ಆಚರಿಸಲಾಗುತ್ತದೆ. ಈ ವಿಷಯದಲ್ಲಿ ಬೆಂಗಳೂರಿನಲ್ಲಿ ನೆಡೆಯುವ ಸ್ವಾಭಿಮಾನಿ ಎಸ್.ಸಿ/ಎಸ್.ಟಿ ಸಂಘಟನೆಗಳು ಸಮಾವೇಶಕ್ಕೆ ನಮ್ಮ ಜಿಲ್ಲೆಯಿಂದ 5000 ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಆದ…
ತುಮಕೂರು ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರದ ಸಚಿವ ಸಂಪುಟವು ಪರಿಶಿಷ್ಟ ಜಾತಿಗೆ ಶೇ. 15 ರಿಂದ 17 ಮತ್ತು ಪರಿಶಿಷ್ಟ ವರ್ಗಕ್ಕೆ ಶೇ.3 ರಿಂದ 7ರಷ್ಟು ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಿರುವ ನಿರ್ಣಯವನ್ನು ಬಿಜೆಪಿ ಜಿಲ್ಲಾ ಎಸ್.ಟಿ.ಮೋರ್ಚಾದ ಅಧ್ಯಕ್ಷ ಜಿ.ಕೆ.ಬಸವರಾಜು ಸ್ವಾಗತಿಸಿ, ಐತಿಹಾಸಿಕ ಕ್ರಮವೆಂದಿದ್ದಾರೆ. ಇವರು ಇಂದು ತುಮಕೂರಿನ ಶ್ರೀ ಶ್ರೀ ಬಾಲಗಂಗಾಧರ ಸ್ವಾಮಿಜೀರವರ ವೃತ್ತದಲ್ಲಿ ಬಿಜೆಪಿ ಎಸ್.ಸಿ. ಮತ್ತು ಎಸ್.ಟಿ ಮೋರ್ಚಾ ಘಟಕಗಳು ರಾಜ್ಯ ಸರ್ಕಾರದ ನಿರ್ಣಯವನ್ನು ಅಭಿನಂದಿಸಿ ನಡೆಸಿ ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಿದ ಸಂಧರ್ಭದಲ್ಲಿ ಮಾತನಾಡುತ್ತಾ, ನ್ಯಾಯಮೂರ್ತಿ ನಾಗಮೋಹನ್‍ದಾಸ್‍ರವರು ನೀಡಿದ ವರದಿಯನ್ನು ಸರ್ಕಾರ ಸಂಪೂರ್ಣವಾಗಿ ಒಪ್ಪಿದೆ. ರಾಜ್ಯದಲ್ಲಿ ಪರಿಶಿಷ್ಟ/ವರ್ಗದವರಿಗೆ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸುವ ಸುಧೀರ್ಘ ಹೋರಾಟ ಮತ್ತು ಮನವಿಗಳಿಗೆ ಸ್ಪಂದಿಸಿ, ಮೀಸಲಾತಿಯನ್ನು ಪರಿಶಿಷ್ಟ ಜಾತಿಯವರಿಗೆ ಶೇ.2ರಷ್ಟು ಮತ್ತು ಪರಿಶಿಷ್ಟ ವರ್ಗದವರಿಗೆ ಶೇ. 4ರಷ್ಟು ಪ್ರಮಾಣವನ್ನು ಹೆಚ್ಚಿಸಿರುವುದರಿಂದ ಜನಾಂಗಗಳಿಗೆ ಸರ್ವ ರೀತಿಯ ಸವಲತ್ತು, ಅನುದಾನದ ಪ್ರಮಾಣಗಳು ಹೆಚ್ಚಿ ಅಭಿವೃದ್ಧಿಗೆ ಸಹಕಾರಿಯಾಗಳಿದೆ ಎಂದರು. ಈ ಸಂಧರ್ಭದಲ್ಲಿ ಮಾತನಾಡಿದ ತುಮಕೂರು…
ತುಮಕೂರು ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿ ಜಾರಿಗೆ ಸಂಬಂಧಿಸಿದಂತೆ ಸರಕಾರದ ನಿರ್ಲಕ್ಷ ಧೋರಣೆ ಕುರಿತು ಚರ್ಚೆ ನಡೆಸುವ ಸಲುವಾಗಿ ದಲಿತ ಸಂಘರ್ಷ ಸಮಿತಿ ಮುಖಂಡರ ಸಭೆಯಲ್ಲಿ ಜಿಲ್ಲಾಧ್ಯಕ್ಷ ಪಿ.ಎನ್.ರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಕರೆಯಲಾಗಿತ್ತು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ದಸಂಸ ಜಿಲ್ಲಾಧ್ಯಕ್ಷ ಪಿ.ಎನ್.ರಾಮಯ್ಯ, ದಲಿತ ಸಮುದಾಯದಲ್ಲಿಯೇ ಸಾಮಾಜಿಕ ನ್ಯಾಯ ಪರಿಪಾಲನೆ ದೃಷ್ಟಿಯಿಂದ ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿಯನ್ನು ಜಾರಿ ಮಾಡುವಂತೆ ಕಳೆದ 12 ವರ್ಷಗಳಿಂದ ಅಧಿಕಾರ ನಡೆಸಿದ ಎಲ್ಲಾ ರಾಜಕೀಯ ಪಕ್ಷಗಳ ವರದಿಯನ್ನು ನಿರ್ಲಕ್ಷ ಮಾಡುತ್ತಾ ಬಂದಿವೆ.ಚುನಾವಣೆ ಸಂದರ್ಭದಲ್ಲಿ ಮಾದಿಗ ಸಮುದಾಯದ ಮತ ಪಡೆಯುವ ಉದ್ದೇಶದಿಂದ ರಾಜಕೀಯ ಪಕ್ಷಗಳು ಒಳಮೀಸಲಾತಿ ಜಾರಿ ಕುರಿತಂತೆ ಮಾತುಕತೆ ನಡೆಸುವ ನಾಟಕ ಮಾಡುತ್ತವೆ.ಚುನಾವಣೆ ಮುಗಿದ ನಂತರ ಇಲ್ಲಸಲ್ಲದ ಕಾರಣ ಹೇಳಿ ಕನಿಷ್ಠ ಸದನದಲ್ಲಿ ಚರ್ಚೆ ನಡೆಸಲು ಹಿಂದೇಟು ಹಾಕುತ್ತಿವೆ ಎಂದು ಆರೋಪಿಸಿದರು. ಕಳೆದ ತಿಂಗಳು ನಡೆದ ವಿಧಾನಸಭಾ ಅಧಿವೇಶದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಮೀಸಲಾತಿ ಹೆಚ್ಚಳ,ಕಾಡುಗೊಲ್ಲ ಸೇರಿದಂತೆ ಕೆಲ ಜಾತಿಗಳನ್ನು ಪರಿಶಿಷ್ಟ ಪಂಗಡದ ಜಾತಿ…









