ತುರುವೇಕೆರೆ : ದೆಬ್ಬೇಘಟ್ಟ ಹೋಬಳಿಯಲ್ಲಿ ಏತ ನೀರಾವರಿ ಅವೈಜ್ಞಾನಿಕವಾಗಿದ್ದು ಅದನ್ನು ಆಧುನೀಕರಣಗೊಳಿಸಿ ಈ ಭಾಗದ ಜನತೆಗೆ ಅನುಕೂಲ ಕಲ್ಪಿಸಲು ಈಗಿನ ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದು ಮಾಜಿ ವಿದಾನ ಪರಿಷತ್ತು ಸದಸ್ಯ ಬೆಮೆಲ್ ಕಾಂತರಾಜು ತಿಳಿಸಿದರು. ತಾಲ್ಲೂಕಿನ ದೆಬ್ಬೇಘಟ್ಟ ಹೋಬಳಿ ಗೊಟ್ಟೀಕೆರೆ ಕೆರೆ ಕೋಡಿ ಬಿದ್ದ ಹಿನ್ನಲೆಯಲ್ಲಿ ಗ್ರಾಮಸ್ಥರೊಡಗೂಡಿ ಕೆರೆಗೆ ಬಾಗಿನ ಅರ್ಪಿಸಿದ ಸಂಧರ್ಭದಲ್ಲಿ ಮಾತನಾಡಿದ ಅವರು ಸುಮಾರು 22 ವರ್ಷಗಳಿಂದಲೂ ಜೀವನಾಡಿ ಗೊಟ್ಟೀಕೆರೆ ಕೆರೆಗೆ ನೀರು ಬಾರದೆ ಈ ಭಾಗದ ಜನತೆ ಅತ್ಯಂತ ಕಷ್ಟದ ಪರಿಸ್ಥಿತಿ ಎದುರಿಸುತ್ತಿದ್ದರು. ಜನಜಾನುವಾರುಗಳಿಗೆ ನೀರಿನ ಅಭಾವವಿತ್ತು. ಇದೀಗ ಭಗವಂತನ ಕೃಪೆಯಿಂದ ಮಳೆಯಿಂದಲೇ ಈ ಬಾರಿ ಕೆರೆ ತುಂಬಿ ಕೋಡಿ ಬಿದ್ದ ಹಿನ್ನಲೆಯಲ್ಲಿ ಗ್ರಾಮಸ್ಥರ ಆಮಂತ್ರಣದ ಮೇರೆಗೆ ಇಂದು ಕೆರೆಗೆ ಬಾಗಿನ ಅರ್ಪಿಸಿದ್ದೇವೆ. ಹೀಗೆಯೆ ಪ್ರತಿವರ್ಷ ಕೆರೆ ತುಂಬಲಿ ಎಂದು ಹಾರೈಸುತ್ತೇನೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದ್ದು ಈ ಕೆರೆಗೆ ಹೇಮಾವತಿ ನೀರನ್ನು ಹರಿಸಲಾಗುವುದು. ಹಾಗೆಯೆ ಅತಿವೃಷ್ಟಿಯಿಂದ ಈ ಬಾರಿ ಎಲ್ಲಾ ಕಡೆ ಕೆರೆಕಟ್ಟೆಗಳು…
Author: News Desk Benkiyabale
ತುಮಕೂರು : 1993ರ ಮಾರ್ಚ್ 13 ರಂದು ನೆಡೆದ ಮುಂಬೈ ಬಾಂಬ್ ಸ್ಪೋಟದ ರುವಾರಿ ಉಗ್ರ ಯಾಕೂಬ್ ಮೆಮೊನ್‍ನ ಸಮಾದಿಯನ್ನು ಜಿಹಾದಿ ಮನಸ್ಸಿನ ಸ್ಥಳೀಯ ವ್ಯಕ್ತಿಗಳು ಅತ್ಯಂತ ವೈಭೋಯುತವಾಗಿ ಅಮೃತಶಿಲೆ ನೆಲೆಹಾಸು, ಎಲ್.ಇ.ಡಿ. ಲೈಟಿಂಗ್‍ನ ಅಲಂಕಾರದೊಂದಿಗೆ ಸೌಂದರ್ಯೀಕರಣ ಮಾಡಿರುವುದು ರಾಷ್ಟ್ರೀಯವಾದಿಗಳ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ ಎಂದು ಬಿಜೆಪಿ ತುಮಕೂರು ಜಿಲ್ಲಾ ಘಟಕ ವಕ್ತಾರ ಕೆ.ಪಿ.ಮಹೇಶ ಹೇಳಿದ್ದಾರೆ. ಕಳೆದ 29 ವರ್ಷಗಳ ಹಿಂದೆ ಮಹಾರಾಷ್ಟ್ರದ ಮುಂಬೈನ 13ಕ್ಕೂ ಹೆಚ್ಚು ಸ್ಥಳಗಳಲ್ಲಿ ನಡೆದ ಬಾಂಬ್ ಸ್ಪೋಟದಲ್ಲಿ ಸುಮಾರು 257 ಹತ್ಯೆಗೀಡಾದರೆ, 1400ಕ್ಕೂ ಹೆಚ್ಚು ಮಂದಿ ಗಾಯಗೀಡಾಗಿದ್ದರು. ಈ ಭೀಕರ ಬಾಂಬ್ ಸ್ಪೋಟಕ್ಕೆ ಮುಂಬೈ ಹಾಗೂ ದೇಶ್ಯಾದ್ಯಂತ ಆತಂಕ ಸೃಷ್ಟಿಯಾಗಿ, ಸ್ಪೋಟದಲ್ಲಿ ಭಾಗಿಯಾಗಿದ್ದ ಉಗ್ರ ಯಾಕೂಬ್ ಮೆಮೊನ್ ಸೇರಿ 10ಕ್ಕೂ ಹೆಚ್ಚು ಜನರಿಗೆ ಮರಣದಂಡನೆ ತೀರ್ಪುನ್ನು ನ್ಯಾಯಾಲಯ ನೀಡಿತ್ತು. ನಂತರ 2015ರಲ್ಲಿ ಯಾಕೂಬ್ ಮೆಮೊನ್‍ನ್ನು ನಾಗಪುರ ಜೈಲಿನಲ್ಲಿ ಗಲ್ಲಿಗೇರಿಸಿ, ದಕ್ಷಿಣ ಮುಂಬೈನ ಬಾಬಾ ಕಬಸ್ರ್ತಾನ್‍ನಲ್ಲಿ ಸಮಾಧಿ ಮಾಡಲಾಗಿತ್ತು. ಉಗ್ರ ಯಾಕೂಬ್ ಮೆಮೊನ್‍ಗೆ ಮರಣದಂಡನೆ ನೀಡಿ ನಂತರ…
ತಿಪಟೂರು : ತಾಲೂಕು ದೇಶದಲ್ಲಿಯೇ ಕೊಬ್ಬರಿ ಮತ್ತು ತೆಂಗನ್ನು ಉತ್ಪಾದಿಸುವ ಅತ್ಯಂತ ದೊಡ್ಡ ತಾಲೂಕು ಆಗಿದ್ದು, ಐತಿಹಾಸಿಕ ಮಹತ್ವವನ್ನು ಹೊಂದಿದೆ. ಇಡೀ ತಾಲೂಕಿನಿಂದ ಅಡುಗೆ ಎಣ್ಣೆಯನ್ನು ಮತ್ತು ದಿನನಿತ್ಯ ಬಳಸುವ ಎಣ್ಣೆಯನ್ನು ಉತ್ಪಾದಿಸಿ ದೇಶ-ವಿದೇಶಗಳಿಗೆ ರಫ್ತು ಮಾಡುವ ಮೂಲಕ ಇಲ್ಲಿನ ಯುವಜನರಿಗೆ ಉದ್ಯೋಗ ಸೃಷ್ಟಿಸುವ ಕೆಲಸವನ್ನು ಇಲ್ಲಿನ ಜನಪ್ರತಿನಿಧಿಗಳು ಮಾಡಬೇಕಿತ್ತು. ಆದರೆ, ಅವರು ತಮ್ಮ ಸ್ವ-ಹಿತಾಸಕ್ತಿಗಾಗಿ ತಿಪಟೂರನ್ನು ಕಡೆಗಣಿಸಿದ್ದಾರೆ. ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವು ಇಂದಿನ ಸಂಪನ್ಮೂಲಗಳನ್ನು ಬಳಸಿಕೊಂಡು ತಿಪಟೂರನ್ನು ಮಾದರಿ ತಾಲೂಕನ್ನಾಗಿ ಮಾಡುತ್ತದೆ ಎಂದು ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಜ್ಞಾನ ಸಿಂಧೂ ಸ್ವಾಮಿ ತಿಳಿಸಿದರು. ತಿಪಟೂರು ನಗರದಲ್ಲಿ ಗುರುವಾರ ರಾಷ್ಟ್ರ ಸಮಿತಿ ಪಕ್ಷ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವು “ಕರುನಾಡು ಕಟ್ಟೋಣ” ಕನ್ನಡ ನಾಡಿನ ಪ್ರಣಾಳಿಕೆ ಕುರಿತು ಸ್ವಾಭಿಮಾನಿ ಕನ್ನಡಗರ ಜೊತೆ ಸಂವಾದವನ್ನು ಸೆ.8,9ರ ಎರಡು ದಿನಗಳ ಕಾಲ ತಿಪಟೂರು ತಾಲೂಕಿನಲ್ಲಿ ಆಯೋಜಿಸಿದ್ದು, ತಾಲೂಕಿನಲ್ಲಿ ಮಳೆಯಿಂದಾಗಿರುವ ಅನಾಹುತಗಳನ್ನು ರೈತರಿಗಾಗಿರುವ ಬೆಳೆನಷ್ಟ ಮತ್ತು ವಸತಿ ಕಳೆದುಕೊಂಡಿರುವ…
ತುಮಕೂರು : ಕರ್ನಾಟಕದಲ್ಲಿ ಬಸವಣ್ಣನವರು ನಿಮ್ನ ವರ್ಗಗಳನ್ನು ಒಂದು ಗೂಡಿಸುವ ಮೂಲಕ ಸಮಾಜದಲ್ಲಿ ಕ್ರಾಂತಿ ಮಾಡಿದಂತೆ ಕೇರಳ ಮತ್ತು ಆಸುಪಾಸುಗಳಲ್ಲಿ ಮಹರ್ಷಿ ನಾರಾಯಣಗುರುಗಳು ಸಮಾಜದಲ್ಲಿದ್ದ ಅನಿಷ್ಠ ಪದ್ದತಿಗಳನ್ನು ಹೋಗಲಾಡಿಸುವ ಮೂಲಕ ತಳ ವರ್ಗಗಳಲ್ಲಿ ಜಾಗೃತಿ ಮೂಡಿಸಿದರು ಎಂದು ಆರ್ಯ ಈಡಿಗರ ಸಂಘದ ಜಿಲ್ಲಾಧ್ಯಕ್ಷ ಅಜಯಕುಮಾರ್ ತಿಳಿಸಿದ್ದಾರೆ. ನಗರದ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಆವರಣದಲ್ಲಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ನಾರಾಯಣಗುರು ಟ್ರಸ್ಟ್ ,ಆರ್ಯ ಈಡಿಗರ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ ನಾರಾಯಣಗುರು ಅವರ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತಿದ್ದ ಅವರು,ನಾರಾಯಣಗುರು ಅವರು ಸಮಾಜ ಸೇವೆಯನ್ನು ಕಣ್ಣಾರೆ ಕಂಡ ಮಹಾತ್ಮಗಾಂಧಿ ಅವರು, ನಾರಾಯಣ ಗುರುಗಳನ್ನು ಮಹರ್ಷಿ ಎಂದು ಸಂಬೋಧಿಸಿದ್ದರು ಎಂದರು. ನಮ್ಮ ಹಿರಿಯರಾದ ಜೆ.ಪಿ.ನಾರಾಯಣಸ್ವಾಮಿಯವರು ಇತರೆ ಸಮುದಾಯಗಳ ಪರ್ವತಕರಿಗೆ ಸಿಕ್ಕ ಮರ್ಯಾದೆ ನಾರಾಯಣಗುರುಗಳಿಗೂ ಸಿಗಬೇಕೆಂಬ ಉದ್ದೇಶದಿಂದ ಸಿದ್ದರಾಮಯ್ಯ ಅವರ ಮೂಲಕ ನಾರಾಯಣಗುರುಗಳ ಜಯಂತಿ ಯನ್ನು ಸರಕಾರಿ ಕಾರ್ಯಕ್ರಮವಾಗಿ ಆಚರಿಸಲಾಗುತ್ತಿದೆ..ಜಿಲ್ಲೆಯಲ್ಲಿಯೂ ಸೆಪ್ಟಂಬರ್ 20 ರಂದು ನಾರಾಯಣಗುರುಗಳ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದೆ. ಅಂದು ಸಮುದಾಯದ ಎಲಾ ಮುಖಂಡರು,…
ತುಮಕೂರು : ಗುರುಮೂರ್ತಿರವರು ಮಾತನಾಡಿ ಪ್ರೊ. ಬರಗೂರು ರಾಮಚಂದ್ರಪ್ಪನವರು ಈ ನಾಡು ಕಂಡ ಅತ್ಯಂತ ಪ್ರಸಿದ್ಧ ಬರಹಗಾರರು, ಅನೇಕ ವಿಶ್ವವಿದ್ಯಾಲಯಗಳಲ್ಲಿ ಇವರ ಶಿಷ್ಯರನ್ನು ಕಾಣಬಹುದು. ಅನೇಕ ಪುಸ್ತಕಗಳನ್ನು ಮತ್ತು ಕಾದಂಬರಿಗಳನ್ನು ಬರೆದಿದ್ದಾರೆ. ಇವರು ಕರ್ನಾಟಕ ಚಿತ್ರರಂಗಕ್ಕೆ ತಮ್ಮದೆ ಆದ ಕೊಡುಗೆ ನೀಡಿದ್ದಾರೆ ಎಂದರು. ಬಿ.ಎಸ್.ಪಿ. ಜಿಲ್ಲಾ ಅಧ್ಯಕ್ಷರು, ರಾಜಸಿಂಹರವರು ಮಾತನಾಡಿ ತುಮಕೂರು ಜಿಲ್ಲೆಯ ಸಾಂಸ್ಕøತಿಕ ರಾಯಬಾರಿ ತಳ ಸಮುದಾಯಗಳ, ಬಡವರ, ದಲಿತರ, ಧ್ವನಿಯಾಗಿ ಇಡೀ ರಾಜ್ಯದಾದ್ಯಂತ ಬಂಡಾಯ ಸಾಹಿತ್ಯ ಸಮ್ಮೇಳನಗಳನ್ನು ಮಾಡುವ ಮೂಲಕ ಅನೇಕ ಪ್ರಸ್ತುತ ಸಮಕಾಲೀನ ಸಮಸ್ಯೆಗಳ ಬಗ್ಗೆ ಸಾಮಾನ್ಯ ಜನರಿಗೆ ಜಾಗೃತಿ ಸಮ್ಮೇಳನಗಳ ಮೂಲಕ ತಿಳಿಸುತ್ತಿದ್ದಾರೆ ಎಂದರು. ಬಿ.ಎಸ್.ಪಿ. ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ರಂಗಧಾಮಯ್ಯ ಜೆ.ಸಿ. ರವರು ಮಾತನಾಡಿ ಬರಗೂರು ರಾಮಚಂದ್ರಪ್ಪರವರು ಮೇಷ್ಟ್ರು ಎಂದೆ ಪ್ರಸಿದ್ಧರಾಗಿದ್ದು ತನ್ನದೇ ಆದ ಸಾಂಸ್ಕøತಿಕ, ಸಾಹಿತ್ಯ, ಚಳುವಳಿಗಳಿಗೆ ಹಾಗೂ ಬರಹಗಳಿಗೆ ಸೇವೆ ಸಲ್ಲಿಸಿದ್ದಾರೆ. ತುಮಕೂರು ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ವಿಶ್ವ ವಿದ್ಯಾಲಯವನ್ನು ಸ್ಥಾಪಿಸುವುದಕ್ಕಿಂತ ಮುಂಚೆ ಕನ್ನಡ ಮತ್ತು ಇತಿಹಾಸ ವಿಭಾಗಗಳನ್ನು ತೆಗೆದು ಬಹಳಷ್ಟು…
ತುಮಕೂರು : ಪ್ರತಿಭಟನೆಯಲ್ಲಿ ಮಾತನಾಡಿದ ಸಂಘದ ಜಿಲ್ಲಾ ಕಾರ್ಯಧರ್ಶಿ ಸೈಯದ್ ಮುಜೀಬ್ ಅವರು ರಾಜ್ಯದಲ್ಲಿ 7-8 ಲಕ್ಷಜನ ಹಾಗೆ ಜಿಲ್ಲೆಯಲ್ಲಿ ಸರಿ ಸುಮಾರು 50-60 ಸಾವಿರ ಬೀಡಿ ಕಾರ್ಮಿಕರು ಇದ್ದಾರೆ , ಈ ಕಾರ್ಮಿಕರು ಹಲವು ದಶಕಗಳ ಕಾಲ ದುಡಿದಾಗ ಅದರಿಂದ ಸರ್ಕಾರ ಅಬ್ಕಾರಿ ತೆರಿಗೆ, ಈಗ ಜಿ.ಎಸ್.ಟಿ ಮೂಲಕ ಲಕ್ಷಂತರ ಕೋಟಿರೂಪಾಯಿಗಳನ್ನು ಆಧಾಯಗಳಿಸಿದೆ. ಅದರಲ್ಲಿ ಈಗ ಬೀಡಿ ಕಾರ್ಮಿಕರಿಗೆ ಪರಿಹಾರ ನೀಡಲಿ ಎಂದು ಒತ್ತಾಯಿಸಿದರು. ಸಂಘ ಮುಖಂಡರಾದ ಶಾಹಿಸ್ತಾ ಪರ್ವಿನ್, ಇಂತಿಯಾಜ್, ರಪೀಕ್, ಹಲಿಮಾ ಬಾನು, ಮತ್ತಿತರರು ಇದ್ದರು
ತುಮಕೂರು : ನಗರದಲ್ಲಿ 6 ವರ್ಷಗಳಿಂದ ಯಶಸ್ವಿಯಾಗಿ ನಡೆಯುತ್ತಿರುವ ನನಸು ಪತ್ತಿನ ಸಹಕಾರ ಸಂಘ ನಿ., ದ ನೂತನ ಕಚೇರಿಯು ನಗರದ ಪಾಂಡುರಂಗನಗರದ ಲಾಸರ್ ಲೇತ್ ರಸ್ತೆಯಲ್ಲಿ ಗುರುವಾರÀ ಉದ್ಘಾಟನೆಗೊಂಡಿತು. ಚಿಕ್ಕಪೇಟೆಯ ಹಿರೇಮಠಾಧ್ಯಕ್ಷರಾದ ಡಾ.ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ನೂತನ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿ, ನನಸು ಪತ್ತಿನ ಸಹಕಾರ ಸಂಘ 2016ರಲ್ಲಿ ಆರಂಭಗೊಂಡು ಅತ್ಯಂತ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು. 2016ರಲ್ಲಿ ಮಹಿಳೆಯರಿಗೆ 5 ಸಾವಿರ ರೂ.ಗಳ ಸಾಲ ನೀಡುವ ಮೂಲಕ ನನಸು ಪತ್ತಿನ ಸಹಕಾರ ಸಂಘ ಆರಂಭಗೊಂಡಿತು. ಅಂದಿನಿಂದ 6 ವರ್ಷಗಳವರೆಗೆ ಯಶಸ್ವಿಯಾಗಿ, ಜನಸ್ನೇಹಿಯಾಗಿ, ಸಹಕಾರ ಸ್ನೇಹಿಯಾಗಿ ಸಂಘ ಮುಂದುವರೆದುಕೊಂಡು ಬರುತ್ತಿದೆ ಎಂದರು. ಮಹಿಳೆಯರೆಲ್ಲರೂ ಸೇರಿ ಸಂಘ ಸ್ಥಾಪಿಸಿಕೊಂಡು ಬರುತ್ತಿರುವುದು ಶ್ಲಾಘನೀಯ, ಮಹಿಳಾ ಸಬಲೀಕರಣವಾಗುತ್ತಿದೆ. ಎಲ್ಲಾ ಗೃಹಿಣಿಯರು ತಮ್ಮ ಮನೆ ಮಕ್ಕಳು ಎಲ್ಲರನ್ನೂ ಸುಧಾರಿಸಿಕೊಂಡು ಅದರ ಜೊತೆಯಲ್ಲಿ ಸಾಮಾಜಿಕವಾಗಿ ಸೇವೆ ಮಾಡಬೇಕು ಎಂಬ ಉದ್ಧೇಶದಿಂದ ಮನೆಯ ಎಲ್ಲಾ ಕೆಲಸ ಕಾರ್ಯಗಳನ್ನು ಪೂರೈಸಿ, ನಂತರ ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದ್ದಾರೆ ಎಂದು ಬಣ್ಣಿಸಿದರು.…
ತುಮಕೂರು : ಪ್ರತಿಯೊಬ್ಬರೂ ಮರಣಾಂತರ ನೇತ್ರದಾನ ಮಾಡುವ ಮೂಲಕ ದೃಷ್ಟಿಹೀನರ ಬಾಳಿಗೆ ಬೆಳಕಾಗಬೇಕು ಎಂದು ಜಿಲ್ಲಾಧಿಕಾರಿ ವೈ .ಎಸ್. ಪಾಟೀಲ ಅವರು ಕರೆ ನೀಡಿದರು. ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ತುಮಕೂರು ವಿಶ್ವವಿದ್ಯಾಲಯದ ಸಂಯುಕ್ತಾಶ್ರಯದಲ್ಲಿಂದು ವಿಶ್ವವಿದ್ಯಾಲಯದ ಡಾ: ಸದಾನಂದಮಯ್ಯ ಕಟ್ಟಡದ ಆವರಣದಲ್ಲಿ ನಡೆದ 37ನೇ ರಾಷ್ಟ್ರೀಯ ನೇತ್ರದಾನ ಪಾಕ್ಷಿಕಾಚರಣೆಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ನೇತ್ರದಾನವು ಶ್ರೇಷ್ಠ ದಾನವಾಗಿದ್ದು, ಅಂಧತ್ವ ನಿವಾರಣೆಯಲ್ಲಿ ಸಾರ್ವಜನಿಕರ ಪಾತ್ರ ಮಹತ್ವದಾಗಿದೆ. ನೇತ್ರದಾನದ ಶ್ರೇಷ್ಠತೆ ಅರಿತು ಸ್ವಯಂಪ್ರೇರಿತರಾಗಿ ಎಲ್ಲರೂ ನೇತ್ರದಾನ ಮಾಡಬೇಕು. ದೇಶದಲ್ಲಿ ಲಕ್ಷಾಂತರ ಜನರು ದೃಷ್ಟಿರಹಿತರಾಗಿದ್ದು, ಮರಣದ ನಂತರ ಮಣ್ಣಲ್ಲಿ ಮಣ್ಣಾಗುವ ಬದಲು ಕಣ್ಣನ್ನು ದಾನ ಮಾಡಿ ಅಂಧರ ಜೀವನವನ್ನು ಬೆಳಕಾಗಿಸುವ ಪುಣ್ಯದ ಕೆಲಸದಲ್ಲಿ ಭಾಗಿಯಾಗಬೇಕು. ಎಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಮಂಜುನಾಥ್ ಅವರು ಪ್ರತಿ ವರ್ಷ ಆಗಸ್ಟ್ 25 ರಿಂದ ಸೆಪ್ಟೆಂಬರ್ 8ರವರೆಗೂ ‘ರಾಷ್ಟ್ರೀಯ ನೇತ್ರದಾನ ಪಾಕ್ಷಿಕ’…
ತುಮಕೂರು : ಜನೌಷಧ ಕೇಂದ್ರದಲ್ಲಿ ಅಗ್ಗದ ದರದಲ್ಲಿ ಔಷಧಿಗಳು ಲಭ್ಯವಾಗುತ್ತವೆ ಎಂದು ಸಂಸದ ಜಿ.ಎಸ್. ಬಸವರಾಜು ತಿಳಿಸಿದರು. ಜಿಲ್ಲಾಸ್ಪತ್ರೆಯಲ್ಲಿಂದು ಜನೌಷಧ ಕೇಂದ್ರವನ್ನು ಉದ್ಘಾಟಿಸಿದ ನಂತರ ಮಾತನಾಡಿದ ಅವರು ಮಾಜಿ ಕೇಂದ್ರ ಸಚಿವ ದಿವಂಗತ ಅನಂತಕುಮಾರ್ ಅವರ ದೂರದೃಷ್ಟಿಯ ಫಲವಾಗಿ ಕೇಂದ್ರ ಸರ್ಕಾರವು ದೇಶದಲ್ಲಿ ಜನೌಷಧ ಕೇಂದ್ರಗಳನ್ನು ತೆರೆಯಲು ಘೋಷಿಸಿದ್ದು, ಸರ್ಕಾರಿ ಆಸ್ಪತ್ರೆಗಳ ಬಳಿ ಹಾಗೂ ಹೆಚ್ಚು ಜನದಟ್ಟಣೆ ಇರುವ ಕಡೆ ಔಷಧ ಕೇಂದ್ರಗಳನ್ನು ತೆರೆದು ಅಗ್ಗದ ದರದಲ್ಲಿ ಔಷಧಿಗಳನ್ನು ವಿತರಿಸಲಾಗುತ್ತಿದೆ ಎಂದರು. ಔಷಧ ಉತ್ಪಾದನಾ ಕಂಪನಿಗಳು ಕಡಿಮೆ ವೆಚ್ಚದಲ್ಲಿ ಉತ್ಪಾದಿಸಿ ಅಧಿಕ ದರದಲ್ಲಿ ಮಾರುವುದನ್ನು ಮನಗಂಡ ಸರ್ಕಾರ ಬಡವರ ಕೈಗೆಟುಕುವ ಬೆಲೆಯಲ್ಲಿ ಔಷಧಗಳು ಸಿಗುವಂತಾಗಲಿ ಎನ್ನುವ ಉದ್ದೇಶದಿಂದ ದೇಶದಾದ್ಯಂತ ಈ ಜನೌಷಧ ಕೇಂದ್ರಗಳನ್ನು ತೆರೆಯಲಾಗಿದೆ ಎಂದರು. ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಜನೌಷಧಿ ಕೇಂದ್ರ ತೆರೆದು ಜನರು ಕೇಳುವ ಔಷಧಗಳನ್ನು ಪೂರೈಸುವುದು ಸರ್ಕಾರದ ಉದ್ದೇಶವಾಗಿದೆ. ಜನೌಷಧಿ ಕೇಂದ್ರದಲ್ಲಿ ಲಭ್ಯವಿರುವ ಎಲ್ಲಾ ಔಷಧಗಳು ಉತ್ತಮ ಗುಣಮಟ್ಟದಿಂದ ಕೂಡಿದೆ. ಜನರು ಜನೌಷಧಿ ಕೇಂದ್ರದ ಔಷಧಿಯು ಕಡಿಮೆ…
ತುಮಕೂರು : ನಗರದ ಮಹಾನಗರಪಾಲಿಕೆ ವ್ಯಾಪ್ತಿಯ ತುಮಕೂರು ನಗರ ವಿಧನಾಸಭಾ ಕ್ಷೇತ್ರದ ಚುನಾವಣಾ ಮತದಾರರ ಗುರುತು ಚೀಟಿಗೆ ಅಧಾರ್ ಸಂಖ್ಯೆಯನ್ನು ಜೋಡಣೆ ಮಾಡಲು ಮತಗಟ್ಟೆ ಮಟ್ಟದ ಅಧಿಕಾರಿಗಳಾಗಿ ನಗರಯೋಜನೆಯ ಅಂಗನವಾಡಿ ಕಾರ್ಯಕರ್ತೆಯರನ್ನು ನೇಮಕ ಮಾಡಿದೆ. ಆದರೆ ಅಂಗನವಾಡಿ ಕಾರ್ಯಕರ್ತೆಯರನ್ನು ಶಿಶು ಅಭಿವೃದ್ಧಿಯೇತರ ಕೆಲಸಗಳಿಗೆ ನಿಯೋಜಿಸಬಾರದೆಂದು ಸಂ.ಡಿಡಬ್ಲ್ಯೂಸಿ.ಐ.ಸಿಡಿಎಸ್‍ಜಿ-1:73:2009-10/16-17 ಮತ್ತು ದಿ. 9-8-2018ರ ಮಾನ್ಯ ಇಲಾಖಾ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ¸ಭÉಯ ನಡವಾಳಿ ಇದೆ. ಆದರೂ ಮತದಾರರ ದತ್ತಾಂಶವನ್ನು ಜೋಡಣೆ ಮಾಡಲು ಮತ್ತು ದೃಢೀಕರಿಸಲು ಸ್ವಯಂಪ್ರೇರಿತವಾಗಿ ಆಧಾರ್ ಲಿಂಕ್ ಜೋಡಣೆಯನ್ನು ಓಗಿSP/ಗಿಊಂ ಂPP ಮುಖಾಂತರ ಜೋಡಣೆಮಾಡಲು ಅವಕಾಶ ಕಲ್ಪಿಸಲಾಗಿದೆ. ಇದನ್ನು ಮತದಾರರಿಗೆ ನಿಯೋಜನೆಗೊಂಡಿರುವ ಕಾರ್ಯಕರ್ತೆಯರು ಪ್ರತಿನಿತ್ಯ ತಿಳಿಹೇಳುತ್ತಿದ್ದಾರೆ ಮತ್ತು ಜೋಡಣೆ ಮಾಡಿಸುತ್ತಿದ್ದಾರೆ. ಈ ಸಮಯದಲ್ಲಿ ಕೆಲವರು ವಾಸ ಸ್ಥಳಾಂತರಗೊಂಡಿದ್ದು, ಮತಗಟ್ಟೆ ಅದಲುಬದಲಾಗಿರುವುದು, ನ್ಯಾಯಾಲಯದಿಂದ ಮತದಾರರ ಗುರುತು ಚೀಟಿಗೆ ಆಧಾರ ಜೋಡಣೆ ಕಡ್ಡಾಯವಲ್ಲ ಅಂತ ಆದೇಶ ಇದೆ ಎಂದು ಜನರು ಪ್ರಸ್ನಿಸುತ್ತಿದ್ದಾರೆ. ಮತ್ತೆ ಕೆಲವರು ನಮಗೆ ಇಷ್ಠವಾದಾಗ ಆಧಾರ ಜೋಡಣೆ ಮಾಡಿಕೊಳ್ಳುತ್ತೇವೆ ಎಂದು ತಿಳಿಸುತ್ತಿದ್ದಾರೆ ಇನ್ನೂ…








