Author: News Desk Benkiyabale

ತುಮಕೂರು: ಇತ್ತೀಚೆಗೆ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಜಿಲ್ಲೆಯ ಎಲ್ಲ ಕೆರೆ-ಕಟ್ಟೆÉಗಳು ತುಂಬಿದ್ದು, ಇದೇ ಸಂದರ್ಭವನ್ನು ಬಳಸಿಕೊಂಡು ಸಂಬಂಧಿಸಿದ ಇಲಾಖೆಗಳು, ತಮ್ಮ ವ್ಯಾಪ್ತಿಯ ಕೆರೆಗಳ ಸರಹದ್ದನ್ನು ಗುರುತಿಸಿ, ಒತ್ತುವರಿ ಇದ್ದಲ್ಲಿ ತೆರವುಗೊಳಿಸಿ ಕೆರೆಗಳನ್ನು ಸಂರಕ್ಷಣೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕು ಮತ್ತು ಈ ಸಂಬಂಧ ಜಿಲ್ಲಾ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರಕ್ಕೆ ವರದಿ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅವರು ಅಧಿಕಾರಿಗಳಿಗೆ ಸೂಚಿಸಿದರು. ಜಿಲಾಧಿಕಾರಿಗಳ ಕೆಸ್ವಾನ್ ಸಭಾಂಗಣದಲ್ಲಿಂದು ನಡೆದ ಕೆರೆ ಸಂರಕ್ಷಣೆ ಅಭಿವೃದ್ಧಿ ಪ್ರಾಧಿಕಾರದ ಜಿಲ್ಲಾ ಮಟ್ಟದ ಕಾರ್ಯಸಮಿತಿ ಸಭೆಯಲ್ಲಿ ಭಾಗವಹಿಸಿ ಮಾತನಾಡುತ್ತಾ, ಜಿಲ್ಲೆಯ ಎಲ್ಲ ಜಲಮೂಲಗಳ ನೀರಿನ ಗುಣಮಟ್ಟ ವಿಶ್ಲೇಷಣೆಗೆ ಸಂಬಂಧಿಸಿದಂತೆ ಮಾಹಿತಿ ಮತ್ತು ಕೆರೆಗಳ ಒತ್ತುವರಿ ಹಾಗೂ ಮಾಲಿನ್ಯ ತಡೆಗಟ್ಟಿ ಕೆರೆಗಳನ್ನು ಪುನಶ್ಚೇತನಗೊಳಿಸಿರುವ ಸಂಬಂಧ ಕೆರೆಗಳ ಉಸ್ತುವಾರಿ ಇಲಾಖೆಗಳು ವರದಿ ಸಲ್ಲಿಸುವಂತೆ ಸೂಚಿಸಿದ ಅವರು, ಕೆರೆ ಒತ್ತುವರಿ ತೆರವು ಕಾರ್ಯಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ಎಲ್ಲ ಕೆರೆಗಳ ಸರ್ವೆ ಕಾರ್ಯವು ಈಗಾಗಲೇ ಪ್ರಗತಿಯಲ್ಲಿದ್ದು, ಆಯಾ ಇಲಾಖೆಗಳು ಸಹ ಕೆರೆಗಳ ಗಡಿ…

Read More

ತುಮಕೂರು: ಶಿಕ್ಷಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ, ಶಿಕ್ಷಕರು/ನೌಕರರ ಬೇಡಿಕೆಗಳನ್ನು ಈಡೇರಿಕೆಗಾಗಿ ರಾಷ್ಟ್ರಮಟ್ಟದಲ್ಲಿ ಸಹಿ ಸಂಗ್ರಹಣ ಅಭಿಯಾನದ ಅಂಗವಾಗಿ ಅಖಿಲ ಭಾರತ ಶಿಕ್ಷಕರ ಫೆಡರೇಷನ್ ನೇತೃತ್ವದಲ್ಲಿ ಶಿಕ್ಷಕರ ಬಹುದಿನಗಳ ಬೇಡಿಕೆಯನ್ನು ಈಡೇರಿಸಲು ಕ್ರಮವಹಿಸುವಂತೆ ಒತ್ತಾಯಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದರು. ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತುಮಕೂರು ಜಿಲ್ಲಾಶಾಖೆಯ ಅಧ್ಯಕ್ಷ ಆರ್.ಪರಶಿವಮೂರ್ತಿ ನೇತೃತ್ವದಲ್ಲಿ ಪದಾಧಿಕಾರಿಗಳು ಹಾಗೂ ಸಮಿತಿಯ ಸದಸ್ಯರು ಮನವಿ ಸಲ್ಲಿಸಿದರು. ಈ ವೇಳೆ ಮಾತನಾಡಿದ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತುಮಕೂರು ಜಿಲ್ಲಾಶಾಖೆಯ ಅಧ್ಯಕ್ಷ ಆರ್.ಪರಶಿವಮೂರ್ತಿ ಅವರು, ಇಡೀ ದೇಶದಲ್ಲಿ ರಾಜ್ಯದಲ್ಲಿಯೇ ಪ್ರಥಮವಾಗಿ ಜಾರಿಗೆ ತಂದಿರುವ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೊಳಿಸಲು ಮುಂದಾಗಿರುವ ಸರ್ಕಾರ, ಶಿಕ್ಷಕರಿಗೆ ತರಬೇತಿಯನ್ನು ನೀಡದೇ ಎನ್‍ಇಪಿ ಜಾರಿಗೊಳಿಸಲು ಮುಂದಾಗಿರುವುದರಿಂದ ಶಿಕ್ಷಕರಿಗೆ ಒತ್ತಡ ನಿರ್ಮಾಣವಾಗಿದೆ ಎಂದರು. ದೇಶದ ಬೇರೆ ರಾಜ್ಯಗಳಲ್ಲಿ ಎನ್‍ಇಪಿ ತುರ್ತಾಗಿ ಜಾರಿಗೊಳಿಸದೇ, ಶಿಕ್ಷಕರಿಗೆ ಸೂಕ್ತ ತರಬೇತಿಯನ್ನು ನೀಡುವ ಮೂಲಕ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಸಮರ್ಪಕವಾಗಿ…

Read More

ತುರುವೇಕೆರೆ: ತುರುವೇಕೆರೆಯಲ್ಲಿ ಭಾನುವಾರ ರಾತ್ರಿ ಸತತವಾಗಿ ಸುರಿದ ಮಳೆಗೆ ತಾಲ್ಲೂಕಿನ ಬೊಮ್ಮೇನಹಳ್ಳಿ ಗ್ರಾಮ ಜಲಾವೃತವಾದ ಪರಿಣಾಮ ವ್ಯವಸ್ಥಿತ ಚರಂಡಿ ನಿರ್ಮಾಣಕ್ಕೆ ಒತ್ತಾಯಿಸಿ ಗ್ರಾಮಸ್ಥರು ಸೋಮವಾರ ರಸ್ತೆ ತಡೆ ನಡೆಸುವ ಮೂಲಕ ತಾಲ್ಲೂಕು ಆಡಳಿತದ ವಿರುದ್ದ ಹಿಡಿಶಾಪ ಹಾಕಿದರು. ತಾಲ್ಲೂಕಿನ ಗಡಿ ಭಾಗವಾದ ಬೊಮ್ಮೇನಹಳ್ಳಿ ಗ್ರಾಮ ರಂಗನಾಥಸ್ವಾಮಿ ಬೆಟ್ಟದ ತಪ್ಪಲಿನಲ್ಲಿರುವುದರಿಂದ ಬೆಟ್ಟದಿಂದ ಬಂದಂತಹ ನೀರು ವ್ಯವಸ್ಥಿತ ರೀತಿಯ ಚರಂಡಿಯಿಲ್ಲದೆ ರಾತ್ರಿ ಸುರಿದ ಭಾರಿ ಮಳೆಗೆ ಊರಿನೊಳಗಡೆ ನೀರು ನುಗ್ಗಿ ತಗ್ಗು ಪ್ರದೇಶವಾದ ದಲಿತ ಕಾಲೂನಿಯ ಬಹುತೇಕ ಮನೆಗಳಲ್ಲಿ ನೀರು ತುಂಬಿಕೊಂಡ ಫರಿಣಾಮ ನೀರನ್ನು ಹೊರ ಹಾಕುತ್ತಿದ್ದ ದೃಷ್ಯ ಸಾಮಾನ್ಯವಾಗಿ ಕಂಡುಬಂತು. ಪ್ರತಿನಿತ್ಯ ಮಳೆ ಬಂತೆಂದರೆ ಇಲ್ಲಿನ ದಲಿತ ಕಾಲೂನಿ ಮಹಿಳೆಯರಿಗೆ ನೀರನ್ನು ಹೋರಹಾಕುವ ಸಮಸ್ಯೆಯಿಂದ ರೋಸಿಹೋಗಿದ್ದ ಮಂದಿ ಬೊಮ್ಮೇನಹಳ್ಳಿ ಗ್ರಾಮದ ಮುಖ್ಯರಸ್ತೆಯನ್ನು ಬಂದ್ ಮಾಡುವ ಮೂಲಕ ಚರಂಡಿ ವ್ಯವಸ್ಥೆಯನ್ನು ಸರಿಪಡಿಸುವಂತೆ ಹಾಗೂ ತಾಲ್ಲೂಕು ತಹಶೀಲ್ದಾರ್ ಸ್ಥಳಕ್ಕೆ ಆಗಮಿಸಿ ಉರುಳಿಬಿದ್ದ ಮನೆಗಳಿಗೆ ಪರಿಹಾರ ಒದಗಿಸುವಂತೆ ಒತ್ತಾಯಿಸಿ ಪ್ರತಿಭಟನೆ ನೆಡಸಿದರು. ಪ್ರತಿಭಟನೆ ವೇಳೆ ಮಳೆಯಿಂದ ಮನೆ…

Read More

ತುಮಕೂರು : ಸುಮಾರು ನೂರು ವರ್ಷಗಳ ಇತಿಹಾಸ ವಿರುವ ದೇಶದ ಗರಡಿ ಮನೆ ವತಿಯಿಂದ ಇನ್ನು ಮುಂದೆ ಪ್ರತಿವರ್ಷ ದೇಹದಾಢ್ಯ ಮತ್ತು ಕುಸ್ತಿ ಸ್ಪರ್ಧೆಯನ್ನು ಏರ್ಪಡಿಸಲಾಗುವುದು ಎಂದು ತುಮಕೂರು ಜಿಲ್ಲಾ ಕುಸ್ತಿ ಸಂಘದ ಅಧ್ಯಕ್ಷ ರಾಕ್ ರವಿಕುಮಾರ್ ತಿಳಿಸಿದ್ದಾರೆ. ನಗರದ ಕನ್ನಡ ಭವನದಲ್ಲಿ ದೇಶದ ಗರಡಿ ಮನೆ ಯೂತ್ಸ್ ಅಸೋಸಿಯೇಷನ್(ರಿ) ಹೊರಪೇಟೆ ವತಿಯಿಂದ 75ನೇ ವರ್ಷದ ಸ್ವಾತಂತ್ರ ದಿನದ ಅಮೃತ ಮಹೋತ್ಸವದ ಅಂಗವಾಗಿ ಏರ್ಪಡಿಸಿದ್ದ ಆಹ್ವಾನಿತ ದೇಹದಾಢ್ಯ ಸ್ಪರ್ಧೆ ಮತ್ತು ಸಾಂಸ್ಕøತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತಿದ್ದ ಅವರು, ಸಾವಿರಾರು ದೇಹದಾಢ್ಯಪಟುಗಳು ಮತ್ತು ಕುಸ್ತಿ ಪಟುಗಳನ್ನು ತಯಾರಿಸಿರುವ ದೇಶದ ಗರಡಿ ಮನೆಯ ಸಂಸ್ಥಾಪಕರಾದ ಪೈಲಾನ್ ಪುಟ್ಟಣ್ಣ ಅವರ ಮೊಮ್ಮಗನಾದ ಸುಮನ್ ಮತ್ತು ಮುಖ್ಯಮಂತ್ರಿಗಳ ಪದಕ ವಿಜೇತ ಪೊಲೀಸ್ ಇಲಾಖೆಯ ನೌಕರರಾದ ಸೈಮನ್ ವಿಕ್ಟರ್ ಅವರುಗಳ ಪರಿಶ್ರಮದಿಂದ ಗರಡಿ ಮನೆಯಿಂದ ಹೊಸ ಚೇತನ ಪಡೆದುಕೊಂಡಿದ್ದು, ಮುಂದಿನ ದಿನಗಳಲ್ಲಿ ನಿರಂತರವಾಗಿ ಕ್ರೀಡಾ ಚಟುಟವಟಿಕೆಗಳು ನಡೆಯಲಿವೆ ಎಂದರು. ತುಮಕೂರು ಸ್ಮಾರ್ಟ್‍ಸಿಟಿಯಿಂದ ಸುಮಾರು 75 ಲಕ್ಷ ರೂ ವೆಚ್ಚದಲ್ಲಿ…

Read More

ಕೊರಟಗೆರೆ : ಬಡವರ ಮತ್ತು ಸಂತ್ರಸ್ಥರ ನೆರವಿಗೆ ಸ್ವಯಂ ಸೇವಕ ಸಂಘಗಳೊಂದಿಗೆ ಇಲಾಖಾ ಆಧಿಕಾರಿಗಳು ಸ್ಪಂದಿಸಿದರೆ ಸಾಮಾಜಿಕ ಸೇವೆಗಳು ಉತ್ತಮವಾಗಿ ನಡೆಯಲ್ಲಿದೆ ಇದಕ್ಕೆ ತಹಶೀಲ್ದಾರ್ ನಾಹಿದಾ ಜಮ್ ಜಮ್ ರವರ ಕಾರ್ಯವೈಕರಿ ಸಾಕ್ಷಿಯಾಗಿದೆ ಎಂದು ಪಾವಗಡ ಶ್ರೀ ರಾಮಕೃಷ್ಣ ಸೇವಾಶ್ರಮದ ಶ್ರೀ ಜಪಾನಂದ ಸ್ವಾಮೀಜಿಗಳು ತಿಳಿಸಿದರು. ಅವರು ತಾಲೂಕಿನ ಚನ್ನರಾಯನದುರ್ಗ ಹೋಬಳಿಯ ಬುಕ್ಕಾಪಟ್ಟಣ ಗ್ರಾಮ ಪಂಚಾಯಿತಿಯ ಗಾಂಧಿನಗರದಲ್ಲಿ ರಾಮಕೃಷ್ಣ ಸೇವಾಶ್ರಮ ಮತ್ತು ಬೆಂಗಳೂರು ಇನ್ಪೋಸಿಸ್ ಪೌಡೇಷನ್ ಸಹಕಾರ ದಿಂದ ಮಳೆಯಿಂದ ಹಾನಿಗೊಳಗಾಗಿದ್ದ ಗುಡಿಸುಲುಗಳಲ್ಲಿ ವಾಸಿಸುತ್ತಿದ್ದ ದಲಿತರಿಗೆ ಮತ್ತು ಇತರ ಪ್ರದೇಶಗಳ ಜನರಿಗೆ ಸೊಲಾರ್ ಲೈಟ್, ಟಾರ್ಪಲ್, ಬಟ್ಟೆಗಳು ಹಾಗೂ ಆಹಾರ ಪದಾರ್ಥಗಳನ್ನು ವಿತರಿಸಿ ಮಾತನಾಡಿ ರಾಮಕೃಷ್ಣ ಆಶ್ರಮ ಎಂದರೆ ನೊಂದವರ ಸೇವೆಗೆ ಎನ್ನುವ ಅರ್ಥದಲ್ಲಿ ಕಾರ್ಯನಿರ್ವಹಿಸಿಕೊಂಡು ಬಂದಿದ್ದೇವೆ ಇದಕ್ಕೆ ತಾಯಿ ಸುಧಾಮೂರ್ತಿ ರವರ ಸಹಾಯ ಹಸ್ತ ಸದಾ ಇರುತ್ತದೆ. ಗಾಂಧಿನಗರದಲ್ಲಿ ಇಂತಹ ಪರಿಸ್ಥಿತಿ ನೋಡಿ ನಾವು ಯಾವಕಾಲದಲ್ಲಿ ಇದ್ದೇವೆ ಎನ್ನಿಸುತ್ತದೆ ಕ್ಷೇತ್ರದಲ್ಲಿ ಒಳ್ಳೆಯ ಶಾಸಕರಿದ್ದಾರೆ ಆದರೆ ಸರ್ಕಾರ ಇದರ ಬಗ್ಗೆ ಗಮನ…

Read More

ತುಮಕೂರು : ಶತಾಯುಷಿ, ನಡೆದಾಡುವ ದೇವರು ಎಂದು ಭಕ್ತರಿಂದ ಕರೆಯಲ್ಪಡುತ್ತಿದ್ದ ಸಿದ್ದಗಂಗಾ ಮಠದ ಹಿರಿಯ ಶ್ರೀಗಳಾದ ಡಾ.ಶ್ರೀಶಿವಕುಮಾರ ಸ್ವಾಮೀಜಿಗಳ ಕುರಿತು 111 ಜನ ಕವಿಗಳು ತಾವು ಕಂಡಂತೆ ಶ್ರೀಗಳನ್ನು ವರ್ಣಿಸಿರುವ ಕಾವ್ಯ ಕುಸುಮಾಂಜಲಿ ಕವನ ಸಂಕಲನವನ್ನು ಜಿಲ್ಲೆಯಲ್ಲಿ ಸರಕಾರಿ ಶಾಲೆಗಳಿಗೆ ಉಚಿತವಾಗಿ ನೀಡುವ ವ್ಯವಸ್ಥೆಯನ್ನು ಮಾಡುವುದಾಗಿ ಕನ್ನಡಸೇನೆಯ ಜಿಲ್ಲಾಧ್ಯಕ್ಷ ಧನಿಯಕುಮಾರ್ ತಿಳಿಸಿದ್ದಾರೆ. ನಗರದ ವಿಘ್ನೇಶ್ವರ ಕಂಪರ್ಟ್‍ನಲ್ಲಿ ಎಸ್.ನಿತಿನ್ ಪ್ರಕಾಶನ ತುಮಕೂರು ಇವರು ಕವಯಿತ್ರಿ ಪರಿಮಳ ಸತೀಶ್ ಅವರು ಸಂಪಾದಿಸಿರುವ ಸಿದ್ದಗಂಗಾ ಶ್ರೀಗಳ ಕುರಿತ 111 ಜನ ಕವಿಗಳ ಕವಿತೆಗಳ ಕವನ ಸಂಕಲನ ಕಾವ್ಯ ಕುಸುಮಾಂಜಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತಿದ್ದ ಅವರು,ತ್ರಿವಿಧ ದಾಸೋಹಿಗಳಾದ ಶ್ರೀಗಳ ಬಗ್ಗೆ ಮಕ್ಕಳಿಗೆ ತಿಳಿಯಬೇಕು ಎಂಬ ನಿಟ್ಟಿನಲ್ಲಿ ಈ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗುವುದು ಎಂದರು. ದೇಶ ಸುತ್ತು,ಕೋಶ ಓದು ಎಂಬ ಗಾಧೆ ಮಾತಿದೆ.ಆದರೆ ಇಂದು ಬರೆಯುವವರ ಸಂಖ್ಯೆಯೂ ಕಡಿಮೆ ಇದೆ. ಓದುವವರ ಸಂಖ್ಯೆಯೂ ಕ್ಷೀಣಿಸಿದೆ.ಓದಬೇಕಾದ ಯುವಜನರು ಮೊಬೈಲ್ ದಾಸರಾಗಿ,ತಮ್ಮನ್ನೇ ಮರೆತಿದ್ದಾರೆ.ಇಂತಹ ಹೊತ್ತಿನಲ್ಲಿ ಶ್ರೀಶಿವಕುಮಾರಸ್ವಾಮಿಜಿ ಕುರಿತ ಕವಿತೆಗಳ ಸಂಪಾದಿಸುವುದು…

Read More

ತುಮಕೂರು : ನಗರದ ಕೋಡಿ ಬಸವಣ್ಣ ದೇವಾಲಯದ ಮುಂಭಾಗದ ರಸ್ತೆಯಲ್ಲಿ ರಾಜಕಾಲುವೆ ಮೇಲ್ಭಾಗದಲ್ಲಿ ಬಿದ್ದಿರುವ ಗುಂಡಿಯನ್ನು ಆದಷ್ಟು ಬೇಗ ಮುಚ್ಚಿ ರಸ್ತೆ ದುರಸ್ಥಿಪಡಿಸುವಂತೆ 5ನೇ ವಾರ್ಡ್ ಪಾಲಿಕೆ ಸದಸ್ಯ ಮಹೇಶ್ ಸಂಬಂಧಪಟ್ಟ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ. ಕೋಟೆ ಆಂಜನೇಯಸ್ವಾಮಿ ದೇವಾಲಯದ ಮುಂಭಾಗದಲ್ಲಿ ಹಾದು ಹೋಗುವ ರಸ್ತೆ ಇದಾಗಿದ್ದು, ಕೋಡಿ ಬಸವೇಶ್ವರ ಸ್ವಾಮಿ ದೇವಾಲಯದ ಮುಂಭಾಗದಲ್ಲಿ ರಾಜಗಾಲುವೆ ಹಾದು ಹೋಗಿದೆ. ಅದರ ಮೇಲ್ಭಾಂಗದಲ್ಲಿ ರಸ್ತೆ ನಿರ್ಮಿಸಲಾಗಿದೆ. ಈ ರಾಜಗಾಲುವೆ ಮೇಲ್ಭಾಗದ ರಸ್ತೆ ಗುಂಡಿ ಬಿದ್ದಿದ್ದು, ಅಪಘಾತಗಳು ಸಂಭವಿಸುವ ಸಾಧ್ಯತೆ ಇದೆ. ಈಗಾಗಲೇ ಇಲ್ಲಿ ಬಿದ್ದಿರುವ ಗುಂಡಿ ತಪ್ಪಿಸಲು ಹೋಗಿ ಓರ್ವ ದ್ವಿಚಕ್ರ ವಾಹನ ಸವಾರ ಪ್ರಾಣ ಕಳೆದುಕೊಂಡಿದ್ದಾನೆ. ಮತ್ತೆ ಇಂತಹ ಅಪಘಾತಗಳು ಮರುಳಿಸದಂತೆ ಶೀಘ್ರವಾಗಿ ಅಧಿಕಾರಿಗಳು ಈ ಗುಂಡಿ ಮುಚ್ಚಲು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಈ ರಸ್ತೆ 5ನೇ ವಾರ್ಡ್ ವ್ಯಾಪ್ತಿಗೆ ಸೇರಲಿದ್ದು, ಪದೇ ಪದೇ ಈ ರಸ್ತೆಯಲ್ಲಿ ಅಪಘಾತಗಳು ನಡೆಯುತ್ತಲೇ ಇದ್ದು, ಸಾವು-ನೋವುಗಳು ಸಂಭವಿಸುತ್ತಿವೆ. ಈ ರಸ್ತೆಯಲ್ಲಿ ಈಗ ಬಿದ್ದಿರುವ…

Read More

ತುಮಕೂರು : ಸಹಕಾರಿ ಸಂಸ್ಥೆಗಳಿಂದ ಸಾಲ ಪಡೆಯುವುದು ಹೇಗೆ ಸದಸ್ಯರ ಹಕ್ಕೋ,ಹಾಗೆಯೇ ಪಡೆದ ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡುವುದು ಕೂಡ ನಮ್ಮ ಕರ್ತವ್ಯವಾಗಿದೆ.ಸಾಲ ನೀಡುವುದು,ಮರುಪಾವತಿ ಎರಡು ಸಮನಾಗಿದ್ದರೆ ಮಾತ್ರ ಸಂಸ್ಥೆ ಏಳಿಗೆ ಹೊಂದಲು ಸಾಧ್ಯ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ಅಭಿಪ್ರಾಯ ಪಟ್ಟಿದ್ದಾರೆ. ನಗರದ ಭಾವಿಕಟ್ಟೆ ಕಲ್ಯಾಣ ಮಂಟಪದಲ್ಲಿ ಶ್ರೀಕಾಳಿಕಾಂಬ ಪತ್ತಿನ ಸಹಕಾರ ಸಂಘ ನಿಯಮಿತದ 25ನೇ ವರ್ಷದ ರಜತ ಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತಿದ್ದ ಅವರು,ಸಾಲ ನೀಡುವುದು ಮತ್ತು ವಸೂಲಿ ಮಾಡುವ ಕೆಲಸವನ್ನು ತಳ ಸಮುದಾಯಕ್ಕೆ ಸೇರಿದ ಕಾಳಿಕಾಂಬ ಪತ್ತಿನ ಸಹಕಾರ ಸಂಘದ ಸಿಬ್ಬಂದಿಗಳು ಮತ್ತು ಆಡಳಿತ ಮಂಡಳಿ ಕಟ್ಟುನಿಟ್ಟಾಗಿ ನಿರ್ವಹಿಸುವ ಮೂಲಕ ಉತ್ತುಂಗದತ್ತ ದಾಪುಕಾಲು ಹಾಕುತ್ತಿದೆ ಎಂದರು. ಇಡೀ ರಾಜ್ಯಕ್ಕೆ ಹೊಲಿಕೆ ಮಾಡಿದರೆ ತುಮಕೂರು ಜಿಲ್ಲೆಯಲ್ಲಿ ತಳಸಮುದಾಯಕ್ಕೆ ಸೇರಿದ ಸಹಕಾರಿ ಸಂಸ್ಥೆಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು,ತಮ್ಮ ಸಮುದಾಯದ ಮತ್ತು ಸಮಾಜದ ಅರ್ಥಿಕ ಚಟುವಟಿಕೆಯಲ್ಲಿ ಮುಖ್ಯ ಪಾತ್ರವಹಿಸಿವೆ.ಕಳೆದ 25 ವರ್ಷಗಳ ಹಿಂದೆ ಆರಂಭವಾದ ಶ್ರೀಕಾಳಿಕಾಂಬ ಪತ್ತಿನ ಸಹಕಾರ ಸಂಘ,…

Read More

ತುಮಕೂರು : ರಾಜ್ಯ ಬಿಜೆಪಿ ಸರ್ಕಾರದ ಜನಪ್ರಿಯ ಯೋಜನೆ , ಸಾಧನೆಯನ್ನು ತಿಳಿಸುವ ಬೃಹತ್ ಜನೋತ್ಸವ ಸಮಾವೇಶ ದೊಡ್ಡ ಬಳ್ಳಾಪುರದಲ್ಲಿ ಇದೇ 8 ರ ಗುರುವಾರ ನಡೆಯಲಿದ್ದು, ಜಿಲ್ಲೆಯ ಮುವತ್ತರಿಂದ ಮೂವತೈದು ಸಾವಿರ ಕಾರ್ಯಕರ್ತರು ಮತ್ತು ವಿವಿಧ ಯೋಜನೆಗಳ ಫಲಾನುಭವಿಗಳು ಭಾಗವಹಿಸಲಿದ್ದಾರೆಂದು ಜಿಲ್ಲಾಧ್ಯಕ್ಷ ಹೆಚ್.ಎಸ್.ರವಿಶಂಕರ್ ಹೆಬ್ಬಾಕ ಹೇಳಿದರು. ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ , ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರದ ನೇತ್ರತ್ವ ವಹಿಸಿರುವ ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ನೇತ್ರತ್ವದ ಸರ್ಕಾರ ಒಂದು ವರ್ಷ ಯಶಸ್ವಿಯಾಗಿ ಅಭಿವೃದ್ಧಿ ಪಥದಲ್ಲಿ ಪೂರ್ಣಗೊಳಿಸಿರುವ ಸಂಧರ್ಭದಲ್ಲಿ ಸರ್ಕಾರದಿಂದ ವಿವಿಧ ಇಲಾಖೆಗಳ ಮೂಲಕ ವಿವಿಧ ಯೋಜನೆಗಳ ಫಲಾನುಭವಿಗಳು ಮತ್ತು ರಾಜ್ಯ ಬಿಜೆಪಿ ಸರ್ಕಾರದ ಮೂರು ವರ್ಷಗಳ ಅಧಿಕಾರಾವಧಿ ಪೂರೈಸಿದ್ದರ ಹಿನ್ನೆಲೆಯಲ್ಲಿ ಬೃಹತ್ ಜನೋತ್ಸವ ಸಮಾವೇಶ ಆಯೋಜಿಸಲಾಗಿದೆ ಎಂದು ತಿಳಿಸಿದರು. ಈ ಬೃಹತ್ ಜನೋತ್ಸವ ಸಮಾವೇಶಕ್ಕೆ ತುಮಕೂರು , ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ನಗರ ಮತ್ತು ಗ್ರಾಮಾಂತರದ ಮೂರು ಲಕ್ಷ ಕಾರ್ಯಕರ್ತರು , ಸರ್ಕಾರದ ವಿವಿಧ ಯೋಜನೆಗಳ…

Read More

ತುಮಕೂರು : ಇಡೀ ದೇಶದ ದಿಕ್ಸೂಚಿಯನ್ನು ಬದಲಿಸುವಂತಹ ಸಾಮಥ್ರ್ಯ ಶಿಕ್ಷಣ ವ್ಯವಸ್ಥೆಗಿದೆ. ಆದುದರಿಂದ ಶಿಕ್ಷಣ ವ್ಯವಸ್ಥೆಯ ಅವಿಭಾಜ್ಯ ಅಂಗವಾಗಿರುವ ಶಿಕ್ಷಕರ ‘ದಿನಾಚರಣೆ’ ಅತ್ಯಂತ ಮಹತ್ವ ಪೂರ್ಣವಾಗಿದ್ದು, ಈ ದಿನಾಚರಣೆಯನ್ನು ನಾವಿಂದು ಅರ್ಥಪೂರ್ಣವಾಗಿ ಆಚರಿಸೋಣ ಎಂದು ಶಾಸಕ ಜಿ.ಬಿ. ಜ್ಯೋತಿಗಣೇಶ್ ಕರೆ ನೀಡಿದರು. ಎಂಪ್ರೆಸ್ ಕರ್ನಾಟಕ ಪಬ್ಲಿಕ್ ಶಾಲೆಯ ಆಡಿಟೋರಿಯಂ ಸಭಾಂಗಣದಲ್ಲಿಂದು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಶೈಕ್ಷಣಿಕ ಜಿಲ್ಲೆ ತುಮಕೂರು ಸಂಯುಕ್ತಾಶ್ರಯದಲ್ಲಿ ಭಾರತ ರತ್ನ ಡಾ|| ಸರ್ವೇಪಲ್ಲಿ ರಾಧಾಕೃಷ್ಣನ್ ರವರ 135ನೇ ಜನ್ಮದಿನಾಚರಣೆ ಮತ್ತು ನಿವೃತ್ತ ಹಾಗೂ ಪ್ರಶಸ್ತಿ ಪುರಸ್ಕøತ ಶಿಕ್ಷಕರ ಸನ್ಮಾನ ಸಮಾರಂಭ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇತ್ತೀಚೆಗಷ್ಟೇ ನಾವು 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸಿದ್ದು, ಈ ಸುಸಂದರ್ಭದಲ್ಲಿ ಮಾನ್ಯ ಪ್ರಧಾನ ಮಂತ್ರಿಗಳು ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತಂದಿದ್ದು, ಈ ನೀತಿ ಪರಿಣಾಮಕಾರಿಯಾಗಿ ಅನುಷ್ಠಾನವಾದಲ್ಲಿ ಕಂಡಿತವಾಗಿಯೂ ನಮ್ಮ ದೇಶ ಇಡೀ ಜಗತ್ತಿಗೆ ವಿಶ್ವ ಗುರುವಾಗಲಿದೆ. ಈ ನೂತನ ಶಿಕ್ಷಣ…

Read More